Tag: traffic

  • ಮೆಟ್ರೋ ಟಿಕೆಟ್ ದರ ಏರಿಕೆ ಎಫೆಕ್ಟ್ – ಬೆಂಗ್ಳೂರಲ್ಲಿ ಟ್ರಾಫಿಕ್ ಜೊತೆಗೆ ವಾಯುಮಾಲಿನ್ಯವೂ ಹೆಚ್ಚಳ

    ಮೆಟ್ರೋ ಟಿಕೆಟ್ ದರ ಏರಿಕೆ ಎಫೆಕ್ಟ್ – ಬೆಂಗ್ಳೂರಲ್ಲಿ ಟ್ರಾಫಿಕ್ ಜೊತೆಗೆ ವಾಯುಮಾಲಿನ್ಯವೂ ಹೆಚ್ಚಳ

    ಬೆಂಗಳೂರು: ಮೆಟ್ರೋ ದರ ಏರಿಕೆ (Metro Ticket Price Hike) ಎಫೆಕ್ಟ್ ಒಂದೆಡೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಸಿದ್ದರೇ ಮತ್ತೊಂದೆಡೆ ಬೆಂಗಳೂರು ಟ್ರಾಫಿಕ್ (Bengaluru Traffic) ಹೆಚ್ಚಳ ಮಾಡಿದೆ. ಇದರಿಂದಾಗಿ ಬೆಂಗಳೂರಲ್ಲಿ ವಾಯುಮಾಲಿನ್ಯ (Air Pollution) ಹೆಚ್ಚಾಗುತ್ತಿದೆ.

    ಜನವರಿಯಲ್ಲಿ ಬಸ್ ದರ ಏರಿಕೆಯ ನಂತರ ಫೆಬ್ರವರಿ 9ರಿಂದ ಮೆಟ್ರೋ ದರ ಏರಿಕೆ ಮಾಡಲಾಯಿತು. ದರ ಏರಿಕೆ ಹಿನ್ನೆಲೆ ಪ್ರತಿನಿತ್ಯ ಸುಮಾರು 80-90 ಸಾವಿರ ಮೆಟ್ರೋ ಪ್ರಯಾಣಿಕರು ಮೆಟ್ರೋದಿಂದ ದೂರವಾಗಿ ದ್ವಿಚಕ್ರ ವಾಹನ, ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ನಗರದಲ್ಲಿ ಒಂದೆಡೆ ಟ್ರಾಫಿಕ್ ಹೆಚ್ಚಳದ ಜೊತೆಗೆ ವಾಯುಮಾಲಿನ್ಯ ಸಹ ಹೆಚ್ಚಾಗುತ್ತಿದೆ. ಇದನ್ನೂ ಓದಿ: 137 ಅಕ್ರಮ ವಲಸಿಗರು ಪತ್ತೆ, ಕಠಿಣ ಕ್ರಮ ಕೈಗೊಳ್ಳಲಾಗಿದೆ: ಪರಮೇಶ್ವರ್

    ಐಐಎಸ್‌ಸಿ ತಜ್ಞ ಆಶಿಶ್ ವರ್ಮಾ ಅಧ್ಯಯನದಂತೆ 5%ನಷ್ಟು ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, 5%ನಷ್ಟು ಪ್ರಯಾಣಿಕರು ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. ಇದು ಜನರ ಜೀವನ ಹಾಗೂ ವಾಯುಮಾಲಿನ್ಯದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಇದನ್ನೂ ಓದಿ: ಅಣ್ಣನಿಂದಲೇ 7 ತಿಂಗಳ ಗರ್ಭಿಣಿಯಾದ ತಂಗಿ‌

    ಜಯನಗರದ ಕರ್ನಾಟಕ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಏರ್ ಕ್ವಾಲಿಟಿ ಮಾನಿಟರಿಂಗ್ ಅಧ್ಯಯನದ ಪ್ರಕಾರ, ಮೆಟ್ರೋ ಟಿಕೆಟ್ ಶುಲ್ಕ ಹೆಚ್ಚಳಕ್ಕೆ ಮುಂಚೆ, ಬೆಳಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಇರುವ ಸಮಯದಲ್ಲಿ ವಾಯುಮಾಲಿನ್ಯದಲ್ಲಿ ಏರಿಕೆ ಆಗಿದೆ. ಸರಾಸರಿ ಪಿಎಂ 2.5 ಪ್ರತಿ ಘನ ಮೀಟರ್‌ಗೆ 43 ರಿಂದ 54 ಮೈಕ್ರೊಗ್ರಾಮ್ ಇತ್ತು. ಅದೇ ಫೆಬ್ರವರಿ 10 ರಂದು 112-114 ಮೈಕ್ರೊಗ್ರಾಂಗೆ ಏರಿಕೆಯಾಗಿದೆ. ಇನ್ನು ಫೆಬ್ರವರಿ 17 ಮತ್ತು 24ರ ಸೋಮವಾರ ಈ ಮಟ್ಟ ಸರಾಸರಿ 68 ರಿಂದ 105 ಮೈಕ್ರೋಗ್ರಾಂಗೆ ತಲುಪಿದೆ. ಹೀಗೆ ವಾಯುಮಾಲಿನ್ಯ ಏರಿಕೆಯಾದರೆ ಅಸ್ತಮಾದಿಂದ ಕ್ಯಾನ್ಸರ್ ತನಕ ರೋಗಗಳು ಬರಬಹುದಾಗಿದೆ. ಈ ಪ್ರಮಾಣದಲ್ಲಿ ವಾಯುಮಾಲಿನ್ಯ ಮಟ್ಟ ಏರಿಕೆಯಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. ಇದನ್ನೂ ಓದಿ: 1 ಸಾವಿರ ರೂ. ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ – ಹಂತಕನಿಗೆ 7 ವರ್ಷ ಶಿಕ್ಷೆ

