Tag: transport

  • ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳನ್ನು ಆಗಾಗ್ಗೆ ಬಳಸುವ ಮಧ್ಯಮ ವರ್ಗ ಹಾಗೂ ಖಾಸಗಿ ಕಾರು ಮಾಲೀಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್‌ ಕೊಡೋದಕ್ಕೆ ಮುಂದಾಗಿದೆ. ಟೋಲ್‌ ಸಂಗ್ರಹದಲ್ಲಿ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿಸಲು ಹಾಗೂ ಕಾರು ಮಾಲೀಕರಿಗೆ ಅನುಕೂಲ ಮಾಡಿಕೊಡಲು ʻವಾರ್ಷಿಕ ಟೋಲ್‌ ಪಾಸ್‌ʼ ವ್ಯವಸ್ಥೆಯ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ.

    ಈ ಪ್ರಸ್ತಾವನೆ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಶೀಲಿಸುತ್ತಿದೆ. ಅದರಂತೆ ಒಮ್ಮೆಲೆ 3,000 ರೂ. ಪಾವತಿಸಿ ಒಂದು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಟೋಲ್‌ಗಳಲ್ಲಿ ಸಂಚಾರ ಮಾಡಬಹುದು. 30,000 ರೂ. ಪಾವತಿಸಿದ್ರೆ ʻಜೀವಮಾನದ ಪಾಸ್‌ʼ ಒದಗಿಸುವ ಸಾಧ್ಯತೆಯೂ ಇದೆ. 30,000 ರೂ.ಗಳ ಪಾಸ್‌ ಪಡೆದರೆ 15 ವರ್ಷಗಳವರೆಗೆ ಟೋಲ್‌ಗಳಲ್ಲಿ ಸಂಚಾರಕ್ಕೆ ಅವಕಾಶ ಇರಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವರ್ಗಾವಣೆಯಾಗಿ ಅಥವಾ VRS ತೆಗೆದುಕೊಳ್ಳಿ- ಹಿಂದೂಯೇತರ 18 ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ತಿರುಪತಿ ಬೋರ್ಡ್‌

    ಸದ್ಯದ ಮಾಹಿತಿ ಪ್ರಕಾರ, ಈ ವ್ಯವಸ್ಥೆ ಅನುಷ್ಠಾನಗೋಳಿಸುವ ಪ್ರಸ್ತಾವನೆಯು ಪ್ರಗತಿಯಲ್ಲಿದೆ. ಜೊತೆಗೆ ಕಾರುಗಳಿಗೆ ಪ್ರತಿ ಕಿಮೀಗೆ ವಿಧಿಸಲಾಗುವ ಟೂಲ್‌ನ ಮೂಲ ಬೆಲೆಯನ್ನೂ ಮೊಟಕುಗೊಳಿಸುವ ಬಗ್ಗೆಯೂ ಸಚಿವಾಲಯ ಚಿಂತನೆ ನಡೆಸಿದೆ. ಫಾಸ್ಟ್‌ ಟ್ಯಾಗ್‌ ಹೊಂದಿರುವವರಿಗೆ ಇದು ಅಗತ್ಯವಿಲ್ಲ ಎಂದು ಸಹ ಹೇಳಲಾಗಿದೆ.

    ಪ್ರತಿ 60 ಕಿಲೋಮೀಟರ್‌ಗಳಿಗೆ ಒಂದು ಟೋಲ್ ಗೇಟ್ ಇದೆ. ಈ ಟೋಲ್ ಗೇಟ್‌ಗಳಲ್ಲಿ ನಿಗದಿತ ಮೊತ್ತವನ್ನು ಪಾವತಿಸಿದ ನಂತರವೇ ಮುಂದುವರಿಯಬೇಕಿದೆ. ಆದರೆ ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ತೆಗೆದುಕೊಂಡ ನಿರ್ಧಾರದಿಂದ ಎಲ್ಲಾ ವಾಹನ ಚಾಲಕರಿಗೆ ಕೊಂಚ ಆರಾಮ ಸಿಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಇದನ್ನೂ ಓದಿ:  ತಮಿಳುನಾಡಿನಲ್ಲಿ ಅಮಾನವೀಯ ಕೃತ್ಯ – ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದ್ಲೇ ಗ್ಯಾಂಗ್ ರೇಪ್

    ಸದ್ಯ ಆಗಾಗ್ಗೆ ರಾಷ್ಟ್ರೀಯ ಹೆದ್ದಾರಿ ಬಳಸುವ ವಾಹನ ಸವಾರರಿಗೆ ಮಾಸಿಕ ಪಾಸ್‌ ನೀಡುವ ವ್ಯವಸ್ಥೆ ಚಾಲ್ತಿಯಲಿದೆ. ಇದು ಮಾಸಿಕ ಪಾಸ್‌ಗೆ 340 ರೂ. ಇದು, ವಾರ್ಷಿಕ 4,080 ರೂ.ಆಗಲಿದೆ. ವಾರ್ಷಿಕ ಪಾಸ್‌ ವ್ಯವಸ್ಥೆ ಜಾರಿಗೆ ಬಂದರೆ 1,080 ರೂ. ಉಳಿತಾಯವಾಗಲಿದೆ. ಇದು ಮಧ್ಯಮ ವರ್ಗದವರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇದನ್ನೂ ಓದಿ: ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ

    ಇತ್ತೀಚೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ʻಏಕ ಟೋಲ್‌ʼ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದರು. 2023-24ರ ವರ್ಷದಲ್ಲಿ ಸಂಗ್ರಹವಾದ 55,000 ಕೋಟಿ ರೂ.ಗಳ ಪೈಕಿ, ಖಾಸಗಿ ಕಾರುಗಳಿಂದ ಸಂಗ್ರಹಿತವಾದ ಟೋಲ್‌ ಶುಲ್ಕ 8,000 ಕೋಟಿ ರೂ. ಮಾತ್ರವೇ ಇದೆ. ಖಾಸಗಿ ಕಾರುಗಳ ವಹಿವಾಟು 53% ಇದ್ದರೂ, ಟೋಲ್‌ ಸಂಗ್ರಹದಲ್ಲಿ ಶೇ.21 ರಷ್ಟಿದೆ ಎಂದು ಡೇಟಾ ತೋರಿಸಿದೆ. ಹೀಗಾಗಿ ಹೊಸ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.

