Tag: traffic

  • ಸಿಗ್ನಲ್‍ನಲ್ಲಿ ನಿಂತಿದ್ದ 2 ಕಾರಿಗೆ ಲಾರಿ ಡಿಕ್ಕಿ- ಲಾರಿ ಕೆಳಗೆ ನುಗ್ಗಿ ಕಾರು ಅಪ್ಪಚ್ಚಿ

    ಸಿಗ್ನಲ್‍ನಲ್ಲಿ ನಿಂತಿದ್ದ 2 ಕಾರಿಗೆ ಲಾರಿ ಡಿಕ್ಕಿ- ಲಾರಿ ಕೆಳಗೆ ನುಗ್ಗಿ ಕಾರು ಅಪ್ಪಚ್ಚಿ

    – ಭೀಕರವಾಗಿ ಡ್ರೈವರ್ ಸಾವು
    – ಏರ್‌ಬ್ಯಾಗ್‌ನಿಂದ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿ ಪಾರು

    ಬೆಂಗಳೂರು: ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕಾರಿನ ಚಾಲಕನೊಬ್ಬ ಮೃತಪಟ್ಟಿರುವ ಘಟನೆ ಇಂದಿರಾನಗರದ ಬಿನ್ನಮಂಗಲ ಸಿಗ್ನಲ್ ಬಳಿ ನಡೆದಿದೆ.

    ಸಿಗ್ನಲ್‍ನಲ್ಲಿ ನಿಂತಿದ್ದ ಎರಡು ಕಾರು ಮತ್ತು ಒಂದು ಲಾರಿಗೆ ಹಿಂದಿನಿಂದ ಬಂದ ಮತ್ತೊಂದು ಸಿಲಿಂಡರ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೊದಲಿಗೆ ನಿಂತಿದ್ದ ಇಂಡಿಕಾ ಕಾರಿನ ಚಾಲಕ ಮುಂದೆ ಇದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರು ಸಂಪೂರ್ಣವಾಗಿ ಲಾರಿ ಕೆಳಗೆ ಸೇರಿಕೊಂಡಿದ್ದು, ಅಪ್ಪಚ್ಚಿಯಾಗಿದೆ.

    ಲಾರಿ ಡಿಕ್ಕಿಯಾದ ರಭಸಕ್ಕೆ ಇಂಡಿಕಾ ಕಾರು ಡ್ರೈವರ್ ಭೀಕರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೆ ಕಾರಿನಲ್ಲಿದ್ದ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಆ ಕಾರಿನ ಮುಂದಿದ್ದ ಮತ್ತೊಂದು ಇಟಿಎಸ್ ಕಾರು ಕೂಡ ಸಂಪೂರ್ಣವಾಗಿ ಜಖಂ ಆಗಿದ್ದು, ಏರ್ ಬ್ಯಾಗ್ ಓಪನ್ ಆದ ಪರಿಣಾಮ ಆ ಕಾರಿನಲ್ಲಿದ್ದ ವ್ಯಕ್ತಿ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.

    ಈ ಅಪಘಾತದ ನಂತರ ಸಿಲಿಂಡರ್ ತುಂಬಿದ್ದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನೆ ಪರಿಣಾಮ ಇಡೀ ರಸ್ತೆ ಸಂಪೂರ್ಣವಾಗಿ ಜಾಮ್ ಆಗಿದ್ದು, ಸ್ಥಳಕ್ಕೆ ಬಂದ ಇಂದಿರಾನಗರ ಟ್ರಾಫಿಕ್ ಪೊಲೀಸರು ಟ್ರಾಫಿಕ್ ಕ್ಲೀಯರ್ ಮಾಡಿದ್ದಾರೆ. ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.

  • ವಿಶ್ವದ ಸಂಚಾರ ದಟ್ಟಣೆಯಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ – ಒಪ್ಪಿಕೊಂಡ ಭಾಸ್ಕರ್ ರಾವ್

    ವಿಶ್ವದ ಸಂಚಾರ ದಟ್ಟಣೆಯಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ – ಒಪ್ಪಿಕೊಂಡ ಭಾಸ್ಕರ್ ರಾವ್

    -ತಜ್ಞರು, ಟಾಮ್ ಟಾಮ್ ಸಿಬ್ಬಂದಿಯ ಜೊತೆ ಕಮೀಷನರ್ ಸಭೆ

    ಬೆಂಗಳೂರು: ಸಿಲಿಕಾನ್ ಸಿಟಿ ವಿಶ್ವದ 57 ರಾಷ್ಟ್ರಗಳ 416 ನಗರಗಳಲ್ಲಿ ಸಂಚಾರ ದಟ್ಟಣೆಯಲ್ಲಿ ಮೊದಲ ಸ್ಥಾನ ಪಡೆದಿದೆ. ತೀವ್ರ ಸಂಚಾರ ದಟ್ಟಣೆ ಹಾಗೂ ಜನರ ಸಮಯವನ್ನು ಹಾಳು ಮಾಡುವ ವಿಶ್ವದ 10 ನಗರಗಳಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ.

