Tag: traffic jam

  • ನಡು ರಸ್ತೆಯಲ್ಲೇ ಕಿತ್ತಾಡಿಕೊಂಡ 2 ಕುಟುಂಬ- ಫುಲ್ ಟ್ರಾಫಿಕ್ ಜಾಮ್

    ನಡು ರಸ್ತೆಯಲ್ಲೇ ಕಿತ್ತಾಡಿಕೊಂಡ 2 ಕುಟುಂಬ- ಫುಲ್ ಟ್ರಾಫಿಕ್ ಜಾಮ್

    ಬೀದರ್: ಎರಡು ಕುಟುಂಬಗಳು ನಡು ರಸ್ತೆಯಲ್ಲಿಯೇ ಮಾರಾಮಾರಿ ಮಾಡಿಕೊಂಡ ಘಟನೆ ಬೀದರ್ ನಗರದ ಶಿವಾಜಿ ವೃತ್ತದ ಬಳಿ ನಡೆದಿದೆ.

    ಕೆಲಸದ ನಿಮಿತ್ತ ಬೀದರ್ ನಗರಕ್ಕೆ ಆಗಮಿಸಿದ ಎರಡು ಕುಟುಂಬದ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಉಂಟಾದ ವೈಮನಸ್ಸಿನಿಂದ ಪರಸ್ಪರ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ. ಪರಿಣಾಮ ಕೆಲಕಾಲ ಕೋರ್ಟ್ ಎದುರಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಆಗಿತ್ತು.

    2 ಕುಟುಂಬದ ಮಾರಾಮಾರಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಎರಡು ಕುಟುಂಬಸ್ಥರನ್ನು ಸಮಾಧಾನಪಡಿಸಿ ಕಳುಹಿಸಿದರು. ಈ ಜಗಳದಿಂದ ಕೆಲ ಕಾಲ ಜನರಿಗೆ ಬಿಟ್ಟಿ ಮನರಂಜನೆ ಸಿಕ್ಕಿದರೆ, ಕೆಲವರು ಈ ಹೈಡ್ರಾಮಾವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿಯುವಲ್ಲಿ ಬ್ಯುಸಿಯಾದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಫ್ಲೈಓವರ್ ತಡೆಗೋಡೆಗೆ ಲಾರಿ ಡಿಕ್ಕಿ – ಗಂಟೆಗಟ್ಟಲೆ ಟ್ರಾಫಿಕ್ ಜಾಮ್

    ಫ್ಲೈಓವರ್ ತಡೆಗೋಡೆಗೆ ಲಾರಿ ಡಿಕ್ಕಿ – ಗಂಟೆಗಟ್ಟಲೆ ಟ್ರಾಫಿಕ್ ಜಾಮ್

    ಬೆಂಗಳೂರು: ಫ್ಲೈಓವರ್ ತಡೆಗೋಡೆಗೆ ಲಾರಿ ಡಿಕ್ಕಿಯಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆದ ಘಟನೆ ಬೆಂಗಳೂರಿನ ಹೆಚ್‍ಎಸ್‍ಆರ್ ಬಡಾವಣೆ ಅಗರ ಫ್ಲೈಓವರ್ ಬಳಿ ನಡೆದಿದೆ.

    ಬೆಳಗ್ಗಿನ ಜಾವ ನಾಲ್ಕು ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ಲಾರಿ ಮಾರತ್ತಹಳ್ಳಿ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆ ಬರುತ್ತಿತ್ತು. ಈ ವೇಳೆ ಫ್ಲೈಓವರ್ ತಡೆಗೋಡೆಗೆ ಲಾರಿ ಡಿಕ್ಕಿಯಾಗಿದೆ.

