ಮಡಿಕೇರಿ: ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ಕೊಟ್ಟ ತಪ್ಪಿಗೆ ಇಲ್ಲೊಬ್ಬ ಪಿತಾಮಹಾ ಬರೋಬ್ಬರಿ 25 ಸಾವಿರ ರೂ. ದಂಡ ತೆತ್ತಿದ್ದಾನೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸ್ ಠಾಣಾ (Somwarpet Police Station) ವ್ಯಾಪ್ತಿಯ ರೇಂಜರ್ ಬ್ಲಾಕಿನ ಬಿ.ಎಸ್ ಮಂಜುನಾಥ ಎಂಬುವವರು ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ನೀಡಿದ್ದರು. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮ್ಮೆ ಸಂಖ್ಯೆ 116/24 ರಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: 1 ತಿಂಗಳ ಹಿಂದೆಯಷ್ಟೇ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ನಿಂದ ರಿಲೀಫ್ ಪಡೆದಿದ್ದ ಅಲ್ಲು ಅರ್ಜುನ್
ನವದೆಹಲಿ: ರಸ್ತೆ ಅಪಘಾತಗಳಲ್ಲಿ (Road Accidents) ಸಾವುಗಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಆದರೂ ಜನರಿಗೆ ಕಾನೂನಿನ ಬಗ್ಗೆ ಗೌರವ ಹಾಗೂ ಭಯವಿಲ್ಲದ ಕಾರಣ ಸಾವುನೋವುಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Gadkari) ಆತಂಕ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅಪಘಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ನಾಲ್ಕು ಅಂಶಗಳ ಬಗ್ಗೆ ಚರ್ಚಿಸಿದ್ದಾರೆ. ಅವುಗಳೆಂದರೆ ರಸ್ತೆ ಎಂಜಿನಿಯರಿಂಗ್, ಆಟೋಮೊಬೈಲ್ ಎಂಜಿನಿಯರಿಂಗ್, ಕಾನೂನು ಜಾರಿ ಮತ್ತು ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಶಿಕ್ಷಣ ನೀಡುವುದು ಎಂದು ಅವರು ಒತ್ತಿ ಹೇಳಿದ್ದಾರೆ.
ನಮ್ಮ ಸಮಾಜದ ದೊಡ್ಡ ಸಮಸ್ಯೆ ಎಂದರೆ ಜನರಿಗೆ ಕಾನೂನಿನ ಬಗ್ಗೆ ಗೌರವವ ಹಾಗೂ ಭಯವಿಲ್ಲದಿರುವುದು. ರೆಡ್ ಸಿಗ್ನಲ್‌ನಲ್ಲಿ ನಿಲ್ಲುವುದಿಲ್ಲ. ಅಲ್ಲದೇ ನಮ್ಮ ಜನ ಹೆಲ್ಮೆಟ್ ಹಾಕುವುದಿಲ್ಲ. ಹೆಲ್ಮೆಟ್ ಹಾಕದ ಕಾರಣಕ್ಕೆ 30,000 ಜನ ಸಾಯುತ್ತಾರೆ. ಇನ್ನೂ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ನಾನೇ ಅಪಘಾತಕ್ಕೆ ಗುರಿಯಾಗಿದ್ದೆ. ಅಪಘಾತದಲ್ಲಿ ನನ್ನ ಕಾಲು ಮುರಿದಿತ್ತು ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಅಪಘಾತ ತಡೆಗೆ ಕಠಿಣ ಪ್ರಯತ್ನದ ಹೊರತಾಗಿಯೂ ರಸ್ತೆ ಅಪಘಾತದಲ್ಲಿ ಈ ವರ್ಷ 1.68 ಲಕ್ಷ ಸಾವುಗಳು ಸಂಭವಿಸಿವೆ. ರಸ್ತೆಗಳ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದ ಕಾರಣ ಈ ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿವೆ. ಸಾರ್ವಜನಿಕ ಪ್ರತಿನಿಧಿಗಳು, ಮಾಧ್ಯಮಗಳು ಅಥವಾ ಸಮಾಜದ ಸಹಕಾರವಿಲ್ಲದೆ ಇದರ ನಿಯಂತ್ರಣ ಸಾಧ್ಯವಿಲ್ಲ. ನಾವೂ ದಂಡವನ್ನು ಹೆಚ್ಚಿಸಿದ್ದೇವೆ, ಆದರೆ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅವರು ಆತಂಕ ಹೊರ ಹಾಕಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಿಂದ (Silicon City) 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ಲೈಓವರ್, ಆಕ್ಸಿಡೆಂಟ್ ಹಾಟ್‌ಸ್ಪಾಟ್ ಆಗಿ ಬದಲಾಗಿ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಆದರೆ ಅಪಘಾತ ತಡೆಯುವ ನಿಟ್ಟಿನಲ್ಲಿ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪರಿಣಾಮ ಪ್ಲೈಓವರ್ ಆಕ್ಸಿಡೆಂಟ್ ಝೋನ್ (Accindent Zone) ಆಗಿ ಬದಲಾಗುತ್ತಿದೆ.
ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳ ಪೈಕಿ ಯಶವಂತಪುರ ಫ್ಲೈಓವರ್ ಕೂಡ ಒಂದು. ನಗರದ ಪ್ರಮುಖ ಹೆದ್ದಾರಿಗೆ ಸಂಪರ್ಕಿಸುವ ಈ ಫ್ಲೈಓವರ್ ಕಳೆದ ಕೆಲ ದಿನಗಳಿಂದ ಭೀಕರ ಅಪಘಾತಗಳಿಗೆ ಸಾಕ್ಷಿಯಾಗುತ್ತಿದೆ. ಫ್ಲೈಓವರ್ ಮೇಲೆ ಅಪಘಾತಗಳು ಒಂದರ ಹಿಂದೆ ಒಂದರಂತೆ ಸಂಭವಿಸುತ್ತಿವೆ. ಹೀಗಿದ್ದರೂ ಫ್ಲೈಓವರ್ ಮೇಲೆ ಅಪಘಾತ ತಡೆಯುವ ನಿಟ್ಟಿನಲ್ಲಿ ಜಾರಿಯಾಗಬೇಕಿದ್ದ ಕ್ರಮಗಳು ಮಾತ್ರ ಇನ್ನೂ ಜಾರಿಯಾಗುತ್ತಿಲ್ಲ.
ಇತ್ತೀಚಗೆ ಯಶವಂತಪುರ (Yeshwantpura) ಫ್ಲೈಓವರ್‌ನಲ್ಲಿ ಕಾರು, ಲಾರಿ ಸೇರಿದಂತೆ ದೊಡ್ಡ ವಾಹನಗಳೇ ಭೀಕರ ಅಪಘಾತಕ್ಕೆ ಒಳಗಾಗುತ್ತಿವೆ. ಒಂದು ಕಡೆ ಕೆಲವರ ನಿರ್ಲಕ್ಷ್ಯತನದ ಚಾಲನೆ ಅಪಘಾತಕ್ಕೆ ಕಾರಣವಾದರೆ, ಇನ್ನೂ ಕೆಲವರು ಸರಿಯಾಗಿ ರಸ್ತೆಯ ಮಾಹಿತಿ ಇಲ್ಲದೇ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಸದ್ಯ ಈ ಫ್ಲೈಓವರ್‌ನಲ್ಲಿ ಟೆಕ್ನಿಕಲ್ ಸಮಸ್ಯೆ ಇರುವುದಾಗಿ ಐಐಎಸ್‌ಸಿ ಕೂಡ ಹೇಳಿದೆ. ಆದರೆ ಟೆಕ್ನಿಕಲ್ ಸಮಸ್ಯೆ ಒಂದು ಕಡೆ ಆದರೆ ಮತ್ತೊಂದು ಕಡೆ ಫ್ಲೈಓವರ್‌ಗೆ ಅಳವಡಿಕೆ ಮಾಡಬೇಕಿದ್ದ ಸೂಚನಾ ಫಲಕಗಳು ಇಲ್ಲದಿರುವುದು. ಟಾಟಾ ಇನ್ಸ್ಟಿಟ್ಯೂಟ್ ಕಡೆಯಿಂದ ಬರುವ ವಾಹನಗಳು ನೇರವಾಗಿ ಫ್ಲೈಓವರ್ ಎಂಟ್ರಿಯಾಗಬೇಕಾದರೆ ರಾತ್ರಿ ವೇಳೆ ಸರಿಯಾದ ಮಾಹಿತಿ ಚಾಲಕರಿಗೆ ಸಿಗುತ್ತಿಲ್ಲ. ರಸ್ತೆ ತಿರುವು ಎಷ್ಟಿದೆ? ಎಲ್ಲಿ ತಿರುವಿದೆ? ವೇಗದ ಕಂಟ್ರೋಲ್ ಎಷ್ಟು? ಎನ್ನುವ ಬಗ್ಗೆ ಸರಿಯಾದ ಫಲಕಗಳ ಅಳವಡಿಕೆ ಮಾಡದ ಕಾರಣ ನಿತ್ಯ ಅಪಘಾತಗಳು ಹೆಚ್ಚಾಗುತ್ತಿವೆ.
ಶೀಘ್ರವಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳೇನು?
ಫ್ಲೈಓವರ್ ಎಂಟ್ರಿಯಲ್ಲಿ ಬ್ಲಿಂಕ್ ಟ್ರಾಫಿಕ್ ಲೈಟ್‌ನ್ನು ಹಾಕಬೇಕು.
ಫ್ಲೈಓವರ್ ಇರುವ ಬಗ್ಗೆ, ವೇಗದ ಮಿತಿ ಸಂಬಂಧ ಫ್ಲೈಓವರ್ ಆರಂಭಕ್ಕೂ ಮುನ್ನ ಸೂಚನಾ ಫಲಕ ಹಾಕಬೇಕು.
ಫ್ಲೈಓವರ್ ಎಂಟ್ರಿಯ ತಡೆಗೊಡೆಗಳಲ್ಲಿ ಲೈಟ್‌ಗಳ ಅಳವಡಿಕೆಯಾಗಬೇಕು.
ಫ್ಲೈಓವರ್ ಮೇಲೆ ತಿರುವಿನ ಪ್ರಮಾಣ, ತಿರುವು ಇರುವ ಜಾಗದಲ್ಲಿ ರಿಫ್ಲೆಕ್ಟ್ ಲೈಟ್‌ಗಳ ಅಳವಡಿಕೆಯಾಗಬೇಕು.
