Tag: Traffic signal

  • ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ – ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆಯಲ್ಲಿ ಏರಿಕೆ

    ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ – ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆಯಲ್ಲಿ ಏರಿಕೆ

    – 350 ಇದ್ದ ಟ್ರಾಫಿಕ್ ಸಿಗ್ನಲ್ 400 ಕ್ಕೆ ಏರಿಕೆ
    – ಸಿಗ್ನಲ್‌ಗಳಲ್ಲಿ ಕಾಯುವ ವೇಟಿಂಗ್ ಟೈಂ ಕೂಡ ಹೆಚ್ಚಳ

    ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಟ್ರಾಫಿಕ್ ಸಿಗ್ನಲ್‌ಗಳ (Traffic Signal) ಸಂಖ್ಯೆಯೂ ಹೆಚ್ಚಾಗಿದೆ. ಜೊತೆಗೆ ಸಿಗ್ನಲ್‌ಗಳಲ್ಲಿ ಕಾಯುವ ವೇಟಿಂಗ್ ಟೈಮ್ ಕೂಡ ಹೆಚ್ಚಾಗಿದೆ. ಬೆಂಗಳೂರಿನ ಯಾವ್ಯಾವ ವಲಯದಲ್ಲಿ ಟ್ರಾಫಿಕ್ ಸಿಗ್ನಲ್ ಹೆಚ್ಚಾಗಿವೆ.

    ಬೆಂಗಳೂರು (Bengaluru) ನಗರ ಬೆಳೆದಂತೆ ಸಂಚಾರ ದಟ್ಟಣೆ ಹೆಚ್ಚಾಗ್ತಿದೆ. ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಾ ಇದೆ. ಟ್ರಾಫಿಕ್ ಸಮಸ್ಯೆ ಆಗ್ತಾ ಇದ್ದು, ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆ ಹೆಚ್ಚಳ ಆಗಿದೆ. 2019 ರವರೆಗೂ 300 ಟ್ರಾಫಿಕ್ ಸಿಗ್ನಲ್‌ಗಳು ಇದ್ದವು. ಬಳಿಕವೂ 50 ಟ್ರಾಫಿಕ್ ಸಿಗ್ನಲ್‌ಗಳು ನಿರ್ಮಾಣ ಆದವು. ಈಗ ಹೊಸದಾಗಿ ಮತ್ತೆ 52 ಟ್ರಾಫಿಕ್ ಸಿಗ್ನಲ್‌ಗಳು ಉದ್ಭವ ಆಗಲಿವೆ. ಅಲ್ಲಿಗೆ ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆ 402ಕ್ಕೆ ಏರಿಕೆ ಆಗುತ್ತಿದೆ. ಇದನ್ನೂ ಓದಿ: ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ದುರ್ಮರಣ

    ಎಲ್ಲೆಲ್ಲಿ ಟ್ರಾಫಿಕ್ ಸಿಗ್ನಲ್ ಹೆಚ್ಚಳ?
    * ಬೆಂಗಳೂರು ಸೆಂಟ್ರಲ್ ಡಿವಿಷನ್ – 65 ಟ್ರಾಫಿಕ್ ಸಿಗ್ನಲ್
    * ಬೆಂಗಳೂರು ಪೂರ್ವ – 56
    * ಬೆಂಗಳೂರು ಉತ್ತರ – 38
    * ಬೆಂಗಳೂರು ದಕ್ಷಿಣ – 86
    * ಈಶಾನ್ಯ ವಿಭಾಗ – 86
    * ಆಗ್ನೇಯ ವಿಭಾಗ – 36
    * ಬೆಂಗಳೂರು ಪಶ್ಚಿಮ ವಿಭಾಗ – 35

    ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವ ಸಮಯ ಕೂಡ ಈಗಾಗಲೇ ಜಾಸ್ತಿ ಮಾಡಲಾಗಿದೆ. ನಗರದ ಗೊರಗುಂಟೆಪಾಳ್ಯ, ಶಂಕರ ಮಠ ಸಿಗ್ನಲ್, ಕೆ.ಆರ್. ಸರ್ಕಲ್ ಸೇರಿದಂತೆ ಅನೇಕ ಕಡೆ 200 ಸೆಕೆಂಡ್ ನೀಡಲಾಗಿದೆ. ಗೊರುಗುಂಟೆ ಪಾಳ್ಯ ಮಾರ್ಗದಲ್ಲಿ ಮೂರರಿಂದ ಎಂಟು ನಿಮಿಷ ಕೂಡ ಆಗ್ತಿವೆ. ಸಿಗ್ನಲ್‌ಗಳಲ್ಲಿ ಹೆಚ್ಚು ವಾಹನಗಳು ಇರುವುದರಿಂದ ಹೆಚ್ಚು ಸಮಯದ ಬಿಡಲಾಗ್ತಿದೆ. ಇದನ್ನೂ ಓದಿ: ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದಿದ್ರೆ ಆಧಾರ್‌ ಕಾರ್ಡ್‌ ಇಲ್ಲ: ಅಸ್ಸಾಂ ಸಿಎಂ ಘೋಷಣೆ

  • ಟ್ರಾಫಿಕ್ ಸಿಗ್ನಲ್‌ನಲ್ಲಿ ಕರೀನಾ – ಜಾಗೃತಿ ಮೂಡಿಸಲು ದೆಹಲಿ ಪೊಲೀಸರ ಮೀಮ್

    ಟ್ರಾಫಿಕ್ ಸಿಗ್ನಲ್‌ನಲ್ಲಿ ಕರೀನಾ – ಜಾಗೃತಿ ಮೂಡಿಸಲು ದೆಹಲಿ ಪೊಲೀಸರ ಮೀಮ್

    ನವದೆಹಲಿ: ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಏನೆಲ್ಲಾ ಸರ್ಕಸ್ ಮಾಡಲ್ಲಾ ಹೇಳಿ? ಸಾಮಾಜಿಕ ಮಾಧ್ಯಮಗಳಲ್ಲೂ ಅಗತ್ಯಕರ ಸಂದೇಶಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಟ್ರಾಫಿಕ್ ನಿಯಮ ಉಲ್ಲಂಘಿಸುವ ಪ್ರಯಾಣಿಕರಿಗಾಗಿ ದೆಹಲಿ ಪೊಲೀಸರು ಒಂದು ಮೀಮ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿಕೊಂಡಾದರೂ ಟ್ರಾಫಿಕ್ ರೂಲ್ಸ್ ಪಾಲನೆ ಮಾಡ್ರಪ್ಪಾ ಎಂದು ಬೇಡಿಕೊಂಡಿದ್ದಾರೆ.

    ದೆಹಲಿ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮೀಮ್ ಒಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಟ್ರಾಫಿಕ್ ರೂಲ್ಸ್‌ಗಳನ್ನು ಉಲ್ಲಂಘಿಸುವ ಪ್ರಯಾಣಿಕರಿಗಾಗಿ ಸಂದೇಶ ನೀಡಿದ್ದಾರೆ.

