Tag: Trainer Aircraft

  • ಗುಜರಾತ್‌ನಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ – ಮಹಿಳಾ ಪೈಲಟ್‌ಗೆ ಗಾಯ

    ಗುಜರಾತ್‌ನಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ – ಮಹಿಳಾ ಪೈಲಟ್‌ಗೆ ಗಾಯ

    ಗಾಂಧಿನಗರ: ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನ (Private Trainer Aircraft) ಅಪಘಾತಕ್ಕೀಡಾಗಿ ಮಹಿಳಾ ತರಬೇತಿ ಪೈಲಟ್ ಗಾಯಗೊಂಡಿರುವ ಘಟನೆ ಗುಜರಾತ್‌ನ (Gujarat) ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

    ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸಿಂಗಲ್ ಎಂಜಿನ್ ವಿಮಾನವು ಮೆಹ್ಸಾನಾ ಪಟ್ಟಣದ ಬಳಿಯ ಉಚಾರ್ಪಿ ಗ್ರಾಮದಲ್ಲಿ ಮೈದಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಮೆಹ್ಸಾನಾ ತಾಲೂಕು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಿಜಿ ಬದ್ವಾ ತಿಳಿಸಿದ್ದಾರೆ. ಇದನ್ನೂ ಓದಿ: ಅಶ್ವನಿ ವೇಗಕ್ಕೆ ಕೊನೆಯ ಸ್ಥಾನಕ್ಕೆ ಜಾರಿದ ಕೋಲ್ಕತ್ತಾ – ಮುಂಬೈಗೆ ಭರ್ಜರಿ ಜಯ

    ಅಪಘಾತದಲ್ಲಿ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬದ್ವಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲವ್ವರ್ ಜೊತೆ ಮಾತನಾಡಲು 1.5 ಲಕ್ಷದ ಫೋನಿಗೆ ಡಿಮ್ಯಾಂಡ್ – ಕೊಡದ್ದಕ್ಕೆ ತನ್ನ ಕೈಯನ್ನೇ ಕೊಯ್ದ ಯುವತಿ

  • ತೆಲಂಗಾಣದಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳ ದುರ್ಮರಣ

    ತೆಲಂಗಾಣದಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳ ದುರ್ಮರಣ

    ಹೈದರಾಬಾದ್‌: ತೆಲಂಗಾಣದ ಮೇದಕ್‌ ಜಿಲ್ಲೆಯ ತೂಪ್ರಾನ್‌ನ ರಾವೆಲ್ಲಿ ಗ್ರಾಮದಲ್ಲಿ ತರಬೇತಿ ವಿಮಾನವೊಂದು (Trainer Aircraft) ಪತನಗೊಂಡ ಪರಿಣಾಮ ಭಾರತೀಯ ವಾಯುಪಡೆಯ (IAF) ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.

    ಹೈದರಾಬಾದ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಿಂದ (AFA) ವಾಡಿಕೆಯ ತರಬೇತಿಗಾಗಿ Pilatus PC 7 Mk-II ವಿಮಾನ ಟೇಕಾಫ್ ಆಗಿತ್ತು. ಈ ವೇಳೆ ಅಪಘಾತ ಸಂಭವಿಸಿ ವಿಮಾನದಲ್ಲಿದ್ದ ತರಬೇತುದಾರ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸಾವನ್ನಪ್ಪಿದ್ದಾರೆ. ಸದ್ಯ ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಲೋಕ ಸಮರದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ಸನ್ನು ಧೂಳಿಪಟ ಮಾಡ್ತೇವೆ: ವಿಜಯೇಂದ್ರ

    ಪಿಲಾಟಸ್ PC 7 Mk-II ವಿಮಾನವು ಒಂದೇ ಎಂಜಿನ್‌ ಒಳಗೊಂಡ ತರಬೇತಿ ವಿಮಾನವಾಗಿದೆ. IAF ಪೈಲಟ್‌ಗಳ ತರಬೇತಿಗಾಗಿ ಇದನ್ನು ಬಳಸಲಾಗುತ್ತದೆ. ಸ್ವಿಟ್ಜರ್‌ಲೆಂಡಿನ ಪಿಲಾಟಸ್ ಸಂಸ್ಥೆಯು ಇದನ್ನು ವಿನ್ಯಾಸಗೊಳಿಸಿ, ತಯಾರಿಸಲಿದೆ. ಈ ವಿಮಾನವನ್ನು ಏರೋಬ್ಯಾಟಿಕ್ಸ್, ಯುದ್ಧತಂತ್ರ ಮತ್ತು ರಾತ್ರಿ ಹಾರಾಟ ಸೇರಿದಂತೆ ಎಲ್ಲಾ ಮೂಲಭೂತ ತರಬೇತಿ ಕಾರ್ಯಗಳಿಗೆ ಬಳಸಲಾಗುತ್ತದೆ. ಸರಿಸುಮಾರು 1,330 ಕೆ.ಜಿ ತೂಕ ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

    ಅಪಘಾತದಲ್ಲಿ ಮೃತಪಟ್ಟ ಪೈಲಟ್‌ಗಳ ಕುಟುಂಬಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಾಂತ್ವನ ಹೇಳಿದ್ದಾರೆ. ಹೈದರಾಬಾದ್ ಬಳಿ ನಡೆದ ಈ ಅಪಘಾತದಿಂದ ದುಃಖವಾಗಿದೆ. ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿರುವುದು ತುಂಬಾ ದುಃಖಕರವಾಗಿದೆ. ಈ ದುರಂತ ಸಮಯದಲ್ಲಿ, ನಾವು ಅವರ ಕುಟುಂಬಗಳೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 4 ರಾಜ್ಯಗಳ ವಿಚಿತ್ರ ಫಲಿತಾಂಶ ಜನರಿಗೆ ಆಘಾತವುಂಟು ಮಾಡಿದೆ: ಮಾಯಾವತಿ