Tag: Train 18

  • ಮತ್ತೆ ಸ್ವದೇಶಿ ಎಂಜಿನ್‍ಲೆಸ್ ಟಿ-18 ರೈಲಿನ ಮೇಲೆ ಕಲ್ಲೆಸೆತ!

    ಮತ್ತೆ ಸ್ವದೇಶಿ ಎಂಜಿನ್‍ಲೆಸ್ ಟಿ-18 ರೈಲಿನ ಮೇಲೆ ಕಲ್ಲೆಸೆತ!

    ನವದೆಹಲಿ: ಮೇಕ್ ಇನ್ ಇಂಡಿಯಾದ ಅಡಿ ಅಭಿವೃದ್ಧಿ ಪಡಿಸಲಾದ ಟ್ರೈನ್-18(ವಂದೇ ಭಾರತ್) ಪರೀಕ್ಷಾರ್ಥ ಸಂಚಾರದ ವೇಳೆ ದುಷ್ಕರ್ಮಿಗಳು ಮತ್ತೆ ಕಲ್ಲನ್ನು ಎಸೆದಿದ್ದಾರೆ.

    ಅಲಹಬಾದ್ ಪರೀಕ್ಷಾರ್ಥ ಓಡಾಟಕ್ಕಾಗಿ ಶಾಕೂರ್ ಬಸ್ತಿಯಿಂದ ದೆಹಲಿಗೆ ರೈಲು ಆಗಮಿಸುತ್ತಿದ್ದಾಗ ದೆಹಲಿಯ ಲಹೋರಿ ಗೇಟ್ ಬಳಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಎರಡನೇ ಬೋಗಿಗೆ ಕಲ್ಲು ಎಸೆದ ಪರಿಣಾಮ ಕಿಟಕಿಯ ಗ್ಲಾಸ್ ಒಡೆದು ಹೋಗಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಳ್ಳದ ಕಾರಣ ದೂರು ದಾಖಲಿಸಿಕೊಂಡಿಲ್ಲ. ಕಳೆದ ವರ್ಷ ದೆಹಲಿ ಮತ್ತು ಆಗ್ರಾ ನಡುವಿನ ಪರೀಕ್ಷಾರ್ಥ ಓಡಾಟದ ಸಮಯದಲ್ಲೂ ಕಲ್ಲು ತೂರಾಟ ನಡೆದಿತ್ತು.

    ಈ ಬಾರಿಯ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಭಾರತದ ಪ್ರಯಾಣಿಕರಿಗೆ ವಿಶ್ವದರ್ಜೆ ಗುಣಮಟ್ಟದ ರೈಲಿನ ಅನುಭವ ನೀಡಲು ಟ್ರೈನ್ -18 ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದರು.

    ಸದ್ಯ ವೇಗವಾಗಿ ಸಂಚರಿಸುತ್ತಿರುವ ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಪರ್ಯಾಯವಾಗಿ ಈಗಿರುವ ಹಳಿಗಳಲ್ಲೇ ಈ ರೈಲು ಸೇವೆಯನ್ನು ಆರಂಭಿಸಲು ರೈಲ್ವೇ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. 2018ರ ಅಕ್ಟೋಬರ್ 29ರಂದು ಹಸಿರು ನಿಶಾನೆ ತೋರಿಸಲಾಗಿದ್ದ ಈ ರೈಲು ಗಂಟೆಗೆ 200 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿ 60 ಸಾವಿರ ಕಿ.ಮೀ ಉದ್ದದ ರೈಲ್ವೇ ಹಳಿಯಿದ್ದು, ಇದರಲ್ಲಿ ಶೇ. 0.3 ಹಳಿಗಳಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲನ್ನು ಓಡಿಸಬಹುದು ಎಂದು ವರದಿಯೊಂದು ತಿಳಿಸಿದೆ.

