Tag: Tragedy

  • ಶೀಘ್ರವೇ ಸಿನಿಮಾ ಶೂಟಿಂಗ್ ನಿಯಮಗಳಲ್ಲಿ ಬದಲಾವಣೆ: ಬೊಮ್ಮಾಯಿ

    ಶೀಘ್ರವೇ ಸಿನಿಮಾ ಶೂಟಿಂಗ್ ನಿಯಮಗಳಲ್ಲಿ ಬದಲಾವಣೆ: ಬೊಮ್ಮಾಯಿ

    ಬೆಂಗಳೂರು: ಶೀಘ್ರವೇ ಸಿನಿಮಾ ಶೂಟಿಂಗ್ ನಿಯಮಗಳಲ್ಲಿ ಬದಲಾವಣೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ‘ಲವ್ ಯೂ ರಚ್ಚು’ ದುರಂತ ಸಂಬಂಧ ಸಿಎಂ ಪ್ರತಿಕ್ರಿಯಿಸಿದರು. ಈ ರೀತಿಯ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕೆಲವರು ನಿಯಮಗಳನ್ನು ಫಾಲೋ ಮಾಡುತ್ತಿಲ್ಲ. ಹೀಗಾಗಿ ಸಿನಿಮಾ ಶೂಟಿಂಗ್ ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತೇವೆ ಎಂದರು.

    ನಾಳೆ ಅಥವಾ ನಾಡಿದ್ದು ಕೆಲವು ಆದೇಶಗಳನ್ನು ಹೊರಡಿಸುತ್ತೇವೆ. ಅನುಮತಿ ತೆಗೆದುಕೊಳ್ಳಲು ಅನುಕೂಲನೂ ಆಗಬೇಕು. ಹಾಗೆಯೇ ಅನುಮತಿ ಇಲ್ಲದೆ ಶೂಟಿಂಗ್ ನಡೆಯಲು ಬಾರದು ಇಂತಹ ಆದೇಶ ಜಾರಿಗೆ ತರುವುದಾಗಿ ಸಿಎಂ ತಿಳಿಸಿದರು. ಇದನ್ನೂ ಓದಿ: ಅಮ್ಮ ನಿನ್ನ ಚೆನ್ನಾಗಿ ನೋಡ್ಕೋತ್ತೀನಿ ಅಂದ್ಬಿಟ್ಟು ರಸ್ತೆಯಲ್ಲೇ ಬಿಟ್ಟೋದ: ವಿವೇಕ್ ತಾಯಿ ಕಣ್ಣೀರು

    ನಿನ್ನೆ ಬಿಡದಿ ಬಳಿಯ ತೋಟದಲ್ಲಿ ‘ಲವ್ ಯೂ ರಚ್ಚು’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಸುವ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ 35 ವರ್ಷದ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು.

    ಈ ಹಿಂದೆ ಅಂದರೆ 2016ರಲ್ಲಿ `ಮಾಸ್ತಿ ಗುಡಿ’ ಸಿನಿಮಾದ ವೇಳೆ ಫೈಟರ್ ಅನಿಲ್, ಉದಯ್ ಸಾವನ್ನಪ್ಪಿದ್ದರು. ಇದನ್ನೂ ಓದಿ: ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

  • ರಾಜಕಾಲುವೆಗೆ ಬಿದ್ದು ಎರಡೂವರೆ ವರ್ಷದ ಮಗು ಬಲಿ

    ರಾಜಕಾಲುವೆಗೆ ಬಿದ್ದು ಎರಡೂವರೆ ವರ್ಷದ ಮಗು ಬಲಿ

    ಬೆಂಗಳೂರು: ರಾಜಕಾಲುವೆಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ದೊಡ್ಡಬೊಮ್ಮಸಂದ್ರದ ಬಳಿಯಲ್ಲಿ ನಡೆದಿದೆ.

    ತನುಶ್ರೀ (3) ಸಾವನ್ನಪ್ಪಿದ ಮಗು. ಕಲುಬುರಗಿ ಮೂಲದ ಲಕ್ಷ್ಮಿ ಹಾಗೂ ಸಾಬಣ್ಣ ದಂಪತಿ ಮಗಳು. ಕಳೆದ 4 ವರ್ಷಗಳ ಹಿಂದೆ ನಗರದಕ್ಕೆ ಬಂದಿದ್ದ ದಂಪತಿ ರಾಜಕಾಲುವೆ ಪಕ್ಕದಲ್ಲಿ ಟೆಂಟ್ ನಿರ್ಮಿಸಿಕೊಂಡು ನೆಲೆಸಿದ್ದರು. ಜೀವನಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದರು.

