Tag: traffic police

  • 24 ಲಕ್ಷದ ಬೈಕಿನ ಸ್ಪೀಡ್‌ ತೋರಿಸಲು ಬಂದವನು ದುರ್ಮರಣ

    24 ಲಕ್ಷದ ಬೈಕಿನ ಸ್ಪೀಡ್‌ ತೋರಿಸಲು ಬಂದವನು ದುರ್ಮರಣ

    ಬೆಂಗಳೂರು: 24 ಲಕ್ಷ ರೂ. ಮೌಲ್ಯದ ಬೈಕ್‌ ಕಾರಿಗೆ ಡಿಕ್ಕಿ ಹೊಡೆದ (Bike Accident) ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ಜಯನಗರದ ಅಶೋಕ ಪಿಲ್ಲರ್ ಬಳಿ ತಡರಾತ್ರಿ ನಡೆದಿದೆ.

    ಜಯನಗರದ (Jayanagara) ಅಶೋಕ ಪಿಲ್ಲರ್ ಬಳಿ ಘಟನೆ ನಡೆದಿದ್ದು, ಬೈಕ್‌ ಸವಾರ ಶೇಕ್ ನಾಸಿರ್ (32) ಸಾವನ್ನಪ್ಪಿದ್ದಾರೆ. ಹಿಂಬದಿ ಬೈಕ್‌ ಸವಾರ ಸೈಯದ್ ಮುದಾಸಿರ್ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ರಿಲೀಫ್‌ – ಲಂಚ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

    ಬೈಕ್ ಸವಾರರು ದುಬಾರಿ ಬೆಲೆಯ ಬಿಎಂಡಬ್ಲ್ಯೂ ಆರ್‌ಆರ್ 1000 ಸಿಸಿ (BMW RR 1000CC Bike) ಚಲಾಯಿಸುತ್ತಿದ್ದರು. ವ್ಹೀಲಿಂಗ್‌ ಮಾಡುತ್ತಾ ಅತಿ ವೇಗವಾಗಿ ಬಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಶೇಕ್ ನಾಸಿರ್ ಎಂಬ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

    ಬೈಕ್‌ ಸವಾರರು ಹೆಲ್ಮೆಟ್‌ ಕೂಡ ಧರಿಸಿರಲಿಲ್ಲ. ಕುತ್ತಿಗೆಗೆ ತೀವ್ರ ಏಟು ಬಿದ್ದ ಕಾರಣ ಸ್ಥಳದಲ್ಲೇ ನಾಸಿರ್‌ ಸಾವಿಗೀಡಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ರಿಲೀಫ್‌ – ಲಂಚ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

    ಕಾರಿನ ಮುಂಭಾಗ ಹಾನಿಗೀಡಾಗಿದ್ದು, ಗಾಜು ಒಡೆದಿದೆ. ಕಾರಿನಲ್ಲಿದ್ದವರಿಗೆ ಗಾಯವಾಗಿಲ್ಲ. ಇದನ್ನೂ ಓದಿ: ಸ್ಮೃತಿ ಇರಾನಿ ಭೇಟಿಯಾದ ಲಕ್ಷ್ಮಿ ಹೆಬ್ಬಾಳ್ಕರ್: ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆಗೆ ಮನವಿ

  • ಶನಿವಾರ, ಭಾನುವಾರ ಬೆಂಗಳೂರಲ್ಲಿ ಕಂಬಳ- ಮಾರ್ಗ ಬದಲಾವಣೆಗೆ ಸೂಚನೆ

    ಶನಿವಾರ, ಭಾನುವಾರ ಬೆಂಗಳೂರಲ್ಲಿ ಕಂಬಳ- ಮಾರ್ಗ ಬದಲಾವಣೆಗೆ ಸೂಚನೆ

    ಬೆಂಗಳೂರು: ಇತಿಹಾಸ ಪ್ರಸಿದ್ದ ಕರಾವಳಿ ಕಂಬಳಕ್ಕೆ (Karavali Kambala) ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‍ನಲ್ಲಿ (Palace Ground Bengaluru) ಕೌಂಟ್‍ಡೌನ್ ಶುರುವಾಗಿದೆ.

    ನಾಳೆಯಿಂದ (ಶನಿವಾರ) 2 ದಿನಗಳ ಕಾಲ ನಡೆಯುವ ರೋಚಕ ಕಂಬಳಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದೆ. ಕಂಬಳ ವೀಕ್ಷಣೆಗೆ ಲಕ್ಷಾಂತರ ಜನ ಬರುವ ನಿರೀಕ್ಷೆಯಿದ್ದು, ಹೆಬ್ಬಾಳ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗುವ ನಿರೀಕ್ಷೆ ಇದೆ. ಹೀಗಾಗಿ ಸಂಚಾರದಲ್ಲಿ ಟ್ರಾಫಿಕ್ ಪೊಲೀಸರು ಒಂದಷ್ಟು ಬದಲಾವಣೆ ಮಾಡಿದ್ದಾರೆ.

