ಮುಂಬೈ: ಸೇತುವೆ (Bridge) ಮೇಲಿನಿಂದ ಉರುಳಿದ ಕಾರು (Car) ಚಲಿಸುತ್ತಿದ್ದ ರೈಲಿನ (Train) ಮೇಲೆ ಬಿದ್ದ ಪರಿಣಾಮ ಸ್ಥಳೀಯ ಆರ್‌ಪಿಐ ಕಾರ್ಯಕರ್ತ (RPI Activist) ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.
ಮೃತರನ್ನು ಧರ್ಮಾನಂದ ಗಾಯಕ್ವಾಡ್ (41) ಮತ್ತು ಅವರ ಸಂಬಂಧಿಕರಾದ ಮಂಗೇಶ್ ಜಾಧವ್ (46) ಮತ್ತು ನಿತೀನ್ ಜಾಧವ್ (48) ಎಂದು ಗುರುತಿಸಲಾಗಿದೆ. ಗಾಯಕ್ವಾಡ್ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ ಗುಂಪು) ಕಾರ್ಯಕರ್ತರಾಗಿದ್ದರು ಎಂದು ತಿಳಿದುಬಂದಿದೆ. ಮಂಗಳವಾರ ಮುಂಜಾನೆ 3:30 ರಿಂದ 4 ಗಂಟೆಯ ವೇಳೆಗೆ ಕಿನವಲಿ ಬಳಿಯ ಸೇತುವೆಯ ಮೇಲೆ ಕಾರು ಮುಂಬೈ-ಪನ್ವೇಲ್ ರಸ್ತೆಯಲ್ಲಿ ನೇರಲ್ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪನ್ವೇಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯ ತಲೆ ತುಳಿದು ಕೊಂದ ಕಾಡಾನೆ
ಸರಕು ಸಾಗಣೆ ರೈಲು ರಾಯಗಢ ಜಿಲ್ಲೆಯ ಪನ್ವೇಲ್‌ನಿಂದ ಕರ್ಜತ್‌ಗೆ ತೆರಳುತ್ತಿತ್ತು. ಘಟನೆಯಿಂದಾಗಿ ಅದರ ಕೆಲವು ವ್ಯಾಗನ್‌ಗಳು ಬೇರ್ಪಟ್ಟಿವೆ ಎಂದು ಕೇಂದ್ರ ರೈಲ್ವೆಯ (ಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ. ಅಪಘಾತದ ಕಾರಣ ಸಿಆರ್‌ನ ಪನ್ವೇಲ್-ಕರ್ಜತ್ ವಿಭಾಗವನ್ನು ಮುಂಜಾನೆ 3:43 ರಿಂದ 7:32 ರವರೆಗೆ ಮುಚ್ಚಲಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಕಾರು – ಐವರು ಜಲಸಮಾಧಿ
ಘಟನೆಯಿಂದಾಗಿ ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ರೈಲನ್ನು ಕರ್ಜಾತ್-ಕಲ್ಯಾಣ ಮಾರ್ಗದ ಮೂಲಕ ತಿರುಗಿಸಲಾಗಿದೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮದಾಸ್ ಅಠವಳೆ ಮೃತರಿಗೆ ಸಂತಾಪ ಸೂಚಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕಿ ಸಾವು
ಅಮರಾವತಿ: ಆಂಧ್ರ ಪ್ರದೇಶದಲ್ಲಿ (Andhra Pradesh) ಭಾನುವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ (Train Tragedy) ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎರಡು ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದಿಂದಾಗಿ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ (Cancelled) ಎಂದು ರೈಲ್ವೆ ಇಲಾಖೆ (Railway Department) ತಿಳಿಸಿದೆ.