    ರೈಲಿನ ವಿಶೇಷತೆ ಏನು?
    ಭಾರತೀಯ ರೈಲ್ವೇ ವ್ಯವಸ್ಥೆ ಹಳೆ ಕಾಲದ್ದು ಎನ್ನುವ ಟೀಕೆಗೆ ಉತ್ತರ ಎನ್ನುವಂತೆ ಚೆನ್ನೈ ಮೂಲದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ಟಿ-18 ರೈಲನ್ನು ಅಭಿವೃದ್ಧಿ ಪಡಿಸಿದೆ. ವಿದೇಶಿ ರೈಲುಗಳಲ್ಲಿ ಇರುವಂತೆ ಇದು ಸಂಪೂರ್ಣ ಹವಾ ನಿಯಂತ್ರಣ ಹಾಗೂ ಸಿಸಿಟಿವಿ ವ್ಯವಸ್ಥೆ ಹೊಂದಿದೆ. ರೈಲಿನಲ್ಲಿ 78 ಆಸನಗಳ ಸಾಮಾನ್ಯ ಬೋಗಿಗಳಿದ್ದರೆ, ಮಧ್ಯದಲ್ಲಿ ತಲಾ 52 ಆಸನಗಳ ಎರಡು ಎಕ್ಸಿಕ್ಯುಟಿವ್ ಬೋಗಿಯನ್ನು ನೀಡಲಾಗಿದೆ. ಇದನ್ನೂ ಓದಿ: ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

    2018 ರಲ್ಲಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಈ ರೈಲುಗಳಿಗೆ `ಟ್ರೈನ್ 18? ಎಂದು ಹೆಸರಿಡಲಾಗಿದ್ದು ಈಗಿನ ರೈಲುಗಳಂತೆ ಪ್ರತ್ಯೇಕ ಎಂಜಿನ್ ಹೊಂದಿರುವುದಿಲ್ಲ. ಬದಲಿಗೆ ಮೆಟ್ರೋ ರೈಲುಗಳಂತೆ ವಿದ್ಯುತ್ ಶಕ್ತಿ ಪ್ರತಿ ಚಕ್ರಕ್ಕೂ ಮೋಟಾರುಗಳ (ಟ್ರಾಕ್ಷನ್ ಮೋಟಾರ್) ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ವಿಮಾನದಲ್ಲಿರುವಂತೆ ಕಾಕ್‍ಪಿಟ್‍ನಲ್ಲಿ ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ವೇಗದಲ್ಲಿ ರೈಲು ಸಂಚರಿಸುತ್ತದೆ.

    ಅಲ್ಯುಮೀನಿಯಂ ಬಾಡಿ ಇರುವ ಕಾರಣ ಕಡಿಮೆ ಭಾರ ಹೊಂದಿದ್ದರಿಂದ ಹೆಚ್ಚಿನ ವೇಗದಲ್ಲಿ ಹೋಗುತ್ತದೆ. ಇದು ಸೆಮಿ ಹೈ ಸ್ಪೀಡ್ ರೈಲಾಗಿರುವ ಕಾರಣ ಗಂಟೆಗೆ 220 ಕಿ.ಮೀ. ವೇಗದವರೆಗೆ ಸಂಚರಿಸುವ ಸಾಮರ್ಥ್ಯವನ್ನು ಪಡೆದಿದೆ. ವಿದೇಶದ ರೈಲುಗಳಲ್ಲಿರುವಂತೆ ವೈಫೈ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ತಿರುಗಿಸಬಹುದಾದ ಸೀಟುಗಳು, ಚಾರ್ಜರ್ ವ್ಯವಸ್ಥೆ ವೃದ್ಧರಿಗೆ, ಅಂಗವಿಕಲರಿಗೆ ಅನುಕೂಲವಾಗುವಂತೆ ಮಡಚುವ ಮೆಟ್ಟಿಲುಗಳು ಈ ರೈಲಿನಲ್ಲಿದೆ.