    ಘಟನೆಯಿಂದ ಲಾರಿ ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದಿಂದಾಗಿ ಮಾರತ್ತಹಳ್ಳಿ ರಿಂಗ್ ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

    ಈ ಬಗ್ಗೆ ಹೆಚ್‍ಎಸ್‍ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತ ಟ್ರಾಫಿಕ್ ಪೊಲೀಸರು

    ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತ ಟ್ರಾಫಿಕ್ ಪೊಲೀಸರು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಪ್ರಾರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಸುಮಾರಾಗಿ ಮಳೆ ಬಿದ್ರೂ ಸಾಕು, ಬೆಂಗಳೂರು ತತ್ತರಿಸಿ ಹೋಗುತ್ತದೆ. ಮಳೆಯಿಂದ ಉಂಟಾಗುವ ಅವಘಡಗಳನ್ನು ತಡೆಯೋಕೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

    ಬೆಂಗಳೂರು ಯಾವುದಕ್ಕಾದರೂ ಭಯಪಡುತ್ತೆ ಅಂದ್ರೆ, ಅದು ಎರಡೇ ವಿಚಾರಕ್ಕೆ ಒಂದು ಮಳೆ, ಮತ್ತೊಂದು ಟ್ರಾಫಿಕ್. ಸಣ್ಣದೊಂದು ಮಳೆ ಬಂದರೆ ಸಾಕು ಮರಗಳು ರಸ್ತೆಗೆ ಉರುಳಿ ಬಿಡುತ್ತವೆ. ರಸ್ತೆ ತುಂಬೆಲ್ಲ ನೀರು ನಿಂತು, ಕಿಲೋಮಿಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಮಳೆಯ ಸಂದರ್ಭದಲ್ಲಿ ಪಾತ್ ಹೋಲ್ ಗೆ ಬೈಕ್ ಇಳಿದು ಕೈಕಾಲು ಮುರಿದುಕೊಳ್ಳೋದರಿಂದ ಹಿಡಿದು, ವಾಹನ ಸವಾರರು ಜೀವ ಕಳೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಅವೈಜ್ಞಾನಿಕ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳಿಂದ ಮಕ್ಕಳು, ಸಾರ್ವಜನಿಕರು ಕರೆಂಟ್ ಶಾಕ್ ಹೊಡೆದು ಪ್ರಾಣ ಕಳೆದುಕೊಂಡಿರೋ ಉದಾಹರಣೆಗಳು ಸಾಕಷ್ಟಿವೆ.

    ಇಷ್ಟೆಲ್ಲಾ ಅವಘಡಗಳನ್ನು ತಡೆಯೋ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್, ತಮ್ಮ ಸಿಬ್ಬಂದಿ ಮೂಲಕ ನಗರದಲ್ಲಿ ಎಲ್ಲೆಲ್ಲಿ ಏನೇನ್ ಸಮಸ್ಯೆ ಆಗುತ್ತೆ, ಹೇಗೆ ಟ್ರಾಫಿಕ್ ಜಾಮ್ ಆಗುತ್ತೆ, ಆ ಸಮಸ್ಯೆಗಳಿಗೆ ಏನೆಲ್ಲಾ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಅಂತಾ ಒಂದು ರಿಪೋರ್ಟ್ ರೆಡಿ ಮಾಡಿದ್ದಾರೆ.

