Tag: Traffic rules

  • ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕಟ್ಟಬೇಕಾಗುತ್ತೆ ದುಪ್ಪಟ್ಟು ದಂಡ

    ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕಟ್ಟಬೇಕಾಗುತ್ತೆ ದುಪ್ಪಟ್ಟು ದಂಡ

    ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಮೊದಲು ವಾಹನ ಸವಾರರೇ ಎಚ್ಚರವಾಗಿರಿ. ಯಾಕೆಂದರೆ ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಸಿಕ್ಕಾಪಟ್ಟೆ ದಂಡ ಕಟ್ಟಬೇಕಾಗುತ್ತದೆ.

    ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು, ನೋ ಪಾರ್ಕಿಂಗ್‍ನಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು ಮತ್ತು ಅತಿಯಾದ ವೇಗಕ್ಕೆ ವಿಧಿಸುವ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ದಂಡವನ್ನು ಫಿಕ್ಸ್ ಮಾಡಲಾಗಿದೆ.

    ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ಫೈನ್:
    ಮೊಬೈಲ್ ಬಳಕೆ ಮಾಡಿದರೆ ಮೊದಲು ಸಾವಿರ ರೂ. ದಂಡ ಕಟ್ಟಬೇಕು, 2ನೇ ಬಾರಿಗೆ 2 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೆ, ಮೊದಲು 2 ಸಾವಿರ ರೂ. ದಂಡ, 2ನೇ ಬಾರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

    ಅಲ್ಲದೆ ಇನ್ಶೂರೆನ್ಸ್ ಇಲ್ಲದಿದ್ದರೆ, ಸಾವಿರ ರೂಪಾಯಿ ದಂಡ ಕಟ್ಟಬೇಕು. ಇನ್ಶೂರೆನ್ಸ್ ಇಲ್ಲದವರಿಗೆ ಮೊದಲು 500 ರೂ. ದಂಡ ಇತ್ತು. ನೋ ಪಾರ್ಕಿಂಗ್‍ನಲ್ಲಿ ಪಾರ್ಕಿಂಗ್ ಮಾಡಿದವರಿಗೆ ಮೊದಲು ಸಾವಿರ ರೂ. ದಂಡ, 2ನೇ ಬಾರಿಗೆ ಹಾಗೇ ಮಾಡಿದರೆ 2 ಸಾವಿರ ಕಟ್ಟಬೇಕಾಗುತ್ತದೆ.

    1998ರ ಮೋಟಾರ್ ವೆಹಿಕಲ್ ಆ್ಯಕ್ಟ್ ನಿಗದಿಪಡಿಸಿದ ಮಿತಿಯ ಒಳಗೆ ದಂಡ ಫಿಕ್ಸ್ ಮಾಡಲಾಗಿದೆ.

  • ಸಿಎಂ, ಡಿಸಿಎಂ ಸೇರಿದಂತೆ ಜನಪ್ರತಿನಿಧಿಗಳಿಂದ್ಲೇ ರೂಲ್ಸ್ ಬ್ರೇಕ್!

    ಸಿಎಂ, ಡಿಸಿಎಂ ಸೇರಿದಂತೆ ಜನಪ್ರತಿನಿಧಿಗಳಿಂದ್ಲೇ ರೂಲ್ಸ್ ಬ್ರೇಕ್!

    ಬೆಂಗಳೂರು: ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರೆ ಟ್ರಾಫಿಕ್ ನಿಯಮವನ್ನು ಪಾಲಿಸದೇ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ಸಂಚಾರಿ ನಿಯಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರವೇ? ಜನಪ್ರತಿನಿಧಿಗಳನ್ನ ಕೇಳೊರಿಲ್ವಾ? ಜನಪ್ರತಿನಿಧಿಗಳು ಏನ್ ಮಾಡಿದರೂ ಸರಿ, ನಾವ್ ತಪ್ಪಾ? ಇಂತಹ ಅನೇಕ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ.

    ಹೊಸ ವರ್ಷದಲ್ಲಿ ಕುಡಿದ ವಾಹನ ಚಲಾಯಿಸುತ್ತಿದ್ದರು ಅಂತ ಸುಮಾರು 500ಕ್ಕೂ ಹೆಚ್ಚು ಜನರಿಗೆ ದಂಡ ಹಾಕಲಾಗಿದೆ. ಹೀಗೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರೋರಿಗೆ ದಂಡ ಹಾಕುವುದಾದರೆ ಜನಪ್ರತಿನಿಧಿಗಳು ಮಾತ್ರ ರೂಲ್ಸ್ ಬ್ರೇಕ್ ಮಾಡಿದರು ಕೇಳುವುದಿಲ್ಲ.

    ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಸೀಟ್ ಬೆಲ್ಟ್ ಹಾಕದೇ ಸಂಚಾರಿ ನಿಯಮಕ್ಕೆ ಬಿಡುಗಾಸಿನ ಕಿಮ್ಮತ್ತು ಕೊಟ್ಟಿಲ್ಲ. ಇತ್ತ ಸಿಎಂ ಕುಮಾರಸ್ವಾಮಿ ಚಾಲಕರಂತೂ ಸಿಎಂ ಚಾಲಕ ಅಂತ ಧಿಮಾಕು ತೋರಿಸಿ, ಸೀಟ್ ಬೆಲ್ಟ್ ಹಾಕದೇ ನಿಯಮವನ್ನು ಬ್ರೇಕ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಇತ್ತ ಮೇಯರ್ ಗಂಗಾಬಿಕ ಮಲ್ಲಿಕಾರ್ಜುನ್, ಉಪಮೇಯರ್ ಭದ್ರೇಗೌಡ ಅವರು ಕೂಡ ಸಂಚಾರಿ ನಿಯಮ ಪಾಲನೆಗೆ ಕಿಮ್ಮತ್ತು ಕೊಟ್ಟಿಲ್ಲ. ಇವರಷ್ಟೇ ಅಲ್ಲದೇ ಮಾಜಿ ಮೇಯರ್ ಪದ್ಮಾವತಿ, ಕಾರ್ಪೋರೇಟರ್ ಗಳಂತೂ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂಬ ಬೇದ ಭಾವವಿಲ್ಲದೇ ಸೀಟ್ ಬೆಲ್ಟ್ ಹಾಕದೇ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

    ಪೊಲೀಸರು ಸಿಎಂ ಕುಮಾರಸ್ವಾಮಿಗೆ ಝೀರೋ ಟ್ರಾಫಿಕ್ ಕೊಡುತ್ತಾರೆ. ಆಗ ನಿಯಮ ಉಲ್ಲಂಘಿಸಿದ್ದು ನೋಡಿಲ್ವಾ? ಡಿಸಿಎಂಗೂ ಸಿಗ್ನಲ್ ಫ್ರೀ ಕೊಡುತ್ತಾರೆ ಆಗಲೂ ನೋಡಲ್ವಾ? ಇನ್ನು ಮಾಸಿಕ ಸಭೆಗೆ ಬರುವ ಕಾರ್ಪೋರೇಟರ್ ಗಳಿಗೂ ಭದ್ರತೆ ಕೊಡುತ್ತಾರೆ. ಆಗಲೂ ಪೊಲೀಸರು ನೋಡಿದರೂ ನೋಡದಂತೆ ಇರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಗ್ನಲ್ ಜಂಪ್, ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ರೆ 3 ತಿಂಗಳು ಲೈಸೆನ್ಸ್ ರದ್ದು!

    ಸಿಗ್ನಲ್ ಜಂಪ್, ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ರೆ 3 ತಿಂಗಳು ಲೈಸೆನ್ಸ್ ರದ್ದು!

    ಮುಂಬೈ: ವಾಹನ ಚಾಲನೆ ವೇಳೆ ಮೊಬೈಲ್ ಬಳಸುವುದು ಅಥವಾ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

    ರಾಜ್ಯಾದ್ಯಂತ ಅಪಘಾತಗಳು ಹಾಗೂ ಸಂಚಾರಿ ನಿಯಮ ಉಲ್ಲಂಘನಾ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. 6 ಸಂಚಾರಿ ನಿಯಮಗಳ ಪೈಕಿ, ಯಾವುದೇ ಒಂದನ್ನು ಉಲ್ಲಂಘಿಸುವ ವಾಹನ ಸವಾರರ ಚಾಲನಾ ಪರವಾನಗಿಯನ್ನು ಮೂರು ತಿಂಗಳುಗಳವರೆಗೆ ನಿರ್ಬಂಧಿಸುವ ಅಧಿಕಾರವನ್ನು ಸರ್ಕಾರ ಆರ್‌ಟಿಓಗೆ ನೀಡಿದೆ.