    ಟಾಮ್ ಟಾಮ್ ಸಂಸ್ಥೆಯ ವರದಿಯಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಬೆಳಕು ಚೆಲ್ಲಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಹ ಒಪ್ಪಿಕೊಂಡಿದ್ದಾರೆ. ಗುರುವಾರ ಈ ಬಗ್ಗೆ ತಜ್ಞರು ಮತ್ತು ಟಾಮ್ ಟಾಮ್ ಸಿಬ್ಬಂದಿಯ ಜೊತೆ ಕಮೀಷನರ್ ಸಭೆ ನಡೆಸಿದ್ದಾರೆ.

    ನಗರದಲ್ಲಿ ಬಹುತೇಕ ಕಡೆ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಸಂಚಾರ ದಟ್ಟಣೆ ಅಧಿಕವಾಗಿದೆ. ಶೇ. 65ಕ್ಕಿಂತ ಹೆಚ್ಚು ಟೂ ವೀಲರ್ ಗಳು ರಸ್ತೆಗಿಳಿಯುತ್ತಿವೆ. ಸಾರ್ವಜನಿಕ ಸಾರಿಗೆಯನ್ನು ಸಹ ಪರಿಣಾಮಕಾರಿಯಾಗಿ ಬಳಸಿಕೊಳ್ಳದಿರುವುದು ಸಮಸ್ಯೆಗೆ ಕಾರಣ.

    ಒಂದು ಮನೆಯಲ್ಲಿ ಮೂರು ನಾಲ್ಕು ಕಾರುಗಳು ಇರುವುದು. ಒಬ್ಬರಿಗೇ ಕಾರು ಎತ್ತುವುದು ಸಹ ಟ್ರಾಫಿಕ್ ಕಿರಿಕಿರಿಗೆ ಕಾರಣವಾಗಿದೆ ಎಂದು ಕಮೀಷನರ್ ಹೇಳಿದ್ದಾರೆ. ವಿಶ್ವದಲ್ಲಿ ಅತೀ ಸಂಚಾರ ದಟ್ಟಣೆಯ ನಗರ ಎನ್ನುವ ಕುಖ್ಯಾತಿಗೆ ಬೆಂಗಳೂರಿಗೆ ಅಂಟಿಕೊಂಡಿದೆ.

  • ಬೆಂಗ್ಳೂರಲ್ಲಿ ಪ್ರತಿಭಟನಾ ಕಾವು- ಸವಾರರಿಗೆ ತಟ್ಟಲಿದೆ ಟ್ರಾಫಿಕ್ ಸಮಸ್ಯೆ

    ಬೆಂಗ್ಳೂರಲ್ಲಿ ಪ್ರತಿಭಟನಾ ಕಾವು- ಸವಾರರಿಗೆ ತಟ್ಟಲಿದೆ ಟ್ರಾಫಿಕ್ ಸಮಸ್ಯೆ

    ಬೆಂಗಳೂರು: ಕನಿಷ್ಠ ವೇತನ, ಕಾಯಂ ನೌಕರಿ, ಪಿಂಚಣಿ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಬಿಸಿಯೂಟ ಕಾರ್ಯಕರ್ತರು ಇಂದು ಮತ್ತು ನಾಳೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ.

    ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಿಸಿಯೂಟ ಕಾರ್ಯಕರ್ತರು ಆಗಮಿಸಿದ್ದಾರೆ. ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ರ‍್ಯಾಲಿ ಮಾಡುವ ಮೂಲಕ ಪ್ರತಿಭಟನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಪ್ರತಿಭಟನಾ ರ‍್ಯಾಲಿ ಹಿನ್ನೆಲೆಯಲ್ಲಿ ಸಿಟಿ ರೈಲ್ವೆ ನಿಲ್ದಾಣ ಮುಖ್ಯ ರಸ್ತೆ ಹಾಗೂ ನೃಪತುಂಗ ರೋಡ್ ಸಂಪೂರ್ಣವಾಗಿ ವಾಹನ ಸವಾರಕ್ಕೆ ಬಂದ್ ಆಗಲಿದೆ.

    ಏಕಕಾಲದಲ್ಲಿ ಸಾವಿರಾರು ಕೆಂಪು ಮಹಿಳೆಯರು ರಸ್ತೆಯಲ್ಲಿ ಮೆರವಣಿಗೆ ಮಾಡುವುದರಿಂದ ಮೆಜೆಸ್ಟಿಕ್, ಕೆಜಿ ರೋಡ್, ನೃಪತುಂಗ ರೋಡ್, ಶೇಷಾದ್ರಿ ರೋಡ್ ಸೇರಿದಂತೆ ಸುತ್ತಮುತ್ತಲಿನ ರೋಡ್‍ಗಳು ಜಾಮ್ ಆಗೋ ಸಾಧ್ಯತೆಗಳಿವೆ. ಇದರಿಂದ ವಾಹನ ಸವಾರರು ಬೇರೆ ಮಾರ್ಗ ಬಳಸುವುದು ಉತ್ತಮ.