  • 9 ಸಾವಿರ ಸಾರಿಗೆ ಸಿಬ್ಬಂದಿ ನೇಮಕ: ರಾಮಲಿಂಗಾರೆಡ್ಡಿ

    9 ಸಾವಿರ ಸಾರಿಗೆ ಸಿಬ್ಬಂದಿ ನೇಮಕ: ರಾಮಲಿಂಗಾರೆಡ್ಡಿ

    ಬೆಳಗಾವಿ: ನಾನು ಸಾರಿಗೆ ಮಂತ್ರಿ ಇದ್ದಾಗ ಕೊನೆಯಾಗಿ ನೇಮಕಾತಿಯಾತ್ತು. ಕಳೆದ ಏಳು ವರ್ಷಗಳಿಂದ 13,888 ಸಿಬ್ಬಂದಿ ನಿವೃತ್ತಿ ಹೊಂದಿದ್ದಾರೆ. ಈಗ 9 ಸಾವಿರ ಸಾರಿಗೆ ಸಿಬ್ಬಂದಿ ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದರು.

    ತಾಲೂಕಿನ ಸುವರ್ಣ ಗಾರ್ಡನ್ ಬಳಿಯ ಟೆಂಟ್‌ನಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಸಚಿವರು ಮಾತನಾಡಿದರು.

    ಶಕ್ತಿ ಯೋಜನೆ (Shakti scheme) ಜಾರಿಯಾದ ಮೇಲೆ ಮೇಲೆ ಜನರು ಜಾಸ್ತಿ ಓಡಾಡುತ್ತಿದ್ದಾರೆ. ಮೊದಲು 85 ಲಕ್ಷ ಜನರು ಓಡಾಡುತ್ತಿದ್ದರು. ಈಗ 1 ಕೋಟಿ ಜನರು ಓಡಾಟ ಮಾಡುತ್ತಿದ್ದಾರೆ. ಶಾಲೆಗೆ ಹೋಗುವಾಗ, ಬರುವಾಗ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಹಿಳೆಯರ ಓಡಾಟ ಕೂಡ ಹೆಚ್ಚಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಬಸ್ (Bus) ಖರೀದಿ ಮಾಡಿಲ್ಲ. ಹೊಸ ಬಸ್ ತಗೊಂಡು ಹಳೆಯ ಬಸ್ಸುಗಳನ್ನು ಸ್ಕ್ರ್ಯಾಪ್‌ ಮಾಡಬೇಕು. ಹೀಗೆ ಆಗಿದ್ದರೆ ಏನು ಸಮಸ್ಯೆ ಆಗುತ್ತಿರಲಿಲ್ಲ ಎಂದರು. ಇದನ್ನೂ ಓದಿ: ಹಿಂದೂ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ – ಠಾಣೆ ಎದುರೇ ಹಾರ ಬದಲಿಸಿದ ಜೋಡಿ

     

    ಬೆಳಗಾವಿ ಸಾರಿಗೆ ವಿಭಾಗಕ್ಕೆ ಬಿಎಂಟಿಸಿ (BMTC) ಹಳೆ ಬಸ್ ಬಿಟ್ಟಿರುವುದಕ್ಕೆ ಇಲ್ಲಿ ಬಸ್ ಇಲ್ಲ ಎಂಬ ಕಾರಣಕ್ಕೆ ತೆಗೆದುಕೊಂಡಿದ್ದಾರೆ. ಮತ್ತೆ ಆ ಬಸ್ಸುಗಳನ್ನು ವಾಪಸ್‌ ಕಳುಹಿಸಿದ್ದಾರೆ. ಸತತವಾಗಿ ನಾಲ್ಕು ವರ್ಷ ಬಸ್ ಖರೀದಿ ಮಾಡಿಲ್ಲ, ಏಳು ವರ್ಷಗಳಿಂದ ನೇಮಕಾತಿ ಮಾಡಿಲ್ಲ, ಹೀಗಾಗಿ ಸಮಸ್ಯೆ ಆಗುತ್ತಿದೆ. ಹಾಗಾಗಿ 5500 ಹೊಸ ಬಸ್ ಖರೀದಿ ಮಾಡುತ್ತಿದ್ದು, 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದರು.

    2013ರಿಂದ 2017ರವರೆಗೆ ನಾನು ಸಾರಿಗೆ ಸಚಿವ ಇದ್ದಾಗ ಈ ಭಾಗಕ್ಕೆ ಹೆಚ್ಚು ಬಸ್ ನಿಲ್ದಾಣ ಕೊಟ್ಟಿದ್ದೇನೆ. ಬೆಳಗಾವಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಅತಿಹೆಚ್ಚು ಬಸ್ ನಿಲ್ದಾಣ ನೀಡಿದ್ದೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಎರಡು ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ಹಾಕಲು ಸೂಚನೆ ನೀಡಿದ್ದೇನೆ. ಬೆಳಗಾವಿ ನಗರಕ್ಕೆ 100 ಹೊಸ ಬಸ್ ಖರೀದಿ ಮಾಡುತ್ತೇನೆ. ಮೂರು ತಿಂಗಳಲ್ಲಿ ಅವಧಿಯಲ್ಲಿ ಈ ಹೊಸ ಬಸ್ ಗಳು ಬರುತ್ತವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಇದನ್ನೂ ಓದಿ: ಪ್ರೇಮಿಗಾಗಿ ಪಾಕ್‌ ತೊರೆದು ಭಾರತಕ್ಕೆ ಬಂದ ಚೆಲುವೆ

     

    ಉತ್ತರ ಕರ್ನಾಟಕ ಮತ್ತು ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿದ್ದೇನೆ. ಬಿಸಿ ಊಟ ತಯಾರಿಸುವವರಿಗೆ ಗೌರವಧನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಿಳ್ಳೇಕ್ಯಾತ ಸಮಾಜದ ಬೇಡಿಕೆ, ಮಹಿಳೆಯರಿಗೆ ಅನಧಿಕೃತ ಗರ್ಭಕೋಶ ಆಪರೇಷನ್ ಹೀಗೆ ಅನೇಕ ಸಮಸ್ಯೆಗಳಿವೆ. ಪ್ರತಿಭಟನಾಕಾರರು ಕೊಟ್ಟಿರುವ ಮನವಿಗಳನ್ನು ಸಿಎಂಗೆ ಕೊಡುತ್ತೇನೆ. ಸರ್ಕಾರ ಕೂಡ ಅವರಿಗೆ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು.

