Tag: trainer

  • ಮದುವೆ ನಿರಾಕರಿಸಿದ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ

    ಮದುವೆ ನಿರಾಕರಿಸಿದ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ

    ಚಂಡೀಗಢ್: ಮದುವೆ ಆಗಲು ನಿರಾಕರಿಸಿದ್ದಕ್ಕೆ ತರಬೇತುದಾರ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ ಘಟನೆ ಮಂಗಳವಾರ ಹರಿಯಾಣದ ಪಟೌದಿಯಲ್ಲಿ ನಡೆದಿದೆ.

    ಸರಿತಾ(25) ಮೃತಪಟ್ಟ ಯುವತಿ. ಸರಿತಾ ಟೇಕ್ವಾಂಡೋ (ಬಾಕ್ಸರ್) ಆಟಗಾರ್ತಿಯಾಗಿದ್ದು, ಆಕೆ ಬಾಕ್ಸಿಂಗ್ ಕಲಿಯುತ್ತಿದ್ದಳು. ಸರಿತಾಗೆ ಬಾಕ್ಸಿಂಗ್ ಹೇಳಿಕೊಡುತ್ತಿದ್ದ ತರಬೇತಿದಾರ ಸೋಮ್‍ಬೀರ್ ಆಕೆಯನ್ನು ಪ್ರೀತಿಸಲು ಶುರು ಮಾಡಿದ್ದನು.

    ಸೋಮ್‍ಬೀರ್ ಮದುವೆಯಾಗುವಂತೆ ಸರಿತಾ ಬಳಿ ಕೇಳಿಕೊಂಡಿದ್ದಾನೆ. ಆದರೆ ಸರಿತಾ ಇದಕ್ಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ತರಬೇತುದಾರ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಅಲ್ಲದೆ ಆಕೆಯ ತಾಯಿಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ರಾಜ್ಯಮಟ್ಟದ ಕುಸ್ತಿ ಆಟಗಾರನಾಗಿರುವ ಸೋಮ್‍ಬೀರ್ ಆಗಾಗ ಸರಿತಾ ಮನೆಗೆ ಭೇಟಿ ನೀಡುತ್ತಿದ್ದನು. ಸೋಮ್‍ಬೀರ್ ವಿರುದ್ಧ ಬಿಲಾಸ್‍ಪುರ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಆತ ಯಾವಾಗಲೂ ನಶೆಯಲ್ಲಿ ತೇಲಾಡುತ್ತಿದ್ದನು.

    ಸೋಮ್‍ಬೀರ್, ಸರಿತಾಳನ್ನು ಮದುವೆ ಆಗಲು ಇಚ್ಛಿಸಿದ್ದನು. ಆದರೆ ಸರಿತಾ, ಸೋಮ್‍ಬೀರ್ ನಶೆ ಮಾಡುವುದನ್ನು ನೋಡಿದ್ದಳು. ಹಾಗಾಗಿ ಆಕೆ ಸೋಮ್‍ಬೀರ್ ನನ್ನು ಮದುವೆ ಆಗಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಸೋಮ್‍ಬೀರ್ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

  • ಪುರುಷತ್ವಕ್ಕೆ ಕುತ್ತಾಗುವ ಸ್ಟಿರಾಯ್ಡ್ ಮಾರಾಟ – ಬೆಂಗ್ಳೂರಿನ ಜಿಮ್ ಟ್ರೈನರ್ ಬಂಧನ

    ಪುರುಷತ್ವಕ್ಕೆ ಕುತ್ತಾಗುವ ಸ್ಟಿರಾಯ್ಡ್ ಮಾರಾಟ – ಬೆಂಗ್ಳೂರಿನ ಜಿಮ್ ಟ್ರೈನರ್ ಬಂಧನ

    ಬೆಂಗಳೂರು: ಹಲವರು ಫಿಟ್‍ನೆಸ್ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ದಪ್ಪ ಆಗಬೇಕು ಎಂಬ ಉದ್ದೇಶದಿಂದ ಜಿಮ್‍ಗೆ ಹೋಗುತ್ತಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಜಿಮ್‍ಗಳು ಹಾನಿಕಾರಕ ಔಷಧಿಗಳನ್ನು ನೀಡಿ ಜಿಮ್‍ಗೆ ತೆರಳುವವರ ಜೀವನವನ್ನೇ ಹಾಳು ಮಾಡುತ್ತಿವೆ. ಇಂತಹ ಹಾನಿಕಾರಕ ಔಷಧಿ ನೀಡುತ್ತಿದ್ದ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿ ತರಬೇತುದಾರನನ್ನು ಬಂಧಿಸಿದ್ದಾರೆ.