  • ಭಾನುವಾರವೂ ತಟ್ಟಲಿದೆ ಬೆಂಗ್ಳೂರಿಗೆ ಟ್ರಾಫಿಕ್ ಬಿಸಿ -ವೀಕೆಂಡ್ ಪ್ಲಾನ್ ಮಾಡಿಕೊಳ್ಳೋರು ಹುಷಾರ್!

    ಭಾನುವಾರವೂ ತಟ್ಟಲಿದೆ ಬೆಂಗ್ಳೂರಿಗೆ ಟ್ರಾಫಿಕ್ ಬಿಸಿ -ವೀಕೆಂಡ್ ಪ್ಲಾನ್ ಮಾಡಿಕೊಳ್ಳೋರು ಹುಷಾರ್!

    ಬೆಂಗಳೂರು: ಭಾನುವಾರ ಕೂಡ ಬೆಂಗಳೂರಿನಿಂದ ಮೈಸೂರು, ಮಂಡ್ಯ, ರಾಮನಗರ, ಬಿಡದಿ ಚನ್ನಪಟ್ಟಣ ಭಾಗಕ್ಕೆ ಹೋಗುವವರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ. ಈ ಮೂಲಕ ತಮಿಳುನಾಡಿನ ವಿರುದ್ಧ ಕನ್ನಡಿಗರ ಪ್ರತಿಭಟನೆಯ ಕಿಚ್ಚು ಹಬ್ಬಲಿದೆ. ಹೀಗಾಗಿ ಸಂಡೇ ಸುತ್ತಾಡೋಣ ಎಂದು ಪ್ಲಾನ್ ಮಾಡಿಕೊಂಡಿರುವವರು ಹುಷಾರಾಗಿರಿ.

    ಮೈಸೂರು ಮತ್ತು ಚಾಮರಾಜನಗರದ ಕೆಲ ಯುವಕರು ಇತ್ತೀಚೆಗೆ ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕೊಯಮತ್ತೂರಿನಲ್ಲಿ ಬೈಕ್‍ನಲ್ಲಿ ಬಂದ ಸ್ಥಳೀಯ ಯುವಕರು ಕಾರನ್ನು ಅಡ್ಡಗಟ್ಟಿ, ಆ ಬಳಿಕ ಕಾರಿನ ಮುಂಭಾಗ ಕಟ್ಟಿದ್ದ ಕನ್ನಡ ಬಾವುಟ ತೆಗೆಯುವಂತೆ ಗಲಾಟೆ ಮಾಡಿದ್ದಾರೆ. ಇದನ್ನು ಖಂಡಿಸಿ ಭಾನುವಾರ 101 ವಾಹನಗಳಿಗೆ ಕನ್ನಡದ ಧ್ವಜ ಕಟ್ಟಿ ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನವರೆಗೆ ಬೃಹತ್ ರ‍್ಯಾಲಿ ನಡೆಸಲಾಗುತ್ತದೆ.

    ನಾನಾ ಕನ್ನಡ ಸಂಘಟನೆಗಳಿಂದ ಈ ಪ್ರತಿಭಟನೆ ನಡೆಯಲಿದೆ. ಡಾ.ರಾಜ್ ಸಮಾಧಿಯಿಂದ ಬೆಳಗ್ಗೆ 7 ಗಂಟೆಗೆ ಬೃಹತ್ ರ‍್ಯಾಲಿ ನಡೆಯಲಿದೆ. ಹೀಗಾಗಿ ಹೊಸೂರು ರಸ್ತೆಯವರೆಗೆ ರ‍್ಯಾಲಿ ನಡೆಯಲಿದ್ದು, ಟ್ರಾಫಿಕ್ ಜಾಮ್ ಸಂಭವಿಸಲಿದೆ.

    ಜಾಥದ ಮಾರ್ಗ ಹೀಗಿರಲಿದೆ: ರಾಜ್ ಕುಮಾರ್ ಸಮಾಧಿ, ನಾಯಂಡಹಳ್ಳಿ, ನೈಸ್ ರೋಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಮೂಲಕ ಅತ್ತಿಬೆಲೆ ಮೂಲಕ ಹೊಸೂರುಗೆ ಜಾಥಾ ನಡೆಯಲಿದೆ. ಇದರಿಂದ ಈ ಮಾರ್ಗದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಲಿದೆ.

