Tag: train

  • 500 ಮೀಟರ್ ಓಡಿ ರೈಲ್ವೆ ದುರಂತ ತಪ್ಪಿಸಿದ ನಿರ್ವಾಹಕ

    500 ಮೀಟರ್ ಓಡಿ ರೈಲ್ವೆ ದುರಂತ ತಪ್ಪಿಸಿದ ನಿರ್ವಾಹಕ

    ಕಾರವಾರ: ರೈಲ್ವೆ ನಿರ್ವಾಹಕರೊಬ್ಬರು ಹಳಿಯ ಮೇಲೆ ಐದು ನಿಮಿಷದಲ್ಲಿ 500 ಮೀಟರ್ ಓಡಿ ರೈಲ್ವೆ ದುರಂತವೊಂದನ್ನು ತಪ್ಪಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆದಿದೆ.

    ಭಟ್ಕಳದ ಮಾಧವ ನಾಯ್ಕ ರೈಲು ದುರಂತ ತಪ್ಪಿಸಿದ ರೈಲ್ವೆ ನಿರ್ವಾಹಕ. ಕೊಂಕಣ ರೈಲ್ವೆ ಮಾರ್ಗದ ಕುಮಟಾ-ಹೊನ್ನಾವರ ನಡುವಿನ ಹಳಿಯ ವೆಲ್ಡಿಂಗ್ ಬಿಟ್ಟಿತ್ತು. ಇದರಿಂದ ಇದೇ ಮಾರ್ಗದಲ್ಲಿ ಬರುವ ರಾಜಧಾನಿ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ ದುರಂತವಾಗುವ ಸಾಧ್ಯತೆ ಇತ್ತು. ಇದನ್ನೂ ಓದಿ: ಮಡಿಕೇರಿಯಲ್ಲಿ ಶ್ರೀಮಂತ ಗಣಪ ಮತ್ತಷ್ಟು ಸಿರಿವಂತ!

    ರಾತ್ರಿ ಕರ್ತವ್ಯದಲ್ಲಿದ್ದ ರೈಲ್ವೆ ನಿರ್ವಾಹಕ ಮಾಧವ ನಾಯ್ಕ, ಹಳಿ ಪರಿಶೀಲನೆ ಮಾಡುವಾಗ ಹಳಿಯ ವೆಲ್ಡಿಂಗ್ ಬಿಟ್ಟಿರುವುದು ಪತ್ತೆಯಾಗಿತ್ತು. ಸ್ಟೇಶನ್ ಮಾಸ್ಟರ್‌ಗೆ ಕರೆ ಮಾಡಿದ್ದರೂ ಸಂಪರ್ಕ ಸಾಧ್ಯವಾಗಿರಲಿಲ್ಲ. ಹೀಗಾಗಿ ನಿರ್ವಾಹಕ ಕೆಂಪು ದೀಪ ಹಿಡಿದು ಹಳಿ ಮೇಲೆ 500 ಮೀಟರ್ ದೂರದವರೆಗೆ ಓಡಿ ಹೊನ್ನಾವರದಿಂದ ಕಾರವಾರದತ್ತ ಬರುತಿದ್ದ ರೈಲಿಗೆ ಕೆಂಪು ದೀಪ ತೋರಿಸಿ ರೈಲನ್ನು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ನಾನು ಸಿಎಂ‌ ಆಗ್ತೀನಿ, ಸೀನಿಯಾರಿಟಿ ಬೇಕಿಲ್ಲ: ಎಂ.ಬಿ ಪಾಟೀಲ್‌

  • ಮತ್ತು ಬರುವ ಔಷಧಿ ನೀಡಿ ಮಗುವಿನ ಅಪಹರಣ – ಕಲಬುರಗಿ ದಂಪತಿ ಬಂಧನ

    ಮತ್ತು ಬರುವ ಔಷಧಿ ನೀಡಿ ಮಗುವಿನ ಅಪಹರಣ – ಕಲಬುರಗಿ ದಂಪತಿ ಬಂಧನ

    – ಆತ್ಮೀಯತೆ ಬೆಳಸಿಕೊಂಡು ಬಿಸ್ಕೆಟ್ ಕೊಟ್ಟಿದ ದಂಪತಿ
    – ಮಗುವಿನ ತಂದೆ, ತಾಯಿ ಮಲಗಿದಾಗ ಮಗು ಕದ್ದು ಪರಾರಿ

