Tag: transport department

  • ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ – ರಸ್ತೆಗಿಳಿದ್ರೆ ಬೈಕ್ ಸೀಜ್

    ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ – ರಸ್ತೆಗಿಳಿದ್ರೆ ಬೈಕ್ ಸೀಜ್

    ಬೆಂಗಳೂರು: ರಾಜ್ಯದಲ್ಲಿ ಅನೇಕ ದಿನದಿಂದ ಆಟೋ ಚಾಲಕರು ವರ್ಸಸ್ ಬೈಕ್ ಟ್ಯಾಕ್ಸಿಯವರ (Bike Taxi) ನಡುವಿನ ಗುದ್ದಾಟ ನಡೆಯುತ್ತಿತ್ತು. ಸದ್ಯ ಈಗ ಇದಕ್ಕೆಲ್ಲಾ ಇಂದಿನಿಂದ ಬ್ರೇಕ್ ಬೀಳಲಿದೆ. ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿ ಸ್ಥಗಿತಗೊಳ್ಳಲಿದೆ.

    ಟ್ರಾಫಿಕ್ ಕಡಿಮೆ, ಟ್ರಾವೆಲ್ ದರವೂ ಕಡಿಮೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕ್ವಿಕ್ ಡ್ರಾಪ್ ಪಾಯಿಂಟ್. ಶರವೇಗದಲ್ಲಿ ಜನರಿಗೆ ಬೇಕಾದ ಜಾಗ ತಲುಪಿಸುವ ಕೆಲಸ ಮಾಡುತ್ತಿದ್ದದ್ದು, ಅಂದರೆ ಅದು ಬೈಕ್ ಟ್ಯಾಕ್ಸಿ. ವೈಟ್ ಬೋರ್ಡ್‌ನಲ್ಲಿ ಬೈಕ್ ಟ್ಯಾಕ್ಸಿ ಓಡಿಸೋದು ಸೇರಿ ಸುರಕ್ಷತೆ ವಿಚಾರದಲ್ಲಿ ಬೈಕ್ ಟ್ಯಾಕ್ಸಿ ಒಂದು ಹೆಜ್ಜೆ ಹಿಂದೆಯೇ ಉಳಿದುಕೊಂಡಿದೆ. ಇದೇ ಕಾರಣಕ್ಕೆ ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗೆ ಇಳಿಯುವ ಹಾಗಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಆರ್‌ಟಿಓ ಕೂಡ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗಿಳಿಸಿದರೆ ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗಲಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – 2ನೇ ಬ್ಲ್ಯಾಕ್ ಬಾಕ್ಸ್ ಪತ್ತೆ

    ಅನಧಿಕೃತ ಬೈಕ್ ಟ್ಯಾಕ್ಸಿ ಓಡಾಟಕ್ಕೆ ನಿಷೇಧ ಹೇರಬೇಕೆಂದು ಖಾಸಗಿ ಸಾರಿಗೆ ಒಕ್ಕೂಟ ಸೇರಿ ಅನೇಕ ಆಟೋ ಚಾಲಕರ ಹಲವು ವರ್ಷಗಳ ಬೇಡಿಕೆಯಾಗಿತ್ತು. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಓಡಾಟಕ್ಕೆ ಕೋರ್ಟ್ ನೀಡಿದ್ದ ಗಡುವು ಇಂದಿಗೆ ಮುಕ್ತಾಯ ಆಗಿದೆ. ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ಹೇರಿ ಏಪ್ರಿಲ್ 2ರಂದು ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ಕೋರಿ ಓಲಾ, ಊಬರ್‌ನಂತಹ ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

    ಇನ್ನೂ ನ್ಯಾಯಾಲಯದ ಆದೇಶ ಬೆನ್ನಲ್ಲೇ ಅಲರ್ಟ್ ಆದ ಸಾರಿಗೆ ಇಲಾಖೆ ತಂಡ ರೆಡಿ ಮಾಡಿದ್ದು, ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗಿಳಿಸಿದರೆ ಸೀಜ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಚರಣೆಗೆ ಸಾರಿಗೆ ಇಲಾಖೆ 10 ರಿಂದ 15 ತಂಡಗಳ ರಚನೆ ಮಾಡಿದ್ದು, ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲು ಸಿದ್ಧತೆ ನಡೆಸಿದೆ.  ಇದನ್ನೂ ಓದಿ: ಸ್ಮಾರ್ಟ್‌ಸಿಟಿ ಹೆಸರಲ್ಲಿ 70 ಸಾವಿರ ಜನರಿಗೆ 2,676 ಕೋಟಿ ನಾಮ – ಕಳ್ಳ ಸಹೋದರರು ಅರೆಸ್ಟ್‌!

  • ಗುಡ್‌ನ್ಯೂಸ್ – ಏ.1ರಿಂದ ಆಟೋ ದರ ಏರಿಕೆ ಇಲ್ಲ!

    ಗುಡ್‌ನ್ಯೂಸ್ – ಏ.1ರಿಂದ ಆಟೋ ದರ ಏರಿಕೆ ಇಲ್ಲ!

    ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆಯಿಂದಾಗಿ ಕಂಗೆಟ್ಟಿರುವ ಬೆಂಗಳೂರಿಗರಿಗೆ (Bengaluru) ರಿಲ್ಯಾಕ್ಸ್ ಆಗಲಿದ್ದು, ಏ.1ರಿಂದ ಆಟೋ ದರ ಏರಿಕೆಗೆ (Auto Rate Hike) ತಾತ್ಕಾಲಿಕ ಬ್ರೇಕ್ ಬಿದ್ದಿದೆ.