    ವೇಗದ ಚಾಲನೆ, ಕುಡಿದು ಚಾಲನೆ, ಸಿಗ್ನಲ್ ಜಂಪ್, ಡ್ರೈವ್ ಮಾಡುವಾಗ ಮೊಬೈಲ್ ಬಳಕೆ, ವಾಣಿಜ್ಯ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಮತ್ತು ಓವರ್ ಲೋಡಿಂಗ್ ಸೇರಿದಂತೆ ಒಟ್ಟು 6 ಕಾರಣಗಳಿಗೆ ಲೈಸನ್ಸ್ ರದ್ದು ಮಾಡಲು ಆರ್‌ಟಿಓ ಅಧಿಕಾರ ನೀಡಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಹೆದ್ದಾರಿ ವರಿಷ್ಠಾಧಿಕಾರಿ ವಿಜಯ್ ಪಾಟೀಲ್, ಇಂದಿನ ದಿನಗಳಲ್ಲಿ ಹೆಚ್ಚಿನ ಮೊತ್ತದ ದಂಡ ವಿಧಿಸಿದರೂ, ಸಂಚಾರ ನಿಯಮ ಉಲ್ಲಂಘನೆ ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಾಲಕರ ವಾಹನಾ ಚಾಲನಾ ಪರವಾನಗಿಯನ್ನೇ ನಿಷೇಧಿಸಿದರೆ ಎಚ್ಚರಗೊಂಡು ತಕ್ಕ ಪಾಠ ಕಲಿಯುತ್ತಾರೆಂದು ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

    ಕಳೆದ ವರ್ಷ ಮಹಾರಾಷ್ಟ್ರದಲ್ಲಿ 35,800 ಕ್ಕೂ ಹೆಚ್ಚು ರಸ್ತೆ ಅಪಘಾತಗಳು ವರದಿಯಾಗಿವೆ. ಪರಿಣಾಮವಾಗಿ 12 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ರಸ್ತೆ ಅಪಘಾತ ಮತ್ತು ಸಾವುಗಳನ್ನು 10% ರಷ್ಟು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಂದಿಬೆಟ್ಟಕ್ಕೆ ಸಿಂಗಲ್ಸ್ ಗೆ ನೋ ಎಂಟ್ರಿ ಹಿನ್ನೆಲೆ- ಈಗ ಬೈಕಿನಲ್ಲಿ ತ್ರಿಬಲ್ ರೈಡಿಂಗ್

    ನಂದಿಬೆಟ್ಟಕ್ಕೆ ಸಿಂಗಲ್ಸ್ ಗೆ ನೋ ಎಂಟ್ರಿ ಹಿನ್ನೆಲೆ- ಈಗ ಬೈಕಿನಲ್ಲಿ ತ್ರಿಬಲ್ ರೈಡಿಂಗ್

    ಚಿಕ್ಕಬಳ್ಳಾಪುರ: ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಬರುವ ಪ್ರವಾಸಿಗರಿಗೆ ವಿಶ್ವವಿಖ್ಯಾತ ನಂದಿಗಿರಿಧಾಮದ ಪ್ರವೇಶಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಹಾಗಂತ ಒಬ್ಬರೆ ಬರುವ ಆಗಿಲ್ಲ ಎಂದು ಬೈಕಿನಲ್ಲಿ ಬರುತ್ತಿರುವ ಕೆಲವರು ತಮ್ಮ ಜೊತೆಗೆ ಮತ್ತೊಬ್ಬರು ಅವರ ಜೊತೆಗೆ ಇನ್ನೊಬ್ಬರು ಅಂತ ಮೂವರು ಬರುತ್ತಿದ್ದಾರೆ.

    ವಿಶ್ವವಿಖ್ಯಾತ ನಂದಿಗಿರಿಧಾಮ ತನ್ನ ಅನನ್ಯ ಪ್ರಾಕೃತಿಕ ಸೊಬಗಿನಿಂದಲೇ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯೋ ಹಚ್ಚು ಹಸುರಿನ ಪ್ರೇಮಧಾಮ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದ ಈ ನಯನ ಮನೋಹರ ನಂದಿಬೆಟ್ಟ ಬೆಂಗಳೂರಿಗರಿಗಂತೂ ವಿಕೇಂಡ್ ನ ಪಿಕ್ ನಿಕ್ ಸ್ಪಾಟ್ ಆಗಿದೆ. ಅದರಲ್ಲೂ ಪ್ರೇಮಿಗಳಿಗೆ ಹಾಟ್ ಫೇವರಿಟ್ ತಾಣವಾಗಿದೆ.