    ಉತ್ತರ ಕರ್ನಾಟಕ ಬಗ್ಗೆ ತಾರತಮ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಾರತಮ್ಯ ಅಷ್ಟೇನೂ ಇಲ್ಲ. ಕೆಲವೊಂದು ಲೋಪದೋಷಗಳು ಇರಬಹುದು. ಆದರೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸಾಕಷ್ಟು ಅಭಿವೃದ್ಧಿಯಾಗಿವೆ. ಸಾಕಷ್ಟು ನೀರಾವರಿ ಯೋಜನೆ, ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಒತ್ತು ನೀಡಲಾಗಿದೆ ಎಂದು ಹೇಳಿಕೆ ನೀಡಿದರು.

    ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಸೌಧಕ್ಕೆ ಕಚೇರಿಗಳನ್ನ ಶಿಫ್ಟ್ ಮಾಡಿದರೆ ಜನರು ಬರುತ್ತಾರೆ ಹೋಗ್ತಾರೆ. ರಾಜ್ಯಮಟ್ಟದ ಕಚೇರಿ ಸ್ಥಳಾಂತರ ಮಾಡಬೇಕು ಎಂದು ಅವರು ಹೇಳಿದರು.

  • ಆಯುಧ ಪೂಜೆ – ಸರ್ಕಾರಿ ಬಸ್‌ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಡಿಮ್ಯಾಂಡ್

    ಆಯುಧ ಪೂಜೆ – ಸರ್ಕಾರಿ ಬಸ್‌ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಡಿಮ್ಯಾಂಡ್

    ಬೆಂಗಳೂರು: ನವರಾತ್ರಿ (Navratri) ಹಿನ್ನೆಲೆ ಸೋಮವಾರ ನಾಡಿನಾದ್ಯಂತ ಆಯುಧ ಪೂಜೆಗೆ (Ayudha Puja) ತಯಾರಿ ನಡೆಯುತ್ತಿದೆ. ಈ ಬಾರಿ ಸರ್ಕಾರಿ ಬಸ್‌ಗಳ (Bus) ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಬೇಡಿಕೆ ಇಡಲಾಗುತ್ತಿದೆ.

    ಪ್ರತಿ ವರ್ಷ ನಿಗಮಗಳು ಆಯುಧ ಪೂಜೆಗೆ ಜೀಪ್, ಕಾರುಗಳಿಗೆ 40 ರೂ. ಬಸ್‌ಗಳಿಗೆ ತಲಾ 100 ರೂ. ಬಿಡುಗಡೆ ಮಾಡುತ್ತಿತ್ತು. ಆದರೆ ಈ ಬಾರಿ ಪ್ರತಿ ಬಸ್‌ಗೆ 500 ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಬೆಲೆ ಏರಿಕೆ ಹಿನ್ನೆಲೆ ನೌಕರರು ಹೆಚ್ಚುವರಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದನ್ನೂ ಓದಿ: ಘೋಸ್ಟ್ ಪ್ರದರ್ಶನ : ಸಂತೋಷ್ ಚಿತ್ರಮಂದಿರದ ಕಚೇರಿ ಗ್ಲಾಸ್ ಪುಡಿಪುಡಿ

    ಈ ಬಾರಿ ಆಯುಧ ಪೂಜೆ ಸಂಭ್ರಮದಿಂದ ಆಚರಿಸಲು ಸಾರಿಗೆ ನಿಗಮದ ನೌಕರರು ತೀರ್ಮಾನ ಮಾಡಿದ್ದಾರೆ. ಒಂದು ಬಸ್‌ಗೆ ಸರಳವಾಗಿ ಪೂಜೆ ಮಾಡಲು ಬಾಳೆಕಂದು, ತೆಂಗಿನಕಾಯಿ, ಕರ್ಪೂರ, ಕುಂಕುಮ, ಬೂದು ಕುಂಬಳಕಾಯಿ, ವಿಭೂತಿ ಅಗತ್ಯ. ಆದರೆ ಪ್ರತಿ ಬಾರಿ ಬಿಎಂಟಿಸಿ (BMTC) ಹಾಗೂ ಕೆಎಸ್‌ಆರ್‌ಟಿಸಿ (KSRTC) ಜಿಪುಣತನ ತೋರಿದೆ. ಹೀಗಾಗಿ ಈ ಬಾರಿ ಆಯುಧ ಪೂಜೆ ಸಂಭ್ರಮಕ್ಕೆ ಹೆಚ್ಚುವರಿ ಹಣ ನೀಡುವಂತೆ ನೌಕರರು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಡಿಕೆಶಿ ಸ್ವಾಗತಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗದಿರುವುದು ಎಂಟನೇ ಅದ್ಭುತ: ಮುನಿರತ್ನ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ

    ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ

    ಬೆಂಗಳೂರು: ಶಕ್ತಿ ಯೋಜನೆ (Shakti Scheme) ಜಾರಿಯಾಗಿದ್ದರಿಂದ ಮಹಿಳೆಯರೇನೋ ಪುಲ್ ಖುಷ್ ಆಗಿದ್ದಾರೆ. ಆದರೆ ಖಾಸಗಿ ಸಾರಿಗೆ ಸಂಘಟನೆಗಳು ಹಾಗೂ ಸರ್ಕಾರದ ಜಟಾಪಟಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸೋಮವಾರ ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಮುಖ್ಯಮಂತ್ರಿಗಳು ಕರೆದ ಸಭೆಯನ್ನು ಕೆಲ ಖಾಸಗಿ ಸಾರಿಗೆ ಸಂಘಟನೆಗಳು ಬಹಿಷ್ಕರಿಸಿವೆ. ಜೊತೆಗೆ ಸರ್ಕಾರಕ್ಕೆ ಮತ್ತೊಮ್ಮೆ ಬೆಂಗಳೂರು ಬಂದ್ (Bengaluru Bandh) ಅಥವಾ ಕರ್ನಾಟಕ ಬಂದ್ (Karnataka Bandh) ಮಾಡುವ ಎಚ್ಚರಿಕೆ ನೀಡಿವೆ.

