Tag: train tracks

  • ಭಾರೀ ಮಳೆಗೆ ಕೊಚ್ಚಿ ಹೋದ ಉತ್ತರಾಖಂಡ್ ರೈಲು ಹಳಿ

    ಭಾರೀ ಮಳೆಗೆ ಕೊಚ್ಚಿ ಹೋದ ಉತ್ತರಾಖಂಡ್ ರೈಲು ಹಳಿ

    ಡೆಹ್ರಾಡೂನ್: ವರುಣ ಆರ್ಭಟ ಉತ್ತರಾಖಂಡ್‍ನಲ್ಲಿ ಮುಂದುವರೆದಿದ್ದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ರಣರಕ್ಕಸ ಮಳೆಗೆ ಉತ್ತರಾಖಂಡ್ ನಲುಗಿ ಹೋಗಿದೆ.

    Nainital

    ಬಿಟ್ಟು ಬಿಡದೇ ಸುರಿಯುತ್ತೀರುವ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಾರ ಬಿಡುವಿಲ್ಲದ ನರ್ತನಕ್ಕೆ ನದಿಗಳು ಉಕ್ಕಿ ಹರಿಯುತ್ತಿವೆ . ಇದರಿಂದಾಗಿ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ದಿಕ್ಕು ತಪ್ಪಿದ ದೋಣಿಯಂತಾಗಿದೆ. ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ಪ್ರವಾಸಿಗ ನೆಚ್ಚಿನ ತಾಣವಾಗಿರುವ ನೈನಿತಾಲ್‍ನಲ್ಲಿ ಜಲ ಆರ್ಭಟಕ್ಕೆ ರೈಲು ಹಳಿ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ನೈನಿತಾಲ್‍ನಿಂದಕಥ್‍ಗೋಡಂ ಪ್ರದೇಶವನ್ನು ಸಂಪರ್ಕಿಸುವ ರೈಲು ಮಾರ್ಗದ ಕೆಳಗಿನ ಮಣ್ಣು ಬೀಕರ ಮಳೆಗೆ ಕುಸಿದಿದೆ. ಈ ಪರಿಣಾಮವಾಗಿ ರೈಲು ಹಳಿ ಕೊಚ್ಚಿಕೊಂಡು ಹೋಗಿ ರೈಲು ಸಂಚಾರ ಸಂಪೂರ್ಣ ಬಂದ್ ಆಗಿದೆ. ಸದ್ಯ ಉತ್ತರಾಖಂಡ್ ಸರ್ಕಾರ ಮುಂಜಾಗೃತ ಕ್ರಮವಾಗಿ ಶಾಲಾ ಕಾಲೇಜುಗಳನ್ನ ಬಂದ್ ಮಾಡಿದೆ. ಪ್ರವಾಹ ಪೀಡಿತ ಸ್ಥಳಗಳಲ್ಲಿ ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ.ಇದನ್ನೂ ಓದಿ: ದೇವಭೂಮಿ ಉತ್ತರಾಖಂಡ್‍ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ

    Nainital

    ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಲೆ ಇದೆ ಮತ್ತು ನದಿಯ ನೀರು ಮಾಲ್ ರಸ್ತೆ, ತಾಲಿಟಾಲ್ ಬಸ್ ನಿಲ್ದಾಣದ ಮೂಲಕ ಭೋವಾಲಿ ಮತ್ತು ಹಲ್ದ್ವಾನಿ ರಸ್ತೆಯ ಕಡೆಗೆ ಹಾದು ಹೋಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಉತ್ತರಾಖಂಡದಲ್ಲಿ ರೆಡ್ ಅಲರ್ಟ್ ಘೋಷಿಸಿದೆ ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಪುಂಡರ ಕುಚೇಷ್ಟೆ – ಕಾರಿನಲ್ಲಿ ಹೋಗ್ತಿದ್ದ ದಂಪತಿಗೆ ಅಡ್ಡಗಟ್ಟಿ ಧಮ್ಕಿ