    ರಾಯಚೂರು: ಮತ್ತು ಬರುವ ಔಷಧಿ ನೀಡಿ 3 ವರ್ಷದ ಮಗುವನ್ನು ಕದ್ದು ಪರಾರಿಯಾಗಿದ್ದ ದಂಪತಿಯನ್ನು ಬಂಧಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕದ್ದ ಮಗುವನ್ನು ರಾಯಚೂರು (Raichuru) ಜಿಲ್ಲೆಯ ದೇವದುರ್ಗದ (Devadurga) ಬಂಡೆಗುಡ್ಡ ತಾಂಡಾದ ಪ್ರಕಾಶ್ ಹಾಗೂ ಹಂಪಮ್ಮ ದಂಪತಿಯ ಮಗು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾ ಮಂದಿರಕ್ಕೆ ಚಾಲನೆ – ಬನ್ನಿ PG ಕಾಲೇಜ್‌, ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಿ

    ರಾಯಚೂರಿನಿಂದ ಬೆಂಗಳೂರಿಗೆ ಉದ್ಯಾನ ಎಕ್‌ಪ್ರೆಸ್ (Udyan Express) ರೈಲಿನಲ್ಲಿ ದಂಪತಿ ತಮ್ಮ ಎರಡು ಮಕ್ಕಳೊಂದಿಗೆ ಗುಳೆ ಹೊರಟಿದ್ದರು. ಅದೇ ರೈಲಿನಲ್ಲಿ ಕಲಬುರಗಿ (Kalaburagi) ಮೂಲದ ರೂಪೇಶ್ ಹಾಗೂ ಕುಸುಮ ದಂಪತಿ ಪ್ರಯಾಣಿಸುತ್ತಿದ್ದರು. ರೂಪೇಶ್ ಮತ್ತು ಕುಸುಮ ಪಕ್ಕದ ಸೀಟಿನಲ್ಲಿ ಕುಳಿತು ಮಗುವಿನೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಬಿಸ್ಕೆಟ್ ಕೊಟ್ಟಿದ್ದರು. ರಾತ್ರಿ ಮಗುವಿನ ತಂದೆ, ತಾಯಿ ಮಲಗಿದಾಗ ಆಂಧ್ರಪ್ರದೇಶದ ಅನಂತಪುರ ರೈಲು ನಿಲ್ದಾಣದಲ್ಲಿ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದರು. ಅಲ್ಲಿಂದ ಮಗುವನ್ನು ಬಸ್ಸಿನಲ್ಲಿ ಮಂತ್ರಾಲಯಕ್ಕೆ (Mantralaya) ಕರೆದೊಯ್ದು ಕೂದಲು ಕತ್ತರಿಸಿದ್ದರು. ಬಳಿಕ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಗುವಿನೊಂದಿಗೆ ಓಡಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ.

    ವಿಚಾರಣೆ ನಡೆಸಿದಾಗ 22 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮಕ್ಕಳಾಗದ ಹಿನ್ನೆಲೆ ಮಗು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದ್ದರಿಂದ ಸಹ ಪ್ರಯಾಣಿಕನಿಗೆ ದತ್ತು ತೆಗೆದುಕೊಳ್ಳಲು ಮಗು ಸಿಕ್ಕರೆ ತಿಳಿಸಿ ಎಂದು ಮೊಬೈಲ್ ನಂಬರ್ ಕೂಡ ಕೊಟ್ಟಿದ್ದರು. ಮೊಬೈಲ್ ನಂಬರ್ ಟ್ರೇಸ್ ಮಾಡಿದಾಗ ದಂಪತಿಯಿರುವ ಜಾಗ ತಿಳಿದು ಬಂದಿದೆ. ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಗುವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಇದನ್ನೂ ಓದಿ: ದರೋಡೆಗೆ ಹೋಗಿ ನೇಪಾಳಿ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಂದ ಭಾರತೀಯ ಮೂಲದ ವ್ಯಕ್ತಿ

    ಮಗುವಿಗೆ ಮತ್ತು ಬರುವ ಔಷಧಿ ನೀಡಿ ಕರೆದೊಯ್ದಿರುವ ಶಂಕೆಯಿದ್ದು, ಈ ಸಂಬಂಧ ಆಂಧ್ರಪ್ರದೇಶದ ಅನಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರೈಲು ಹಳಿಗಳ ಮೇಲೆ ಮರದ ದಿಮ್ಮಿ – ರೈತ ಮುಖಂಡನ ಪುತ್ರ, ಸ್ನೇಹಿತ ಅರೆಸ್ಟ್

