ನವದೆಹಲಿ: ಇನ್ನು ಮುಂದೆ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್ ಪಟ್ಟಿಯನ್ನು (Reservation List) ಬಿಡುಗಡೆ ಮಾಡಲಾಗುತ್ತದೆ ಭಾರತೀಯ ರೈಲ್ವೇ (Indian Railways) ತಿಳಿಸಿದೆ.
ಪ್ರಸ್ತುತ 4 ಗಂಟೆಯ ಮೊದಲು ರಿಸರ್ವೇಷನ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಜುಲೈ 1 ರಿಂದ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್ ಚಾರ್ಟ್ (Waiting List) ಬಿಡುಗಡೆಯಾಗಲಿದೆ.
ಈ ಬದಲಾವಣೆಯಿಂದ ಪ್ರಯಾಣಿಕರಿಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ. ಒಂದು ವೇಳೆ ವೇಟಿಂಗ್ ಲಿಸ್ಟ್‌ನಲ್ಲಿದ್ದ ಪ್ರಯಾಣಿಕರಿಗೆ ಟಿಕೆಟ್ ಸಿಗದೇ ಇದ್ದರೆ ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಮಾಡಲು ಸಮಯ ಸಿಗಲಿದೆ. ಇದನ್ನೂಓದಿ: ಮೊದಲ ಬಾರಿಗೆ ಆರ್‌ಬಿಐ `ಚಿನ್ನದ ಖಜಾನೆ’ ಅನಾವರಣ
ಜುಲೈ 1 ರಿಂದ 2025 ರಿಂದ ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಿದ ಬಳಕೆದಾರರಿಗೆ ಮಾತ್ರ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಹೇಳಿದೆ.
ತಾತ್ಕಾಲ್ ಬುಕ್ಕಿಂಗ್‌ಗಳಿಗಾಗಿ ಒಟಿಪಿ ಆಧಾರಿತ ದೃಢೀಕರಣದ ಅನುಷ್ಠಾನವು ಜುಲೈ ಕೊನೆಯಿಂದ ಆರಂಭವಾಗಲಿದೆ. ಬಳಕೆದಾರರು ಆಧಾರ್ ಅಥವಾ ತಮ್ಮ ಡಿಜಿಲಾಕರ್ ಖಾತೆಗಳಲ್ಲಿ ಸಂಗ್ರಹವಾಗಿರುವ ಇತರ ಮಾನ್ಯ ಸರ್ಕಾರಿ ಗುರುತಿನ ದಾಖಲೆಗಳನ್ನು ಬಳಸಿಕೊಂಡು ತಮ್ಮ ಗುರುತನ್ನು ಪರಿಶೀಲಿಸಬೇಕಾಗುತ್ತದೆ. ಇದನ್ನೂಓದಿ: ಕಬಿನಿಯಿಂದ ನೀರು ಬಿಡುಗಡೆ –ಕಪಿಲಾ ನದಿ ಉಕ್ಕಿ ಭತ್ತದಬೆಳೆಮುಳುಗಡೆ
ಈ ಹಿಂದೆ ಆಧಾರ್-ಪ್ರಮಾಣೀಕೃತ ಬಳಕೆದಾರರು ಮಾತ್ರ ಜುಲೈ 1 ರಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಿಸಿತ್ತು.
ಸೆಪ್ಟೆಂಬರ್ ವೇಳೆ ಪ್ರಯಾಣಿಕರ ಹೊಸ ರಿಸರ್ವೇಷನ್ ವ್ಯವಸ್ಥೆ ಜಾರಿಗೆ ಬರಲಿದೆ. ಸದ್ಯ ಪ್ರತಿ ನಿಮಿಷಕ್ಕೆ 32 ಸಾವಿರ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಆದರೆ ವೆಬ್‌ಸೈಟ್ ನವೀಕರಣಗೊಳಿಸಿದ ಬಳಿಕ ಪ್ರತಿ ನಿಮಿಷಕ್ಕೆ 1.50 ಲಕ್ಷ ಟಿಕೆಟ್ ಬುಕ್ ಮಾಡುವಂತೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಬಹು ಭಾಷೆಗಳನ್ನು ಬೆಂಬಲಿಸುವ ಬಳಕೆದಾರ ಸ್ನೇಹಿ ಇಂಟರ್ಫೇಸ್ ಇರಲಿದೆ.
ಬೆಂಗಳೂರು: ಏಳು ಕೊಂಡಲವಾಡ ತಿರುಪತಿಯ (Tirupati) ಶ್ರೀನಿವಾಸನಿಗೆ ವಿಶ್ವದೆಲ್ಲೆಡೆ ಭಕ್ತಗಣವಿದೆ. ರಾಜ್ಯದ ಲಕ್ಷಾಂತರ ಜನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದ ತಿರುಪತಿಗೆ ತೆರಳುವ ಭಕ್ತಾದಿಗಳಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ.
