Tag: Transformers

  • ವಿದ್ಯುತ್ ತಗುಲಿ – ಲೈನ್ ಮ್ಯಾನ್ ಸಾವು

    ವಿದ್ಯುತ್ ತಗುಲಿ – ಲೈನ್ ಮ್ಯಾನ್ ಸಾವು

    ಬೆಂಗಳೂರು: ಬೆಸ್ಕಾಂ ಟ್ರಾನ್ಸ್ಫಾರ್ಮರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ ಕಂಬದ ಮೇಲಿಂದ ಕೆಳಗೆ ಬಿದ್ದ ಲೈನ್ ಮ್ಯಾನ್ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಯಮರೆ ಗ್ರಾಮದಲ್ಲಿ ನಡೆದಿದೆ.

    ಉತ್ತರ ಕರ್ನಾಟಕ ಮೂಲದ ಪವನ್ ಮೃತ ಲೈನ್ ಮ್ಯಾನ್. ನಗರದ ಹೊರವಲಯದ ಆನೇಕಲ್ ತಾಲೂಕಿನ ಯಮರೆ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ಸ್ ಸಮಸ್ಯೆಯನ್ನು ಬಗೆಹರಿಸಲು ಪವನ್ ಹಾಗೂ ಮುರಳಿ ಅವರು ವಿದ್ಯುತ್ ಕಂಬವನ್ನು ಹತ್ತಿದ್ದರು ಜೊತೆಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ಆದರೆ ಕಂಬ ಹತ್ತಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಹರಿದ ಹಿನ್ನೆಲೆಯಲ್ಲಿ ವಿದ್ಯುತ್ ತಗುಲಿ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಲೈನ್ ಮ್ಯಾನ್ ಅವರಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಕಳೆದು ಹೋಗಿದ್ದ ಬೆಕ್ಕು 17 ವರ್ಷಗಳ ಬಳಿಕ ಪತ್ತೆ- ಈ ರೋಚಕ ಕಥೆ ಸಖತ್ ಥ್ರಿಲ್ಲಿಂಗ್

    ಪ್ರತಿಬಾರಿ ಅಮಾಯಕ ಲೈನ್ ಮ್ಯಾನ್‍ಗಳು ಸಾವನ್ನಪ್ಪುತ್ತಿದ್ದರೂ ಸಹ ಯಾವುದೇ ಕಾರಣಕ್ಕೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಬಡವರ ಜೀವಗಳ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಈ ಘಟನೆಗೆ ನೇರ ಹೊಣೆ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬೆಸ್ಕಾಂ ಹಿರಿಯ ಅಧಿಕಾರಿಗಳ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂಬಿಕಾ ನಗರದ ವಿದ್ಯುತ್ ಸಂಗ್ರಹಣಾಗಾರದಲ್ಲಿ ಸ್ಫೋಟ – ತಪ್ಪಿದ ಮಹಾ ದುರಂತ

    ಅಂಬಿಕಾ ನಗರದ ವಿದ್ಯುತ್ ಸಂಗ್ರಹಣಾಗಾರದಲ್ಲಿ ಸ್ಫೋಟ – ತಪ್ಪಿದ ಮಹಾ ದುರಂತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಬಿಕಾ ನಗರದಲ್ಲಿ ಕಾಳಿ ನದಿಗೆ ಅಡ್ಡವಾಗಿ ಕಟ್ಟಿರುವ ಕಾಳಿ ವಿದ್ಯುತ್‍ಗಾರದ ವಿದ್ಯುತ್ ಸಂಗ್ರಹಣಾಗಾರದಲ್ಲಿ  ಟ್ರಾನ್ಸ್‌ಫಾರ್ಮ್‌ ಸ್ಫೋಟಗೊಂಡಿದೆ.

    ಸ್ಫೋಟದ ತೀವ್ರತೆಗೆ ಹಲವು ಟ್ರಾನ್ಸ್‌ಫಾರ್ಮ್‌ಗಳು ಸಂಪೂರ್ಣ ನಾಶವಾಗಿದ್ದು, ಅದೃಷ್ಟವಶಾತ್ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಇಂಜಿನಿಯರ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾನ್ಸ್‌ಫಾರ್ಮ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಈ ಸ್ಟೋಟ ನಡೆದಿದೆ ಎನ್ನಲಾಗಿದ್ದು, ಸೋಮವಾರ ಸಂಜೆ ವೇಳೆ ಘಟನೆ ನಡೆದಿದ್ದು, ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಸ್ಫೋಟಗೊಂಡ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರು.

    ಸ್ಫೋಟಗೊಂಡ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಈ ಹಿಂದೆ ಜೋಗಾದ ಮಹಾತ್ಮ ಗಾಂಧಿ ವಿದ್ಯುತ್‍ಗಾರದಲ್ಲಿ ಬೆಂಕಿ ಅನಾಹುತವಾಗಿ ಕೋಟಿಗಟ್ಟಲೆ ರೂ. ನಷ್ಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಇದೇ ಮಾದರಿಯಲ್ಲಿ ಕಾಳಿ ವಿದ್ಯುತ್‍ಗಾರದಲ್ಲೂ ಅಗ್ನಿ ಅವಗಡ ನಡೆದಿದೆ.