    ರೈಲು ಹಳಿಗಳ ಮೇಲೆ ಮರದ ದಿಮ್ಮಿ – ರೈತ ಮುಖಂಡನ ಪುತ್ರ, ಸ್ನೇಹಿತ ಅರೆಸ್ಟ್

    ಲಕ್ನೋ: ಉತ್ತರಪ್ರದೇಶದಲ್ಲಿ (Uttarpradesh) ರೈಲು ಹಳಿಗಳ ಮೇಲೆ ಮರದ ದಿಮ್ಮಿ ಹಾಕಿ ಕೃತ್ಯವೆಸಗಲು ಮುಂದಾದ ರೈತ ಮುಖಂಡನ ಪುತ್ರ ಹಾಗೂ ಸ್ನೇಹಿತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ರೈಲು ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಹಾಕಿ ಹಳಿ ತಪ್ಪಿಸಲು ಯತ್ನಿಸಿದಾಗ ಲೋಕೋ ಪೈಲೆಟ್  ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುವ ಮೂಲಕ ದುರಂತವನ್ನು ಸಂಭವಿಸುವುದನ್ನು ತಪ್ಪಿಸಿದ್ದಾರೆ. ಇದನ್ನೂ ಓದಿ: ರಾಜ ಎಲ್ಲಿದರೂ ರಾಜನೇ ಅಂತ ಘೋಷಣೆ- ದರ್ಶನ್‌ ನೋಡಲು ಮುಗಿಬಿದ್ದ ಫ್ಯಾನ್ಸ್‌

    ಇಪ್ಪತ್ತು ವರ್ಷದ ದೇವ್ ಸಿಂಗ್ ಹಾಗೂ ಫರೂಕಾಬಾದ್ ಅರಿಯಾರಾ ಗ್ರಾಮದ ಮೊಹನ್ ಕುಮಾರ್ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ದೇವ್ ಸಿಂಗ್‌ನ ತಂದೆ ಕಮಲೇಶ್ ರೈತ ಮುಖಂಡ. ಇದನ್ನೂ ಓದಿ: ಇಂದಿನಿಂದ 5 ದಿನಗಳ ಕಾಲ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತ

    ವಿಚಾರಣೆಯ ವೇಳೆ ತಮ್ಮ ಹೆಸರು ಹೆಚ್ಚು ಪ್ರಸಿದ್ಧಿ ಪಡೆಯುತ್ತದೆ ಎಂಬ ಕಾರಣಕ್ಕಾಗಿ ಹೀಗೆ ಕೃತ್ಯವೆಸಗಿರುವುದಾಗಿ ಹೇಳಿದ್ದಾರೆ ಎಂದು ಕಾಯಮ್ ಗಂಜ್ ಪೊಲೀಸ್ ಅಧಿಕಾರಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಮೂವರು ಭಯೋತ್ಪಾದಕರ ಹತ್ಯೆ

    ಈ ಘಟನೆಯ ಬಗ್ಗೆ ಭಾರತೀಯ ರೈಲ್ವೇ ಉದ್ಯೋಗಿ ಜಮೀರ್ ಅಹ್ಮದ್ ಖಾನ್ ಆಗಸ್ಟ್ 24 ರಂದು ದೂರು ನೀಡಿದ್ದು, ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: 10 ದಿನಗಳಲ್ಲಿ ಎತ್ತಿನಹೊಳೆ ಯೋಜನೆ ಉದ್ಘಾಟನೆಗೆ ಸಿಎಂ ಬಳಿ ಚರ್ಚಿಸಿ ನಿರ್ಧಾರ: ಡಿಕೆಶಿ

    ಅಪರಾಧ ಮಾಡಿರುವ ವ್ಯಕ್ತಿಗಳು ತನಿಖೆಯ ವೇಳೆ, ತಾವು ಶನಿವಾರ ರಾತ್ರಿ ಆ ಪ್ರದೇಶದಲ್ಲಿ ಯಾರು ಇಲ್ಲದ ಸಮಯದಲ್ಲಿ ಪಕ್ಕದಲ್ಲಿದ್ದ ಗದ್ದೆಯಿಂದ ಮರದ ದಿಮ್ಮಿಗಳನ್ನು ತಂದು 80 ಮೀಟರ್ ದೂರದಲ್ಲಿರುವು ರೈಲು ಹಳಿಗಳ ಮೇಲೆ ಹಾಕಿರುವುದಾಗಿ ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 53 ಎಫ್‌ಎಂ ಸ್ಥಾಪನೆಗೆ ಅನುಮತಿ – ಯಾವ ನಗರಗಳಲ್ಲಿ ಬರಲಿದೆ?