    ಬದಲಿ ಮಾರ್ಗ ಬಳಸಲು ಸೂಚನೆ ನೀಡಿದ್ದಾರೆ. ಕಂಬಳಕ್ಕೆ ಬರುವ ಸಾರ್ವಜನಿಕರ ವಾಹನಗಳಿಗೆ ಕೃಷ್ಣವಿಹಾರ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿಬಿಡಿ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಯೂಟರ್ನ್ ಪಡೆದು ಕೃಷ್ಣವಿಹಾರ್ ತಲುಪುವುದು. ಬಳ್ಳಾರಿ ರಸ್ತೆಯಲ್ಲಿ ಬರುವ ವಾಹನಗಳು ಮೇಖ್ರಿ ಸರ್ಕಲ್ ಮೂಲಕ ಗೇಟ್ ನಂಬರ್ 1 ರಲ್ಲಿ ಅರಮನೆ ಮೈದಾನಕ್ಕೆ ಎಂಟ್ರಿಯಾಗಲಿದೆ. ಯಶವಂತಪುರ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್ ನಲ್ಲಿ ಬಲ ತಿರುವು ಪಡೆದು ಅರಮನೆ ಮೈದಾನ ಎಂಟ್ರಿ. ಕ್ಯಾಬ್ ನಲ್ಲಿ ಬರುವ ಸಾರ್ವಜನಿಕರಿಗೆ ಗೇಟ್ 2 ರಲ್ಲಿ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗ್ಳೂರಲ್ಲಿ ನ. 25, 26ರಂದು ಕಂಬಳ

    ಬದಲಿ ಮಾರ್ಗ: ಅರಮನೆ ರಸ್ತೆಯಿಂದ- ಮೈಸೂರು ಬ್ಯಾಂಕ್ ಸರ್ಕಲ್, ಎಂವಿ ಜಯರಾಮ ರಸ್ತೆ- ಅರಮನೆ ರಸ್ತೆ, ಬಳ್ಳಾರಿ ರಸ್ತೆ- ಮೇಖ್ರಿ ಸರ್ಕಲ್ ನಿಂದ ಎಲ್ ಆರ್ ಡಿಇ ಜಂಕ್ಷನ್ ವರೆಗೆ, ಕನ್ನಿಂಗ್ ಹ್ಯಾಮ್ ರಸ್ತೆ- ಬಾಳೆಕುಂದ್ರಿ ಸರ್ಕಲ್ ನಿಂದ ಲೀ ಮೆರಿಡಿಯನ್ ಅಂಡರ್ ಪಾಸ್, ಮಿಲ್ಲರ್ ರಸ್ತೆಯಿಂದ ಎಲ್ ಆರ್ ಡಿಇ ಜಂಕ್ಷನ್, ಜಯಮಹಲ್ ರಸ್ತೆ ಹಾಗೂ ಪ್ಯಾಲೇಸ್ ಸುತ್ತಮುತ್ತಲಿನ ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

    ಪಾರ್ಕಿಂಗ್ ನಿಷೇಧ ಏರಿಯಾಗಳು: ಎಂವಿ ಜಯರಾಮ ರಸ್ತೆ, ವಸಂತನಗರ, ನಂದಿದುರ್ಗ ರಸ್ತೆ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ತರಳಬಾಳು ರಸ್ತೆ, ಸಿ ವಿ ರಾಮನ್ ರಸ್ತೆಯಲ್ಲಿ ಪಾಕಿರ್ಂಗ್ ನಿಷೇಧ ಹೇರಲಾಗಿದೆ.‌

    ಭಾರೀ ವಾಹನಗಳಿಗೂ ನಿಷೇಧ: ಇಂದಿನಿಂದ ಮೂರು ದಿನ ಕಂಟ್ಮೋನೆಂಟ್ ರೈಲ್ವೆ ಸ್ಟೇಷನ್, ಬಿಎಲ್, ಹೆಬ್ಬಾಳ ಜಂಕ್ಷನ್, ಕಾವೇರಿ ಜಂಕ್ಷನ್, ಬಸವೇಶ್ವರ ಜಂಕ್ಷನ್, ಐಐಎಸ್‍ಸಿ ಜಂಕ್ಷನ್ ಸುತ್ತಮುತ್ತ ಭಾರೀ ವಾಹನಗಳನ್ನು ನಿಷೇಧಿಸಲಾಗಿದೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ, ಮಧ್ಯಾಹ್ನ 3 ರಿಂದ ರಾತ್ರಿ 10 ಗಂಟೆಯವರೆಗೆ ನಿಷೇಧ ಹೇರಲಾಗಿದೆ.

  • ದೆವ್ವದ ಹೆಸರಿನಲ್ಲಿ ಡೆಡ್ಲಿ ವೀಲ್ಹಿಂಗ್‌ – ಯುವಕರ ಪೋಷಕರಿಗೆ 25 ಸಾವಿರ ದಂಡ

    ದೆವ್ವದ ಹೆಸರಿನಲ್ಲಿ ಡೆಡ್ಲಿ ವೀಲ್ಹಿಂಗ್‌ – ಯುವಕರ ಪೋಷಕರಿಗೆ 25 ಸಾವಿರ ದಂಡ

    ಬೆಂಗಳೂರು: ದೆವ್ವದ ಹೆಸರಿನಲ್ಲಿ ಡೆಡ್ಲಿ ವೀಲ್ಹಿಂಗ್‌ (Deadly Wheeling) ಮಾಡುತ್ತಿದ್ದ ಯುವಕರಿಗೆ ಸಂಚಾರಿ ಪೊಲೀಸರು (Traffic Police) ಚಳಿ ಬಿಡಿಸಿದ್ದಾರೆ.

    ಮೂವರನ್ನು ಬಂಧಿಸಿದ ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಗಾಡಿಯನ್ನು ಜಪ್ತಿ ಮಾಡಿ ಪೋಷಕರಿಗೆ 25 ಸಾವಿರ ರೂ. ದಂಡ (Fine) ವಿಧಿಸಿದ್ದಾರೆ.  ಇದನ್ನೂ ಓದಿ: World Cup Semifinal: ಸಿಕ್ಸರ್‌ನಿಂದಲೇ ವಿಶ್ವದಾಖಲೆ ನಿರ್ಮಿಸಿದ ಹಿಟ್‌ಮ್ಯಾನ್‌

    ವೀಲ್ಹಿಂಗ್ ಮಾಡುವಾಗ ದೆವ್ವದ ಮುಖವಾಡ ಧರಿಸುತ್ತಿದ್ದ ಇವರು ʼಡೆವಿಲ್ಸ್ ಆನ್ ರೋಡ್ʼ ಎಂದು ತಮ್ಮನ್ನ ತಾವು ಕರೆದುಕೊಳ್ಳುತ್ತಿದ್ದರು. ಈಗ ಡೆಡ್ಲಿ ವೀಲ್ಹಿಂಗ್‌ ಮಾಡುತ್ತಿದ್ದ ವೀಲರ್ಸ್‌ಗಳ ವಿರುದ್ಧ 14 ಪ್ರಕರಣ ದಾಖಲಾಗಿದೆ.


    ಬೈಕ್‌ಗಳನ್ನ (Bike) ವಶಕ್ಕೆ ಪಡೆದು ಅದರ ಬಿಡಿಭಾಗವನ್ನು ಪೊಲೀಸರು ತೆಗೆದಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳ ಪ್ರೊಫೈಲ್ ತೆರೆದು ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

  • ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್

    ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್

    ಮೈಸೂರು: ವಾಹನ ತಪಾಸಣೆ ವೇಳೆ ಸಂಚಾರಿ ಪೊಲೀಸರಿಂದ ಬ್ಯಾರಿಕೇಡ್ ಎಳೆದ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆ ಕೆಳಗೆ ಬಿದ್ದು, ಕೈ ಮೇಲೆ ಟಿಪ್ಪರ್ ಹರಿದಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಮೈಸೂರಿನ ಆರ್‌ಎಂಸಿ ವೃತ್ತದಲ್ಲಿ ಈ ಘಟನೆ ನಡೆದಿದೆ. ದೇವೇಗೌಡ ಸರ್ಕಲ್ ಕಡೆಯಿಂದ ಆರ್‌ಎಂಸಿ ವೃತ್ತದ ಕಡೆಗೆ ಬೈಕ್ ಬೈಕ್ ಹೋಗುತ್ತಿತ್ತು. ಬೈಕ್‌ನಲ್ಲಿ ಹೋಗುತ್ತಿದ್ದ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಮೆಕ್ಸಿಕೊದಲ್ಲಿ ಟ್ರಕ್‌ ಅಪಘಾತಕ್ಕೆ 10 ವಲಸಿಗರು ಬಲಿ

    ಹೆಲ್ಮೆಟ್ ಧರಿಸದ್ದಕ್ಕೆ ಪೊಲೀಸರು ತಡೆಯಲು ಮುಂದಾಗಿದ್ದಾರೆ. ಈ ವೇಳೆ ರಸ್ತೆಗೆ ಬ್ಯಾರಿಕೇಡ್ ಎಳೆದಿದ್ದಾರೆ. ಈ ವೇಳೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದಿದ್ದಾರೆ. ಆಗ ಅವರ ಎಡಗೈ ಮೇಲೆ ಟಿಪ್ಪರ್ ಚಕ್ರ ಹರಿದಿದೆ.

    ಘಟನೆಯಲ್ಲಿ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಸಂಚಾರಿ ಪೊಲೀಸರ ನಡೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳಲಾರದೇ ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    2021 ರಲ್ಲೂ ಇದೇ ರೀತಿಯ ಅವಘಡ ನಡೆದಿತ್ತು. ಸಂಚಾರಿ ಪೊಲೀಸರ ತಪಾಸಣೆ ವೇಳೆ ಅಪಘಾತ ಸಂಭವಿಸಿ, ಬೈಕ್ ಸವಾರನೊಬ್ಬ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸಾರ್ವಜನಿಕರು ಪೊಲೀಸರಿಗೆ ಬಟ್ಟೆ ಹರಿದು ಥಳಿಸಿದ್ದರು. ಮೈಸೂರಿನ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರು-ಹೊಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್; ಗಂಟೆಗಟ್ಟಲೆ ನಿಂತಲ್ಲೇ ನಿಂತ ವಾಹನಗಳು

    ಬೆಂಗ್ಳೂರು-ಹೊಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್; ಗಂಟೆಗಟ್ಟಲೆ ನಿಂತಲ್ಲೇ ನಿಂತ ವಾಹನಗಳು

    ಆನೇಕಲ್: ಇಲ್ಲಿನ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ (Bengaluru Hosur Highway) ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಹೈರಾಣಾಗಿರುವ ಘಟನೆ ನಡೆದಿದೆ.

    ಚಂದಾಪುರದಿಂದ ಅತ್ತಿಬೆಲೆಯವರೆಗೂ ಟ್ರಾಫಿಕ್‌ ಜಾಮ್‌ (Traffic Jam) ಉಂಟಾಗಿದ್ದು, ವಾಹನ ಸವಾರರು ಕಿಲೋಮೀಟರ್ ಗಟ್ಟಲೇ ದಟ್ಟಣೆಯಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಲಾಜಿಸ್ಟಿಕ್ ಕೇಂದ್ರ, ಪೈಲಟ್ ತರಬೇತಿ ಸಂಸ್ಥೆ ಸ್ಥಾಪನೆ – ಬೋಯಿಂಗ್ ಕಂಪನಿಗೆ ಎಂ.ಬಿ.ಪಾಟೀಲ್ ಆಹ್ವಾನ

    ಮಧ್ಯಾಹ್ನ ಮೂರು ಗಂಟೆಯಿಂದಲೇ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದ್ದು, ವಾಹನಗಳು ನಿಂತಲ್ಲೇ ನಿಂತಿವೆ. ಆದರೂ ಪೊಲೀಸರು (Traffic Police) ತಲೆ ಕೆಡಿಸಿಕೊಳ್ಳದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದನ್ನೂ ಓದಿ: ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ; ಸರ್ಕಾರದ ವಿರುದ್ಧ ಹೆಚ್.ಡಿ ರೇವಣ್ಣ ಕಿಡಿ

    ಎಲೆಕ್ಟ್ರಾನ್ ಸಿಟಿಯಿಂದ ಹಳೆ ಚಂದಾಪುರದ ತನಕವೂ ಟ್ರಾಫಿಕ್‌ ದಟ್ಟಣೆ ಹೆಚ್ಚಾಗಿದೆ. ಅತ್ತಿಬೆಲೆ, ಸೂರ್ಯ ನಗರ ಮತ್ತು ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಘಟನೆ ನಡೆದಿದ್ದು, ಮೂರು ಠಾಣಾ ವ್ಯಾಪ್ತಿಯ ಪೊಲೀಸರಿಗೂ ತಲೆನೋವು ತಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಂದೇ ದಿನ 19 ಮಂದಿ ಸಂಚಾರಿ ಪೊಲೀಸರ ಅಮಾನತು

    ಒಂದೇ ದಿನ 19 ಮಂದಿ ಸಂಚಾರಿ ಪೊಲೀಸರ ಅಮಾನತು

    ಬೆಂಗಳೂರು: ಒಂದೇ ದಿನಕ್ಕೆ 19 ಮಂದಿ ಸಂಚಾರಿ ಪೊಲೀಸರನ್ನು ಅಮಾನತುಗೊಳಿಸಿ ಡಿಸಿಪಿ ಆದೇಶ ಹೊರಡಿಸಿದ್ದಾರೆ. 2 ಸಂಚಾರಿ ಠಾಣೆಯ ಪೊಲೀಸರು ಅಮಾನತುಗೊಂಡಿದ್ದಾರೆ.

    ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆಯ 5 ಹಾಗೂ ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸ್ ಠಾಣೆಯ 14 ಸಿಬ್ಬಂದಿ ಸಸ್ಪೆಂಡ್ ಆಗಿದ್ದಾರೆ. ಓರ್ವ ಪಿಸಿ, ಹೆಚ್.ಸಿ ಎಎಸ್‌ಐ ಸೇರಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಐವರು ಅಮಾನತಾಗಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಎರಡು ಪ್ರತ್ಯೇಕ ಅಪಘಾತ – ಇಬ್ಬರು ಸಾವು

    ಮಾಗಡಿ ರಸ್ತೆ ಸಂಚಾರ ಪೊಲೀಸರ ಮೇಲೆ ಅಶಿಸ್ತು ಹಾಗೂ ಹಿರಿಯ ಅಧಿಕಾರಿಗಳ ಆದೇಶ ಪಾಲಿಸದ ಆರೋಪದಡಿ ಅಮಾನತು ಮಾಡಲಾಗಿದೆ. ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ 14 ಜನ ಸಸ್ಪೆಂಡ್ ಆಗಿದ್ದಾರೆ. ಅಶಿಸ್ತು ಹಿನ್ನೆಲೆ‌ ಸಸ್ಪಂಡ್ ಮಾಡಿ‌ ಸಂಚಾರ ಪಶ್ಚಿಮ ವಿಭಾಗ ಡಿಸಿಪಿ ಆದೇಶ ಹೊರಡಿಸಿದ್ದಾರೆ.

    ಕಾಮಾಕ್ಷಿ ಪಾಳ್ಯ ಸಿಬ್ಬಂದಿ ಕುಡಿದು ಡ್ಯಾನ್ಸ್ ಮಾಡಿದ್ದರು. ಇದು ಹಿರಿಯ ಅಧಿಕಾರಿಗಳ ಗಮನಕ್ಕೆ‌ ಬಂದಿತ್ತು. ಈ ಹಿನ್ನೆಲೆ‌ ಇಲಾಖೆಯಲ್ಲಿ‌ ಅಶಿಸ್ತು ತೋರಿದ್ದಕ್ಕೆ ಅಮಾನತುಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಲಾಖೆ ಆದೇಶಿಸಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಸೇರಿ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದೇಶಿ ಪ್ರಜೆಯಿಂದ 5,000 ರೂ. ಪಡೆದು ರಶೀದಿ ಕೊಡದೇ ಯಾಮಾರಿಸಿದ್ದ ಟ್ರಾಫಿಕ್‌ ಪೊಲೀಸ್‌ ಅಮಾನತು

    ವಿದೇಶಿ ಪ್ರಜೆಯಿಂದ 5,000 ರೂ. ಪಡೆದು ರಶೀದಿ ಕೊಡದೇ ಯಾಮಾರಿಸಿದ್ದ ಟ್ರಾಫಿಕ್‌ ಪೊಲೀಸ್‌ ಅಮಾನತು

    ನವದೆಹಲಿ: ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದಕ್ಕಾಗಿ ವಿದೇಶಿ ಪ್ರಜೆಯೊಬ್ಬರಿಂದ ದಂಡದ ರೂಪದಲ್ಲಿ 5,000 ರೂ. ಹಣ ಪಡೆದು ರಶೀದಿ ನೀಡದೇ ಭ್ರಷ್ಟಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ತಿಂಗಳ ಹಿಂದಿನ ಘಟನೆಯ ವೀಡಿಯೋ ಇದೀಗ ವ್ಯಾಪಕ ವೈರಲ್‌ ಆಗಿದೆ. ವೀಡಿಯೋದಲ್ಲಿ ಮಹೇಶ್ ಚಂದ್ ಎಂದು ಗುರುತಿಸಲಾದ ಪೊಲೀಸ್, ಸಂಚಾರ ಉಲ್ಲಂಘನೆಗಾಗಿ 5,000 ರೂ. ಪಾವತಿಸುವಂತೆ ಕೊರಿಯನ್ ವ್ಯಕ್ತಿಗೆ (Korean Man) ಹೇಳಿದ್ದಾರೆ. ವ್ಯಕ್ತಿ ಪೊಲೀಸರಿಗೆ 500 ರೂ. ನೀಡಲು ಮುಂದಾಗುತ್ತಾರೆ. ನಾನು ಕೇಳಿದ್ದು 500 ರೂ. ಅಲ್ಲ, 5,000 ರೂ. ಎಂದು ಪೊಲೀಸ್‌ (Delhi Police) ವಿವರಿಸುತ್ತಾರೆ. ಆ ವ್ಯಕ್ತಿ ತಕ್ಷಣವೇ ಪೊಲೀಸ್‌ಗೆ ಅಗತ್ಯವಿರುವ ಮೊತ್ತವನ್ನು ಹಸ್ತಾಂತರಿಸುತ್ತಾನೆ. ಕೊನೆಗೆ ಪೊಲೀಸ್‌ಗೆ ಹಸ್ತಲಾಘವ ಕೂಡ ಮಾಡ್ತಾನೆ. ಇದನ್ನೂ ಓದಿ: ಮುದ್ದಿನ ನಾಯಿ ನಾಪತ್ತೆ – ಭದ್ರತಾ ಸಿಬ್ಬಂದಿ ಅಮಾನತು ಮಾಡುವಂತೆ ಪೊಲೀಸ್ ಅಧಿಕಾರಿಗೆ ಪತ್ರ ಬರೆದ ನ್ಯಾಯಾಧೀಶ

    ವಿದೇಶಿ ಪ್ರಜೆಯಿಂದ ಹಣ ಪಡೆದ ಪೊಲೀಸ್‌ ಯಾವುದೇ ರಶೀದಿ ನೀಡದೇ ಹೊರಟು ಹೋಗುತ್ತಾರೆ. ಈ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಭ್ರಷ್ಟಾಚಾರ ಎಸಗಿದ ಪೊಲೀಸ್‌ನನ್ನು ಅಮಾನತು ಮಾಡಿದ್ದಾರೆ.

    ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಗಮನದಲ್ಲಿಟ್ಟುಕೊಂಡು, ವೀಡಿಯೋದಲ್ಲಿ ಕಂಡುಬಂದಿರುವ ಸಂಬಂಧಿತ ಅಧಿಕಾರಿಯನ್ನು ವಿಚಾರಣೆಗೆ ಬಾಕಿಯಿರುವಂತೆ ಅಮಾನತುಗೊಳಿಸಲಾಗಿದೆ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಮಾನತುಗೊಂಡಿರುವ ಪೊಲೀಸ್‌, ನಾನು ರಶೀದಿ ನೀಡುವಷ್ಟರಲ್ಲಿ ಆ ವಿದೇಶಿ ಪ್ರಜೆ ಹೊರಟು ಹೋದ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಭೇಟಿಯಾಗಲು ಗ್ರಾಮದ ವಿದ್ಯುತ್ ಅನ್ನೇ ಕಡಿತಗೊಳಿಸ್ತಿದ್ದ ಯುವತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

    ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

    ಬೆಂಗಳೂರು: “ಲೋಕಾಯುಕ್ತ (Lokayukta) ಕಚೇರಿ ಬಳಿ ಸಮಸ್ಯೆಯಾಗಿದೆ ಎಂಬ ಮಾಹಿತಿ ತಿಳಿದು ನಾವು ಆ ಜಾಗಕ್ಕೆ ಹೋಗುತ್ತಿದ್ದೆವು. ಕೆಆರ್ ಸರ್ಕಲ್ (K R Circle) ಬಳಿಯ ಅಂಡರ್‌ಪಾಸ್‌ನಲ್ಲಿ (Underpass) ನೀರಿನಲ್ಲಿ ಮುಳುಗುತ್ತಿದ್ದ ಕಾರನ್ನು ನೋಡಿ ಜನ ಕೂಗುತ್ತಿರುವುದು ಕಾಣಿಸಿತು. ನಾನು ಕಾರು ನಿಲ್ಲಿಸಿ ನೋಡಿದಾಗ, ಅರ್ಧ ಅಡಿ ಕಾರ್‌ನ ಟಾಪ್ ಮಾತ್ರ ಕಾಣಿಸುತ್ತಿತ್ತು. ಕೂಡಲೇ ನಾನು ಯೋಚಿಸದೇ ನೀರಿಗೆ ಧುಮುಕಿದೆ” ಇದು ಅಪತ್ಬಾಂದವ ಕೆ.ಆರ್.ಸರ್ಕಲ್‍ನಲ್ಲಿ ಐವರ ಜೀವ ಕಾಪಾಡಿದ ಪಬ್ಲಿಕ್ ಟಿವಿ (Public Tv) ಡ್ರೈವರ್ ವಿಜಯ್ ಕುಮಾರ್ ಮಾತುಗಳು.

    ವಿಜಯ್ ಕುಮಾರ್ ಹೇಳಿದ್ದೇನು?
    ನಾನು ನೀರಿಗೆ ಧುಮುಕಿ ಕಾರ್ ಸಮೀಪಿಸುತ್ತಿದ್ದಂತೆ ಒಳಗಿದ್ದವರು ಕಾರ್ ಗ್ಲಾಸ್ ತೆಗೆದರು. ತಕ್ಷಣ ಕಾರ್ ಮುಳುಗಿ ಹೋಯ್ತು. ಕಾರಿನ ಮೇಲೆ ಎರಡು ಅಡಿಯಷ್ಟು ನೀರು ಏರಿಕೆ ಆಯ್ತು. ನನಗೆ ಏನು ಮಾಡಲು ತೋಚದೆ ಕಾರ್ ಡೋರ್ ತೆಗೆಯಲು ಯತ್ನಿಸಿದೆ ಆದರೆ ಲಾಕ್ ಆದ ಕಾರಣ ಸಾಧ್ಯವಾಗಲಿಲ್ಲ. ಕಾರಿನ ಗ್ಲಾಸ್ ಮಾತ್ರ ತೆಗೆಯಲು ಸಾಧ್ಯವಾಯ್ತು. ಅದರ ಮೂಲಕವೇ ಐವರನ್ನು ಹೊರಗೆಳೆದು ಕಾರ್‌ನ ಟಾಪ್ ಮೇಲೆ ಕೂರಿಸಿದೆ. ಅಷ್ಟರಲ್ಲಾಗಲೇ ಮಹಿಳೆಯೊಬ್ಬರು ಸಹಾಯಕ್ಕಾಗಿ ತಾವು ತೊಟ್ಟಿದ್ದ ಸೀರೆಯನ್ನು ಕೊಟ್ಟರು. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

    ಈ ವೇಳೆಗಾಗಲೇ ನಮ್ಮ ವರದಿಗಾರರಾದ ನಾಗೇಶ್ ಅವರು ರಕ್ಷಣಾ ಕಾರ್ಯ ಮಾಡುವ ವಾಹನವನ್ನು ತಡೆದು ಲೈಫ್ ಜಾಕೆಟ್ ತಂದರು. ಇದರಿಂದ ರಕ್ಷಣಾ ಕಾರ್ಯಕ್ಕೆ ಅನುಕೂಲ ಅಯ್ತು. ನೀರಿನ ಬಣ್ಣ ತುಂಬ ಕಪ್ಪಾಗಿದ್ದ ಕಾರಣ ರಕ್ಷಣಾ ಕಾರ್ಯಕ್ಕೆ ಸ್ವಲ್ಪ ಆಯ್ತು. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಏಣಿಯ ಮೂಲಕ ಅವರನ್ನೆಲ್ಲ ಸುರಕ್ಷಿತವಾಗಿ ಮೇಲೆ ಕಳುಹಿಸಿದರು. ಕೇವಲ 10 ನಿಮಿಷದಲ್ಲಿ ರಕ್ಷಣಾ ಕಾರ್ಯ ನಡೆದಿದೆ. ಯವತಿಯ ತಲೆ ಹಿಂದಿನ ಸೀಟಿನಲ್ಲಿ ಲಾಕ್ ಆಗಿದ್ದ ಕಾರಣ ರಕ್ಷಣೆ ಕೂಡಲೇ ಮಾಡಲು ಸಾಧ್ಯವಾಗಲಿಲ್ಲ.

    ನಿಮಗೆ ಈ ಸಾಹಸಕ್ಕೆ ಧೈರ್ಯ ಎಲ್ಲಿಂದ ಬಂತು ಎಂದರೆ, ಅಕಸ್ಮಾತ್ ನನ್ನ ಕುಟುಂಬವೇ ಅಪಾಯದಲ್ಲಿ ಸಿಕ್ಕಿದ್ದರೆ? ಹಾಗೇ ಹೋಗಲು ಸಾಧ್ಯವಾಗುತ್ತಿತ್ತೇ? ಎನ್ನುತ್ತಾರೆ ವಿಜಯ್.

    ಕಾರಿನ ಚಾಲಕ ಸ್ವಲ್ಪ ನೀರಿದೆ ಎಂದು ಕಾರು ಇಳಿಸಿದ್ದಾನೆ. ಆದರೆ ಕಾರು ಇಳಿಯುತ್ತಿದ್ದಂತೆ ಪೂರ್ತಿ ಮುಳುಗಿದೆ. ನೀರು ನಿಂತಾಗ ಸರಿಯಾಗಿ ನೋಡಿಕೊಂಡು ಹೋಗಬೇಕು. ಅನಾವಶ್ಯಕವಾಗಿ ದುಸ್ಸಾಹಸಕ್ಕೆ ಮುಂದಾಗಬಾರದು ಎನ್ನುತ್ತಾರೆ ವಿಜಯ್ ಕುಮಾರ್.

    ವಿಜಯ್ ಕುಮಾರ್ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಚಾರಿ ಪೊಲೀಸ್ ಇಲಾಖೆ (Traffic Police) ಹತ್ತು ಸಾವಿರ ರೂ. ಬಹುಮಾನ ಘೋಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP

  • 50% ಆಫರ್ ಪಡೆದು 33 ಲಕ್ಷ ದಂಡ ಪಾವತಿಸಿದ BMTC

    50% ಆಫರ್ ಪಡೆದು 33 ಲಕ್ಷ ದಂಡ ಪಾವತಿಸಿದ BMTC

    ಬೆಂಗಳೂರು: ನಗರದಲ್ಲಿ 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಬಿಎಂಟಿಸಿ (BMTC) ಚಾಲಕರು ನಿಗಮಕ್ಕೆ ಬರೋಬ್ಬರಿ 1 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ.

    ನಗರದಲ್ಲಿ ಬಿಎಂಟಿಸಿ ಬಸ್ ಚಾಲಕರ ರ‍್ಯಾಷ್ ಡ್ರೈವಿಂಗ್‌ಗೆ ಹಲವು ಜೀವಗಳು ಬಲಿಯಾಗಿವೆ. ರ‍್ಯಾಷ್ ಡ್ರೈವಿಂಗ್‌ ಜೊತೆ ಟ್ರಾಫಿಕ್ ರೂಲ್ಸ್ (Traffic Rules) ಸಹ ಬ್ರೇಕ್ ಮಾಡಿ ನಿಗಮಕ್ಕೆ ಬರೋಬ್ಬರಿ 1 ಕೋಟಿ ನಷ್ಟವುಂಟುಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಕಲ್ಲಿದ್ದಲಿನಿಂದ ಭಾರತದ ಲಕ್ಷಾಂತರ ಮಂದಿಗೆ ವಿದ್ಯುತ್‌: ಅದಾನಿ ಪರ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಬ್ಯಾಟಿಂಗ್‌

    12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಕೇಸ್‌ಗಳು ಸೇರಿ ಒಟ್ಟು ದಂಡದ ಮೊತ್ತ 1 ಕೋಟಿ ರೂ.ಗೆ ತಲುಪಿದೆ. ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಪಕ್ಕಾ ಕೇಸ್ ಗಳಲ್ಲಿ 66 ಲಕ್ಷ ರೂ. ದಂಡದಲ್ಲಿ, ಟ್ರಾಫಿಕ್ ಪೊಲೀಸರ (Traffic Police) ಶೇ.50 ಆಫರ್ ಮೂಲಕ 33 ಲಕ್ಷ ರೂ. ದಂಡವನ್ನು ಬಿಎಂಟಿಸಿ ಆಡಳಿತ ಮಂಡಳಿ ಪಾವತಿ ಮಾಡಿದೆ.

    ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಚಾಲಕರಿಗೆ, ಅವರ ವೇತನದಲ್ಲೇ ದಂಡದ ಮೊತ್ತ ಪಾವತಿಸಲಾಗುತ್ತಿತ್ತು. ಹಾಗಿದ್ದರೂ ಟ್ರಾಫಿಕ್ ರೂಲ್ಸ್ ಬಗ್ಗೆ ಚಾಲಕರಿಗೆ ಅರಿವು ಬರುತ್ತಿಲ್ಲ. ಹೀಗಾಗಿ ಎಲ್ಲಾ ಬಸ್ ಚಾಲಕರಿಗೂ ಟ್ರಾಫಿಕ್ ರೂಲ್ಸ್, ಸೆಫ್ಟಿ ಡ್ರೈವಿಂಗ್‌ ಕೌಶಲಗಳ ಬಗ್ಗೆ ತರಬೇತಿ ನೀಡಲು ಬಿಎಂಟಿಸಿ ತೀರ್ಮಾನಿಸಿದೆ.

    ಈ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿದ್ದು, ಎಲ್ಲಾ ಡಿಪೋ ವ್ಯವಸ್ಥಾಪಕರ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಸಭೆ ನಡೆಸಲಾಗಿದೆ. ನಗರದಲ್ಲಿ ಸುರಕ್ಷಿತ ಪ್ರಯಾಣದ ಜೊತೆಗೆ ದಂಡಮುಕ್ತ ಸಂಚಾರ ನಡೆಸಬೇಕೆಂದು ತಾಕೀತು ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊಬೈಲ್ ಬ್ಲಾಸ್ಟ್ – ಪ್ರಾಣಾಪಾಯದಿಂದ ಯುವಕ ಪಾರು

  • ಸವಾರರಿಗೆ ಗುಡ್ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಸಮಯ ವಿಸ್ತರಣೆ

    ಸವಾರರಿಗೆ ಗುಡ್ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಸಮಯ ವಿಸ್ತರಣೆ

    ಬೆಂಗಳೂರು: ಟ್ರಾಫಿಕ್ ಫೈನ್  (Traffic Fine)  50% ರಿಯಾಯಿತಿಯ (Discount) ಸಮಯವನ್ನು ವಿಸ್ತರಿಸುವುದಾಗಿ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ವಿರಪ್ಪ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಯಾಯಿತಿ ದಂಡ ಸಂಗ್ರಹವನ್ನು ಮತ್ತೆ ವಿಸ್ತರಿಸಲಾಗಿದ್ದು, ಫೆ.14 ರಿಂದ 24ರವರೆಗೂ ಕಾಲಾವಕಾಶವಿದೆ. ಈ ಕುರಿತು ನಾಳೆ (ಮಂಗಳವಾರ) ಅಧಿಕೃತ ಆದೇಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಈ ಹಿಂದೆ ದಂಡ ಪಾವತಿಸಲು ಫೆ.11 ಕೊನೆಯ ದಿನಾಂಕವಾಗಿತ್ತು. ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಜನರಿಂದ ಮನವಿ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ದಂಡ ವಿನಾಯಿತಿಯ ಮುಂದುವರಿಕೆಗೆ ಸಂಚಾರ ವಿಶೇಷ ಆಯುಕ್ತ ಮನವಿ ಮಾಡಿದ್ದರು. 2 ವಾರಗಳ ಕಾಲ ವಿನಾಯಿತಿ ವಿಸ್ತರಣೆಗೆ ಮನವಿ ಮಾಡಲಾಗಿದೆ. ನಾಳೆ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ. ಫೆ. 14 ರಿಂದ ಫೆ. 28ರವರೆಗೆ ಮುಂದುವರಿಸುವ ಚಿಂತನೆ ಇದೆ. ಈ ಬಗ್ಗೆ ನಾಳೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಚರ್ಚ್‌ಗೆ ಬೆಂಕಿ ಹಾಕಿ, ಗೋಡೆ ಮೇಲೆ ರಾಮ ಎಂದು ಬರೆದ ಕಿಡಿಗೇಡಿಗಳು

    ರಿಯಾಯಿತಿಯ ಕುರಿತು ಸರ್ಕಾರವನ್ನು ಒಪ್ಪಿಸಲು ನಮಗೆ ಮೂರು ತಿಂಗಳು ಕಾಲಾವಕಾಶ ಹಿಡಿಯಿತು. ಇದೀಗ ದಂಡ ಪಾವತಿ ಮಾಡುವ ಅವಧಿ ವಿಸ್ತರಣೆಗೆ ಕಾಲಾವಕಾಶ ಕೇಳಿದರು. ಈ ಕುರಿತು ವಿಶೇಷ ಆಯುಕ್ತರು ಪತ್ರ ಸಹ ಬರೆದಿದ್ದರು. ಜೊತೆಗೆ ಹಲವರು ಸಮಯ ವಿಸ್ತರಿಸಲು ಕಾಲಾವಕಾಶ ಕೇಳಿದ್ದರು. ಹೀಗಾಗಿ ದಂಡ ಕಟ್ಟಲು ಮತ್ತೆ ಕಾಲಾವಕಾಶ ನೀಡುವ ಚಿಂತನೆ ನಡೆಸಲಾಗಿದೆ. ಇನ್ನೂ ಎರಡು ಕೋಟಿಯಷ್ಟು ಟ್ರಾಫಿಕ್ ಕೇಸ್‍ಗಳು ಬಾಕಿಯಿವೆ. 800 ಕೋಟಿ ರೂ.ಗೂ ಹೆಚ್ಚು ಫೈನ್ ಹಣ ಸಂಗ್ರಹವಾಗಬೇಕಿದೆ ಎಂದರು. ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ರಷ್ಯಾದಿಂದ 13 ಶತಕೋಟಿ ಡಾಲರ್ ಮೌಲ್ಯದ ಶಸ್ತಾಸ್ತ್ರ ಪೂರೈಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k