Tag: Traffic rules

  • ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ – ಪೊಲೀಸರು ಕೊಟ್ರು 20-20ಯ ತ್ರಿಪಲ್ ಶಾಕ್!

    ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ – ಪೊಲೀಸರು ಕೊಟ್ರು 20-20ಯ ತ್ರಿಪಲ್ ಶಾಕ್!

    – ಮಳೆಯ ನಡುವೆ ವ್ಯಕ್ತಿಯ ಹುಚ್ಚಾಟ
    – ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

    ಲಕ್ನೋ: ಮಳೆಯ ನಡುವೆ ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ ಮಾಡಿದ್ದ ವ್ಯಕ್ತಿಗೆ ಗಾಜಿಯಾಬಾದ್ ಪೊಲೀಸರು 20-20 ಶಾಕ್ ನೀಡಿದ್ದಾರೆ. ಉತ್ತರ ಪ್ರದೇಶದ ವಿಜಯ ನಗರದ ಪ್ರತಾಪ್ ವಿಹಾರದಲ್ಲಿ ಈ ಘಟನೆ ನಡೆದಿದೆ.

    ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿತ್ತು. ವ್ಯಕ್ತಿಯೋರ್ವ ಮದ್ಯಪಾನ ಮಾಡುತ್ತಾ ಕಾರ್ ಹಿಂಭಾಗದ ಕಿಟಕಿಯ ಮೇಲೆ ಕುಳಿತು ಸ್ಟಂಟ್ ಮಾಡುತ್ತಿದ್ದನು. ಇದರ ಜೊತೆ ಈತನ ಹಿಂದೆ ಮತ್ತು ಮುಂದೆ ಇರೋ ಕಾರ್ ಗಳಲ್ಲಿ ಸೈರನ್ ಹಾಕಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಲಾಗಿತ್ತು. ವೀಡಿಯೋ ನೋಡಿದ ಪೊಲೀಸರು ಕಾರ್ ನಂಬರ್ ಪ್ಲೇಟ್ ಸಹಾಯದಿಂದ ಮೂವರು ಕಾರ್ ಮಾಲೀಕರನ್ನು ಪತ್ತೆ ಮಾಡಿ ತಲಾ 20 ಸಾವಿರ ರೂ.ನಂತೆ ದಂಡ ಹಾಕಿದ್ದಾರೆ.

    ಭಾನುವಾರ ವೈರಲ್ ಆದ ವೀಡಿಯೋದಲ್ಲಿ ಕಾರ್ ನಂಬರ್ ಕಾಣಿಸುತ್ತಿತ್ತು. ಅವುಗಳ ಸಹಾಯದಿಂದ ಕಾರ್ ಮಾಲೀಕರನ್ನ ಪತ್ತೆ ಮಾಡಿ ಠಾಣೆಗೆ ಕರೆಸಲಾಯ್ತು. ಸೂರಜ್‍ಪಾಲ್, ರಾಹುಲ್ ನಾಗರ್ ಮತ್ತು ಶೇಖರ್ ಕುಮಾರ್ ಕಾರ್ ಮಾಲೀಕರಿಗೆ ಪ್ರತ್ಯೇಕವಾಗಿ 20 ಸಾವಿರ ರೂ.ನಂತೆ ದಂಡ ಹಾಕಿದ್ದೇವೆ ಎಂದು ಪೊಲೀಸ್ ಅಧೀಕ್ಷಕ ರಾಮಾನಂದ್ ಕುಶುವಾಹಾ ಹೇಳಿದ್ದಾರೆ. ಇದನ್ನೂ ಓದಿ: ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ

    ಟ್ರಾಫಿಕ್ ನಿಯಮ ಉಲ್ಲಂಘನೆ, ಸಾರ್ವಜನಿಕರಿಗೆ ಕಿರಿಕಿರಿ, ಮದ್ಯಪಾನ, ಶಬ್ದ ಮಾಲಿನ್ಯ, ವಿಮೆ ಇಲ್ಲದೇ ವಾಹನ ಚಾಲನೆ ಸೇರಿದಂತೆ ಒಟ್ಟು 20 ಸಾವಿರದಂತೆ ದಂಡ ಹಾಕಿದ್ದಾರೆ. ಮುಂದೆ ಯಾರಾದ್ರೂ ಈ ರೀತಿ ಹುಚ್ಚಾಟ ಪ್ರದರ್ಶಿಸಿದ್ರೆ ದಂಡ ಹಾಕಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,186 ಹೊಸ ಕೊರೊನಾ ಪ್ರಕರಣ – ಪಾಸಿಟಿವಿಟಿ ರೇಟ್ ಶೇ.0.89