    ನಗರದ ಚಾಮರಾಜಪೇಟೆಯ ನಾಲ್ಕನೇ ಮುಖ್ಯ ರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್ನೆಸ್ ಹೆಸರಿನ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಜಿಮ್ ತರಬೇತುದಾರ ಶಿವಕುಮಾರ್ ನನ್ನು ಬಂಧಿಸಿದ್ದಾರೆ. ಈತ ಜಿಮ್‍ಗೆ ಬರುವವರಿಗೆಲ್ಲ ಹಾನಿಕಾರಕ ಔಷಧಿ ಸ್ಟಿರಾಯ್ಡ್ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಆಗಸ್ಟ್ 21ರಂದು ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜಿಮ್‍ನಲ್ಲಿ ಹಲವು ಸ್ಟಿರಾಯ್ಡ್ ಔಷಧಿಯ ಬಾಕ್ಸ್ ಗಳು ಪತ್ತೆಯಾಗಿದ್ದವು.

    ದಾಳಿ ವೇಳೆ ದೇಹವನ್ನು ಹುರಿಗೊಳಿಸುವ ಮಾತ್ರೆಗಳು ಮತ್ತು ಇಂಜೆಕ್ಷನ್‍ಗಳು ಜೊತೆಗೆ ಕೆಲವು ಪ್ರೊಟೀನ್ ಬಾಟಲ್‍ಗಳು ಸಹ ಪತ್ತೆಯಾಗಿವೆ. ಆನ್‍ಲೈನ್ ಮೂಲಕ ಸ್ಟಿರಾಯ್ಡ್ ತರಿಸಿಕೊಳ್ತಿದ್ದ ಆರೋಪಿ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಸ್ಟಿರಾಯ್ಡ್ ನೀಡುತ್ತಿದ್ದ. ಈ ಭಯಾನಕ ಔಷಧಿಯಿಂದ ಪುರುಷತ್ವಕ್ಕೆ ಕುತ್ತು ಉಂಟಾಗಲಿದೆ. ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದು ಜಪ್ತಿಯಾದ ಔಷಧಗಳ ತಪಾಸಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮಂಚಕ್ಕೆ ಬಾರೇ ಎಂದಿದ್ದ ವಿಂಗ್ ಕಮಾಂಡರ್ ಮೇಲೆ ತನಿಖೆಗೆ ಆದೇಶ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮಂಚಕ್ಕೆ ಬಾರೇ ಎಂದಿದ್ದ ವಿಂಗ್ ಕಮಾಂಡರ್ ಮೇಲೆ ತನಿಖೆಗೆ ಆದೇಶ

    – ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

    ಬೆಂಗಳೂರು: ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿರುವ ಮಾಜಿ ವಿಂಗ್ ಕಮಾಂಡರ್ ಅಮರ್ಜಿತ್ ಸಿಂಗ್ ಮೇಲೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.

    ಮಂಗಳವಾರ ಬೆಳಗ್ಗೆ ಅಮರ್ಜಿತ್ ಸಿಂಗ್ ಕಾಮಕಾಂಡದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬಳಿಕ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಚ್ಚೆತ್ತುಗೊಂಡು ಜಂಟಿ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದೆ.

