Tag: Transgenders

  • ಮಂಗಳಮುಖಿಯರಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

    ಮಂಗಳಮುಖಿಯರಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

    ದಾವಣಗೆರೆ: ಮಂಗಳಮುಖಿಯರೆಂದರೆ ಕೆಲವರು ಮೂಗು ಮುರಿಯುತ್ತಾರೆ. ಆದರೆ ಅದೇ ಮಂಗಳಮುಖಿಯರೀಗ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದು, ಉತ್ತರ ಕರ್ನಾಟದ ಪ್ರವಾಹಕ್ಕೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಿದ್ದಾರೆ.

    ಉತ್ತರ ಕರ್ನಾಟಕದಲ್ಲಿನ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನೆರೆ ಇಳಿದ ನಂತರವಂತೂ ಅವರ ಜೀವನ ಹೇಳ ತೀರದಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿ, ಮನೆ ಬಿದ್ದಿರುವುದು, ಮನೆಯಲ್ಲಿ ಕೆಸರು ತುಂಬಿಕೊಂಡಿರುವುದು ಸೇರಿದಂತೆ ವಾಸಿಸಲು ಸಾಧ್ಯವಾಗದ ಸ್ಥಿತಿ ತಲುಪಿವೆ. ಈಗಾಗಲೇ ಸಾರ್ವಜನಿಕರು ನೆರೆ ಸಂತ್ರಸ್ತರ ಸಹಾಯಕ್ಕೆ ಧಾವಿಸಿದ್ದು, ಸಾಕಷ್ಟು ಸಹಾಯವನ್ನು ಮಾಡಿದ್ದಾರೆ.

    ರಾಜ್ಯದ ವಿವಿಧ ಕಡೆಯಿಂದ ಸಂತ್ರಸ್ತರಿಗೆ ಸಹಾಯ ಹರಿದುಬರುತ್ತಿದೆ. ಈ ಬೆನ್ನಲ್ಲೇ ಇದೀಗ ಮಂಗಳಮುಖಿಯರು ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದು, ದಾವಣಗೆರೆಯಲ್ಲಿ ನೆರೆ ಸಂತ್ರಸ್ತರಿಗಾಗಿ ವಿಶೇಷವಾಗಿ ಮಂಗಳಮುಖಿಯರು ದೇಣಿಗೆ ಸಂಗ್ರಹಿಸುವ ಮೂಲಕ ತಮ್ಮ ಕೊಡುಗೆ ನೀಡಿ ನೆರವಾಗುತ್ತಿದ್ದಾರೆ.

    ದಾವಣಗೆರೆಯ ಮಹಾನಗರ ಪಾಲಿಕೆ ಮುಂಭಾಗ 20ಕ್ಕೂ ಹೆಚ್ಚು ಮಂಗಳಮುಖಿಯರು ದೇಣಿಗೆ ಡಬ್ಬಿಗಳನ್ನು ಹಿಡಿದು ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇಷ್ಟು ದಿನ ಕೇವಲ ಅವರ ಹೊಟ್ಟೆ ತುಂಬಿಸಿಕೊಳ್ಳಲು ಸರ್ಕಲ್‍ಗಳಲ್ಲಿ ನಿಂತು ಪ್ರಯಣಿಕರ ಬಳಿ ಹಣ ಕೇಳುತ್ತಿದ್ದ ಮಂಗಳಮುಖಿಯರು, ಉತ್ತರ ಕರ್ನಾಟಕ ಜನರ ಕಷ್ಟವನ್ನು ನೋಡಲಾಗದೇ ದೇಣಿಗೆ ಸಂಗ್ರಹಿಸಿ ಅವರಿಗೆ ನೆರವಾಗುತ್ತಿದ್ದಾರೆ.

    ಎರಡು ದಿನ ಉತ್ತರ ಕರ್ನಾಟಕದ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಲಿದ್ದು, ಸಂಗ್ರಹಿಸಿದ ಹಣದಲ್ಲಿ ನಿರಾಶ್ರಿತರಿಗೆ ಉಪಯುಕ್ತವಾಗುವ ವಸ್ತುಗಳನ್ನು ಖರೀದಿಸಿ ನಾವೇ ನೇರವಾಗಿ ಹೋಗಿ ಸಂತ್ರಸ್ತರಿಗೆ ವಿತರಿಸುತ್ತೇವೆ ಎಂದು ಮಂಗಳಮುಖಿಯರು ತಿಳಿಸಿದ್ದಾರೆ.

  • ಮಂಗಳಮುಖಿಯರು ಸೀರೆ ಧರಿಸೋ ಹಾಗಿಲ್ಲ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

    ಮಂಗಳಮುಖಿಯರು ಸೀರೆ ಧರಿಸೋ ಹಾಗಿಲ್ಲ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

    ಹೈದರಾಬಾದ್: ಮಂಗಳಮುಖಿಯರು ಸೀರೆಯನ್ನು ಧರಿಸಬಾರದು ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಮಂಗಳಮುಖಿಯರು ಪುರುಷನೂ ಅಲ್ಲ, ಮಹಿಳೆಯೂ ಅಲ್ಲ. ಆದರೆ ಅವರು ಸಹ ನಮ್ಮ ಹಾಗೆ ಮನಷ್ಯರು. ಹೀಗಾಗಿ ಅವರು ಸೀರೆ ಉಡುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.