    ಈ ವರ್ಷದ ಆರಂಭದಿಂದಲೂ ನಿತ್ಯ ದರ ಏರಿಕೆ ಸುದ್ದಿ ಕೇಳಿ ಬೆಂಗಳೂರಿಗರು ಬೇಸತ್ತಿದ್ದರು. ಬಸ್, ಮೆಟ್ರೋ ದರ, ನೀರಿನ ದರ ಏರಿಕೆ ಬಳಿಕ ಏ.1ರಿಂದ ಆಟೋ ದರ ಕೂಡ ಏರಿಕೆಯಾಗಲಿದೆ ಎಂದು ಕೇಳಿಬರುತ್ತಿತ್ತು. ಆದರೆ ಇದೀಗ ಆಟೋ ದರ ಏರಿಕೆಗೆ ಜಿಲ್ಲಾಡಳಿತ ತಡೆ ನೀಡಿದೆ.ಇದನ್ನೂ ಓದಿ: ಸ್ಲೀಪ್‌ ಡಿವೋರ್ಸ್‌ನಲ್ಲಿ ಭಾರತಕ್ಕೆ ಅಗ್ರ ಸ್ಥಾನ – ಏನಿದು ನಿದ್ರಾ ವಿಚ್ಛೇದನ?

    ಆಟೋ ದರ ಪರಿಷ್ಕರಣೆ ಸಂಬಂಧ ವಾರದ ಹಿಂದೆಯಷ್ಟೇ ಸಾರಿಗೆ ಇಲಾಖೆಯು (Transport Department) ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಏ.1ರಿಂದ ದರ ಏರಿಕೆ ಆಗುತ್ತದೆ ಎಂದು ಆಟೋ ಚಾಲಕರು ಖುಷಿಯಲ್ಲಿದ್ದರು. ಆದರೆ ಬೆಂಗಳೂರು ಡಿಸಿ ಮಾತ್ರ ಸದ್ಯಕ್ಕೆ ಆಟೋ ದರ ಏರಿಕೆ ಇಲ್ಲ, ದರ ಏರಿಕೆ ಸಂಬಂಧ ಸಾರಿಗೆ ಇಲಾಖೆಯಿಂದ ಸಭೆ ಮಾಡಿ ರಿಪೋರ್ಟ್ ಸಿದ್ಧಪಡಿಸಬೇಕಿದೆ. ಆ ನಂತರ ಮತ್ತೊಂದು ಮೀಟಿಂಗ್ ಮಾಡಿ ದರ ಏರಿಕೆ ನಿರ್ಧಾರ ಆಗಬೇಕು. ದರ ಏರಿಕೆ ಎಷ್ಟಾಗುತ್ತೆ? ಹೇಗೆ ಎನ್ನುವ ತೀರ್ಮಾನ ಆಗಲಿದೆ. ಈ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿ, ದರ ಪರಿಷ್ಕರಣೆ ಫೈನಲ್ ಆಗಬೇಕಾದರೆ ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಅತ್ತ ಜನ ನಿಟ್ಟುಸಿರು ಬಿಟ್ಟರೆ, ಇತ್ತ ಆಟೋ ಚಾಲಕರಿಗೆ ಕೊಂಚ ಬೇಸರವಾಗಿದೆ. ಯುಗಾದಿ (Yugadi) ಹಬ್ಬಕ್ಕೆ ಆಟೋ ಏರಿಕೆಯ ಗಿಫ್ಟ್ ಸಿಗುತ್ತದೆ ಎಂದು ಆಟೋ ಚಾಲಕರು, ಸಂಘಟನೆಗಳು ಖುಷಿಯಲ್ಲಿದ್ದರು. ಆದ್ರೆ ಸದ್ಯಕ್ಕೆ ದರ ಏರಿಕೆ ಆಗಲ್ಲ ಎಂದು ತಿಳಿಸಿದೆ.

    ಈ ಹಿಂದೆ 2011ರಲ್ಲಿ ಆಟೋ ದರ ಪರಿಷ್ಕರಣೆ ಆಗಿತ್ತು. ಅದಾದ ನಂತರ 2021ರಲ್ಲಿ ಅಂದರೆ 10 ವರ್ಷಗಳ ಬಳಿಕ ದರ ಪರಿಷ್ಕರಣೆ ಆಗಿತ್ತು. ಹಿಂದಿನ ಪರಿಷ್ಕರಣೆಗೆ 10 ವರ್ಷಗಳ ಗ್ಯಾಪ್ ಇದೆ. ಇದೀಗ ಮೂರೇ ವರ್ಷಕ್ಕೆ ಆಟೋ ದರ ಪರಿಷ್ಕರಣೆ ಮಾಡಿ ಎಂದು ಒತ್ತಾಯ ಕೇಳಿ ಬಂದಿದ್ದು, ಇದು ಸರಿಯಿದಿಯಾ? ಇಲ್ವಾ? ಎನ್ನುವ ಪರಿಶೀಲನೆಗೂ ಜಿಲ್ಲಾಡಳಿತ ಮುಂದಾಗಿದೆ.ಇದನ್ನೂ ಓದಿ: ವಿಜಯೇಂದ್ರ, ಯತ್ನಾಳ್ ಟೀಂಗೆ ‘ಹೈ’ ಶಾಕ್ – ಐವರು ನಾಯಕರಿಗೆ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್

  • ಶಕ್ತಿ ಯೋಜನೆಯಿಂದ ಇಲಾಖೆ ಅಭಿವೃದ್ಧಿ ಕಷ್ಟ – ಖಾತೆ ಬದಲಾವಣೆಗೆ ರಾಮಲಿಂಗಾರೆಡ್ಡಿ ಒತ್ತಡ?

