Tag: Trashed

  • ಅಣ್ಣಾ ಅಂತ ಕರೆಯಲಿಲ್ಲವೆಂದು ಪಾದಾಚಾರಿಗೆ ಥಳಿಸಿದ ಬೈಕ್ ಸವಾರ

    ಅಣ್ಣಾ ಅಂತ ಕರೆಯಲಿಲ್ಲವೆಂದು ಪಾದಾಚಾರಿಗೆ ಥಳಿಸಿದ ಬೈಕ್ ಸವಾರ

    ಮಡಿಕೇರಿ: ತನ್ನನ್ನು ಅಣ್ಣ ಅಂತ ಕರೆಯಲಿಲ್ಲ ಎಂದು ಬೈಕ್ ಸವಾರನೊಬ್ಬ ದಾರಿಹೊಕನ ಮೇಲೆ ಕಿರಿಕ್ ಮಾಡಿ, ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ವಾಲ್ನೂರು-ತ್ಯಾಗತ್ತೂರು ಬಳಿ ಮಂಗಳವಾರ ರಾತ್ರಿ ನಡೆದಿದೆ.

    ಬೈಕ್ ಸವಾರ ಮದನ್, ಪಾದಾಚಾರಿ ಸುದೀಶ್ ಮೇಲೆ ಹಲ್ಲೆ ಮಾಡಿದ್ದಾನೆ. ರಸ್ತೆ ಸುದೀಶ್ ಹೇಗುತ್ತಿದ್ದಾಗ ಹಿಂಬದಿಯಿಂದ ಬೈಕ್‍ನಲ್ಲಿ ಬಂದು ಮದನ್ ಹಾರ್ನ್ ಮಾಡಿದ್ದಾನೆ. ಅಲ್ಲದೆ ದಾರಿಯಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ಸುದೀಶ್ ಜೊತೆ ವಿನಾಕಾರಣ ಜಗಳ ತೆಗೆದಿದ್ದಾನೆ. ಈ ವೇಳೆ ಸುದೀಶ್ ಹಾಗೂ ಮದನ್ ಇಬ್ಬರ ನಡುವೆ ಜಗಳವಾಗಿದ್ದು, ನೀನು ನನ್ನನ್ನು ಅಣ್ಣ ಅಂತ ಕರೆಯಬೇಕು ಎಂದು ಮದನ್ ಸುದೀಶ್ ಮೇಲೆ ಕೂಗಾಡಿದ್ದಾನೆ. ಅದಕ್ಕೆ ಸುದೀಶ್ ಒಪ್ಪದಿದ್ದಾಗ ಮದನ್ ಆತನಿಗೆ ಕಾಲಿನಿಂದ ಒದ್ದು, ಹಲ್ಲೆ ಮಾಡಿದ್ದಾನೆ.

    ಹಲ್ಲೆಯಲ್ಲಿ ಸುದೀಶ್‍ಗೆ ಗಂಭೀರ ಗಾಯಗಳಾಗಿದ್ದು, ಆತ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಳ್ಳನೆಂದು ಶಂಕಿಸಿ ನಡು ರಸ್ತೆಯಲ್ಲಿ ವ್ಯಕ್ತಿಯ ಮರ್ಮಾಂಗ ಸುಟ್ಟು ಕೊಂದ ದುಷ್ಕರ್ಮಿಗಳು – ವಿಡಿಯೋ ವೈರಲ್

    ಕಳ್ಳನೆಂದು ಶಂಕಿಸಿ ನಡು ರಸ್ತೆಯಲ್ಲಿ ವ್ಯಕ್ತಿಯ ಮರ್ಮಾಂಗ ಸುಟ್ಟು ಕೊಂದ ದುಷ್ಕರ್ಮಿಗಳು – ವಿಡಿಯೋ ವೈರಲ್

    ತಿರುವನಂತಪುರಂ: ಕಳ್ಳತನದ ಆರೋಪ ಮಾಡಿ ವ್ಯಕ್ತಿಯೋರ್ವನನ್ನು ಏಳು ಮಂದಿಯ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿ, ಆತನ ಮರ್ಮಾಂಗವನ್ನೇ ಸುಟ್ಟು ಕೊಲೆಗೈದ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ.

    ತಿರುವಲ್ಲಂ ಜಿಲ್ಲೆಯ ನಿವಾಸಿ ಅಜೀಶ್ ಮೃತ ದುರ್ದೈವಿ. ತಂಪನೂರು ಪ್ರದೇಶದ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನೋರ್ವ ಮಲಗಿದ್ದ ವೇಳೆ ಆತನ ಪರ್ಸ್ ಕಳವು ಮಾಡಲಾಗಿತ್ತು. ಆದರೆ ಆ ಪರ್ಸನ್ನು ಅಜೀಶ್ ಕದ್ದಿದ್ದಾನೆ ಎಂದು ಆರೋಪಿಸಿ, ಸ್ಥಳದಲ್ಲಿದ್ದ ಗುಂಪೊಂದು ಆತನನ್ನು ಥಳಿಸಿ, ಆತನ ಮರ್ಮಾಂಗವನ್ನು ಸುಟ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಪರಿಣಾಮ ಅಜೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಅಲ್ಲದೆ ಜನರು ಅಜೀಶ್‍ನನ್ನು ಹೊಡೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ಸಂತ್ರಸ್ತನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಜನರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

    ಈ ವಿಡಿಯೋ ಪೊಲೀಸರ ಕೈತಲುಪಿದ್ದು, ಇದರ ಮೂಲಕವೇ ಸಂತ್ರಸ್ತನನ್ನು ಕೊಂದ ಐವರು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ, ಬಂಧಿಸಿದ್ದಾರೆ. ಅಲ್ಲದೆ ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಬಂಧಿತ ಆರೋಪಿಗಳನ್ನು ನಾಸೀರ್, ದಿನೇಶ್ ವರ್ಗಿಸ್, ಅರ್ಜುನ್, ಸಜನ್ ಮತ್ತು ರಾಬಿನ್‍ಸನ್ ಎಂದು ಗುರುತಿಸಲಾಗಿದೆ. ಈಗಾಗಲೇ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

    ಮೃತ ವ್ಯಕ್ತಿಯ ಮರ್ಮಾಂಗದ ಶೇ.40ರಷ್ಟು ಭಾಗ ಸುಟ್ಟು ಹೋಗಿದೆ. ಅದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.