Tag: Transport Workers

  • ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ – ಸಾರಿಗೆ ಸಂಘಟನೆಯಿಂದ ಅನಿರ್ಧಿಷ್ಟಾವಧಿ ಉಪವಾಸ ಧರಣಿ

    ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ – ಸಾರಿಗೆ ಸಂಘಟನೆಯಿಂದ ಅನಿರ್ಧಿಷ್ಟಾವಧಿ ಉಪವಾಸ ಧರಣಿ

    ಬೆಂಗಳೂರು: ಸಮಾನ ವೇತನ, ಕಾರ್ಮಿಕ ಸಂಘಟನೆಗಳ ಚುನಾವಣೆ, ವಜಾಗೊಂಡ ನೌಕರರ ಮರು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ಸಂಘಟನೆ ಅನಿರ್ಧಿಷ್ಟಾವಧಿ ಉಪವಾಸ ಧರಣಿ ನಡೆಸಲು ಮುಂದಾಗಿದೆ.ಇದನ್ನೂ ಓದಿ: ಸತತ 7 ದಿನ, 170 ಗಂಟೆ ಭರತನಾಟ್ಯ – ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಮಂಗಳೂರಿನ ರೆಮೋನಾ ಪಿರೇರಾ

    ಇಂದು (ಜು.29) ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನಿಗಮಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟಗಳು ಸತ್ಯಾಗ್ರಹಕ್ಕೆ ಮುಂದಾಗಿವೆ. ಹಿಂಬಾಕಿ, ಸಮಾನ ವೇತನ, ಕಾರ್ಮಿಕ ಸಂಘಟನೆಗಳ ಚುನಾವಣೆ, ವಜಾಗೊಂಡ ನೌಕರರ ಮರು ನೇಮಕ ಆಗ್ರಹಿಸಿ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಈಗಾಗಲೇ ಸಾರಿಗೆ ಸಂಘಟನೆಯ ಒಂದು ಬಣ ಆ.5ರಿಂದ ಬಸ್ ನಿಲ್ಲಿಸಿ ಹೋರಾಟ ಮಾಡುವುದಾಗಿ ಕರೆ ಕೊಟ್ಟಿದೆ.

    ಸೋಮವಾರ (ಜು.28) ನಡೆದ ಕಾರ್ಮಿಕ ಇಲಾಖೆ ಆಯುಕ್ತರ ಸಭೆಯಲ್ಲಿ ಸಾರಿಗೆ ನೌಕರರ ಮುಖಂಡರು, ಆ.5ರಂದು ಕರೆ ನೀಡಿರುವ ಸಾರಿಗೆ ಮುಷ್ಕರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಪಟ್ಟು ಹಿಡಿದಿದ್ದಾರೆ. ಸಭೆ ಬಳಿಕ ಸಾರಿಗೆ ಇಲಾಖೆ ಹಾಗೂ ಸಾರಿಗೆ ಸಚಿವರಿಗೆ ಕಾರ್ಮಿಕ ಇಲಾಖೆಯಿಂದ ಮಾಹಿತಿ ನೀಡಿದ್ದು, ಮತ್ತೆ ಆ.2ಕ್ಕೆ ಮತ್ತೊಂದು ಹಂತದ ಸಭೆ ನಡೆಸಲಿದೆ ಎಂದು ತಿಳಿಸಿದೆ. ಒಂದು ವೇಳೆ ಆ.2ಕ್ಕೆ ಅಂತಿಮ ನಿರ್ಧಾರವಾಗದಿದ್ದರೆ ಹೋರಾಟ ಶತಸಿದ್ಧ ಎಂದು ಸಾರಿಗೆ ಮುಖಂಡರು ತಿಳಿಸಿದ್ದಾರೆ.ಇದನ್ನೂ ಓದಿ:ಶಿರಡಿಗೆ ಹೋಗಿದ್ದಾಗ ಕೃಷಿ ಅಧಿಕಾರಿ ಮನೆ ಬೀಗ ಮುರಿದು ಕಳ್ಳತನ: 26 ಲಕ್ಷದ ಚಿನ್ನಾಭರಣ ಕದ್ದು ಪರಾರಿ

  • ಅನ್‍ಲಾಕ್ ವೇಳೆಯಲ್ಲಿ ಸರ್ಕಾರಕ್ಕೆ ಶಾಕ್ – ಮತ್ತೆ ಸಾರಿಗೆ ನೌಕರರ ಪ್ರತಿಭಟನೆಗೆ ಪ್ಲಾನ್!

    ಅನ್‍ಲಾಕ್ ವೇಳೆಯಲ್ಲಿ ಸರ್ಕಾರಕ್ಕೆ ಶಾಕ್ – ಮತ್ತೆ ಸಾರಿಗೆ ನೌಕರರ ಪ್ರತಿಭಟನೆಗೆ ಪ್ಲಾನ್!

