Tag: traffic

  • ಟ್ರಾಫಿಕ್‍ನಲ್ಲಿ ಅಂಬುಲೆನ್ಸ್‌ಗಳು ಸಿಲುಕಿ ಕಿರಿಕಿರಿ- ಎಚ್ಚೆತ್ತ ಪೊಲೀಸರಿಂದ ಅಡಾಪ್ಟಿವ್ ಸಿಗ್ನಲ್ ಅಳವಡಿಕೆ

    ಟ್ರಾಫಿಕ್‍ನಲ್ಲಿ ಅಂಬುಲೆನ್ಸ್‌ಗಳು ಸಿಲುಕಿ ಕಿರಿಕಿರಿ- ಎಚ್ಚೆತ್ತ ಪೊಲೀಸರಿಂದ ಅಡಾಪ್ಟಿವ್ ಸಿಗ್ನಲ್ ಅಳವಡಿಕೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್‍ನಲ್ಲಿ ಅಂಬುಲೆನ್ಸ್ (Ambulance) ಸಿಕ್ಕಾಕಿಕೊಂಡು ದಾರಿ ಮಧ್ಯದಲ್ಲಿ ಎಷ್ಟೋ ಜೀವಗಳು ಕೊನೆ ಉಸಿರು ಬಿಟ್ಟಿರೋ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಸಂಚಾರ ದಟ್ಟಣೆಯಲ್ಲಿ ಅಂಬುಲೆನ್ಸ್ ಸಿಲುಕಿಕೊಂಡಿರುವಾಗ ಸಂಚಾರಿ ಪೊಲೀಸರು ಕೂಡಲೇ ಟ್ರಾಫಿಕ್ (Traffic) ಕ್ಲಿಯರ್ ಮಾಡಿ ಅಂಬುಲೆನ್ಸ್‍ಗೆ ದಾರಿ ಮಾಡಿಕೊಡೋದಕ್ಕೆ ಕಷ್ಟ ಸಾಧ್ಯವಾಗುವ ಪರಿಸ್ಥಿತಿ ಬೆಂಗಳೂರಿನಲ್ಲಿದೆ.

    ಸಂಚಾರ ದಟ್ಟಣೆಯಿಂದ ಅಂಬುಲೆನ್ಸ್ ಗೆ ಆಗುತ್ತಿರೋ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಸಂಚಾರಿ ಪೊಲೀಸರು ಅಡಾಪ್ಟಿವ್ ಸಿಗ್ನಲ್ (Adaptive Signal) ಮೊರೆ ಹೋಗುತ್ತಿದ್ದಾರೆ. ಬೆಂಗಳೂರಿನಂತಹ ಸಂಚಾರ ದಟ್ಟಣೆಯ ಸ್ಥಳಗಳಲ್ಲಿ ಅಡಾಪ್ಟಿವ್ ಸಿಗ್ನಲ್ ಪರಿಹಾರವಾಗುತ್ತೆ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಹೇಳುತ್ತಾರೆ. ಇದನ್ನೂ ಓದಿ: ದಟ್ಟ ಮಂಜಿನ ನಡುವೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ

    ಅಡಾಪ್ಟಿವ್ ಸಿಗ್ನಲ್ ಬೆಂಗಳೂರಿನ ಸಿಗ್ನಲ್‍ಗಳಲ್ಲಿ ಅಳವಡಿಸುವುದರಿಂದ ಅಂಬುಲೆನ್ಸ್ 200 ಮೀಟರ್ ದೂರದಲ್ಲಿ ಬರುತ್ತಿರುವಾಗ ಸಿಗ್ನಲ್‍ಗಳಲ್ಲಿ ಸಂಚಾರಿ ಪೊಲೀಸರು ಇರಲಿ ಇರದೇ ಇರಲಿ ಆಟೋಮಿಟಿಕ್ ಆಗಿ ಸಿಗ್ನಲ್ ಫ್ರೀ ಆಗುತ್ತೆ. 200 ಮೀಟರ್ ದೂರದಲ್ಲಿ ಅಂಬುಲೆನ್ಸ್ ಇರುವಾಗಲೇ ಸಿಗ್ನಲ್ ಫ್ರೀ ಆಗುವುದುರಿಂದ ಸಂಚಾರದಟ್ಟಣೆಯಲ್ಲಿ ಅಂಬುಲೆನ್ಸ್‍ಗಳು ಸಿಲುಕಿಕೊಂಡು ರೋಗಿಗಳು ಒದ್ದಾಡೋದು ತಪ್ಪುತ್ತೆ.