ವೆಂಕಟೇಶ್ವರನ ದರ್ಶನಕ್ಕಾಗಿ ರಾಜ್ಯದ ಚಿಕ್ಕಮಗಳೂರಿನಿಂದ (Chikkamagaluru) ನೂತನ ರೈಲು (Train) ಸಂಚಾರ ಆರಂಭವಾಗಿದ್ದು, ಚಿಕ್ಕಮಗಳೂರಿನಿಂದ ತಿರುಪತಿಗೆ ವಾರಕ್ಕೊಮ್ಮೆ ರೈಲು ಸಂಚರಿಸಲಿದೆ. ಪ್ರತಿ ಗುರುವಾರ ತಿರುಪತಿಯಿಂದ ಚಿಕ್ಕಮಗಳೂರಿಗೆ ರೈಲು ಸಂಚರಿಸಲಿದ್ದು, ಪ್ರತಿ ಶುಕ್ರವಾರ ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ರೈಲು ಹೊರಡಲಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದೇ ವಿಜಯೇಂದ್ರ: ಮತ್ತೆ ಗುಡುಗಿದ ಯತ್ನಾಳ್
ಪ್ರಮುಖವಾಗಿ ಈ ರೈಲು ಚಿತ್ತೂರು, ಕಟ್ಪಾಡಿ, ಕುಪ್ಪಂ, ಬಂಗಾರಪೇಟೆ, ವೈಟ್ ಫೀಲ್ಡ್, ಕೆಆರ್ ಪುರಂ, ಬೆಂಗಳೂರು, ಚಿಕ್ಕಬಾಣಾವರ, ತುಮಕೂರು, ತಿಪಟೂರು, ಬಿರೂರು, ಕಡೂರು ಸೇರಿದಂತೆ ಹಲವು ನಿಲ್ದಾಣಗಳನ್ನು ಹೊಂದಿದೆ. ಹೀಗಾಗಿ ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಭಕ್ತರು ಈ ಸೌಲಭ್ಯ ಬಳಸಿಕೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ `ಧರ್ಮ ಚಕ್ರವರ್ತಿ’ ಬಿರುದು ಪ್ರದಾನ
– 22 ಜನರಿಗೆ ಉಸಿರಾಟದ ಸಮಸ್ಯೆ, 129 ಜನರಿಗೆ ಸ್ಥಳದಲ್ಲೇ ಚಿಕಿತ್ಸೆ
ಸಿಯೋಲ್: ಹೆಂಡತಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡ ಪತಿ ರೈಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮಾಡಿದ ಘಟನೆ ದಕ್ಷಿಣ ಕೊರಿಯಾದ (South Korea) ಸಿಯೋಲ್‌ನಲ್ಲಿ (Seoul) ನಡೆದಿದೆ.
ರೈಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ವಾನ್ (67) ಎಂದು ಗುರುತಿಸಲಾಗಿದೆ. ಪತ್ನಿ ವಿಚ್ಛೇದನ ಕೊಟ್ಟ ಕೋಪದಲ್ಲಿಯೇ ಪತಿ ಯೆಯೋಯಿನಾರು ನಿಲ್ದಾಣದಿಂದ ಮಾಪೋ ನಿಲ್ದಾಣಕ್ಕೆ ತೆರಳುವ ರೈಲಿಗೆ ಹತ್ತಿದ್ದ. ಜೊತೆಗೆ ಬೆಂಕಿ ಹಚ್ಚುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದ. ಬೆಳಿಗ್ಗೆ 8:42ರ ಸುಮಾರಿಗೆ ರೈಲು ಹಾನ್ ನದಿಯ ಕೆಳಗಿರುವ ಸಿಯೋಲ್ ಸುರಂಗ ಮಾರ್ಗ ೫ರಲ್ಲಿ ಚಲಿಸುತ್ತಿದ್ದಂತೆಯೇ ದಿಢೀರನೇ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹತ್ತುತ್ತಲೇ ತನ್ನ ಬಟ್ಟೆಗೂ ಬೆಂಕಿ ಹಚ್ಚಿಕೊಂಡಿದ್ದಾನೆ. ಇದರ ಪರಿಣಾಮ ರೈಲಿನಲ್ಲಿದ್ದ ೨೨ ಜನರು ಉಸಿರಾಟದ ಸಮಸ್ಯೆಯಾಗಿದೆ. ಉಸಿರಾಟದ ಸಮಸ್ಯೆಯಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ದಾವಣಗೆರೆ | ವಂದೇ ಭಾರತ್ ರೈಲಲ್ಲಿ ಕಾಣಿಸಿಕೊಂಡ ಬೆಂಕಿ – ತಪ್ಪಿದ ಭಾರೀ ಅನಾಹುತ
129 ಜನರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ವಾನ್‌ನನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯಿಂದಾಗಿ ರೈಲಿಗೆ ಸುಮಾರು 330 ಮಿಲಿಯನ್‌ನಷ್ಟು (33 ಕೋಟಿ ರೂ.) ಹಾನಿಯಾಗಿದೆ ಎಂದು ಮೂಲಗಳು ತಿಳಿಸಿದೆ.