    ಶಕ್ತಿ ಯೋಜನೆಯಿಂದ ಇಲಾಖೆ ಅಭಿವೃದ್ಧಿ ಕಷ್ಟ – ಖಾತೆ ಬದಲಾವಣೆಗೆ ರಾಮಲಿಂಗಾರೆಡ್ಡಿ ಒತ್ತಡ?

    ಬೆಂಗಳೂರು: ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಮ್ಮ ಖಾತೆ ಬದಲಾವಣೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

    ರಾಜ್ಯ ಸರ್ಕಾರದ ಬಜೆಟ್ ಮಂಡನೆ ಬೆನ್ನಲ್ಲೇ ಖಾತೆ ಬದಲಾವಣೆ ಒತ್ತಡ ಕೇಳಿಬಂದಿದೆ ಎನ್ನಲಾಗುತ್ತಿದೆ. ಶಕ್ತಿ ಯೋಜನೆ ಹೊಡೆತದಲ್ಲಿ ಇಲಾಖೆಯ ಅಭಿವೃದ್ಧಿ ಕಷ್ಟವಾಗಿದೆ. ಬಜೆಟ್ ನಿರೀಕ್ಷೆಯೂ ಹುಸಿಯಾಗಿದೆ. ಬೇರೆ ಯಾವುದಾದರೂ ಖಾತೆ ಕೊಟ್ಟರೆ ಒಕೆ. ಈ ಖಾತೆಯಿಂದ ಬಿಡುಗಡೆಗೆ ಮನವಿ ಮಾಡಿದ್ದಾರೆಂಬ ಮಾತು ಕೇಳಿಬಂದಿದೆ. ಇದನ್ನೂ ಓದಿ: ಲೋಕಾಯುಕ್ತರ ಮುಂದೆ ದಡೇಸುಗೂರು ನನ್ನ ಪತಿ ಎಂದ ಮಹಿಳಾಧಿಕಾರಿ – 2ನೇ ಮದುವೆಯಾದ್ರಾ ಮಾಜಿ ಶಾಸಕ?

    ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ಇಲ್ಲದಿರುವುದು ಹಾಗೂ ಶಕ್ತಿ ಯೋಜನೆಯ ಆರ್ಥಿಕ ಹೊಡೆತ ಇಲಾಖೆ ಬಗ್ಗೆ ಬೇಸರಕ್ಕೆ ಕಾರಣವಾಗಿದೆ. ಆದ್ದರಿಂದ ಸಿಎಂ ಬಳಿ ಮನವಿ ಮೂಲಕ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಬಯಸಿದ್ದಾರೆಂದು ತಿಳಿದುಬಂದಿದೆ.

    5 ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಡಿಯಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ 5,200 ಕೋಟಿ ನಷ್ಟ ಆಗಿದೆ ಎಂದು ಈಚೆಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಗುಂಡೇಟು!

  • 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ, ಶಕ್ತಿ ಯೋಜನೆಗೆ ಸರ್ಕಾರ 2,000 ಕೋಟಿ ಹಣ ಬಾಕಿ ಕೊಡಬೇಕು: ರಾಮಲಿಂಗಾ ರೆಡ್ಡಿ

    4 ಸಾರಿಗೆ ನಿಗಮಗಳು ನಷ್ಟದಲ್ಲಿವೆ, ಶಕ್ತಿ ಯೋಜನೆಗೆ ಸರ್ಕಾರ 2,000 ಕೋಟಿ ಹಣ ಬಾಕಿ ಕೊಡಬೇಕು: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಸಾರಿಗೆ ಇಲಾಖೆಯ (Department of Transport) 4 ನಿಗಮಗಳು ನಷ್ಟದಲ್ಲಿವೆ. ಶಕ್ತಿ ಯೋಜನೆಗೆ (Shakti Scheme) ಸರ್ಕಾರ 2 ಸಾವಿರ ಕೋಟಿ ಹಣ ಬಾಕಿ ನೀಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ತಿಳಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಾರಿಗೆ ಇಲಾಖೆ ನಿಗಮಗಳ ನಷ್ಟದ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿದರು. ಕಳೆದ 5 ವರ್ಷಗಳಿಂದಲೂ 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ. 2019-20ರಿಂದ 2023-24ವರೆಗೆ ಕೆಎಸ್‌ಆರ್‌ಟಿಸಿ- 1500.34 ಕೋಟಿ ನಷ್ಟ. ಬಿಎಂಟಿಸಿ- 1544.62 ಕೋಟಿ. ಕಲ್ಯಾಣ ಕರ್ನಾಟಕ ಸಾರಿಗೆ- 777.64 ಕೋಟಿ.ವಾಯುವ ವಾಯುವ್ಯ ಕರ್ನಾಟಕ ನಿಗಮ- 1386.58 ಕೋಟಿ ನಷ್ಟದಲ್ಲಿವೆ ಎಂದು ಸಚಿವರು ಅಂಕಿಅಂಶಗಳನ್ನ ಕೊಟ್ಟರು. ಇದನ್ನೂ ಓದಿ: ಕೇದಾರನಾಥ್‌ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?

    ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಸರ್ಕಾರ ಸಹಕಾರ ಕೊಡದೇ ಹೋದರೆ ಸಾರಿಗೆ ನಿಗಮಗಳಿಗೆ ಕಷ್ಟ ಆಗುತ್ತದೆ. ಇಡೀ ದೇಶದಲ್ಲಿ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ನಷ್ಟವನ್ನು ತಡೆಯಲು ಬಸ್ ಟಿಕೆಟ್ ದರ ಜಾಸ್ತಿ ಮಾಡಲಾಗಿದೆ. ಸಿಎಂ ಅವರು 2 ಸಾವಿರ ಕೋಟಿ ಲೋನ್ ಕೊಡಿಸಿದ್ದಾರೆ. ಅದನ್ನ ಸರ್ಕಾರ ತೀರಿಸುತ್ತದೆ. ಮೋಟಾರ್ ಟ್ಯಾಕ್ಸ್ ವಿನಾಯ್ತಿ ಸಾರಿಗೆ ಇಲಾಖೆಗೆ ಸರ್ಕಾರ ಕೊಟ್ಟಿದೆ ಎಂದು ತಿಳಿಸಿದರು. 2 ಸಾವಿರ ಕೋಟಿ ಶಕ್ತಿ ಯೋಜನೆ ಹಣವನ್ನ ಸರ್ಕಾರ ಬಾಕಿ ಉಳಿಸಿಕೊಂಡಿದೆ. 9,978 ಕೋಟಿ ಶಕ್ತಿ ಹಣ ಸರ್ಕಾರ ಕೊಡಬೇಕು. ಇದರಲ್ಲಿ 2 ಸಾವಿರ ಕೋಟಿ ಹಣ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ದರ್ಶನ್ ಯಾವತ್ತಿದ್ರೂ ನನ್ನ ಮಗ: ತಾಯಿ, ಮಗನ ಸಂಬಂಧದಲ್ಲಿ ವಿವಾದ ಸೃಷ್ಟಿಸಬೇಡಿ ಎಂದ ಸುಮಲತಾ

  • Video | ಹೊಸ ವರ್ಷಕ್ಕೆ ದರ ಏರಿಕೆ ಶಾಕ್‌ – ಆಟೋ ದರ ಪ್ರತಿ ಕಿಮೀಗೆ 5 ರೂ. ಏರಿಕೆ ಸಾಧ್ಯತೆ!

    Video | ಹೊಸ ವರ್ಷಕ್ಕೆ ದರ ಏರಿಕೆ ಶಾಕ್‌ – ಆಟೋ ದರ ಪ್ರತಿ ಕಿಮೀಗೆ 5 ರೂ. ಏರಿಕೆ ಸಾಧ್ಯತೆ!

    ಬೆಂಗಳೂರು: 2025ರ ಹೊಸ ವರ್ಷಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಜನರಿಗೆ ದರ ಏರಿಕೆ ಶಾಕ್‌ ತಟ್ಟುವ ಆತಂಕ ಎದುರಾಗಿದೆ. ಇದೇ ಡಿ.23ರಂದು ಸಾರಿಗೆ ಇಲಾಖೆ ಆಟೋ ಚಾಲಕರ ಸಂಘಟನೆ ಹಾಗೂ ಅಧಿಕಾರಿಗಳ ಸಭೆ ಕರೆದಿದೆ. ಈ ಸಭೆಯಲ್ಲಿ ದರ ಏರಿಕೆಯ ಸ್ಪಷ್ಟ ಚಿತ್ರಣ ಸಿಗಲಿದೆ.‌ ಸದ್ಯ ಪ್ರತಿ 1 ಕಿಮೀಗೆ 5 ರೂ. ಹೆಚ್ಚಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಈ ಕುರಿತ ವೀಡಿಯೋ ಇಲ್ಲಿದೆ…..

  • ಸೆ.16ರಿಂದ HSRP ಕಡ್ಡಾಯ – ನಂಬರ್‌ಪ್ಲೇಟ್ ಅಳವಡಿಸದಿದ್ದರೇ 500 ರೂ. ದಂಡ

    ಸೆ.16ರಿಂದ HSRP ಕಡ್ಡಾಯ – ನಂಬರ್‌ಪ್ಲೇಟ್ ಅಳವಡಿಸದಿದ್ದರೇ 500 ರೂ. ದಂಡ

    ಬೆಂಗಳೂರು: ಇಷ್ಟು ದಿನ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ (HSRP Number Plate) ಸರ್ಕಾರ ಮತ್ತು ಕೋರ್ಟ್ ಗಡುವು ನೀಡಿತ್ತು. ಪದೇ ಪದೇ ಗಡುವು ವಿಸ್ತರಣೆಯಾಗುತ್ತಾ ಬಂದಿತ್ತು. ಇದೀಗ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿರುವ ಡೆಡ್ ಲೈನ್‌ಗೆ ಕೇವಲ ಒಂದು ವಾರ ಮಾತ್ರ ಬಾಕಿ ಇದೆ.

