Tag: transport corporation

  • ಸಾರಿಗೆ ಬಸ್‍ನಿಂದ ಬಿದ್ದು ಬಾಲಕಿ ಸಾವು ಪ್ರಕರಣ – ನಿಗಮದಿಂದ ಹೊಸ ಆದೇಶ

    ಸಾರಿಗೆ ಬಸ್‍ನಿಂದ ಬಿದ್ದು ಬಾಲಕಿ ಸಾವು ಪ್ರಕರಣ – ನಿಗಮದಿಂದ ಹೊಸ ಆದೇಶ

    ಬೆಂಗಳೂರು: ಹಾವೇರಿಯಲ್ಲಿ (Haveri) ಚಲಿಸುತ್ತಿದ್ದ ಸಾರಿಗೆ ಬಸ್‍ನಿಂದ ಬಾಲಕಿಯೊಬ್ಬಳು ಬಿದ್ದು ಸಾವಿಗೀಡಾದ ಪ್ರಕರಣ ರಾಜ್ಯದಲ್ಲಿ (Karnataka) ಮತ್ತೆ ಮರುಕಳಿಸದಂತೆ ಸಾರಿಗೆ ನಿಗಮದಿಂದ (Transport Corporation) ಹೊಸ ಆದೇಶ ಜಾರಿಯಾಗಿದೆ.

    ಬಸ್ (Bus) ಸಂಚಾರಕ್ಕೂ ಮುನ್ನ ಬಾಗಿಲು ಮುಚ್ಚಿರುವುದು ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು. ನಿರ್ವಾಹಕರ ಸೂಚನೆ ಬಳಿಕವೇ ವಾಹನವನ್ನು ಚಾಲಕರು ಚಾಲನೆ ಮಾಡಬೇಕು. ಫುಟ್ ಬೋರ್ಡ್‍ನಲ್ಲಿ ನಿಂತು ಪ್ರಯಾಣಿಸದಂತೆ ಪ್ರಯಾಣಿಕರಿಗೆ ಸೂಚನೆ ಕೊಡಬೇಕು. ಬಸ್ ನಿಲ್ದಾಣ ತಲುಪುವ ಮುನ್ನ ಬಾಗಿಲನ್ನು ತೆರೆಯಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ ಸೂಚನೆಗಳನ್ನು ಸಾರಿಗೆ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸುವಂತೆ ನಿಗಮ ಆದೇಶ ಹೊರಡಿಸಿದೆ. ಇದನ್ನೂ ಓದಿ: ತುಂಬಿ ತುಳುಕುತ್ತಿದ್ದ ಸಾರಿಗೆ ಬಸ್‍ನಿಂದ ಬಿದ್ದು ಬಾಲಕಿ ಸಾವು

    ಹಾವೇರಿಯಲ್ಲಿ 14 ವರ್ಷದ ಮಧು ಕುಂಬಾರ ಎಂಬ ಬಾಲಕಿ ಸೋಮವಾರ ಶಾಲೆಗೆ ತೆರಳುವ ವೇಳೆ ಆಯತಪ್ಪಿ ಬಸ್‍ನಿಂದ ಕೆಳಗಡೆ ಬಿದ್ದು ಸಾವನ್ನಪ್ಪಿದ್ದಳು. ಇದನ್ನೂ ಓದಿ: ಗಂಡ ಬೇರೆ ಮನೆಮಾಡದ್ದಕ್ಕೆ ತವರಿಗೆ ಕರೆಸಿ ಅತ್ತೆಯನ್ನೇ ಕೊಂದ ಸೊಸೆ!

  • ಸಾಲಕ್ಕಾಗಿ ಕಟ್ಟಡವನ್ನೇ ಅಡವಿಟ್ಟ ಬಿಎಂಟಿಸಿ – ಯಾವ ಬ್ಯಾಂಕ್‍ನಿಂದ ಎಷ್ಟು ಕೋಟಿ ಸಾಲ?

    ಸಾಲಕ್ಕಾಗಿ ಕಟ್ಟಡವನ್ನೇ ಅಡವಿಟ್ಟ ಬಿಎಂಟಿಸಿ – ಯಾವ ಬ್ಯಾಂಕ್‍ನಿಂದ ಎಷ್ಟು ಕೋಟಿ ಸಾಲ?