ನವದೆಹಲಿ: ಗ್ವಾಲಿಯರ್‌ನಿಂದ ಬೆಂಗಳೂರಿಗೆ (Bengaluru- Gwalior) ಹೊಸ ರೈಲು ಸಂಪರ್ಕವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ಸಚಿವರು, ಈ ರೈಲು ಗ್ವಾಲಿಯರ್, ಗುಣ, ಭೋಪಾಲ್ ಮತ್ತು ಮಧ್ಯಪ್ರದೇಶದ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ. ಪ್ರಧಾನಿಯವರು ಮಧ್ಯಪ್ರದೇಶದ ಅಭಿವೃದ್ಧಿಗೆ ಹಲವು ಉಪಕ್ರಮಗಳನ್ನು ಕೈಗೊಂಡರು. 11 ವರ್ಷಗಳಲ್ಲಿ 2651 ಕಿಮೀ ಉದ್ದದ ಹಳಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ವೈಭವದ ಪುರಿ ಜಗನ್ನಾಥ ರಥಯಾತ್ರೆ
ಇದು ಡೆನ್ಮಾರ್ಕ್‌ನಂತಹ ದೇಶಗಳ ಒಟ್ಟು ರೈಲ್ವೆ ಜಾಲಕ್ಕಿಂತ ಹೆಚ್ಚು. ಗ್ವಾಲಿಯರ್ ಸೇರಿದಂತೆ 80 ನಿಲ್ದಾಣಗಳು ನಿರ್ಮಾಣ ಹಂತದಲ್ಲಿವೆ. ಗ್ವಾಲಿಯರ್ ಮತ್ತು ಆಗ್ರಾ ನಡುವೆ ರೈಲು ಪ್ರಾರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ಸುಮಾರು 24,000 ಕೋಟಿ ರೂ. ಮೌಲ್ಯದ ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕುಂಭಕ್ಕೆ ಮಹಾ ಕುಂಭದಂತೆ ಸಿದ್ಧತೆಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ಇದು ಈ ಪ್ರದೇಶಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಗ್ವಾಲಿಯರ್ ಬೆಂಗಳೂರಿನೊಂದಿಗೆ ಸಂಪರ್ಕ ಹೊಂದಿದೆ. ಗ್ವಾಲಿಯರ್-ಚಂಬಲ್ ವಿಭಾಗದ ನಿವಾಸಿಗಳು ಬೆಂಗಳೂರಿಗೆ ರೈಲು ಹಿಡಿಯಲು ಕೋಟಾ, ಬಿನಾ ಮತ್ತು ಭೋಪಾಲ್‌ಗೆ ಪ್ರಯಾಣಿಸಬೇಕಾಗಿತ್ತು. ಪ್ರಯಾಣಿಕರಿಗೆ ಹೆಚ್ಚುವರಿಯಾಗಿ ಆರರಿಂದ ಎಂಟು ಗಂಟೆಗಳ ಪ್ರಯಾಣದ ಸಮಯವಿದೆ. ಇಂದು, ಪ್ರಧಾನ ಮಂತ್ರಿಗಳ ಆಶೀರ್ವಾದ ಮತ್ತು ರೈಲ್ವೆ ಸಚಿವರ ಸಹಾಯದಿಂದ ಅದೇ ಪ್ರಯಾಣ ಸುಲಭವಾಗಿದೆ. ಈಗ, ನಾವು ಗ್ವಾಲಿಯರ್‌ನಿಂದ ಬೆಂಗಳೂರಿಗೆ 30 ಗಂಟೆಗಳಲ್ಲಿ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’
ಮಾಸ್ಕೋ: ರಷ್ಯಾದ (Russia) ಪಶ್ಚಿಮ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ರೈಲು ಸೇತುವೆ ಕುಸಿದ (Bridge Collapse) ಪರಿಣಾಮ ರೈಲು ಹಳಿ ತಪ್ಪಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
A bridge collapse in the Bryansk Region led to an accident involving a train and several vehicles, local authorities confirmed. One child is in serious condition, and the train operator was… pic.twitter.com/lFOIB59bAJ
ಸಾರಿಗೆ ಕಾರ್ಯಾಚರಣೆಗಳ ಮೇಲಿನ ಅಕ್ರಮ ದಾಳಿಯಿಂದ ಉಕ್ರೇನ್ (Ukraine) ಗಡಿ ಭಾಗಗಲ್ಲಿರುವ ರೈಲ್ವೆ ಬ್ರಿಡ್ಜ್ ಕುಸಿದು ಬಿದ್ದಿದೆ. ಕ್ಲಿಮೊವೊದಿಂದ ಮಾಸ್ಕೋಗೆ ರೈಲು ಬರುತ್ತಿದ್ದಾಗ ಈ ಸೇತುವೆ ಕುಸಿದಿದೆ. ಪರಿಣಾಮ ರೈಲು ಹಳಿ ತಪ್ಪಿ ದುರಂತ ಸಂಭವಿಸಿದೆ ಎಂದು ರಷ್ಯಾದ ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?
ಸೇತುವೆ ಕುಸಿದ ನಂತರ ಪಶ್ಚಿಮ ರಷ್ಯಾದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಶನಿವಾರ ರಾತ್ರಿ 10.40ರ ಸುಮಾರಿಗೆ ರೈಲ್ವೆ ಬ್ರಿಡ್ಜ್ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ರಷ್ಯಾ ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಇದನ್ನೂ ಓದಿ: Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ
ಕದನ ವಿರಾಮಕ್ಕೆ ಟ್ರಂಪ್ ಒತ್ತಾಯ
ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳು ಕದನ ವಿರಾಮ ಮಾಡುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಎರಡೂ ದೇಶಗಳ ನಡುವೆ ನಡೆದ ಶಾಂತಿ ಒಪ್ಪಂದ ವಿಫಲವಾಗಿತ್ತು. ಮುಂದಿನ ವಾರ ಇಸ್ತಾನ್‌ಬುಲ್‌ನಲ್ಲಿ ಉಕ್ರೇನ್ ಅಧಿಕಾರಿಗಳೊಂದಿಗೆ ಎರಡನೇ ಸುತ್ತಿನ ವೈಯಕ್ತಿಕ ಮಾತುಕತೆ ನಡೆಸಲು ಮುಂದಾಗಿರುವುದನ್ನು ರಷ್ಯಾ ತಿಳಿಸಿದೆ.