    ಸಂಚಾರಿ ಪೊಲೀಸರು ನಗರದ ಪ್ರಮುಖ 160 ಸಿಗ್ನಲ್‍ಗಳಲ್ಲಿ ಚಿಜಚಿಠಿಣive sigಟಿಚಿಟ ಫಿಕ್ಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. 160 ಅಡಾಪ್ಟಿವ್ ಸಿಗ್ನಲ್‍ಗಳಗಳು ಖರೀದಿ ಮಾಡಲು ಅನುಮತಿ ಕೂಡ ಪಡೆದಿದುಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಬೆಂಗಳೂರಿನಲ್ಲಿ ಅಂಬುಲೆನ್ಸ್‍ಗಳಿಗೆ ಸಿಗ್ನಲ್ ಫ್ರೀ ಮಾಡಿಕೊಡಲು ಒಂದೊಳ್ಳೆ ಅವಕಾಶ ಓದಗಿಬರುವುದರಲ್ಲಿ ಅನುಮಾನವೇ ಇಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಟ್ಟ ಮಂಜಿನಿಂದ ಕಾಣದಂತಾದ ಚೀನಾದ ಸೇತುವೆ – ಅಪಘಾತಕ್ಕೀಡಾಗಿ ರಾಶಿ ಬಿದ್ದ ನೂರಾರು ವಾಹನ

    ದಟ್ಟ ಮಂಜಿನಿಂದ ಕಾಣದಂತಾದ ಚೀನಾದ ಸೇತುವೆ – ಅಪಘಾತಕ್ಕೀಡಾಗಿ ರಾಶಿ ಬಿದ್ದ ನೂರಾರು ವಾಹನ

    ಬೀಜಿಂಗ್: ಭಾರೀ ಮಂಜಿನಿಂದಾಗಿ (Fog) ರಸ್ತೆಗಳು ಕಾಣದೇ ಸೇತುವೆಯೊಂದರಲ್ಲಿ ನೂರಾರು ವಾಹನಗಳು ಅಪಘಾತಕ್ಕೀಡಾಗಿದ್ದಲ್ಲದೇ (Vehicles Crash) ಹತ್ತಾರು ವಾಹನಗಳು ಒಂದರಮೇಲೊಂದು ರಾಶಿ ಬಿದ್ದಿರುವ ಘಟನೆ ಚೀನಾದ (China) ಹೆನಾನ್ ಪ್ರಾಂತ್ಯದ ಝೆಂಗ್‌ಝೌನಲ್ಲಿ (Zhengzhou) ಬುಧವಾರ ನಡೆದಿರುವುದಾಗಿ ವರದಿಯಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೋಗಳು ಹರಿದಾಡಿವೆ. ಸೇತುವೆಯೊಂದರ ಮೇಲೆ ಕಾರು, ಟ್ರಕ್ ಸೇರಿದಂತೆ ಹಲವಾರು ವಾಹನಗಳು ಅಪಘಾತಕ್ಕೀಡಾಗಿ, ಒಂದಕ್ಕೊಂದು ಅಂಟಿಕೊಂಡು ರಾಶಿ ಬಿದ್ದಿವೆ. ಟ್ರಾಫಿಕ್‌ನಿಂದ ಹೊರಬರಲಾಗದ ಸ್ಥಿತಿಯಿಂದಾಗಿ ಜನರು ಬಾನೆಟ್ ಮೇಲೆ ನಿಂತುಕೊಂಡಿರುವುದು ಕಂಡುಬಂದಿದೆ.

    ನೂರಾರು ವಾಹನಗಳ ಸರಣಿ ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ, ಹಲವರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಶಿ ಬಿದ್ದ ವಾಹನಗಳನ್ನು ತೆರವುಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಂದಾಜಿನ ಪ್ರಕಾರ, ಸರಣಿ ಅಪಘಾತದಲ್ಲಿ 200ಕ್ಕೂ ಹೆಚ್ಚು ವಾಹನಗಳು ಒಳಗೊಂಡಿವೆ ಎನ್ನಲಾಗಿದೆ. ಸಾವು-ನೋವುಗಳು ಸಂಭವಿಸಿರುವ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇದನ್ನೂ ಓದಿ: ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ – ವಿಮಾನ ಸಂಚಾರಕ್ಕೆ ಅಡಚಣೆ