ಭಾನುವಾರ ಆಂಧ್ರ ಪ್ರದೇಶದ ವಿಜಯನಗರದಲ್ಲಿ (Vijayanagara) ಎರಡು ಪ್ಯಾಸೆಂಜರ್ ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದ ನಂತರ 12 ರೈಲುಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೇ 15 ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದ್ದು, 7 ಇತರ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭೀಕರ ರೈಲು ದುರಂತ ಪ್ರಕರಣ- ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ
Bulletin1:
Status of Trains Diverted/Cancelled/Short Terminated in the wake of train accident near Kantakapalle. pic.twitter.com/dRlIEyGs4L
ಘಟನೆಯಲ್ಲಿ ಇಲ್ಲಿಯವರೆಗೆ 40 ಮಂದಿ ಗಾಯಗೊಂಡಿದ್ದಾರೆ. 32 ಮಂದಿಯನ್ನು ವಿಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಡಿಕೋವರ್ ಆಸ್ಪತ್ರೆಯಲ್ಲಿ ಇಬ್ಬರನ್ನು ದಾಖಲಿಸಿದ್ದು, ಎನ್‌ಆರ್‌ಐ ಆಸ್ಪತ್ರೆಯಲ್ಲಿ ಒಬ್ಬರನ್ನು ದಾಖಲಿಸಲಾಗಿದೆ. 4 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಗಾಯಗೊಂಡವರೆಲ್ಲರೂ ಆಂಧ್ರಪ್ರದೇಶದವರಾಗಿದ್ದಾರೆ ಎಂದು ವಿಜಯನಗರ ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: ಕೇರಳದಲ್ಲಿ ಸ್ಫೋಟ ಪ್ರಕರಣ- ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ವಿಶಾಖಪಟ್ಟಣದಿಂದ ಪಲಾಸಕ್ಕೆ ಹೋಗುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಕೊತ್ಸವತ್ಸಲ ಬಳಿಯ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಹಳಿಗಳ ಮೇಲೆ ನಿಂತಿದ್ದು, ವೈಜಾಗ್-ರಾಯಗಡ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂರು ಬೋಗಿಗಳು ಹಳಿತಪ್ಪಿವೆ. ಮಾನವ ದೋಷದಿಂದ ದುರಂತ ಸಂಭವಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿದ್ದು, ಸಿಗ್ನಲಿಂಗ್ ಅನ್ನು ಲೋಕೋ ಪೈಲಟ್ ಗಮನಿಸದ ಪರಿಣಾಮ ದುರಂತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆಂಧ್ರದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 6 ಮಂದಿ ಸಾವು
ಆನೇಕಲ್: ಸ್ನೇಹಿತರ ಮನೆಗೆ ಹಬ್ಬಕ್ಕೆಂದು ಬಂದಿದ್ದ ವ್ಯಕ್ತಿ ರೈಲು ಹಳಿ (Track) ದಾಟುವ ಸಂದರ್ಭ ರೈಲಿಗೆ (Train) ಸಿಲುಕಿ ಸಾವನ್ನಪ್ಪಿದ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ಸಮೀಪದ ಅರವಂಟಿಗೆಪುರ ರೈಲ್ವೆ ಗೇಟ್ ಬಳಿ ನಡೆದಿದೆ.
ಚಿತ್ರದುರ್ಗ (Chitradurga) ಮೂಲದ ರಾಮು (40) ಮೃತ ವ್ಯಕ್ತಿ. ಬೊಮ್ಮಸಂದ್ರದ (Bommasandra) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಮು ಮಂಗಳವಾರ ಸ್ನೇಹಿತರ ಜೊತೆಗೆ ಹಬ್ಬಕ್ಕೆ ಬಂದಿದ್ದರು. ರೈಲ್ವೆ ಹಳಿ ಸಮೀಪವೇ ಸಂಜೆ ಸ್ನೇಹಿತರ ಜೊತೆಗೆ ಎಣ್ಣೆ ಪಾರ್ಟಿ ಮಾಡಿದ್ದು, ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ‍್ಯಾಕ್ ದಾಟಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡಿದ್ದಾರೆ. ಇದನ್ನೂ ಓದಿ: ಮಡಿಕೇರಿ ದಸರಾ ಶೋಭಯಾತ್ರೆ ವೇಳೆ ಅವಘಡ – ಇಬ್ಬರಿಗೆ ಗಾಯ
ರೈಲು ಬರುತ್ತಿರುವುದನ್ನು ಗಮನಿಸದೇ ರಾಮು ಹಳಿ ದಾಟಲು ಯತ್ನಿಸಿದ್ದು, ಈ ವೇಳೆ ರೈಲು ಡಿಕ್ಕಿ ಹೊಡೆದು ದೇಹ ಛಿದ್ರ ಛಿದ್ರವಾಗಿದೆ. ಮೃತ ದೇಹವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಈ ಕುರಿತು ಬೈಯಪ್ಪನಹಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ಹರೀಶ್ ರಾವತ್ ಇದ್ದ ಕಾರು ಡಿವೈಡರ್‌ಗೆ ಡಿಕ್ಕಿ
ಢಾಕಾ: ಎರಡು ರೈಲುಗಳು ಡಿಕ್ಕಿ (Train Accident) ಹೊಡೆದ ಪರಿಣಾಮ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ (Bangladesh) ಭೈರಬ್‍ನಲ್ಲಿ ನಡೆದಿದೆ.