     

  • ಪರೀಕ್ಷಾರ್ಥ ಪ್ರಯೋಗದಲ್ಲಿ ದಾಖಲೆ ಬರೆದ ಎಂಜಿನ್ ರಹಿತ ಸ್ವದೇಶಿ ಟಿ-18 ರೈಲು

    ಪರೀಕ್ಷಾರ್ಥ ಪ್ರಯೋಗದಲ್ಲಿ ದಾಖಲೆ ಬರೆದ ಎಂಜಿನ್ ರಹಿತ ಸ್ವದೇಶಿ ಟಿ-18 ರೈಲು

    ನವದೆಹಲಿ: ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿ ನಿರ್ಮಾಣಗೊಂಡಿರುವ ಸ್ವದೇಶಿ ಎಂಜಿನ್ ರಹಿತ ಟಿ-18 ರೈಲು ಪರೀಕ್ಷಾರ್ಥ ಸಂಚಾರದಲ್ಲಿ ದಾಖಲೆ ಬರೆದಿದೆ.

    ಕೋಟಾ- ಸವಾಯಿ ಮಾಧೋಪುರ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ಟಿ-18 ರೈಲು ಸಂಚರಿಸಿದೆ. ಸಂಪೂರ್ಣ ಸ್ವದೇಶದಲ್ಲಿ ತಯಾರಾದ ರೈಲೊಂದು ಈ ವೇಗದಲ್ಲಿ ಸಂಚರಿಸಿರುವುದು ಇದೇ ಮೊದಲು ಎಂದು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ಜನರಲ್ ಮ್ಯಾನೇಜರ್ ಎಸ್ ಮಣಿ ತಿಳಿಸಿದ್ದಾರೆ. ರೈಲಿನ ಪ್ರಮುಖ ಪರೀಕ್ಷೆಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಸಣ್ಣ ಹೊಂದಾಣಿಕೆ ಕೆಲಸವಷ್ಟೇ ಬಾಕಿಯಿದೆ. ವರದಿಗಳನ್ನು ನೋಡಿ ಕೊನೆ ಹಂತದ ಸುಧಾರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ತಾಂತ್ರಿಕ ಸಮಸ್ಯೆ ಕಾಣಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

    ರೈಲ್ವೇ ಸಚಿವ ಪಿಯೂಶ್ ಗೋಯಲ್ ಗಂಟೆಗೆ 180 ಕಿ.ಮೀ ವೇಗದಲ್ಲಿ ಟಿ-18 ರೈಲು ಸಂಚರಿಸುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಎಲ್ಲ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ ಟಿ-18 ರೈಲು ಜನವರಿಯಲ್ಲಿ ಹಳಿಯಲ್ಲಿ ಸಂಚರಿಸುವ ಸಾಧ್ಯತೆಯಿದೆ.

    ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಪರ್ಯಾಯವಾಗಿ ಈಗಿರುವ ಹಳಿಗಳಲ್ಲೇ ಈ ರೈಲು ಸೇವೆಯನ್ನು ಆರಂಭಿಸಲು ರೈಲ್ವೇ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಅಕ್ಟೋಬರ್ 29ರಂದು ಹಸಿರು ನಿಶಾನೆ ತೋರಿಸಲಾಗಿದ್ದ ಈ ರೈಲು ಗಂಟೆಗೆ 200 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿ 60 ಸಾವಿರ ಕಿ.ಮೀ ಉದ್ದದ ರೈಲ್ವೇ ಹಳಿಯಿದ್ದು, ಇದರಲ್ಲಿ ಶೇ. 0.3 ಹಳಿಗಳಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲನ್ನು ಓಡಿಸಬಹುದು ಎಂದು ವರದಿಯೊಂದು ತಿಳಿಸಿದೆ.

    ರೈಲಿನ ವಿಶೇಷತೆ ಏನು?
    ಭಾರತೀಯ ರೈಲ್ವೇ ವ್ಯವಸ್ಥೆ ಹಳೆ ಕಾಲದ್ದು ಎನ್ನುವ ಟೀಕೆಗೆ ಉತ್ತರ ಎನ್ನುವಂತೆ ಚೆನ್ನೈ ಮೂಲದ ಐಸಿಎಫ್ ಟಿ-18 ರೈಲನ್ನು ಅಭಿವೃದ್ಧಿ ಪಡಿಸಿದೆ. ವಿದೇಶಿ ರೈಲುಗಳಲ್ಲಿ ಇರುವಂತೆ ಇದು ಸಂಪೂರ್ಣ ಹವಾ ನಿಯಂತ್ರಣ ಹಾಗೂ ಸಿಸಿಟಿವಿ ವ್ಯವಸ್ಥೆ ಹೊಂದಿದೆ. ರೈಲಿನಲ್ಲಿ 78 ಆಸನಗಳ ಸಾಮಾನ್ಯ ಬೋಗಿಗಳಿದ್ದರೆ, ಮಧ್ಯದಲ್ಲಿ ತಲಾ 52 ಆಸನಗಳ ಎರಡು ಎಕ್ಸಿಕ್ಯುಟಿವ್ ಬೋಗಿಯನ್ನು ನೀಡಲಾಗಿದೆ.

    2018 ರಲ್ಲಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಈ ರೈಲುಗಳಿಗೆ `ಟ್ರೈನ್ 18′ ಎಂದು ಹೆಸರಿಡಲಾಗಿದ್ದು ಈಗಿನ ರೈಲುಗಳಂತೆ ಪ್ರತ್ಯೇಕ ಎಂಜಿನ್ ಹೊಂದಿರುವುದಿಲ್ಲ. ಬದಲಿಗೆ ಮೆಟ್ರೋ ರೈಲುಗಳಂತೆ ವಿದ್ಯುತ್ ಶಕ್ತಿ ಪ್ರತಿ ಚಕ್ರಕ್ಕೂ ಮೋಟಾರುಗಳ (ಟ್ರಾಕ್ಷನ್ ಮೋಟಾರ್) ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ವಿಮಾನದಲ್ಲಿರುವಂತೆ ಕಾಕ್‍ಪಿಟ್‍ನಲ್ಲಿ ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ವೇಗದಲ್ಲಿ ರೈಲು ಸಂಚರಿಸುತ್ತದೆ.

    ಅಲ್ಯುಮೀನಿಯಂ ಬಾಡಿ ಇರುವ ಕಾರಣ ಕಡಿಮೆ ಭಾರ ಹೊಂದಿದ್ದರಿಂದ ಹೆಚ್ಚಿನ ವೇಗದಲ್ಲಿ ಹೋಗುತ್ತದೆ. ಇದು ಸೆಮಿ ಹೈ ಸ್ಪೀಡ್ ರೈಲಾಗಿರುವ ಕಾರಣ ಗಂಟೆಗೆ 220 ಕಿ.ಮೀ. ವೇಗದವರೆಗೆ ಸಂಚರಿಸುವ ಸಾಮರ್ಥ್ಯವನ್ನು ಪಡೆದಿದೆ.

    ವಿದೇಶದ ರೈಲುಗಳಲ್ಲಿರುವಂತೆ ವೈಫೈ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ತಿರುಗಿಸಬಹುದಾದ ಸೀಟುಗಳು, ಚಾರ್ಜರ್ ವ್ಯವಸ್ಥೆ ವೃದ್ಧರಿಗೆ, ಅಂಗವಿಕಲರಿಗೆ ಅನುಕೂಲವಾಗುವಂತೆ ಮಡಚುವ ಮೆಟ್ಟಿಲುಗಳು ಈ ರೈಲಿನಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈಲಿನಲ್ಲಿ ವಿಶ್ವದರ್ಜೆಯ ಸೇವೆ – ಮೇಕ್ ಇನ್ ಇಂಡಿಯಾ ಟ್ರೇನ್ 18ನಲ್ಲಿ ಇರೋ ವಿಶೇಷತೆಗಳೇನು?

    ರೈಲಿನಲ್ಲಿ ವಿಶ್ವದರ್ಜೆಯ ಸೇವೆ – ಮೇಕ್ ಇನ್ ಇಂಡಿಯಾ ಟ್ರೇನ್ 18ನಲ್ಲಿ ಇರೋ ವಿಶೇಷತೆಗಳೇನು?

    ನವದೆಹಲಿ: ವಿಶ್ವದರ್ಜೆಯ ಎಂಜಿನ್ ರಹಿತ “ಟ್ರೇನ್ 18” ಹೆಸರಿನ ರೈಲನ್ನು ಇದೇ ಜೂನ್ ನಲ್ಲಿ ಹಳಿಗಿಳಿಸಲು ಭಾರತೀಯ ರೈಲ್ವೇ ಮುಂದಾಗಿದೆ.

    ಎಂಜಿನ್ ರಹಿತ ರೈಲುಗಳು ಸದ್ಯ ಮೆಟ್ರೋ ನಗರಗಳಲ್ಲಿ ಮಾತ್ರ ಸಂಚರಿಸುತ್ತಿದೆ. ಆದರೆ ಈ ವರ್ಷದ ಜೂನ್ ನಲ್ಲಿ ಟ್ರೇನ್ 18 ಮತ್ತು 2020ರ ವೇಳೆಗೆ ಟ್ರೇನ್ 20 ಹೆಸರಿನ ರೈಲನ್ನು ಓಡಿಸಲು ರೈಲ್ವೇ ಇಲಾಖೆ ಸಿದ್ಧತೆ ನಡೆಸಿದೆ.

    ಈ ಎರಡು ವಿಶ್ವ ದರ್ಜೆ ರೈಲುಗಳಿಂದ ಪ್ರಯಾಣದ ಅವಧಿಯು 20% ಕಡಿಮೆಯಾಗಲಿದೆ. ಈಗ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಸ್ಥಾನವನ್ನು ಹೊಸ ಸೆಮಿ- ಹೈಸ್ಪೀಡ್ ರೈಲುಗಳು ತುಂಬಲಿದೆ. ಈ ಮೂಲಕ ಹಂತಹಂತವಾಗಿ ರಾಜಧಾನಿ, ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ನಿಲ್ಲಿಸಲು ಸಚಿವಾಲಯ ಮುಂದಾಗಿದೆ.

     

    ಈ ಎರಡು ರೈಲುಗಳನ್ನು ಚೆನ್ನೈನಲ್ಲಿರುವ ರೈಲ್ವೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ವರ್ಷ ಜೂನ್ ಒಳಗಾಗಿ 16 ಕೋಚ್‍ಗಳ ಮೊದಲ ರೈಲನ್ನು ಹೊರ ತರುವ ನಿರೀಕ್ಷೆಯಿದೆ. ಇದೇ ರೈಲುಗಳನ್ನು ಆಮದು ಮಾಡಿಕೊಂಡಿದ್ದಲ್ಲಿ ನಿರ್ಮಾಣಕ್ಕೆ ತಗಲಿದ್ದ ಎರಡರಷ್ಟು ವೆಚ್ಚವಾಗುತಿತ್ತು ಎಂದು ಐಸಿಎಫ್ ಸ್ಪಷ್ಟಪಡಿಸಿದೆ.

    ಟ್ರೇನ್ 8 ಉಕ್ಕಿನಿಂದ ನಿರ್ಮಾಣವಾಗುತ್ತಿದ್ದು ಟ್ರೇನ್ 20 ಅಲ್ಯೂಮಿನಿಯಂ ನದ್ದಾಗಿರುತ್ತದೆ. ಈ ರೈಲುಗಳು ಘಂಟೆಗೆ 160 ಕಿ.ಮೀ. ವೇಗದಲ್ಲಿ ಓಡುವ ಸಾಮಥ್ರ್ಯವನ್ನು ಹೊಂದಿದೆ. ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಘಂಟೆಗೆ 90 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿವೆ.

    ಹೊಸ ರೈಲುಗಳಲ್ಲಿ ಎಂಜಿನ್ ಹಿಂದೆ ಮುಂದೆ ಮಾಡುವ ಅವಶ್ಯಕತೆ ಇರುವುದಿಲ್ಲ. ರೈಲುಗಳು ಬೇಗನೆ ವೇಗವನ್ನು ಪಡೆದುಕೊಳ್ಳಲಿದೆ ಹಾಗೆ ಕಡಿಮೆ ಹೊಂದಲಿದೆ. ಹಾಗಾಗಿ ಪ್ರಯಾಣದ ಸಮಯವನ್ನು ತಗ್ಗಿಸಲಿದೆ.

    ಕಾರುಗಳಲ್ಲಿರುವಂತೆ ಬೋಗಿಗಳ ಒಳಗಿನ ಆವರಣವನ್ನು ವಿನ್ಯಾಸ ಮಾಡಲಾಗಿದ್ದು, ಗರಿಷ್ಟ 56 ಎಕ್ಸಿಕ್ಯೂಟಿವ್ ಮತ್ತು 78 ನಾನ್ ಎಕ್ಸಿಕ್ಯೂಟಿವ್ ಆಸನಗಳು ಇರಲಿದೆ. ರೈಲಿನ ಎರಡೂ ಬದಿಯಲ್ಲೂ ಅಂತರ ಇಲ್ಲದ ಒಂದೇ ನೇರ ಗ್ಲಾಸ್ ಕಿಟಕಿ ಇರುತ್ತದೆ.

    ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆಯನ್ನು ಳಗೊಂಡಿದ್ದು ವೈಫೈ ಸೌಲಭ್ಯ ಇರಲಿದೆ. ಜಿಪಿಎಸ್ ಆಧಾರಿತ ಗ್ರಾಹಕರ ಮಾಹಿತಿ ವ್ಯವಸ್ಥೆ, ಇನ್ಫೋಟೈನ್ ಮೆಂಟ್ ಸಿಸ್ಟಂ ಸಹ ಇರಲಿದೆ. ಸ್ವಯಂ ಚಾಲಿತ ರೈಲಿನ ಬಾಗಿಲು ಇರಲಿದ್ದು, ರೈಲ್ವೆ ನಿಲ್ದಾಣ ಬಂದಾಗ ತನಗೆ ತಾನೆ ತೆರೆದುಕೊಳ್ಳಲಿವೆ. ರಬ್ಬರ್ ಪ್ಲೋರಿಂಗ್ ಮತ್ತು ಎಲ್‍ಇಡಿ ದೀಪದ ವ್ಯವಸ್ಥೆ ಇರಲಿದೆ.

    ಬಯೋ-ವಾಕ್ಯೂಮ್ ಶೌಚಾಲಯಗಳ ಜೊತೆ ಸುಂದರವಾದ ಸ್ನಾನದ ಮನೆ ಇರಲಿದೆ. ಸಾಮಾನುಗಳ ಶೆಲ್ಫ್ ವಿಶಾಲವಾಗಿದ್ದು ಹೆಚ್ಚಿನ ಸಾಮಾನುಗಳನ್ನು ಇಡಬಹುದಾಗಿದೆ. ಅಂಗವಿಕಲರಿಗೆ ಸಹಾಯವಾಗಲೆಂದು ವೀಲ್ ಚೇರ್ ಗಳಿಗೆ ಜಾಗ ಕಲ್ಪಿಸಲಾಗಿದೆ. ಎರಡು ಬೋಗಿಗಳ ಮಧ್ಯೆ ಗಾಜಿನ ಬಾಗಿಲುಗಳು ಇರಲಿದೆ.