  • ಟ್ರಾಫಿಕ್‌ಗೆ ಮುಕ್ತಿ ಹಾಡಲು ಮುಂದಾದ ಬಿಬಿಎಂಪಿ – 10,000 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ

    ಟ್ರಾಫಿಕ್‌ಗೆ ಮುಕ್ತಿ ಹಾಡಲು ಮುಂದಾದ ಬಿಬಿಎಂಪಿ – 10,000 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ

    – ಮುಂದಿನ 25 ವರ್ಷ ಗುರಿಯಾಗಿಸಿ ಪಾಲಿಕೆ ಪ್ಲ್ಯಾನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಟ್ರಾಫಿಕ್‌ನಿಂದ (Traffic) ಮುಕ್ತಿ ಯಾವಾಗಪ್ಪ ಅಂತ ದೇವರತ್ತ ಮುಖ ಮಾಡುವ ಸ್ಥಿತಿ ವಾಹನ ಸವಾರರದ್ದು. ಇತ್ತ ಬೆಂಗಳೂರಿನ ಅಭಿವೃದ್ಧಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ದೇವರೇ ಧರೆಗೆ ಇಳಿದು ಬಂದ್ರೂ ಮುಂದಿನ ಮೂರು ವರ್ಷದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸೋಕೆ ಆಗಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಬಿಬಿಎಂಪಿ (BBMP) ಈ ವರ್ಷ ಟ್ರಾಫಿಕ್ ಸಮಸ್ಯೆ ನಿವಾರಣೆಗೆ 10,000 ಕೋಟಿ ರೂ. ಖರ್ಚು ಮಾಡಲು ಮುಂದಾಗಿದೆ.

    ಮುಂದಿನ 25 ವರ್ಷದವರೆಗೂ ರಸ್ತೆಗಳ ಸಮಸ್ಯೆ ಉದ್ಭವವಾಗದಂತೆ ಬಿಬಿಎಂಪಿ ಹಲವು ಯೋಜನೆ ರೂಪಿಸಿದೆ. 80 ರಿಂದ 90 ಕಿಲೋಮೀಟರ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ಪ್ಲ್ಯಾನ್ ಹಾಕಿಕೊಂಡಿದೆ. ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ – 9,000 ನರ್ಸ್‌ಗಳಿಂದ ಅಹೋರಾತ್ರಿ ಧರಣಿ

    ಬೆಂಗಳೂರಿನಲ್ಲಿ ಇರುವ ಎಲ್ಲಾ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಿಗೆ ವೈಟ್ ಟಾಪಿಂಗ್ ಕಾಮಗಾರಿ ಮಾಡೋದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಈ ವರ್ಷ ಒಂದೆರಡು ಫ್ಲೈ ಓವರ್‌ಗೆ ಚಾಲನೆ ನೀಡೋದಲ್ಲದೇ ಟನಲ್‌ಗೂ ಚಾಲನೆ ಕೊಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಪಕ್ಷಿಗಳ ನಿಗೂಢ ಸಾವು – ಹಕ್ಕಿ ಜ್ವರದ ಶಂಕೆ

  • ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?

    ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?

    ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯು ಪ್ರಮುಖ ಜಂಕ್ಷನ್ಗಳಲ್ಲಿ ಬೆಂಗಳೂರು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಗ್ನಲ್ಸ್ ಸಿಸ್ಟಂ(BATCS) ಅಳವಡಿಸಿದೆ. ಬೆಂಗಳೂರನ್ನು ಕಾಡುತ್ತಿರುವ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ಸಿಗಬಹುದೆನ್ನುವ ಕಾರಣಕ್ಕಾಗಿ ಈ ಸುಧಾರಿತ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಹಾಕಲಾಗಿದೆ.

    ನೀವು ಇತ್ತೀಚಿಗೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಂತಾಗ ನಿಮಗೆ VAC ಮತ್ತು MNL ಎಂಬ ಹೊಸ ಸೂಚನೆಗಳನ್ನು ಗಮನಿಸಿರಬಹುದು. VAC ಮತ್ತು MNL ಅಂದರೆ ಏನು ಎಂದು ತಿಳಿದಿಕೊಳ್ಳಲು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

    VAC ಅಂದರೆ ವೆಹಿಕಲ್ ಆ್ಯಕ್ಚುಯೇಟೆಡ್ ಕಂಟ್ರೋಲ್ (Vehicle Actuated Control) ಎಂದರ್ಥ. ಈ ಸಿಸ್ಟಂನಲ್ಲಿ ಅಳವಡಿಸಲಾಗಿರುವ ಕ್ಯಾಮರಾಗಳು ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳು ನಿಂತಿವೆಯೋ ಆ ರಸ್ತೆಯ ಪ್ರಯಾಣಿಕರಿಗೆ ಆದ್ಯತೆ ಮೇರೆಗೆ ಹಸಿರು ಸಿಗ್ನಲ್ ಪ್ರದರ್ಶಿಸುತ್ತದೆ.  ಇದನ್ನೂ ಓದಿ: ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

    MNL ಅಂದರೆ ಮಾನ್ಯುಯಲ್ ಎಂದರ್ಥ. ಇದರಲ್ಲಿ ಪೊಲೀಸರೇ ಸಿಗ್ನಲ್ ಕಂಟ್ರೋಲ್ ಮಾಡುತ್ತಿರುತ್ತಾರೆ. ಆಂಬ್ಯುಲೆನ್ಸ್, ವಿಐಪಿಗಳ ಸಂಚಾರವಿದ್ದರೆ, ಟ್ರಾಫಿಕ್ ಪೊಲೀಸರೇ ಸಿಗ್ನಲ್ ಕಂಟ್ರೋಲ್ ಮಾಡುತ್ತಾರೆ.

    ಕೆಲವು ಜಂಕ್ಷನ್‌ಗಳಲ್ಲಿ ಕಳೆದ ವರ್ಷವೇ ಅಳವಡಿಸಿದ ಈ ಸುಧಾರಿತ ಟ್ರಾಫಿಕ್ ಕಂಟ್ರೋಲ್ ಸಿಗ್ನಲ್ಸ್ ಸಿಸ್ಟಂನಲ್ಲಿ ಟೈಮರ್ ವ್ಯವಸ್ಥೆಯಿರಲಿಲ್ಲ. ಗ್ರೀನ್ ಸಿಗ್ನಲ್ ಯಾವಾಗ ಬೀಳುತ್ತೆ ಎನ್ನುವುದು ವಾಹನ ಸವಾರರಿಗೆ ಗೊತ್ತಾಗುತ್ತಿರಲಿಲ್ಲ. ಆದರೆ ಇತ್ತೀಚಿಗೆ ಅಳವಡಿಸಲಾಗುತ್ತಿರುವ ಬಹುತೇಕ ಜಂಕ್ಷನ್‌ಗಳಲ್ಲಿ ಟೈಮರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರಿಂದ ವಾಹನ ಸವಾರರಿಗೂ ಅನುಕೂಲವಾಗಲಿದ್ದು, ಇಂಧನದ ಜೊತೆ ಸ್ವಲ್ಪ ಮಟ್ಟಿನ ಮಾಲಿನ್ಯ ಕೂಡ ಕಡಿಮೆಯಾಗುತ್ತೆ.

  • ಕಬ್ಬಿಣದ ಪೈಪ್ ತುಂಬಿದ್ದ ಲಾರಿ ಪಲ್ಟಿ; ತುಮಕೂರು – ಬೆಂಗಳೂರು ಹೈವೇಯಲ್ಲಿ ಭಾರೀ ಟ್ರಾಫಿಕ್

    ಕಬ್ಬಿಣದ ಪೈಪ್ ತುಂಬಿದ್ದ ಲಾರಿ ಪಲ್ಟಿ; ತುಮಕೂರು – ಬೆಂಗಳೂರು ಹೈವೇಯಲ್ಲಿ ಭಾರೀ ಟ್ರಾಫಿಕ್

    ಬೆಂಗಳೂರು: ಕಬ್ಬಿಣದ ಪೈಪ್ ತುಂಬಿದ್ದ ಬೃಹತ್ ಲಾರಿಯೊಂದು (Lorry) ಪಲ್ಟಿಯಾದ ಪರಿಣಾಮ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Tumakuru-Bengluru Highway) ಭಾರೀ ಟ್ರಾಫಿಕ್ (Traffic) ಉಂಟಾಗಿದೆ.

