Tag: Traffic rules

  • ನನ್ನಿಷ್ಟ ನನ್ನ ಗಾಡಿ, ದಂಡ ಕಟ್ಟಲ್ಲ, ನೀವ್ಯಾರು ಕೇಳೋಕೆ – ಟ್ರಾಫಿಕ್ ಪೊಲೀಸರೊಂದಿಗೆ ಮಹಿಳೆಯ ಹೆಲ್ಮೆಟ್ ಕಿರಿಕ್

    ನನ್ನಿಷ್ಟ ನನ್ನ ಗಾಡಿ, ದಂಡ ಕಟ್ಟಲ್ಲ, ನೀವ್ಯಾರು ಕೇಳೋಕೆ – ಟ್ರಾಫಿಕ್ ಪೊಲೀಸರೊಂದಿಗೆ ಮಹಿಳೆಯ ಹೆಲ್ಮೆಟ್ ಕಿರಿಕ್

    ಬೆಂಗಳೂರು: ಹೆಲ್ಮೆಟ್ ಧರಿಸದಕ್ಕೆ ಸ್ಕೂಟಿ ತಡೆದ ಟ್ರಾಫಿಕ್ ಪೊಲೀಸರಿಗೆ ಮಹಿಳೆಯೊಬ್ಬರು ಅವಾಜ್ ಹಾಕಿರುವ ಘಟನೆ ಬೆಂಗಳೂರಿನ (Bengaluru) ಮಾಗಡಿ ರಸ್ತೆ ಸಂಚಾರಿ ಠಾಣೆಯ ಮುಂಭಾಗ ನಡೆದಿದೆ.

    ಮಾಗಡಿ ರೋಡ್‌ನಲ್ಲಿ (Magadi Road) ಸ್ಕೂಟಿ ಸವಾರೆ, ತನ್ನ ಸ್ನೇಹಿತೆ ಜೊತೆ ಬರುತ್ತಿದ್ದರು. ಈ ವೇಳೆ ಸ್ಕೂಟಿ ಸವಾರೆ ಹೆಲ್ಮೆಟ್ ಹಾಕಿದ್ರೆ, ಹಿಂದೆ ಕುಳಿತಿದ್ದ ಸ್ನೇಹಿತೆ ಹೆಲ್ಮೆಟ್ ಹಾಕಿರಲಿಲ್ಲ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಸ್ಕೂಟಿ ಅಡ್ಡಗಟ್ಟಿ, ದಂಡ ಕಟ್ಟುವಂತೆ ಹೇಳಿದ್ದಾರೆ. ಇದನ್ನೂ ಓದಿ: ಮದ್ವೆಗೆ ಹುಡ್ಗಿ ನೋಡಲು ಹೋಗಿದ್ದ ಯುವಕ – ಇಷ್ಟವಿಲ್ಲ ಅಂದಿದ್ದಕ್ಕೆ ಹುಡುಗಿ ತಲೆಗೆ ಗುಂಡಿಟ್ಟ..!

    ಆಗ ನಾನು ಫೈನ್ ಕಟ್ಟಲ್ಲ. ನನ್ನಿಷ್ಟ ನನ್ನ ಗಾಡಿ, ನೀವ್ಯಾರು ಕೇಳೋಕೆ ಎಂದು ಟ್ರಾಫಿಕ್ ಪೊಲೀಸರೊಂದಿಗೆ (Traffic Police) ಮಹಿಳೆ ಗಲಾಟೆ ಮಾಡಿದ್ದಾರೆ. ಫೈನ್ ಚೆಕ್ ಮಾಡಿದ ಪೊಲೀಸರಿಗೆ 15,000 ರೂ. ದಂಡ ಇದೆ ಎಂದು ಗೊತ್ತಾಗಿದೆ. ಇದನ್ನೂ ಓದಿ: ಪಾಕ್‌ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್‌

    ಈ ವೇಳೆ 500 ರೂ. ದಂಡ ಕಟ್ಟುವಂತೆ ಪೊಲೀಸರು ಗಾಡಿ ಹಿಡಿದು ನಿಲ್ಲಿಸಿದ್ದರು. ಆದರೆ ಮಹಿಳೆ ಗಲಾಟೆ ಮಾಡಿ, ಗಾಡಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಸದ್ಯ ಮಹಿಳೆ ವಿರುದ್ಧ ಮಾಗಡಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ರಹಿತ ಚಾಲನೆ ದಂಡ ವಿಧಿಸಿರುವ ಬಗ್ಗೆ ಮಾಹಿತಿ ದೊರೆತಿದೆ.

  • ಕಾರಿನ ಸನ್‌ರೂಫ್ ತೆಗೆದು ದಂಪತಿಯಿಂದ ಹುಚ್ಚಾಟ – ದಂಡ ವಿಧಿಸಿ, ಎಚ್ಚರಿಸಿದ ಪೊಲೀಸರು

    ಕಾರಿನ ಸನ್‌ರೂಫ್ ತೆಗೆದು ದಂಪತಿಯಿಂದ ಹುಚ್ಚಾಟ – ದಂಡ ವಿಧಿಸಿ, ಎಚ್ಚರಿಸಿದ ಪೊಲೀಸರು

    ಬೆಂಗಳೂರು: ಕಾರಿನಲ್ಲಿ ಹೋಗುತ್ತಿರುವಾಗ ಸನ್‌ರೂಫ್ (Sun Roof) ತೆಗೆದು ದಂಪತಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಗರದ ಕೋರಮಂಗಲದಲ್ಲಿ (Koramangala) ನಡೆದಿದೆ.ಇದನ್ನೂ ಓದಿ: ಜೈಲಿನಲ್ಲಿ ನಿತ್ಯ ಒಂದೊಂದು ಸೌಲಭ್ಯ ನೀಡುವಂತೆ ಹರ್ಷ ಕೊಲೆ ಆರೋಪಿಗಳು ಕಿರಿಕ್‌