    ಶಕ್ತಿ ಯೋಜನೆ ಜಾರಿ ಆದ ನಂತರ ಖಾಸಗಿ ಸಾರಿಗೆ ಉದ್ಯಮಕ್ಕೆ ಎದುರಾದ ಸಂಕಷ್ಟಗಳ ಕುರಿತಂತೆ ಆಗಾಗ್ಗೆ ಆಕ್ರೋಶ ವ್ಯಕ್ತವಾಗುತ್ತಿತ್ತು. ಇದರ ಗಂಭೀರತೆ ಅರಿತ ಸಚಿವ ರಾಮಲಿಂಗಾರೆಡ್ಡಿ ಹಲವು ಸುತ್ತಿನ ಮಾತುಕತೆ ಸಹ ನಡೆಸಿದ್ದರು. ಆದರೆ ಯಾವುದಕ್ಕೂ ತಾರ್ಕಿಕ ಅಂತ್ಯ ಸಿಗದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ನೇತತ್ವದಲ್ಲಿ ನಡೆದ ಸಭೆಯಲ್ಲಿ ಖಾಸಗಿ ಸಾರಿಗೆ ಒಕ್ಕೂಟದ ಸದಸ್ಯರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

    ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗಿ ಆಗಿದ್ದರು. ಆದರೆ ಈ ಸಭೆಗೆ ಬಂದ್‌ಗೆ ಕರೆಕೊಟ್ಟಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಅಧ್ಯಕ್ಷ ಹಾಗೂ ಖಾಸಗಿ ಬಸ್ ಸಂಘಟನೆಯ ಅಧ್ಯಕ್ಷ ನಟರಾಜಶರ್ಮಾ, ಪೀಸ್ ಆಟೋ ಅಸೋಸಿಯೇಷನ್‌ನ ರಾಘು, ರಾಧಾಕೃಷ್ಣ ಹೊಳ್ಳ ಸಂಘಟನೆಯವರು ಸಿಎಂ ಸಭೆಯನ್ನು ಬಹಿಷ್ಕರಿಸಿದರು.

    ಈ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ, ಸಾರಿಗೆ ಸಚಿವರ ಆಶ್ವಾಸನೆ ಮೇರೆಗೆ ಬಂದ್ ವಾಪಾಸ್ ಪಡೆದಿದ್ದೆವು. ಆದರೆ ಹೋರಾಟಕ್ಕೆ ಬೆಂಬಲ ಸೂಚಿಸದ ಸಂಘಟನೆಗಳನ್ನು ಸಭೆಗೆ ಕರೆಯಲಾಗಿದೆ. ಸಾರಿಗೆ ಅಡಿಷನಲ್ ಕಮೀಷನರ್, ಹೇಮಂತ್ ಕುಮಾರ್ ಸಂಘಗಳನ್ನು ಒಡೆಯೋ ಕೆಲಸ ಮಾಡುತ್ತಾರೆ. ಹೇಮಂತ್ ಕುಮಾರ್ ವರ್ಗಾವಣೆಗೆ ಕಮಿಷನರ್‌ಗೆ ಮನವಿ ಮಾಡಿದ್ದೇವೆ. ಸಿಎಂ ಸಭೆಗೆ 32 ಸಂಘಟನೆಗಳು ಬಹಿಷ್ಕರಿಸಿದ್ದೇವೆ. ಸಿಎಂ ಸಭೆಯನ್ನು ತುಚ್ಚವಾಗಿ ನೋಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನೂ 10 ದಿನ ಕಾಲಾವಕಾಶವಿದ್ದು ಅಷ್ಟರೊಳಗೆ ಮತ್ತೆ ಎಲ್ಲಾ ಸಂಘಟನೆಗಳು ಸೇರಿ ಸಭೆ ಕರೆಯಬೇಕು. ಇಲ್ಲದಿದ್ದರೆ ಹೋರಾಟದ ದಾರಿ ಹಿಡಿಯುತ್ತೇವೆ. ಸೆಪ್ಟೆಂಬರ್ 1 ರಂದು ಬೆಂಗಳೂರು ಅಥವಾ ಕರ್ನಾಟಕ ಬಂದ್ ದಿನಾಂಕ ಪ್ರಕಟಿಸುತ್ತೇವೆ ಎಂದರು.

    ಸೋಮವಾರದ ಸಿಎಂ ಸಭೆಯಲ್ಲಿ ಭಾಗವಹಿಸಿದ ಆದರ್ಶ್ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಸಭೆಯಲ್ಲಿ ಭಾಗಿಯಾದ ಮಂಜುನಾಥ್ ಮಾತನಾಡಿ, ಆಟೋ ಅಸೋಸಿಯೇಷನ್‌ನ ಬೇಡಿಕೆಗೆ ಮನವಿ ಮಾಡಿದ್ದೇವೆ. 30 ರವರೆಗೆ ಗಡವು ನೀಡಲಾಗಿದೆ. ಬೇಡಿಕೆ ಈಡೇರದೇ ಇದ್ದರೆ ಮತ್ತೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇನ್ಮುಂದೆ ಲಗೇಜ್‌ಗಳನ್ನು ಸಾಗಿಸಲು ರಸ್ತೆಗಿಳಿಯಲಿದೆ KSRTC ಲಾರಿ

    ಒಟ್ಟಿನಲ್ಲಿ ಸಿಎಂ ಆಶ್ವಾಸನೆಗೆ ಕೆಲ ಒಕ್ಕೂಟಗಳು ಸಮ್ಮತ ವ್ಯಕ್ತಪಡಿಸಿದರೆ ಇನ್ನೂ ಕೆಲವು ಸಂಘಟನೆಗಳು ವಿರೋಧಿಸಿವೆ. ಯಾವಾಗ ಈ ಭರವಸೆಗಳು ಕಾರ್ಯರೂಪಕ್ಕೆ ಬರುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ. ಇಲ್ಲದಿದ್ದರೆ ಸಾರಿಗೆ ಒಕ್ಕೂಟಗಳು ಮತ್ತೆ ಹೋರಾಟದ ಹಾದಿ ತುಳಿಯುವುದು ಪಕ್ಕ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಓಡಾಡುವವರೇ ಎಚ್ಚರ – ಇಂದು ಕಾವೇರಿಗಾಗಿ ರೈತರಿಂದ ಬೃಹತ್ ಪ್ರತಿಭಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾರಿಗೆ ನೌಕರರ ವೇತನ ಕುರಿತು ಬಿಜೆಪಿ ಟ್ವೀಟ್- ಸಚಿವರು ಕಿಡಿ