    ಸ್ಥಳೀಯ ಅಗ್ನಿಶಾಮಕ ಇಲಾಖೆ ತಕ್ಷಣವೇ 11 ಅಗ್ನಿಶಾಮಕ ವಾಹನಗಳು ಹಾಗೂ 66 ಅಗ್ನಿಶಾಮಕ ರಕ್ಷಣಾ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ. ಝೆಂಗ್‌ಝೌನ ಸೇತುವೆಯಲ್ಲಿ ಯಾವುದೇ ವಾಹನಗಳ ಸಂಚಾರವನ್ನು ಪ್ರಸ್ತುತ ನಿಷೇಧಿಸಿ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಮಂಜುಗಡ್ಡೆ ಕುಸಿದು ಮಹಿಳೆ ಸೇರಿ ಭಾರತ ಮೂಲದ ಮೂವರು ನೀರುಪಾಲು

    Live Tv
    [brid partner=56869869 player=32851 video=960834 autoplay=true]

  • ಕಡಿಮೆಯಾಗುತ್ತಿದೆ ಸಿಲಿಕಾನ್‌ ಸಿಟಿಯ ಟ್ರಾಫಿಕ್ ಸಮಸ್ಯೆ

    ಕಡಿಮೆಯಾಗುತ್ತಿದೆ ಸಿಲಿಕಾನ್‌ ಸಿಟಿಯ ಟ್ರಾಫಿಕ್ ಸಮಸ್ಯೆ

    ಬೆಂಗಳೂರು: ಸಿಲಿಕಾನ್‌ ಸಿಟಿಯ ಟ್ರಾಫಿಕ್ ಸಮಸ್ಯೆ(Bengaluru Traffic Problem) ನಿಧನವಾಗಿ ಕಡಿಮೆಯಾಗುತ್ತಿದೆ.

    ಬೆಳಗ್ಗೆ ಮತ್ತು ಸಂಜೆ ವಾಹನದಟ್ಟಣೆ ಇದ್ದರೂ ಹಲವು ಕಡೆ ವಾಹನ ಸವಾರರು ವೀಕೆಂಡ್‌ ಸಂಚಾರದಷ್ಟೇ ಸಲೀಸಾಗಿ ಸಂಚಾರ ಮಾಡುತ್ತಿದ್ದಾರೆ. ಟ್ರಾಫಿಕ್ ಕಿರಿಕಿರಿಗೆ ಸ್ಪೆಷಲ್ ಕಮೀಷನರ್ ಎಂ.ಎ ಸಲೀಂ ಮತ್ತು ಜಂಟೀ ಆಯುಕ್ತ ಅನುಚೇತ್‌ ಕಾರ್ಯಕ್ಷಮತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಏನು ಬದಲಾವಣೆಯಾಗಿದೆ?
    ಒಂದೇ ರಸ್ತೆಯಲ್ಲಿ 2-3 ಸಿಗ್ನಲ್‍ಗಳಿದ್ದರೆ ಒಂದೇ ಬಾರಿಗೆ ಆನ್-ಆಫ್ ಮಾಡಲಾಗುತ್ತಿದೆ. ಇದರಿಂದ ಪ್ರತೀ ಸಿಗ್ನಲ್‍ನಲ್ಲಿ ಸವಾರರು ಕಾಯುವುದು ತಪ್ಪುತ್ತಿದೆ.

    ಬೆಳಗ್ಗೆ 7:30ಕ್ಕೆ ಐಪಿಎಸ್ ಅಧಿಕಾರಿಗಳು ಸೇರಿದಂತೆ ಟ್ರಾಫಿಕ್ ಪೊಲೀಸರು ರಸ್ತೆ ಮೇಲಿರಬೇಕು. ಅರ್ಧ ಗಂಟೆ ಮೊದಲೇ ಎಲ್ಲಾ ಸಿಬ್ಬಂದಿ ಪ್ರಮುಖ ಜಂಕ್ಷನ್‍ಗಳಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ಸಣ್ಣ-ಪುಟ್ಟ ತಿರುವುಗಳಲ್ಲೂ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಫೈನ್ ವಸೂಲಿ ಸಿಬ್ಬಂದಿಯಲ್ಲಿ ಕಡಿತ ಮಾಡಿ ಟ್ರಾಫಿಕ್ ನಿಯಂತ್ರಣಕ್ಕೆ ನಿಯೋಜನೆ ಮಾಡಲಾಗಿದೆ.