  • ನೈಟ್ ಕರ್ಫ್ಯೂ- ರಾತ್ರಿ 9ಕ್ಕೆ ಎಲ್ಲ ಅಂಗಡಿ, ಮುಂಗಟ್ಟುಗಳು ಬಂದ್

    ನೈಟ್ ಕರ್ಫ್ಯೂ- ರಾತ್ರಿ 9ಕ್ಕೆ ಎಲ್ಲ ಅಂಗಡಿ, ಮುಂಗಟ್ಟುಗಳು ಬಂದ್

    ಬೆಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಎಚ್ಚೆತ್ತಕೊಂಂಡಿದ್ದು, ನೈಟ್ ನೈಟ್ ಕರ್ಫ್ಯೂ ಹಾಕಲಾಗುತ್ತಿದೆ. ರಾತ್ರಿ 10 ಗಂಟೆ ಬಳಿಕ ಸಂಚರಿಸುವ ವಾಹನಗಳನ್ನು ಸೀಜ್ ಮಾಡುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಪಂಥ್ ಹಾಗೂ ಜಂಟಿ ಆಯುಕ್ತ ರವಿಕಾಂತೇಗೌಡ, ರಾತ್ರಿ 9 ರಿಂದಲೇ ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಂಗಡಿ, ಮುಂಗಟ್ಟುಗಳನ್ನು ಸಮಯಕ್ಕೆ ಸರಿಯಾಗಿ ಬಂದ್ ಮಾಡಿದರೆ ಅವರ ಸಿಬ್ಬಂದಿ ಮನೆಗೆ ತೆರಳಲು ಅನುಕೂಲವಾಗುತ್ತದೆ. ಇಂದು ಸಂಜೆಯಿಂದಲೇ ಬಂದೋಬಸ್ತ್ ಕೈಗೊಳ್ಳಲಾಗುವುದು, ರಾತ್ರಿ 9 ರಿಂದ ನಮ್ಮ ಸಿಬ್ಬಂದಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಲಿದ್ದಾರೆ. ಜನರನ್ನೂ ಸಹ ವಾಪಸ್ ಕಳುಹಿಸಲಿದ್ದಾರೆ. ಆದೇಶದಲ್ಲಿ ರಿಯಾಯಿತಿ ನೀಡಿದವರನ್ನು ಹೊರತುಪಡಿಸಿ ರಾತ್ರಿ 9ರ ಬಳಿಕ ಸಂಚರಿಸಲು ಯಾರಿಗೂ ಅವಕಾಶವಿಲ್ಲ. ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡಿ ದುರ್ವರ್ತನೆ ತೋರಬಾರದು ಎಂದು ಮನವಿ ಮಾಡಿದ್ದಾರೆ.

    ನಾವು ಯಾರಿಗೂ ಪಾಸ್ ನೀಡುತ್ತಿಲ್ಲ. ಯಾರೂ ಪಾಸ್ ಕೇಳಲು ಆಗಮಿಸಬಾರದು. ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪ್ರಮುಖ ಮೇಲ್ಸೇತುವೆ, ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದೇಶದಲ್ಲಿ ತಿಳಿಸಿದಂತೆ ತುರ್ತು ಕಾರಣವಿದ್ದರೆ ಮಾತ್ರ ಹೊರಗಡೆ ಬರಬೇಕು. ರಾತ್ರಿ 10 ಗಂಟೆ ಬಳಿಕ ರಾತ್ರಿ ಯಾರೂ ಹೊರಗೆ ಬರಬಾರದು, ಅಷ್ಟರಲ್ಲಿ ಎಲ್ಲರೂ ಮನೆಯೊಳಗಿರಬೇಕು. ಅಂಗಡಿ, ಮುಂಗಟ್ಟು ಸೇರಿದಂತೆ ಇತರೆ ಸ್ಥಳಗಳನ್ನು ಬಂದ್ ಮಾಡಬೇಕು. ರಾತ್ರಿ 10ರೊಳಗೆ ಎಲ್ಲರೂ ಮನೆಯಲ್ಲಿರಬೇಕು, ಯಾರೂ ಹೊರಗಡೆ ಬರಬಾರದು ಎಂದು ಕಮಲ್ ಪಂಥ್ ಮನವಿ ಮಾಡಿದರು.

    ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸಲು ಅನುಮತಿ ಇದೆ. ಆದರೆ ಈ ಅವಕಾಶವನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕಮಲ್ ಪಂಥ್ ಮನವಿ ಮಾಡಿದರು.

    ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಮಾತನಾಡಿ, ರಾತ್ರಿ 9.50ಕ್ಕೆ ಎಲ್ಲ ಮೇಲ್ಸೇತುವೆ, ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಅಗತ್ಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಅಂಗಡಿಗಳನ್ನು ಬಂದ್ ಮಾಡುವವರು ಈ ಬಗ್ಗೆ ಯೋಚಿಸಬೇಕು, 10 ಗಂಟೆಗೆ ಅಂಗಡಿ ಬಂದ್ ಮಾಡುವುದಲ್ಲ, ಸಿಬ್ಬಂದಿ ಮನೆ ತೊಲುಪಲು ಎಷ್ಟು ಸಮಯ ಬೇಕು ಎಂಬುದನ್ನು ಅಂದಾಜಿಸಿ 10 ಗಂಟೆ ಒಳಗೆ ಅವರು ಮನೆ ತಲುಪುವಂತೆ ಕಳುಹಿಸಬೇಕು ಎಂದರು.

    ಲಾಕ್‍ಡೌನ್ ಸಮಯದಲ್ಲಿ ಇದ್ದ ರೀತಿಯಲ್ಲೇ ಒಂದು ಬದಿಯ ರಸ್ತೆಯಲ್ಲಿ ಒಡಾಡೋದಕ್ಕೆ ಅವಕಾಶ ನೀಡಲಾಗುವುದು. ಅಗತ್ಯ ಸೇವೆ ವಾಹನಗಳನ್ನು ಬಿಡುತ್ತೇವೆ. ಅನವಶ್ಯಕವಾಗಿ ಸಂಚರಿಸುಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವೀಡಿಯೋ ವಾಲ್ ದಿನದ 24 ಗಂಟೆಯೂ ಕೆಲಸ ಮಾಡಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಬೈಕ್ ಗಳಿಗೆ ಮೀರರ್ ಹಾಗೂ ಇಂಡಿಕೇಟರ್ ಗಳು ಕಡ್ಡಾಯವಾಗಿದ್ದುಯ, ಹಾಕದೇ ಇರುವವಗೆ 500 ರೂಪಾಯಿ ದಂಡ ವಿಧಿಸಲಾಗುವುಯದು ಎಂದು ರವಿಕಾಂತೇಗೌಡ ತಿಳಿಸಿದರು. 1,500 ಪೊಲೀಸರು ಹಾಗೂ ಹೋಮ್ ಗಾರ್ಡ್ ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

  • ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನಿಸಿದ ಪೊಲೀಸರು

    ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನಿಸಿದ ಪೊಲೀಸರು

    ಯಾದಗಿರಿ: ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಯಾದಗಿರಿ ಪೊಲೀಸರು ವಿಭಿನ್ನ ಪ್ರಯತ್ನ ಮಾಡಿದ್ದು, ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಈ ಮೂಲಕ ವಿಭಿನ್ನವಾಗಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.

    ಇಷ್ಟು ದಿನ ಆಟೋಚಾಲಕರನ್ನು ಠಾಣೆಗೆ ಕರೆದು ಎಚ್ಚರಿಗೆ ನೀಡುತ್ತಿದ್ದ ಪೊಲೀಸರು, ಇಂದು ಠಾಣೆಗೆ ಕರೆದು ಸನ್ಮಾನಿಸಿ ರಸ್ತೆ ಮತ್ತು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವಂತೆ ಮನವಿ ಮಾಡಿದ್ದಾರೆ. ಯಾದಗಿರಿ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ ಮತ್ತು ಟ್ರಾಫಿಕ್ ಪಿಎಸ್‍ಐ ಪ್ರದೀಪ್ ಬಿಸೆ, ಚಂದ್ರನಾಥ್ ನಗರದಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಹೊಸ ಸಂಪ್ರದಾಯಕ್ಕೆ ಮುಂದಾಗಿದ್ದಾರೆ.

    ಆಟೋ ಚಾಲಕರು, ವಾಹನ ಸವಾರರನ್ನು ಠಾಣೆಗೆ ಕರೆದು, ಸನ್ಮಾನ ಮಾಡಿ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಆಟೋ ಚಾಲಕರು ಸೇರಿದಂತೆ, ನಗರದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಸಂಚಾರಿ ಠಾಣಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಆಟೋಚಾಲಕರು ಮತ್ತು ಸಂಚಾರಿ ಠಾಣೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