    ಸಾರಿಗೆ ನೌಕರರ ವೇತನ ಕುರಿತು ಬಿಜೆಪಿ ಟ್ವೀಟ್- ಸಚಿವರು ಕಿಡಿ

    ಬೆಂಗಳೂರು: ಸಾರಿಗೆ ನೌಕರರಿಗೆ ಸಂಬಳ ಆಗಿದ್ರೂ, ಬಿಜೆಪಿಯಿಂದ (BJP) ವೇತನ ಆಗಿಲ್ಲ ಎಂದು ಟ್ವೀಟ್ ಮಾಡಲಾಗಿದೆ. ಬಿಜೆಪಿಯ ಈ ಟ್ವೀಟ್‍ಗೆ ಕೆಂಡಾಮಂಡಲರಾಗಿರೋ ಸಾರಿಗೆ ಸಚಿವರು, ಬಿಜೆಪಿಗೆ ಮಾನ, ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದಾರೆ.

    ಸಾರಿಗೆ ನೌಕರರಿಗೆ ವೇತನ ವಿಳಂಬ ಮಾಡಲಾಗ್ತಿದೆ ಎಂದು ಬಿಜೆಪಿ ಸಾರಿಗೆ ಇಲಾಖೆಯನ್ನ ಟಾರ್ಗೆಟ್ ಮಾಡಿ ಟ್ವೀಟ್ ಮಾಡಿದೆ. ಕಳೆದ ಎರಡು ವಾರಗಳಿಂದ ನಡೆಯುತ್ತಿರೋ ಈ ಟ್ವೀಟ್ ವಾರ್ ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಪ್ರತಿಕ್ರಿಯಿಸಿದ್ದು, ಬಿಜೆಪಿಗೆ ಮಾನ ಇಲ್ಲ, ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ರಾತ್ರಿ ವೇಳೆ ವಾಹನ ನಿಲ್ಲಿಸಿದ್ರೆ ಬರ್ತಾರೆ ದರೋಡೆಕೋರರು

    ಕಳೆದ ಹತ್ತು ದಿನಗಳ ಹಿಂದೆ ಸಾರಿಗೆ ನೌಕರರಿಗೆ ಅರ್ಧ ಸಂಬಳ ನೀಡಲಾಗಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಮಲಿಂಗಾರೆಡ್ಡಿ, ಸಂಬಳ ವಿಳಂಬ ಮಾಡಿಲ್ಲ ಎಂದು ಗುಡುಗಿದ್ರು. ಮತ್ತೆ ಇಂದು ಬಿಜೆಪಿ ಅಧಿಕೃತ ಪೇಜ್ ನಿಂದ ಟ್ವೀಟ್ (Tweet) ಮಾಡಿರೋದಕ್ಕೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವರು, ಬಿಜೆಪಿಗೆ ಶಕ್ತಿ ಯೋಜನೆಯಿಂದ ಲಕ್ಷಗಟ್ಟಲೇ ಮಹಿಳೆಯರು ಓಡಾಡೋದು ಸಹಿಸಿಕೊಳ್ಳೋಕೆ ಆಗ್ತಿಲ್ಲ. ಅದಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ. ಕೆಎಸ್‍ಆರ್ ಟಿಸಿ ನೌಕರರಿಗೆ ಒಂದನೇ ತಾರೀಖಿಗೆ ಸಂಬಳ ಆಗುತ್ತೆ. ಆಗಸ್ಟ್ 7ರಂದು ಬಿಎಂಟಿಸಿ ನೌಕರರಿಗೆ ಸಂಬಳ ಆಗುತ್ತೆ. ಈಗಾಗಲೇ ಸಂಬಳ ನೀಡಲಾಗಿದೆ. ಆದರೂ ಬಿಜೆಪಿ ಜನರಿಗೆ ತಪ್ಪು ಸಂದೇಶ ನೀಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಸಾರಿಗೆ ನೌಕರರನ್ನೇ ಟಾರ್ಗೆಟ್ ಮಾಡಿ ಬಿಜೆಪಿ ಸರಣಿ ಟ್ವೀಟ್ ದಾಳಿ ಮಾಡ್ತಿದೆ. ಸಂಬಳ ಕೊಟ್ಟರು ಜನರಿಗೆ ತಪ್ಪು ಸಂದೇಶ ಕೊಡುವ ಬಿಜೆಪಿದು ಕೆಟ್ಟಬುದ್ದಿ ಅಂತ ಸಾರಿಗೆ ಸಚಿವರು ಫುಲ್ ಗರಂ ಆಗಿದ್ದಾರೆ. ಅದೇನೆ ಆಗ್ಲಿ ಈ ಟ್ವೀಟ್ ವಾರ್ ಎಲ್ಲಿ ತಲುಪುತ್ತೋ ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಡಚಾದ್ರಿ ಸೇರಿದಂತೆ ದೇಶದ 18 ಕಡೆ ರೋಪ್‌ವೇ ನಿರ್ಮಿಸಲು ಕೇಂದ್ರ ಯೋಜನೆ

    ಕೊಡಚಾದ್ರಿ ಸೇರಿದಂತೆ ದೇಶದ 18 ಕಡೆ ರೋಪ್‌ವೇ ನಿರ್ಮಿಸಲು ಕೇಂದ್ರ ಯೋಜನೆ

    ನವದೆಹಲಿ: ಉಡುಪಿಯ (Udupi) ಕೊಡಚಾದ್ರಿ ಬೆಟ್ಟ (Kodachadri Hill) ಸೇರಿದಂತೆ ದೇಶಾದ್ಯಂತ ಸುಮಾರು 18 ಕಡೆಗಳಲ್ಲಿ ರೋಪ್‌ವೇ (Ropeway) ಯೋಜನೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