    ಈ ಅಭಿಪ್ರಾಯಕ್ಕೆ ಮಾಧ್ಯಮಗಳು ಹಾಗಾದ್ರೆ ಅವರು ಯಾವ ರೀತಿಯ ಡ್ರೆಸ್ ಧರಿಸಬೇಕು ಎಂದು ಪ್ರಶ್ನಿಸಿದ್ದಕ್ಕೆ ಸಚಿವರು, ಅವರು ಎಲ್ಲರಂತೆ ಪ್ಯಾಂಟ್ ಶರ್ಟ್ ಧರಿಸಬಹುದು. ಪುರುಷರ ಹಾಗೆ ಡ್ರೆಸ್‍ಗಳನ್ನು ಹಾಕಿಕೊಳ್ಳಬಹುದು ಎಂದು ಉತ್ತರಿಸಿದರು.

    ದೇಶದಲ್ಲಿ ಸುಮಾರು 6 ಲಕ್ಷ ಜನ ಮಂಗಳಮುಖಿಯರಿದ್ದಾರೆ. ಕೇಂದ್ರ ಸರ್ಕಾರ ಮುಂದಿನ ಅಧಿವೇಶನದಲ್ಲಿ ತೃತೀಯ ಲಿಂಗಿಗಳ ಸಮುದಾಯಕ್ಕೆ ಸಂಬಂಧಪಟ್ಟಂತೆ ಹಕ್ಕು ಮತ್ತು ರಕ್ಷಣೆಗೆ ಸಂಬಂಧಿಸಿದ ಮಸೂದೆಯನ್ನು ಜಾರಿಗೆ ತರಲಿದೆ. ಅವರಿಗೆ ವಿಶೇಷ ಶಾಲೆಯನ್ನು ಪ್ರಾರಂಭಿಸಲಿದ್ದು, ಇದರಿಂದ ಅವರಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಬಹುದು ಎಂದು ಅವರು ಮಾಹಿತಿ ನೀಡಿದರು.

    ಈ ಹಿಂದೆ ರಾಮದಾಸ್ ಅಠಾವಳೆ ಯಾರಾದ್ರೂ ವಂದೇ ಮಾತರಂ ಹಾಡಿಲ್ಲ ಎಂದರೆ ಅದು ತಪ್ಪಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅಷ್ಟೇ ಅಲ್ಲದೇ ಭಾರತ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ಫಿಕ್ಸ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

    ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ನಾಯಕರಾಗಿರುವ ಇವರು ಮಹಾರಾಷ್ಟ್ರದಿಂದ 2014ರಲ್ಲಿ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. 1999ರಿಂದ 2009ರ ವರಗೆ ಪಂಢರಪುರದ ಸಂಸದರಾಗಿದ್ದರು.

     

  • ತೃತೀಯ ಲಿಂಗಿಗಳಿಂದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ!

    ತೃತೀಯ ಲಿಂಗಿಗಳಿಂದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಯುವಕನೊಬ್ಬನ ಮೇಲೆ ತೃತೀಯ ಲಿಂಗಿಗಳು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ನಗರದ ಹೆಬ್ಬಾಳದಲ್ಲಿ ನಡೆದಿದೆ.

    ಹೆಬ್ಬಾಳದ ಫ್ಲೈಓವರ್ ಬಳಿ ದೊಡ್ಡಬಳ್ಳಾಪುರ ಮೂಲದ ಕಿಶೋರ್ (ಹೆಸರು ಬದಲಾಯಿಸಿದೆ) ಅನ್ನೋ ಯುವಕ ರಾತ್ರಿ 11 ಗಂಟೆ ವೇಳೆಯಲ್ಲಿ ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ಮೂವರು ತೃತೀಯ ಲಿಂಗಿಗಳು ಕಿಶೋರ್ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ. ಮೊಬೈಲ್ ಕಸಿದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ.

    ಗಾಬರಿಗೊಂಡ ಕಿಶೋರ್ ತೃತೀಯ ಲಿಂಗಿಗಳಿಂದ ತಪ್ಪಿಸಿಕೊಂಡು ಬಂದು ಹೆಬ್ಬಾಳ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

  • ಮೈ ಮೇಲಿನ ಬಟ್ಟೆ ಬಿಚ್ಚಿ ಸೆಕ್ಸ್ ಗೆ ಕರೀತಿದ್ದ ಮಂಗಳಮುಖಿಯರು ಅರೆಸ್ಟ್

    ಮೈ ಮೇಲಿನ ಬಟ್ಟೆ ಬಿಚ್ಚಿ ಸೆಕ್ಸ್ ಗೆ ಕರೀತಿದ್ದ ಮಂಗಳಮುಖಿಯರು ಅರೆಸ್ಟ್

     

    ಬೆಂಗಳೂರು: ನಗರದ ಹಲಸೂರು ಮೆಟ್ರೋ ಸ್ಟೇಷನ್ ಬಳಿ ವಾಹನ ಸವಾರರಿಗೆ ಲೈಂಗಿಕ ಕ್ರಿಯೆಗೆ ಪ್ರೇರೇಪಿಸುತ್ತಿದ್ದ ಮೂವರು ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ.

     

    ಟ್ರಿನಿಟಿ ಮೆಟ್ರೋ ಬಳಿ ಮಂಗಳಮುಖಿಯರಾದ ಕೀರ್ತಿ, ನಿರಂಜನಾ ಎಂಬವರನ್ನು ಬಂಧಿಸಲಾಗಿದೆ. ನಗರದ ಮಣಿಪಾಲ ಸೆಂಟರ್ ಬಳಿ ಮಧು ಎಂಬ ಮಂಗಳಮುಖಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಮೈ ಮೇಲಿನ ಬಟ್ಟೆ ಬಿಚ್ಚುವ ಮೂಲಕ ಸನ್ನೆ ಮಾಡಿ ವಾಹನ ಸವಾರರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿದ್ದರು.

    ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.