  • ವಾಹನ ಸವಾರರಿಗೆ ತಟ್ಟಿತು ಮೋದಿ ಎಫೆಕ್ಟ್

    ವಾಹನ ಸವಾರರಿಗೆ ತಟ್ಟಿತು ಮೋದಿ ಎಫೆಕ್ಟ್

    ಬೆಂಗಳೂರು: ಅರ್ಧ ಗಂಟೆ ಮುಂಚಿತವಾಗಿ ಮೇಕ್ರಿ ಸರ್ಕಲ್ ಹಾಗೂ ಬಳ್ಳಾರಿ ರಸ್ತೆ ಬಂದ್ ಮಾಡಿದ್ದಕ್ಕೆ ವಾಹನ ಸವಾರರು ಪೊಲೀಸರ ಮೇಲೆ ಆಕ್ರೋಶಗೊಂಡಿರುವ ಘಟನೆ ಮೇಕ್ರಿ ಸರ್ಕಲ್ ನಡೆದಿದೆ.

    ಪ್ರಧಾನಿ ನರೇಂದ್ರ ಮೋದಿ ಜಿಕೆವಿಕೆ 107ನೇ ಭಾರತ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಕಾರ್ಯಕ್ರಮಕ್ಕೆ ತೆರಳಿದ್ದರು. ಗುರುವಾರ ರಾತ್ರಿ ತುಮಕೂರಿನ ರಾಜಭವನದಲ್ಲಿ ತಂಗಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜಭವನದಿಂದ ಮೇಕ್ರಿ ಸರ್ಕಲ್, ಬಳ್ಳಾರಿ ರಸ್ತೆಯ ಮೂಲಕ ಜಿಕೆವಿಕೆ ಕಾರ್ಯಕ್ರಮಕ್ಕೆ ಹೋಗುವ ಪ್ಲಾನ್ ಮಾಡಲಾಗಿತ್ತು.

    ಪ್ರಧಾನಿ ನರೇಂದ್ರ ಮೋದಿಯ ಭದ್ರತೆಯ ದೃಷ್ಟಿಯಿಂದ ಪೊಲೀಸರು ಅರ್ಧ ಗಂಟೆ ಮುಂಚಿತವಾಗಿ ಮೇಕ್ರಿ ಸರ್ಕಲ್‍ನ ನಾಲ್ಕು ದಿಕ್ಕುಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿತ್ತು. ಜನರು ಕೆಲಸಕ್ಕೆ ಹೋಗುವ ಸಮಯದಲ್ಲಿಯೇ ಅರ್ಧ ಗಂಟೆ ಟ್ರಾಫಿಕ್ ಜಾಮ್ ಮಾಡಿದ್ದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದರಿಂದ ವಾಹನ ಸವಾರರು ಪೊಲೀಸರ ಮೇಲೆ ಮುಗಿಬಿದ್ದಿದ್ದರು.

    ಪೊಲೀಸರು ಯಾವುದೇ ಮಾಹಿತಿ ಕೊಡದೇ ಏಕಾಏಕಿ ಅರ್ಧಗಂಟೆ ನಿಲ್ಲಿಸಿದ್ದರಿಂದ ಪೊಲೀಸರ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಪೊಲೀಸರು ವಾಹನ ಸವಾರರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

  • ಬೆಂಗ್ಳೂರಲ್ಲಿ ಇಂದು ರಸ್ತೆಗಿಳಿಯೋ ಮುನ್ನ ಎಚ್ಚರ – 35 ಮುಸ್ಲಿಂ ಸಂಘಟನೆಗಳಿಂದ ಜಾಗೃತಿ ರ‍್ಯಾಲಿ

    ಬೆಂಗ್ಳೂರಲ್ಲಿ ಇಂದು ರಸ್ತೆಗಿಳಿಯೋ ಮುನ್ನ ಎಚ್ಚರ – 35 ಮುಸ್ಲಿಂ ಸಂಘಟನೆಗಳಿಂದ ಜಾಗೃತಿ ರ‍್ಯಾಲಿ

    – 4 ದಿಕ್ಕುಗಳಿಂದನೂ ಟ್ರಾಫಿಕ್ ಜಾಮ್ ಪಕ್ಕಾ

    ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಇಂದು ಬೆಂಗಳೂರಲ್ಲಿ ಬರೋಬ್ಬರಿ 35 ಮುಸ್ಲಿಂ ಸಂಘಟನೆಗಳು ಬೃಹತ್ ರ‍್ಯಾಲಿಯನ್ನ ಆಯೋಜಿಸಿವೆ.

    ಮಹಾನಗರಿಯ ದಶ ದಿಕ್ಕುಗಳಲ್ಲೂ ಬಹುತೇಕ ಟ್ರಾಫಿಕ್ ಜಾಮ್ ನಿಂದ ಆವರಿಸಿಕೊಳ್ಳಲಿದೆ. ಪೊಲೀಸ್ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಖುದ್ದೂಸ್‍ಸಾಬ್ ಈದ್ಗಾ ಮೈದಾನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಜನಸಾಮಾನ್ಯರು ಟ್ರಾಫಿಕ್‍ನಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುವುದು ನಿಶ್ಚಿತ. ಬೃಹತ್ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿ ಮತ್ತು ಕಾಲ್ನಡಿಗೆ ಮೂಲಕ ಮೆರವಣಿಗೆ ಬರಲಿದೆ.

