Tag: transformer

  • ಟ್ರಾನ್ಸ್ ಫಾರ್ಮರ್ ಗೆ ತಾಗಿದ ಟ್ರ್ಯಾಕ್ಟರ್ – ಬೆಂಕಿಗೆ ಮೇವು ಭಸ್ಮ

    ಟ್ರಾನ್ಸ್ ಫಾರ್ಮರ್ ಗೆ ತಾಗಿದ ಟ್ರ್ಯಾಕ್ಟರ್ – ಬೆಂಕಿಗೆ ಮೇವು ಭಸ್ಮ

    ಧಾರವಾಡ: ಒಣ ಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್‍ಗೆ ಬೆಂಕಿ ಹೊತ್ತಿಕೊಂಡು ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಮೇವು ಭಸ್ಮವಾದ ಘಟನೆ ನಡೆದಿದೆ.

    ಧಾರವಾಡದ ಕೋರ್ಟ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ನಲ್ಲಿ ಮೇವು ತುಂಬಿಕೊಂಡು ನಂದಗಡದಿಂದ ನವಲೂರಿಗೆ ಹೊರಟಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಮೇವು ರಸ್ತೆ ಮಧ್ಯದ ಬಿಆರ್‍ಟಿಎಸ್ ಬಸ್ ನಿಲ್ದಾಣಕ್ಕೆ ತಾಗುವುದನ್ನು ತಪ್ಪಿಸಲು ಹೋದಾಗ ಮತ್ತೊಂದು ಬದಿಯಿದ್ದ ಟ್ರಾನ್ಸ್ ಫಾರ್ಮರ್ ಗೆ ಟ್ರ್ಯಾಕ್ಟರ್ ತಾಗಿ ಕೂಡಲೇ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.