    ಮೀಮ್‌ನಲ್ಲೇನಿದೆ?
    ದೆಹಲಿ ಪೊಲೀಸರು ಹಂಚಿಕೊಂಡಿರುವ ಸಣ್ಣ ಮೀಮ್ ಕ್ಲಿಪ್‌ನಲ್ಲಿ ಕಾರೊಂದು ಅತ್ಯಂತ ವೇಗವಾಗಿ ಹೋಗುತ್ತದೆ. ಬಳಿಕ ಟ್ರಾಫಿಕ್ ಸಿಗ್ನಲ್‌ನ ಕೆಂಪು ದೀಪದಲ್ಲಿ ನಟಿ ಕರೀನಾ ಕಪೂರ್‌ನ `ಕಬಿ ಖುಷಿ ಕಬಿ ಗಂ’ ಚಿತ್ರದ ಫೇಮಸ್ ಡೈಲಾಗ್ ಹೇಳುವ ವೀಡಿಯೋ ಪ್ಲೇ ಆಗುತ್ತದೆ. “ಕೋನ್ ಹೇ ಯೆ? ಜಿಸ್‌ನೆ ದುಬಾರಾ ಮುಡ್ಕೆ ಮುಜೆ ನಹಿ ದೇಖಾ”(ಯಾರದು? ನನ್ನನ್ನು ಮತ್ತೆ ತಿರುಗಿ ನೋಡಲೇ ಇಲ್ಲದವರು) ಎಂದು ಕರೀನಾ ಹೇಳುತ್ತಾಳೆ. ಇದನ್ನೂ ಓದಿ: ರೇವಡಿ ಹಂಚಿ ಮತ ಗಳಿಸುವ ಸಂಸ್ಕೃತಿಯನ್ನು ತೊಡೆದುಹಾಕಬೇಕು: ಮೋದಿ

    ಈ ಮೀಮ್‌ನೊಂದಿಗೆ ಸಂದೇಶವೊಂದನ್ನು ಬರೆದಿರುವ ದೆಹಲಿ ಪೊಲೀಸರು, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿರುವವರು ಯಾರು? ಕರೀನಾ ನಿಮ್ಮ ಗಮನ ಸೆಳೆಯಲು ಬಯಸುತ್ತಾಳೆ. ದಯವಿಟ್ಟು ಟ್ರಾಫಿಕ್ ರೂಲ್ಸ್ ಅನ್ನು ಫಾಲವ್ ಮಾಡಿ ಎಂದಿದ್ದಾರೆ.

    ಜುಲೈ 12 ರಂದು ದೆಹಲಿ ಪೊಲೀಸರು ಪ್ರಯಾಣಿಕರ ಜಾಗೃತಿಗಾಗಿ ಇನ್ನೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಅದರಲ್ಲಿ ನಾಸಾ ಇತ್ತೀಚೆಗೆ ತೆಗೆದ ಆಕಾಶದ ಅತ್ಯಂತ ಹಳೆಯ ಫೋಟೋವನ್ನು ಹಾಕಿ, ಅದರ ಪಕ್ಕದಲ್ಲಿ ಪ್ರಯಾಣಿಕನೊಬ್ಬ ಕಾರಿನ ಸೀಟ್‌ಬೆಲ್ಟ್ ಹಾಕುವುದನ್ನು ತೋರಿಸಲಾಗಿತ್ತು. ಅತ್ಯಂತ ಆಳವಾದ ಹಾಗೂ ತೀಕ್ಷ್ಣವಾದ ಬ್ರಹ್ಮಾಂಡದ ಚಿತ್ರ ಹಾಗೂ ಅತ್ಯಂತ ಆಳವಾದ ಹಾಗೂ ತೀಕ್ಷ್ಣವಾದ ಜವಾಬ್ದಾರಿಯುತ ನಾಗರಿಕನ ಚಿತ್ರ ಎಂದು ಫೋಟೋಗಳ ಮೇಲೆ ಬರೆಯಲಾಗಿತ್ತು. ಇದರೊಂದಿಗೆ ಸಂದೇಶ ನೀಡಿದ ದೆಹಲಿ ಪೊಲೀಸರು, ನಕ್ಷತ್ರಗಳನ್ನು ನೋಡುವುದನ್ನು ತಪ್ಪಿಸಲು ಸೀಟ್ ಬೆಲ್ಟ್‌ಗಳನ್ನು ಹಾಕಿಕೊಳ್ಳಿ ಎಂದು ಬರೆದಿದ್ದರು. ಇದನ್ನೂ ಓದಿ: ಸುದ್ದಿಗಳಿಗೆ ಗೂಗಲ್, ಫೇಸ್‌ಬುಕ್ ಪಾವತಿಸಬೇಕು – ಹೊಸ ಕಾನೂನಿಗೆ ಸರ್ಕಾರ ಯೋಜನೆ

    Live Tv
    [brid partner=56869869 player=32851 video=960834 autoplay=true]

  • ಟ್ರಾಫಿಕ್ ಸಿಗ್ನಲ್‍ನಲ್ಲಿ ಯುವತಿ ಫುಲ್ ಡ್ಯಾನ್ಸ್, ವೀಡಿಯೋ ವೈರಲ್- ಮುಂದೇನಾಯ್ತು?