    ಇಂತಹ ವಿಶ್ವ ಪ್ರಸಿದ್ದಿ ಪಡೆದ ನಂದಿಗಿರಿಧಾಮ ವಿಕೇಂಡ್ ಬಂದರೆ ಸಾಕು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಆದರೆ ನಂದಿಬೆಟ್ಟಕ್ಕೆ ಬೈಕಿನಲ್ಲಿ ಬರುತ್ತಿರುವ ಬಹುತೇಕರು ತ್ರಿಬಲ್ ರೈಡಿಂಗ್ ಮಾಡುತ್ತಿರುವುದು ಜಾಸ್ತಿಯಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಬೈಕ್ ಸವಾರರು ರ‍್ಯಾಶ್ ಡ್ರೈವಿಂಗ್ ಮಾಡುತ್ತಾ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಅದರಲ್ಲೂ ಅಪ್ರಾಪ್ತ ಬಾಲಕರು ಸಹ ಬೈಕ್‍ನ್ನು ಅಡ್ಡಾ-ದಿಡ್ಡಿ ಚಾಲನೆ ಮಾಡುತ್ತಾ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ.

    ಒಂದು ಬೈಕಿನಲ್ಲಿ ಇಬ್ಬರು ಸಾಲದು ಅಂತ ಮೂವರು ಬರುತ್ತಿದ್ದು, ಜೊತೆಗೆ ಅಂಕು ಡೊಂಕಿನ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಾಯಿಸುತ್ತಾ ಆಪತ್ತನ್ನು ತಮ್ಮ ಮೈಮೇಲೆ ತಾವೇ ಎಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಕಡ್ಡಾಯ ಅಂತ ಕಾನೂನು ಇದ್ದರೂ ಹೆಲ್ಮೆಟ್ ಹಾಕದೆ ಬಹುತೇಕ ಮಂದಿ ಬೈಕ್ ರೈಡ್ ಮಾಡುತ್ತಿದ್ದಾರೆ. ದುರಂತ ಅಂದರೆ ಕೆಲವರು ಹೆಲ್ಮೆಟ್ ತಂದರೂ ಶೋಕಿಗೆ ಹೆಲ್ಮೆಟ್ ನನ್ನು ಬೈಕ್ ಮುಂಭಾಗ ಅಥವಾ ಕೈಯಲ್ಲಿ ಹಾಕಿಕೊಂಡು ಬೈಕ್ ಚಾಲನೆ ಮಾಡುತ್ತಿದ್ದಾರೆ.

    ಪ್ರೇಮಿಗಳ ಪಾಲಿನ ಫೇವರಿಟ್ ತಾಣ ನಂದಿಗಿರಿಧಾಮಕ್ಕೆ ಕದ್ದು ಮುಚ್ಚಿ ಬರುವ ಕೆಲ ಜೋಡಿಗಳು, ಬೈಕ್ ನಲ್ಲಿ ಬರುವಾಗ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬರುತ್ತಾರೋ ಬಿಡ್ತಾರೋ. ಅಪ್ಪಿ ತಪ್ಪಿ ಎಲ್ಲಾದರೂ ಕ್ಯಾಮೆರಾ ಕಂಡರೆ ಸಾಕು ಮನೆಯಲ್ಲಿ, ಪರಿಚಯಸ್ಥರಿಗೆ ಗೊತ್ತಾಗಿ ಮಾನ ಹೋಗುತ್ತೆ ಅಂತ ಬಟ್ಟೆಯಿಂದ ಮುಖ ಮುಚ್ಕೋತಾರೆ. ಆದರೆ ಅಪಘಾತವಾಗಿ ಪ್ರಾಣ ಹೋಗುತ್ತೆ ಹೆಲ್ಮೆಟ್ ಹಾಕಿಕೊಳ್ಳೋಣ ಎನ್ನುವ ಕನಿಷ್ಠ ಅರಿವು ಇಲ್ಲದೆ ಪ್ರಾಣಕ್ಕಿಂತ ಮಾನ ಮುಖ್ಯ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ `ಯಮ’ನಿಂದ ಎಚ್ಚರಿಕೆ

    ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ `ಯಮ’ನಿಂದ ಎಚ್ಚರಿಕೆ

    ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ವಿನೂತನ ಪ್ರಯತ್ನವೊಂದನ್ನು ಮಾಡಿದ್ದಾರೆ.

    ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡೊರಿಗೆ ಯಮನಿಂದ ವಾರ್ನಿಂಗ್ ಎಂಬ ವಿಶೇಷ ಅಭಿಯಾನವನ್ನು ಬೆಂಗಳೂರು ಹಲಸೂರು ಗೇಟ್ ಸಂಚಾರಿ ಪೊಲೀಸರು ಕೈಗೊಂಡಿದ್ದಾರೆ.

    ಪ್ರಾಣ ಉಳೀಬೇಕು ಅಂದ್ರೆ ಹೆಲ್ಮೆಟ್ ಹಾಕ್ಬೇಕು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಯಮನೇ ಬೆನ್ನ ಹಿಂದೆ ಕೂತಿರ್ತಾನೆ. ಆ ಮರಣ ದೇವ ರೋಡ್‍ನಲ್ಲಿ ಹೋಗೋರನ್ನು ತಡೆದು ಅವರ ಬೈಕ್, ಸ್ಕೂಟರ್ ಹತ್ತುತ್ತಾನೆ ಅಂತ ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ.

  • ಫುಟ್‍ಪಾತ್ ಮೇಲೆ ಬೈಕ್ ಓಡಿಸುತ್ತಿದ್ದ ಸವಾರರ ಚಳಿ ಬಿಡಿಸಿದ ಬ್ರೇವ್ ಲೇಡಿ

    ಫುಟ್‍ಪಾತ್ ಮೇಲೆ ಬೈಕ್ ಓಡಿಸುತ್ತಿದ್ದ ಸವಾರರ ಚಳಿ ಬಿಡಿಸಿದ ಬ್ರೇವ್ ಲೇಡಿ

    ಬೆಂಗಳೂರು: ನಗರದಲ್ಲಿ ಫುಟ್‍ಪಾತ್ ಮೇಲೆಯೇ ಬೈಕ್ ಓಡಿಸುತ್ತಿದ್ದ ಸವಾರರಿಬ್ಬರ ಚಳಿ ಬಿಡಿಸಿರುವ ಮಹಿಳೆಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣ ವಾಟ್ಸಪ್, ಫೇಸ್‍ಬುಕ್ ನಲ್ಲಿ ವೈರಲ್ ಆಗಿದೆ.

    ಮಂಜು ಥಾಮಸ್ ಎಂಬವರೇ ಸವಾರರಿಗೆ ಚಳಿ ಬಿಡಿಸಿದ ಮಹಿಳೆ. ಶನಿವಾರ ರಾತ್ರಿ ಬೆಂಗಳೂರಿನ ಕಾರ್ಪೋರೇಷನ್ ಬಳಿ ಈ ಘಟನೆ ನಡೆದಿದೆ. ಕೆಎ 51 ಇಎಫ್ 7695 ನಂಬರಿನ ಹೋಂಡಾ ಆಕ್ಟಿವಾದಲ್ಲಿ ಇಬ್ಬರು ಯುವಕರು ಫುಟ್‍ಪಾತ್ ಮೇಲೆಯೇ ತಮ್ಮ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಯುವಕರನ್ನು ತಡೆದ ಮಂಜು ನಿಮಗೆ ಫುಟ್‍ಪಾತ್ ಯಾವುದು? ರಸ್ತೆ ಯಾವುದು? ಅಂತ ಗೊತ್ತಿಲ್ವಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ವೇಳೆ ಬೈಕ್ ಸವಾರರು ನಾವು ನಿಮ್ಮ ಲೆಕ್ಚರ್ ಕೇಳೋಕೆ ಇಲ್ಲಿ ಬಂದಿಲ್ಲ. ಎಲ್ಲರೂ ಫುಟ್‍ಪಾತ್ ಮೇಲೆಯೇ ಹೋಗ್ತಾ ಇದ್ದಾರೆ ಅಂತಾ ಎದುರುತ್ತರ ನೀಡಿದ್ದಾರೆ. ಒಬ್ಬ ವಿದ್ಯಾವಂತ ನಾಗರಿಕರಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದು ತಪ್ಪಾಗುತ್ತದೆ ಅಂತಾ ತಿಳಿಸಿದ ಕೂಡಲೇ ಬೈಕ್ ಸವಾರರು ಫುಟ್‍ಪಾತ್ ಬಿಟ್ಟು ರಸ್ತೆ ಮೇಲೆ ಹೋಗಿದ್ದಾರೆ.