    ಸೆಪ್ಟೆಂಬರ್ 15ಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊಟ್ಟಿರುವ ಡೆಡ್‌ಲೈನ್ ಮುಗಿಯಲಿದೆ. ರಾಜ್ಯದಲ್ಲಿ ಒಟ್ಟಾರೆ 2 ಕೋಟಿಯಷ್ಟು ವಾಹನಗಳಿದ್ದು, ಇದರಲ್ಲಿ ಇಲ್ಲಿಯವರೆಗೆ 51 ಲಕ್ಷ ವಾಹನಗಳು ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಹಾಕಿಸಿದ್ದಾರೆ. ಉಳಿದ 1.49 ಕೋಟಿ ವಾಹನಗಳು ಇನ್ನೂ ಹೆಚ್‌ಎಸ್‌ಆರ್‌ಪಿ ಹಾಕಿಸಿಲ್ಲ. ಸೆ.16ರಿಂದಲೇ ನಮ್ಮ ಇಲಾಖೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಸ್ಪೆಷಲ್‌ ಡ್ರೈವ್  ಮಾಡಿ 500 ರೂ. ದಂಡ ಹಾಕುತ್ತೇವೆ. ಮೊದಲ ಸಲ 500 ರೂ. ದಂಡ ವಿಧಿಸಿದರೇ ಎರಡನೇ ಸಲಕ್ಕೆ 1,000 ರೂ. ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ (Department of Transport)‌ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‌ಟಿ ದರ ಕಡಿತ

    ಕೇಂದ್ರ ಸರ್ಕಾರ ಇಡೀ ದೇಶದಲ್ಲೇ ಏಕ ಮಾದರಿಯ ನಂಬರ್ ಪ್ಲೇಟ್ ಇರಬೇಕೆಂಬ ದೃಷ್ಟಿಯಿಂದ ಮತ್ತು ಅಪರಾಧ ಕೃತ್ಯಗಳ ಬಗ್ಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ನಿಂದ ಮಾಹಿತಿ ಸಿಗಲಿದೆ ಎಂಬ ಉದ್ದೇಶದಿಂದ ಹೆಚ್‌ಎಸ್‌ಆರ್‌ಪಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದನ್ನು ಜನ ಇನ್ನೂ ತಮ್ಮ ವಾಹನಗಳಿಗೆ ಹಾಕಿಸಿಕೊಳ್ಳದೇ ಸುಮ್ಮನೇ ಇದ್ದು ಕೊನೇ ಗಳಿಗೆಯಲ್ಲಿ ಆನ್‌ಲೈನ್‌ನಲ್ಲಿ ಬುಕ್ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಒಂದು ವಾರ ಕಾಲಾವಕಾಶ ಇದೆ.ಬಳಿಕ ನಾವು ದಂಡ ಹಾಕುತ್ತೇವೆ. ಜೊತೆಗೆ ಟ್ರಾಫಿಕ್ ಪೊಲೀಸರೂ (Traffic Police) ಸಹ ಇದಕ್ಕೆ ದಂಡ ಹಾಕುತ್ತಾರೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: 3 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ

  • ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ರದ್ದು

    ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ರದ್ದು

    ಬೆಂಗಳೂರು: ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ (Bike Taxi) ಬಾಡಿಗೆ ಯೋಜನೆ ರದ್ದುಗೊಳಿಸಿ ಸಾರಿಗೆ ಇಲಾಖೆ (Transport Department) ಆದೇಶ ಹೊರಡಿಸಿದೆ.

    ಬೆಂಗಳೂರಿನಲ್ಲಿ (Bengaluru) ಎಲೆಕ್ಟ್ರಿಕ್ ಬೈಕ್‌, ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆ ರದ್ದುಗೊಳಿಸಿದ್ದರಿಂದ ಓಲಾ, ಉಬರ್, ರ‍್ಯಾಪಿಡೋಗಳಿಗೆ ತೀವ್ರ ಹಿನ್ನಡೆಯಾಗಿದೆ. ಇದನ್ನೂ ಓದಿ: PublicTV Explainer: ಬೆಂಗಳೂರಿಗೆ ಬಂತು ಮೊದಲ ಚಾಲಕ ರಹಿತ ಮೆಟ್ರೋ ರೈಲು – ವಿಶೇಷತೆಗಳು ನಿಮಗೆಷ್ಟು ಗೊತ್ತು?

    ಸಾರ್ವಜನಿಕ ಸಾರಿಗೆಗಾಗಿ ಹಾಗೂ ಸ್ವಯಂ ಉದ್ಯೋಗಾವಕಾಶ ಕೊಡುವ ಉದ್ದೇಶದಿಂದ 2021 ರಲ್ಲಿ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿ ಮಾಡಲಾಗಿತ್ತು. ಈಗಾಗಲೇ ಓಲಾ, ಉಬರ್, ರ‍್ಯಾಪಿಡೋದಿಂದ ಬೈಕ್ ಸೇವೆ ಇತ್ತು.

    ಆದರೆ ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ದ್ವಿಚಕ್ರ ವಾಹನ ಸಾರಿಗೆ ಸೇವೆ ರದ್ದು ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಮಹಿಳೆಯರಿಗೂ ಅಸುರಕ್ಷತೆಯ ದೃಷ್ಟಿಯಿಂದ ಈ ಸೇವೆಯನ್ನು ರದ್ದು ಮಾಡಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದನ್ನೂ ಓದಿ: ನಟಿ ಲಕ್ಷ್ಮಿ ಮೇಲೆ ಆಕ್ಸಿಡೆಂಟ್ ಮಾಡಿ ಯುವತಿ ಜೊತೆ ರಂಪಾಟ ಮಾಡಿದ ಆರೋಪ

  • KSRTC, BMTC ಬಸ್‌ಗಳಲ್ಲಿ ಕಂಡಕ್ಟರ್ 10 ರೂ. ಕಾಯಿನ್ ತೆಗೆದುಕೊಳ್ಳಲೇಬೇಕು!