    ನೆಲಮಂಗಲ (Nelamangala) ತಾಲೂಕಿನ ಬೂದಿಹಾಳ್ ಗೇಟ್ ಬಳಿ ಘಟನೆ ನಡೆದಿದೆ. ಘಟನೆಯ ಪರಿಣಾಮ ರಸ್ತೆಯಲ್ಲಿ ಪೈಪ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲಾರಿ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆ ಬರುತ್ತಿತ್ತು. ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಇದನ್ನೂ ಓದಿ: BBK 11: ಬಿಗ್‌ ಬಾಸ್‌ ಟ್ರೋಫಿ ಗೆದ್ದು ಸುದೀಪ್‌ ಕಾಲಿಗೆ ಬಿದ್ದ ಹನುಮಂತ

    ಸೋಮವಾರ ನಸುಕಿನ ಜಾವ 3 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ನೆಲಮಂಗಲ ಸಂಚಾರಿ ಪೊಲೀಸರು ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಭಾರತ್ ಮಾತಾ ಮಹಾ ಆರತಿ ಕಾರ್ಯಕ್ರಮದಲ್ಲಿ ಹೊತ್ತಿ ಉರಿದ ಬೋಟ್‌ – ಅದೃಷ್ಟವಶಾತ್ 15 ಜನ ಪಾರು

  • ರೈಡಿಂಗ್‌ ಮಾಡುತ್ತಾ, ನಾಯಿ ಓಡಿಸುತ್ತಾ ಬೆಂಗಳೂರು ರಸ್ತೆಯಲ್ಲಿ ಹುಚ್ಚಾಟ!

    ರೈಡಿಂಗ್‌ ಮಾಡುತ್ತಾ, ನಾಯಿ ಓಡಿಸುತ್ತಾ ಬೆಂಗಳೂರು ರಸ್ತೆಯಲ್ಲಿ ಹುಚ್ಚಾಟ!

    ಬೆಂಗಳೂರು: ಮಾಲೀಕನೊಬ್ಬ ದ್ವಿಚಕ್ರ ವಾಹನದಲ್ಲಿ ನಾಯಿಯನ್ನು (Dog) ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಆರಂಭದಲ್ಲಿ ನಾಯಿಯ ಕತ್ತಿಗೆ ಸರಪಳಿ ಹಾಕಿ ದ್ವಿಚಕ್ರ ವಾಹನದಲ್ಲಿ ಕರೆತಂದಿದ್ದಾನೆ. ನಂತರ ರಸ್ತೆಯಲ್ಲಿ ನಾಯಿಯನ್ನ ಓಡಲು ಬಿಟ್ಟು ತಾನು ದ್ವಿಚಕ್ರವನ್ನು ಓಡಿಸಿದ್ದಾನೆ.

    ಒಂದು ಕೈಯಲ್ಲಿ ನಾಯಿಯ ಚೈನ್‌, ಮತ್ತೊಂದು ಕೈಯಲ್ಲಿ ರೈಡಿಂಗ್‌ ಮಾಡಿ ಹುಚ್ಚಾಟ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ತಲೆಗೆ ಹೆಲ್ಮೆಟ್‌ ಹಾಕದೇ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾನೆ. ಇದನ್ನೂ ಓದಿ: ಬಫರ್‌ ವಲಯದಲ್ಲಿ ಮನೆ ನಿರ್ಮಿಸಿದವರಿಗೆ ಬಿಬಿಎಂಪಿ ಶಾಕ್‌

    ಹೆಣ್ಣೂರು ರೈಲ್ವೇ ಸ್ಟೇಷನ್ ಬಳಿ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಬೆಂಗಳೂರು ಪೊಲೀಸರ ಗಮನಕ್ಕೆ ವಿಡಿಯೋ ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

     

  • ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಮಳೆ – ರಸ್ತೆಯಲ್ಲಿ ಕೆರೆಯಂತೆ ನಿಂತ ನೀರು

    ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಮಳೆ – ರಸ್ತೆಯಲ್ಲಿ ಕೆರೆಯಂತೆ ನಿಂತ ನೀರು

    ಬೆಂಗಳೂರು: ಹಲವು ದಿನಗಳ ಬಳಿಕ ಬೆಂಗಳೂರಿನಲ್ಲಿ (Bengaluru) ಬೆಳ್ಳಂಬೆಳಗ್ಗೆ ಭಾರೀ ಮಳೆಯಾಗಿದ್ದು (Heavy Rain) ಮೆಜೆಸ್ಟಿಕ್, ಕಾಪೋರೇಷನ್, ಹೆಬ್ಬಾಳ, ಮಲ್ಲೇಶ್ವರಂ, ಯಶವಂತಪುರ ಸೇರಿ ನಗರದ ಹಲವು ಕಡೆ ಸವಾರರು ಪರದಾಟ ನಡೆಸಿದ್ದಾರೆ.

    ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು ನಗರದಾದ್ಯಂತ ಸುಮಾರು 60 ಮಿ.ಮೀಟರ್‌ ನಷ್ಟು ಮಳೆಯಾಗಿದೆ. ತಡರಾತ್ರಿ ಆರಂಭವಾಗಿ, ಬೆಳಗ್ಗೆ 7 ಗಂಟೆವರೆಗೂ ಅನೇಕ ಕಡೆ ಮಳೆ ಸುರಿದಿದೆ. ಮುಂದಿನ ಮೂರ್ನಾಲ್ಕು ದಿನ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ಗೆ ಡಿಜಿಟಲ್‌ ಸ್ಪರ್ಶ – ಇನ್ಮುಂದೆ ಆನ್‌ಲೈನ್‌ನಲ್ಲಿ ಊಟ ಬುಕ್ಕಿಂಗ್‌!

     

    ವಿಂಡ್ಸರ್ ಮ್ಯಾನರ್ ಸೇತುವೆ ಸರ್ವೀಸ್ ರಸ್ತೆಯಲ್ಲಿ ಕೆರೆಯಂತೆ ನೀರು ನಿಂತಿದೆ. ಎರಡು ಅಡಿಯಷ್ಟು ನೀರು ತುಂಬಿ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಮಳೆ ನೀರಿನಲ್ಲಿ ವಾಹನಗಳು ಕೆಟ್ಟು ನಿಂತಿವೆ.  ಇದನ್ನೂ ಓದಿ: Tungabhadra Dam | 5 ದಿನಗಳಲ್ಲಿ ಗೇಟ್‌ ರಿಪೇರಿ – ಸರ್ಕಾರಕ್ಕೆ ಅಧಿಕಾರಿಗಳ ಭರವಸೆ

    ಭಾರೀ ಮಳೆಗೆ ಮಲ್ಲೇಶ್ವರಂ ಕ್ಲೌಡ್ ನೈನ್ ಆಸ್ಪತ್ರೆ ಸಮೀಪ ರಸ್ತೆಗೆ ಮರ ಉರುಳಿದೆ. ಎರಡು ಸೀಳುಗಳಾಗಿ ಮುರಿದು ರಸ್ತೆಗೆ ಮರ ಬಿದ್ದಿದ್ದು ಆ ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ರಾಯಚೂರು ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ರಾಯಚೂರು ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ

    ರಾಯಚೂರು: ಬಿಸಿಲನಾಡು ರಾಯಚೂರು (Raichur) ಜನ ಎಂತಹ ಬಿಸಿಲನ್ನೂ ತಡೆದುಕೊಳ್ಳುತ್ತಾರೆ ಅನ್ನೋ ಮಾತಿತ್ತು. ಆದರೆ ಈ ವರ್ಷದ ರಣ ಬಿಸಿಲು ಬಿಸಿಲನಾಡ ಜನರನ್ನೇ ತತ್ತರಿಸುವಂತೆ ಮಾಡಿದೆ. ಹೀಗಾಗಿ ರಾಯಚೂರು ಜನರನ್ನು ಬಿಸಿಲಿನಿಂದ ರಕ್ಷಿಸಬೇಕು ಅಂತ ನಿಮ್ಮ ‘ಪಬ್ಲಿಕ್ ಟಿವಿ’ ವರದಿಯನ್ನು ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿರುವ ರಾಯಚೂರು ಜಿಲ್ಲಾಡಳಿತ ಬೈಕ್ ಮೇಲೆ ಓಡಾಡುವ ಜನರಿಗೆ ನೆರಳಿನ (Shelter) ಆಸರೆ ನೀಡುವ ಮೂಲಕ ಉತ್ತಮ ಕ್ರಮಕ್ಕೆ ಮುಂದಾಗಿದೆ.

    ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಅತ್ಯಧಿಕ ತಾಪಮಾನ ಎಂಥವರಿಗೂ ನರಕ ತೋರಿಸುತ್ತಿದೆ. ಕಳೆದ ಆರೇಳು ವರ್ಷಗಳಲ್ಲೆ ಅತ್ಯಧಿಕ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಈಗ ದಾಖಲಾಗಿದೆ. ಕಳೆದ ಒಂದು ವಾರದಿಂದ ಸರಾಸರಿ 41 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಹೆಚ್ಚಳವಾಗಲಿದೆ ಅನ್ನೋ ಮುನ್ಸೂಚನೆಯಿದೆ. ಇದನ್ನೂ ಓದಿ: ಪೋಷಕರೇ ಎಚ್ಚರ ಶುರುವಾಗ್ತಿದೆ ಕಾಲರಾ- ಮಕ್ಕಳ ಆರೋಗ್ಯದ ಕಡೆ ಇರಲಿ ಗಮನ

    ಹೀಗಾಗಿ ನಿಮ್ಮ ಪಬ್ಲಿಕ್ ಟಿವಿ ರಾಯಚೂರು ಜನರನ್ನು ಬಿಸಿಲಿನಿಂದ ರಕ್ಷಿಸಲು ಸಾರ್ವಜನಿಕ ಸ್ಥಳಗಳು, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನೆರಳು, ಕುಡಿಯುವ ನೀರಿನ ವ್ಯವಸ್ಥೆಯ ಅವಶ್ಯಕತೆ ಕುರಿತು ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿರುವ ರಾಯಚೂರು ಜಿಲ್ಲಾಡಳಿತ ಟ್ರಾಫಿಕ್ ಸಿಗ್ನಲ್ ಇರುವ ವೃತ್ತಗಳಲ್ಲಿ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಿದೆ. ಇದನ್ನೂ ಓದಿ: ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ವಿರುದ್ದ ಪ್ರಕರಣ ದಾಖಲು!