ಮಂಗಳೂರು: ಚಿಕ್ಕಮಗಳೂರಿನ ಮೂಡಿಗೆರೆಯ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಂಜು ಆವರಿಸಿದೆ. ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿಗಾಗಿ ನಾಳೆಯಿಂದ 5 ತಿಂಗಳು ಮಂಗಳೂರು-ಬೆಂಗಳೂರು ನಡುವಿನ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲುಗಳು ಸಂಚಾರ ಬಂದ್ ಆಗುತ್ತಿದೆ.
ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಮೊದಲ ಬಾರಿಗೆ ಗೌರಿ ಹೊಳೆ ಅಬ್ಬರಿಸ್ತಿದೆ. ಮನೆಗಳು ಭಾಗಶ ಮುಳುಗಡೆಯಾಗಿದ್ದು, ಎನ್‌ಡಿಆರ್‌ಎಫ್ ರಕ್ಷಿಸಿದೆ. ಸವಣೂರು ಸರ್ವೆ ಎಂಬಲ್ಲಿ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತವಾಗಿದೆ.
ಉಳ್ಳಾಲದ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿದು ದುರ್ಮರಣಕ್ಕೀಡಾದ ಅಜ್ಜಿ ಪ್ರೇಮಾ, ಮೊಮ್ಮಕ್ಕಳಾದ ಆರ್ಯನ್-ಆರುಷ್ ಅಂತ್ಯಕ್ರಿಯೆಯನ್ನು ಮನೆ ಪಕ್ಕದ ಜಾಗದಲ್ಲಿ ನಡೆಸಲಾಯಿತು. ಮಕ್ಕಳನ್ನು ನೋಡಿ ಕುಟುಂಬಸ್ಥರು, ಸಂಬAಧಿಕರು ಶೋಕಸಾಗರದಲ್ಲಿ ಮುಳುಗಿದರು. ತಾಯಿ ಅಶ್ವಿನಿ 2 ಕಾಲಿನ ಸ್ವಾಧೀನ ಕಳೆದುಕೊಂಡ ಕಾರಣ ವೈದ್ಯರು 2 ಕಾಲನ್ನೂ ಕತ್ತರಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಾವ ಕಾಂತಪ್ಪ ಪೂಜಾರಿಗೆ ಚೇತರಿಸಿಕೊಳ್ತಿದ್ದಾರೆ.
ಕೆಆರ್‌ಎಸ್ 101 ಅಡಿಗೆ ನೀರು ತಲುಪಿದ್ದರೆ, ಕಬಿನಿ ಡ್ಯಾಮ್ ಭರ್ತಿ ಹಂತಕ್ಕೆ ಬಂದಿದೆ. 18,018 ಕ್ಯೂಸೆಕ್ ಒಳ ಹರಿವಿದ್ದು, 2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,280 ಅಡಿ ನೀರು ಸಂಗ್ರಹವಾಗಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಹೈಜಾಕ್ (Jaffar Express Hijack) ಮಾಡಿದ್ದ ವೀಡಿಯೊವನ್ನು ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ಬಿಡುಗಡೆ ಮಾಡಿದೆ.
ಬಲೂಚ್ ಲಿಬರೇಶನ್ ಆರ್ಮಿಯ ಮಾಧ್ಯಮ ವಿಭಾಗ ಹಕ್ಕಲ್, ಈ ಹೈಜಾಕ್‌ಗೆ ಮಾರ್ಚ್ 2025 ದರ್ರಾ-ಎ-ಬೋಲನ್ 2.0 ಎಂಬ ಹೆಸರು ಕೊಟ್ಟು, ಎಕ್ಸ್‌ನಲ್ಲಿ ವೀಡಿಯೋ ಬಿಡುಗಡೆ ಮಾಡಿದೆ. ವೀಡಿಯೋದಲ್ಲಿ ಬಲೂಚ್ ಹೋರಾಟಗಾರರು ರೈಲ್ವೆ ಹಳಿಯನ್ನು ಸ್ಫೋಟಿಸುವುದು, ಹಳಿಗಳ ಮೇಲೆ ಸ್ಫೋಟಕಗಳನ್ನು ಎಸೆಯುವುದು ಸೆರೆಯಾಗಿದೆ. ಅಲ್ಲದೇ ಹೋರಾಟಗಾರರು ರೈಲಿನ ಒಳಗೆ ನುಗ್ಗಿರುವುದು, ರೈಲಲ್ಲಿರುವ ಪ್ರಯಾಣಿಕರನ್ನು ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಇದನ್ನೂ ಓದಿ: 400 ಪ್ರಯಾಣಿಕರಿದ್ದ ಪಾಕ್ ರೈಲು ಹೈಜಾಕ್ – 120 ಮಂದಿ ಒತ್ತೆಯಾಳಾಗಿರಿಸಿಕೊಂಡ ಉಗ್ರರು, 6 ಸೈನಿಕರ ಹತ್ಯೆ
ಪಾಕ್ ವಿರುದ್ಧದ ಬಿಎಲ್‌ಎ ನಿಯಂತ್ರಣವನ್ನು ಒತ್ತಿಹೇಳುವ ಕಾರ್ಯಾಚರಣೆಯ ಮೊದಲ ಸಮಗ್ರ ವೀಡಿಯೋ ಇದಾಗಿದೆ. ವೀಡಿಯೊದಲ್ಲಿ ಬಿಎಲ್‌ಎ ಹೋರಾಟಗಾರನೊಬ್ಬ, ನಮ್ಮ ಹೋರಾಟ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತಕ್ಕೆ ಬಂದಿದೆ. ನಮ್ಮ ಯುವಕರು ಅಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಏಕೆಂದರೆ ಹೋರಾಟದಂತಹ ನಿರ್ಧಾರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಗಳು ನಮಗೆ ಉಳಿದಿಲ್ಲ. ಬಂದೂಕನ್ನು ನಿಲ್ಲಿಸಲು ಬಂದೂಕಿನ ಅಗತ್ಯವಿದೆ ಎಂದಿದ್ದಾನೆ. ಈ ಮೂಲಕ ದಾಳಿಯ ಹಿಂದಿನ ಉದ್ದೇಶಗಳನ್ನು ಒತ್ತಿ ಹೇಳಿದ್ದಾನೆ.
ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್
ಮಾ.11 ರಂದು 400 ಪ್ರಯಾಣಿಕರಿದ್ದ ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು (Jaffar Express Train) ಬಲೂಚಿಸ್ತಾನ್ (Balochistan) ಪ್ರಾಂತ್ಯದ ಪ್ರತ್ಯೇಕತಾ ವಾದಿ ಹೋರಾಟಗಾರರ ಗುಂಪು ಬೋಲಾನ್ ಪ್ರದೇಶದಲ್ಲಿ ಹೈಜಾಕ್ ಮಾಡಿತ್ತು. ಗುಂಪು, ರೈಲಲ್ಲಿದ್ದ ಕನಿಷ್ಠ 21 ಪ್ರಯಾಣಿಕರು ಮತ್ತು ನಾಲ್ವರು ಅರೆಸೈನಿಕ ಪಡೆ ಯೋಧರ ಹತ್ಯೆ ಮಾಡಿತ್ತು.
ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಬಿಎಲ್‌ಎ ಹೋರಾಟಗಾರರು ಮೋದಲು ಗುಂಡಿನ ದಾಳಿ ಮಾಡಿದ್ದರು. ಬಳಿಕ ಬೋಲಾನ್‌ನ ಧದರ್‌ನ ಮಶ್ಕಾಫ್‌ನಲ್ಲಿ ಪ್ರದೇಶದಲ್ಲಿ ಪೇಶಾವರ ಮಾರ್ಗದ ರೈಲ್ವೆ ಹಳಿಯನ್ನು ಸ್ಫೋಟಿಸಿದ್ದರು. ಇದರಿಂದ ಜಾಫರ್ ಎಕ್ಸ್‌ಪ್ರೆಸ್ ಹಳಿ ತಪ್ಪಿತ್ತು. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು.
ಒತ್ತೆಯಾಳುಗಳ ರಕ್ಷಣೆಗೆ ತೆರಳಿದ್ದ ಪಾಕ್ ಸೇನೆ ಹಾಗೂ ಬಲೂಚ್ ಹೋರಾಟಗಾರರ ನಡುವೆ ತೀವ್ರ ಗುಂಡಿನ ಚಕಮಕಿಯಾಗಿತ್ತು. ಈ ಬಗ್ಗೆ, ಪಾಕ್ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್, ಭದ್ರತಾ ಪಡೆಗಳು ಸ್ಥಳದಲ್ಲಿದ್ದ ಎಲ್ಲಾ 33 ಉಗ್ರರನ್ನು ಹತ್ಯೆಗೈದಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಪಾಕ್ ರೈಲು ಹೈಜಾಕ್; 150 ಸೆರೆಯಾಳುಗಳ ರಕ್ಷಣೆ – 27 ಉಗ್ರರ ಹತ್ಯೆ
ಹಾಸನ: ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಹಾಸನ (Hassan) ಜಿಲ್ಲೆಯಲ್ಲಿ ಓಡಾಡುವ ಪ್ರಮುಖ ರೈಲುಗಳ ಸಂಚಾರವನ್ನು ಕೆಲ ದಿನಗಳ ಕಾಲ ರದ್ದು ಮಾಡಿ ರೈಲ್ವೆ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1 ರವರೆಗೆ ಬಂದ್ ಆಗಲಿದ್ದು, ಮೇ 31 ರಿಂದ ನವೆಂಬರ್ 1 ರವರೆಗೆ ಪ್ರತಿ ಶನಿವಾರ ಸಂಚರಿಸುವ ಯಶವಂತಪುರ-ಮಂಗಳೂರು ಎಕ್ಸ್ಪ್ರೆಸ್ ಸಂಚಾರವನ್ನು (ರೈಲು ಸಂಖ್ಯೆ 16539) ರದ್ದು ಮಾಡಲಾಗಿದೆ. ಜೂನ್ 1 ರಿಂದ ನವೆಂಬರ್ 2 ರವರೆಗೆ ಪ್ರತಿ ಭಾನುವಾರ ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16540), ಜೂನ್ 1 ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16575) ಮತ್ತು ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ ಕೂಡ ತುರ್ತು ಕಾಮಗಾರಿಗಾಗಿ (ರೈಲು ಸಂಖ್ಯೆ 16576) ರದ್ದು ಮಾಡಲಾಗಿದೆ. ಇದನ್ನೂ ಓದಿ: ಇಂದಿನಿಂದ 5 ದಿನ 3 ಗಂಟೆಗಳ ಕಾಲ ಹೆಬ್ಬಾಳ ಫ್ಲೈಓವರ್ ಬಂದ್
ಇದಲ್ಲದೇ ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16515) ರೈಲು ಮತ್ತು ಜೂನ್ 3 ರಿಂದ ನವೆಂಬರ್ 1, ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚರಿಸುವ ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16516) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ದಾವಣಗೆರೆ: ಯುವತಿಯೊಬ್ಬಳು ರೈಲ್ವೇ ಹಳಿ ದಾಟುತ್ತಿದ್ದಾಗ ರೈಲು (Train) ಡಿಕ್ಕಿಯಾಗಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಹರಿಹರ (Harihara) ನಿಲ್ದಾಣದಲ್ಲಿ ನಡೆದಿದೆ.