    ಬೆಂಗಳೂರು: ಜನರ ಜೀವನಾಡಿ ಬಿಎಂಟಿಸಿ(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ). ಈಗ ಇದು ಅಧೋಗತಿಯತ್ತ ಸಾಗುತ್ತಿದೆ. ಕೋಟಿ ಕೋಟಿ ಸಾಲ ಮಾಡಿ ಕಟ್ಟಡವನ್ನೇ ಅಡವಿಡುತ್ತಿದೆ.

    ದೇಶದ ನಂಬರ್ 1 ಸಾರಿಗೆ ಸಂಸ್ಥೆಯಾದ ಬಿಎಂಟಿಸಿ ಸಾಲದ ಶೂಲದಿಂದ ಹೊರಬರಲು ಆಗುತ್ತಿಲ್ಲ. ಸಾಲಕ್ಕಾಗಿ ಸಂಸ್ಥೆಯ ಕಟ್ಟಡ ಹಾಗೂ ಸ್ಥಳವನ್ನು ವಿವಿಧ ಬ್ಯಾಂಕ್‍ಗಳಲ್ಲಿ ಅಡವಿಟ್ಟಿರೋದು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗವಾಗಿದೆ. ಇದನ್ನೂ ಓದಿ: ಕಾರ್ಯಕಾರಿಣಿ ಸಭೆ ಬಳಿಕ ಸಂಪುಟ ಸರ್ಜರಿ ಫೈನಲ್: ಸಿಎಂ

    ಎಲ್ಲಿ ಎಷ್ಟು?
    2018ರಲ್ಲಿ ಕೆನರಾ ಬ್ಯಾಂಕ್‍ನಲ್ಲಿ 100 ಕೋಟಿ ರೂ. ಸಾಲ ಪಡೆದ್ರೆ, 2018-19ರಲ್ಲಿ ಇದೇ ಬ್ಯಾಂಕ್‍ನಲ್ಲಿ ಮತ್ತೆ 19.95 ಕೋಟಿ ಸಾಲ ಪಡೆಯಲಾಗಿದೆ. 2018ರಲ್ಲಿ ಕೆಯುಐಡಿಎಫ್‍ಸಿ ಬ್ಯಾಂಕ್‍ನಲ್ಲಿ 125 ಕೋಟಿ ರೂ. ಸಾಲ ಮಾಡಿದ್ರೆ, 2019-20ರಲ್ಲಿ ಕೆನರಾ ಬ್ಯಾಂಕ್‍ನಲ್ಲಿ 160 ಕೋಟಿ ರೂ. ಸಾಲ ಮಾಡಲಾಗಿದೆ.

    2020-21ರಲ್ಲಿ ಕೆಯುಐಡಿಎಫ್‍ಸಿ ಬ್ಯಾಂಕ್‍ನಲ್ಲಿ 135.05 ಕೋಟಿ ರೂ. ಸಾಲ ಪಡೆದ್ರೆ, 2020-21ರಲ್ಲಿ ಕೆನರಾ ಬ್ಯಾಂಕ್‍ನಲ್ಲಿ 230 ಕೋಟಿ ರೂ. ಸಾಲ ಮಾಡಲಾಗಿದೆ. ಅಷ್ಟೇ ಅಲ್ಲದೆ 2020-21 ಕೆಯುಐಡಿಎಫ್‍ಸಿ ಬ್ಯಾಂಕ್‍ನಲ್ಲಿ 42 ಕೋಟಿ ರೂ ಸಾಲ ಮಾಡಲಾಗಿದೆ. ಮಾರ್ಚ್ 13, 2022ರವರೆಗೆ ಒಟ್ಟು ಕೆಯುಐಡಿಎಫ್‍ಸಿ ಬ್ಯಾಂಕ್‍ನಲ್ಲಿ 183 ಕೋಟಿ ಸಾಲ ಮಾಡಲಾಗಿದೆ. ಇದನ್ನೂ ಓದಿ: 2 ಲಕ್ಷ ದೋಚಲು ಬಂದು 2 ಕೋಟಿ ಕಳ್ಳತನ – ಓನರ್ ಮನೆಗೆ ಐಟಿ, ಇಡಿ, ಎಂಟ್ರಿ ಸಾಧ್ಯತೆ

    ಈ ಮೇಲಿನ ಸಾಲದಲ್ಲಿ 160 ಕೋಟಿ ರೂ. ಹಾಗೂ 230 ಕೋಟಿ ರೂ. ಸಾಲ ಪಡೆಯಲು ಶಾಂತಿನಗರ ಟಿಟಿಎಂಸಿಯನ್ನು ಅಡಮಾನ ಇಡಲಾಗಿದೆ.