    ನಗರದ ಬಸವೇಶ್ವರ ವೃತ್ತದಲ್ಲಿ ನಾಲ್ಕು ಕಡೆ, ಗಂಜ್ ವೃತ್ತದಲ್ಲಿ ಎರಡು ಕಡೆಗಳಲ್ಲಿ ನೆರಳಿನ ಶೆಡ್ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೆ ನರೆಗಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ, ಕಟ್ಟಡ ಕಾಮಗಾರಿಗಳು ನಡೆಯುವ ಸ್ಥಳದಲ್ಲೂ ನೆರಳು, ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್ ಪಲ್ಟಿ- ಮೂವರ ದುರ್ಮರಣ, 38 ಮಂದಿಗೆ ಗಾಯ

    ಒಟ್ಟಲ್ಲಿ ರಾಯಚೂರು ಜನರಿಗೆ ದಿನ ಬೆಳಗಾದರೆ ಬಿಸಿಲಿನ ಭಯ ಕಾಡುತ್ತಿದೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 4:30 ವರೆಗೂ ಬಿಸಿಲು ತನ್ನ ರುದ್ರ ನರ್ತನ ತೋರುತ್ತಿದೆ. ಹೀಗಾಗಿ ವೈದ್ಯರು ಹಾಗೂ ಜಿಲ್ಲಾಡಳಿತ ಅದಷ್ಟು ಬಿಸಿಲಿನಿಂದ ದೂರ ಇರಲು ಜಿಲ್ಲೆಯ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದನ್ನೂ ಓದಿ: ಮುಂಜಾನೆ ಬೆಂಗಳೂರಿನ ಟೈಯರ್ ಗೋಡೌನ್‍ನಲ್ಲಿ ಅಗ್ನಿ ಅವಘಡ

  •  284 ಕೇಸ್, 1.40 ಲಕ್ಷ ರೂ. ಫೈನ್ – ಪೊಲೀಸರ ಬಲೆಗೆ ಬಿದ್ದ ಯುವಕ

     284 ಕೇಸ್, 1.40 ಲಕ್ಷ ರೂ. ಫೈನ್ – ಪೊಲೀಸರ ಬಲೆಗೆ ಬಿದ್ದ ಯುವಕ

    ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಸಂಚಾರ ಪೊಲೀಸರು (Police)  ವಿಶೇಷ ಕಾರ್ಯಚರಣೆ ನಡೆಸಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ವಾಹನಗಳನ್ನು ಮತ್ತು 50 ಸಾವಿರಕ್ಕೂ ಹೆಚ್ಚು ದಂಡವಿರುವ ವಾಹನಗಳನ್ನು (Vechicles) ವಶಕ್ಕೆ ಪಡೆದಿದ್ದಾರೆ.

    ನಗರದಲ್ಲಿ ದಕ್ಷಿಣ ವಿಭಾಗ ಸಂಚಾರಿ ಪೊಲೀಸರು ಕಳೆದ ವಾರದಿಂದ ವಿಶೇಷ ಡ್ರೈವ್‌ ನಡೆಸಿ 50 ಸಾವಿರ ಮೇಲ್ಪಟ್ಟ ದಂಡವಿರುವ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ವಶ ಪಡಿಸಿಕೊಂಡಿರುವ 85 ಬೈಕ್‌ಗಳು ಮತ್ತು ಒಂದು ಕಾರಿನ ಮೇಲೆ ಇರುವ ಒಟ್ಟು ದಂಡ ಬರೋಬ್ಬರಿ 1,07,45,000 ರೂ. 85 ವಾಹನಗಳ ಮೇಲೆ ಬರೋಬ್ಬರಿ 10,210 ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದೆ. ಸದ್ಯ ವಾಹನಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ದೋಖಾ – ಅಪ್ಲೈ ಮಾಡುವ ಮುನ್ನ ಎಚ್ಚರ!

