ನವದೆಹಲಿ: ಹವಾಮಾನ ವೈಪರೀತ್ಯ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕಾಲಿಕ ಮಳೆಯಾಗಿದೆ. ಇಂದು ಬೆಳಗ್ಗೆಯಿಂದ ದೆಹಲಿ-ಎನ್‍ಸಿಆರ್ ಭಾಗದ ಅಲ್ಲಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದ್ದು, ಮತ್ತಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.
ದೆಹಲಿಯ ಹೊರ ಭಾಗದ ನೊಯ್ಡಾ, ಗ್ರೇಟರ್ ನೊಯ್ಡಾ ಗಾಜೀಯಬಾದ್ ಸೇರಿ ಹಲವೆಡೆ ಇಂದು ಬೆಳಗ್ಗೆಯಿಂದಲೇ ವರ್ಷಾಧಾರೆಯಾಗಿತ್ತು. ಮಧ್ಯಾಹ್ನ ಬಳಿಕ ದೆಹಲಿಯ ಗ್ರೀನ್ ಗ್ರೀನ್ ಪಾರ್ಕ್, ಸಬ್ದರ್ ಜಂಗ್, ಚಾಣಕ್ಯಪುರಿ, ಸಂಸತ್ ಮಾರ್ಗ್ ಸೇರಿ ಬಹುತೇಕ ಪ್ರದೇಶದಲ್ಲಿ ಮಳೆಯಾಗಿದೆ.
https://twitter.com/gautamkapoor54/status/1238769330357063680
ಚಂಡಮಾರುತ ವ್ಯವಸ್ಥೆಯು ಉತ್ತರ ಪಾಕಿಸ್ತಾನ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಮೇಲಿದೆ, ಜಮ್ಮು, ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡನಲ್ಲಿ ಭಾರೀ ಮಳೆ ಮತ್ತು ಹಿಮಪಾತವಾಗುತ್ತಿದ್ದು ಹವಾಮಾನ ವೈಪರೀತ್ಯಗಳಿಂದ ದೆಹಲಿಯಲ್ಲಿ ಅಕಾಲಿಕ ಮಳೆಯಾಗುತ್ತಿದೆ.
ದೆಹಲಿಯಲ್ಲಿ ಸುರಿದ ಏಕಾಏಕಿ ಮಳೆಯಿಂದ ರಸ್ತೆಯ ಮೇಲೆ ಮತ್ತು ಪ್ಲೈಓವರ್ ಕೆಳಗೆ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
Traffic Alert
Traffic is affected on Rohtak Road at Punjabi Bagh R/A ,Shyama Prasad Mukherjee Marg & Chhata Rail due to water logging.
— Delhi Traffic Police (@dtptraffic) March 14, 2020
ಆಲಿಕಲ್ಲು ಮಳೆ:
ಮಳೆಯಿಂದಾಗಿ ಅನೇಕ ಸ್ಥಳಗಳಲ್ಲಿ ರಸ್ತೆಯ ಮೇಲೆ ನೀರು ನುಗ್ಗಿ ಸಂಚಾರ ಅಸ್ವಸ್ಥಗೊಂಡಿತು. ದಕ್ಷಿಣ ದೆಹಲಿ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗಿದ್ದರಿಂದ ಜನರು ಸಂಕಷ್ಟ ಎದುರಿಸಿದರು. ಇದಕ್ಕೂ ಮುನ್ನ ಶುಕ್ರವಾರ ಸಂಜೆ ಹಾಗೂ ರಾತ್ರಿಯಲ್ಲಿ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರುತ್ತಿತ್ತು. ಈ ಬೆನ್ನಲ್ಲೇ ಇಂದು ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ ಚಾಲಕರು ಹಾಗೂ ಸವಾರರು ಪರದಾಡುವಂತಾಯಿತು.
ಭಾರೀ ಮಳೆಯ ಹಿನ್ನೆಲೆ ದೆಹಲಿ ಟ್ರಾಫಿಕ್ ಪೊಲೀಸರು ಟ್ವೀಟ್ ಮೂಲಕ ಸಂಚಾರ ಅಸ್ಥವ್ಯಸ್ಥವಿರುವ ಪ್ರದೇಶಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹವಾಮಾನ ವೈಪರಿತ್ಯದಿಂದಾಗಿ ದೆಹಲಿಯಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಸದ್ಯದ ದೆಹಲಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಶುಕ್ರವಾರ ಗರಿಷ್ಠ ತಾಪಮಾನ 28.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 13.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
Hailstorm in Delhi today. #DelhiRains #DelhiWeather pic.twitter.com/dXq0RlhNMn
— Shiv Sharma (@shivsharmaIND) March 14, 2020