    ಕರ್ನಾಟಕದ ಕೊಡಚಾದ್ರಿ ಬೆಟ್ಟಕ್ಕೆ ಸುಮಾರು 7 ಕಿ.ಮೀ ಉದ್ದದ ರೋಪ್‌ವೇಯನ್ನು ನಿರ್ಮಿಸಲು ಕೇಂದ್ರ ಯೋಜಿಸಿದೆ. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅರುಣಾಚಲ ಪ್ರದೇಶ, ಮಣಿಪುರ, ತಮಿಳುನಾಡು, ಆಂಧ್ರಪ್ರದೇಶ, ತಮಿಳುನಾಡು, ಲೇಹ್, ಸೇರಿದಂತೆ ಒಟ್ಟು 18 ಕಡೆಗಳಲ್ಲಿ ರೋಪ್‌ವೇ ನಿರ್ಮಾಣದ ಯೋಜನೆ ಒಳಗೊಂಡಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಟ್ಟದ ಮೇಲಿರುವ ಪ್ರಾಚೀನ ಶಂಕರಾಚಾರ್ಯ ದೇವಾಲಯಕ್ಕೆ 1 ಕಿ.ಮೀ ಉದ್ದದ ರೋಪ್‌ವೇ, ಜಮ್ಮು ಪ್ರದೇಶದ ಮಾತಾ ವೈಷ್ಣೋ ದೇವಿ ದೇವಸ್ಥಾನದ ಬಳಿ ಶಿವಖೋರಿ ದೇವಸ್ಥಾನದವರೆಗೆ 2 ಕಿ.ಮೀ, ಪುಣೆಯ ರಾಜ್‌ಗಡ್ ಕೋಟೆಗೆ 1.4 ಕಿ.ಮೀ, ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನಕ್ಕೆ 2.3 ಕಿ.ಮೀ, ತೆಲಂಗಾಣದ ಈಗಳಪೆಂಟಾದಿಂದ ಕೃಷ್ಣಾ ನದಿಗೆ ಅಡ್ಡಲಾಗಿ, ಉತ್ತರ ಪ್ರದೇಶದ ಗಾಜಿಯಾಬಾದ್‌ನ ವೈಶಾಲಿ ಮೆಟ್ರೋ ನಿಲ್ದಾಣದಿಂದ ಮೋಹನ್ ನಗರ ಮೆಟ್ರೋ ನಿಲ್ದಾಣದವರೆಗೆ 10 ಕಿ.ಮೀ ಉದ್ದದ ರೋಪ್‌ವೇ ನಿರ್ಮಾಣದ ಬಗ್ಗೆಯೂ ಕೇಂದ್ರ ಮುಂದಾಗಿದೆ. ಇದನ್ನೂ ಓದಿ: ರಿಲಯನ್ಸ್ ಆಸ್ಪತ್ರೆಯನ್ನು ಸ್ಫೋಟಿಸುತ್ತೇನೆ- ಮುಖೇಶ್ ಅಂಬಾನಿ, ಕುಟುಂಬಸ್ಥರಿಗೆ ಜೀವ ಬೆದರಿಕೆ

    ರೋಪ್‌ವೇ ಯೋಜನೆ ಯಾಕೆ?
    ರೋಪ್‌ವೇ ಯೋಜನೆ ಕೇಬಲ್ ಕಾರ್‌ಗಳ (Cable Car) ಮೂಲಕ ಗಂಟೆಗೆ ಸುಮಾರು 6,000-8,000 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದು ಗುಡ್ಡಗಾಡು ಪ್ರದೇಶದಲ್ಲಿಯೂ ನೇರ ರೇಖೆಯಲ್ಲಿ ನಿರ್ಮಿಸಬಹುದಾಗಿದೆ. ಇವು ಗಂಟೆಗೆ 15-30 ಕಿ.ಮೀ ವೇಗದಲ್ಲಿ ಸಾಗಬಲ್ಲುದಾಗಿದ್ದು, ಮೂಲ ಹಾಗೂ ಗಮ್ಯಸ್ಥಾನವನ್ನು ಸಂಪರ್ಕಿಸುವ ದೂರ ರಸ್ತೆ ಮಾರ್ಗಗಳಿಗಿಂತ ಕಡಿಮೆಯಾಗುತ್ತದೆ. ರೋಪ್‌ವೇಗಳು ಪ್ರವಾಸೋದ್ಯಮಕ್ಕೆ, ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಕ್ಕೆ ಉತ್ತಮವಾಗಿರುವುದು ಮಾತ್ರವಲ್ಲದೇ ಆಕರ್ಷಕ ಸಾರಿಗೆ ವಿಧಾನವೂ ಆಗಿದೆ. ಇದನ್ನೂ ಓದಿ: ಸೇನೆಯ ಚೀತಾ ಹೆಲಿಕಾಪ್ಟರ್ ಪತನ- ಪೈಲಟ್ ಹುತಾತ್ಮ

    Live Tv
    [brid partner=56869869 player=32851 video=960834 autoplay=true]

  • 8 ಆಸನದ ವಾಹನಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯಕ್ಕೆ ನಿತಿನ್ ಗಡ್ಕರಿ ಪ್ಲಾನ್

    8 ಆಸನದ ವಾಹನಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯಕ್ಕೆ ನಿತಿನ್ ಗಡ್ಕರಿ ಪ್ಲಾನ್

    ನವದೆಹಲಿ: ರಸ್ತೆಗಳಲ್ಲಿನ ಮಾರಣಾಂತಿಕ ಅಪಘಾತಗಳನ್ನು ತಪ್ಪಿಸಲು ಸರ್ಕಾರ ತನ್ನ ಕೈಯಿಂದಾದಷ್ಟು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ನಿನ್ನೆಯಷ್ಟೇ ಕಾರಿನಲ್ಲಿ ಹಿಂಬದಿ ಪ್ರಯಾಣಿಕರಿಗೆ ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಿದ್ದು, ಇದೀಗ ಸರ್ಕಾರ 8 ಆಸನಗಳ ವಾಹನಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲು ಯೋಜಿಸಿದೆ.