    ಈ ವೇಳೆ ಸಿಟಿ 100 ಬೈಕ್‌ನ ಯುವಕನೊಬ್ಬ 1.40 ಲಕ್ಷ ದಂಡವಿದ್ದರೂ ಹಾಗೇ ಬೈಕ್ ಓಡಿಸುತ್ತಿದ್ದ. ಪ್ರತೀ ದಿನ ಹೆಲ್ಮೆಟ್ ಇಲ್ಲದೇ ಆಫೀಸ್‌ಗೆ ಬೈಕ್ ಓಡಿಸಿಕೊಂಡು ಹೋಗುತ್ತಿದ್ದನು. ಜೊತೆಗೆ ದಿನವೂ ಸಂಚಾರ ನಿಯಮಗಳ ಉಲ್ಲಂಘನೆ ಮಾಡುತ್ತಿದ್ದ. ನಗರದಲ್ಲಿರುವ ಹೈ ರೆಸ್ಯೂಲೇಷನ್ ಕ್ಯಾಮರಾ ಪದೇ ಪದೇ ರೂಲ್ಸ್ ಬ್ರೇಕ್ ಮಾಡಿದ್ದ ಸವಾರನ ಫೋಟೋ ತೆಗೆದ ಹಿನ್ನೆಲೆ ಯುವಕನ ಹುಚ್ಚಾಟ ಬೆಳಕಿಗೆ ಬಂದಿದೆ. ಆತನ ಸಿಟಿ-100 ಬೈಕ್ ಮೇಲೆ ಬರೋಬ್ಬರಿ 284 ಕೇಸ್‌ಗಳು ದಾಖಾಲಾಗಿದೆ. ಕಳೆದ 2020 ರಿಂದ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದ. ಇದನ್ನೂ ಓದಿ: ಕಾಂತಾರ-2ನಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಉಗ್ರ ಹೋರಾಟ – ರಿಷಬ್ ಶೆಟ್ಟಿಗೆ ವಿಹೆಚ್‌ಪಿ, ಬಜರಂಗ ದಳ ಎಚ್ಚರಿಕೆ

  • ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪಾಲಿಕೆ ಪ್ಲ್ಯಾನ್ – ಅಂಡರ್‌ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾದ ಪಾಲಿಕೆ

    ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪಾಲಿಕೆ ಪ್ಲ್ಯಾನ್ – ಅಂಡರ್‌ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾದ ಪಾಲಿಕೆ

    ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್  (Traffic) ಸಮಸ್ಯೆ ಜಾಸ್ತಿ ಆಗುತ್ತಿದೆ. ಯಾವ ಭಾಗಕ್ಕೆ ಹೋದರೂ ಸಂಚಾರ ದಟ್ಟಣೆ ಹೆಚ್ಚಾಗ್ತಿದೆ. ಬಿಬಿಎಂಪಿ (BBMP) ಟ್ರಾಫಿಕ್ ಸ್ಪಾಟ್‌ಗಳನ್ನು ಗುರುತಿಸಿ ಸರ್ವೆಗೆ ಮುಂದಾಗಿದೆ. ಸರ್ವೆ ನಡೆಸಲು ಟೆಂಡರ್ ಕರೆದಿದೆ. ಸರ್ವೆ ಮುಗಿದ ಬಳಿಕ 12 ಕಡೆ ಮೇಲ್ಸೇತುವೆ ಅಂಡರ್ ಪಾಸ್ (Underpass) ನಿರ್ಮಾಣಕ್ಕೆ ಮುಂದಾಗಿದೆ.

    ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಸಂಚಾರ ದಟ್ಟಣೆ ಬಗ್ಗೆ ಚರ್ಚೆ ಆಗುತ್ತಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಈಗಾಗಲೇ ಹಲವಾರು ಕ್ರಮಗಳನ್ನು ಜರುಗಿಸಿದ್ದಾರೆ. ಈಗ ಮತ್ತೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಬಿಬಿಎಂಪಿ ನಗರದಲ್ಲಿ ಸರ್ವೆ ನಡೆಸಲು ಮುಂದಾಗಿದೆ. ಖಾಸಗಿ ಸಂಸ್ಥೆಗೆ ಟೆಂಡರ್ ನೀಡಿ ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ, ಪರಿಹಾರ ಏನು ಎಂಬುದನ್ನು ವರದಿ ನೀಡಲು ಸೂಚಿಸಿದೆ. ಶೀಘ್ರದಲ್ಲೇ ಸರ್ವೆ ಆರಂಭ ಆಗಲಿದೆ. ಇದನ್ನೂ ಓದಿ: ಹಣ ಲಪಟಾಯಿಸಿದ್ರೂ ಬಿಡದಿ ಇನ್ಸ್‌ಪೆಕ್ಟರ್‌ ಸಸ್ಪೆಂಡ್ ಯಾಕಿಲ್ಲ?- ಭ್ರಷ್ಟನಿಗೆ ರಾಜಕೀಯ ರಕ್ಷಣೆ ಎಂದ ಮಾಜಿ ಶಾಸಕ