    ರಿಪೋರ್ಟ್ ಕಾರ್ಡ್:
    * ನಗರದ 45 ಏರಿಯಾಗಳ 130 ಕಡೆಗಳ ರಸ್ತೆಗಳಲ್ಲಿ ಮಳೆ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗುತ್ತೆ.
    * 221 ಪಾದಚಾರಿ ಮಾರ್ಗಗಳ ಬಳಿ 86 ಸ್ಕೈವಾಕ್ ಹಾಗೂ ಮೇಲುಸೇತುವೆಗಳು ನಿರ್ಮಿಸಬೇಕಿದೆ.
    * 34 ಸುರಂರ್ಗ ಮಾರ್ಗ, 213 ಕಡೆಗಳಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿಗೆ ಕ್ರಮ
    * 478 ಭಾಗಗಳಲ್ಲಿ ಜಂಕ್ಷನ್ ಗಳನ್ನು ಅಭಿವೃದ್ಧಿಗೊಳಿಸುವುದು, 292 ಜಾಗಗಳಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವುದು.
    * 97 ವಿದ್ಯುತ್ ಕಂಬ ಹಾಗೂ 76 ಟ್ರಾನ್ಸ್ ಫಾರ್ಮರ್ ಸ್ಥಳಾಂತರ. ಹೊಸದಾಗಿ 105 ವಿದ್ಯುತ್ ಕಂಬ ಅಳವಡಿಕೆ.
    * 47 ಅಪಾಯಕಾರಿ ಅಕ್ಸಿಡೆಂಟ್ ಜೋನ್ಸ್‍ಗಳಲ್ಲಿ ಅಪಘಾತಗಳ ತಡೆಗೆ ಕ್ರಮ.
    * ಹೊಸದಾಗಿ 227 ಜಾಗಗಳಲ್ಲಿ ರಸ್ತೆ ಉಬ್ಬುಗಳ ನಿರ್ಮಾಣ, ಅವೈಜ್ಞಾನಿಕವಾಗಿರುವ 131 ಹಂಪ್ಸ್ ಗಳ ತೆರವು.
    * ನಗರದ 52 ಕಡೆಗಳಲ್ಲಿ ರಸ್ತೆಗೆ ಹೊಂದಿಕೊಂಡಂತೆ ಕಸದ ರಾಶಿ ಹಾಕುತ್ತಿದ್ದು, ಅವುಗಳ ತೆರವಿಗೆ ಕ್ರಮ.

    ಈ ಎಲ್ಲಾ ಮೇಲಿನ ಅಂಶಗಳನ್ನು ಪಟ್ಟಿ ಮಾಡಿದ ಸಂಚಾರಿ ಹೆಚ್ಚುವರಿ ಆಯುಕ್ತ ಹರಿಶೇಖರನ್ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗೆ ಪತ್ರ ಬರೆದು, ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರ ಈ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕ್ರೇನ್ ವಿದ್ಯುತ್ ಕಂಬಕ್ಕೆ ಡಿಕ್ಕಿ- ಹೈವೇಯಲ್ಲೇ ಜೋತು ಬಿದ್ದ ವಿದ್ಯುತ್ ತಂತಿ

    ಕ್ರೇನ್ ವಿದ್ಯುತ್ ಕಂಬಕ್ಕೆ ಡಿಕ್ಕಿ- ಹೈವೇಯಲ್ಲೇ ಜೋತು ಬಿದ್ದ ವಿದ್ಯುತ್ ತಂತಿ

    ಬೆಂಗಳೂರು: ಕ್ರೇನ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿಗೆ ಕಂಬ ಮುರಿದು ಬಿದ್ದಿರುವ ಘಟನೆ ರಾಜಧಾನಿಯ ನೆಲಮಂಗಲ ಸಮೀಪದ ಜಾಸ್ ಟೋಲ್ ಬಳಿ ನಡೆದಿದೆ.

    ಹೆದ್ದಾರಿಯಲ್ಲಿ ಸಾಗುತ್ತಿದ್ದ ಕ್ರೇನ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಿಂದ ವಿದ್ಯುತ್ ಕಂಬ ಮುರಿದು ರಸ್ತೆ ಮೇಲೆ ಬಿದ್ದಿದೆ. ಈ ಅಪಘಾತವಾದ ಕಾರಣ ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿ ಎರಡು ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೆ ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಬಾರದ ಕಾರಣಕ್ಕೆ ವಿದ್ಯುತ್ ಕಂಬ ರಸ್ತೆಯ ಮೇಲೆ ಇದ್ದು ವಿದ್ಯುತ್ ತಂತಿಗಳು ಹೆದ್ದಾರಿಯಲ್ಲೇ ಕೈಗೆಟಕುವ ರೀತಿ ಜೋತುಬಿದ್ದಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.