    ಅಕ್ಟೋಬರ್‌ನಿಂದ ಕಾರು ತಯಾರಕರು 8 ಆಸನಗಳ ವಾಹನಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂಬದಿ ಸವಾರರಿಗೂ ಸೀಟ್‌ಬೆಲ್ಟ್ ಕಡ್ಡಾಯ, ತಪ್ಪಿದರೆ ದಂಡ

    ಈ ಬಗ್ಗೆ ಜನವರಿ 14 ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರ ಪ್ರಕಾರ ಈ ವರ್ಷದ ಅಕ್ಟೋಬರ್ 1 ರ ಬಳಿಕ ತಯಾರಿಸಲಾಗುವ ಎಂ1 ವರ್ಗದ ವಾಹನಗಳಿಗೆ 2 ಬದಿಯ ಏರ್‌ಬ್ಯಾಗ್‌ಗಳನ್ನು ಅಳವಡಿಸಬೇಕು. ಮುಂಭಾಗದ ಔಟ್‌ಬೋರ್ಡ್ ಆಸನದಲ್ಲಿ ಕುಳಿತುಕೊಳ್ಳುವವರಿಗಾಗಿ ಸುತ್ತಲೂ ಏರ್‌ಬ್ಯಾಗ್‌ಗಳನ್ನು ಅಳವಡಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧ ವಿಸ್ತರಣೆ

    ಈ ವರ್ಷದ ಅಕ್ಟೋಬರ್‌ನಿಂದ 8 ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಸರ್ಕಾರವು ಕಡ್ಡಾಯಗೊಳಿಸುತ್ತದೆಯೇ ಎಂದು ಮಾಧ್ಯಮದವರು ಕೇಳಿದಾಗ, ಗಡ್ಕರಿ ಅವರು ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿತಿನ್ ಗಡ್ಕರಿಯನ್ನು ಹಾಡಿ ಹೊಗಳಿದ ಮಲ್ಲಿಕಾರ್ಜುನ ಖರ್ಗೆ

    ನಿತಿನ್ ಗಡ್ಕರಿಯನ್ನು ಹಾಡಿ ಹೊಗಳಿದ ಮಲ್ಲಿಕಾರ್ಜುನ ಖರ್ಗೆ

    ಧಾರವಾಡ: ನಾನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳಷ್ಟು ಸಂತೋಷವಾಗಿ ಬಂದಿದ್ದೇನೆ. ಅವರಿಂದ ನಾನು ಯಾವುದೇ ರಾಜಕೀಯವಾಗಿ ಲಾಭವನ್ನು ನಿರೀಕ್ಷೆ ಮಾಡುತ್ತಿಲ್ಲ. ನಿತಿನ್ ಗಡ್ಕರಿ ಅಭಿವೃದ್ಧಿ ಪರ ಇರುವ ವ್ಯಕ್ತಿ ಎಂದು ಅವರನ್ನು ರಾಜ್ಯ ಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಡಿ ಹೊಗಳಿದ್ದಾರೆ.

    ಹೊಸ ರಸ್ತೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತಿನ್ ಗಡ್ಕರಿ ಕರ್ನಾಟಕದಿಂದ ಯಾವುದೇ ಮನವಿಯನ್ನು ನೀಡಿದರು ಶೀಘ್ರವಾಗಿ ಜಾರಿ ಮಾಡತ್ತಾರೆ. ಅವರ ಕಾರ್ಯ ವೈಖರಿ ಮೆಚ್ಚಿ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಅವರು ಯಾವಾಗಲೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಆದರೆ ಬೇರೆಯವರು ಬರೀ ರಾಜಕೀಯ ಮಾಡುತ್ತಾರೆ ಎಂದರು. ಇದನ್ನೂ ಓದಿ: ಅಮೆರಿಕ ಮಾದರಿ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ: ನಿತಿನ್ ಗಡ್ಕರಿ ಭರವಸೆ

    ಅನೇಕ ಮಂತ್ರಿಗಳು ಅವರ ಕ್ಷೇತ್ರಕ್ಕೆ ತೆರಳಿದರು ಗೌರವ ಸೀಗುತ್ತಿಲ್ಲ. ಗಡ್ಕರಿ ಅವರು ಬಹಳಷ್ಟು ಯೋಜನೆ ಹಾಕಿಕೊಂಡು ಕೆಲಸ ಮಾಡುತ್ತಿದ್ದರು ಆದರೆ ಇತ್ತಿಚೆಗೆ ಅವರ ಯೋಜನೆಯಲ್ಲಿ ಯಾಕೋ ತಡವಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್

    ನಿತಿನ್ ಗಡ್ಕರಿ ಅವರಿಗೆ ಹಣ ಎಲ್ಲಿಂದ ಬರುತ್ತೆ ಹೇಗೆ ಬರುತ್ತೆ ಅದನ್ನು ಹೇಗೆ ಉಪಯೋಗ ಮಾಡಬೇಕು ಅಂತ ಬಹಳಷ್ಟು ಚೆನ್ನಾಗಿ ಗೊತ್ತು. ಅವರಿಗೆ ನಾನು ದೆಹಲಿಯಲ್ಲಿದ್ದಾಗ ಕೆಲವು ಪ್ರಸ್ತಾವನೆಗಳನ್ನಿಟ್ಟಿದೆ. ಅವರು ನಮ್ಮ ಪಕ್ಷ ಕಚೇರಿಗೆ ಬಂದು ನನ್ನ ಪತ್ರಗಳು ತೆಗೆದುಕೊಂಡು ಹೋಗಿ ಎಲ್ಲಾ ಬೇಡಿಕೆಗೆ ಸ್ಪಂದನೆ ಮಾಡಿದರು. ಇದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುವ ನಿಟ್ಟಿನಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದರು.