    ಟ್ರಾಫಿಕ್ ಸಿಗ್ನಲ್‍ನಲ್ಲಿ ಯುವತಿ ಫುಲ್ ಡ್ಯಾನ್ಸ್, ವೀಡಿಯೋ ವೈರಲ್- ಮುಂದೇನಾಯ್ತು?

    – ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

    ಭೋಪಾಲ್: ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಯುವತಿ ಹುಚ್ಚೆದ್ದು ಕುಣಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಧ್ಯಪ್ರದೇಶದ ಇಂದೋರ್ ನ ರಸೋಮಾ ಸ್ಕ್ವೇರ್ ನಲ್ಲಿ ಘಟನೆ ನಡೆದಿದ್ದು, ಇಂದೋರ್ ನ ಬ್ಯುಸಿಯಸ್ಟ್ ರಸ್ತೆಗಳಲ್ಲಿ ಇದೂ ಒಂದು. ಇದ್ದಕ್ಕಿದ್ದಂತೆ ಯುವತಿ ಸಿಗ್ನಲ್ ಮಧ್ಯೆ ಕುಣಿಯುವುದನ್ನು ಕಂಡು ಜನ ದಂಗಾಗಿದ್ದಾರೆ. ಆದರೆ ಇದು ಮಾಸ್ಕ್ ಹಾಗೂ ಟ್ರಾಫಿಕ್ ರೂಲ್ಸ್ ಕುರಿತು ಜನರಲ್ಲಿ ಅರಿವು ಮೂಡಿಸಲು ಮಾಡಿದ ವೀಡಿಯೋ ಎಂದು ಮಾಡೆಲ್ ಶ್ರೇಯಾ ಕಲ್ರಾ ಹೇಳಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು, ಇದೊಂದು ಪಬ್ಲಿಸಿಟಿ ಸ್ಟಂಟ್ ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Shreya Kalra (@shreyakalraa)

    ಮಾಡೆಲ್ ಶ್ರೇಯಾ ಕಲ್ರಾ ಡ್ಯಾನ್ಸ್ ಮಾಡಿರುವ 30 ಸೆಕೆಂಡ್‍ಗಳ ಕ್ಲಿಪ್ ಸಖತ್ ವೈರಲ್ ಆಗಿದೆ. ಸಿಗ್ನಲ್‍ನಲ್ಲಿ ರೆಡ್ ಲೈಟ್ ಆನ್ ಆಗುತ್ತಿದ್ದಂತೆ ಝಿಬ್ರಾ ಕ್ರಾಸ್‍ಗೆ ಇಳಿದು ಡ್ಯಾನ್ಸ್ ಮಾಡಲು ಆರಂಭಿಸಿದ್ದಾರೆ. ಅವರೊಂದಿಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ. ಸಿಗ್ನಲ್‍ನಲ್ಲಿ ಹಸಿರು ಬಣ್ಣದ ದೀಪ ಉರಿಯುವವರೆಗೆ ಶ್ರೇಯಾ ಡ್ಯಾನ್ಸ್ ಮಾಡಿದ್ದಾರೆ. ಮಾಸ್ಕ್ ಧರಿಸುವಂತೆ ವೀಡಿಯೋದುದ್ದಕ್ಕೂ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಫಿಬಾ ಏಷ್ಯಾಕಪ್ ಮಹಿಳಾ ಬಾಸ್ಕೆಟ್ ಬಾಲ್ ಟೂರ್ನಿ- ಭಾರತ ತಂಡಕ್ಕೆ ಕೊಡಗಿನ ನವನೀತಾ ಆಯ್ಕೆ

    ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಅಧಿಕಾರಿಗಳು ಮಾಡೆಲ್‍ಗೆ ನೋಟಿಸ್ ನೀಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಈ ರೀತಿ ಮಾಡುವುದು ಸರಿಯಲ್ಲ ಎಂದು ಅಧಿಕಾರಿಗಳು ನೋಟಿಸ್‍ನಲ್ಲಿ ತಿಳಿಸಿದ್ದಾರೆ. ಇತರರಿಗೆ ಅಥವಾ ನಿಮಗೆ ಹಾನಿಯಾಗದ ರೀತಿ ಮನರಂಜನಾ ಚಟುವಟಿಕೆಗಳನ್ನು ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಬಳಿಕ ಶ್ರೇಯಾ ಕಲ್ರಾ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದು, ವೀಡಿಯೋ ಮಾಡುವ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಅಲ್ಲಗಳೆದಿರುವ ಅವರು, ಮಾಸ್ಕ್ ಧರಿಸುವುದು ಹಾಗೂ ರೆಡ್ ಸಿಗ್ನಲ್ ಬಿದ್ದಾಗ ನಿಲ್ಲುವ ಕುರಿತು ಜಾಗೃತಿ ಮೂಡಿಸಲು ಈ ರೀತಿ ಮಾಡಿದೆ. ಇದೇ ರೀತಿ ಮಾಡಿ ಎಂದು ನಾನು ಯಾರಿಗೂ ಹೇಳಲು ಬಯಸುವುದಿಲ್ಲ, ವೀಡಿಯೋವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

  • ಬೆಳಗಾವಿ- ಸ್ಮಾರ್ಟ್ ಕಾಮಗಾರಿಯಿಂದ ಸಂಚಾರಕ್ಕೆ ನೂರೆಂಟು ವಿಘ್ನ

    ಬೆಳಗಾವಿ- ಸ್ಮಾರ್ಟ್ ಕಾಮಗಾರಿಯಿಂದ ಸಂಚಾರಕ್ಕೆ ನೂರೆಂಟು ವಿಘ್ನ

    ಬೆಳಗಾವಿ: ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ನಗರಾದ್ಯಂತ ಟ್ರಾಫಿಕ್ ಸಿಗ್ನಲ್ ಸ್ಥಗಿತಗೊಂಡಿದ್ದು, ವಾಹನ ಸವಾರರು ನಿಯಯ ಉಲ್ಲಂಘಿಸಿ ಮನಬಂದಂತೆ ವಾಹನ ಚಲಾಯಿಸಿ ಅಪಾಯಕ್ಕೆ ಮೂನ್ಸೂಚನೆ ನೀಡುತ್ತಿವೆ.

    ವೇಗವಾಗಿ ಚಲಾಯಿಸುವವರಿಗೆ ಈ ಕಾಮಗಾರಿ ವಿಘ್ನವಾಗಿ ಪರಿಣಮಿಸುತ್ತಿದೆ. ಸಂಚಾರ ನಿಯಂತ್ರಿಸುವಲ್ಲಿ ಟ್ರಾಫಿಕ್ ಪೋಲಿಸ್ ಕೈತಪ್ಪುತ್ತಿದೆ. ನಗರದ ಪ್ರಮುಖ ರಸ್ತೆಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಟ್ರಾಫಿಕ್ ಸಿಗ್ನಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ನೆಪದಲ್ಲಿ ಸವಾರರು ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಚಲಾಯಿಸುತ್ತಿದ್ದು ಇದರಿಂದ ಪಾದಚಾರಿಗಳಿಗೆ ಅಡಕವಾಗುತ್ತಿದೆ. ಟ್ರಾಫಿಕ್ ಪೊಲೀಸ್ ಸ್ಥಿತಿ ಯಾರಿಗೂ ಹೇಳತೀರದ್ದಾಗಿದೆ.