    ಟ್ರಾಫಿಕ್ ಜಾಮ್ ಆಗುವ ರಸ್ತೆಯಲ್ಲಿ ದಿನಕ್ಕೆ ಎಷ್ಟು ವಾಹನ ಓಡಾಡುತ್ತಿವೆ. ಟ್ರಾಫಿಕ್ ಜಾಮ್ ಆಗಲಿಕ್ಕೆ ಕಾರಣ ಹುಡುಕಬೇಕಿದೆ. ಎಲ್ಲೆಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ಫ್ಲೈಓವರ್ ನಿರ್ಮಾಣ ಮಾಡಬೇಕು ಎಂದು ವರದಿ ನಿರ್ಧಾರ ಮಾಡಲಿದ್ದಾರೆ. ಈಗಾಗಲೇ ಗೊರಗುಂಟೆಪಾಳ್ಯ, ತುಮಕೂರು ರಸ್ತೆ, ಸ್ಯಾಂಡಲ್‌ಸೋಪ್ ಫ್ಯಾಕ್ಟರಿ, ಹೆಬ್ಬಾಳ, ಟಿನ್ ಫ್ಯಾಕ್ಟರಿ, ಸಿಲ್ಕ್ ಬೋರ್ಡ್ ಈ ಭಾಗಗಳಲ್ಲಿ ಫ್ಲೈಓವರ್ ಇದ್ದರೂ ಟ್ರಾಫಿಕ್ ಜಾಮ್ ಆಗುತ್ತಿದೆ. ಇದಕ್ಕೆ ಸೂಕ್ತ ಕಾರಣ ಪತ್ತೆ ಹಚ್ಚಿ ಪರಿಹಾರ ಏನು ಎಂದು ಕಂಡುಕೊಂಡು ವರದಿ ನೀಡಲಿದ್ದಾರೆ. ಇದನ್ನೂ ಓದಿ: ಮಡಿಕೇರಿಯ ಈ ಗ್ರಾಮದ 30 ಯುವಕರಿಗಿಲ್ಲ ಕಂಕಣ ಭಾಗ್ಯ

    ಬಿಬಿಎಂಪಿ ಟ್ರಾಫಿಕ್ ಜಾಮ್ ಬಗ್ಗೆ ಸರ್ವೆ ನಡೆಸಲು ಮುಂದಾಗಿದ್ದು, ಸರ್ವೆ ಆದ ಬಳಿಕ ಎಲ್ಲೆಲ್ಲಿ ಅಂಡರ್ ಪಾಸ್ ನಿರ್ಮಾಣ, ಮತ್ತೆ ಫ್ಲೈಓವರ್ ನಿರ್ಮಾಣ ಮಾಡಲಿದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

  • ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ ಸಂಚಾರದಲ್ಲಿ ಬದಲಾವಣೆ

    ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ ಸಂಚಾರದಲ್ಲಿ ಬದಲಾವಣೆ

    ಬೆಂಗಳೂರು: ಸಿಲಿಕಾನ್ ಸಿಟಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಗಮಿಸುತ್ತಿರುವ ಹಿನ್ನಲೆ ಸಂಚಾರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಸಂಚಾರಿ ಪೊಲೀಸರು (Traffic Police) ನಗರದ ಕೆಲ ರಸ್ತೆಗಳ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ. ಈ ಮೂಲಕ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

    ಆಗಸ್ಟ್ 26 ಬೆಳಗ್ಗೆ 4:30 ರಿಂದ ಬೆಳಗ್ಗೆ 9:30 ರ ವರೆಗೆ ಕೆಳಕಂಡ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಈ ರಸ್ತೆಗಳ ಬದಲಾಗಿ ಪರ್ಯಾಯ ಮಾರ್ಗ ಬಳಕೆಗೆ ಪೊಲೀಸರ ಮನವಿ ಮಾಡಿಕೊಳ್ಳಲಾಗಿದೆ. ಇನ್ನು ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿರ್ಬಂಧ ಮಾಡಲಾಗಿದೆ. ನಗರದೊಳಗೆ ಆಗಸ್ಟ್ 26ರ ಬೆಳಗ್ಗಿನ ಜಾವ 04.00 ಗಂಟೆಯಿಂದ ಬೆಳಗ್ಗೆ 11.00 ಗಂಟೆಯವರೆಗೆ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಬಂದಾಗ ರೋಡ್ ಶೋ ಮಾಡುತ್ತೇವೆ: ಆರ್.ಅಶೋಕ್

    ಪರ್ಯಾಯವಾಗಿ ವಾಹನ ಸವಾರರು ಬಳಸುವ ಮಾರ್ಗಗಳು: ಓಲ್ಡ್ ಏರ್ಪೋರ್ಟ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್), ಸಿವಿ ರಾಮನ್ ರಸ್ತೆ, ಯಶವಂತಪುರ ಫ್ಲೈ ಓವರ್, ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ), ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆ ಪಾಳ್ಯ ಜಂಕ್ಷನ್‍ನಿಂದ ಸುಮನಹಳ್ಳಿ)ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್ ರಸ್ತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]