  • 77 ಬಾರಿ ನಿಯಮ ಉಲ್ಲಂಘಟನೆ- ಬೈಕ್ ಮಾಲೀಕನಿಗೆ ಬಿತ್ತು ಭಾರೀ ದಂಡ

    77 ಬಾರಿ ನಿಯಮ ಉಲ್ಲಂಘಟನೆ- ಬೈಕ್ ಮಾಲೀಕನಿಗೆ ಬಿತ್ತು ಭಾರೀ ದಂಡ

    ಬೆಂಗಳೂರು: 77 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಅಡಿ ಬೈಕ್ ಮಾಲೀಕನಿಗೆ 42,500 ರೂ. ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮಡಿವಾಳ ಸಂಚಾರಿ ಪೋಲೀಸರ ಕಾರ್ಯಾಚರಣೆ ವೇಳೆ ಬೈಕ್ ಸವಾರ ಅರುಣ್ ಕುಮಾರ್ ಇಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಮತ್ತು ಪಿಎಸ್‍ಐ ಶಿವರಾಜ್ ಕುಮಾರ್ ಅವರು ಕಾರ್ಯಾಚರಣೆ ನಡೆಸಿದ್ದರು. ಸದ್ಯ ಬೈಕ್ ಸವಾರ ಅರುಣ್ ಕುಮಾರ್ ಗೆ 42,500 ರೂ. ದಂಡ ವಿಧಿಸಿದ್ದಾರೆ. ಮಡಿವಾಳ ಪೊಲೀಸರು ಬೈಕ್ ಸವಾರನಿಗೆ ನೋಟಿಸ್ ನೀಡಿ ಬೈಕ್ ವಶಕ್ಕೆ ಪಡೆದಿದ್ದಾರೆ.

    ಕೊರೊನಾ ಲಾಕ್‍ಡೌನ್ ಬಳಿಕ ಟ್ರಾಫಿಕ್ ನಿಯಮಗಳನ್ನು ಮರೆತು ಸಂಚಾರ ಮಾಡುತ್ತಿದ್ದ ಸವಾರರಿಗೆ ಸದ್ಯ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಅಲ್ಲದೇ ಕಟ್ಟು ನಿಟ್ಟಿನ ಕ್ರಮಕೈಗೊಂಡು ನಿಯಮಗಳನ್ನು ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ.

    ಕಳೆದ ಎರಡು ತಿಂಗಳ ಹಿಂದೆ ಆಡುಗೊಡಿಯಲ್ಲಿ ಬುಲೆಟ್ ಬೈಕ್ ಮಾಲೀಕನೊಬ್ಬ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡವನ್ನು ಪಾವತಿ ಮಾಡಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡುತ್ತಿದ್ದ ರಾಜೇಶ್ ಬುಲೆಟ್ ಬೈಕ್ ಮೇಲೆ ಬರೋಬ್ಬರಿ 103 ಕೇಸ್ ಇರುವುದನ್ನು ಕಂಡು ಪೊಲೀಸರು, ಸಂಚಾರಿ ನಿಮಯ ಉಲ್ಲಂಘನೆ ಕೇಸ್‍ಗಳು ಸೆಂಚುರಿ ದಾಟಿದ ಪರಿಣಾಮ 58 ಸಾವಿರದ 200 ರೂಪಾಯಿಯನ್ನು ದಂಡ ಹಾಕಿದ್ದರು.

  • ಹೆಲ್ಮೆಟ್ ಮರೆತ್ರೆ ದಂಡ, ಡಿಎಲ್ ಅಮಾನತು – ಸಾರಿಗೆ ಇಲಾಖೆಯಿಂದ ಮಹತ್ವದ ಆದೇಶ

    ಹೆಲ್ಮೆಟ್ ಮರೆತ್ರೆ ದಂಡ, ಡಿಎಲ್ ಅಮಾನತು – ಸಾರಿಗೆ ಇಲಾಖೆಯಿಂದ ಮಹತ್ವದ ಆದೇಶ

    ಬೆಂಗಳೂರು: ಹೆಲ್ಮೆಟ್ ಹಾಕದ ದ್ವಿಚಕ್ರ ವಾಹನಗಳನ್ನು ಹತ್ತುವವರು ಇನ್ಮುಂದೆ ಎಚ್ಚರಿಕೆಯಿಂದಿರಬೇಕು. ರಾಜ್ಯ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಹೆಲ್ಮೆಟ್ ಹಾಕದಿದ್ದರರೆ ದಂಡದ ಜೊತೆ ಮೂರು ತಿಂಗಳು ನಿಮ್ಮ ಚಾಲನಾ ಪರವಾನಿಗೆ (ಡಿಎಲ್) ರದ್ದಾಗಲಿದೆ. ಮೋಟಾರು ಕಾಯ್ದೆ 1988ರ ಕಲಂ 194ರ ಅನ್ವಯ ಸರ್ಕಾರ ಆದೇಶಿಸಿದೆ.