    ಜಾಸ್ತಿ ವಾಹನದಟ್ಟಣೆ ಇರುವ ಸಮಯದಲ್ಲಿ ಗೂಡ್ಸ್ ಗಾಡಿಗಳಿಗೆ ನಗರ ಪ್ರವೇಶ ನಿರ್ಬಂಧ ಹೇರಲಾಗಿದೆ. ಮೆಟ್ರೋ ಕಾಮಗಾರಿ ಇದ್ದರೂ ರಿಂಗ್ ರಸ್ತೆಯಲ್ಲಿ ಸರ್ವಿಸ್ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಬಳಕೆ ಮಾಡಲಾಗಿದ್ದು, ಪಾದಾಚಾರಿಗಳಿಗೆ ಅಂಡರ್ ಪಾಸ್ ಬಳಸುವಂತೆ ಸಿಬ್ಬಂದಿ ಮನವೊಲಿಕೆ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಚಾರಿ ನಿಯಮ ಉಲ್ಲಂಘನೆ – ಖಾಸಗಿ ಶಾಲಾ ವಾಹನಗಳಿಗೆ 45 ಸಾವಿರ ರೂ. ದಂಡ

    ಸಂಚಾರಿ ನಿಯಮ ಉಲ್ಲಂಘನೆ – ಖಾಸಗಿ ಶಾಲಾ ವಾಹನಗಳಿಗೆ 45 ಸಾವಿರ ರೂ. ದಂಡ

    ಬೆಳಗಾವಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ 85 ವಾಹನಗಳ ವಿರುದ್ಧ ಜಿಲ್ಲಾ ಪೊಲೀಸರು 129 ಕೇಸ್ ದಾಖಲಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಮೂಡಲಗಿ ತಾಲೂಕು ಸೇರಿದ್ದಂತೆ ಇತರ ಕಡೆ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರು ಖಾಸಗಿ ವಾಹನಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ 85 ವಾಹನಗಳ ವಿರುದ್ಧ 129 ಕೇಸ್ ದಾಖಲಿಸಿ 45,800 ರೂ.ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ

    ಶಾಲಾ ವಾಹನಗಳ ಚಾಲಕರು ಸಂಚಾರಿ ನಿಯಮ ಉಲ್ಲಂಘಿಸಿ ಮಕ್ಕಳನ್ನು ಸೀಟ್‍ಗಿಂತ ಹೆಚ್ಚಾಗಿ ಕರೆದುಕೊಂಡು ಹೋದರೆ ಅಂತಹ ವಾಹನಗಳನ್ನು ಮುಂದಿನ ದಿನಗಳಲ್ಲಿ ಜಪ್ತಿ ಮಾಡಲಾಗುವುದು ಎಂದು ಎಸ್‍ಪಿ ಡಾ.ಸಂಜೀವ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ – ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ಹಣವನ್ನು ಜೀವದ ಹಂಗು ತೊರೆದು ಜಪ್ತಿ ಮಾಡಿದ ಪೊಲೀಸರು

    ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ಹಣವನ್ನು ಜೀವದ ಹಂಗು ತೊರೆದು ಜಪ್ತಿ ಮಾಡಿದ ಪೊಲೀಸರು

    ಹಾವೆರಿ: ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 85 ಲಕ್ಷ ರೂ. ಹಣವನ್ನು ಪೊಲೀಸರು ಜೀವದ ಹಂಗು ತೊರೆದು ಜಪ್ತಿ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ನಡೆದಿದೆ.

    ಅಕ್ರಮವಾಗಿ ಹಣವನ್ನು ಸಾಗಾಣಿಕೆ ಮಾಡುತ್ತಿದ್ದ ಖದೀಮರು ಪೊಲೀಸರನ್ನು ಕಂಡು ಕಾರನ್ನು ಸ್ಪೀಡ್ ಆಗಿ ಓಡಿಸಿದ್ದಾರೆ. ಬಳಿಕ ಕಾರ್ ಹಿಂದೆ ಓಡಿ ಹೋಗಿ ಕೆಳಕ್ಕೆ ಬಿದ್ದರೂ ಅವರನ್ನು ಬಿಡದೇ ಪೊಲೀಸರು ಚೇಜ್ ಮಾಡಿ, ಕಾರನ್ನು ನಿಲ್ಲಿಸಿದ್ದಾರೆ.

    ಆರೋಪಿಗಳಾದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜಖಾನ್(31), ಇಮ್ರಾನ್ ಖಾನ್(27) ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್(23) ಮತ್ತು ಸಯ್ಯದ ಅಮೀನ್(29)ನನ್ನು ಪೊಲೀರು ಬಂಧಿಸಿದ್ದಾರೆ. ಇವರು ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

    ಪೊಲೀಸರು ಕಾರಿನ ಬ್ಯಾಗಿನಲ್ಲಿ ತುಂಬಿಟ್ಟ 500, 200, 100 ಹಾಗೂ 50 ರೂ. ಮುಖಬೆಲೆಯ ಒಟ್ಟು 85 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.

    ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪಿಗಳನ್ನು ಹಿಡಿಯಲು ಹಾನಗಲ್ ಸಿಪಿಐ ಶಿವಶಂಕರ್ ಗಣಾಚಾರಿ ಹಾಗೂ ಪಿಎಸ್‌ಐ ಶ್ರೀಶೈಲ ಪಟ್ಟಣ ಶೆಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಎಸ್‌ಪಿ ಹನುಮಂತರಾಯ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಜಡ್ಜ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆಯರು- ಶ್ರೀಗಳಿಗೆ ನೋಟಿಸ್ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ಸಂಚಾರ ದಟ್ಟಣೆ ತಡೆಗೆ ಟ್ರಾಫಿಕ್ ಡೈವರ್ಟ್- ವರ್ಕೌಟ್ ಆಗ್ತಿಲ್ಲ ಅಂತಿದ್ದಾರೆ ಸವಾರರು!

    ಸಂಚಾರ ದಟ್ಟಣೆ ತಡೆಗೆ ಟ್ರಾಫಿಕ್ ಡೈವರ್ಟ್- ವರ್ಕೌಟ್ ಆಗ್ತಿಲ್ಲ ಅಂತಿದ್ದಾರೆ ಸವಾರರು!

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಸಿಟಿಯಾಗುತ್ತಿರುವ ಬಗ್ಗೆ ಖುದ್ದು ಸಿಎಂ ಬೊಮ್ಮಾಯಿ ಗರಂ ಆಗಿದ್ದರು. ಸಿಎಂ ಸಿಟ್ಟಿಗೆದ್ದಿದ್ದರಿಂದ ಅಧಿಕಾರಿಗಳು ಕೂಡ ಫೀಲ್ಡ್‍ಗಿಳಿದ್ರು. ಈ ಬೆನ್ನಲ್ಲೇ ನಗರದ ಟ್ರಾಫಿಕ್ ಜಂಕ್ಷನ್‍ಗಳ ಕ್ಲಿಯರ್ ಮಾಡಲು ಟ್ರಾಫಿಕ್ ಡೈವರ್ಟ್ ಮಾಡಲಾಯ್ತು. ಇದೀಗ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.

    ಹೆಬ್ಬಾಳ, ಗೊರಗುಂಟೆಪಾಳ್ಯ, ಕೆಆರ್ ಪುರಂ, ಸಿಲ್ಕ್ ಬೋರ್ಡ್ ಎಲ್ಲ ಟ್ರಾಫಿಕ್ ಜಾಮ್‍ಗಳಲ್ಲಿ ರೋಡ್ ಡೈವರ್ಟ್ ಮಾಡಿ ಓನ್ ವೇ ಹಾಗೂ ವೆಹಿಕಲ್ ಪಾರ್ಕಿಂಗ್ ಕ್ಲಿಯರ್ ಮಾಡೋದು ಹೀಗೆ ಹಲವು ಬದಲಾವಣೆಗಳನ್ನ ತರಲಾಗಿದೆ. ಇದೆಲ್ಲ ವರ್ಕ್ ಆಗ್ತಿಲ್ಲ ಅಂತಾ ವಾಹನ ಸವಾರರು ಆಕ್ರೋಶ ಹಾಕುತ್ತಿದ್ದಾರೆ. ಇದನ್ನೂ ಓದಿ: ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್

    ರತ್ನಾಕರ್ ರೆಡ್ಡಿ ಎಂಬ ಕನ್ಸಲ್‍ಟೆಂಟ್ ನೇಮಕ ಮಾಡಿದ್ದು ವೈಜ್ಞಾನಿಕವಾಗಿ ಟ್ರಾಫಿಕ್ ಹೆಚ್ಚಾಗಿದ್ಯಾ..? ಕಾರಣಗಳೇನು ? ಎಂಬ ಬಗ್ಗೆ 3 ದಿನದಲ್ಲಿ ಸಮನ್ವಯ ಸಮಿತಿ ಮುಂದೆ ರಿಪೋರ್ಟ್ ಇಡಲಿದ್ದಾರೆ. ಒಟ್ಟಿನಲ್ಲಿ ಟ್ರಾಫಿಕ್ ಕ್ಲಿಯರೆನ್ಸ್ ಐಡಿಯಾ ವರನಾ – ಶಾಪನಾ ಎಂಬ ಬಗ್ಗೆ ಶೀಘ್ರವೇ ಸ್ಪಷ್ಟತೆ ಸಿಗಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್

    ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್

    ನವದೆಹಲಿ: ಕೇವಲ ವಿಐಪಿ, ವಿಐಪಿಗಳಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಝೀರೋ ಟ್ರಾಫಿಕ್ ಮಾಡಿರುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲಿ ಹುಲಿರಾಯ ರಸ್ತೆ ದಾಟಲು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ ಪ್ರಸಂಗವೊಂದು ನಡೆದಿದೆ.