    ಎಲ್ಲಿಲ್ಲಿ ಟ್ರಾಫಿಕ್ ಜಾಮ್?
    ನಾಲ್ಕು ದಿಕ್ಕುಗಳಿಂದ ಮೆರವಣಿಗೆ ಸಾಗಲಿದ್ದು, ಗೀತಾ ಜಂಕ್ಷನ್ – ಸೌತ್‍ಎಂಡ್ ಸರ್ಕಲ್ – ಮಿನರ್ವ ಸರ್ಕಲ್- ಟೌನ್‍ಹಾಲ್- ಮೈಸೂರು ಬ್ಯಾಂಕ್ ಸರ್ಕಲ್-ಜಯಮಹಲ್ ಮೂಲಕ ಬೈಕ್ ರ‍್ಯಾಲಿ ನಡೆಯಲಿದ್ದು ಎಲ್ಲಾ ಕಡೆ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಇದ್ದೇ ಇರುತ್ತೆ. ಇತ್ತ ಚಿಕ್ಕಬಾಣಾವರ-ಬಾಗಲಗುಂಟೆ-ಗೊರಗುಂಟೆಪಾಳ್ಯ-ಯಶವಂತಪುರ ಸರ್ಕಲ್-ಕಾವೇರಿ ಥಿಯೇಟರ್-ಜಯಮಹಲ್ ಮೂಲಕ ಮೆರವಣಿಗೆ ಸಾಗಲಿದೆ. ಹಾಗಾಗಿ, ಈ ಭಾಗದಲ್ಲೂ ಟ್ರಾಫಿಕ್ ಜಾಮ್ ಆಗೋದು ಪಕ್ಕಾ. ಇದನ್ನೂ ಓದಿ: ರಾಜ್ಯದೆಲ್ಲೆಡೆ ಇಂದು `ಪೌರತ್ವ’ ಕಿಚ್ಚು- ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ

    ಲಗ್ಗೆರೆ-ರಾಜಾಜಿನಗರ- ನವರಂಗ- ರೇಸ್‍ಕೋರ್ಸ್-ಮೇಖ್ರಿ ವೃತ್ತ- ಜಯಮಹಲ್ ಮತ್ತೊಂದು ಮೆರವಣಿಗೆ ಬರಲಿದೆ. ನಾಗವಾರ-ಥಣಿಸಂದ್ರ ಮಾರ್ಗ, ಬಾಣಸವಾಡಿ, ಕೆ ಆರ್ ಪುರಂ, ಇಂದಿರಾನಗರ, ಜೆಬಿ ನಗರ, ಓಲ್ಡ್ ಏರ್‍ಪೋರ್ಟ್‍ ರೋಡ್ ರಸ್ತೆ, ಹಲಸೂರು ಮಾರ್ಗ, ಹಿಸೂರು, ಬನ್ನೇರುಘಟ್ಟ ಮೂಲಕವೂ ರ‍್ಯಾಲಿ ನಡೆಯಲಿದೆ. ಫೈನಲಿ ಈ ಎಲ್ಲಾ ಮೆರವಣಿಗೆ ನಂದಿದುರ್ಗದ ಖುದ್ದೂಸ್ ಈದ್ಗಾ ಮೈದಾನದಲ್ಲಿದ್ದ ಎಲ್ಲಾ ಕಡೆ ಫುಲ್ ಟ್ರಾಫಿಕ್ ಜಾಮ್ ಇರುತ್ತದೆ.

    ಹೀಗಾಗಿ ಬೆಂಗಳೂರಿನ ಜನ ಇಂದು ರೋಡಿಗಿಳಿಯುವ ಮುನ್ನ ಸ್ವಲ್ಪ ಹುಷಾರಾಗಿರಿ. ಈ ರಸ್ತೆಗಳ ಬದಲು ಪೊಲೀಸರು ಸೂಚಿಸಿರುವ ಇತರೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವುದು ಒಳ್ಳೆದು. ಇಲ್ಲಾಂದ್ರೆ ಟ್ರಾಫಿಕ್‍ನಲ್ಲಿ ಸಿಲುಕಿ ಪರದಾಡಬೇಕಾಗುತ್ತೆ.