    4 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಜೊತೆಗೆ ಹಿಂಬದಿ ಸವಾರರು ಸಹ ಕಡ್ಡಾಯವಾಗಿ ಹೆಲ್ಮೆಟ್ ಹಾಕಬೇಕು. ರಾಜ್ಯದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

    ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 230 ಉಪ ನಿಯಮ (1)ರ ಪ್ರಕಾರ ಎಲ್ಲ ದಿಚಕ್ರ ವಾಹನ ಸವಾರರು, ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸದೇ ಸಂಚರಿಸುವ ಪರಿಣಾಮವಾಗಿ ರಸ್ತೆ ಅಪಘಾತಗಳಲ್ಲಿ ಸವಾರರು ಸಾವನ್ನಪ್ಪುತ್ತಿದ್ದಾರೆ. ಇಂತಹ ಮರಣ/ತೀವ್ರತರವಾದ ಗಾಯಗಳನ್ನ ತಡೆಗಟ್ಟಲು ಮೋಟಾರು ವಾಹನಗಳ ಕಾಯ್ದೆಯಡಿ ದಂಡ ಮತ್ತು ಡಿಎಲ್ ಅಮಾನತುಗೊಳಿಸಲು ಸರ್ಕಾರ ಮುಂದಾಗಿದೆ.

  • ಸಂಚಾರ ನಿಯಮ ಉಲ್ಲಂಘನೆ- ಕಾರು ತಡೆದ ಪೊಲೀಸರನ್ನೇ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ

    ಸಂಚಾರ ನಿಯಮ ಉಲ್ಲಂಘನೆ- ಕಾರು ತಡೆದ ಪೊಲೀಸರನ್ನೇ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ

    – ಅದೃಷ್ಟವಶಾತ್ ಪೊಲೀಸ್ ಬಚಾವ್

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಘಟನೆ ನಡೆದಿದ್ದು, ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಕಾರ್ ತಡೆದಿದ್ದಾರೆ. ಚಾಲಕ ಕಾರ್ ನಿಲ್ಲಿಸಿದೇ ಪೊಲೀಸ್ ಅಧಿಕಾರಿಯನ್ನೇ ಕಾರ್ ಬಾನೆಟ್ ಮೇಲೆ ಕೆಲ ಮೀಟರ್ ಗಳ ದೂರ ಕೊಂಡೊಯ್ದು ಕೆಳಗೆ ಕೆಡವಿದ್ದಾನೆ. ಈ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.

    ದೆಹಲಿಯ ಧೌಲಾ ಕುವಾನ್ ಬಳಿ ಈ ಭಯಾನಕ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಕಾರ್ ತಡೆದಿದ್ದಾರೆ. ಈ ವೇಳೆ ಪೊಲೀಸರು ಕಾರ್‍ಗೆ ಅಡ್ಡಲಾಗಿ ನಿಂತಿದ್ದಾರೆ. ತಕ್ಷಣವೇ ಚಾಲಕ ಕಾರ್ ನಿಲ್ಲಿಸದೇ ಪೊಲೀಸ್ ಅಧಿಕಾರಿಯನ್ನು ಕಲ ಮೀಟರ್ ಗಳ ವರೆಗೆ ಬಾನೆಟ್ ಮೇಲೆಯೇ ಕರೆದೊಯ್ದಿದ್ದಾನೆ. ಈ ಘಟನೆ ದಕ್ಷಿಣ ದೆಹಲಿಯ ವಾಹನ ದಟ್ಟಣೆಯ ಪ್ರದೇಶಲ್ಲಿ ನಡೆದಿದೆ.

    ಪೊಲೀಸ್ ಅಧಿಕಾರಿ ಕಳಗೆ ಬಿದ್ದರೆ ಅಪಾಯ ಎಂಬುದನ್ನು ಅರಿತು ಕೆಲ ಹೊತ್ತು ಬಾನಟ್ ಮೇಲೆಯೇ ನಿಂತಿದ್ದಾರೆ. ಚಾಲಕ ಅವರನ್ನು ಬೀಳಿಸಲು ಮನಬಂದಂತೆ ಕಾರ್ ತಿರುಗಿಸಿದ್ದಾನೆ. ಆದರೂ ಪೊಲೀಸ್ ಪಟ್ಟು ಬಿಡದೆ ಗಟ್ಟಿಯಾಗಿ ಹಿಡಿದು ನಿಂತಿದ್ದಾರೆ. ಚಾಲಕನ ವರ್ತನೆ ಅತೀರೇಕಕ್ಕೆ ಹೋಗುತ್ತಿದ್ದಂತೆ ಪ್ಲಾನ್ ಮಾಡಿ ಕಾರ್ ಅಂಚಿಗೆ ಬಂದು ಬಾನೆಟ್ ಬಿಟ್ಟು ಜಿಗಿದ್ದಿದ್ದಾರೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಸವಾರರು ವಾಹನಗಳನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಪೊಲೀಸ್ ಅಧಿಕಾರಿ ಬಚಾವ್ ಆಗಿದ್ದಾರೆ.

    ನಂತರ ಕಾರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

  • ರಸ್ತೆಗಿಳಿದ ರವಿ ಚೆನ್ನಣ್ಣನವರ್- 100ಕ್ಕೂ ಹೆಚ್ಚು ವಾಹನಗಳು ಸೀಜ್

    ರಸ್ತೆಗಿಳಿದ ರವಿ ಚೆನ್ನಣ್ಣನವರ್- 100ಕ್ಕೂ ಹೆಚ್ಚು ವಾಹನಗಳು ಸೀಜ್

    – ಇನ್ನೂ ಹಲವರಿಗೆ ದಂಡ, ಎಚ್ಚರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿ ಜೊತೆಗೆ ಹೊರವಲಯದ ನೆಲಮಂಗಲದಲ್ಲಿ ಸಹ ಸಾಕಷ್ಟು ವಾಹನ ದಟ್ಟಣೆಯಾಗುತ್ತಿದೆ. ಆದರೆ ಜನ ಮಾತ್ರ ಸಂಚಾರಿ ನಿಯಮ ಪಾಲಿಸುತ್ತಿಲ್ಲ. ಹೀಗಾಘಿ ಸ್ವತಃ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್ ರಸ್ತೆಗಿಳಿದು ವಾಹನಗಳ ಪರಿಶೀಲನೆ ನಡೆಸಿದ್ದಾರೆ.

    ಕೋವಿಡ್-19 ಹಿನ್ನಲೆಯಲ್ಲಿ ವಾಹನ ಸವಾರರು ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ, ಕೊರೊನಾ ನಿಯಮ ಪಾಲಿಸದೆ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದು, ಹೀಗಾಗಿ ಎಸ್‍ಪಿ ರವಿ.ಡಿ.ಚೆನ್ನಣ್ಣವರ್ ಸ್ವತಃ ವಾಹನಗನ್ನು ತಪಾಸಣೆ ಮಾಡಿದರು. ರವಿ ಚೆನ್ನಣ್ಣವರ್ ಇಂದು 100ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದು, ಸಂಚಾರಿ ನಿಯಮ ಪಾಲಿಸದೆ ಹೆಲ್ಮೆಟ್, ಮಾಸ್ಕ್ ಇಲ್ಲದೆ ಬೇಕಾಬಿಟ್ಟಿ ಸಂಚರಿಸುವವರಿಗೆ ಸ್ಥಳದಲ್ಲೇ ದಂಡ ವಿಧಿಸಿ ಜಾಗೃತಿ ಮೂಡಿಸಿದರು.

    ನೆಲಮಂಗಲ ಟೌನ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ವಾಹನ ಸವಾರರಿಗೆ ಸಂಚಾರಿ ನಿಯಮದ ಪಾಠ ಹೇಳಿದರು. ಟ್ರಾಫಿಕ್ ನಿಯಮ ಪಾಲಿಸುವಂತೆ ಹೇಳಿ, ದಂಡ ಹಾಕಿ ಸವಾರರಿಗೆ ಚುರುಕು ಮುಟ್ಟಿಸಿದ್ದಾರೆ. ಈ ವೇಳೆ ಡಿವೈಎಸ್ ಪಿ ಮೋಹನ್ ಕುಮಾರ್, ಸಿಪಿಐ ಶಿವಣ್ಣ, ಸಂಚಾರಿ ಸಿಪಿಐ ವೀರೇಂದ್ರ ಪ್ರಸಾದ್, ಪಿಎಸ್‍ಐ ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.

  • ದಂಡ ಹಾಕಿದ್ದಕ್ಕೆ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡಿದ

    ದಂಡ ಹಾಕಿದ್ದಕ್ಕೆ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡಿದ

    -ಹೆಲ್ಮೆಟ್ ಧರಿಸದಿದ್ದಕ್ಕೆ ದಂಡ

    ಲಕ್ನೊ: ಪೊಲೀಸರು ದಂಡ ಹಾಕಿದ್ದಕ್ಕೆ ಕೋಪಗೊಂಡ ವಿದ್ಯುತ್ ಇಲಾಖೆಯ ಸಿಬ್ಬಂದಿ ಠಾಣೆಯ ವಿದುತ್ ಸಂಪರ್ಕ ಕಡಿತಗೊಳಿಸಿರುವ ಘಟನೆ ಉತ್ತರ ಪ್ರದೇಶದ ಮಹಾರಾಜಾಗಂಜ್ ಕ್ಷೇತ್ರದ ಚಿಉಟಹಾ ಎಂಬಲ್ಲಿ ನಡೆದಿದೆ.

    ಮಂಗಳಬಾರ ವಿದ್ಯುತ್ ಇಲಾಖೆಯ ಉದ್ಯೋಗಿ ಅಜಿತ್ ಕುಮಾರ್ ಎಂಬಾತ ಹೆಲ್ಮೆಟ್ ಹಾಕಿಕೊಳ್ಳದೇ ಬೈಕ್ ಚಲಾಯಿಸುತ್ತಿದ್ದರಿಂದ ಚಿಉಟಹಾ ಠಾಣೆಯ ಪೊಲೀಸರು ದಂಡ ಹಾಕಿದ್ದರು. ಇದರಿಂದ ಕೋಪಗೊಂಡ ಅಜಿತ್ ಕುಮಾರ್ ಬುಧವಾರ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಪೊಲೀಸ್ ಠಾಣೆಯ ಸ್ವಂತ ಕಟ್ಟಡವಿಲ್ಲದ ಕಾರಣ ಪಂಚಾಯ್ತಿ ಭವನದಲ್ಲಿ ನಡೆಯುತ್ತಿದೆ. ಅಜಿತ್ ಕುಮಾರ್ ಇಡೀ ಪಂಚಾಯ್ತಿಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ.

    ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ವಿದ್ಯುತ್ ಕಂಬದಿಂದ ಇಳಿಯುತ್ತಿದ್ದ ಅಜಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದ್ಯುತ್ ಸಂಪರ್ಕ ಏಕೆ ಕಡಿತಗೊಳಿಸಿದ್ದ ಎಂಬುವುದಕ್ಕೆ ಅಜಿತ್ ಕುಮಾರ್ ಸ್ಪಷ್ಟವಾದ ಉತ್ತರ ನೀಡಿಲ್ಲ. ಕೊನೆಗೆ ವಿದ್ಯುತ್ ಇಲಾಖೆಯ ಕಚೇರಿಗೆ ಫೋನ್ ಮಾಡಿ ಪೊಲೀಸರು ವಿಚಾರಿಸಿದ್ದಾರೆ.

    ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಾವು ಸೂಚಿಸಿಲ್ಲ. ಸಿಬ್ಬಂದಿಯಿಂದಾದ ತಪ್ಪಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕ್ಷಮೆ ಕೇಳಿದ್ದಾರೆ. ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಅಜಿತ್ ಕುಮಾರ್ ದಂಡ ಹಾಕಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರೋದಾಗಿ ಬಾಯಿ ಬಿಟ್ಟಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ಇಲಾಖೆಯ ಹಿಡಿಯ ಅಧಿಕಾರಿಯೊಬ್ಬರು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

  • ಹೆಲ್ಮೆಟ್ ಹಾಕದ ಎಎಸ್‍ಐ- ಫೈನ್ ಹಾಕಲು ಸೂಚಿಸಿದ ಎಸ್‍ಪಿ

    ಹೆಲ್ಮೆಟ್ ಹಾಕದ ಎಎಸ್‍ಐ- ಫೈನ್ ಹಾಕಲು ಸೂಚಿಸಿದ ಎಸ್‍ಪಿ

    ಹಾಸನ: ಸಂಚಾರಿ ನಿಯಮ ಮಾಲಿಸುವ ಕುರಿತು ಅರಿವು ಮೂಡಿಸಬೇಕಾದ ಪೊಲೀಸರೇ ಹೆಲ್ಮೆಟ್ ಹಾಕದಿದ್ದರೆ ಹೇಗೆ ಅಲ್ಲವೆ, ಹೀಗಾಗಿ ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಅವರು ಎಎಸ್‍ಐಗೆ ತಕ್ಕ ಪಾಠ ಕಲಿಸಿದ್ದು, ಹೆಲ್ಮೆಟ್ ಧರಿಸದ್ದಕ್ಕೆ ಅವರಿಗೂ ಫೈನ್ ಹಾಕುವಂತೆ ಸೂಚಿಸಿದ್ದಾರೆ.

    ಹಾಸನದ ಸಂತೆ ಪೇಟೆ ಸರ್ಕಲ್ ಬಳಿ ಅನವಶ್ಯಕವಾಗಿ ಓಡಾಡುತ್ತಿದ್ದ ವಾಹನಗಳನ್ನು ಎಸ್‍ಪಿ ಶ್ರೀನಿವಾಸಗೌಡ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಎಎಸ್‍ಐ ಹೆಲ್ಮೆಟ್ ಇಲ್ಲದೆ ಸ್ಕೂಟರ್‍ನಲ್ಲಿ ಆಗಮಿಸುತ್ತಿದ್ದ ರು. ಇದನ್ನು ಗಮನಿಸಿದ ಎಸ್‍ಪಿ, ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಹೆಲ್ಮೆಟ್ ಹಾಕದ್ದನ್ನು ಕಂಡು ಇವರಿಗೆ ದಂಡ ವಿಧಿಸಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಈ ಮೂಲಕ ಪೊಲೀಸರು ಸಹ ಬೇಕಾಬಿಟ್ಟಿಯಾಗಿ ಓಡಾಡದೆ, ಸಂಚಾರಿ ನಿಯಮಗಳನ್ನು ಪಾಲಿಸಿ ಶಿಸ್ತು ಕಾಪಾಡಬೇಕು ಎಂದು ತಿಳಿಸಿದ್ದಾರೆ.

    ಮಂಗಳವಾರ ಈ ಘಟನೆ ನಡೆದಿದ್ದು, ನಮ್ಮ ಇಲಾಖೆಯವರು ಇತರರಿಗೆ ಮಾದರಿಯಾಗಬೇಕು. ಹೀಗಾಗಿ ಯಾರನ್ನೂ ಬಿಡುವುದಿಲ್ಲ. ಇವರಿಗೆ ಫೈನ್ ಹಾಕಿ ಎಂದು ಸೂಚಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

  • ಟ್ರಾಫಿಕ್ ಪೊಲೀಸರಿಗೇ ಉಗಿದ ರೌಡಿಶೀಟರ್- ಸಾರ್ವಜನಿಕರಿಂದ ಗೂಸಾ

    ಟ್ರಾಫಿಕ್ ಪೊಲೀಸರಿಗೇ ಉಗಿದ ರೌಡಿಶೀಟರ್- ಸಾರ್ವಜನಿಕರಿಂದ ಗೂಸಾ

    ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಲ್ಲದೇ, ತಡೆಯೋಕೆ ಬಂದ ಟ್ರಾಫಿಕ್ ಪೊಲೀಸರಿಗೆ ಉಗಿದು ಸಿನಿಮಾ ಸ್ಟೈಲ್ ನಲ್ಲಿ ಎಸ್ಕೇಪ್ ಆಗುತ್ತಿದ್ದ ರೌಡಿಶೀಟರ್ ಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ನಗರದ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಲಾರೆನ್ಸ್ ಶಾಲೆ ಬಳಿ ಈ ಘಟನೆ ನಡೆದಿದ್ದು, ರೌಡಿಶೀಟರ್ ಅರ್ಬಾಜ್ ಅಹಮದ್ ಸಾರ್ವಜನಿಕರಿಂದ ಗೂಸ ತಿಂದಿದ್ದಾನೆ. ಎಂದಿನಂತೆ ಟ್ರಾಫಿಕ್ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿಕೊಂಡು ಬರುತ್ತಿದ್ದ. ಇದನ್ನು ಕಂಡ ಸಂಚಾರಿ ಪೇದೆ ಮಂಜುನಾಥ್ ಬೈಕ್ ಸವಾರನನ್ನು ತಡೆದಿದ್ದಾರೆ.

    ರೌಡಿಶೀಟರ್ ಅರ್ಬಾಜ್ ಅಹಮದ್ ತನ್ನನ್ನು ಹಿಡಿಯುತ್ತಾರೆ ಎಂದು ಭಾವಿಸಿ, ತನ್ನ ಪಲ್ಸರ್ ಬೈಕ್ ನ್ನು ಏಕಾಏಕಿ ಸಿನಿಮಾ ಸ್ಟೈಲ್ ನಲ್ಲಿ ವ್ಹೀಲಿಂಗ್ ಮಾಡಿ ಗಾಡಿಯನ್ನು ಉಲ್ಟಾ ತಿರುಗಿಸಿಕೊಂಡಿದ್ದ. ಇದನ್ನು ನೋಡಿದ ಪೊಲೀಸ್ ಪೇದೆ ರೌಡಿಶೀಟರ್ ನನ್ನು ಹಿಡಿಯಲು ಯತ್ನಿಸಿದ್ದರು. ಇದರಿಂದ ಕೋಪಗೊಂಡ ರೌಡಿಶೀಟರ್ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಂಡು ಪೊಲೀಸರ ಮುಖಕ್ಕೆ ಎಂಜಲು ಉಗಿದು ಅವಾಚ್ಯ ಪದಗಳಿಂದ ಬೈದು ಎಸ್ಕೇಪ್ ಆಗಿದ್ದ.

    ಇದರಿಂದ ರೊಚ್ಚಿಗೆದ್ದ ಪೊಲೀಸರು, ರೌಡಿಶೀಟರ್ ನನ್ನು ಹಿಂಬಾಲಿಸಿದ್ದರು. ಕೊನೆಗೆ ಮುಂದಿನ ಸಿಗ್ನಲ್ ಬಳಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಈ ವಿಷಯ ತಿಳಿದ ಸಾರ್ವಜನಿಕರು ರೌಡಿಶೀಟರ್ ಅರ್ಬಾಜ್ ಅಹಮದ್‍ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.