    ಬೆಂಗಳೂರು: ನಾಳೆಯಿಂದ ಬಸ್ ಸಂಚಾರ ಆರಂಭವಾಗ್ತಿದೆ. ರಾಜ್ಯದ ನಾಲ್ಕು ನಿಗಮಗಳಾದ ಕೆಎಸ್‍ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆಯ ಬಸ್ ಗಳು ಕಾರ್ಯಾಚರಣೆಗೊಳ್ಳುತ್ತಿವೆ. ಬಸ್ ಸಂಚಾರ ಆರಂಭವಾಯ್ತು ಅಂತಾ ರಿಲಾಕ್ಸ್ ಆಗುವ ಸಮಯದಲ್ಲಿ ಸಾರಿಗೆ ನೌಕರರಿಂದ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಮತ್ತೆ ಮತ್ತೇ ಸಾರಿಗೆ ಪ್ರೋಟೆಸ್ಟ್ ನಡೆಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದು, ಹೊಸ ಬಾಂಬ್ ಸಿಡಿಸಿದ್ದಾರೆ.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಜುಲೈ 1ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಲಾಗಿದೆ. ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸದೇ ಇದ್ರೆ ಜುಲೈ 1 ರಿಂದ ಮತ್ತೆ ಸಾರಿಗೆ ಮುಷ್ಕರ ಆರಂಭಿಸುವುದಾಗಿ ಗುಡುಗಿದ್ದಾರೆ.

    ಕಳೆದ ಬಾರಿ ಏಪ್ರಿಲ್ 7 ರಿಂದ 22 ರವರೆಗೆ 15 ದಿನ ಸಾರಿಗೆ ಪ್ರೊಟೆಸ್ಟ್ ನಡೆದಿತ್ತು. ನಂತರ ಹೈಕೋರ್ಟ್ ಮಧ್ಯೆ ಪ್ರವೇಶದಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೆ ಪ್ರತಿಭಟನೆಯ ಕೂಗು ಕೇಳಿಬಂದಿದೆ. ಸರ್ಕಾರ ಕೊಟ್ಟ ಮಾತಿನಂತೆ ಆರನೇ ವೇತನ ಆಯೋಗ ಜಾರಿಗೆ ತರಬೇಕು. ಇಲ್ಲದಿದ್ದರೇ ಈ ಬಾರಿ ಸಾರಿಗೆ ನೌಕರರು ಅಷ್ಟೇ ಅಲ್ಲದೇ ಹೆಂಡತಿ, ಮಕ್ಕಳ ಜೊತೆಗೂಡಿ ಕುಟುಂಬ ಸಮೇತರಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ – ಕುಮಾರಸ್ವಾಮಿ ಆಕ್ರೋಶ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ಜನ ಅರೆಕೂಲಿಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಸರಿಯಾದ ನ್ಯಾಯಯುತ ವೇತನ ನೀಡಿ. ಸರ್ಕಾರ ಆರನೇ ವೇತನ ಆಯೋಗವನ್ನು ಜಾರಿ ಮಾಡುತ್ತೇವೆ ಎಂದಿತ್ತು. ಕಳೆದ ಬಾರಿ 15 ದಿನ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಈಗಾಗಲೇ ಸಾರಿಗೆ ನೌಕರರನ್ನು ಅಮಾನತು, ವರ್ಗಾವಣೆ ಮಾಡಿದ್ದಾರೆ. ಎರಡು ತಿಂಗಳ ಸಂಬಳ ಕೊಡಬೇಕು. ಸಾವಿರ ರೂಪಾಯಿ ಸಂಬಳ ಕೊಡೋ ಕೆಲಸ ಮಾಡ್ತಿದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯ ತರುತ್ತಿದ್ದೇವೆ. ಸಾರಿಗೆ ನೌಕರರ ಕುಟುಂಬದವರೊಂದಿಗೆ ಪ್ರತಿಭಟನೆ ಮಾಡ್ತೇವೆ. ಹೆಂಡತಿ, ಮಕ್ಕಳನೊಂದಿಗೆ ಸಾರಿಗೆ ನೌಕರರು ಪ್ರತಿಭಟಿಸುತ್ತಾರೆ. ಜೊತೆಗೆ ಸರ್ಕಾರ ವಿಶೇಷವಾದ ಪ್ಯಾಕೇಜ್ ಕೊಟ್ಟು ಸಾರಿಗೆ ಇಲಾಖೆಯನ್ನು ಉಳಿಸುವ ಕೆಲಸ ಮಾಡಬೇಕು. ಜುಲೈ ಒಂದನೇ ತಾರೀಖಿನ ಒಳಗೆ ಸಭೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಯಾಣಿಕರ ಪಾಸ್ ಅವಧಿ ವಿಸ್ತರಿಸಿದ ಬಿಎಂಟಿಸಿ

  • ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಪ್ರತಿಭಟನೆ

    ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಪ್ರತಿಭಟನೆ

    ಬೆಂಗಳೂರು: ಬೆಂಗಳೂರಿನಲ್ಲಿಂದು ಸಾರಿಗೆ ನೌಕರರ ಪ್ರತಿಭಟನೆಯ ಕೂಗು ಜೋರಾಗಿತ್ತು.

    ನಗರದ ಟೌನ್ ಹಾಲ್ ಮುಂಭಾಗ ಜಮಾಯಿಸಿದ 500ಕ್ಕೂ ಹೆಚ್ಚು ನೌಕರರು, ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ ರದ್ದು ಮಾಡಿ, ಅಂತರ ನಿಗಮ ವರ್ಗಾವಣೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಗಳ ಒಕ್ಕೂಟದ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ನೌಕರರ ಕುಟುಂಬದವರು ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಸುಡು ಬಿಸಿಲನ್ನು ಲೆಕ್ಕಿಸದೇ ಧರಣಿ ನಡೆಸಿದ್ದು, ಎಲ್ಲರ ಮನ ಕಲಕುವಂತಿತ್ತು.