  • ಅಪಘಾತ ರಹಿತ ಚಾಲನೆ: ಕೋಲಾರದ 62 ಚಾಲಕರಿಗೆ ಬೆಳ್ಳಿ ಪದಕ

    ಅಪಘಾತ ರಹಿತ ಚಾಲನೆ: ಕೋಲಾರದ 62 ಚಾಲಕರಿಗೆ ಬೆಳ್ಳಿ ಪದಕ

    ಕೋಲಾರ: ಅಪಘಾತ ರಹಿತವಾಗಿ ಸುರಕ್ಷಿತ ಚಾಲನೆ ಮಾಡಿರುವ ಚಾಲಕರಿಗೆ ಸಾರಿಗೆ ಇಲಾಖೆ 30ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಬೆಳ್ಳಿ ಪದಕವನ್ನು ಪ್ರದಾನ ಮಾಡಿ ಅಭಿನಂದಿಸಲಾಗಿದೆ.

    ಜಿಲ್ಲೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಆವರಣದಲ್ಲಿ 30ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಜೆ. ಮಂಜುನಾಥ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

    ರಾಜ್ಯದಲ್ಲೇ ಕಳೆದ 5 ವರ್ಷಗಳಲ್ಲಿ ಹೆಚ್ಚು ಸುರಕ್ಷಿತ ಚಾಲನೆ ಮಾಡಿದ ಜಿಲ್ಲೆಗೆ ಕೋಲಾರ ಪಾತ್ರವಾದ ಹಿನ್ನೆಲೆಯಲ್ಲಿ ಅಪಘಾತ ರಹಿತ ಸುರಕ್ಷಿತ ಸೇವೆ ನೀಡಿರುವ ಕೋಲಾರ ವಿಭಾಗದ 62 ಜನ ಚಾಲಕರನ್ನ ಜಿಲ್ಲಾಧಿಕಾರಿಗಳು ಬೆಳ್ಳಿ ಪದಕ ನೀಡಿ ಗೌರವಿಸಿದರು.

    ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, 1968ರಲ್ಲಿ ಪ್ರಾರಂಭವಾದ ನಿಗಮ ನಷ್ಟದಲ್ಲಿದ್ದರೂ ಕೂಡ ಸಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ನೀಡುತ್ತಾ ಬಂದಿದೆ. ಪ್ರತಿ ಕಿ.ಮೀ ಗೆ 28 ರೂಪಾಯಿ ಆದಾಯ ಬರುತ್ತಿದ್ದರೆ, ಅದಕ್ಕೆ ನಿಗಮ 35 ರೂಪಾಯಿ ವ್ಯಯ ಮಾಡುತ್ತಿದೆ. ಕೋಲಾರ ವಿಭಾಗದಲ್ಲಿ ಮಾತ್ರವೇ 2,856 ಮಂದಿ ಸಾರಿಗೆಯಲ್ಲಿ ಕೆಲಸ ಮಾಡುತ್ತಿದ್ದು, 609 ಸಾರಿಗೆ ಬಸ್‍ಗಳು 754 ಗ್ರಾಮಗಳನ್ನು ತಲುಪಿ ಜನರಿಗೆ ಸಾರಿಗೆ ಸಂಪರ್ಕ ಕಲ್ಪಿಸಿದೆ ಎಂದು ತಿಳಿಸಿದರು.

    ಬಳಿಕ ಬೆಳ್ಳಿ ಪದಕ ಪಡೆದ ಚಾಲಕರು ಮಾತನಾಡಿ, ಸುರಕ್ಷಿತವಾಗಿ ಬಸ್ ಚಾಲನೆ ಮಾಡಿದ ನಮ್ಮನ್ನು ಸಾರಿಗೆ ನಿಗಮ ಪದಕ ಕೊಟ್ಟು ಗೌರವಿಸುತ್ತಿರುವುದು ಸಂತೋಷ ತಂದಿದೆ. ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇಲಾಖೆಯ ಎಲ್ಲಾ ಸಿಬ್ಬಂದಿಗೆ ನಿಗಮ ಉತ್ತಮ ಸೌಲಭ್ಯ ಕೊಟ್ಟಿರುವುದು ನೆಮ್ಮದಿಯ ವಿಚಾರ ಎಂದು ಅಭಿಪ್ರಾಯ ಹಂಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv