Tag: trailor

  • ಯುಗಾದಿಗೆ ‘ಚಕ್ರವರ್ತಿ’ ಸಿನಿಮಾದ ಟ್ರೇಲರ್ ರಿಲೀಸ್

    ಯುಗಾದಿಗೆ ‘ಚಕ್ರವರ್ತಿ’ ಸಿನಿಮಾದ ಟ್ರೇಲರ್ ರಿಲೀಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದ ಟ್ರೇಲರ್ ರಿಲಿಸ್ ಆಗಿದೆ. ಚಕ್ರವರ್ತಿ ಈಗಾಗಲೇ ಹಲವು ವಿಶೇಷತೆಗಳಿಂದ ಸೌಂಡ್ ಮಾಡ್ತಿದೆ.

    ದರ್ಶನ್ ಈ ಸಿನಿಮಾದಲ್ಲಿ ಡಿಫರೆಂಟ್ ಹೇರ್ ಸ್ಟೈಲ್‍ನಲ್ಲಿ ಮಿಂಚಿದ್ದು, ತುಂಬಾನೇ ಸ್ಟೈಲಿಶ್ ಡಾನ್ ಆಗಿ ಸಿನಿರಸಿಕರನ್ನ ರಂಜಿಸಲು ರೆಡಿಯಾಗಿದ್ದಾರೆ.

    ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿ ದೀಪಾ ಸನ್ನಿದಿ ಸ್ಕ್ರೀನ್ ಶೇರ್ ಮಾಡ್ಕೊಂಡಿದ್ದಾರೆ. ಚಿಂತನ್ ಆಕ್ಷನ್ ಕಟ್ ಹೇಳಿರೋ ಸಿನಿಮಾದಲ್ಲಿ ಬಹು ದೊಡ್ಡ ತಾರಾಬಳಗವೇ ಇದೆ. ಚಕ್ರವರ್ತಿಯಲ್ಲಿ ಆದಿತ್ಯ, ಸೃಜನ್ ಲೋಕೇಶ್ ಸೇರಿದಂತೆ ಹಲವು ಕಲಾವಿದರ ದಂಡೇ ಸಿನಿಮಾದಲ್ಲಿದೆ.

    ಕೆ. ವಿ ಸತ್ಯಪ್ರಕಾಶ್ ಮತ್ತು ಕೆ ಎಸ್ ಸೂರಜ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಎಷ್ ಸಿ ವೇಣು ಸಿನೆಮಾಟೋಗ್ರಾಫರ್ ಕೆ. ಎಂ ಪ್ರಕಾಶ್ ಸಂಕಲನಕಾರರಾಗಿದ್ದು, ಈಶ್ವರಿ ಕುಮಾರ್ ನಿರ್ದೇಶನದ ಈ ಚಿತ್ರ ಏಪ್ರಿಲ್ 14ಕ್ಕೆ ರಿಲೀಸ್ ಆಗಲಿದೆ. ಸದ್ಯ ದಚ್ಚು ಅಭಿಮಾನಿಗಳು ಟ್ರೇಲರ್ ನೋಡಿ ಯುಗಾದಿ ಸೆಲೆಬ್ರೇಟ್ ಮಾಡ್ತಿದ್ದಾರೆ.

    ಬಿಡುಗಡೆಯಾದ ಎರಡೇ ಗಂಟೆಯಲ್ಲಿ ಟ್ರೇಲರ್ 1.64 ಲಕ್ಷ ವ್ಯೂ ಕಂಡಿದೆ.

  • ಮಾರಿಕಾಂಬೆ ಜಾತ್ರೆಯಲ್ಲಿ ಲೂಸ್ ಮಾದ ಅಭಿನಯದ ದುನಿಯಾ2 ಚಿತ್ರದ ಆಡಿಯೋ, ಟ್ರೇಲರ್ ಬಿಡುಗಡೆ

    ಮಾರಿಕಾಂಬೆ ಜಾತ್ರೆಯಲ್ಲಿ ಲೂಸ್ ಮಾದ ಅಭಿನಯದ ದುನಿಯಾ2 ಚಿತ್ರದ ಆಡಿಯೋ, ಟ್ರೇಲರ್ ಬಿಡುಗಡೆ

    ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ನಡೆಯುತ್ತಿರುವ ಮಾರಿಕಾಂಬೆ ಜಾತ್ರೆಯಲ್ಲಿ ಲೂಸ್ ಮಾದ ಯೋಗೀಶ್ ಅಭಿನಯದ ದುನಿಯಾ 2 ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಲಾಯಿತು.

    ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಡಿಯೋ ಬಿಡುಗಡೆ ಮಾಡಿ, ಚಿತ್ರ ಶತದಿನ ಪ್ರದರ್ಶನ ಕಾಣಲಿ ಅಂತಾ ಹೇಳಿದ್ರು.

    10 ವರ್ಷಗಳ ಹಿಂದೆ ದುನಿಯಾ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದಿದ್ದೆ. ಇದೀಗ ದುನಿಯಾ 2 ಚಿತ್ರದಲ್ಲಿ ನಾಯಕನಾಗಿ ಮತ್ತೆ ಅಭಿನಯಿಸಿದ್ದೇನೆ. ಸಾಗರ ಮಾರಿಕಾಂಬೆ ಜಾತ್ರೆಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಈ ಸಿನೆಮಾವನ್ನೂ ಗೆಲ್ಲಿಸಿ ಅಂತಾ ಯೋಗೀಶ್ ಹೇಳಿದ್ರು.

    ಬಳಿಕ ಅಭಿಮಾನಿಗಳ ಆಗ್ರಹದ ಮೇರೆಗೆ ಹುಡುಗರು ಹಾಗೂ ಸಿದ್ಲಿಂಗು ಚಿತ್ರದ ಡೈಲಾಗ್ ಹೇಳಿ ರಂಜಿಸಿದರು. ಚಿತ್ರದ ಸಂಗೀತ ನಿರ್ದೇಶಕ ಭರತ್, ನಿರ್ದೇಶಕ ಹರಿ, ನಿರ್ಮಾಪಕರಾದ ಸಿದ್ದರಾಜು, ಶೃತಿ ವೆಂಕಟೇಶ್ ಇನ್ನಿತರರು ಇದ್ದರು.