    KSRTC, BMTC ಬಸ್‌ಗಳಲ್ಲಿ ಕಂಡಕ್ಟರ್ 10 ರೂ. ಕಾಯಿನ್ ತೆಗೆದುಕೊಳ್ಳಲೇಬೇಕು!

    – ದೂರು ಬಂದರೆ ಕ್ರಮ: ಸಾರಿಗೆ ಇಲಾಖೆಯಿಂದ ಎಚ್ಚರಿಕೆ

    ಬೆಂಗಳೂರು: ರಾಜ್ಯದ ಬಸ್‌ ಕಂಡಕ್ಟರ್‌ಗಳಿಗೆ ಸಾರಿಗೆ ಇಲಾಖೆ (Transport Department) ಖಡಕ್‌ ಸೂಚನೆಯೊಂದನ್ನು ಭಾನುವಾರ ಕೊಟ್ಟಿದೆ.

    ಹೌದು, ಇಷ್ಟು ದಿನ 10 ರೂ. ನಾಣ್ಯ ಕೊಟ್ಟರೆ ಕಂಡಕ್ಟರ್‌ಗಳು ತೆಗೆದುಕೊಳ್ಳುತ್ತಿರಲಿಲ್ಲ. ನಾಣ್ಯ ಕೊಟ್ಟಾಗ ಇದು ಹೋಗಲ್ಲ ನೋಟು ಕೊಡಿ ಎಂದು ಹೇಳುತ್ತಿದ್ದರು. ಹೀಗಾಗಿ 10 ರೂಪಾಯಿ ನಾಣ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ತಿಳುವಳಿಕೆ ಪತ್ರದ ಮೂಲಕ ಸಾರಿಗೆ ಇಲಾಖೆಯ ಕಾರ್ಯದರ್ಶಿಯು ಎಲ್ಲಾ ನಿಗಮಗಳಿಗೂ ವಾರ್ನಿಂಗ್ ಮಾಡಿದ್ದಾರೆ.

    ಕೆಎಸ್ ಆರ್ ಟಿಸಿ (KSRTC), ಬಿಎಂಟಿಸಿ (BMTC), ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ನಿಗಮಕ್ಕೆ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದ್ದು, ಅದರಲ್ಲಿ ರಾಜ್ಯದ ಎಲ್ಲಾ ಸಾರಿಗೆ ಬಸ್ ಗಳಲ್ಲೂ 10 ರೂ. ನಾಣ್ಯ ಪಡೆಯುವಂತೆ ಆದೇಶಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಗೆ ನನ್ನನ್ನು ಆಹ್ವಾನಿಸಿಲ್ಲ: ಡಿ.ಕೆ ಶಿವಕುಮಾರ್

    ಬಸ್ ಪ್ರಯಾಣದ ವೇಳೆ ಪ್ರಯಾಣಿಕರು 10 ರೂ. ನಾಣ್ಯ (10 Rs Coin) ನೀಡಿದರೆ ಪಡೆಯಬೇಕು. ಒಂದು ವೇಳೆ 10 ರೂ. ನಾಣ್ಯ ಪಡೆಯದೇ ಇದ್ದರೆ, ಈ ಬಗ್ಗೆ ಪ್ರಯಾಣಿಕರಿಂದ ದೂರು ಬಂದರೆ ಆ ಬಸ್ಸಿನ ನಿರ್ವಾಹಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ರವಾನಿಸಿದೆ.

  • ಸ್ಮಾರ್ಟ್‌ಕಾರ್ಡ್‌ಗೆ ಗ್ರಹಣ – ಸಾಫ್ಟ್‌ವೇರ್ ಅಪ್ಡೇಟ್ ನೆಪದಿಂದ ಜನ ಹೈರಾಣು

    ಸ್ಮಾರ್ಟ್‌ಕಾರ್ಡ್‌ಗೆ ಗ್ರಹಣ – ಸಾಫ್ಟ್‌ವೇರ್ ಅಪ್ಡೇಟ್ ನೆಪದಿಂದ ಜನ ಹೈರಾಣು

    ಬೆಂಗಳೂರು: ಹೊಸ ವಾಹನ ಖರೀದಿ ಮಾಡಿದವರಿಗೆ ಸಾರಿಗೆ ಇಲಾಖೆ (Department of Transport) ಟೆನ್ಶ್ಯನ್ ಕೊಟ್ಟಿದೆ. ಹೊಸ ವಾಹನದ ಡಿಎಲ್, ಆರ್‌ಸಿಗಾಗಿ ಜನರು ಅಲೆದಾಡುತ್ತಿದ್ದು, ಸ್ಮಾರ್ಟ್‌ಕಾರ್ಡ್‌ಗೆ (Smart Card) ಗ್ರಹಣ ಹಿಡಿದಿದೆ. ತಾಂತ್ರಿಕ ದೋಷದ (Technical Issue) ನೆಪಕ್ಕೆ ಇದೀಗ ಜನ ಹೈರಾಣಾಗಿದ್ದಾರೆ.