  • 10 ವರ್ಷಗಳಿಂದ ಸ್ಥಗಿತಗೊಂಡಿದ್ದ ವಾಡಿಗೆ ಬಸ್ ಸಂಚಾರ – ಗ್ರಾಮಸ್ಥರ ಹರ್ಷ

    10 ವರ್ಷಗಳಿಂದ ಸ್ಥಗಿತಗೊಂಡಿದ್ದ ವಾಡಿಗೆ ಬಸ್ ಸಂಚಾರ – ಗ್ರಾಮಸ್ಥರ ಹರ್ಷ

    ಬೆಂಗಳೂರು: 10 ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದ ವಾಡಿಗೆ ಇದೀಗ ಬಸ್ ಸಂಚಾರ ಆರಂಭವಾಗಿದೆ. ಇದನ್ನೂ ಓದಿ: 80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ

    ಹುಮನಾಬಾದ ಮತಕ್ಷೇತ್ರದ ನಮದಾಪೂರು ವಾಡಿ ಗ್ರಾಮಕ್ಕೆ ಸುಮಾರು 10 ವರ್ಷಗಳಿಂದ ಯಾವುದೇ ಬಸ್ ಸಂಚಾರ ಇಲ್ಲದೇ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಕೂಡಲೇ ಈ ಗ್ರಾಮಕ್ಕೆ ಬಸ್ ಸಂಚಾರವಾಗುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ – ಹೊಟ್ಟೆ ಕಿಚ್ಚಾಯ್ತಾ ಅಂತ ಪ್ರಶ್ನಿಸಿದ್ಯಾರಿಗೆ?

    ಈ ಗ್ರಾಮಕ್ಕೆ ಬಸ್ ಸಂಚಾರ ಇಲ್ಲದೇ ಸಾರ್ವಜನಿಕರಿಗೆ, ಅದರಲ್ಲೂ ವಿದ್ಯಾರ್ಥಿಗಳಿಗೆ, ಆರೋಗ್ಯ ತಪಾಸಣೆಗೆ ಹೋಗುವವರಿಗೆ, ಮಹಿಳೆಯರಿಗೆ ತುಂಬ ತೊಂದರೆಯಾಗುತ್ತಿದೆ ಎನ್ನುವ ವಿಷಯವನ್ನು ಕಾರ್ಯಕರ್ತರೊರ್ವರಿಂದ ತಿಳಿದು ಮನ ಕಲಕಿತು. ಕೂಡಲೇ ಈ ಗ್ರಾಮಕ್ಕೆ ಬಸ್ ಸಂಚರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾವು ಸೂಚಿಸಿದ ಹಿನ್ನೆಲೆಯಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮಸ್ಥರು ಬಸ್ ಅನ್ನು ಶೃಂಗರಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

  • ಅಕ್ರಮವಾಗಿ ಹಸುಗಳ ಸಾಗಣೆ- 5 ಸಾವು, 15 ಗೋವುಗಳ ರಕ್ಷಣೆ

    ಅಕ್ರಮವಾಗಿ ಹಸುಗಳ ಸಾಗಣೆ- 5 ಸಾವು, 15 ಗೋವುಗಳ ರಕ್ಷಣೆ

    – ಉಸಿರುಗಟ್ಟಿ ಲಾರಿಯಲ್ಲೇ 5 ಹಸು ಸಾವು

    ಕೋಲಾರ: ಕಳೆದ ರಾತ್ರಿ ಅಕ್ರಮವಾಗಿ ಗೋವುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಲಾರಿಯಲ್ಲಿದ್ದ 20ಕ್ಕೂ ಹೆಚ್ಚು ಹಸುಗಳಲ್ಲಿ 5 ಗೋವುಗಳು ಸಾವನ್ನಪ್ಪಿವೆ.

    ಕೋಲಾರ ತಾಲೂಕಿನ ಚಾಕರಸನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ಎರಡು ಲಾರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಚಾಕಾರಸನಹಳ್ಳಿ ಮಾರ್ಗವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಕೋಲಾರ ತಾಲೂಕಿನ ವಕ್ಕಲೇರಿ ವೆಂಕಟೇಶ್ ಗೌಡ ಎಂಬುವರ ಫಾರ್ಮ್ ಹೌಸ್ ಗೆ ಕರೆತರಲಾಗಿತ್ತು ಎನ್ನಲಾಗಿದೆ. ಹಸುಗಳಿಗೆ ಮೇವು ನೀಡದೆ ಕೊಲೆ ಮಾಡಿದ ಹಿನ್ನೆಲೆ ಮಾಲೀಕ ವೆಂಕಟೇಶ ಗೌಡ ಹಾಗೂ ಲಾರಿ ಚಾಲಕರಾದ ಇದಾಯಿತ್, ಕಂಸ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ತಂದೆ ತಾಲಿಬಾನ್ ವಿರೋಧಿಯಾಗಿದ್ದಕ್ಕೆ ಮಗುವನ್ನು ಗಲ್ಲಿಗೇರಿಸಿದ್ರು

    ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಲಾರಿಗಳನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಲಾರಿಗಳಲ್ಲಿ ಹಸುಗಳು ಇರುವುದು ಕಂಡುಬಂದಿದೆ. ಲಾರಿಗಳಲ್ಲಿದ್ದ 20ಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ, ಚಾಕಾರಸನಹಳ್ಳಿ ಮಾರ್ಗವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಕುರಿತು ತಿಳಿಯುತ್ತಿದ್ದಂದೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.  ಇದನ್ನೂ ಓದಿ:  ಕೋವಿಡ್ 19 ಬೂಸ್ಟರ್ ಡೋಸ್ ಪಡೆದ ಜೋ ಬೈಡನ್

    ಲಾರಿಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗೋವುಗಳಿದ್ದ ಹಿನ್ನೆಲೆ ಉಸಿರಾಡಲಾಗದೆ, ಕಳೆದೆರಡು ದಿನಗಳಿಂದ ಸರಿಯಾದ ಮೇವು ಇಲ್ಲದೆ ಸುಮಾರು ಐದು ಹಸುಗಳು ಲಾರಿಯಲ್ಲೇ ಸಾವನ್ನಪ್ಪಿವೆ. ಇದರಿಂದ ಲಾರಿಗಳಿಂದ ದುರ್ವಾಸನೆ ಬರುತ್ತಿದ್ದು, ಗೋವುಗಳ ಆಕ್ರಂದನ ಮುಗಿಲುಮುಟ್ಟಿದೆ. ಸದ್ಯ ಗ್ರಾಮಸ್ಥರ ಸಹಾಯದಿಂದ ವೇಮಗಲ್ ಪೊಲೀಸರು ಎರಡು ಲಾರಿಗಳನ್ನ ವಶಕ್ಕೆ ಪಡೆದು ಹಸುಗಳನ್ನು ರಕ್ಷಣೆ ಮಾಡಿದ್ದಾರೆ.