ಢಾಕಾದಿಂದ (Dhaka) ಈಶಾನ್ಯಕ್ಕೆ 60 ಕಿಮೀ ದೂರದಲ್ಲಿರುವ ಭೈರಬ್‍ನ ಪೂರ್ವ ನಗರದಲ್ಲಿ ಈ ಅಪಘಾತ ಸಂಭವಿಸಿದೆ. ಗೂಡ್ಸ್ ರೈಲು ಹಿಂದಿನಿಂದ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಎರಡು ರೈಲಿನ ಬೋಗಿಗಳು ಹಳಿ ತಪ್ಪಿವೆ. ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಮಾಸ್ ರಾಕೆಟ್ ಲಾಂಚರ್‌ಗಳು ಧ್ವಂಸ – ಇಸ್ರೇಲ್ ಬಳಸಿದ Iron Sting ಬಾಂಬ್ ಎಷ್ಟು ಪವರ್‌ಫುಲ್?
ಇದುವರೆಗೂ 20 ಶವಗಳನ್ನು ಹೊರ ತೆಗೆಯಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್ ಮಹಾಯುದ್ಧ – 30 ಪ್ಯಾಲೆಸ್ತೀನಿಯರು ಸಾವು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್ ಅನ್ನು ಪ್ರಾರಂಭಿಸುವ ಮೂಲಕ ದೇಶದ ಮೊದಲ ಇಂಟರ್‌ಸಿಟಿ ರ‍್ಯಾಪಿಡ್ ರೈಲಾದ ‘ರಾಪಿಡ್‌ಎಕ್ಸ್’ಗೆ (RAPIDX) ಚಾಲನೆ ನೀಡಲಿದ್ದಾರೆ.
ಶುಕ್ರವಾರ ಬೆಳಗ್ಗೆ 11:15ಕ್ಕೆ ದೆಹಲಿ-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನ ಮೊದಲ 17 ಕಿ.ಮೀ ದೂರದ ವಿಭಾಗವನ್ನು ಅಕ್ಟೋಬರ್ 20 ರಂದು ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ.
ಮೊದಲ ಹಂತದಲ್ಲಿ ಈ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಸೇರಿದಂತೆ 5 ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲಿವೆ. ಎನ್‌ಸಿಆರ್‌ನಲ್ಲಿ ಒಟ್ಟು 8 ಆರ್‌ಆರ್‌ಟಿಎಸ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಅವುಗಳಲ್ಲಿ 3 ಕಾರಿಡಾರ್‌ಗಳನ್ನು ಹಂತ-1 ರಲ್ಲಿ ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗಿದೆ. ಅವುಗಳೆಂದರೆ, ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್, ದೆಹಲಿ-ಗುರುಗ್ರಾಮ-ಎಸ್‌ಎನ್‌ಬಿ-ಅಲ್ವಾರ್ ಕಾರಿಡಾರ್ ಮತ್ತು ದೆಹಲಿ-ಪಾಣಿಪತ್ ಕಾರಿಡಾರ್.