ಫ್ಲೈಓವರ್ ಎಂಟ್ರಿಯಲ್ಲಿ ವೇಗ ನಿಯಂತ್ರಣ ಸೂಚನಾ ಫಲಕ ಹಾಕಬೇಕು.
ಸದ್ಯ ಈ ಯಾವ ಕ್ರಮಗಳು ಇಲ್ಲದೇ ಇರುವ ಕಾರಣ ರಸ್ತೆ ಅಥವಾ ಫ್ಲೈಓವರ್ ಪರಿಚಯ ಇಲ್ಲದವರು ವೇಗವಾಗಿ ಬಂದು ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಟೆಕ್ನಿಕಲ್ ಸಮಸ್ಯೆ ಸರಿಮಾಡಲು ಸಮಯ ಬೇಕಾಗಲಿದೆ. ಆದರೆ ಕನಿಷ್ಟ ಸೂಚನಾ ಫಲಕಗಳನ್ನಾದರೂ ಹಾಕುವ ಕೆಲಸವಾದರೆ ಅಪಘಾತಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಕೂಡಲೇ ಕ್ರಮಕೈಗೊಳ್ಳಬೇಕಿದೆ.
ಬೆಂಗಳೂರು: ಸಂಚಾರ ನಿಯಮ ಪಾಲನೆ ಮಾಡದವರ ಲೈಸೆನ್ಸ್ ರದ್ದು ಮಾಡುವ ನಿಯಮ ರಾಜ್ಯದಲ್ಲೂ ಜಾರಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸಾರಿಗೆ ಇಲಾಖೆಗೆ ಸೂಚನೆ ನೀಡಿದರು.
ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಯೋಜನೆಯಡಿ ನೂತನ 65 ಅಂಬುಲೆನ್ಸ್ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ, ನಿಯಮ ಪಾಲನೆ ಮಾಡುವಂತೆ ಜನರಿಗೆ ಕರೆ ಕೊಟ್ಟರು. ಹೊಸ 65 ಅಂಬುಲೆನ್ಸ್ ಸೇರ್ಪಡೆ ಆಗುತ್ತಿವೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಈ ಅಂಬುಲೆನ್ಸ್ ಕೊಡ್ತಿದ್ದೇವೆ.108 ಅಂಬುಲೆನ್ಸ್ ಕೆಲಸ ಮಾಡ್ತಿವೆ. ಇದರ ಜೊತೆಗೆ 65 ಅಂಬುಲೆನ್ಸ್ ಬರ್ತಿವೆ. 39 ಬೇಸಿಕ್ ಲೈಫ್ ಸಪೋರ್ಟ್, 26 ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಅಂಬುಲೆನ್ಸ್‌ಗಳಾಗಿವೆ. ಅಡ್ವಾನ್ಸ್ಡ್ ಅಂಬುಲೆನ್ಸ್‌ನಲ್ಲಿ ವೆಂಟಿಲೇಟರ್ ಇರುತ್ತದೆ. ಅಪಘಾತಕ್ಕೆ ಈಡಾದವರಿಗೆ ಜೀವ ಉಳಿಸೋ ಕೆಲಸ ಮಾಡ್ತಾವೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೂ ರಾಜ್ಯಪಾಲರು ರಿಪೋರ್ಟ್ ಕೇಳೋದು ಸರಿಯಲ್ಲ: ಸಿದ್ದರಾಮಯ್ಯ
ಪ್ರತಿ ವರ್ಷ 40 ಸಾವಿರ ಅಪಘಾತ ಆಗುತ್ತದೆ. ಇದರಲ್ಲಿ 10 ಸಾವಿರ ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಜಾಸ್ತಿ ಯುವಕರಿಗೆ, ಶಾಲಾ ಮಕ್ಕಳಿಗೆ ಅಪಘಾತ ಆಗ್ತಿದೆ. ಇದರಿಂದ ಅವರಿಂದ ಸಮಾಜಕ್ಕೆ ಆಗೋ ಒಳ್ಳೆ ಕೆಲಸ ಕಳೆದುಕೊಳ್ಳುತ್ತೇವೆ. ಹೀಗಾಗಿ ಸಾವು ತಡೆಯಲು ರಸ್ತೆ ಸುರಕ್ಷತಾ ಪ್ರಾಧಿಕಾರದ ನಿಧಿಯಿಂದ ವರ್ಷಕ್ಕೆ 45 ಕೋಟಿ ಹಣ ಆರೋಗ್ಯ ಇಲಾಖೆಗೆ ಕೊಡ್ತಾರೆ. ಇದರಲ್ಲಿ ಅಂಬುಲೆನ್ಸ್ ಖರೀದಿ ಮಾಡಿದ್ದಾರೆ. ಮುಂದಿನ ವರ್ಷದಿಂದ ಮತ್ತಷ್ಟು ಹಣ ಅಂಬುಲೆನ್ಸ್‌ಗೆ ಕೊಡ್ತೀವಿ ಎಂದರು.