    ಆರೋಪಿ ಸಿಂಗ್ ಹಾಗೂ ಕುಮಾರ್ ರೈತರಾಗಿದ್ದು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 327 ಮತ್ತು ರೈಲ್ವೇ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೈಯಲ್ಲಿ ಬೆಡ್‌ ಶೀಟ್‌ ಹಿಡ್ಕೊಂಡು ಬಳ್ಳಾರಿ ಜೈಲಿಗೆ ಆಗಮಿಸಿದ ದರ್ಶನ್‌

  • ಮದ್ಯದ ಅಮಲಿನಲ್ಲಿ ಹಳಿ ಮೇಲೆ ಮಲಗಿದ ಯುವಕರು; ರೈಲು ಹರಿದು ಮೂವರ ದುರ್ಮರಣ

    ಮದ್ಯದ ಅಮಲಿನಲ್ಲಿ ಹಳಿ ಮೇಲೆ ಮಲಗಿದ ಯುವಕರು; ರೈಲು ಹರಿದು ಮೂವರ ದುರ್ಮರಣ

    ಕೊಪ್ಪಳ: ಮದ್ಯದ ಅಮಲಿನಲ್ಲಿ ಹಳಿ ಮೇಲೆ ಮಲಗಿದ್ದ ಯುವಕರ ಮೇಲೆ ರೈಲು (Train) ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಪ್ಪಳದ (Koppal) ಗಂಗಾವತಿ (Gangavati) ನಗರದಲ್ಲಿ ನಡೆದಿದೆ.

    ಮೃತರನ್ನು ಗಂಗಾವತಿಯ ಹಿರೇಜಂತಕಲ್‌ನ ಸುನೀಲ್ (23), ವೆಂಕಟ ಭೀಮನಾಯ್ಕ (20) ಹಾಗೂ ಇಲಾಯಿ ಕಾಲೋನಿಯ ಮೌನೇಶ್ ಪತ್ತಾರ (23) ಎಂದು ಗುರುತಿಸಲಾಗಿದೆ. ಗುರುವಾರ ತಡರಾತ್ರಿ ಮೂವರು ಯುವಕರು ರೈಲ್ವೆ ಹಳಿ ಮೇಲೆ ಮದ್ಯಸೇವನೆ ಮಾಡಿ ಅಮಲಿನಲ್ಲಿ ಹಳಿ ಮೇಲೆಯೇ ಮಲಗಿದ್ದರು. ಇದನ್ನೂ ಓದಿ: ಮಳೆಯ ಆರ್ಭಟ – ಕೆಆರ್‌ಎಸ್‌ನಿಂದ ಯಾವುದೇ ಕ್ಷಣದಲ್ಲಾದರೂ ಕಾವೇರಿ ನದಿಗೆ ನೀರು!

    ಇದೇ ಸಮಯಕ್ಕೆ ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುವ ರೈಲು ಯುವಕರ ಮೇಲೆ ಹರಿದು ಹೋಗಿದೆ. ಈ ಪರಿಣಾಮ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇದೇನು ವಿಧಾನಸಭೆಯಾ, ನಿಮ್ಹಾನ್ಸಾ? – ಹಾಡು ಹೇಳಿದ ಬಿಜೆಪಿ ಶಾಸಕರ ವಿರುದ್ಧ ಸ್ಪೀಕರ್ ಗರಂ

  • ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್‌ನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ – ಓರ್ವ ಸಾವು, ನಾಲ್ವರು ಗಂಭೀರ

    ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್‌ನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ – ಓರ್ವ ಸಾವು, ನಾಲ್ವರು ಗಂಭೀರ

    ಬೆಳಗಾವಿ: ಟಿಕೆಟ್ (Ticket) ಕೇಳಿದಾಗ ಮುಸುಕುಧಾರಿಯೊಬ್ಬ ಐವರಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್ (Pondicherry-Mumbai Chalukya Express) ರೈಲಿನಲ್ಲಿ (Train) ನಡೆದಿದೆ.