ಎನ್‌ಸಿಆರ್ ಸುತ್ತಮುತ್ತಲಿನ 5 ಪಟ್ಟಣಗಳನ್ನು ಸಂಪರ್ಕಿಸುವ ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನ ಆದ್ಯತೆಯ ವಿಭಾಗವು ಸಾಹಿಬಾಬಾದ್ ನಿಲ್ದಾಣವನ್ನು ದುಹೈ ಡಿಪೋಗೆ ಸಂಪರ್ಕಿಸುತ್ತದೆ. ಮತ್ತು ಗಾಜಿಯಾಬಾದ್, ಗುಲ್ಧರ್ ಮತ್ತು ದುಹೈ ಸೇರಿದಂತೆ 3 ಇತರ ನಿಲ್ದಾಣಗಳಲ್ಲಿಯೂ ನಿಲ್ಲುತ್ತದೆ. ಸಂಪೂರ್ಣ ಕಾರಿಡಾರ್ 82 ಕಿ.ಮೀ ಉದ್ದವಿದ್ದರೆ, ಶುಕ್ರವಾರ ಉದ್ಘಾಟನೆಗೊಳ್ಳುತ್ತಿರುವ ವಿಭಾಗ 17 ಕಿ.ಮೀ ದೂರವನ್ನು ಕ್ರಮಿಸಲಿದೆ.
ಗಂಟೆಗೆ ಸುಮಾರು 160 ಕಿ.ಮೀ ವೇಗವನ್ನು ಹೊಂದಿರುವ ಈ ಕಾರಿಡಾರ್ ದೆಹಲಿಯಿಂದ ಮೀರತ್‌ಗೆ ಪ್ರಯಾಣಿಸಲು 1 ಗಂಟೆ ತೆಗೆದುಕೊಳ್ಳುತ್ತದೆ. ಈ ನಡುವೆ ನಗರ ಕೇಂದ್ರಗಳಾದ ಗಾಜಿಯಾಬಾದ್, ಮುರಾದ್‌ನಗರ ಮತ್ತು ಮೋದಿನಗರದ ಮೂಲಕ ಹಾದುಹೋಗುತ್ತದೆ.
ವಿಶೇಷತೆಯೇನು?
ಪ್ರತಿ ರ‍್ಯಾಪಿಡ್‌ಎಕ್ಸ್ ರೈಲು ಒಂದು ಪ್ರೀಮಿಯಂ ಕೋಚ್ ಅನ್ನು ಹೊಂದಿದ್ದು, ಒರಗುವ ಆಸನಗಳು, ಕೋಟ್ ಹುಕ್ಸ್, ಮ್ಯಾಗಜೀನ್ ಹೋಲ್ಡರ್‌ಗಳು ಮತ್ತು ಫುಟ್‌ರೆಸ್ಟ್ಗಳಂತಹ ವ್ಯವಸ್ಥೆಗಳನ್ನು ಹೊಂದಿದೆ. ಈ ಕೋಚ್‌ಗೆ ಪ್ಲಾಟ್‌ಫಾರ್ಮ್ನಲ್ಲಿರುವ ಪ್ರೀಮಿಯಂ ಲಾಂಜ್ ಮೂಲಕ ಮಾತ್ರ ಪ್ರವೇಶಿಸಬಹುದು. ರೈಲಿನಲ್ಲಿ ಒಂದು ಕೋಚ್ ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಕೊನೆಯ ಕೋಚ್‌ನಲ್ಲಿ ಗಾಲಿಕುರ್ಚಿಗಳು ಮತ್ತು ಸ್ಟ್ರೆಚರ್‌ಗಳನ್ನು ಇಡಲು ಸ್ಥಳವನ್ನು ಒದಗಿಸಲಾಗಿದೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಶಾಕ್ ಕೊಟ್ಟ ಮುಂಬೈ ಪೊಲೀಸರು
ಸಂಪೂರ್ಣ ಹವಾನಿಯಂತ್ರಿತ ರ‍್ಯಾಪಿಡ್‌ಎಕ್ಸ್ ರೈಲುಗಳನ್ನು ಪ್ರಾದೇಶಿಕ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದೆ. 2*2 ಅಡ್ಡ ಆಸನಗಳು, ವಿಶಾಲವಾದ ಸ್ಟ್ಯಾಂಡಿಂಗ್ ಸ್ಪೇಸ್, ಲಗೇಜ್ ರ‍್ಯಾಕ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಚಾರ್ಜಿಂಗ್ ಸೌಲಭ್ಯದಂತಹ ಫೀಚರ್‌ಗಳನ್ನು ಹೊಂದಿದೆ. ಡೈನಾಮಿಕ್ ರೂಟ್ ಮ್ಯಾಪ್‌ಗಳು, ಆಟೋ ಕಂಟ್ರೋಲ್ ಆಂಬಿಯೆಂಟ್ ಲೈಟಿಂಗ್ ಸಿಸ್ಟಮ್, ಹೀಟಿಂಗ್ ವೆಂಟಿಲೇಶನ್, ಹವಾನಿಯಂತ್ರಣ ವ್ಯವಸ್ಥೆ (HVAC) ಸೇರಿದಂತೆ ಇತರ ಸೌಕರ್ಯಗಳು ಇದರಲ್ಲಿವೆ.