ಮೃತಳನ್ನು ಬಳ್ಳಾರಿ ಮೂಲದ ಶ್ರಾವಣಿ (23) ಎಂದು ಗುರುತಿಸಲಾಗಿದೆ. ಯುವತಿ ಮೊಬೈಲ್‍ನಲ್ಲಿ ಮಾತನಾಡುತ್ತಾ, ರೈಲು ಬರುವುದನ್ನು ಗಮನಿಸದೇ ರೈಲ್ವೇ ಹಳಿ ದಾಟಲು ಯತ್ನಿಸಿದ್ದಾಳೆ. ಈ ವೇಳೆ ರೈಲು ಆಕೆಗೆ ಡಿಕ್ಕಿಯಾಗಿದೆ. ಪರಿಣಾಮ ಆಕೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಇದನ್ನೂ ಓದಿ: ಸಂಧಾನಕ್ಕೆಂದು ಕರೆದು ದಂಪತಿ ಕತ್ತು ಸೀಳಿ ಬರ್ಬರ ಹತ್ಯೆ – 2 ವರ್ಷದ ಮಗುವಿನ ಎದುರೇ ಕೊಲೆ
ಶ್ರಾವಣಿ ಮೈಸೂರಿನಲ್ಲಿ (Mysuru) ಎಂಬಿಎ ಓದುತ್ತಿದ್ದಳು. ಹರಿಹರಕ್ಕೆ ಶುಭ ಕಾರ್ಯಕ್ಕೆ ಸಂಬಂಧಿಕರ ಮನೆಗೆ ಬಂದಿದ್ದಳು. ರಾತ್ರಿ ಮೈಸೂರಿಗೆ ಹೋಗಲು ರೈಲು ನಿಲ್ದಾಣಕ್ಕೆ ಬಂದು, ಹಳಿ ದಾಟುತ್ತಿರುವಾಗ ಈ ಅವಘಡ ಸಂಭವಿಸಿದೆ.
ಜಗತ್ತಿನಲ್ಲೇ ಅತಿ ದೊಡ್ಡ ರೈಲು ಸಂಪರ್ಕ ಜಾಲವನ್ನು ಹೊಂದಿರುವ ವ್ಯವಸ್ಥೆಯೆಂದರೆ ಅದು ಭಾರತೀಯ ರೈಲ್ವೆ (Indian Railway). ಈ ವಲಯ ಹಲವು ಸುಧಾರಿತ ಕ್ರಮಗಳೊಂದಿಗೆ ಪ್ರಯಾಣಿಕ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ. ಮನುಷ್ಯ ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕುಂತಲ್ಲಿ ಎಲ್ಲಾ ಸೌಕರ್ಯಗಳು ಕೈಗೆ ಸಿಗುವಂತಿದ್ದರೆ ಆ ಕಡೆ ಹೆಚ್ಚು ಒಲವು ತೋರುವುದುಂಟು. ಇದನ್ನರಿತು ರೈಲ್ವೆಯು ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ. ರೈಲಿನಲ್ಲೇ ಎಟಿಎಂ (ATM on Train) ಸ್ಥಾಪಿಸಿ ಜನರ ಕೈಗೆ ಸುಲಭವಾಗಿ ಹಣ ಸಿಗುವಂತೆ ಮಾಡಿದೆ. ರೈಲ್ವೆಯ ಹೊಸ ಕ್ರಮದಿಂದ ಪ್ರಯಾಣಿಕರು ಖುಷಿಪಟ್ಟಿದ್ದಾರೆ.
ಭಾರತಕ್ಕೆ ರೈಲು ಬಂದಿದ್ಯಾವಾಗ?
1853 ರಲ್ಲಿ ಭಾರತಕ್ಕೆ ಮೊದಲ ಬಾರಿಗೆ ರೈಲು ವ್ಯವಸ್ಥೆ ಬಂದಿತು. ಮುಂಬೈ (ಆಗ ಬಾಂಬೆ) ಮತ್ತು ಥಾಣೆ ನಡುವೆ ಮೊದಲ ಪ್ರಯಾಣಿಕ ರೈಲು ಓಡಾಟ ಆರಂಭಿಸಿತು. ಆರಂಭದಲ್ಲಿ, ಪ್ರಮುಖ ಬಂದರು ನಗರಗಳನ್ನು ಸಂಪರ್ಕಿಸುವುದು, ಸರಕುಗಳ ವ್ಯಾಪಾರ ಮತ್ತು ಸಾಗಣೆಯನ್ನು ಸುಗಮಗೊಳಿಸುವತ್ತ ಗಮನ ಹರಿಸಲಾಯಿತು. ವರ್ಷಗಳು ಕಳೆದಂತೆ ಈ ಜಾಲವು ವಿಸ್ತರಿಸಿತು. ವಿವಿಧ ಪ್ರದೇಶಗಳನ್ನು ಸಂಪರ್ಕಿಸಲು ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದನ್ನೂ ಓದಿ: ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!