    ಮುಂಜಾನೆ 8ರಿಂದ 12 ರವರೆಗೆ ಅತಿ ಹೆಚ್ಚು ವಾಹನಗಳು ರಸ್ತೆಯಲ್ಲಿರುತ್ತವೆ. ಮತ್ತೆ ಸಂಜೆ 3 ರಿಂದ 8ರವರೆಗೆ ವಾಹನಗಳ ಹೆಚ್ಚು ಸಂಖ್ಯೆ ಹೆಚ್ಚುತ್ತವೆ. ಟ್ರಾಫಿಕ್ ಸಮಸ್ಯೆಯಿಂದಾಗಿ ಅಶೋಕ ವೃತ್ತ ಹಾಗೂ ಕೆಎಲ್ ಇ ಮಾರ್ಗದಲ್ಲಿ ಸಮಸ್ಯೆ ಉಟಾಗುತ್ತಿದೆ. ನಿತ್ಯವೂ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿವೆ. ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ನಿರಂತರವಾಗಿ ಟ್ರಾಫಿಕ್ ನಿಯಂತ್ರಿಸುವ ಅನಿರ್ವಾಯವಿದೆ ಎನ್ನುತ್ತಾರೆ ವಾಹನ ಸವಾರರು. ಕೃಷ್ಣ ದೇವರಾಯ ವೃತ್ತದಿಂದ ಇಳಿಜಾರು ಇರುವ ಕಾರಣ ವಾಹನಗಳು ವೇಗವಾಗಿ ಬರುತ್ತವೆ. ಚನ್ನಮ್ಮ ವೃತ್ತದ ರಸ್ತೆ ದಾಟಲು ಪರದಾಡಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ರಸ್ತೆಯಲ್ಲಿ ಹಂಪ್‍ಗಳನ್ನೂ ನಿರ್ಮಿಸಿಲ್ಲ. ಮಕ್ಕಳನ್ನು ಕರೆದುಕೊಂಡು ರಸ್ತೆ ದಾಟಲು ಹೋದರೆ ಹೃದಯ ಕೈಗೆ ಬರುತ್ತದೆ ಎಂದು ಅಶೋಕ್ ಸದಾಶಿವ ನಗರದ ನಿವಾಸಿಯೊಬ್ಬರು ತಿಳಿಸಿದರು.

    ತಪ್ಪಿದ ನಿಯಂತ್ರಣ: ರೈಲ್ವೆ ವ್ಯಾಪ್ತಿಯಲ್ಲಿರುವ ಅದೆಷ್ಟೂ ವಾಹನ ಈ ಪ್ರಮುಖ ಮಾರ್ಗದಲ್ಲಿ ಸಂಚರಿಸುವ ಅಗತ್ಯವಿದೆ. ಇಲ್ಲಿಯೇ ಕಾಮಗಾರಿ ವಿಳಂಬದಿಂದ ರಸ್ತೆ ಉದ್ದಕ್ಕೂ ವಾಹನ ಸವಾರರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಎರಡೆರಡು ವಾಹನ ಒಂದೇ ಮಾರ್ಗ ಸಂಚರಿಸುವುದರಿಂದ ವಾಹನ ನಿಯಂತ್ರಣ ಹಳ್ಳಹಿಡಿಯುತ್ತಿದೆ.