  • ಬೊಂಬೆಗಳ ಕಣ್ಣಲ್ಲಿ ಸೆರೆಯಾಗುತ್ತೆ ಸಂಚಾರ ಉಲ್ಲಂಘನೆ

    ಬೊಂಬೆಗಳ ಕಣ್ಣಲ್ಲಿ ಸೆರೆಯಾಗುತ್ತೆ ಸಂಚಾರ ಉಲ್ಲಂಘನೆ

    ಬೆಂಗಳೂರು: ಟ್ರಾಫಿಕ್ ಪೊಲೀಸರು ಇಲ್ಲ ಸಿಗ್ನೆಲ್ ಜಂಪ್ ಮಾಡಿದರೆ ನಡೆಯುತ್ತೆ ಎಂದು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ ಮುನ್ನ ಎಚ್ಚರವಾಗಿರಿ. ಏಕೆಂದರೆ ಗೊಂಬೆಗಳ ಕಣ್ಣಲ್ಲಿ ನಿಮ್ಮ ಸಂಚಾರ ಉಲ್ಲಂಘನೆ ಸೆರೆಯಾಗುತ್ತೆ.

    ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಸಿಗ್ನಲ್‍ಗಳಲ್ಲಿ ಸಂಚಾರಿ ಪೊಲೀಸರು ಮ್ಯಾನ್‍ಕ್ವೀನ್‍ಗಳನ್ನು ಹಾಕಿದ್ದಾರೆ. ಮ್ಯಾನ್‍ಕ್ವೀನ್ ಎಂದರೆ ಟ್ರಾಫಿಕ್ ಪೊಲೀಸರ ಬಟ್ಟೆ ಹಾಕಿ ನಿಲ್ಲಿಸಿರುವ ಗೊಂಬೆಗಳು. ಇದೀಗ ಈ ಗೊಂಬೆಗಳ ಕಣ್ಣಲ್ಲಿ ಹೈ ರೆಸಲ್ಯೂಷನ್ ಕ್ಯಾಮೆರಾ ಅಳವಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಕಂಟ್ರೋಲ್‍ಗೆ ಪೊಲೀಸರಿಂದ ಹೊಸ ಐಡಿಯಾ

    ಸಂಚಾರಿ ನಿಮಯಗಳನ್ನು ಉಲ್ಲಂಘನೆ ಮಾಡಿದರೆ ಈ ಮ್ಯಾನ್‍ಕ್ವೀನ್‍ಗಳು ಫೇಸ್ ಐಡೆಂಟಿಟಿ ಮಾಡುತ್ತೆ. ಒಮ್ಮೆ ಮ್ಯಾನ್‍ಕ್ವೀನ್‍ಗಳ ಕಣ್ಣಲ್ಲಿ ಸೆರೆಯಾದರೆ, ಮುಂದಿನ ಸಿಗ್ನಲ್‍ನಲ್ಲಿ ಪೊಲೀಸರು ಅವರನ್ನು ಹಿಡಿಯಲಿದ್ದಾರೆ. ಈಗಾಗಲೇ ನಾಲ್ವರು ಇಂಜಿನಿಯರ್ ಗಳ ಜೊತೆ ಕಮೀಷನರ್ ಮಾತುಕತೆ ನಡೆಸಿದ್ದಾರೆ. ಹೈ ರೆಸಲ್ಯೂಷನ್ ಕ್ಯಾಮೆರಾ ಅಳವಡಿಸಲು ತಯಾರಿ ನಡೆಸಿದ್ದಾರೆ.

    ಅಲ್ಲದೆ ಮುಂದಿನ ದಿನಗಳಲ್ಲಿ ರೋಬೊಟಿಕ್ ಮಾದರಿಯ ತಂತ್ರ್ಯಜ್ಞಾನವನ್ನು ಮ್ಯಾನ್‍ಕ್ವೀನ್‍ಗಳಲ್ಲಿ ಅಳವಡಿಸುವ ಬಗ್ಗೆಯೂ ಸಹ ತಯಾರಿ ನಡೆದಿದೆ.

  • ಟ್ರಾಫಿಕ್ ಕಂಟ್ರೋಲ್‍ಗೆ ಪೊಲೀಸರಿಂದ ಹೊಸ ಐಡಿಯಾ

    ಟ್ರಾಫಿಕ್ ಕಂಟ್ರೋಲ್‍ಗೆ ಪೊಲೀಸರಿಂದ ಹೊಸ ಐಡಿಯಾ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎಂದಾಕ್ಷಣ ಎಲ್ಲರಿಗೂ ಇಲ್ಲಿನ ಟ್ರಾಫಿಕ್ ನೆನಪಾಗುತ್ತದೆ. ಇತ್ತೀಚೆಗೆ ಟ್ರಾಫಿಕ್ ಹೆಚ್ಚಾಗಿದ್ದು, ಇದಕ್ಕೆ ಮುಕ್ತಿ ನೀಡಲು ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ.