ದೇಶದಲ್ಲಿ ಎಷ್ಟು ರೈಲುಗಳಿವೆ?
ಭಾರತದಲ್ಲಿ 7,349 ನಿಲ್ದಾಣಗಳು, 13,169 ಪ್ಯಾಸೆಂಜರ್ ರೈಲುಗಳು, 8,479 ಸರಕು ರೈಲುಗಳಿವೆ. 2.3 ಕೋಟಿ ಪ್ರಯಾಣಿಕರಿಗೆ ಮತ್ತು 7,349 ನಿಲ್ದಾಣಗಳಿಂದ ಪ್ರತಿದಿನ 30 ಲಕ್ಷ ಟನ್ ಸರಕು ಸಾಗಣೆಗೆ ಸೇವೆ ಸಲ್ಲಿಸುತ್ತಿವೆ. ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ರಾಜ್ಯದಲ್ಲಿ ಪಟ್ಟಿಯಲ್ಲಿ ಸೇರಿಸದ ಕೆಲವು ನಿಲ್ದಾಣಗಳಿವೆ. ಇದರಲ್ಲಿ ಸಣ್ಣ ನಿಲ್ದಾಣಗಳು ಮತ್ತು ನಿರ್ದಿಷ್ಟ ರೈಲು ಮಾರ್ಗಗಳಲ್ಲಿರುವ ನಿಲ್ದಾಣಗಳು ಸೇರಿರಬಹುದು. ಸಾಮಾನ್ಯ ನಿಲ್ದಾಣಗಳು ಮತ್ತು ಸಣ್ಣ ನಿಲ್ದಾಣಗಳು ಸೇರಿದಂತೆ ಒಟ್ಟು ನಿಲ್ದಾಣಗಳ ಸಂಖ್ಯೆ ಸುಮಾರು 262 ಎಂದು ಅಂದಾಜಿಸಲಾಗಿದೆ.
ದೇಶದಲ್ಲೇ ಮೊದಲು
ದೇಶದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು ರೈಲಿನೊಳಗೆ ಎಟಿಎಂ ಯಂತ್ರವನ್ನು ಸ್ಥಾಪಿಸಿದೆ. ಇನ್ಮುಂದೆ ರೈಲಿನಲ್ಲೂ ಎಟಿಎಂ ಮೂಲಕ ಹಣ ಪಡೆಯಬಹುದು. ಹೌದು, ಮುಂಬೈ-ಮನಮಾಡ್ ಪಂಚವಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಾಯೋಗಿಕವಾಗಿ ಎಟಿಎಂ ಯಂತ್ರ ಅಳವಡಿಸಲಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ತನ್ನ 172ನೇ ವರ್ಷಾಚರಣೆಯ ಪ್ರಯುಕ್ತ ಈ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಗಮಗೊಳಿಸಲು ಒಂದು ಹೆಜ್ಜೆ ಮುಂದಿಟ್ಟಿದೆ. ಕೇಂದ್ರ ರೈಲ್ವೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸೃಜನಶೀಲ ಕಾರ್ಯಕ್ಕೆ ಕೈಜೋಡಿಸಿವೆ. ಸಾರಿಗೆಯೊಂದಿಗೆ ಆರ್ಥಿಕ ಪ್ರವೇಶವನ್ನು ಬೆಸೆಯುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಇದನ್ನೂ ಓದಿ: Explainer| ಏನಿದು ಪಬ್ಲಿಕ್ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
🚨 ATM facility in Indian train for the first time, announces Ashwini Vaishnaw. pic.twitter.com/n7Jp5RTNlJ
ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು
ಪಂಚವಟಿ ಎಕ್ಸ್‌ಪ್ರೆಸ್ ಮಹಾರಾಷ್ಟ್ರದ ಮನಮಾಡ್-ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಸಂಚರಿಸುವ ದೈನಂದಿನ ಅಂತರನಗರ ಸೂಪರ್ ಫಾಸ್ಟ್ ರೈಲಾಗಿದೆ. ಬಹಳಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು ಎಂದು ಹೆಸರುವಾಸಿಯಾಗಿದೆ. ಹೀಗಾಗಿ, ಪ್ರಾಯೋಗಿಕವಾಗಿ ಈ ರೈಲಿನ ಒಂದು ಬೋಗಿಯಲ್ಲಿ ಎಟಿಎಂ ಅಳವಡಿಸಲಾಗಿದೆ. ರೈಲಿನಲ್ಲೂ ಪ್ರಯಾಣಿರಿಗೆ ಸುಲಭವಾಗಿ ಹಣಕಾಸು ಸೇವೆ ಒದಗಿಸಲು ಇದು ಸಹಕಾರಿಯಾಗಿದೆ.
ಹೇಗೆ ಕೆಲಸ ಮಾಡುತ್ತೆ?