    ಅಮರ್ಜಿತ್ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿದ್ದು, ಪೈಲೆಟ್ ಆಗುವ ಕನಸು ಹೊತ್ತ ಹೆಣ್ಣುಮಕ್ಕಳ ಬಾಳುಹಾಳು ಮಾಡುತ್ತಿದ್ದಾರೆ ಎಂದ ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದರು. ವಿದ್ಯಾರ್ಥಿನಿಯರಿಗೆ ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ ಎಂದು ಹೇಳಿ ಬೆಡ್ ರೂಂ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಅಮರ್ಜಿತ್ ಸಿಂಗ್ ಮೇಲೆ ಕೇಳಿ ಬಂದಿತ್ತು. ಇದನ್ನೂ ಓದಿ: ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ – ವಿದ್ಯಾರ್ಥಿಗಳಿಗೆ ವಿಂಗ್ ಕಮಾಂಡರ್​ನಿಂದ ಪೋಲಿ ಮೆಸೇಜ್

    ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಮಾತನಾಡಿ, “ದೂರುಗಳು ಬಂದಿದೆ. ಆದರೆ ನಮಗೆ ವಿಡಿಯೋ ದಾಖಲೆ ಹಾಗೂ ಮೆಸೇಜ್ ದಾಖಲೆಗಳು ಇರಲಿಲ್ಲ. ಪಬ್ಲಿಕ್ ಟಿವಿ ವರದಿ ಬಳಿಕ ಈ ದಾಖಲೆ ಪರಿಶೀಲಿಸಿ ಕ್ರಮಗೊಳ್ಳುತ್ತೇವೆ. ಈಗಾಗಲೇ ಬೇರೆ ತರಬೇತುದಾರರಿಗೆ ಟೆಂಡರ್ ಕರೆಯಲಿದ್ದೇವೆ. ಏಕಾಏಕಿ ಅಮರ್ಜಿತ್ ನನ್ನು ವಜಾಗೊಳಿಸಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಪರ್ಯಾಯ ಫ್ಲೈಯಿಂಗ್ ಟ್ರೈನರ್ ಸಿಕ್ಕ ತಕ್ಷಣ ಈತನನ್ನು ಅಮಾನತು ಮಾಡಲಿದ್ದೇವೆ. ಈ ವರದಿಯ ಬಗ್ಗೆ ಉಪಮುಖ್ಯಮಂತ್ರಿ, ಇಲಾಖಾ ಸಚಿವ ಪರಮೇಶ್ವರ್ ಅವರ ಗಮನಕ್ಕೂ ತಂದಿದ್ದೇನೆ” ಎಂದು ತಿಳಿಸಿದ್ದಾರೆ.

    ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಮಂಚಕ್ಕೆ ಬಾರೇ ಎಂದು ಕರೆದು ಬೆಡ್ ರೂಂ ಫೋಟೋ ಕಳುಹಿಸಿದ್ದರು. ಅಲ್ಲದೇ ವಿದ್ಯಾರ್ಥಿನಿಗೆ ಐದು ತಿಂಗಳಲ್ಲಿ ಬರೋಬ್ಬರಿ 900 ಮೆಸೇಜ್ ಮಾಡಿದ್ದಾರೆ. ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಕಳುಹಿಸಿರುವ ಪೋಲಿ ವಾಟ್ಸಪ್ ಮಸೇಜ್ ಗಳ ಸ್ಕ್ರೀನ್ ಶಾಟ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ – ವಿದ್ಯಾರ್ಥಿಗಳಿಗೆ ವಿಂಗ್ ಕಮಾಂಡರ್​ನಿಂದ ಪೋಲಿ ಮೆಸೇಜ್

    ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ – ವಿದ್ಯಾರ್ಥಿಗಳಿಗೆ ವಿಂಗ್ ಕಮಾಂಡರ್​ನಿಂದ ಪೋಲಿ ಮೆಸೇಜ್

    – ಆ ವಿದ್ಯಾರ್ಥಿನಿಗೆ 5 ತಿಂಗಳಲ್ಲಿ ಮಾಡಿದ್ದು ಬರೋಬ್ಬರಿ 900 ಮೆಸೇಜ್
    – ಪೈಲೆಟ್ ಆಗೋ ಕನಸು ಹೊತ್ತ ಹೆಣ್ಣುಮಕ್ಕಳ ಬಾಳುಹಾಳು ಮಾಡೋ ಕಾಮುಕ

    ಬೆಂಗಳೂರು: ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿರುವ ಮಾಜಿ ವಿಂಗ್ ಕಮಾಂಡರ್ ಅಮರ್ಜಿತ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

    ಅಮರ್ಜಿತ್ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿದ್ದು, ಪೈಲೆಟ್ ಆಗುವ ಕನಸು ಹೊತ್ತ ಹೆಣ್ಣುಮಕ್ಕಳ ಬಾಳುಹಾಳು ಮಾಡುತ್ತಿದ್ದಾರೆ ಎಂದ ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿನಿಗಳಿಗೆ ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ ಎಂದು ಹೇಳಿ ಬೆಡ್ ರೂಂ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಅಮರ್ಜಿತ್ ಸಿಂಗ್ ಮೇಲೆ ಬಂದಿದೆ.