    ಮಂಗಳವಾರ ರಾತ್ರಿ ದಂಪತಿ ಊಟ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನ ಸನ್‌ರೂಪ್ ತೆಗೆದು ರೊಮ್ಯಾನ್ಸ್ ಮಾಡಿದ್ದು, ದಂಪತಿಯ ವರ್ತನೆಯನ್ನು ವಾಹನ ಸವಾರರು ವಿಡಿಯೋ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

    ಇದನ್ನು ಕಂಡ ಹಲಸೂರು ಪೊಲೀಸರು (Halsuru Police) ಕಾರಿನ ನಂಬರ್ ಆಧಾರಿಸಿ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ. ಅಪಾಯಕಾರಿಯಾಗಿ ಕಾರು ಚಲಾಯಿಸಿದ್ದಕ್ಕೆ 1,000 ರೂ. ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 500 ರೂ. ದಂಡ ವಿಧಿಸಿದ್ದಾರೆ ಹಾಗೂ ಮುಂದೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಮಳೆ – ಮೈದುಂಬಿ ಹರಿಯುತ್ತಿರುವ ಭೀಮಾ ನದಿ

  • ಕುಡಿದ ಮತ್ತಲ್ಲಿ ಒನ್‌ವೇಗೆ ನುಗ್ಗಿದ ಕಾರಿನ ಚಾಲಕ – ಬ್ಯಾರಿಕೇಡ್‌ಗೆ ಗುದ್ದಿ ಪೊಲೀಸರಿಗೆ ಗಾಯ

    ಕುಡಿದ ಮತ್ತಲ್ಲಿ ಒನ್‌ವೇಗೆ ನುಗ್ಗಿದ ಕಾರಿನ ಚಾಲಕ – ಬ್ಯಾರಿಕೇಡ್‌ಗೆ ಗುದ್ದಿ ಪೊಲೀಸರಿಗೆ ಗಾಯ

    – ವಿಂಡೋ ಓಪನ್ ಮಾಡದೇ ಪುಂಡಾಟ, ಗಾಜು ಒಡೆದು ವಶಕ್ಕೆ ಪಡೆದ ಪೊಲೀಸರು

    ಬೆಂಗಳೂರು: ಕುಡಿದ ಮತ್ತಲ್ಲಿ ಚಾಲಕ ಕಾರನ್ನು ಒನ್‌ವೇಗೆ ನುಗ್ಗಿಸಿದ ಪರಿಣಾಮ ಎದುರಿಗಿದ್ದ ಬ್ಯಾರಿಕೇಡ್‌ಗೆ ಗುದ್ದಿ, ಪೊಲೀಸ್ ಕಾಲಿಗೆ ಗಾಯ ಮಾಡಿರುವ ಘಟನೆ ಕೋರಮಂಗಲದ (Koramangala) ಜ್ಯೋತಿ ನಿವಾಸ ಕಾಲೇಜು ಬಳಿ ನಡೆದಿದೆ.

    ಕಾರು ಚಾಲಕನನ್ನು ನಂದಾಕೃಷ್ಣ ಎಂದು ಗುರುತಿಸಲಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ.ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಭಾರೀ ಮಳೆ – ಗುಡ್ಡ ಕುಸಿತ, ರಸ್ತೆಗುರುಳಿದ ಬೃಹತ್ ಬಂಡೆ

    ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಚಾಲಕ ಕಾರನ್ನು ಓನ್‌ವೇನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ. ಆತನನ್ನು ಕಂಡ ಪೊಲೀಸರು ಅಡ್ಡ ಹಾಕಿದ್ದು, ಈ ವೇಳೆ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾನೆ. ಪರಿಣಾಮ ಮುಂದೆ ಹೋಗಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದು, ಪೊಲೀಸ್ ಸಿಬ್ಬಂದಿ ಕಾಲಿಗೆ ಗಾಯವಾಗಿದೆ. ಅಲ್ಲದೇ ಎದುರಿಗೆ ನಿಂತಿದ್ದ ಕಾರಿಗೂ ಡ್ಯಾಮೇಜ್ ಆಗಿದೆ.

    ಇಷ್ಟೆಲ್ಲಾ ಆದರೂ ಕಾರಿನಿಂದ ಕೆಳಗಿಳಿಯದೇ, ವಿಂಡೋ ಓಪನ್ ಮಾಡದೇ ಪುಂಡಾಟ ಮಾಡಿದ್ದಾನೆ. ಕೊನೆಗೆ ಕಾರಿನ ಗಾಜು ಒಡೆದು ಚಾಲಕನನ್ನು ಕೋರಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸದ್ಯ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಧಾರಾಕಾರ ಮಳೆ – ಹೇಮಾವತಿ ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ

     

  • ಸಿಗ್ನಲ್ ಜಂಪ್ ಮಾಡಲು ಹೋಗಿ ರಸ್ತೆ ಮಧ್ಯೆ ಪ್ರಾಣ ಬಿಟ್ಟ ಬೈಕ್ ಸವಾರ

    ಸಿಗ್ನಲ್ ಜಂಪ್ ಮಾಡಲು ಹೋಗಿ ರಸ್ತೆ ಮಧ್ಯೆ ಪ್ರಾಣ ಬಿಟ್ಟ ಬೈಕ್ ಸವಾರ

    ದಾವಣಗೆರೆ: ಬೈಕ್ ಸವಾರನೊಬ್ಬ ಸಿಗ್ನಲ್ ಜಂಪ್ ಮಾಡಲು ಹೋಗಿ ಎದುರಿಗೆ ಬಂದ ಟಾಟಾ ಏಸ್‍ಗೆ ಡಿಕ್ಕಿ (Accident)‌ ಹೊಡೆದು ಸಾವಿಗೀಡಾದ ಘಟನೆ ದಾವಣಗೆರೆಯ (Davanagere) ಡಿಸಿ ಆಫೀಸ್ ಸರ್ಕಲ್‍ನಲ್ಲಿ ನಡೆದಿದೆ.

    ಸಾವಿಗೀಡಾದ ಯುವಕನನ್ನು ಮೈಕಲ್ ಕುಮಾರ್ (24) ಎಂದು ಗುರುತಿಸಲಾಗಿದೆ. ಸಿಗ್ನಲ್ ಬಿಟ್ಟ ಬಳಿಕ ಡಿಸಿ ಕಚೇರಿ ಕಡೆಯಿಂದ ಟಾಟಾ ಏಸ್ ವಾಹನ ಹೊರಟಿದೆ. ಈ ವೇಳೆ ರೆಡ್ ಸಿಗ್ನಲ್ ಇದ್ದರೂ ಬೈಕ್ ಸವಾರ ಅಜಾಗರೂಕತೆಯಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ. ಪರಿಣಾಮ ಬೈಕ್ ಟಾಟಾ ಏಸ್‍ನ ಮಧ್ಯ ಭಾಗಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವೀಗೀಡಾಗಿದ್ದಾನೆ. ಇದನ್ನೂ ಓದಿ: ಚೀತಾಗಳಿಗೆ ಕುಡಿಯಲು ನೀರು ಕೊಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಕೆಲಸದಿಂದ ವಜಾ!

    ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹಾಸ್ಟೆಲ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

  • ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ 26 ಸಾವಿರ ರೂ. ದಂಡ

    ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ 26 ಸಾವಿರ ರೂ. ದಂಡ

    ವಿಜಯಪುರ: ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ, ಮಾಲೀಕನಿಗೆ 26 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

    ಬೈಕ್ ಮಾಲೀಕನನ್ನು ಶಹಾಪುರ್ ಅಗಸಿ ನಿವಾಸಿ ಹುಸೇನ್‌ಸಾಬ್ ರಾಂಪುರ ಎಂದು ಗುರುತಿಸಲಾಗಿದೆ. ಅಪ್ರಾಪ್ತ ಜಿಲ್ಲೆಯ ರೈಲ್ವೆ ನಿಲ್ದಾಣದ ಬಳಿ ಹುಸೇನ್‌ಸಾಬ್ ಬೈಕ್‌ನ್ನು ಚಲಾಯಿಸುತ್ತಿದ್ದ.ಇದನ್ನೂ ಓದಿ: Karnataka Budget 2025 | ಕೊಡಗು ಜಿಲ್ಲೆಯ ಆಸ್ಪತ್ರೆಗಳ ಅಭಿವೃದ್ಧಿಗೆ ಸಿಎಂ ಆದ್ಯತೆ

    ಅಪ್ರಾಪ್ತ ಬೈಕ್ ಚಲಾಯಿಸುತ್ತಿರುವುದನ್ನು ರೈಲ್ವೇ ಪಿಎಸ್‌ಐ ಶಿವನಾಂದ ಅರೇನಾಡ ಗಮನಿಸಿದ್ದರು. ಬೈಕ್ ಚಲಾಯಿಸುತ್ತಿದ್ದ ಅಪ್ರಾಪ್ತನ ಬಗ್ಗೆ ಪಿಎಸ್‌ಐ ಮಾಹಿತಿ ಕಲೆಹಾಕಿದ್ದು, 2024ರ ನವೆಂಬರ್ 16ರಂದು ಸಂಚಾರಿ ನಿಯಮ ಉಲ್ಲಂಘನೆ ಅಡಿ ಹುಸೇನ್‌ಸಾಬ್ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ 4ನೇ ಹೆಚ್ಚುವರಿ ದಿವಾಣಿ ಮತ್ತು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು.

    ವಿಚಾರಣೆ ನಡೆಸಿದ ಕೋರ್ಟ್ ಅಪ್ರಾಪ್ತನಿಗೆ ಬೈಕ್ ನೀಡಿದ್ದಕ್ಕಾಗಿ ಮಾಲೀಕನಿಗೆ ದಂಡ ವಿಧಿಸಲಾಗಿದ್ದು, ಬರೋಬ್ಬರಿ 26,500 ರೂ. ದಂಡ ಪಾವತಿಸುವಂತೆ ನ್ಯಾಯಾಧೀಶ ಚಂದ್ರಕಾಂತ್ ಅವರು ಆದೇಶಿಸಿದ್ದಾರೆ.ಇದನ್ನೂ ಓದಿ: ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್

     

  • ಬೆಂಗಳೂರು | ಚಲಿಸುತ್ತಿದ್ದ ಬೈಕ್‌ನಲ್ಲಿ ಪ್ರೇಯಸಿ ಜೊತೆ ರೊಮ್ಯಾನ್ಸ್ – ರೋಡ್‌ ರೋಮಿಯೋ ಅರೆಸ್ಟ್‌!

    ಬೆಂಗಳೂರು | ಚಲಿಸುತ್ತಿದ್ದ ಬೈಕ್‌ನಲ್ಲಿ ಪ್ರೇಯಸಿ ಜೊತೆ ರೊಮ್ಯಾನ್ಸ್ – ರೋಡ್‌ ರೋಮಿಯೋ ಅರೆಸ್ಟ್‌!

    ಬೆಂಗಳೂರು: ಬೆಂಗಳೂರಿನ (Bengaluru) ಸರ್ಜಾಪುರ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ (Bike) ಮೇಲೆ ಸಿನಿಮಾ ಸ್ಟೈಲ್‍ನಲ್ಲಿ ಪ್ರೇಯಸಿ ಜೊತೆ ರೊಮ್ಯಾನ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ಪುಂಡ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಬೆಳ್ಳಂದೂರು ನಿವಾಸಿ ಅಚ್ಚುತ್ ಕುಮಾರ್ ಎಂದು ಗುರುತಿಸಲಾಗಿದೆ. ಯುವಕ ಬುಲೆಟ್ ಬೈಕ್‍ನ (Bike) ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಉಲ್ಟಾ ಕೂರಿಸಿಕೊಂಡು ಹಾಡಹಗಲೇ ಹಗ್ಗಿಂಗ್, ಕಿಸ್ಸಿಂಗ್ ಮಾಡುತ್ತಾ ನಡುರಸ್ತೆಯಲ್ಲಿ ಬೈಕ್ ಚಲಾಯಿಸಿದ್ದ.

    ತಮಿಳುನಾಡಿನ ನಂಬರ್ ಪ್ಲೇಟ್ ಹೊಂದಿರುವ ಬೈಕ್ ಇದಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಕರ್ನಾಟಕ ಪ್ರೋಟೋಫೊಲಿಯೋ ಎಂಬ ಪೇಜ್‍ನಿಂದ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗಿತ್ತು.‌

    ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರು | ಚಲಿಸುತ್ತಿದ್ದ ಬೈಕ್ ಮೇಲೆ ಸಿನಿಮಾ ಸ್ಟೈಲ್‍ನಲ್ಲಿ ರೊಮ್ಯಾನ್ಸ್ – ವಿಡಿಯೋ ವೈರಲ್

    ಬೆಂಗಳೂರು | ಚಲಿಸುತ್ತಿದ್ದ ಬೈಕ್ ಮೇಲೆ ಸಿನಿಮಾ ಸ್ಟೈಲ್‍ನಲ್ಲಿ ರೊಮ್ಯಾನ್ಸ್ – ವಿಡಿಯೋ ವೈರಲ್

    ಬೆಂಗಳೂರು: ಚಲಿಸುತ್ತಿದ್ದ ಬೈಕ್ ಮೇಲೆ ಸಿನಿಮಾ ಸ್ಟೈಲ್‍ನಲ್ಲಿ ಪ್ರೇಮಿಗಳು ರೋಮ್ಯಾನ್ಸ್ ಮಾಡುತ್ತಾ ಹುಚ್ಚಾಟ ಮೆರೆದ ಘಟನೆ ಬೆಂಗಳೂರಿನ (Bengaluru) ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.

    ಬುಲೆಟ್ ಬೈಕ್‍ನ (Bike) ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಉಲ್ಟಾ ಕೂರಿಸಿಕೊಂಡು ಹಾಡಹಗಲೇ ಹಗ್ಗಿಂಗ್, ಕಿಸ್ಸಿಂಗ್ ಮಾಡುತ್ತಾ ನಡುರಸ್ತೆಯಲ್ಲಿ ಯುವಕ ಬೈಕ್ ಚಲಾಯಿಸಿದ್ದಾನೆ. ತಮಿಳುನಾಡಿನ ನಂಬರ್ ಪ್ಲೇಟ್ ಹೊಂದಿರುವ ಬೈಕ್ ಇದಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ಕರ್ನಾಟಕ ಪ್ರೋಟೋಫೊಲಿಯೋ ಎಂಬ ಪೇಜ್‍ನಿಂದ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ವಿಡಿಯೋ ಅಧಾರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಡ್ರೈವಿಂಗ್ ಬಗ್ಗೆ ಚಾಲಕರಿಗೆ ಸರಿಯಾಗಿ ತರಬೇತಿ ಕೊಡಿ – ಸಾರ್ವಜನಿಕರಿಂದ ಬಿಎಂಟಿಸಿಗೆ ದೂರು

    ಡ್ರೈವಿಂಗ್ ಬಗ್ಗೆ ಚಾಲಕರಿಗೆ ಸರಿಯಾಗಿ ತರಬೇತಿ ಕೊಡಿ – ಸಾರ್ವಜನಿಕರಿಂದ ಬಿಎಂಟಿಸಿಗೆ ದೂರು

    ಬೆಂಗಳೂರು: ಬಿಎಂಟಿಸಿ ಚಾಲಕರಿಗೆ (BMTC Drivers) ಡ್ರೈವಿಂಗ್‌ ಬಗ್ಗೆ ಸರಿಯಾಗಿ ತರಬೇತಿ ಕೊಡಿ ಅಂತ ಸಾರ್ವಜನಿಕರು ಬಿಎಂಟಿಸಿಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ.

    ಬಿಎಂಟಿಸಿ (BMTC( ಚಾಲಕರಿಂದ ರಾಂಗ್ ಸೈಡ್ ಡ್ರೈವಿಂಗ್, ಸಿಗ್ನಲ್ ಜಂಪ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಡಿಯೋ ಕಳುಹಿಸಿ ಬಿಎಂಟಿಸಿ ಹಾಗೂ ಸಾರಿಗೆ ಸಚಿವರನ್ನ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಲಬುರಗಿ | ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹಿಂದೂ ಕಾರ್ಯಕರ್ತರಿಂದ ಸಿದ್ಧತೆ

    ಹೆಬ್ಬಾಳ ಮತ್ತು ಕೆ.ಆರ್ ಪುರಂ ರಸ್ತೆಯಲ್ಲಿ ಬಿಎಂಟಿಸಿ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಿದೆ. ಎರಡೂ ಕಡೆ ರ‍್ಯಾಶ್‌ ಡ್ರೈವಿಂಗ್‌ ಬಗ್ಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಬಿಎಂಟಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: 300 ಮಕ್ಕಳ ಮೇಲೆ ವೈದ್ಯನಿಂದ ರೇಪ್ – ನಾನು `ಶಿಶುಕಾಮಿ’ ಎಂದು ತಪ್ಪೊಪ್ಪಿಕೊಂಡ ಆರೋಪಿ

    ದೂರಿನ ದೃಶ್ಯ -1
    ಹೆಬ್ಬಾಳದ ಭದ್ರಪ್ಪ ವೃತ್ತದಿಂದ ಬರುವ ಬಿಎಂಟಿಸಿ ಬಸ್‌ಗಳು ಯೂ-ಟರ್ನ್ ತೆಗೆದುಕೊಳ್ಳಬೇಕಾಗುತ್ತದೆ. ಆದ್ರೆ ಬಿಎಂಟಿಸಿ ಚಾಲಕರು ಮೊದಲು ಸರ್‌ ರಸ್ತೆಗೆ ಬರುತ್ತಾರೆ ಇದರಿಂದ ವಾಹನಗಳು ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.

    ದೃಶ್ಯ – 2
    ಬಿಎಂಟಿಸಿ ಚಾಲಕ ಕೆ.ಆರ್ ಪುರಂ ಬಳಿ ಸಿಗ್ನಲ್ ಜಂಪ್ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆಗಳೂ ಹೆಚ್ಚಾಗಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

  • ಟ್ರಾಫಿಕ್ಸ್ ರೂಲ್ಸ್ ಬ್ರೇಕ್; 311 ಕೇಸ್, 1.61 ಲಕ್ಷ ಫೈನ್ – ಸ್ಕೂಟಿ ಬೆಲೆಗಿಂತ ದುಪ್ಪಟ್ಟು ದಂಡ ಕಟ್ಟಲು ನೋಟಿಸ್

    ಟ್ರಾಫಿಕ್ಸ್ ರೂಲ್ಸ್ ಬ್ರೇಕ್; 311 ಕೇಸ್, 1.61 ಲಕ್ಷ ಫೈನ್ – ಸ್ಕೂಟಿ ಬೆಲೆಗಿಂತ ದುಪ್ಪಟ್ಟು ದಂಡ ಕಟ್ಟಲು ನೋಟಿಸ್

    ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬೈಕ್ ಸೀಜ್ ಮಾಡಿ, ಲಕ್ಷಾಂತರ ರೂ. ದಂಡ ಕಟ್ಟುವಂತೆ ಸಿಟಿ ಮಾರ್ಕೆಟ್ ಪೊಲೀಸರು (City Market Police) ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

    KA05 ZX1344 ನಂಬರ್‌ನ ಸ್ಕೂಟರ್‌ನಿಂದ ಹೆಲ್ಮೆಟ್, ಸಿಗ್ನಲ್ ಜಂಪ್ ಹೀಗೆ ಹಲವು ರೀತಿಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗಿತ್ತು. ಕಳೆದ ವರ್ಷ 1,05,500 ರೂ. ದಂಡ ಹಾಕಲಾಗಿತ್ತು. ಈ ವರ್ಷ 1,61,000 ರೂ. ದಂಡ ಏರಿಕೆಯಾಗಿದೆ.ಇದನ್ನೂ ಓದಿ: ಚಳಿಗಾಲದಲ್ಲೂ ಸುಡುತ್ತಿದೆ ಬಿಸಿಲು – ರಾಜ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ಉಷ್ಣಾಂಶ

    ಆದರೂ, ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ವ್ಯಕ್ತಿ ಸ್ಕೂಟರ್ ಚಲಾಯಿಸುತ್ತಿದ್ದ. ಈ ಕುರಿತು ವ್ಯಕ್ತಿಯೊಬ್ಬರು ಸ್ಕೂಟರ್ ಪೋಟೋ ತೆಗೆದು, ಬೆಂಗಳೂರಿನಲ್ಲಿ ಸ್ಕೂಟರ್ ಬೆಲೆಗಿಂತ ದುಪ್ಪಟ್ಟು ಟ್ರಾಫಿಕ್ ಫೈನ್ ವಿಧಿಸಿಕೊಂಡಿದ್ದ ವ್ಯಕ್ತಿ ಎಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದರು.

    ಇದಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಯಾಕೆ ಇನ್ನೂ ಸವಾರನ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೊಲೀಸರು ವೈರಲ್ ಆಗುತ್ತಿದ್ದ ಸ್ಕೂಟರ್ ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ.

    ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿಗೆ ದಂಡದ ಮೊತ್ತ ಕಟ್ಟುವಂತೆ ನೋಟಿಸ್ ನೀಡಿ, ಸ್ಕೂಟರ್ ಸೀಜ್ ಮಾಡಿದ್ದಾರೆ. ಸ್ಕೂಟರ್ ಮೇಲೆ 2023ರಿಂದ ಈವರೆಗೆ ಒಟ್ಟು 311 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿವೆ.ಇದನ್ನೂ ಓದಿ: ಹೆಚ್ಚಾಯ್ತು ಬೇಡಿಕೆ- ಸಿನಿಮಾ ಆಫರ್‌ಗೆ ಡೋಂಟ್ ಕೇರ್ ಎಂದ Bigg Boss ವಿನ್ನರ್ ಹನುಮಂತ

  • ರಸ್ತೆಯಲ್ಲಿ ಸಂಚರಿಸೋದಕ್ಕೂ ಸುಂಕ ಕಟ್ಟಬೇಕೆ? – ಟ್ರಾಫಿಕ್‌ ನಿಯಂತ್ರಣಕ್ಕೆ ಹೊಸ ಸೂತ್ರ – ಏನಿದು ದೆಹಲಿ ಸರ್ಕಾರದ ಪ್ಲ್ಯಾನ್‌?

    ರಸ್ತೆಯಲ್ಲಿ ಸಂಚರಿಸೋದಕ್ಕೂ ಸುಂಕ ಕಟ್ಟಬೇಕೆ? – ಟ್ರಾಫಿಕ್‌ ನಿಯಂತ್ರಣಕ್ಕೆ ಹೊಸ ಸೂತ್ರ – ಏನಿದು ದೆಹಲಿ ಸರ್ಕಾರದ ಪ್ಲ್ಯಾನ್‌?

    ಭಾರತದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ನಂತರ, ಒಂದೇ ಭಾಷೆ ಮಾತನಾಡುವವರೆಲ್ಲರೂ ಒಂದೇ ರಾಜ್ಯದವರಾದರು. ಆದರೂ ಅವರೆಲ್ಲರ ಮಾತಾಡುವ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ಭಾಷೆ ಮಾತ್ರವಲ್ಲ ಉಡುಗೆ ತೊಡುಗೆಗಳು ಬೇರೆಯಾಗಿವೆ. ಊಟ, ಅಭಿರುಚಿ, ನಡವಳಿಕೆ ಹೀಗೆ ಎಲ್ಲವೂ ಭಿನ್ನ. ಹೀಗೆಯೇ ವಾಹನ ಪ್ರಪಂಚವೂ ಇದರಿಂದ ಹೊರತಾಗಿಲ್ಲ. ವಾಹನ ಪ್ರಪಂಚದಲ್ಲಿ ಬಗೆಬಗೆಯ ಕಂಪನಿಯ ಕಾರುಗಳು, ಬೈಕುಗಳು, ಜಿಪ್ಸಿಗಳು ಹೀಗೆ ಬೇರೆ ಬೇರೆ ಕೆಲಸಗಳಿಗೆ ಭಿನ್ನ ಭಿನ್ನ ವಾಹನಗಳು ಮಾರುಕಟ್ಟೆಯಲ್ಲಿವೆ. ಆಯ್ಕೆಗಳು ಗ್ರಾಹಕನ ಕೈಯಲ್ಲಿದೆ. ಹೀಗಾಗಿಯೇ ಭಾರತದ ಕೆಲವು ನಗರಗಳಲ್ಲಿ ಟ್ರಾಫಿಕ್‌ ಸಮಸ್ಯೆ (Traffic Problem) ಹೆಚ್ಚಾಗಿದೆ. ಏಕಕಾಲಕ್ಕೆ ರಸ್ತೆಗಿಳಿಯುವ ಸಾವಿರಾರು ವಾಹನಗಳಿಂದ ಶಬ್ಧ ಮಾಲಿನ್ಯ, ವಾಯು ಮಾಲಿನ ಉಂಟಾಗುತ್ತಿರುವುದು ಇದಕ್ಕೆ ನಿರ್ದಶನ.

    ಹೀಗೆ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿರುವ ಟಾಪ್‌-10 ನಗರಗಳಲ್ಲಿ ರಾಷ್ಟ್ರ ರಾಜಧಾನಿಯೂ ಪ್ರಮುಖವಾಗಿದೆ. ಆದ್ರೆ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ನಗರದಿಂದ ಹೊರಗು-ಒಳಗಿನ ಸಂಪರ್ಕ ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಹೊಸ ನಿಯಮ ಜಾರಿಗೆ ತರುವುದಕ್ಕೆ ಮುಂದಾಗಿದೆ. ಅದೇನೆಂದರೆ ಸಂಚಾರದಟ್ಟಣೆ ಮಿತಿಮೀರಿದ ಸಮಯದಲ್ಲಿ ನಿರ್ದಿಷ್ಟ ರಸ್ತೆ ಬಳಸುವುದಕ್ಕಾಗಿ ವಾಹನಗಳಿಗೆ ಶುಲ್ಕ ವಿಧಿಸುವುದು. ಈಗಾಗಲೇ ನ್ಯೂಯಾರ್ಕ್‌ (New York) ಸೇರಿದಂತೆ ಅನೇಕ ದೇಶದ ಪ್ರಮುಖ ನಗರಗಳಲ್ಲಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯನ್ನ ಭಾರತಕ್ಕೂ ಪರಿಚಯಿಸುವ ಯೋಜನಾ ಪ್ರಕ್ರಿಯೆ ನಡೆಯುತ್ತಿದೆ. ಇದರ ಮೊದಲ ಹಂತವಾಗಿ ದೆಹಲಿಯಲ್ಲಿ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

    ದಟ್ಟಣೆ ಬೆಲೆ ನಿಗದಿ ಅಂದ್ರೆ ಏನು?
    ʻದಟ್ಟಣೆ ಬೆಲೆ ನಿಗದಿʼ (Congestion Pricing) ಅನ್ನೋದು ಎಲೆಕ್ಟ್ರಾನಿಕ್‌ ಟೋಲಿಂಗ್‌ ವ್ಯವಸ್ಥೆಯಾಗಿದೆ. ದಟ್ಟಣೆ ಸಮಯದಲ್ಲಿ ನಿರ್ದಿಷ್ಟ ರಸ್ತೆಯನ್ನು ಬಳಸಲು ಶುಲ್ಕ ವಿಧಿಸಲಾಗುತ್ತದೆ. ಟ್ರಾಫಿಕ್‌ ದಟ್ಟಣೆ ಶುರುವಾಗುವ ಪಾಯಿಂಟ್‌ನಿಂದ ಈ ರಸ್ತೆಯಲ್ಲಿ ಸಂಚರಿಸಲು ಇ-ಝಡ್‌ಪಾಸ್‌ಗಳ ಮೂಲಕ ಸುಂಕ ಸಂಗ್ರಹಿಸಲಾಗುತ್ತದೆ. ಪಾಸ್‌ ಇಲ್ಲದ ಚಾಲಕರು ಇ-ಮೇಲ್‌ ಮೂಲಕ ಬಿಲ್‌ ಸ್ವೀಕರಿಸಿ ಪಾವತಿ ಮಾಡಬಹುದು. ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ ನಗರದಲ್ಲಿ ಮೊದಲು ಟೋಲ್‌ ಶುಲ್ಕ ಹೆಚ್ಚಾಗಿ ವಿಧಿಸುತ್ತಿದ್ದರಿಂದ ದಟ್ಟಣೆ ಬೆಲೆ ನಿಗದಿಗೆ ವಿನಾಯ್ತಿ ನೀಡಲಾಗಿತ್ತು. ಆದ್ರೆ ಕಳೆದ ನವೆಂಬರ್‌ ತಿಂಗಳಲ್ಲಿ ಟೋಲ್‌ದರದಲ್ಲಿ ಕೊಂಚ ಕಡಿತಗೊಳಿಸಿ ದಟ್ಟಣೆ ಬೆಲೆ ನಿಗದಿ ಯೋಜನೆಯನ್ನ ಮರುಪರಿಚಯಿಸಲಾಗಿದೆ ಎಂದು ವರದಿಗಳು ಹೇಳಿವೆ. ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮಾತ್ರವಲ್ಲದೇ, ಉತ್ತಮ ಪರಿಸರ ರೂಪಿಸುವುದು, ಸುಗಮ ಸಂಚಾರ ಕಲ್ಪಿಸುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ.

    2023ರಲ್ಲಿ ಮ್ಯಾನ್‌ಹ್ಯಾಟನ್‌ ನಗರವು ವಿಶ್ವದಲ್ಲೇ ಅತಿಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ನಗರವಾಗಿತ್ತು. ಹಾಗಾಗಿ ಈ ಯೋಜನೆಯನ್ನ ಪರಿಚಯಿಸಲಾಯಿತು. ಸದ್ಯ ಮ್ಯಾನ್‌ಹ್ಯಾಟನ್‌ನಲ್ಲಿರುವ ಪ್ರಮುಖ ವ್ಯಾಪಾರ ಕೇಂದ್ರವಿರುವ ನಗರ ಪ್ರವೇಶಿಸಬೇಕೆಂದೆರೆ ಚಾಲಕರು ಗರಿಷ್ಠ 9 ಡಾಲರ್‌ (775 ರೂ.) ಪಾವತಿಸಬೇಕು.

    15 ಲಕ್ಷ ಕೋಟಿ ಆದಾಯದ ಗುರಿ ಏಕೆ?
    ಇನ್ನೂ ಈ ಯೋಜನೆಯಿಂದ ನ್ಯೂಯಾರ್ಕ್‌ 2028ರ ವೇಳೆಗೆ 12 ಲಕ್ಷ ಕೋಟಿ ಹಾಗೂ 2031ರ ವೇಳೆಗೆ 15 ಲಕ್ಷ ಕೋಟಿ ರೂ. ಆದಾಯದ ಗುರಿಯನ್ನು ಹೊಂದಿದೆ. ಈ ಆದಾಯವನ್ನು ಬಸ್‌ ನಿಲ್ದಾಣ, ಸಬ್‌ವೇಗಳು, ರೈಲು ಮಾರ್ಗಗಳ ನವೀಕರಣಕ್ಕೆ ಬಳಸಲಾಗುತ್ತದೆ. ಅದಕ್ಕಾಗಿ ಮೋಟಾರ್‌ ಸೈಕಲ್‌ಗಳಿಗೂ ಪ್ರತಿದಿನಕ್ಕೆ 4.50 ಡಾಲರ್‌ (388 ರೂ.) ಶುಲ್ಕ ವಿಧಿಸಲಾಗುತ್ತಿದೆ. ಇನ್ನೂ ವಾರದ ಪ್ರಮುಖ ದಿನಗಳಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ಮತ್ತು ವಾರಾಂತ್ಯದ ಪ್ರಮುಖ ಸಮಯದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 9 ಗಂಟೆ ವರೆಗೆ ಸಂಚಾರಕ್ಕೆ ಅನುಮತಿ ಇರಲಿದೆ. ಟ್ಯಾಕ್ಸಿಗಳು, ಹಸಿರು ಕ್ಯಾಬ್‌ಗಳು ಮತ್ತು ಕಪ್ಪು ಕಾರುಗಳಿಗೆ ಪ್ರತಿ ಟ್ರಿಪ್‌ಗೆ ಶೇ.75 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ರಾತ್ರಿ ಸಮಯದಲ್ಲಿ ಕಪ್ಪು ಕಾರುಗಳು ಕಡಿಮೆ ಗೋಚರತೆಯಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕಾಗಿಯೇ ಕಪ್ಪು ಕಾರುಗಳಿಗೂ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

    ಇತರ ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದೆಯೇ?
    ಇಟಲಿ, ಸ್ವೀಡನ್‌, ಸಿಂಗಾಪುರ್‌, ಇಂಗ್ಲೆಂಡ್‌ (ಲಂಡನ್‌) ಸೇರಿದಂತೆ ಅನೇಕ ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದ್ದು, ಕಾರು ಹಾಗೂ ಬೈಕ್‌ಗಳಿಗೆ ಪ್ರತ್ಯೇಕ ಶುಲ್ಕವನ್ನು ವಿಧಿಸಲಾಗುತ್ತಿದೆ. ಭಾರತದ ರೂಪಾಯಿ ಪ್ರಕಾರ 800 ರೂ. ಗಳಿಂದ 1,200 ರೂ. ವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಕಾರುಗಳಿಗೆ ಪ್ರತಿ ಟ್ರಿಪ್‌ ಲೆಕ್ಕದಲ್ಲಿ ಹಾಗೂ ಬೈಕ್‌ಗಳಿಗೆ ದಿನದ ಲೆಕ್ಕದಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ಲಂಡನ್‌ನಲ್ಲಿ 2003ರಲ್ಲೇ ಈ ವ್ಯವಸ್ಥೆಯನ್ನ ಪರಿಚಯಿಸಲಾಗಿದೆ ಅನ್ನೋದು ವಿಶೇಷ.

    ದೆಹಲಿಯಲ್ಲಿ ಯಾವಾಗ ಜಾರಿ?
    ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ವಾಹನ ದಟ್ಟಣೆಯೂ ಒಂದು ಪ್ರಮುಖ ಕಾರಣವಾಗಿದೆ. ಹಾಗಾಗಿ ಈ ನಿಯಮ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಪ್ರಸ್ತಾವನೆ ಮಂಡಿಸಲಾಗಿದ್ದು, ದೆಹಲಿ ಗಡಿಗಳಲ್ಲಿ ಅನೇಕ ರಸ್ತೆಗಳನ್ನ ಗುರುತಿಸಲಾಗಿದೆ. 2018ರಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಅನಿಲ್‌ ಬೈಜಲ್‌ ಅವರೊಂದಿಗೂ ಈ ಪ್ರಸ್ತಾವನೆ ಬಗ್ಗೆ ಚರ್ಚಿಸಲಾಗಿತ್ತು. ಆಗ ಅವರು ನಿಯಮ ಅನುಷ್ಠಾನಕ್ಕೂ ಮುನ್ನ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡುವಂತೆ ಸೂಚಿಸಿದ್ದರು. ಇದೀಗ ಅದೇ ರೀತಿ ನಿಮಯ ಜಾರಿಗೊಳಿಸುವ ಚಿಂತನೆ ನಡೆಯುತ್ತಿದೆ. ಅದಕ್ಕಾಗಿ ಮೆಹ್ರೌಲಿ – ಗುರುಗ್ರಾಮ್‌ ಸೇರಿದಂತೆ 21 ರಸ್ತೆಗಳನ್ನು ಶುಲ್ಕ ಸಹಿತ ರಸ್ತೆಗಳನ್ನಾಗಿ ಮಾಡಲು ಚರ್ಚಿಸಲಾಗಿದೆ.

    ಕರ್ನಾಟಕದಲ್ಲಿ ಈಗಾಗಲೇ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಈ ಯೋಜನೆಯ ಅನುಷ್ಠಾನದ ಅಗತ್ಯವಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಬೆಂಗಳೂರು ನಗರಕ್ಕೆ ಅನ್ವಯವಾಗುವಂತೆ ಈ ಯೋಜನೆಯನ್ನು ಜಾರಿಗೊಳಿಸಬಹುದು ಅನ್ನೋದು ತಜ್ಞರ ಅಭಿಪ್ರಾಯ.