ಅಪಘಾತದಿಂದ ಇಡೀ ಜೀವಮಾನ ನರಳಬೇಕಾಗುತ್ತವೆ. ಆಕ್ಸಿಡೆಂಟ್ ಆದ ಒಂದು ಗಂಟೆ ಬಹಳ ಮುಖ್ಯ. ಒಂದು ಗಂಟೆ ಒಳಗೆ ಚಿಕಿತ್ಸೆ ಸಿಕ್ಕರೆ ಪ್ರಾಣ ಉಳಿಸಬಹುದು. ಗೋಲ್ಡನ್ ಹವರ್ ತುಂಬಾ ಮುಖ್ಯ. ಈ ಸಮಯದಲ್ಲಿ ಜೀವ ಉಳಿಸಬಹುದು ಎಂದು ಸಿಎಂ ತಿಳಿಸಿದರು. ಅಪಘಾತ ಕಡಿಮೆ ಆಗಲು ಕಾರ್, ಸ್ಕೂಟರ್, ವಾಹನಗಳು ಓಡಿಸೋರು ನಿಯಮ ಪಾಲನೆ ಮಾಡಬೇಕು. ಬಳಹ ಜನ ಕುಡಿದು ಓಡಿಸ್ತಾರೆ. ಕುಡಿದು ಗಾಡಿ ಓಡಿಸೋದು ಅಪಾಯ ಅಂತಾ ಬೋರ್ಡ್ ಇದ್ದರೂ, ಅದನ್ನು ನೋಡಿಕೊಂಡೇ ಕುಡೀತಾರೆ. ಮೂತ್ರ ವಿಸರ್ಜನೆ ಮಾಡಬಾರದು ಅಂತಾ ಬೋರ್ಡ್ ಹಾಕಿದ್ರೂ, ಅಲ್ಲೆ ಮೂತ್ರ ವಿಸರ್ಜನೆ ಮಾಡ್ತಾರೆ. ಇದು ನಮ್ಮ ಜನ. ನಮ್ಮ ಜನ ಚಾಪೆ ಕೆಳಗೆ ನುಗ್ಗದೇ ರಂಗೋಲೆ ಕೆಳಗೆ ನುಗ್ಗುತ್ತಾರೆ. ಇನ್ಮುಂದೆ ಎಲ್ಲರೂ ನಿಯಮಗಳನ್ನು ಪಾಲನೆ ಮಾಡಿ ಎಂದು ಕರೆಕೊಟ್ಟರು. ಇದನ್ನೂ ಓದಿ: ಅಪಘಾತಕ್ಕೀಡಾದವರ ರಕ್ಷಣೆಗೆ “ಆಪತ್ಕಾಲಯಾನ”: 65 ನೂತನ ಅಂಬುಲೆನ್ಸ್ ಚಾಲನೆ ನೀಡಿದ ಸಿಎಂ
ವಿದೇಶಗಳಲ್ಲಿ ನಿಯಮ ಪಾಲನೆ ಮಾಡದೇ ಹೋದ್ರೆ ಲೈಸೆನ್ಸ್ ರದ್ದು ಮಾಡ್ತಾರೆ. ನಮ್ಮಲ್ಲೂ ಲೈಸೆನ್ಸ್ ರದ್ದು ಮಾಡೋ ನಿಯಮ ಮಾಡಬೇಕು ಎಂದು ವೇದಿಕೆ ಮೇಲಿದ್ದ ಸಾರಿಗೆ ಸಚಿವರಿಗೆ ಸಿಎಂ ಸೂಚನೆ ನೀಡಿದರು. ಇನ್ಮುಂದೆ ನಿಯಮ ಪಾಲನೇ ಮಾಡದೇ ಹೋದ್ರೆ ನೋಟಿಸ್ ಕೊಡಬೇಡಿ, ಲೈಸೆನ್ಸ್ ಕ್ಯಾನ್ಸಲ್ ಮಾಡಿ. ಬೇಕಾದರೆ ಅವರು ಕೋರ್ಟ್‌ಗೆ ಹೋಗಲಿ. ಕುಡಿದು ವಾಹನ ಓಡಿಸೋದು, ವೇಗವಾಗಿ ಓಡಿಸೋರು ಸೇರಿ ನಿಯಮ ಪಾಲನೆ ಮಾಡದೇ ಹೋದರೆ ಲೈಸೆನ್ಸ್ ರದ್ದು ಮಾಡಿ ಎಂದು ಸಾರಿಗೆ ಇಲಾಖೆಗೆ ಸೂಚನೆ ಕೊಟ್ಟರು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, MLC ನಾಗರಾಜ್ ಯಾದವ್ ಸೇರಿ ಹಲವರು ಭಾಗಿಯಾಗಿದ್ದರು.
ಬೆಂಗಳೂರು: ಟ್ರಾಫಿಕ್ ರೂಲ್ಸ್ (Traffic Rules) ಪಾಲಿಸದ ವಾಹನ ಚಾಲಕರು ಹಾಗೂ ಸವಾರರಿಗಾಗಿ ಯಮ ಹಾಗೂ ಚಿತ್ರಗುಪ್ತ ಭೂಲೋಕಕ್ಕೆ ಬಂದು ಪಾಠ ಹೇಳಿರುವುದು ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ನಡೆದಿದೆ. ಹೌದು! ಯಮಲೋಕದಿಂದ ಭೂಲೋಕಕ್ಕೆ ಇಳಿದ ಯಮ ಧರ್ಮರಾಯ ನಿಯಮ ಪಾಲಿಸದ ಸವಾರರ ಮೇಲೆ ಹರಿಹಾಯ್ದಿದ್ದಾನೆ.
ಹೆಲ್ಮೆಟ್ ಹಾಕದ ಈ ಸವಾರ ಎಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾನೆ ಎಂಬ ಯಮನ ಪ್ರಶ್ನೆಗೆ ಪುಸ್ತಕ ನೋಡಿ ಚಿತ್ರಗುಪ್ತ ಇಪ್ಪತ್ತು ಬಾರಿ ಎಂದು ಉತ್ತರಿಸಿದ್ದಾನೆ. ಈ ವೇಳೆ ಯಮ ಅಂತಹ ಸವಾರರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತಿಲ್ಲವೇ? ಎಂದು ಎಚ್ಚರಿಸಿದ್ದಾನೆ. ಇದನ್ನೂ ಓದಿ: ಸೋಮವಾರ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ದೇಗುಲ
ಇದೇ ವೇಳೆ ಫೋನ್‍ನಲ್ಲಿ ಮಾತಾಡುತ್ತಿದ್ದ ಸವಾರನಿಗೆ ಕ್ಲಾಸ್ ತೆಗೆದುಕೊಂಡ ಯಮ, ವಾಹನ ಚಲಾಯಿಸುವಾಗ ನೀನು ಕರೆ ಮಾಡಿದ್ರೆ ಯಮಲೋಕಕ್ಕೆ ಕನೆಕ್ಟ್ ಆಗುತ್ತೆ ಎಂದು ಎಚ್ಚರಿಕೆ ನೀಡಿ ಕಳಿಸಿದ್ದಾನೆ!
ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು (Upparpet Traffic Police) ಈ ವಿನೂತನ ಪ್ರಯತ್ನ ಮಾಡಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ಸಂಚಾರ ನಿಯಮ ಪಾಲಿಸದ ಸವಾರರಿಗೆ ಗುಲಾಬಿ ಹೂ ನೀಡಿ, ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಹಾಗೂ ಟೀಂನಿಂದ ಟ್ರಾಫಿಕ್ ನಿಯಮಗಳ ಬಗ್ಗೆ ಅರಿವು (Road Safety Awareness) ಮೂಡಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕೆ ಹೋಗಿ ಪಾಪ ತೊಳೆದುಕೊಂಡು ಬನ್ನಿ – ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್
ಹೈದರಾಬಾದ್: ತೆಲಂಗಾಣ (Telangana) ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತೆ ಕಾಂಗ್ರೆಸ್ ಸರ್ಕಾರ ರಾಜ್ಯದ ವಾಹನ ಸವಾರರಿಗೆ ಬಂಪರ್ ಆಫರ್ ಪ್ರಕಟಿಸಿದೆ. ರಾಜ್ಯ ಸರ್ಕಾರವು ಟ್ರಾಫಿಕ್ (Traffic) ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಪಾವತಿಯಲ್ಲಿ 60-90 % ರಷ್ಟು ರಿಯಾಯಿತಿ ಘೋಷಿಸಿದೆ.
ಒನ್-ಟೈಮ್ ಪಾವತಿ ಯೋಜನೆಯು ಡಿಸೆಂಬರ್ 26 ರಿಂದ ಜನವರಿ 10 ರವರೆಗೆ ಜಾರಿಯಲ್ಲಿರಲಿದೆ. ಸರ್ಕಾರದ ಆದೇಶದಂತೆ ತಳ್ಳುವ ಗಾಡಿಗಳ ಮಾಲೀಕರಿಗೆ 90% ರಷ್ಟು ರಿಯಾಯಿತಿ ನೀಡಲಾಗುವುದು. ಅವರು ಚಲನ್ ಮೊತ್ತದ ಕೇವಲ 10 % ಮಾತ್ರ ಪಾವತಿಸಬೇಕಾಗುತ್ತದೆ. ಉಳಿದ 90 % ಮನ್ನಾ ಮಾಡಲಾಗುತ್ತದೆ. ಆರ್‌ಟಿಸಿ ಚಾಲಕರಿಗೂ ಅದೇ ರಿಯಾಯಿತಿ ನೀಡಲಾಗುತ್ತದೆ. ಇದನ್ನೂ ಓದಿ: 39 ದಿನಗಳಲ್ಲಿ ಶಬರಿಮಲೆಗೆ 204 ಕೋಟಿ ರೂ. ಆದಾಯ- ಕಳೆದ ವರ್ಷ ಎಷ್ಟಿತ್ತು?
ಸರ್ಕಾರವು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ದಂಡದ ಮೊತ್ತದಲ್ಲಿ 80 % ಮನ್ನಾ ಮಾಡಿದೆ. ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳು, ಟ್ರಕ್‌ಗಳು ಮತ್ತು ಇತರ ಭಾರೀ ವಾಹನಗಳಿಗೆ 60 % ರಿಯಾಯಿತಿ ಇದೆ.
ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ರಿಯಾಯಿತಿ ನೀಡುವ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಲಾಗಿತ್ತು. ವಾಹನ ಮಾಲೀಕರ ಅನುಕೂಲಕ್ಕಾಗಿ ಸರ್ಕಾರ ಇದನ್ನು ಜಾರಿಗೆ ತಂದಿದೆ. ಮೊತ್ತವನ್ನು ಪಾವತಿಸಲು, ವಾಹನ ಮಾಲೀಕರು ತೆಲಂಗಾಣ ಟ್ರಾಫಿಕ್ ಇ-ಚಲನ್ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ವಾಹನಗಳ ವಿರುದ್ಧ ಬಾಕಿ ಉಳಿದಿರುವ ಚಲನ್‌ಗಳನ್ನು ಪರಿಶೀಲಿಸಿ ಮತ್ತು ರಿಯಾಯಿತಿ ಮೊತ್ತವನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಸರ್ಕಾರಿ ಆದೇಶವು ತಿಳಿಸಿದೆ. ಇದನ್ನೂ ಓದಿ: ಜ.14 ರಿಂದ ‘ಭಾರತ ನ್ಯಾಯ ಯಾತ್ರಾ’ – ಮಣಿಪುರದಿಂದ ಮುಂಬೈಗೆ ರಾಹುಲ್ ಗಾಂಧಿ ಪಡೆ ಯಾತ್ರೆ
ರಾಜ್ಯಾದ್ಯಂತ ಸುಮಾರು ಎರಡು ಕೋಟಿ ಟ್ರಾಫಿಕ್ ಚಲನ್‌ಗಳು ಬಾಕಿ ಉಳಿದಿವೆ ಎಂದು ವರದಿಗಳು ಹೇಳುತ್ತಿವೆ. 2022 ರಲ್ಲಿ ದೇಶಾದ್ಯಂತ ಸಂಚಾರ ಉಲ್ಲಂಘನೆಗಾಗಿ 7,563.60 ಕೋಟಿ ರೂ. ಮೌಲ್ಯದ 4.73 ಕೋಟಿ ಚಲನ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರವು ಸಂಸತ್ತಿಗೆ ತಿಳಿಸಿತ್ತು.
ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2021 ರಲ್ಲಿ ದೇಶಾದ್ಯಂತ ಸಂಚಾರ ಉಲ್ಲಂಘನೆಗಾಗಿ 5,318.70 ಕೋಟಿ ರೂ. ಮೌಲ್ಯದ 4.21 ಕೋಟಿ ಚಲನ್‌ಗಳನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರುದ್ಧ ರಾಹುಲ್ ಗಾಂಧಿ ಕಟು ಟೀಕೆ
ಸಚಿವರು ನೀಡಿರುವ ಅಂಕಿಅಂಶಗಳ ಪ್ರಕಾರ, ಕರ್ನಾಟಕ (87,48,963) ಗರಿಷ್ಠ ಸಂಖ್ಯೆಯ ನೋಂದಾಯಿತ ವಾಹನಗಳನ್ನು ಹೊಂದಿದೆ. ನಂತರ ಸ್ಥಾನದಲ್ಲಿ ಉತ್ತರ ಪ್ರದೇಶ (74,91,584) ಮತ್ತು ದೆಹಲಿ (57,85,609) ರಾಜ್ಯಗಳಿವೆ.
ಬೆಂಗಳೂರು: ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪನ ಪುತ್ರ ಆಡಂ ಬಿದ್ದಪ್ಪ (Adam Bidapa) ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದು, ಹಾರ್ನ್ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಯಲಹಂಕದಲ್ಲಿ (Yelahanka) ನಡೆದಿದೆ.
ಈ ವೇಳೆ ಸ್ಥಳಕ್ಕೆ ಬಂದ ಯಲಹಂಕ ಸಂಚಾರಿ ಪೊಲೀಸರ (Police) ಜೊತೆಗೂ ಆಡಂ ವಾಗ್ವಾದ ಮಾಡಿದ್ದಾನೆ. ಬಳಿಕ ಅವಿವಾ ಬಿದ್ದಪ್ಪಗೆ ಕರೆ ಮಾಡಿ ಪೊಲೀಸರೊಂದಿಗೆ ಮಾತಾಡುವಂತೆ ಹೇಳಿದ್ದಾನೆ. ಈ ವೇಳೆ ಪೊಲೀಸರು ನೀನು ಯಾರಿಗಾದರೂ ಕರೆ ಮಾಡು ಎಂದು ಹೇಳಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪೋಕ್ಸೋ ಪ್ರಕರಣ – ಪೊಲೀಸರಿಂದ ಸಂತ್ರಸ್ತೆಗೆ ಮಾನಸಿಕ ಕಿರುಕುಳ ಆರೋಪ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್, ಆಡಂ ಕುಡಿದ ಮತ್ತಿನಲ್ಲಿ ಪೊಲೀಸರು ಹಾಗೂ ವ್ಯಕ್ತಿಯೊಬ್ಬರ ಜೊತೆ ಗಲಾಟೆ ಮಾಡಿದ್ದಾನೆ. ನಾನು ಪ್ರಭಾವಿ ಆಗಿದ್ದೇನೆ ನನ್ನನ್ನೇ ಪ್ರಶ್ನೆ ಮಾಡುತ್ತೀರಾ ಎಂದು ಬೆದರಿಕೆ ಹಾಕಿದ್ದಾನೆ. ಯಲಹಂಕ ಸಂಚಾರಿ ಪೊಲೀಸರು ಆತನ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಈ ವಿಚಾರವಾಗಿ ರಾಹುಲ್ ಎಂಬವರು ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ದಾವಣಗೆರೆ: ಎಲ್ಲಿ ನೋಡಿದ್ರು ಟ್ರಾಫಿಕ್ ನಿಯಮ (Traffic Rules) ಉಲ್ಲಂಘನೆಗಳೇ ಜಾಸ್ತಿ, ಅಡ್ಡಾದಿಡ್ಡಿ ಓಡಾಡುವ ವಾಹನಗಳಿಂದ ಬೇರೆಯವರಿಗೂ ಕೂಡ ತೊಂದರೆ. ಟ್ರಾಫಿಕ್ ಪೊಲೀಸರು ಇದ್ದರೆ ಮಾತ್ರ ನಿಯಮ ಪಾಲನೆ ಇಲ್ಲವಾದ್ರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರಿಗೆ ಜನರೇ ದಂಡ ಹಾಕುವ ಅಧಿಕಾರವನ್ನು ಪೊಲೀಸ್ ಇಲಾಖೆ (Police Department) ನೀಡಿದೆ.
ಹೌದು, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ (Davanagere SP Arun Kumar) ಈ ರೀತಿಯ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಟ್ರಾಫಿಕ್ ಕಮೆಂಟೆಂಟ್ ರೂಂ ಮಾಡಿ ನಗರದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವ ವಾಹನಗಳ ಮೇಲೆ ಸಿಸಿ ಕ್ಯಾಮೆರಾಗಳ ಮೂಲಕ ಹದ್ದಿನ ಕಣ್ಣು ಇಟ್ಟಿದ್ದಾರೆ. ಇದನ್ನೂ ಓದಿ: ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 5 ದಿನ ಆರೆಂಜ್ ಅಲರ್ಟ್
ನಿಯಮ ಮೀರಿದವ್ರಿಗೆ ನೋಟಿಸ್ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಪೊಲೀಸ್ ಇಲಾಖೆ ದೂರವಾಣಿ ನಂಬರ್ ಅನ್ನು ಸಾರ್ವಜನಿಕರಿಗೆ ನೀಡಿದ್ದು, ನಿಯಮ ಉಲ್ಲಂಘನೆ ಮಾಡಿದವರ ಫೋಟೋವನ್ನು ಜನರೇ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ತೆಗೆದು ವಾಟ್ಸಾಪ್ ಮಾಡುವ ಅವಕಾಶ ನೀಡಿದೆ. ಆಗ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ಮನೆಗೆ ದಂಡ ನೋಟಿಸ್ ಮೂಲಕ ಹೋಗುತ್ತದೆ.
ದಾವಣಗೆರೆಯಲ್ಲಿ ಕೆಲ ದಿನಗಳ ಹಿಂದೆಯೇ ಈ ಪ್ಲಾನ್ ಮಾಡಿದ್ದು, ಈಗಾಗಲೇ 15ಕ್ಕೂ ಹೆಚ್ಚು ಕೇಸ್‍ಗಳನ್ನು ಹಾಕಲಾಗಿದೆ. ಪೊಲೀಸರು ಯಾವಾಗಲೂ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವವರ ಮೇಲೆ ಕಣ್ಣು ಇಡಲು ಸಾಧ್ಯವಾಗುವುದಿಲ್ಲ. ಅದ್ದರಿಂದ ಜನರೇ ಸಂಚಾರಿ ಉಲ್ಲಂಘನೆ ಮಾಡಿದವರ ಫೋಟೋವನ್ನು ತೆಗೆದು ವಾಟ್ಸಾಪ್ ಕಳುಹಿಸಿದರೆ ಅವರ ಮನೆಗಳಿಗೆ ನೊಟೀಸ್ ಮೂಲಕ ದಂಡ ವಿಧಿಸಬಹುದಾಗಿದೆ. ಇದರಿಂದ ಸಂಚಾರಿ ನಿಯಮಗಳು ಪಾಲನೆಯಾಗುತ್ತದೆ. ಇತ್ತ ಜನರಿಗೆ ಒಂದು ಜವಾಬ್ದಾರಿ ನೀಡಿದಂತಾಗುತ್ತದೆ ಅನ್ನೋದು ಪೊಲೀಸರ ಲೆಕ್ಕಾಚಾರವಾಗಿದೆ.
ಏನೇ ಆಗಲಿ ಪೊಲೀಸರು ಇಲ್ಲ ಎಂದು ವಾಹನಗಳನ್ನು ಅಡ್ಡಾದಿಡ್ಡಿ ಓಡಿಸುವವರಿಗೆ ಈ ಪ್ಲಾನ್‍ನಿಂದ ಒಳ್ಳೆಯ ಪಾಠ ಕಲಿಸಿದಂತಾಗಿದೆ. ಇನ್ನಾದರೂ ಸಂಚಾರಿ ನಿಗಮಗಳ ಪಾಲನೆ ಮಾಡ್ತಾರಾ ಜನ ಅನ್ನೋದು ಕಾದು ನೋಡಬೇಕಿದೆ.
ಪ್ಯಾರಿಸ್: 17 ವರ್ಷದ ಹುಡುಗನನ್ನು ಗುಂಡಿಟ್ಟು ಹತ್ಯೆ ಮಾಡಿದ ನಂತರ ಫ್ರಾನ್ಸ್‌ನಲ್ಲಿ (France) ಜನಾಕ್ರೋಶ ಭುಗಿಲೆದ್ದಿದೆ. ಟ್ರಾಫಿಕ್ ತಪಾಸಣೆ ವೇಳೆ ಹುಡುಗನ ಮೇಲೆ ಪೊಲೀಸರು ಗುಂಡು ಹಾರಿಸಿ ಹತ್ಯೆಗೈದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಂಗಳವಾರ ರಾತ್ರಿಯಿಂದಲೇ ಪ್ರತಿಭಟನೆ (France Protest) ಭುಗಿಲೆದ್ದಿದೆ.
ಫ್ರಾನ್ಸ್‌ನ ಪ್ರತಿಭಟನೆ ಶನಿವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಬೀದಿ ಬೀದಿಗಳಲ್ಲಿ ಪೊಲೀಸ್ (France Police) ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 3 ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್
ಪ್ರತಿಭಟನಾಕಾರರ ಆಕ್ರೋಶಕ್ಕೆ 2,000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 500 ಕಟ್ಟಡಗಳು ಧ್ವಂಸಗೊಂಡಿವೆ. ಹಾಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಸುಮಾರು 45 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಈವರೆಗೆ ಸುಮಾರು 994 ಮಂದಿಯನ್ನು ಬಂಧಿಸಲಾಗಿದೆ. ಪ್ಯಾರಿಸ್ ಸಹಿತ ಹಲವು ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದರೂ ಗಲಭೆಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ 17ರ ಹುಡುಗರನ್ನು ಹತ್ಯೆ ಮಾಡಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ಬಂಧಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಸರ್ಕಾರ ಆದೇಶಿಸಿದೆ.
ಫ್ರಾನ್ಸ್‌ನ ಪಶ್ಚಿಮ ಪ್ಯಾರಿಸ್‌ನ ನಾಂಟೇರ್‌ನಲ್ಲಿ ಟ್ರಾಫಿಕ್ ತಪಾಸಣೆ ವೇಳೆ ಪೊಲೀಸರು 17 ವರ್ಷದ ನಹೆಲ್ ಎಂಬ ಹುಡುಗನನ್ನ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿರುವುದರಿಂದ ಶೀಘ್ರವೇ ಶಮನಗೊಳಿಸಲು ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅಲ್ಲದೇ ಪರಿಸ್ಥಿತಿ ಇನ್ನಷ್ಟು ಭುಗಿಲೇಳುವ ಸಾಧ್ಯತೆಗಳಿರುವುದರಿಂದ ಸರ್ಕಾರ 45 ಸಾವಿರ ಪೊಲೀಸರನ್ನ ನಿಯೋಜನೆ ಮಾಡಿದೆ. ಮತ್ತೆ ರಾಷ್ಟ್ರದಲ್ಲಿ ಶಾಂತಿ ನೆಲೆಸಲು ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ (Emmanuel Macron) ಹರಸಾಹಸ ನಡೆಸುತ್ತಿದ್ದಾರೆ. ಈ ನಡುವೆ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಖ್ಯಾತ ಪಾಕಿಸ್ತಾನಿ ಸ್ನೂಕರ್ ಆಟಗಾರ ಮರ ಕಡಿಯುವ ಯಂತ್ರ ಬಳಸಿ ಆತ್ಮಹತ್ಯೆ
ಏಕೆ ಇಷ್ಟು ಆಕ್ರೋಶ?
ಅಲ್ಜೇರಿಯನ್ ಮೂಲದ 17 ವರ್ಷದ ಹುಡುಗ ನಹೆಲ್ ಎಂಬಾತ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪೊಲೀಸರು ಹತ್ಯೆ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ಆತ ಕಾರ್ ಚಲಾಯಿಸುವ ವೇಳೆ ನಿಯಮ ಉಲ್ಲಂಘಿಸಿದ್ದಾಗ ಕಾರ್‌ನಿಂದ ಹೊರಕ್ಕೆ ಇಳಿಸಲು ಪ್ರಯತ್ನಿಸಿದ್ದರು. ಫ್ರಾನ್ಸ್‌ನಲ್ಲಿ ವಾಹನ ಚಲಾಯಿಸಲು ಪರವಾನಗಿ ಹೊಂದುವಷ್ಟು ಆತನಿಗೆ ವಯಸ್ಸಾಗಿರಲಿಲ್ಲ. ಸಂಚಾರ ದೀಪದ ಅಡಿ ಮರ್ಸಿಡಿಸ್ ಕಾರು ನಿಲ್ಲಿಸಬೇಕಿತ್ತು. ಕಾರು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಬಂದೂಕು ತೋರಿಸಿದರೂ ಚಾಲಕ ಕಾರು ನಿಲ್ಲಿಸಿ ಇಳಿಯಲಿಲ್ಲ. ಇದರಿಂದ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ಚಾಲಕನ ಕೈ ಹಾಗೂ ಎದೆಗೆ ಹೊಕ್ಕಿದೆ. ಆತನಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದು ಸಫಲವಾಗಿರಲಿಲ್ಲ.
ಫ್ರಾನ್ಸ್‌ನಲ್ಲಿ 2017ರಲ್ಲಿ ಇಲ್ಲಿನ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು 5 ಗಂಭೀರ ಬಗೆಯ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸರು ವಾಹನ ಸವಾರರ ಮೇಲೆ ಗುಂಡು ಹಾರಿಸುವ ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಜನರ ವಿರೋಧವಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.