    ಘಟನೆಯಲ್ಲಿ ಝಾನ್ಸಿ (Jhansi) ಮೂಲದ ಟ್ರೇನ್ ಅಟೆಂಡರ್ ದೇವಋಷಿ ವರ್ಮಾ (23) ಸಾವನ್ನಪ್ಪಿದ್ದು, ನಾಲ್ವರು ತೀವ್ರ ಗಾಯಗೊಂಡಿದ್ದಾರೆ. ಬೆಳಗಾವಿಯ (Belagavi) ಖಾನಾಪುರ ತಾಲೂಕಿನ ಲೊಂಡಾ ಬಳಿ ಘಟನೆ ನಡೆದಿದ್ದು, ಟಿಕೆಟ್ ಕೇಳಿದಾಗ ಚೂರಿ ಇರಿದು ಆಗಂತುಕ ಪರಾರಿಯಾಗಿದ್ದಾನೆ. ನಾಲ್ವರು ಪ್ರಯಾಣಿಕರು ಸೇರಿ ಟಿಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅಪರಿಚಿತ ಮುಸುಕುಧಾರಿಯಿಂದ ಕೃತ್ಯ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ – ಮೇ ತಿಂಗಳಲ್ಲೇ 172 ಕೇಸ್‌ ದಾಖಲು!

    ಕೃತ್ಯ ಎಸಗಿ ಅಪರಿಚಿತ ಮುಸುಕುಧಾರಿ ಪರಾರಿಯಾಗಿದ್ದು, ಟಿ.ಸಿ ಸೇರಿ ನಾಲ್ವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲುಕ್ಯ ರೈಲು ಧಾರವಾಡದಿಂದ ಬೆಳಗಾವಿಯತ್ತ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಪತ್ನಿಯನ್ನು ಕಾಡಿಗೆ ಕರೆದೊಯ್ದು ಮೊಣಕಾಲುಗಳಿಗೆ ಸುತ್ತಿಗೆಯಿಂದ ಹಲ್ಲೆಗೈದು, ಮಚ್ಚು ಬೀಸಿದ ಪತಿ!

  • ನೆಲಮಂಗಲ: ರೈಲು ಹರಿದು 40 ಕ್ಕೂ ಹೆಚ್ಚು ಕುರಿಗಳ ದಾರುಣ ಸಾವು

    ನೆಲಮಂಗಲ: ರೈಲು ಹರಿದು 40 ಕ್ಕೂ ಹೆಚ್ಚು ಕುರಿಗಳ ದಾರುಣ ಸಾವು

    ನೆಲಮಂಗಲ: ರೈಲು ಹರಿದು 40 ಕ್ಕೂ ಹೆಚ್ಚು ಕುರಿಗಳು ದಾರುಣ ಸಾವನ್ನಪ್ಪಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಪೆಮ್ಮನಹಳ್ಳಿಯಲ್ಲಿ ನಡೆದಿದೆ.

    ಶಿರಾ ಮೂಲದ ರೈತ ನಾಗರಾಜು ವಲಸೆ ಬಂದು ಕುರಿಗಳನ್ನು ಮೇಯಿಸುತ್ತಿದ್ದರು. ಮಳೆ ಜೋರಾದ ಸಮಯದಲ್ಲಿ ರೈಲ್ವೆ ಹಳಿ ಕಡೆ ಕುರಿ ಮಂದೆ ನುಗ್ಗಿದೆ. ಆಗ ಬೆಂಗಳೂರು ಮಾರ್ಗವಾಗಿ ತುಮಕೂರು ಕಡೆ ಪ್ರಯಾಣಿಸುತ್ತಿದ್ದ ರೈಲು ಕುರಿ ಮಂದೆ ಮೇಲೆ ರೈಲು ಹರಿದಿದೆ. ಇದನ್ನೂ ಓದಿ: ಇಬ್ಬರು ಬಾಲಕಿಯರ ರೇಪ್ – ಮೂವರು ಅಪ್ರಾಪ್ತರು ಸೇರಿ 6 ಮಂದಿ ಅರೆಸ್ಟ್

    ರೈಲು ಹರಿದ ಪರಿಣಾಮವಾಗಿ 40 ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿವೆ. ಇದರಿಂದ ರೈತ ಕಂಗಾಲಾಗಿದ್ದಾನೆ. ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯ ಜನರ ನಡುವೆ ವಾಕ್ ಸಮರ ನಡೆಯಿತು.

    ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಎಣ್ಣೆ ಸಾಲ ಕೊಡದಿದ್ದಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ – ಆರೋಪಿ ಅರೆಸ್ಟ್

  • ಚಲಿಸುತ್ತಿದ್ದ ರೈಲಿನಲ್ಲೇ ಪತ್ನಿಗೆ ತಲಾಕ್ ನೀಡಿ ಪರಾರಿಯಾದ ಟೆಕ್ಕಿ

    ಚಲಿಸುತ್ತಿದ್ದ ರೈಲಿನಲ್ಲೇ ಪತ್ನಿಗೆ ತಲಾಕ್ ನೀಡಿ ಪರಾರಿಯಾದ ಟೆಕ್ಕಿ

    -ಸಿಎಂ ಯೋಗಿಯ ಸಹಾಯ ಕೇಳಿದ ಮಹಿಳೆ

    ಲಕ್ನೋ: ಚಲಿಸುತ್ತಿದ್ದ ರೈಲಿನಲ್ಲಿ (Train) ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತಲಾಖ್ (Triple Talaq) ನೀಡಿ ಪರಾರಿಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ.