    ಸ್ಟೂಡೆಂಟ್ಸ್ ನ್ನು ಮಂಚಕ್ಕೆ ಬಾರೇ ಎಂದು ಕರೆದು ಬೆಡ್ ರೂಂ ಫೋಟೋ ಕಳುಹಿಸುತ್ತಾರೆ. ಅಲ್ಲದೇ ವಿದ್ಯಾರ್ಥಿನಿಗೆ ಐದು ತಿಂಗಳಲ್ಲಿ ಬರೋಬ್ಬರಿ 900 ಮೆಸೇಜ್ ಮಾಡಿದ್ದಾರೆ. ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಕಳುಹಿಸಿರುವ ಪೋಲಿ ವಾಟ್ಸಪ್ ಮಸೇಜ್ ಗಳ ಸ್ಕ್ರೀನ್ ಶಾಟ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಲೈಂಗಿಕ ಕಿರುಕುಳ ಆರೋಪ ಅಮರ್‍ಜಿತ್ ಮೇಲೆ ಬರುತ್ತಿರುವುದು ಇದೇ ಮೊದಲಲ್ಲ. ವಿದ್ಯಾರ್ಥಿಗಳು 2017ರಲ್ಲಿ ದೂರು ಕೊಡುತ್ತಿದ್ದಂತೆ ಅಮರ್‍ಜಿತ್ ರಾಜೀನಾಮೆಯನ್ನು ಕೂಡ ಕೊಟ್ಟಿದ್ದರು. ಆದರೆ ಅಮರ್‍ಜಿತ್ ಮೇಲೆ ಕೈ ಮುಖಂಡ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಕೃಪಾಕಟಾಕ್ಷವಿದ್ದು ರಾಜೀನಾಮೆ ನೀಡುವುದು ಬೇಡ ಎಂದು ಹೇಳಿದ್ದರಂತೆ. ಹೀಗಾಗಿ ಅಮಾನತು ಆಗಬೇಕಿದ್ದ ಅಮರ್ಜಿತ್ ರಾಜೀನಾಮೆ ನೀಡದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

    ಪ್ರಮೋದ್ ಮದ್ವರಾಜ್ ಬೆನ್ನಿಗೆ ನಿಲ್ಲುತ್ತಿದ್ದಂತೆ ಅಮರ್ಜಿತ್ ಹಿಡಿಯೋರೆ ಇರಲಿಲ್ಲ. ನವೆಂಬರ್ ನಲ್ಲಿ ಅಮರ್ಜಿತ್ ಗುತ್ತಿಗೆ ಅವಧಿ ಮುಗಿದರೂ ಮತ್ತೆ ಮುಂದುವರಿಸಲು ಸರ್ಕಾರ ಆದೇಶ ನೀಡಿದೆ. ತನ್ನ ವಿರುದ್ಧ ಮಾತನಾಡಿದ ಯುವತಿಯರಿಗೆ ಅಮರ್ಜಿತ್ ಸಿಂಗ್ ಗೇಟ್‍ಪಾಸ್ ನೀಡುತ್ತಿದ್ದ ವಿಚಾರ ತಿಳಿದು ಭಯಗೊಂಡು ವಿದ್ಯಾರ್ಥಿನಿಯರು ಸುಮ್ಮನಾಗುತ್ತಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರ‍್ಯಾಗಿಂಗ್ ಆಯ್ತು ಇದೀಗ ವಿದ್ಯಾರ್ಥಿನಿಯರ ಪ್ರೈವೇಟ್ ಪಾರ್ಟ್ ಮುಟ್ಟಿ ಲೈಂಗಿಕ ಕಿರುಕುಳ

    ರ‍್ಯಾಗಿಂಗ್ ಆಯ್ತು ಇದೀಗ ವಿದ್ಯಾರ್ಥಿನಿಯರ ಪ್ರೈವೇಟ್ ಪಾರ್ಟ್ ಮುಟ್ಟಿ ಲೈಂಗಿಕ ಕಿರುಕುಳ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೈಮಾನಿಕ ತರಬೇತಿ ಕೇಂದ್ರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ರ‍್ಯಾಗಿಂಗ್ ಆದ ಮೇಲೆ ಇದೀಗ ವಿದ್ಯಾರ್ಥಿನಿಯರಿಗೆ ವಿಮಾನದಲ್ಲಿಯೇ ಅವರ ಪ್ರೈವೇಟ್ ಪಾರ್ಟ್ ಮುಟ್ಟಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ.