ರೈಲಿನ ಎಸಿ ಕೋಚ್‌ನಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ. ನಿಲ್ದಾಣಗಳು, ನಗರಗಳಲ್ಲಿನ ಇತರೆ ಎಟಿಎಂಗಳಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ಹಣ ಡ್ರಾ, ಚೆಕ್ ಬುಕ್ ಆರ್ಡರ್, ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯಬಹುದು. ನಗದು ಹಿಂಪಡೆಯಲು ಪ್ರಯಾಣಿಕರು ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸಬಹುದು. ಈ ಎಟಿಎಂ ಅನ್ನು ಬೋಗಿಯ ಹಿಂಭಾಗದಲ್ಲಿರುವ ಒಂದು ಕ್ಯೂಬಿಕಲ್‌ನಲ್ಲಿ ಇರಿಸಲಾಗಿದೆ. ಈ ಪ್ರದೇಶದಲ್ಲಿ ಹಿಂದೆ ತಾತ್ಕಾಲಿಕ ಪ್ಯಾಂಟ್ರಿಯಾಗಿ ಕಾರ್ಯನಿರ್ವಹಿಸಲಾಗುತ್ತಿತ್ತು. ಭದ್ರತೆ ಕಾಪಾಡಲು ಮತ್ತು ಯಾವುದೇ ಅವಘಡಗಳನ್ನು ತಪ್ಪಿಸಲು ಆ ಜಾಗವನ್ನು ಶಟರ್‌ನಿಂದ ಲಾಕ್ ಮಾಡಲಾಗಿದೆ. 24*7 ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಎಕ್ಸ್‌ಪ್ರೆಸ್‌ನ ಎಲ್ಲಾ 22 ಕೋಚ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ, ಎಲ್ಲಾ ಪ್ರಯಾಣಿಕರು ಇದನ್ನು ಬಳಸಬಹುದು.
ಪ್ರಾಯೋಗಿಕ ಅವಧಿಯಲ್ಲಿ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತಾಂತ್ರಿಕ ತೊಂದರೆಗಳ ಸಂದರ್ಭದಲ್ಲಿ ನೆರವು ನೀಡಲು ಎಸ್‌ಬಿಐ ಪ್ರತಿನಿಧಿ ಸಹ ಮಂಡಳಿಯಲ್ಲಿರುತ್ತಾರೆ. ರೈಲಿನ ವಿದ್ಯುತ್ ವ್ಯವಸ್ಥೆಗಳನ್ನು ಯಂತ್ರಕ್ಕೆ ವಿದ್ಯುತ್ ಪೂರೈಸಲು ಹೊಂದಿಸಲಾಗಿದೆ. ಯಾವುದೇ ಅಲಭ್ಯತೆಯನ್ನು ತಡೆಗಟ್ಟಲು ಬ್ಯಾಕ್‌ಅಪ್ ಸ್ಥಳದಲ್ಲಿದೆ. ಇದನ್ನೂ ಓದಿ: PublicTV Explainer: ‘ಕೆಜಿಎಫ್’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?
ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ
ಈ ಉಪಕ್ರಮವು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ವಿಶಾಲ ಗುರಿಗಳಿಗೆ ಅನುಗುಣವಾಗಿದೆ. ಇದು ವಿಶ್ವಾದ್ಯಂತ ಡಿಜಿಟಲ್ ಬ್ಯಾಂಕಿಂಗ್ ಪ್ರವೇಶ ಮತ್ತು ಆರ್ಥಿಕ ಸೇರ್ಪಡೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು, ಎಟಿಎಂಗಳಿಲ್ಲದ ಸ್ಥಳಗಳಿಗೆ ಮತ್ತು ಸೀಮಿತ ಹಣಕಾಸು ಸೇವೆಗಳಿರುವ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಸಹಕಾರಿಯಾಗಿದೆ.
ಆನ್‌ಬೋರ್ಡ್ ಎಟಿಎಂ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವಾಗ, ನಗದು ಅಗತ್ಯವಿರುವಾಗ, ಆಗಾಗ್ಗೆ ಪ್ರಯಾಣಿಕರಿಗೆ ಅನುಕೂಲಕರವಾಗಿ ಸಹಾಯ ಮಾಡುತ್ತದೆ. ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳ ಪರಿಚಯವಿಲ್ಲದ ಹಿರಿಯ ವ್ಯಕ್ತಿಗಳು ಮತ್ತು ಪ್ರಯಾಣಿಕರು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?
ಮುಂದೇನು?
ಈ ಪ್ರಯೋಗವು ಯಶಸ್ವಿಯಾದರೆ ಹೆಚ್ಚಿನ ರೈಲುಗಳಲ್ಲಿ ಎಟಿಎಂ ಯಂತ್ರವನ್ನು ಸ್ಥಾಪಿಸಲಾಗುವುದು. ಮುಂದೆ ರಾಜಧಾನಿ, ದುರಂತೋ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ದೀರ್ಘ ಪ್ರಯಾಣ ಮತ್ತು ಪ್ರೀಮಿಯಂ ರೈಲುಗಳಲ್ಲಿ ಹಣಕಾಸು ಸೇವೆಗಳನ್ನು ಸಂಯೋಜಿಸುವ ಬಗ್ಗೆ ಭಾರತೀಯ ರೈಲ್ವೇ ಯೋಚಿಸಿದೆ. ರೈಲು ಪ್ರಯಾಣವನ್ನು ಪ್ರಯಾಣಿಕರ ಸ್ನೇಹಿಯಾಗಿ ಮಾಡಲು ಕ್ರಮ ವಹಿಸಲಿದೆ. ಇಂತಹ ಯೋಜನೆಗಳು ಡಿಜಿಟಲ್ ಬ್ಯಾಂಕಿಂಗ್ ಸಲಹೆ ಸೇವೆಗಳು ಮತ್ತು ಸ್ಮಾರ್ಟ್ ಟಿಕೆಟಿಂಗ್ ಕಿಯೋಸ್ಕ್‌ಗಳನ್ನು ಸಹ ಅಳವಡಿಸಿಕೊಳ್ಳಬಹುದು.