    ಮೊಹಮ್ಮದ್ ಅರ್ಷದ್ (28) ಎಂಬಾತ ತನ್ನ ಪತ್ನಿ ಅಫ್ಸಾನಾ (26) ಜೊತೆ ಪ್ರಯಾಣಿಸುತ್ತಿದ್ದಾಗ ತಲಾಕ್ ನೀಡಿದ್ದಾನೆ. ಬಳಿಕ ಆಕೆಗೆ ಥಳಿಸಿ, ರೈಲು ಝಾನ್ಸಿ ಜಂಕ್ಷನ್‍ಗೆ ತಲುಪುತ್ತಿದ್ದಂತೆ ರೈಲಿನಿಂದ ಇಳಿದು ಪರಾರಿಯಾಗಿದ್ದಾನೆ. ಏಪ್ರಿಲ್ 29 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಅರ್ಷದ್, ಭೋಪಾಲ್‍ನ ಖಾಸಗಿ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿ (Techie) ಕೆಲಸ ಮಾಡುತ್ತಿದ್ದ. ಅಫ್ಸಾನಾ ಹಾಗೂ ಅರ್ಷದ್ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ ಪರಿಚಯವಾಗಿದ್ದು, ಈ ವರ್ಷ ಜನವರಿ 12 ರಂದು ಇಬ್ಬರು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

    ಕಳೆದ ವಾರ ದಂಪತಿ ಪುಖ್ರಾಯನ್‍ನಲ್ಲಿರುವ ಅರ್ಷದ್‍ನ ಸಂಬಂಧಿಯೊಬ್ಬರ ಮನೆಗೆ ಮನೆಗೆ ಭೇಟಿ ನೀಡಿದಾಗ, ಆತನಿಗೆ ಈಗಾಗಲೇ ಮದುವೆಯಾಗಿರುವುದು ತಿಳಿದು ಆಕೆ ಆಘಾತಕ್ಕೊಳಗಾಗಿದ್ದಾಳೆ. ಬಳಿಕ ಇಬ್ಬರ ನಡುವೆ ಗಲಾಟೆಯಾಗಿದೆ. ಮರಳಿ ಬರುವಾಗ ಇದೇ ವಿಚಾರಕ್ಕೆ ಆತ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ತಲಾಕ್ ನೀಡಿ ಮಹಿಳೆಗೆ ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

    ಈ ವಿಚಾರವಾಗಿ ಅಫ್ಸಾನಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಸಹಾಯ ಕೇಳಿದ್ದು, ಮಹಿಳೆಯರಿಗೆ ವಂಚಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.

    ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ರೈಲಿಗೆ ಸಿಲುಕಿ ಮೂವರು ಯುವಕರ ದಾರುಣ ಸಾವು

    ರೈಲಿಗೆ ಸಿಲುಕಿ ಮೂವರು ಯುವಕರ ದಾರುಣ ಸಾವು

    ಬೆಂಗಳೂರು: ಮೂವರು ಯುವಕರು ರೈಲಿಗೆ (Train) ಸಿಲುಕಿ ಸಾವಿಗೀಡಾದ ದಾರುಣ ಘಟನೆ ಮಾರತ್ತಹಳ್ಳಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

    ಮೃತರನ್ನು ಆಂಧ್ರಪ್ರದೇಶದ ಚಿತ್ತೂರು ಮೂಲದ ಶಶಿಕುಮಾರ್ (23) ಲೋಕೇಶ್ (25) ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಸಾರ್ವಜನಿಕರು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರಿಗೆ (Byappanahalli Police) ಯುವಕರ ಮೃತದೇಹ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವಘಡದಲ್ಲಿ ಸಾವಿಗೀಡಾದ ಮತ್ತೋರ್ವನ ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನೇಹಾ ಕೊಲೆ ಆರೋಪಿಗೆ ಘೋರ ಶಿಕ್ಷೆ ಕೊಡಿಸುತ್ತೇವೆ: ಸಿದ್ದರಾಮಯ್ಯ

    ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಭೂಕುಸಿತ- ಕೊಚ್ಚಿ ಹೋಯ್ತು ಚೀನಾ ಗಡಿ ಸಂಪರ್ಕಿಸೋ ಹೆದ್ದಾರಿ