    ಬೈಕ್ ಸವಾರರು ಫುಟ್‍ಪಾತ್ ನಿಂದ ತೆರಳುತ್ತಿದ್ದಂತೆ ಮಂಜು ಅವರು, ಕದಡಿದ ಟೈಲ್ಸ್ ಗಳನ್ನು ಸರಿಯಾಗಿ ಜೋಡಣೆ ಮಾಡಿ ತೆರಳಿದ್ದಾರೆ. ಮಂಜು ಅವರು ಸವಾರರನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋವನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಹೀಗಾಗಿ ಇದೀಗ ಆ ವಿಡಿಯೋ ವೈರಲ್ ಆಗಿದೆ.

    https://youtu.be/X8xPVw2A5wc

  • ವೈರಲ್ ಫೋಟೋ: ಬೈಕ್ ಮೇಲೆ ಐವರನ್ನು ನೋಡಿ ಕೈ ಮುಗಿದ ಪೊಲೀಸ್

    ವೈರಲ್ ಫೋಟೋ: ಬೈಕ್ ಮೇಲೆ ಐವರನ್ನು ನೋಡಿ ಕೈ ಮುಗಿದ ಪೊಲೀಸ್

    ಹೈದರಾಬಾದ್: ಪೊಲೀಸ್ ಅಧಿಕಾರಿಯೊಬ್ಬರು ಬೈಕ್ ಮೇಲೆ ಐವರನ್ನು ನೋಡಿ ಕೈ ಮುಗಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳವಾರ ಟ್ವಿಟರ್ ನಲ್ಲಿ ಈ ಫೋಟೋ ಅಪ್ಲೋಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಅಭಿಷೇಕ್ ಗೋಯಲ್ ಸೋಮವಾರ ಸಂಜೆ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದು, ಇದೂವರೆಗೂ 2,700ಕ್ಕೂ ಹೆಚ್ಚು ಬಾರಿ ಬಾರಿ ರೀ ಟ್ವೀಟ್ ಆಗಿದೆ.

    ಬೈಕ್ ಸವಾರ ತನ್ನ ಜೊತೆಯಲ್ಲಿ ತನ್ನಿಬ್ಬರು ಮಕ್ಕಳನ್ನು ಟ್ಯಾಂಕ್ ಮೇಲೆ ಕೂರಿಸಿದ್ದಾನೆ. ಹಿಂದುಗಡೆ ಪತ್ನಿ ಸೇರಿದಂತೆ ಸಂಬಂಧಿ ಮಹಿಳೆಯೊಬ್ಬರನ್ನು ಕೂರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದಾನೆ. ಬೈಕ್ ನಲ್ಲಿದ ಐವರು ಹೆಲ್ಮೆಟ್ ಧರಿಸಿಲ್ಲ, ಇವರನ್ನು ನೋಡಿದ ಪೊಲೀಸ್ ಆಶ್ಚರ್ಯಗೊಂಡು ಕೈ ಮುಗಿದಿದ್ದಾರೆ.

    ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಮಡಕಸಿರಾ ಸರ್ಕಲ್ ಠಾಣೆಯ ಬಿ.ಶುಭಕುಮಾರ್ ಕೈ ಮುಗಿದಿರುವ ಪೊಲೀಸ್ ಅಧಿಕಾರಿ. ಕೆ.ಹನುಮಂತರಾಯ್ಡು ಎಂಬವರು ತಮ್ಮ ಬೈಕ್ ನಲ್ಲಿ ಐವರನ್ನು ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದರು. ಪೊಲೀಸರು ಐವರನ್ನು ಠಾಣೆಗೆ ಕರೆದುಕೊಂಡು ಹೋಗಿ ಸುಮಾರು ಒಂದೂವರೆ ಗಂಟೆ ಟ್ರಾಫಿಕ್ ನಿಯಮದ ಬಗ್ಗೆ ತಿಳಿಸಿ, ಎಚ್ಚರಿಕೆಯನ್ನು ನೀಡಿ ಕಳುಹಿಸಿದ್ದಾರೆ.

