Tag: Train Station

  • 3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ 6 ಗಂಟೆಯಲ್ಲಿ ರೈಲು ನಿಲ್ದಾಣ ನಿರ್ಮಿಸಿದ ಜಪಾನ್

    3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ 6 ಗಂಟೆಯಲ್ಲಿ ರೈಲು ನಿಲ್ದಾಣ ನಿರ್ಮಿಸಿದ ಜಪಾನ್

    ಟೋಕಿಯೊ: ಕೇವಲ 6 ಗಂಟೆಗಳಲ್ಲಿ 3ಡಿ-ಪ್ರಿಂಟ್‌ ತಂತ್ರಜ್ಞಾನ ಬಳಸಿ ರೈಲು ನಿಲ್ದಾಣವನ್ನು ಜಪಾನ್‌ ನಿರ್ಮಿಸಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಹೊಸ ಸಾಹಸವನ್ನು ಜಪಾನ್‌ (Japan) ಮಾಡಿದೆ.

    ರೈಲು ಮೂಲಸೌಕರ್ಯ ನಾವೀನ್ಯತೆಯಲ್ಲಿ ಮಹತ್ವದ ಹೆಜ್ಜೆ ಇದಾಗಿದೆ. 1948 ರ ಹಿಂದಿನ ಹಳೆಯ ಮರದ ರಚನೆಯನ್ನು ಬದಲಾಯಿಸಿ, ಹೊಸ ಹಟ್ಸುಶಿಮಾ ನಿಲ್ದಾಣ ನಿರ್ಮಿಸಲಾಯಿತು. 2018 ರಿಂದಲೂ ಈ ನಿಲ್ದಾಣವು ಪ್ರತಿದಿನ ಸುಮಾರು 530 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ.

    ಐತಿಹಾಸಿಕ ನಿರ್ಮಾಣವನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದರು. ಅಂತಿಮ ರೈಲು ರಾತ್ರಿ 11:57 ಕ್ಕೆ ಹೊರಟ ನಂತರ ಕಾರ್ಮಿಕರು ನಿರ್ಮಾಣ ಕೆಲಸ ಆರಂಭಿಸಿದರು. ಕೆಲವೇ ಗಂಟೆಗಳಲ್ಲಿ ನಿರ್ಮಾಣ ಕಾರ್ಯ ಮುಗಿಸಿದರು. 100 ಚದರ ಅಡಿಗಳಿಗಿಂತ ಸ್ವಲ್ಪ ಹೆಚ್ಚು ಅಳತೆಯ ಮುಖ್ಯ ರಚನೆಯನ್ನು ಮರುದಿನ ಬೆಳಗ್ಗೆ 5:45 ಕ್ಕೆ ಮೊದಲ ರೈಲು ಬರುವ ಮುನ್ನ ಪೂರ್ಣಗೊಳಿಸಿದರು.

    ಕಟ್ಟಡ ಪೂರ್ಣವಾಗಿ ನಿರ್ಮಾಣವಾಗಿದೆ. ಐಸಿ ಕಾರ್ಡ್ ರೀಡರ್‌ ಅಳವಡಿಕೆಯ ಸಣ್ಣಪುಟ್ಟ ಕೆಲಸಗಳಿವೆ. ನಿಲ್ದಾಣವು ಜುಲೈನಲ್ಲಿ ಪ್ರಯಾಣಿಕರಿಗೆ ಮುಕ್ತವಾಗುವ ನಿರೀಕ್ಷೆಯಿದೆ.

  • ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಮುಂಬೈ: ಮಹಿಳೆಯೊಬ್ಬರು ಸೋಮವಾರ ರಾತ್ರಿ ನಗರದ ದಾದರ್ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

    26 ವರ್ಷದ ಸಲ್ಮಾ ಶೇಖ್ ಮಗುವಿಗೆ ಜನ್ಮ ನೀಡಿದ ತಾಯಿ. ರೈಲು ಸಿಎಸ್‍ಟಿ ರೈಲ್ವೆ ನಿಲ್ದಾಣದಿಂದ ದಾದರ್ ಮಾರ್ಗವಾಗಿ ಕಲ್ಯಾಣ್ ಗೆ ತೆರಳುತ್ತಿತ್ತು. ರೈಲು ದಾದರ್ ನಿಲ್ದಾಣದ ಮೂರನೇ ಪ್ಲಾಟ್‍ಫಾರಂ ಗೆ ಆಗಮಿಸಿದಾಗ ಸಲ್ಮಾ ಅವರು ಮಗುವಿಗೆ ಜನ್ಮ ನೀಡಿದ್ದಾರೆ.

    ಕೂಡಲೇ ಮಗು ಮತ್ತು ತಾಯಿಯನ್ನು ಸಮೀಪದ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸಲ್ಮಾ ಅವರನ್ನು ಮೊದಲಿಗೆ ನಿಲ್ದಾಣದಲ್ಲಿರುವ `ಒನ್ ರೂಪಿ ಕ್ಲಿನಿಕ್’ಗೆ ದಾಖಲಿಸಲಾಗಿತ್ತು. ಈ ಕ್ಲಿನಿಕ್ ನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ತುರ್ತು ಸಂದರ್ಭಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ.