Tag: Traffic Rule

  • 643 ಬಾರಿ ನಿಯಮ ಉಲ್ಲಂಘಿಸಿ ದಾಖಲೆ ಫೈನ್ – ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಮೇಲೆ ಕ್ಯಾಮೆರಾ ಕಣ್ಣು

    643 ಬಾರಿ ನಿಯಮ ಉಲ್ಲಂಘಿಸಿ ದಾಖಲೆ ಫೈನ್ – ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಮೇಲೆ ಕ್ಯಾಮೆರಾ ಕಣ್ಣು

    ಬೆಂಗಳೂರು: ವ್ಯಕ್ತಿಯೊಬ್ಬರು ಟ್ರಾಫಿಕ್ ನಿಯಮ (Traffic Rule) ಪಾಲಿಸದೆ ಬರೋಬ್ಬರಿ 643 ಬಾರಿ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆ ದಾಖಲೆಯ ಫೈನ್ (Fine) ಬಿದ್ದಿದೆ. ಬರೋಬ್ಬರಿ 3.22 ಲಕ್ಷ ರೂ. ಫೈನ್ ಬಿದ್ದಿರೋ ಸ್ಕೂಟಿ (Scooty) ಮೇಲೆ ಇದೀಗ ಟ್ರಾಫಿಕ್ ಪೊಲೀಸರು ಕ್ಯಾಮೆರಾ ಕಣ್ಣಿಟ್ಟಿದ್ದಾರೆ.

    ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಗಂಗಾನಗರ, ಆರ್‌ಟಿ ನಗರ ಭಾಗದಲ್ಲಿ ಓಡಾಡಿದೆ. ಈ ಸ್ಕೂಟಿಯಲ್ಲಿ ಪ್ರಯಾಣಿಸಿದವರು ಹೆಲ್ಮೆಟ್ ಧರಿಸದೆ, ಸಿಗ್ನಲ್ ಜಂಪ್ ಸೇರಿದಂತೆ ಬರೋಬ್ಬರಿ 643 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: ಹೆಚ್ಚಾಗ್ತಿದೆ ಕೋವಿಡ್ ಉಪತಳಿ JN.1 ಭೀತಿ – ಕ್ರಿಸ್‌ಮಸ್, ಹೊಸವರ್ಷ ಸಂಭ್ರಮಕ್ಕೆ ಬೀಳುತ್ತಾ ಬ್ರೇಕ್?

    ಈ ಸ್ಕೂಟಿ ಬೆಲೆ 20-30 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಬಿದ್ದಿರುವ ದಂಡ ಬರೋಬ್ಬರಿ 3.22 ಲಕ್ಷ ರೂ. ಇದೀಗ ಪೊಲೀಸರ ಕಣ್ತಪ್ಪಿಸಿ ಓಡಾಡಬಹುದು ಎನ್ನುವವರಿಗೆ ಕ್ಯಾಮೆರಾ ಶಾಕ್ ನೀಡಿದೆ. ಇದೀಗ ದಾಖಲೆಯ ನಿಯಮ ಉಲ್ಲಂಘಿಸಿದ ವೆಹಿಕಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್

  • ಇವನ ತಲೆ ಬುರುಡೆ ಒಡೆದು ಹೋಗದಿರಲಪ್ಪ – ಮಂತ್ರ ಜಪಿಸಿ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿರೋ ಪೊಲೀಸ್

    ಇವನ ತಲೆ ಬುರುಡೆ ಒಡೆದು ಹೋಗದಿರಲಪ್ಪ – ಮಂತ್ರ ಜಪಿಸಿ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿರೋ ಪೊಲೀಸ್

    ನವದೆಹಲಿ: ದ್ವಿಚಕ್ರವಾಹನ (Two Wheeler) ಸವಾರರಲ್ಲಿ ಹೆಲ್ಮೆಟ್ (Helmet) ಕುರಿತು ಅರಿವು ಮೂಡಿಸಲು ಒಂದಿಲ್ಲೊಂದು ವಿಧಾನಗಳನ್ನು ಅನುಸರಿಸುತ್ತಿರುವ ಪೊಲೀಸರು (Police) ಇದೀಗ, ಮಂತ್ರೋಪಚಾರದ ಮಾರ್ಗವನ್ನು ಅನುಸರಿಸುತ್ತಿದ್ದಾರೆ.

    ನಡುರಸ್ತೆಯಲ್ಲಿ ನಿಂತು ಹೆಲ್ಮೆಟ್ ಜಾಗೃತಿ ಮೂಡಿಸುತ್ತಿರುವ ಪೊಲೀಸ್ (Police) `ಈತ ತನ್ನ ಮದುವೆಯಲ್ಲಿಯೂ ಇಷ್ಟೊಂದು ಗೌರವಯುತವಾಗಿ ಬಾಸಿಂಗ ಧರಿಸಿರಲಿಲ್ಲವೇನೋ’ ಎಂದು ಶೀರ್ಷಿಕೆ ಕೊಟ್ಟು ವೀಡಿಯೋ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದು ರಜೆ ತೆಗೆದುಕೊಂಡು ಆನಂದಿಸಿ- ಮೋದಿಗೆ ಶಾರುಖ್ ಖಾನ್ ಸಲಹೆ

    ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಓಡಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ತಡೆದ ಪೊಲೀಸ್ ಅಧಿಕಾರಿ, ಆತನ ತಲೆಗೆ ಹೆಲ್ಮೆಟ್ ಹಾಕುತ್ತಾ ಮಂತ್ರವನ್ನು ಪಠಿಸಲು ಶುರುಮಾಡಿದ್ದಾರೆ. ಮಂತ್ರದಲ್ಲಿ ಸಂಚಾರ ನಿಯಮಗಳ (Traffic Rule) ವಿವರಣೆ ಮತ್ತು ನಿಯಮ ಮುರಿದರೆ ಆಗುವ ಪರಿಣಾಮವನ್ನು ಶ್ರುತಿಬದ್ಧವಾಗಿ, ಲಯಬದ್ಧವಾಗಿ ಹಾಗೂ ಅತ್ಯಂತ ಮಾರ್ಮಿಕವಾಗಿಯೂ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

    helmet isi mark

    ಹಲವು ಮಂತ್ರ ಸ್ತೋತ್ರಗಳನ್ನು ಪಠಿಸಿದ ಪೊಲೀಸ್ ಕೊನೆಗೆ ಹೆಲ್ಮೆಟ್ ಧರಿಸದೇ ಇದ್ರೆ ಅದರ ಐದು ಪಟ್ಟು ದಂಡ ಬೀಳುತ್ತೆ ಎಂದು ಎಚ್ಚರಿಸಿದ್ದಾರೆ. ಪೊಲೀಸ್ ಹೆಲ್ಮೆಟ್ ವಿಶೇಷ ಜಾಗೃತಿಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಲಕ್ಷಾಂತರ ಮಂದಿ ನೋಡಿ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬುಲೆಟ್ ಮೇಲಿತ್ತು 103 ಪ್ರಕರಣಗಳು – ಫೈನ್ ಕಂಡು ಬೆಚ್ಚಿಬಿದ್ದ ಮಾಲೀಕ

    ಬುಲೆಟ್ ಮೇಲಿತ್ತು 103 ಪ್ರಕರಣಗಳು – ಫೈನ್ ಕಂಡು ಬೆಚ್ಚಿಬಿದ್ದ ಮಾಲೀಕ

    ಬೆಂಗಳೂರು: ಬುಲೆಟ್ ಬೈಕ್ ಮಾಲೀಕನೊಬ್ಬ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿರುವ ಘಟನೆ ಸಿಲಿಕಾನ್ ಸಿಟಿಯ ಆಡುಗೊಡಿಯಲ್ಲಿ ನಡೆದಿದೆ.

    ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರೋ ರಾಜೇಶ್ ಎಂಬುವವರಿಗೆ ಸೇರಿರುವ ಬುಲೆಟ್ ಬೈಕ್ ಮೇಲೆ ಬರೋಬ್ಬರಿ 103 ಕೇಸ್ ಇರುವುದನ್ನು ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಸಂಚಾರಿ ನಿಮಯ ಉಲ್ಲಂಘನೆ ಕೇಸ್‍ಗಳು ಸೆಂಚುರಿ ದಾಟಿದ ಪರಿಣಾಮ ಸಂಚಾರಿ ಪೊಲೀಸರು 58 ಸಾವಿರದ 200 ರೂಪಾಯಿಯನ್ನು ದಂಡ ಹಾಕಿದ್ದಾರೆ.

    ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೇ ಸಂಚಾರ, ಒನ್ ವೇ ಹೀಗೆ ಸುಮಾರು 103 ಬಾರಿ ಬೈಕ್ ಸವಾರ ರಾಜೇಶ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಈ ಕಾರಣದಿಂದ ಸಂಚಾರಿ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದರು. ಪರಿಣಾಮ ಇಂದು ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಗೆ ಬಂದ ರಾಜೇಶ್ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿದ್ದಾರೆ.

  • ಸಂಚಾರಿ ನಿಯಮ ಉಲ್ಲಂಘನೆ – 2 ಲಕ್ಷ ದಂಡ ಕಟ್ಟಿದ ಟ್ರಕ್ ಮಾಲೀಕ

    ಸಂಚಾರಿ ನಿಯಮ ಉಲ್ಲಂಘನೆ – 2 ಲಕ್ಷ ದಂಡ ಕಟ್ಟಿದ ಟ್ರಕ್ ಮಾಲೀಕ

    ನವದೆಹಲಿ: ಲಾರಿಯಲ್ಲಿ ಓವರ್ ಲೋಡ್ ಹಾಕಿದ್ದಕ್ಕೆ ದೆಹಲಿಯ ಸಂಚಾರಿ ಪೊಲೀಸರು ಲಾರಿ ಚಾಲಕನಿಗೆ ಬರೋಬ್ಬರಿ 2,00,500 ರೂ ದಂಡ ಹಾಕಿರುವ ಘಟನೆ ಮುಕರ್ಬಾ ಚೌಕ್‍ನಲ್ಲಿ ನಡೆದಿದೆ.

    ದುಬಾರಿ ದಂಡವನ್ನು ಹಾಕಿಸಿಕೊಂಡ ಟ್ರಕ್ ಚಾಲಕನನ್ನು ರಾಮ್ ಕಿಶನ್ ಎಂದು ಗುರುತಿಸಲಾಗಿದೆ. ಹೊಸ ತಿದ್ದುಪಡಿ ನಿಯಮದ ಪ್ರಕಾರ ಓವರ್ ಲೋಡ್ ಸಾಗಿಸುವ ಲಾರಿಗಳಿಗೆ ಇದ್ದ ದಂಡವನ್ನು 2,000 ರೂ.ಗಳಿಂದ 20,000 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಹೆಚ್ಚುವರಿ ತೂಕದ ಶುಲ್ಕವನ್ನು ಪ್ರತಿ ಟನ್‍ಗೆ 1,000 ರೂ.ಗಳಿಂದ 2,000 ಟನ್‍ಗೆ ಹೆಚ್ಚಿಸಲಾಗಿದೆ.

    ಲಾರಿಯಲ್ಲಿ ಓವರ್ ಲೋಡಿಂಗ್ ಹಾಕಿದ್ದಕ್ಕೆ ಟ್ರಕ್ ಚಾಲಕ ರಾಮ್ ಕಿಶನ್‍ಗೆ 56,000 ರೂ. ಮತ್ತು ಈ ಹಿಂದೆ ಇತರ ಸಂಚಾರಿ ನಿಯಮ ಉಲ್ಲಂಘನೆಗಾಗಿ 70,000 ರೂ. ದಂಡ ವಿಧಿಸಲಾಗಿದೆ. ಇದರ ಜೊತೆಗೆ ವಿವಿಧ ಉಲ್ಲಂಘನೆಗಳಿಗಾಗಿ ಟ್ರಕ್‍ನ ಮಾಲೀಕರಿಗೆ 74,500 ರೂ.ಗಳ ದಂಡ ವಿಧಿಸಲಾಗಿದ್ದು, ಒಟ್ಟು 2,00,500 ರೂ. ಮೊತ್ತವನ್ನು ಟ್ರಕ್‍ನ ಮಾಲೀಕರು ಈಗ ಪಾವತಿಸಿದ್ದಾರೆ.

    ಈ ಹಿಂದೆ ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆಯಡಿ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನದ ವ್ಯಕ್ತಿಯೊಬ್ಬನಿಗೆ 1.41 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದಕ್ಕೂ ಮೊದಲು ಸೆಪ್ಟೆಂಬರ್ 3 ರಂದು ಹಲವಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಡಿಶಾದ ಸಂಬಲ್ಪುರ ಜಿಲ್ಲೆಯ ಟ್ರಕ್ ಚಾಲಕನಿಗೆ 86,500 ರೂ. ದಂಡ ವಿಧಿಸಲಾಗಿತ್ತು.

  • ಆಟೋ ಚಾಲಕನಿಗೆ ಬಿತ್ತು ಬರೋಬ್ಬರಿ 47,500 ರೂ. ದಂಡ

    ಆಟೋ ಚಾಲಕನಿಗೆ ಬಿತ್ತು ಬರೋಬ್ಬರಿ 47,500 ರೂ. ದಂಡ

    ಭುವನೇಶ್ವರ: ಸಂಚಾರಿ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು, ಕುಡಿದು ಆಟೋ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬರೋಬ್ಬರಿ 47,500 ರೂ. ದಂಡ ವಿಧಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.

    ಕುಡಿದು ವಾಹನ ಚಾಲನೆ ಮಾಡಿರುವುದು, ಪರ್ಮಿಟ್, ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ತಿದ್ದುಪಡಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 47,500 ರೂ. ದಂಡ ವಿಧಿಸಲಾಗಿದೆ. ಭಾನುವಾರದಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಭುವನೇಶ್ವರದ ಟ್ರಾಫಿಕ್ ಪೊಲೀಸ್ ಹಾಗೂ ಆರ್‍ಟಿಓ ಸಿಬ್ಬಂದಿ ಬುಧವಾರ ನಗರದ ಆಚಾರ್ಯ ವಿಹಾರ ಚೌಕ್‍ನಲ್ಲಿ ಆಟೋ ರಿಕ್ಷಾ ತಡೆದು, ಸಂಚಾರಿ ನಿಯಮ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ 47,500 ರೂ.ಗಳ ಚಲನ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಾಮಾನ್ಯ ಅಪರಾಧ 500ರೂ., ಅಮಾನ್ಯಗೊಂಡ ಡ್ರೈವಿಂಗ್ ಲೈಸೆನ್ಸ್ 5000 ರೂ., ಪರ್ಮಿಟ್ ನಿಯಮ ಉಲ್ಲಂಘಿಸಿದ್ದಕ್ಕೆ 10,000 ರೂ., ಕುಡಿದು ವಾಹನ ಚಲಾಯಿಸಿದ್ದಕ್ಕೆ 10,000ರೂ., ಗಾಳಿ, ಶಬ್ದ ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ 10,000, ಅನಧಿಕೃತ ವ್ಯಕ್ತಿಗೆ ಚಾಲನೆ ಮಾಡಲು ಬಿಟ್ಟಿದ್ದಕ್ಕೆ 5,000 ರೂ. ನೋಂದಣಿ ಮಾಡದೆ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ 5,000 ರೂ., ಇನ್ಶುರೆನ್ಸ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ 2,000 ರೂ. ಒಟ್ಟು 47,500 ರೂ. ದಂಡವನ್ನು ವಿಧಿಸಲಾಗಿದೆ.

    ಮದ್ಯ ಸೇವಿಸಿರುವುದಾಗಿ ಒಪ್ಪಿಕೊಂಡ ಆಟೋ ಚಾಲಕ ಹರಿಬಂಧು ಕನ್ಹಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನನಗೆ ಅಷ್ಟು ದೊಡ್ಡ ಪ್ರಮಾಣದ ದಂಡವನ್ನು ಪಾವತಿಸಲು ಸಾಧ್ಯವಿಲ್ಲ. ಅವರು ನನ್ನ ವಾಹನವನ್ನು ವಶಪಡಿಸಿಕೊಳ್ಳಲಿ ಅಥವಾ ಜೈಲಿಗೆ ಕಳುಹಿಸಲಿ, ನಾನು ಅಷ್ಟು ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ. ಅಲ್ಲದೆ, ಎಲ್ಲ ದಾಖಲೆಗಳು ನನ್ನ ಮನೆಯಲ್ಲಿವೆ ಎಂದು ತಿಳಿಸಿದ್ದಾರೆ.

    ಚಾಲಕ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಸೆಪ್ಟೆಂಬರ್ 1ರಿಂದ ಜಾರಿಯಾಗಿರುವ ಹೊಸ ಸಂಚಾರಿ ನಿಯಮಗಳ ನಿಬಂಧನೆ ಪ್ರಕಾರ ದಂಡ ವಿಧಿಸಲಾಗಿದೆ. ಒಟ್ಟು 47,500 ರೂ. ದಂಡವನ್ನು ಚಂದ್ರಶೇಖರಪುರದ ಚಾಲನಾ ಪರೀಕ್ಷಾ ಕೇಂದ್ರದಲ್ಲಿ ಪಾವತಿಸುವಂತೆ ಆಟೋ ಚಾಲಕನಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.