ಪ್ರತಿ ರ‍್ಯಾಪಿಡ್‌ಎಕ್ಸ್ ರೈಲು 6 ಕೋಚ್‌ಗಳನ್ನು ಹೊಂದಿದ್ದು, ಸುಮಾರು 1,700 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸ್ಟ್ಯಾಂಡರ್ಡ್ ಕೋಚ್‌ನಲ್ಲಿ 72 ಸೀಟುಗಳು ಮತ್ತು ಪ್ರೀಮಿಯಂ ಕೋಚ್‌ನಲ್ಲಿ 62 ಸೀಟುಗಳಿವೆ. ಸ್ಟಾಂಡರ್ಡ್ ಕೋಚ್‌ಗಳಿಗೆ ಕನಿಷ್ಠ ದರ 20 ರೂ. ಮತ್ತು ಗರಿಷ್ಠ ದರ 50 ರೂ. ಇದ್ದು, ಪ್ರೀಮಿಯಂ ಕೋಚ್‌ಗಳಿಗೆ ಕನಿಷ್ಠ ದರ 40 ರೂ. ಮತ್ತು ಗರಿಷ್ಠ 100 ರೂ. ಇದೆ.
ಅಕ್ಟೋಬರ್ 21 ರಿಂದ ಸಾರ್ವಜನಿಕರು ರ‍್ಯಾಪಿಡ್‌ಎಕ್ಸ್ನಲ್ಲಿ ಪ್ರಯಾಣ ಮಾಡಬಹುದು. ಈ ಯೋಜನೆಯನ್ನು ಅಭಿವೃದ್ಧಿಪಡಿಸಲು 30,000 ಕೋಟಿ ರೂ. ವೆಚ್ಚವಾಗಿದೆ. ಇದರ ಸಂಪೂರ್ಣ 82 ಕಿ.ಮೀ ನ ಕಾರಿಡಾರ್ 2025 ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ
ಕೊಪ್ಪಳ: ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು (Karatagi-Yashwantpur Express Train) ಹಳಿ ತಪ್ಪಿರುವ (Derailed) ಘಟನೆ ಕೊಪ್ಪಳ (Koppala) ಜಿಲ್ಲೆಯ ಕಾರಟಗಿಯ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
ರೈಲು ಯಶವಂತಪುರದಿಂದ ಕಾರಟಗಿ ನಿಲ್ದಾಣಕ್ಕೆ ಆಗಮಿಸುವ ವೇಳೆ ಘಟನೆ ನಡೆದಿದೆ. ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಸದ್ಯ ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ಹಳಿ ತಪ್ಪಿದರೂ ಯಾವುದೇ ಪ್ರಾಣಾಪಾಯವಾಗಿಲ್ಲ. ಇದನ್ನೂ ಓದಿ: ಹಿಂದೂಗಳ ಅಂಗಡಿಗಳಲ್ಲೇ ವ್ಯಾಪಾರ ಮಾಡಿ- ವಿಹಿಂಪ, ಬಜರಂಗದಳ ಮನವಿ
ರೈಲಿನ ಎಂಜಿನ್ ಸಂಪೂರ್ಣವಾಗಿ ಹಳ್ಳಿ ತಪ್ಪಿದ್ದು, ರೈಲ್ವೆ ನಿಲ್ದಾಣ ಸಮೀಪದಲ್ಲಿ ಅದರ ಬೋಗಿಗಳು ನಿಂತಿವೆ. ರೈಲ್ವೆ ಹಳಿ ತಪ್ಪಿದ್ದರಿಂದ 2 ರೈಲ್ವೆ ಸಂಚಾರದಲ್ಲಿ ಅಡೆತಡೆ ಉಂಟಾಗಿದೆ. ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟಿಸಿದವರ ಮೇಲೆ ಕೇಸ್ ದಾಖಲು
ಮುಂಬೈ: ನ್ಯೂ ಅಷ್ಟಿಯಿಂದ (New Ashti) ಅಹಮದ್‌ನಗರಕ್ಕೆ (Ahmednagar) ತೆರಳುತ್ತಿದ್ದ ರೈಲಿನ (Train) 5 ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು (Railway Officials) ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅಲ್ಲದೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬೆಂಕಿ ಹರಡುವ ಮೊದಲು ಎಲ್ಲಾ ರೈಲು ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದರು ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಡಾ. ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ. ಇದನ್ನೂ ಓದಿ: ಮಿಷನ್ ಗಗನಯಾನ; ಅ.21 ಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ
ಪಾಟ್ನಾ: ರೈಲು ಹಳಿ ತಪ್ಪಿ (North East Express Train Derails) ಉರುಳಿದ ಪರಿಣಾಮ ನಾಲ್ವರು ಸಾವನ್ನಪ್ಪಿ, ಸುಮಾರು 80ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಬಾಸ್ಕರನಳ್ಳಿ ನಡೆದಿದೆ.
#WATCH | Bihar: Visuals from the Raghunathpur station in Buxar, where 21 coaches of the North East Express train derailed last night
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ರೈಲು ಹಳಿ ತಪ್ಪಿ 6 ಕ್ಕೂ ಹೆಚ್ಚು ಭೋಗಿಗಳು ಉರುಳಿಬಿದ್ದಿದೆ. ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‍ನಿಂದ ಅಸ್ಸಾಂನ ಕಾಮಾಖ್ಯಕ್ಕೆ ತೆರಳುತ್ತಿದ್ದ ಈಶಾನ್ಯ ಎಕ್ಸ್‍ಪ್ರೆಸ್ ರೈಲು ಬಾಸ್ಕರನ ರಘುನಾಥಪುರ (Raghunathpur station) ಬಳಿ ಹಳಿ ತಪ್ಪಿದೆ. ದುರಂತದಲ್ಲಿ 80ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಸ್ಥಳೀಯ ಅಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಡಿಸಿಎಂ ತೇಜಸ್ವಿ ಯಾದವ್ (Tejashwi Yadav) ಆಸ್ಪತ್ರೆಗೆಳು ಅಲರ್ಟ್ ಆಗಿರುವಂತೆ ಹೇಳಿದ್ದಾರೆ. ಹೆಲ್ಪ್‍ಲೈನ್ ಸಹ ನೀಡಲಾಗಿದೆ. ಈ ಸಂಬಂಧ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ, ರಕ್ಷಣಾ ಕಾರ್ಯಾಚರಣೆ ಪೂರ್ಣ ತೆರವು ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಎಲ್ಲಾ ಕೋಚ್‍ಗಳನ್ನು ಪರಿಶೀಲಿಸಲಾಗಿದೆ. ಪ್ರಯಾಣಿಕರನ್ನು ಅವರ ಮುಂದಿನ ಪ್ರಯಾಣಕ್ಕಾಗಿ ಶೀಘ್ರದಲ್ಲೇ ವಿಶೇಷ ರೈಲಿಗೆ ಸ್ಥಳಾಂತರಿಸಲಾಗುವುದು ಎಂದು ವೈಷ್ಣವ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‍ನಿಂದ ಭಾರತೀಯರನ್ನು ಕರೆತರಲು ಅಪರೇಷನ್ ಅಜಯ್ ಆರಂಭಿಸಿದ ಕೇಂದ್ರ ಸರ್ಕಾರ
ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ವೇಗಗೊಳಿಸಲು ವಿಪತ್ತು ನಿರ್ವಹಣಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ಬಕ್ಸರ್ ಮತ್ತು ಭೋಜ್‍ಪುರದ ಜಿಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ರಾಯಚೂರು: ಯಾದಗಿರಿ, ರಾಯಚೂರು, ಕಲಬುರಗಿ ಜನರ ಬಹುದಿನದ ಬೇಡಿಕೆಯಾಗಿದ್ದ ಹಜೂರ್ ಸಾಹೇಬ್ ನಾಂದೇಡ್ ಎಕ್ಸ್‌ಪ್ರೆಸ್ (Hazur Sahib Nanded Express) ರೈಲು ಇಂದಿನಿಂದ ಸಂಚಾರ ಆರಂಭಿಸಿದೆ.