    ಇದು ಎಲ್ಲ ನಡೆದಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಆದರೆ ವಾಹನವೊಂದರ ನಂಬರ್ ಪ್ಲೇಟ್ ಆಧರಿಸಿ ಹೇಳುವುದಾದರೆ ಇದು ಮಹಾರಾಷ್ಟ್ರದಲ್ಲಿ ನಡೆದಿರುವ ಬಗ್ಗೆ ಮಾಹಿತಿ ಇದೆ. ಹುಲಿಗೆ ರಸ್ತೆ ದಾಟಲು ಅರಣ್ಯಾಧಿಕಾರಿಗಳಿಬ್ಬರು ಅನುವು ಮಾಡಿಕೊಟ್ಟಿದ್ದಾರೆ. ಹುಲಿ ರಸ್ತೆ ದಾಟುತ್ತಿರುವ ವೀಡಿಯೋವನ್ನು ವಾಹನಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಅದನ್ನು ಸೋಶಿಯಲ್ ಮಿಡಿಯಾಕ್ಕೆ ಹರಿಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್

    ವೀಡಿಯೋದಲ್ಲಿ ಇಬ್ಬರು ಅರಣ್ಯಾಧಿಕಾರಿಗಳು ರಸ್ತೆ ಬದಿಯ್ಲಲಿ ಕಂಡು ಬಂದ ಹುಲಿಯನ್ನು ಆ ಕಡೆಯಿಂದ ಈ ಕಡೆಗೆ ದಾಟಲು ಅನುಕೂಲ ಮಾಡಿಕೊಟ್ಟಿದ್ದಾರೆ. ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಲ್ಲಿಸಿ ಹುಲಿರಾಯನನ್ನು ರಸ್ತೆ ದಾಟಿಸಿದ್ದಾರೆ. ಹುಲಿ ರಸ್ತೆ ದಾಟುವಾಗ ಜನ ಕಿರುಚಾಡಲು ಆರಂಭಿಸಿಸದ್ದಾರೆ. ಈ ವೇಳೆ ಅಧಿಕಾರಿಗಳು ಗದರಿದ್ದಾರೆ. ಅಲ್ಲದೆ ಹುಲಿಯನ್ನು ಹೋಗಲು ಬಿಡಿ ಎಂದು ಗರಂ ಆಗಿದ್ದಾರೆ. ಎರಡೂ ಕಡೆ ವಾಹನ ಹಾಗೂ ಜನ ನಿಂತಿದ್ದರೂ ಹುಲಿ ಮಾತ್ರ ರಾಜ ಗಾಂಭೀರ್ಯದಿಂದ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಹುಲಿ ರಸ್ತೆ ದಾಟುತ್ತಿರುವ ವೀಡಿಯೋವನ್ನು ಐಎಫ್‍ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹುಲಿಗೂ ಕೂಡ ಗ್ರೀನ್ ಸಿಗ್ನಲ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಅಧಿಕಾರಿಗಳು ಮತ್ತು ಜನರಿಗೆ ಅಭಿನಂದನೆಗಳು ಎಂದು ಬರೆದಿದ್ದಾರೆ. ಇದು ಅಪರೂಪದ ವಿಡಿಯೋ. ಕಾಡುಪ್ರಾಣಿಯಾದರೂ ಮಾನವರನ್ನು ಒಪ್ಪಿಕೊಂಡು ನಡೆದುಕೊಂಡು ಹೋಗಿದೆ. ಇಲ್ಲವಾದಲ್ಲಿ ಇದು ಹಸಿದಿರಲಿಕ್ಕಿಲ್ಲ” ಎಂದು ಒಬ್ಬರು ಹೇಳಿದ್ದಾರೆ. ಹೀಗೆ ಹಲವಾರು ಕಾಮೆಂಟ್ ಗಳು ಬರುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಶಿರಾಡಿ ಘಾಟ್‍ನಲ್ಲಿ ಮತ್ತೆ ಭೂಕುಸಿತ – ಭಾರೀ ವಾಹನಗಳ ಸಂಚಾರ ನಿಷೇಧ

    ಶಿರಾಡಿ ಘಾಟ್‍ನಲ್ಲಿ ಮತ್ತೆ ಭೂಕುಸಿತ – ಭಾರೀ ವಾಹನಗಳ ಸಂಚಾರ ನಿಷೇಧ

    ಹಾಸನ: ಶಿರಾಡಿ ಘಾಟ್‍ನಲ್ಲಿ ಮತ್ತೆ ಭೂಕುಸಿತವಾಗಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ.

    ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪದ ರಸ್ತೆ ವಾರದ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಕುಸಿದಿತ್ತು. ಈ ಹಿನ್ನೆಲೆ ಲೋಕೋಪಯೋಗಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಚಿವರು ಭೇಟಿ ನೀಡಿದ ನಾಲ್ಕನೇ ದಿನಕ್ಕೆ ಮತ್ತೆ ಭೂಕುಸಿತ ಕಾಣಿಸಿಕೊಂಡಿದೆ.

    ಇಂದು ಮಧ್ಯಾಹ್ನದ ವೇಳೆಗೆ ಮತ್ತೆ ಭೂಕುಸಿತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹಾಕಿದ್ದಾರೆ. ಲಘು ವಾಹನಗಳನ್ನು ಏಕ ಮುಖ ಸಂಚಾರದಂತೆ ಚಲಿಸಲು ಅವಕಾಶ ನೀಡಿದ್ದಾರೆ. ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತೆ ರಸ್ತೆ ಕುಸಿಯುತ್ತಿದ್ದು, ಆತಂಕ ಹೆಚ್ಚಾಗಿದೆ.

    ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ರಸ್ತೆ ಕುಸಿದಿತ್ತು. ಈ ರಾಷ್ಟ್ರೀಯ ಹೆದ್ದಾರಿ 75 ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಇದನ್ನೂ ಓದಿ: ಯುವಕರಿಗೆ ಪೊಲೀಸ್ ಕೆಲ್ಸ – ಕಲರ್ ಕಲರ್ ಕಥೆ ಕಟ್ಟಿದ್ದ ನಕಲಿ ಪೊಲೀಸಪ್ಪ ಪರಾರಿ 

    Live Tv
    [brid partner=56869869 player=32851 video=960834 autoplay=true]

  • ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ – ಟ್ರಾಫಿಕ್ ಜಾಮ್

    ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ – ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಕಾಫಿನಾಡಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಪರಿಸ್ಥಿತಿ ಗಂಭೀರ ಮಟ್ಟಕ್ಕೆ ತಲುಪುತ್ತಿದೆ. ಭಾನುವಾರ ಚಾರ್ಮಾಡಿ ಘಾಟ್‌ನಲ್ಲಿ ಬೃಹತ್ ಮರ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

    ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ಇಂದು ರಸ್ತೆಗೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಘಾಟ್‌ನ 8ನೇ ತಿರುವಿನಲ್ಲಿ ಮರ ಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಸುಮಾರು 1 ಕಿ.ಮೀ ಗೂ ಹೆಚ್ಚು ದೂರದವರೆಗೆ ಟ್ರಾಫಿಕ್ ಜಾಮ್ ಆಗಿದೆ.

    ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದ ರಸ್ತೆ ಮೇಲೆ ಗುಡ್ಡ ಕುಸಿದಿದೆ. ರಸ್ತೆ ಮೇಲೆ ಮಣ್ಣು ಕುಸಿದಿರುವ ಪರಿಣಾಮ ಹೊರನಾಡು-ಶೃಂಗೇರಿ ಮಾರ್ಗದ ಸಂಚಾರ ಅಸ್ತವ್ಯಸ್ತವಾಗಿದೆ. ಸತತ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಸ್ಥಳದಲ್ಲೇ ಇರುವ 4-5 ಮನೆಗಳ ಮೇಲೂ ಗುಡ್ಡ ಕುಸಿಯುವ ಸಾಧ್ಯತೆಯಿದ್ದು, ಗ್ರಾಮದ ಕೂಲಿ ಕಾರ್ಮಿಕರು ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ

    ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರೀ ಮಳೆಯ ಹಿನ್ನೆಲೆ ಮರ, ಮಣ್ಣು, ಬಂಡೆಗಳು ರಸ್ತೆಗೆ ಉರುಳುತ್ತಿವೆ. ಕೊಳಗಾಮೆ-ಮುತ್ತೋಡಿ ಸಂಪರ್ಕ ಕಲ್ಪಿಸುವ ಗಿರಿ ಭಾಗದ ರಸ್ತೆಯಲ್ಲಿ ಭೂ ಕುಸಿತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ಕಾಣಿಯೂರಿನಲ್ಲಿ ಹೊಳೆಗೆ ಬಿದ್ದ ಕಾರು- ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ

    ಇನಾಂ ದತ್ತಾತ್ರೇಯ ಪೀಠಕ್ಕೆ ಹೋಗುವ ರಸ್ತೆಯಲ್ಲೂ ಮುಕ್ಕಾಲು ಭಾಗಕ್ಕೆ ಗುಡ್ಡ ಕುಸಿತವಾಗಿದೆ. ದತ್ತಪೀಠಕ್ಕೆ ಹೋಗುವ ಸರ್ಪಹಾದಿಯಲ್ಲಿ ಕುಸಿತ ಉಂಟಾಗಿದ್ದು ಈ ಹಿನ್ನೆಲೆ ಕಾರು, ಬೈಕ್ ಹೊರತುಪಡಿಸಿ ಭಾರೀ ವಾಹನಗಳ ಸಂಚಾರ ಬಂದ್ ಆಗಿದೆ. ಗಿರಿ ಶ್ರೇಣಿಯಲ್ಲಿ ಇನ್ನಷ್ಟು ಕುಸಿಯುವ ಆತಂಕ ಸೃಷ್ಟಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗು ಜಿಲ್ಲೆಗೆ ಇಂದಿನಿಂದ ಈ ವಾಹನಗಳಿಗಿಲ್ಲ ಪ್ರವೇಶ – ಜಿಲ್ಲಾಧಿಕಾರಿ ಆದೇಶ

    ಕೊಡಗು ಜಿಲ್ಲೆಗೆ ಇಂದಿನಿಂದ ಈ ವಾಹನಗಳಿಗಿಲ್ಲ ಪ್ರವೇಶ – ಜಿಲ್ಲಾಧಿಕಾರಿ ಆದೇಶ

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಸ್ಥಳೀಯ ಜನರಲ್ಲಿ ಭಯ ಶುರುವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ 2018ರಲ್ಲಾದ ಪರಿಸ್ಥಿತಿ ಮತ್ತೆ ಎದುರಾಗಲಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.

    ಇದೀಗ ಕೊಡಗಿನಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಮೊದಲ ಹೆಜ್ಜೆಯಾಗಿ ಭಾರೀ ವಾಹನಗಳಿಗೆ ಜಿಲ್ಲೆಯಲ್ಲಿ ನಿರ್ಬಂಧ ಹೇರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ವ್ಯಾಪಕ ಮಳೆಯಾಗುತ್ತಿರುವುದರಿಂದ ಭೂಕುಸಿತ, ಗುಡ್ಡ ಕುಸಿತದ ಅಪಾಯವಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಶ್ವಾನದ ಜೊತೆ ಬೈಕ್‍ನಲ್ಲಿ ಲಡಾಕ್ ಟ್ರಿಪ್‍ಗೆ ಹೊರಟ ಯುವಕ

    ಎಲ್ಲಾ ರೀತಿಯ ಮರದ ದಿಮ್ಮಿ, ಮರಳು ಸಾಗಿಸುವ ವಾಹನಗಳನ್ನು ಇಂದಿನಿಂದ ಅಕ್ಟೋಬರ್ 15ರ ವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. 16,200 ಕೆ.ಜಿ ಗಿಂತ ಹೆಚ್ಚಿನ ತೂಕದ ಸರಕು ಸಾಗಣೆ ವಾಹನಗಳಿಗೆ ಪ್ರವೇಶವಿಲ್ಲ. ಬುಲೆಟ್ ಟ್ಯಾಂಕರ್, ಶಿಪ್ ಕಾರ್ಗೋ ಕಂಟೈನರ್, ಲಾಂಗ್ ಚಾಸೀಸ್(ಮಲ್ಟಿ ಆ್ಯಕ್ಸೆಲ್) ವಾಹನಗಳಿಗೂ ನಿರ್ಬಂಧಿಸಲಾಗಿದೆ.

    ಸದ್ಯ ಅಡುಗೆ ಅನಿಲ, ಇಂಧನ ಪೂರೈಕೆ, ಹಾಲು ಪೂರೈಕೆ, ಸರ್ಕಾರಿ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಸಿ. ಸತೀಶ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಅಮರನಾಥ ಚಾಲೆಂಜ್ ಆಗಿದೆ: ಕರ್ನಲ್ ವಿ.ಎಂ. ನಾಯಕ್

    Live Tv
    [brid partner=56869869 player=32851 video=960834 autoplay=true]