    ಐವರನ್ನು ಬೈಕ್ ಮೇಲೆ ನೋಡಿದಾಗ ಒಂದು ಕ್ಷಣ ಚಕಿತನಾದೆ, ಒಂದಿಷ್ಟು ಅಪಾಯದ ಭಯವಿಲ್ಲದ ಸವಾರ ಬೈಕ್ ಚಾಲನೆ ಮಾಡುತ್ತಿದ್ದನು. ಅವರನ್ನು ನೋಡಿ ಅಸಹಾಯಕತೆ ಮತ್ತು ಹತಾಶೆಯಿಂದಾಗಿ ನನ್ನ ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿದೆ. ಸುರಕ್ಷೆಯ ಬಗ್ಗೆ ಸವಾರನಿಗೆ ಕೇಳಿದರೆ ಅವನು ಕೇವಲ ಮುಗಳು ನಕ್ಕು ಏನು ಮಾತನಾಡಲಿಲ್ಲ. ಮಕ್ಕಳು ಟ್ಯಾಂಕ್ ಮೇಲೆ ಕೂರಿಸಿದ್ದರಿಂದ ಅವರು ಕಾಲುಗಳು ಚಕ್ರದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ತಿಳಿ ಹೇಳಿದೆ ಎಂದು ಪೊಲೀಸ್ ಅಧಿಕಾರಿ ಶುಭಕುಮಾರ್ ತಿಳಿಸಿದ್ದಾರೆ.

  • ಟ್ರಾಫಿಕ್ ರೂಲ್ಸ್ ಪಾಲಿಸುವಂತೆ ಮಾಡಲು ಬಾಗಲಕೋಟೆ ಪೊಲೀಸರ ವಿನೂತನ ಪ್ರಯೋಗ

    ಟ್ರಾಫಿಕ್ ರೂಲ್ಸ್ ಪಾಲಿಸುವಂತೆ ಮಾಡಲು ಬಾಗಲಕೋಟೆ ಪೊಲೀಸರ ವಿನೂತನ ಪ್ರಯೋಗ

    ಬಾಗಲಕೋಟೆ: ನಗರದಲ್ಲಿ ಟ್ರಾಫಿಕ್ ನಿಯಮಗಳನ್ನ ಪಾಲನೆ ಮಾಡದ ವಾಹನ ಸವಾರರಿಗೆ ಬಾಗಲಕೋಟೆ ಗ್ರಾಮೀಣ ಠಾಣೆಯ ಪೊಲೀಸರು ಸಿಹಿ ಹಂಚುವ ಮೂಲಕ ಇನ್ನು ಮುಂದೆ ಕಡ್ಡಾಯವಾಗಿ ಟ್ರಾಫಿಕ್ ನಿಯಮಗಳನ್ನ ಪಾಲಿಸುವಂತೆ ತಿಳುವಳಿಕೆ ಹೇಳಿದ್ದಾರೆ.

    ಏಪ್ರಿಲ್ 3 ರವರೆಗೆ ಟ್ರಾಫಿಕ್ ನಿಯಮಗಳನ್ನ ಪಾಲಿಸದ ವಾಹನ ಸವಾರರ ಹೆಸರು ಮತ್ತು ವಾಹನದ ನಂಬರ್ ಗಳನ್ನ ಪೊಲೀಸರು ನಮೂದಿಸಿಕೊಂಡು ಫೈನ್ ಹಾಕದೇ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. ಏಪ್ರಿಲ್ 3 ರ ನಂತರ ಎರಡನೇ ಬಾರಿಗೂ ನಿಯಮಗಳನ್ನ ಪಾಲಿಸದವರಿಗೆ ದಂಡ ಮತ್ತು ವಾಹನ ಪರವಾನಿಗೆಯನ್ನ ರದ್ದುಗೊಳಿಸಲಾಗುವುದು ಎಂದು ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ.

    ಟ್ರಾಫಿಕ್ ಪೊಲೀಸರು ನಗರದ ವಿದ್ಯಾಗಿರಿ, ನವನಗರ, ಎಪಿಎಂಸಿ ಮುಂತಾದ 8 ಮುಖ್ಯ ಮಾರ್ಗಗಳಲ್ಲಿ ಪ್ರತಿಯೊಬ್ಬ ವಾಹನ ಸವಾರರನ್ನು ನಿಲ್ಲಿಸಿ ಮುನ್ಸೂಚೆನೆಯನ್ನು ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಈ ವಿನೂತನ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.