    ನಗರದ ಹುಳಿಮಾವು ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಬನ್ನೇರುಘಟ್ಟ ರಸ್ತೆಯ, ಗೊಟ್ಟಿಗೆರೆ ಜಂಕ್ಷನ್‍ನಲ್ಲಿ ಮ್ಯಾನಿಕ್ವೀನ್ ನಿಲ್ಲಿಸಲಾಗಿದೆ. ಈ ಟ್ರಾಫಿಕ್ ಪೊಲೀಸ್ ಪ್ರತಿಕೃತಿ ಗೊಂಬೆ ತಯಾರಿಗೆ 8 ಸಾವಿರ ರೂ. ತಗುಲಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

    ಈ ಗೊಂಬೆ ದೂರದಿಂದಲೇ ವಾಹನ ಸವಾರರಿಗೆ ಸಂಚಾರಿ ನಿಯಮಗಳನ್ನು ಪಾಲಿಸಲು ಸಿಗ್ನಲ್ ನೀಡುತ್ತದೆ. ಕೆಲವರು ಪೊಲೀಸರನ್ನು ನೋಡಿದ ತಕ್ಷಣ ಸಂಚಾರಿ ನಿಯಮವನ್ನು ಪಾಲಿಸುತ್ತಾರೆ. ಪೊಲೀಸರು ಇಲ್ಲದಿದ್ದರೆ ಅವರು ನಿಯಮಗಳನ್ನು ಪಾಲಿಸುವುದಿಲ್ಲ. ಹಾಗಾಗಿ ಪೊಲೀಸರು ಈ ಹೊಸ ಐಡಿಯಾ ಮಾಡಿದ್ದಾರೆ.

    ನಗರದ ಎಲ್ಲೆಡೆ ಪ್ರತಿ ಸರ್ಕಲ್‍ನಲ್ಲೂ ಈ ಗೊಂಬೆಗಳನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಒಂದು ಪೊಲೀಸ್ ಸ್ಟೇಷನ್‍ಗೆ 5 ಮ್ಯಾನಿಕ್ವೀನ್ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

  • ಟ್ರಾಫಿಕ್ ತಲೆನೋವಿನಿಂದ ರಿಲ್ಯಾಕ್ಸ್ ಆಗಲು ಸಂಚಾರಿ ಪೊಲೀಸರ ಯೋಗ, ಬಾಡಿ ಮಸಾಜ್

    ಟ್ರಾಫಿಕ್ ತಲೆನೋವಿನಿಂದ ರಿಲ್ಯಾಕ್ಸ್ ಆಗಲು ಸಂಚಾರಿ ಪೊಲೀಸರ ಯೋಗ, ಬಾಡಿ ಮಸಾಜ್

    – ಠಾಣೆಯಲ್ಲೇ ಸಿಬ್ಬಂದಿಯ ಯೋಗಾಭ್ಯಾಸ

    ಬೆಂಗಳೂರು: ಟ್ರಾಫಿಕ್ ಕ್ಲಿಯರ್ ಮಾಡಿ ರೋಸಿಹೋಗಿರುವ ಸಿಲಿಕಾನ್ ಸಿಟಿ ಸಂಚಾರಿ ಪೊಲೀಸರು ರಿಲ್ಯಾಕ್ಸ್ ಆಗಲು ಪ್ರತಿದಿನ ಬೆಳಗ್ಗೆ ಠಾಣೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.

    ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರತಿದಿನ ಯೋಗ ಮಾಡುತ್ತಿದ್ದಾರೆ. ಖ್ಯಾತ ಯೋಗತಜ್ಞ ರಾಮಕೃಷ್ಣ ಅವರಿಂದ ಸಿಬ್ಬಂದಿಗೆ ಯೋಗ ತರಬೇತಿ ನೀಡಲಾಗುತ್ತಿದೆ. ಕೆಲಸದಿಂದ ದೇಹದ ಮೇಲಾಗುವ ಒತ್ತಡ ಕಡಿಮೆ ಮಾಡಲು ಬನಶಂಕರಿ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಕೃಷ್ಣ ನೇತೃತ್ವದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ.

    45 ದಿನಗಳ ಕಾಲ ಬನಶಂಕರಿ ಸಂಚಾರಿ ಠಾಣೆಯಲ್ಲೇ ಯೋಗಾಭ್ಯಾಸ ಮಾಡಲಾಗುತ್ತದೆ. ಇದರ ಜೊತೆಗೆ ಪಿಸಿಯೋಥೆರಪಿ ಮೂಲಕ ಸಿಬ್ಬಂದಿಗೆ ಬಾಡಿ ಮಸಾಜ್ ಕೂಡ ಮಾಡಲಾಗುತ್ತಿದೆ. ಟ್ರಾಫಿಕ್ ಕ್ಲೀಯರ್ ಮಾಡಲು ನಿಂತು ಸಿಬ್ಬಂದಿಗೆ ತೀವ್ರ ಕಾಲು ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿನಿತ್ಯ ನುರಿತ ವೈದ್ಯರಿಂದ ಸಿಬ್ಬಂದಿಗೆ ಪಿಸಿಯೋಥೆರಪಿ ಮಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಬೆಂಗ್ಳೂರಿಗೆ ಟ್ರಾಫಿಕ್ ಬಿಸಿ-ಇಂದು ರೈತರ ಪ್ರತಿಭಟನೆ