  • ತಡರಾತ್ರಿ ಭೀಕರ ರೈಲು ಅಪಘಾತ- ಇಬ್ಬರ ದುರ್ಮರಣ

    ತಡರಾತ್ರಿ ಭೀಕರ ರೈಲು ಅಪಘಾತ- ಇಬ್ಬರ ದುರ್ಮರಣ

    ರಾಂಚಿ: ಜಾರ್ಖಂಡ್‍ನ ಜಮ್ತಾರಾ (Jamtara Train) ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಈ ಕುರಿತು ರೈಲ್ವೆ ಇಲಾಖೆ ಖಚಿತಪಡಿಸಿದೆ. ಸಾವನ್ನಪ್ಪಿದ ಇಬ್ಬರು ಪ್ರಯಾಣಿಕರಲ್ಲ, ಅವರು ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದವರು ಎಂದಿದೆ. ವಿದ್ಯಾಸಾಗರ್ ಕಾಸಿತಾರ್ ನಡುವೆ ಹಾದುಹೋಗುವ ರೈಲು ಸಂಖ್ಯೆ 12254 7 ಗಂಟೆಗೆ ER ನ ಅಸನ್ಸೋಲ್ ವಿಭಾಗದಲ್ಲಿ ನಿಂತಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಇಬ್ಬರು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪ್ ಲೈನ್‌ನಲ್ಲಿ ಮೆಮು ರೈಲು ಡಿಕ್ಕಿ ಹೊಡೆದಿದೆ. ಈ ಕುರಿತು ತನಿಖೆ ನಡೆಸಲು ಜೆಎಜಿಯ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ.

    ಘಟನೆ ಸಂಬಂಧ ಜಮ್ತಾರಾದ ಎಸ್‌ಡಿಎಂ ಅನಂತ್‌ಕುಮಾರ್‌ ಮಾತನಾಡಿ, ಕಲಾಜಾರಿಯಾ ರೈಲ್ವೆ ಗೇಟ್‌ ಬಳಿ ಪ್ಯಾಸೆಂಜರ್‌ ರೈಲು ನಿಂತಿತ್ತು. ಕೆಲ ಪ್ರಯಾಣಿಕರು ಇಳಿದು ಹೋಗಿದ್ದು, ಈ ಮಧ್ಯೆ ಅವರು ಸಾಗುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಕೆಲವರು ಗಾಯಗೊಂಡಿರುವ ಮಾಹಿತಿ ಲಭಿಸಿದೆ. ಕೂಡಲೇ ಶೋಧ ಕಾರ್ಯಾಚರಣೆ ನಡೆಸಿದ್ದು, ಇಲ್ಲಿಯವರೆಗೆ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸಹಾಯವಾಣಿ ಸಂಖ್ಯೆ ನೀಡುವಂತೆ ನಾವು ರೈಲ್ವೆಗೆ ಮನವಿ ಮಾಡಿದ್ದೇವೆ. ಗಾಯಾಳುಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ ಎಂದರು.

    ಕಾಂಗ್ರೆಸ್ ಶಾಸಕ ಹೇಳಿದ್ದೇನು?: ಈ ಘಟನೆ ಕುರಿತು ಮಾತನಾಡಿದ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ, ನನ್ನ ವಿಧಾನಸಭಾ ಕ್ಷೇತ್ರ ಜಮ್ತಾರಾ ಬಳಿಯ ಕಾಸಿಯತಾರ್ ಹಾಲ್ಟ್ ಬಳಿ ರೈಲು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅನೇಕರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಇದು ದೊಡ್ಡ ಘಟನೆಯಾಗಿದ್ದು, ನಾನು ಜಮ್ತಾರಾಕ್ಕೆ ಹೊರಡುತ್ತಿದ್ದೇನೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಜಿಲ್ಲಾಡಳಿತ ಮತ್ತು ರೈಲ್ವೆ ಆಡಳಿತದೊಂದಿಗೆ ಮಾತನಾಡಿ ಜನರಿಗೆ ಸಹಾಯ ಮಾಡುವಂತೆ ಕೋರಿದ್ದೇನೆ. ಈ ಘಟನೆ ಹೇಗಾಯಿತು ಎಂದು ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದರು.

    ಇತ್ತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಾರ್ಖಂಡ್ ರೈಲು ಅಪಘಾತದಲ್ಲಿ ಜೀವಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.