    ಬೆಳಗ್ಗೆ ಆಟ ಆಡುವಾಗ ರಾಜಕಾಲುವೆಗೆ ಬಿದ್ದು ಮಗು ಮೃತಪಟ್ಟಿದೆ. ಈ ವೇಳೆ ಎಲ್ಲರೂ ಮನೆ ಒಳಗಡೆ ಇದ್ದರೂ, ಯಾರೂ ಮಗು ರಾಜಕಾಲುವೆಗೆ ಬಿದ್ದಿರುವುದನ್ನು ಗಮನಿಸಿಲ್ಲ. ಮಗು ಕಾಣದೇ ಇದ್ದಾಗ ಹುಡುಕಾಡಿದಾಗ ರಾಜಕಾಲುವೆಗೆ ಬಿದ್ದಿರುವುದು ಗೊತ್ತಾಗಿದೆ.

    ಈ ಪ್ರದೇಶದಲ್ಲಿ ಸುಮಾರು 20 ಕುಟುಂಬಗಳು ಟೆಂಟ್ ನಿರ್ಮಿಸಿಕೊಂಡು ವಾಸ ನಡೆಸುತ್ತಿವೆ. ರಾಜಕಾಲುವೆ ಸುತ್ತಲೂ ಮನೆಗಳಿದ್ದರೂ ಕಾಲುವೆಯನ್ನು ಮುಚ್ಚಿಲ್ಲ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    https://www.youtube.com/watch?v=5osCCOmeCLo

  • ವಿಡಿಯೋ: ಪ್ರವಾಸಕ್ಕೆ ತೆರಳಿದ್ದ ಆರು ಜನ ಪ್ರವಾಸಿಗರು ನಾಗರಮಡಿ ಫಾಲ್ಸ್ ನಲ್ಲಿ ನೀರು ಪಾಲು

    ವಿಡಿಯೋ: ಪ್ರವಾಸಕ್ಕೆ ತೆರಳಿದ್ದ ಆರು ಜನ ಪ್ರವಾಸಿಗರು ನಾಗರಮಡಿ ಫಾಲ್ಸ್ ನಲ್ಲಿ ನೀರು ಪಾಲು

    ಕಾರವಾರ: ಪ್ರವಾಸಕ್ಕೆಂದು ಆಗಮಿಸಿದ್ದ ಆರು ಜನ ಪ್ರವಾಸಿಗರು ನೀರಿನಲ್ಲಿ ಕೊಚ್ಚಿಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಂಡಿಯಾ ಬಳಿಯ ನಾಗರಮಡಿ ಫಾಲ್ಸ್ ನಲ್ಲಿ ನಡೆದಿದೆ.

    ಗೋವಾದ ಮಡಗಾವ್ ದಿಂದ ಕಾರವಾರದ ನಾಗರಮಡಿ ಫಾಲ್ಸ್‍ಗೆ ಆಗಮಿಸಿದ್ದ 25 ಕ್ಕೂ ಹೆಚ್ಚು ಜನ ಪ್ರವಾಸಿ ತಂಡ ಮದ್ಯ ಸೇವಿಸಿ ನೀರಿನಲ್ಲಿ ಇಳಿದಿದ್ದರು. ಈ ಸಮಯದಲ್ಲಿ ಹೆಚ್ಚಿನ ಮಳೆಯಿಂದಾಗಿ ನೀರಿನ ರಭಸ ಹೆಚ್ಚಾಗಿ ಆರು ಜನರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

    ಪ್ರಂಸಿಲ್ಲಾ(21) ಫಿಯಾನ(28) ರೇಣುಕಾ(23) ಮಾರ್ಸಲೀನ ಮೆಕ್ಸಿಕಾ(38) ಸಮೀರ್ ಗಾವಡೇ(28) ಹಾಗೂ ಇನ್ನೊಬ್ಬರ ಗುರುತು ಪತ್ತೆಯಾಗಬೇಕಿದ್ದು ನೀರಿನಲ್ಲಿ ಕೊಚ್ಚಿಹೋದವರಾಗಿದ್ದಾರೆ. ಪ್ರಂಸಿಲ್ಲಾ ಮತ್ತು ಪಿಯಾನ ಎಂಬವರ ಶವವನ್ನ ನೀರಿನಿಂದ ಹೊರತೆಗೆಯಲಾಗಿದ್ದು ಉಳಿದವರ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಘಟನೆ ಸಂಬಂಧ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/m7zafFLfXvk