ಈ ರೈಲು ಪರಿಭಣಿ, ನಾಂದೇಡ್, ಸೇಡಂ ಮಾರ್ಗವಾಗಿ ರಾಯಚೂರಿಗೆ ಬರಲಿದೆ. ರಾಯಚೂರಿನಿಂದ ಮಧ್ಯಾಹ್ನ 3:30ಕ್ಕೆ ಯಾದಗಿರಿ ಮಾರ್ಗವಾಗಿ ಮರುದಿನ ಬೆಳಿಗ್ಗೆ 6:30ಕ್ಕೆ ನಾಂದೇಡ್ ಮೂಲಕ ಪರಭಣಿ ತಲುಪುತ್ತದೆ. ಈ ರೈಲು ನಿತ್ಯ ಓಡಾಡಲಿದ್ದು ರಾಯಚೂರು, ಯಾದಗಿರಿಯಿಂದ ಮಹಾರಾಷ್ಟ್ರ, ತೆಲಂಗಾಣಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ಮಹಿಷ ದಸರಾ, ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮಗಳಿಗೆ ಬ್ರೇಕ್
ತುಮಕೂರು: ಸಾಲಬಾಧೆ (Indebtedness) ತಾಳಲಾರದೇ ಒಂದೇ ಕುಟುಂಬದ ಮೂವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು (Tumakuru) ತಾಲೂಕಿನ ಪಂಡಿತನಹಳ್ಳಿಯ ರೈಲ್ವೆಗೇಟ್ ಬಳಿ ನಡೆದಿದೆ.
ಸಿದ್ದಗಂಗಯ್ಯ (62), ಸುನಂದಮ್ಮ ಹಾಗೂ ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ತುಮಕೂರಿನ ಮರಳೂರು ನಿವಾಸಿಯಾಗಿದ್ದ ಸಿದ್ದಗಂಗಯ್ಯ, ಕಳೆದ ಎರಡು ವರ್ಷಗಳ ಹಿಂದೆ ಕೆಇಬಿಯಲ್ಲಿ (KEB) ನಿವೃತ್ತಿ ಹೊಂದಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೇ ಬೆಂಗಳೂರಿನ ಮಲ್ಲೇಶ್ವರಂ (Malleshwaram) ಬಳಿಯಿರುವ ಕೆಸಿ ಜನರಲ್ ಆಸ್ಪತ್ರೆ (KC General Hospital) ಬಳಿ ಟೀ ಶಾಪ್ ಇಟ್ಟುಕೊಂಡು ಸಾಲ ತೀರಿಸಲು ದುಡಿಯುತ್ತಿದ್ದರು. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ – 35 ಜನ ಪೊಲೀಸ್ ವಶಕ್ಕೆ
ಆದರೂ ಸಾಲ ಮಿತಿ ಮೀರಿದ್ದರಿಂದ ಮನನೊಂದು ಸೋಮವಾರ ಬೆಳಗ್ಗಿನ ಜಾವ ಆಟೋದಲ್ಲಿ ಬಂದು ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಪರಿಣಾಮ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹಗಳು ರವಾನೆಯಾಗಿದ್ದು, ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಖ್ಯಾತ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