  • ರಾಮಭಕ್ತರಿದ್ದ ರೈಲಿಗೆ ಬೆಂಕಿ ಹಚ್ತೀನಿ- ಓರ್ವ ವಶಕ್ಕೆ

    ರಾಮಭಕ್ತರಿದ್ದ ರೈಲಿಗೆ ಬೆಂಕಿ ಹಚ್ತೀನಿ- ಓರ್ವ ವಶಕ್ಕೆ

    ಗದಗ: ಅಯೋಧ್ಯೆ (Ayodhya Ram Mandir) ಧಾಮ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಮೇರೆಗೆ ಗದಗ ನಿಲ್ದಾಣದಲ್ಲಿ ಓರ್ವನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಅನ್ಯಕೋಮಿನ ನಾಲ್ವರು ಯುವಕರು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ನಡೆದಿದ್ದೇನು..?: ಅಯೋಧ್ಯೆ ಧಾಮ ಟ್ರೈನ್ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅನ್ಯಕೋಮಿನ ಯುವಕನೊಬ್ಬ ಟ್ರೈನ್‍ಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಚೈನ್ ಎಳೆದ ಕಾರಣ ರೈಲು ಸುಮಾರು 2 ಗಂಟೆಗಳ ಕಾಲ ತಡವಾಗಿ ಚಲಿಸಿದೆ. ಇದನ್ನೂ ಓದಿ: ಬೆಂಕಿ ಹಚ್ಚುತ್ತೇನೆಂದು ಅನ್ಯಕೋಮಿನ ಯುವಕನಿಂದ ಬೆದರಿಕೆ; ಮೈಸೂರು-ಅಯೋಧ್ಯೆ ರೈಲು 2 ಗಂಟೆ ಸ್ಥಗಿತ!

    ಮೈಸೂರು- ಅಯೋಧ್ಯೆ ಧಾಮ ರೈಲಿನಲ್ಲಿ (Mysuru- Ayodhya Train) 1500 ರಾಮ ಭಕ್ತರು ಪ್ರಯಾಣ ಮಾಡುತ್ತಿದ್ದರು. ಈ ವೇಳೆಯಲ್ಲಿ ರಾಮ ಭಕ್ತರು ಮಾರ್ಗದುದ್ದಕ್ಕೂ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ, ಸುಮಾರು 4 ಜನ ಅನ್ಯ ಕೋಮಿನ ಯುವಕರು ರಾಮ ಭಕ್ತರ ಜೊತೆಯಲ್ಲಿ ವಾಗ್ವಾದ ಆರಂಭ ಮಾಡಿದ್ದಾರೆ. ಈ ವೇಳೆಯಲ್ಲಿ ಹಿಂದೂ ಹಾಗೂ ಅನ್ಯಕೋಮಿನ ಯುವಕನ ಜೊತೆಯಲ್ಲಿ ವಾಗ್ವಾದ ಆರಂಭವಾಗಿದೆ. ಹಿಂದೂ ಕಾರ್ಯಕರ್ತರು ಹಾಗೂ ಅನ್ಯಕೋಮಿನ ಯುವಕರು ಪದೇ ಪದೇ ಚೈನ್ ಎಳೆದ ಕಾರಣ ಟ್ರೈನ್ ಮುಂದೆ ಸಾಗಲು ತೊಂದರೆಯಾಗಿದೆ.

    ಹಿಂದೂಪರ ಕಾರ್ಯಕರ್ತರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ ಆರಂಭ ಮಾಡುತ್ತಿದ್ದಂತೆಯೇ ಅಲ್ಲಿಂದ ಅನ್ಯಕೋಮಿನ ಯುವಕರು ಪರಾರಿಯಾಗಿದ್ದಾರೆ. ಇದರಿಂದ ಕೆರಳಿದ ರಾಮ ಭಕ್ತರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲು ಆರಂಭ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮುನ್ನವೇ ಸ್ಥಳಕ್ಕೆ ಆಗಮಿಸಿದ ಎಸ್‍ಪಿ ಶ್ರೀಹರಿಬಾಬು ಹಾಗೂ ಸಿಬ್ಬಂದಿ ಎಲ್ಲರ ಮನವೊಲಿಸಿ, ರೈಲು ಚಲಿಸುವಂತೆ ಮಾಡಿದ್ದಾರೆ. ಈ ನಡುವೆ ರೈಲು ನಿಲ್ದಾಣದಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಂತೆ ಗಲಾಟೆ ಮಾಡಿದ ಅನ್ಯಕೋಮಿನ ನಾಲ್ವರು ಯುವಕರು ಪರಾರಿಯಾಗಿದ್ದಾರೆ.