     

  • ವಿಡಿಯೋ: ಮಂಡ್ಯದಲ್ಲಿ ತಪ್ಪಿದ ಕೊಂಡ ದುರಂತ

    ವಿಡಿಯೋ: ಮಂಡ್ಯದಲ್ಲಿ ತಪ್ಪಿದ ಕೊಂಡ ದುರಂತ

    ಮಂಡ್ಯ: ಜಿಲ್ಲೆಯಲ್ಲಿ ಕಳೆದ 30 ದಿನಗಳ ಅವಧಿಯಲ್ಲಿ ನಾಲ್ಕು ಕೊಂಡ ದುರಂತಗಳು ಸಂಭವಿಸಿದ್ದು, ಮತ್ತೊಂದು ಕೊಂಡ ಅವಘಡ ಸ್ವಲ್ಪದರಲ್ಲೇ ತಪ್ಪಿದೆ.

    ನಾಗಮಂಗಲ ಪಟ್ಟಣದ ಬಡಗೊಡಮ್ಮ ದೇವಿಯ ಕೊಂಡೋತ್ಸವ ಇಂದು ಬೆಳಗ್ಗೆ ವೈಭವದಿಂದ ನೆರೆವೇರಿತು. ಕೊಂಡೋತ್ಸವದಲ್ಲಿ ಹಲವು ಭಕ್ತರು ಕೊಂಡವನ್ನ ಯಶಸ್ವಿಯಾಗಿ ಹಾದು ಹೋದರು. ಇದೇ ಸಂದರ್ಭದಲ್ಲಿ ಕೃಷ್ಣಪ್ಪ ಎಂಬ ಭಕ್ತ ತಲೆಯ ಮೇಲೆ ದೇವರ ವಿಗ್ರಹ ಹೊತ್ತು ಬಂದು, ಕೊಂಡ ಹಾಯಲು ಆರಂಭಿಸಿದ್ರು. ಆದ್ರೆ ಕೊಂಡ ಹಾಯುವಾಗ ಅರ್ಧ ದಾರಿ ಕ್ರಮಿಸಿದ ನಂತರ ಮುಗ್ಗರಿಸಿದಂತಾಗಿ, ತಲೆಯ ಮೇಲೆ ಹೊತ್ತಿದ್ದ ದೇವ್ರ ವಿಗ್ರಹ ಹಿಂದಕ್ಕೆ ವಾಲಿಕೊಳ್ತು.

    ಇದನ್ನು ನೋಡಿದ ಭಕ್ತರಲ್ಲಿ ಕೃಷ್ಣಪ್ಪ ಎಲ್ಲಿ ಕೊಂಡದ ಒಳಗೆ ದೇವರ ವಿಗ್ರಹದ ಸಮೇತ ಬೀಳುತ್ತಾರೋ ಎಂಬ ಆತಂಕ ಮೂಡಿತ್ತು. ಆದ್ರೆ ಅಷ್ಟರಲ್ಲಿ ಸಾವರಿಸಿಕೊಂಡ ಕೃಷ್ಣಪ್ಪ ಯಶಸ್ವಿಯಾಗಿ ಕೊಂಡ ಹಾಯ್ದರು. ಕೊಂಡದಿಂದ ಹೊರಗೆ ಬಂದ ಕೃಷ್ಣಪ್ಪ ಅವರನ್ನು ಭಕ್ತರು ತಕ್ಷಣ ಹಿಡಿದುಕೊಂಡು ರಕ್ಷಿಸಿದ್ರು.

    ಇದನ್ನೂ ಓದಿ: ಮಂಡ್ಯದಲ್ಲಿ ಅಗ್ನಿಕುಂಡಕ್ಕೆ ಬಿದ್ದು ಇಬ್ಬರು ಗಾಯ

    https://www.youtube.com/watch?v=Ckj_8VUmWNY