    ಮುಖ್ಯ ತರಬೇತುದಾರ ಅಮರ್ ಜೀತ್ ಸಿಂಗ್ ಡಾಂಗೆ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿದೆ. ಮುಖ್ಯ ತರಬೇತುದಾರನಿಂದಲ್ಲೇ ಲೈಂಗಿಕ ಕಿರುಕುಳ ನೀಡುತ್ತಿದ್ದು, ವಿಮಾನದಲ್ಲಿ ಟ್ರೈನಿಂಗ್ ನೀಡುವಾಗ ಅಮರ್ ಜೀತ್ ಸಿಂಗ್ ಡಾಂಗೆ ವಿದ್ಯಾರ್ಥಿನಿಯರ ಪ್ರೈವೇಟ್ ಪಾರ್ಟ್ ಗೆ ಹೊಡಿತಾನೆ ಎಂಬ ಆರೋಪ ಕೇಳಿ ಬಂದಿದೆ.

    ವಿದ್ಯಾರ್ಥಿನಿ ತನಗೆ ಆಗಿರುವ ಅನ್ಯಾಯವನ್ನು ತನ್ನ ಸ್ನೇಹಿತೆ ಜೊತೆ ಫೋನಿನಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ಆಡಿಯೋ ಪಬ್ಲಿಕ್ ಟವಿಗೆ ಲಭ್ಯವಾಗಿದೆ. ಇದನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಾನೆ. ಒಂದು ವೇಳೆ ಹೇಳಿದ್ರೆ ಪೈಲೆಟ್ ಟ್ರೈನಿಂಗ್‍ನಲ್ಲಿ ಫೇಲ್ ಮಾಡಿಸುತ್ತೀನಿ. ಹಾಗೇ ವಿದ್ಯಾರ್ಥಿ ವೇತನ ಸಿಗದಂತೆ ನೋಡಕೊಳ್ಳತ್ತೀನಿ ಎಂದು ಅಮರ್ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ.

    ಸದ್ಯ ಅಮರ್ ಜೀತ್ ಸಿಂಗ್ ಡಾಂಗೆ ವಿರುದ್ಧ ಕ್ಯಾಪ್ಟನ್ ಅಮಿತ್ ಸೊಬೆ ದೂರು ನೀಡಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೂ ದೂರು ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ತಾನು ಸಾಕಿದ ಹುಲಿಯಿಂದಲೇ ದಾಳಿಗೊಳಗಾಗಿ ಸಾವನ್ನಪ್ಪಿದ ತರಬೇತುದಾರ

    ವಿಡಿಯೋ: ತಾನು ಸಾಕಿದ ಹುಲಿಯಿಂದಲೇ ದಾಳಿಗೊಳಗಾಗಿ ಸಾವನ್ನಪ್ಪಿದ ತರಬೇತುದಾರ

    ಬೀಜಿಂಗ್: ಹುಲಿಯೊಂದು ತನ್ನನ್ನು ಸಾಕಿದ ಮೃಗಾಲಯದ ಸಿಬ್ಬಂದಿಯನ್ನೇ ಕೊಂದಿರುವ ಘಟನೆ ಚೀನಾದಲ್ಲಿ ನಡೆದಿದೆ.