    ಕಾರ್ಯ ನಿರ್ವಹಿಸದ ಪೊಲೀಸ್: ಸಿಗ್ನಲ್ ಬಳಿಯಲ್ಲಿ ನೀಯೊಜಿಸಲಾದ ಟ್ರಾಫಿಕ್ ಪೊಲೀಸ್ ಕಾರ್ಯನಿರ್ವಸುತ್ತಿಲ್ಲ ಎನ್ನುವುದು ಪಾದಚಾರಿಗಳ ದೂರು. ಸಿಗ್ನಲ್ ಸ್ಥಗಿತಕೊಂಡರೆ ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ಪಾವತಿಸಬೇಕು. ವೇಗವಾಗಿ ಸಂಚರಿಸುವ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಪೊಲೀಸ್ ಸಿಬ್ಬಂದಿ ಕಣ್ಮರೆಯಾದೊಡನೆ ವಾಹನ ಸವಾರರು ಸಿಗ್ನಲ್ ಉಲ್ಲಂಘಿಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಚಿಲ್ಲರೆ ವ್ಯಾಪಾರಿ, ಅವೈಜ್ಞಾನಿಕ ಆಟೋ ನಿಲ್ದಾಣಗಳಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಮತ್ತಷ್ಟೂ ಬಿಗಡಾಯಿಸುತ್ತಿದೆ. ಇದರಿಂದ ಪಾದಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಸಂಪೂರ್ಣವರೆಗೆ ಆಟೋ, ಚಿಲ್ಲರೆ ವ್ಯಾಪಾಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಈ ಹಾವಳಿ ತಲೆದೂರಿದೆ.

    ಇಲ್ಲಿನ ರೈಲ್ವೇ ಮಾರ್ಗ, ಅಶೋಕ ವೃತ್ತ, ಅಂಬೇಡ್ಕರ್ ಮಾರ್ಗ ಕೃಷ್ಣದೇವರಾಯ ವೃತ್ತ, ಕೆಎಲ್‍ಇ ಮಾರ್ಗ, ಸದಾಶಿವ ನಗರ, ರಾಣಿ ಚನ್ನಮ್ಮ ವೃತ್ತ, ಕೇಂದ್ರ ಬಸ್ ನಿಲ್ದಾಣದ ರಸ್ತೆ ಹಾಗೂ ನಗರ ವಿವಿದ ಕಡೆಗೆ ಸಿಗ್ನಲ್ ಸಮಸ್ಯೆ ಎದುರಾಗುತ್ತಿದೆ.

    ಪೊಲೀಸ್ ಸಿಬ್ಬಂದಿ ಹೈರಾಣ: ಸಿಗ್ನಲ್ ಸ್ಥಗಿತದಿಂದ ಟ್ರಾಫಿಕ್ ಬಳಿಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ದಂಡ ಹಾಕಲು ಪೊಲೀಸ್ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಕೋಟೆ ಕೆರೆ ಅಶೋಕ ವೃತ್ತ ಬಳಿ ಈ ಸಮಸ್ಯೆ ತಲೆದೂರಿದ್ದು, ನಿಯಮ ಉಲ್ಲಂಘಿಸಿ ವಾಹನ ಸಂಚರಿಸುತ್ತಿದ್ದು ಇದನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ಹೈರಾಣ ಆಗುತ್ತಿದ್ದಾರೆ.

    ಕಾಮಗಾರಿಯಿಂದ ಸಿಗ್ನಲ್ ಸ್ಥಗಿತಗೊಂಡಿವೆ. ಇದರಿಂದ ವಾಹನ ಸವಾರರು ವೇಗವಾಗಿ ಸಂಚರಿಸುತ್ತಿದ್ದಾರೆ. ಈ ವೇಳೆಯಲ್ಲಿ ಪಾದಚಾರಿಗಳು ಸಂಚಾರಕ್ಕೆ ಅಡಕವಾಗುತ್ತಿದೆ. ಸಣ್ಣಪುಟ್ಟ ಅಪಘಾತ ಸಂಭವಿಸುವ ಮೂನ್ಸೂಚನೆ ಇದೆ ಪೊಲೀಸ್ ಸಿಬ್ಬಂದಿ ಆದಷ್ಟೂ ಟ್ರಾಫಿಕ್ ನಿಯಂತ್ರಸುವ ಕಾರ್ಯ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.