    ಬೆಂಗ್ಳೂರಿಗೆ ಟ್ರಾಫಿಕ್ ಬಿಸಿ-ಇಂದು ರೈತರ ಪ್ರತಿಭಟನೆ

    -ರೈತರ ಬೇಡಿಕೆಗಳೇನು?
    -ಮಾರ್ಗ ಬದಲಾವಣೆ ಹೀಗಿದೆ

    ಬೆಂಗಳೂರು: ಸಿಲಿಕಾನ್ ಸಿಟಿಗೆ ಇಂದು ಟ್ರಾಫಿಕ್ ಬಿಸಿ ತಟ್ಟಲಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ ರೈತರು ಉತ್ತರ ಕರ್ನಾಟಕಕ್ಕೆ ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಬೀದಿಗೆ ಇಳಿಯಲಿದ್ದಾರೆ. ಇನ್ನೊಂದಡೆ ಜೆಡಿಎಸ್ ಕೂಡ ಪ್ರತಿಭಟನೆ ನಡೆಸಲಿದೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ರೈತರು ಇಂದು ಹನ್ನೊಂದು ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ.

    ಜೆಡಿಎಸ್ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹನ್ನೊಂದು ಗಂಟೆಗೆ ಜೆಪಿ ಭವನದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆ ಎಫೆಕ್ಟ್ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ. ಅಧಿವೇಶನ ಹಿನ್ನೆಲೆ ವಿಧಾನಸೌಧ ಸುತ್ತಮುತ್ತ 2 ಕಿ.ಮೀ. ನಿಷೇದಾಜ್ಞೆಯೂ ಜಾರಿಯಾಗಲಿದೆ.

    ಇಲ್ಲಿ ಟ್ರಾಫಿಕ್ ಜಾಮ್:
    1. ಮಂತ್ರಿಮಾಲ್ ರಸ್ತೆ,
    2. ಶೇಷಾದ್ರಿಪುರಂ ರೋಡ್
    3. ಮಜೆಸ್ಟಿಕ್ ಸುತ್ತಾಮುತ್ತ ರಸ್ತೆ
    4. ಕಾರ್ಪೋರೇಷನ್ ಸರ್ಕಲ್
    5. ವಿಧಾನಸೌಧ ಸುತ್ತಾಮುತ್ತ ರಸ್ತೆ
    6. ಆನಂದ್ ರಾವ್ ಸರ್ಕಲ್ ಬಳಿ ಟ್ರಾಫಿಕ್ ಬಿಸಿ ಇರಲಿದೆ.

    ಮಾರ್ಗ ಬದಲಾವಣೆ
    * ಶೇಷಾದ್ರಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ
    * ಆನಂದ ರಾವ್ ಫ್ಲೈಓವರ್ ಬಳಿ ಎಡ ತಿರುವು ಪಡೆದು ರೇಸ್ ಕೋರ್ಸ್ ರಸ್ತೆ ಕಡೆ ಸಂಚಾರಿಸಲು ಮಾರ್ಗ ಬದಲು
    * ಸಿಐಡಿ ಜಂಕ್ಷನ್, ಪ್ಯಾಲೇಸ್ ರಸ್ತೆ ಮೂಲಕ ಕೆ ಆರ್ ಸರ್ಕಲ್ ಪ್ರವೇಶಿಸಲು ಸೂಚನೆ

    ರೈತರ ಬೇಡಿಕೆಗಳೇನು?
    1. ಉತ್ತರ ಕರ್ನಾಟಕದ ಪ್ರವಾಹ ದಲ್ಲಿ ಮನೆ ಕಳಕೊಂಡವರಿಗೆ ಹತ್ತು ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಬೇಕು.
    2. ಎಕರೆಗೆ ಇಪ್ಪತ್ತೈದು ಸಾವಿರದಂತೆ ಪರಿಹಾರ ಕೊಡಬೇಕು
    3. ಪ್ರವಾಹದಲ್ಲಿ ಪ್ರಾಣ ಕಳಕೊಂಡವರಿಗೆ 25 ಲಕ್ಷ ಪರಿಹಾರ ಕೊಡಬೇಕು.
    4. ನಷ್ಟವಾದ ಕೃಷಿ ಭೂಮಿಗೆ ಪರಿಹಾರ ಕೊಡಬೇಕು, ಪರ್ಯಾಯ ಭೂಮಿ ಕೊಡಬೇಕು.
    5. ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು.
    6. ಬ್ಯಾಂಕ್ ಗಳು ಪ್ರವಾಹದಿಂದ ತೊಂದರೆಗೆ ಒಳಗಾದ ರೈತರಿಗೆ ಸಾಲದ ನೋಟಿಸ್ ನೀಡೋದನ್ನು ನಿಲ್ಲಿಸಬೇಕು.