    ಕಳೆದ ಭಾನುವಾರ ಇಲ್ಲಿನ ಫುಝೌ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಮೃಗಾಲಯದ ಸಿಬ್ಬಂದಿಯಾದ ವೂ ಪ್ರಾಣಿಗಳಿಗೆ ತರಬೇತಿ ನೀಡಲು ಬಳಸುವ ಬೋನಿನೊಳಗೆ ಹುಲಿಯೊಂದಿಗೆ ಇದ್ದರು. ಯಾವಾಗ್ಲೂ ಶಾಂತವಾಗಿರುತ್ತದೆ ಹುಲಿ ಅಂದು ಇದ್ದಕ್ಕಿದ್ದಂತೆ ವೂ ಅವರಿಗೆ ಕಚ್ಚಿದ್ದು, ಅವರು ಉಸಿರುಗಟ್ಟಿ ಸಾವನ್ನಪ್ಪಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಫುಜೌ ಸಿಬ್ಬಂದಿಯಾಗಿದ್ದ ವೂ, ಹುಲಿ ಮರಿಯಾಗಿದ್ದಾಗಿನಿಂದಲೂ ಅದರ ಆರೈಕೆ ಮಾಡಿದ್ದರು. ದೀರ್ಘ ಕಾಲ ಮಾನವನೊಂದಿಗೆ ಒಡನಾಟದಲ್ಲೇ ಹುಲಿಯನ್ನ ಸಾಕಲಾಗಿತ್ತು ಎಂದು ವರದಿಯಾಗಿದೆ.

    ಈ ಘಟನೆಯನ್ನ ಪ್ರತ್ಯಕ್ಷದರ್ಶಿಗಳು ವಿಡಿಯೋ ಮಾಡಿದ್ದು, ಸಾವನ್ನಪ್ಪಿದ ತನ್ನ ತರಬೇತುದಾರನ ದೇಹದ ಬಳಿ ಹುಲಿ ನಿಂತಿರೋದನ್ನ ಕಾಣಬಹುದು. ಪೊಲೀಸರಿಗೆ ಕರೆ ಮಾಡಿ ಎಂದು ಅಲ್ಲಿದ್ದವರು ಕಿರುಚೋದನ್ನೂ ವಿಡಿಯೋದಲ್ಲಿ ಕೇಳಬಹುದು.

    ಮತ್ತೊಂದು ವಿಡಿಯೋದಲ್ಲಿ ಹುಲಿ ವೂ ಅವರ ಮೇಲೆ ದಾಳಿ ಮಾಡುತ್ತಿದ್ದು, ಇತರೆ ಸಿಬ್ಬಂದಿ ಕೋಲಿನಿಂದ ಅದನ್ನ ಓಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದ್ರೆ ಅವರ ಪ್ರಯತ್ನ ವಿಫಲವಾಗಿದ್ದು ವೂ ಹುಲಿಯ ದಾಳಿಯಿಂದ ಕೊನೆಯುಸಿರೆಳೆದಿದ್ದಾರೆ.

    https://www.youtube.com/watch?v=4YHvEvfzDp4

  • ಮಾವುತನ ಮೇಲೆ ಸಾಕಾನೆ ದಾಳಿ- ದಂತದಿಂದ ತಿವಿದು ಗಾಯ

    ಮಾವುತನ ಮೇಲೆ ಸಾಕಾನೆ ದಾಳಿ- ದಂತದಿಂದ ತಿವಿದು ಗಾಯ

    ಮಡಿಕೇರಿ: ಸಾಕಾನೆಯೊಂದು ಮಾವುತನ ಮೇಲೆ ದಾಳಿ ಮಾಡಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಆನೆ ಶಿಬಿರದಲ್ಲಿ ನಡೆದಿದೆ.

    ದಾಳಿ ಹಿನ್ನೆಲೆಯಲ್ಲಿ ಮಾವುತ ಅಪ್ಪಯ್ಯ(40) ಗಂಭೀರವಾಗಿ ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ಕಾಡಿಗಟ್ಟಲು ಸಾಕಾನೆ ಗೋಪಿಯನ್ನು ಸರಪಳಿಯಿಂದ ಬಿಚ್ಚುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದೆ. ಅಪ್ಪಯ್ಯ ಅವರಿಗೆ ದಂತದಿಂದ ತಿವಿದು ಗಾಯಗೊಳಿಸಿದೆ.

    ಪರಿಣಾಮ ಗಂಭೀರವಾಗಿ ಗಾಯಗೊಂಡ ಮಾವುತ ಅಪ್ಪಯ್ಯ ಅವರಿಗೆ ಸಿದ್ದಾಪುರ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.