    ಹೊಸ ವಾಹನ (New Vehicle) ಖರೀದಿ ಮಾಡಿದವರಿಗೆ ಇದೀಗ ಹೊಸ ಪೀಕಲಾಟ ಶುರುವಾಗಿದೆ. ಸಾರಿಗೆ ಇಲಾಖೆ ಎಡವಟ್ಟಿನ ಎಫೆಕ್ಟ್‌ನಿಂದ ಜನ ಪರದಾಡುವಂತಾಗಿದೆ. ಯಾಕೆಂದರೆ ಹೊಸ ವಾಹನ ಖರೀದಿದಾರರಿಗೆ ಕೊಡುವ ಆರ್‌ಸಿ ಸ್ಮಾರ್ಟ್‌ಕಾರ್ಡ್‌ ಪ್ರಿಂಟ್ ಆಗಲು ಸಾಫ್ಟ್‌ವೇರ್ ಸಮಸ್ಯೆ ಎದುರಾಗಿದೆ. ಇದನ್ನೂ ಓದಿ: ಸರ್ಕಾರಿ ಅಂಗನವಾಡಿಗಳ ಕರೆಂಟ್ ಬಿಲ್ ಕಟ್ಟಲು ದುಡ್ಡಿಲ್ಲ – ಫ್ಯೂಸ್ ಕಿತ್ತ ಬೆಸ್ಕಾಂ

    ಕಳೆದ ಹತ್ತು ದಿನದಿಂದ ಈ ಸಾಫ್ಟ್‌ವೇರ್ ಸಮಸ್ಯೆ ಬಗೆಹರಿದಿಲ್ಲ. ಇದರ ಎಫೆಕ್ಟ್‌ನಿಂದಾಗಿ ಹೊಸ ವಾಹನ ಖರೀದಿದಾರರು ವಾಹನ ರಸ್ತೆಗಿಳಿಸಲು ಹಿಂದೇಟು ಹಾಕುವಂತಾಗಿದೆ. ಈ ಸ್ಮಾರ್ಟ್‌ಕಾರ್ಡ್‌ಗೆ ಗುತ್ತಿಗೆ ಕೊಟ್ಟರೂ ಇದುವರೆಗೂ ಸರಿಯಾಗಿಲ್ಲ. ಇದರ ಮಾಹಿತಿ ಇಲ್ಲದೇ ಜನ ಆರ್‌ಟಿಓ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಇದನ್ನೂ ಓದಿ: ಪಾಲಾರ್ ಬಾಂಬ್ ಸ್ಫೋಟ ಕೇಸ್‌ ಆರೋಪಿ, ಕಾಡುಗಳ್ಳ ವೀರಪ್ಪನ್ ಸಹಚರ ಅನಾರೋಗ್ಯದಿಂದ ನಿಧನ

    ಬೆಂಗಳೂರಿನ ನಾನಾ ಆರ್‌ಟಿಓ ಕಚೇರಿಯಲ್ಲಿ ಜನರ ರಷ್ ಕಾಣಿಸುತ್ತಿದೆ. ಸಾರಿಗೆ ಇಲಾಖೆಯಲ್ಲಿ ಪ್ರತಿ ಬಾರಿಯೂ ಈ ರೀತಿಯ ಸಮಸ್ಯೆ ಉದ್ಭವವಾಗುತ್ತೆ ಎಂದು ಸಾರ್ವಜನಿಕರು ಕೂಡ ಕಿಡಿಕಾರಿದ್ದಾರೆ. ನಾಳೆ ಸರಿಯಾಗುತ್ತೆ, ನಾಡಿದ್ದು ಸರಿಯಾಗುತ್ತೆ ಎಂದು ಅಧಿಕಾರಿಗಳು ಕೂಡ ಜನರನ್ನು ಕಚೇರಿಯಿಂದ ಸಾಗಹಾಕುತ್ತಿದ್ದಾರೆ. ಹೊಸ ಗಾಡಿ ತೆಗೆದುಕೊಂಡವರು ವಾಹನವನ್ನು ರಸ್ತೆಗಿಳಿಸಲು ಪೊಲೀಸರ ದಂಡದ ಭೀತಿಯಿಂದ ಸೈಲೆಂಟ್ ಆಗುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಮೈಸೂರು ಏರ್ಪೋರ್ಟ್‌ಗೆ ಟಿಪ್ಪು ಹೆಸರಿಡಲು ಚಿಂತನೆ – ಟಿಪ್ಪು ಹೆಸರು ಶೌಚಾಲಯಕ್ಕೆ ಇಡಲಿ ಎಂದ ಯತ್ನಾಳ್

  • ಇನ್ಮುಂದೆ ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ಕಡ್ಡಾಯ

    ಇನ್ಮುಂದೆ ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ಕಡ್ಡಾಯ

    – ಪ್ಯಾನಿಕ್ ಬಟನ್, ಲೊಕೆಷನ್ ಟ್ರ್ಯಾಕಿಂಗ್‌ ಡಿವೈಸ್ ಅಳವಡಿಕೆಗೆ 7,599 ರೂ. ಫಿಕ್ಸ್
    – ಡಿವೈಸ್ ಅಳವಡಿಸದಿದ್ರೇ ಎಫ್‌ಸಿ ನವೀಕರಣವಾಗಲ್ಲ
    – ಸಾರಿಗೆ ಇಲಾಖೆಯ ಆದೇಶಕ್ಕೆ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ವಿರೋಧ
    – ಕರ್ನಾಟಕ ಲಾರಿ ಅಸೋಸಿಯೇಷನ್‌ನಿಂದ ರಾಮಲಿಂಗಾರೆಡ್ಡಿಗೆ ಪತ್ರ

    ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ (Transport Department) ಇದೇ ತಿಂಗಳಿನಿಂದ ಮಹತ್ವದ ಆದೇಶವೊಂದನ್ನು ಜಾರಿಗೊಳಿಸಿದೆ. ಪರ್ಮಿಟ್ ವಾಹನಗಳು (Permit Vehicle) ಕಡ್ಡಾಯವಾಗಿ ಪ್ಯಾನಿಕ್ ಬಟನ್, GPS ಡಿವೈಸ್ ಅಳವಡಿಕೆ ಮಾಡುವಂತೆ ಆದೇಶದಲ್ಲಿ ಸೂಚಿಸಿದ್ದು, ಇದಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

    ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ಈ ಬೆನ್ನಲ್ಲೇ ಡಿಸೆಂಬರ್ 1 ರಿಂದ (ಶುಕ್ರವಾರ) ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್ (Panic Button) ಹಾಗೂ ಲೋಕೇಷನ್ ಟ್ರಾಕಿಂಗ್ ಡಿವೈಸ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಇದೆನ್ನೂ ಓದಿ: ಬೆಂಗಳೂರಿನ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ತಾಳಮದ್ದಳೆ, ಕಾರ್ತಿಕ ದೀಪೋತ್ಸವ, ಪಲ್ಲಕ್ಕಿ ಉತ್ಸವ

    ದೆಹಲಿಯ ಕಾಲೇಜು ವಿದ್ಯಾರ್ಥಿನಿ ಮೇಲೆ ಬಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಕೇಂದ್ರಸರ್ಕಾರ ದೇಶದ ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ/ಪರ್ಮಿಟ್ ವಾಹನಗಳಿಗೆ GPS ಡಿವೈಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲು ಸೂಚಿಸಿತ್ತು. ಈ ಹಿನ್ನೆಲೆ ಇದೇ ತಿಂಗಳಿನಿಂದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಡಿವೈಸ್ ಅಳವಡಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರದ 60:40 ಅನುಪಾತದ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ 2035.90 ಲಕ್ಷ ರೂ.ಗಳ ವೆಚ್ಚಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಹೀಗಾಗಿ ಪರ್ಮಿಟ್ ವಾಹನಗಳ ಮಾಲೀಕರು ಅರ್ಹ ಕಂಪನಿಗಳಿಂದ 7,599 ರೂ. ನೀಡಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಡಿಸೆಂಬರ್ 1 ರಿಂದ ಈ ಯೋಜನೆ ಪ್ರಾರಂಭವಾಗಿದ್ದು, ಒಂದು ವರ್ಷದೊಳಗೆ (30-11-24) ರ ಒಳಗೆ ಪರ್ಮಿಟ್ ವಾಹನಗಳು ಈ ಡಿವೈಸ್ ಹಾಕಿಸಿಕೊಳ್ಳಬೇಕು. ಇಲ್ಲದಿದ್ದರೇ ಸಾರಿಗೆ ಇಲಾಖೆ ವಾಹನಗಳ ಎಫ್‌ಸಿ ನವೀಕರಣಕ್ಕೆ ಬ್ರೇಕ್ ಹಾಕುವುದಾಗಿ ಎಚ್ಚರಿಸಿದೆ.

    ಸರ್ಕಾರದ ಈ ಆದೇಶಕ್ಕೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಲಾರಿ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜಶರ್ಮಾ, ಪ್ಯಾನಿಕ್ ಬಟನ್, ಜಿಪಿಎಸ್ ಅಳವಡಿಸಿದ ನಂತರ ಜಿಪಿಎಸ್, ಪ್ಯಾನಿಕ್ ಬಟನ್ ಹೇಗೆ, ಯಾರು ಕಂಟ್ರೋಲ್ ಮಾಡ್ತಾರೆ ಅನ್ನೋ ಮಾಹಿತಿ ಕೊಟ್ಟಿಲ್ಲ. ಜೊತೆಗೆ ಈ ಡಿವೈಸ್ ಅಳವಡಿಸಲು ಖಾಸಗಿ ಕಂಪನಿಗಳಲ್ಲಿ 3,000-3,500 ರೂಪಾಯಿ ಆಗುತ್ತೆ. ಆದ್ರೆ ಸರ್ಕಾರ ಸೆಲೆಕ್ಟ್ ಮಾಡಿದ 13 ಕಂಪನಿಗಳಿಗೆ 8,500 ರೂಪಾಯಿ ಯಾಕೆ ಕೊಡಬೇಕು. ಇದ್ರ ಬಗ್ಗೆ ಚರ್ಚೆಯಾಗಲಿ, ಅಲ್ಲಿಯವರೆಗೂ ಈ ಆದೇಶ ವಾಪಾಸ್ ಪಡೆಯಲಿ ಅಂತ ಆಗ್ರಹಿಸಿದ್ದಾರೆ.

    ಕರ್ನಾಟಕ ರಾಜ್ಯ ಲಾರಿ ಅಸೋಸಿಯೇಷನ್‌ನಿಂದಲೂ ವಿರೋಧ ವ್ಯಕ್ತವಾಗಿದ್ದು, ಈ ಆದೇಶವನ್ನು ಪರಿಶೀಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದಿದ್ದಾರೆ. ಇದೆನ್ನೂ ಓದಿ: ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡುತ್ತಿದ್ದೆ: ಭ್ರೂಣ ಹತ್ಯೆ ಕುರಿತು ನರ್ಸ್ ಮಂಜುಳ ಸ್ಫೋಟಕ ಮಾಹಿತಿ