    ಹೆದ್ದಾರಿಯ ಎರಡೂ ಭಾಗದಲ್ಲಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಸದ್ಯ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ದೌಡಾಯಿಸಿದ್ದು, ಬೆಸ್ಕಾಂ ಸಿಬ್ಬಂದಿ ಬಾರದ ಕಾರಣ ವಾಹನ ಸವಾರರೇ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದಾರೆ. ಆದ್ರೆ ಸ್ಥಳಕ್ಕೆ ಬಾರದ ಬೆಸ್ಕಾಂ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೆಲಮಂಗಲದಲ್ಲಿ ಟ್ರಾಫಿಕ್ ಜಾಮ್ – ಸಿದ್ದರಾಮಯ್ಯ ನಡೆಗೆ ಜನರ ಮೆಚ್ಚುಗೆ

    ನೆಲಮಂಗಲದಲ್ಲಿ ಟ್ರಾಫಿಕ್ ಜಾಮ್ – ಸಿದ್ದರಾಮಯ್ಯ ನಡೆಗೆ ಜನರ ಮೆಚ್ಚುಗೆ

    ಬೆಂಗಳೂರು: ರಾಜಕಾರಣಿಗಳ ಕೈಲಿ ಅಧಿಕಾರ ಇದ್ದರೆ ಸಾಕು ಫುಲ್ ಸೆಕ್ಯೂರಿಟಿ, ಝೀರೋ ಟ್ರಾಫಿಕ್ ನಲ್ಲಿ ಓಡಾಟ ಮಾಡುತ್ತಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸೆಕ್ಯೂರಿಟಿ ಇಲ್ಲದೇ ಸಾಮಾನ್ಯರಂತೆ ರಸ್ತೆಯಲ್ಲಿ ಹೋಗಿದ್ದಾರೆ.

    ತುಮಕೂರಿನ ಕುಣಿಗಲ್‍ನಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಿ ಬೆಂಗಳೂರಿನತ್ತ ತೆರಳಿದ್ದಾರೆ. ಮಂಗಳವಾರ ಹೊಸ ವರ್ಷದ ಹಾಗೂ ಸಾಲು ಸಾಲು ರಜೆ ಮುಗಿಸಿ ಬೆಂಗಳೂರು ನಗರದತ್ತ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆ ಜೋರಾಗಿತ್ತು.

    ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿದ ಪರಿಣಾಮ ನೆಲಮಂಗಲದ ನವಯುಗ ಟೋಲ್ ಬಳಿ ಹೆಚ್ಚು ಟ್ರಾಫಿಕ್ ಉಂಟಾಗಿದೆ. ಹೀಗಾಗಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರು ಟ್ರಾಫಿಕ್ ನಲ್ಲಿ ಸಿಲುಕಿ ಕೆಲಕಾಲ ಪರದಾಡುವಂತಾಯಿತು. ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಟ್ರಾಫಿಕ್‍ನಲ್ಲೇ ಸಾಮಾನ್ಯರಂತೆಯೇ ಪರದಾಡಿದರು. ಇದರಿಂದ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.

    ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯಗೆ ಸರ್ಕಾರ ಝೆಡ್ ಸೆಕ್ಯೂರಿಟಿಯ ಭದ್ರತೆ ಇತ್ತೀಚಿಗೆ ನೀಡಿತ್ತು. ಆದರೆ ಮಂಗಳವಾರ ಯಾವುದೇ ಸೆಕ್ಯೂರಿಟಿ ಇಲ್ಲದೇ ರಸ್ತೆಗಳಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೈಕ್ ಗೆ ಕಾರ್ ಡಿಕ್ಕಿ- ಟೆಂಪೋ  ಟ್ರಾವೆಲರ್ಸ್  ಚಕ್ರದಡಿ ಸಿಲುಕಿ ಸವಾರ ದುರ್ಮರಣ

    ಬೈಕ್ ಗೆ ಕಾರ್ ಡಿಕ್ಕಿ- ಟೆಂಪೋ ಟ್ರಾವೆಲರ್ಸ್ ಚಕ್ರದಡಿ ಸಿಲುಕಿ ಸವಾರ ದುರ್ಮರಣ

    ಮಂಡ್ಯ: ಬೆಳ್ಳಂಬೆಳಗ್ಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಂಡ್ಯದ ಸಿದ್ದಯ್ಯನ ಗೇಟ್ ಬಳಿ ಬೈಕ್, ಕಾರ್ ಮತ್ತು ಟೆಂಪೋ ಟ್ರಾವೆಲರ್ಸ್ ನಡುವೆ ಸರಣಿ ಅಪಘಾತವಾಗಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮಾದೇಶ್ (45) ಹಾಗೂ ಜೇಮ್ಸ್ (30) ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಗಾರೆ ಕೆಲಸಕ್ಕೆಂದು ಮಾದೇಶ್ ಹಾಗೂ ಜೇಮ್ಸ್ ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರಿಂದ ಬರುತ್ತಿದ್ದ ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಪಕ್ಕದಲ್ಲಿ ಚಲಿಸುತ್ತಿದ್ದ ಟೆಂಪೋ ಟ್ರಾವೆಲ್ಸ್‍ಗೆ ಗುದ್ದಿದೆ. ಅಪಘಾತದಿಂದ ಬೈಕ್ ಸವಾರರಲ್ಲಿ ಓರ್ವ ಟೆಂಪೋ ಟ್ರಾವೆಲರ್ಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟರೆ, ಇನ್ನೋರ್ವ ರಸ್ತೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಸದ್ಯ ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಸರಣಿ ಅಪಘಾತದಿಂದಾಗಿ ಬೆಂಗಳೂರು- ಮೈಸೂರು ಹೆದ್ದಾರಿ ಸುಮಾರು 5 ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಆಗಿ ಸಂಚಾರಿ ಅಸ್ತವ್ಯಸ್ಥಗೊಂಡಿದೆ.

    ಘಟನೆ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಂದೇ ದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾವಿರಾರು ಜೋಡಿಗಳು

    ಒಂದೇ ದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾವಿರಾರು ಜೋಡಿಗಳು

    -ಸೋಮವಾರವೇ ಇಷ್ಟು ಮದ್ವೆಗಳು ನಡೆದಿದ್ದು ಏಕೆ ಗೊತ್ತಾ?

    ನವದೆಹಲಿ: ಸೋಮವಾರ ಒಂದೇ ದಿನದಲ್ಲಿ ನಗರದಲ್ಲಿ ಅಂದಾಜು 5 ಸಾವಿರ ಜೋಡಿಗಳು ವಿವಾಹವಾಗಿ ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಒಂದೇ ದಿನದಲ್ಲಿ ಇಷ್ಟೊಂದು ಮದುವೆ ನಡೆಯುತ್ತಾ ಅಂತಾ ಆಶ್ಚರ್ಯಾ ಅನ್ನಿಸುವುದು ಸಾಮಾನ್ಯ. ಹಿಂದೂ ಪೂರಾಣ ಹಾಗೂ ಜೋತಿಷ್ಯಿಗಳ ಪ್ರಕಾರ, ವಿವಾಹವಾಗಲು ಪ್ರತಿ ವರ್ಷ ಕೇವಲ 4 ಬಾರಿ ಮಾತ್ರ “ಅತ್ಯಂತ ಮಂಗಳಕರ” (ಶುಭ ದಿನ) ದಿನಗಳು ಬರುತ್ತದೆ. ಈ ದಿನಗಳಲ್ಲಿ ಮದುವೆಯಾದರೆ ದಂಪತಿಗಳು ಸುಖವಾಗಿ ಇರುತ್ತಾರೆ ಎಂಬುವುದು ಕೆಲವರ ನಂಬಿಕೆ. ವರ್ಷದಲ್ಲಿ ಬರುವ 4 “ಅತ್ಯಂತ ಮಂಗಳಕರ” ದಿನಗಳಲ್ಲಿ ಮೊದಲ ದಿನ ನವೆಂಬರ್ 19. ಆದರಿಂದ ಸೋಮವಾರದಂದು ದೆಹಲಿಯಲ್ಲಿ ಸುಮಾರು 5 ಸಾವಿರ ಜೋಡಿಗಳು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಈ ಸಾವಿರಾರು ಮದುವೆ ದಿಬ್ಬಣಗಳ ಅಬ್ಬರಕ್ಕೆ ದೆಹಲಿಯ ಹಲವು ರಸ್ತೆಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ನಿಲ್ಲುವಂತಹ ಪರಿಸ್ಥಿತಿ ಉಂಟಾಗಿತ್ತು. ಒಂದೆಡೆ ಜನರು ಮದುವೆಗಳ ಸಂಭ್ರಮಾಚಾರಣೆಯಲ್ಲಿ ಮುಳುಗಿದ್ದರೆ, ಇನ್ನೊಂದೆಡೆ ಈ ಸಂಭ್ರಮದಿಂದ ರಸ್ತೆಗಳಲ್ಲಿ ಉಂಟಾದ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡಿದ್ದಾರೆ.

    ಮದುವೆ ದಿಬ್ಬಣ ಹಾಗೂ ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿದ್ದ ವಾಹನಗಳಿಂದ ನಗರದ ಛತ್ತರ್‍ಪುರ್, ಮೆಹರೂಲಿ, ಜಿ.ಟಿ ಕರ್ನಲ್ ರಸ್ತೆ, ಅಲಿಪುರ್ ರಸ್ತೆ, ರಾಜಾ ಗಾರ್ಡನ್ ಇನ್ನೂ ಹಲವು ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಅದನ್ನು ಸರಿಪಡಿಸಲು ಸಂಚಾರಿ ಪೊಲೀಸರು ಗಂಟೆಗಟ್ಟಲೆ ಹರಸಾಹಸ ಪಟ್ಟರು.

    ಮೊದಲ ಮಂಗಳಕರ ದಿನಕ್ಕೆ ವಾಹನ ಸವಾರರು ಹಾಗೂ ಪೊಲೀಸರು ಇಷ್ಟೊಂದು ಕಷ್ಟ ಪಡುವಂತಾಗಿದೆ. ಇನ್ನುಳಿದ ಮೂರು ಮಂಗಳಕರ ದಿನದಲ್ಲಿ ಇನ್ನೆಷ್ಟು ಕಷ್ಟಪಡಬೇಕೋ ಅಂತಾ ಯೋಚಿಸುವ ಮಟ್ಟಿಗೆ “ಅತ್ಯಂತ ಮಂಗಳಕರ” ದಿನಗಳು ದೆಹಲಿಯಲ್ಲಿ ಪರಿಣಾಮ ಬೀರಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಾರ್ಮಾಡಿ ಘಾಟಿಯಲ್ಲಿ ಬಿತ್ತು ದೊಡ್ಡ ಗ್ರಾನೈಟ್ ಕಲ್ಲು- ಫುಲ್ ಟ್ರಾಫಿಕ್ ಜಾಮ್

    ಚಾರ್ಮಾಡಿ ಘಾಟಿಯಲ್ಲಿ ಬಿತ್ತು ದೊಡ್ಡ ಗ್ರಾನೈಟ್ ಕಲ್ಲು- ಫುಲ್ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ದಕ್ಷಿಣ ಕನ್ನಡದಿಂದ ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆ ದೊಡ್ಡ ಗ್ರಾನೈಟ್ ಕಲ್ಲು ರಸ್ತೆ ಅಡ್ಡಲಾಗಿ ಬಿದ್ದಿರುವ ಕಾರಣ ವಾಹನಗಳು ಆಮೆಗತಿಯಲ್ಲಿ ಸಾಗುತ್ತಿದೆ.

    ಮಂಗಳೂರಿನಿಂದ ಬೆಂಗಳೂರಿಗೆ ಎರಡು ಲಾರಿಗಳಲ್ಲಿ ದೊಡ್ಡ ಗ್ರಾನೈಟ್ ಕಲ್ಲುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಒಂದು ಲಾರಿಯಲ್ಲಿದ್ದ ಗ್ರಾನೈಟ್ ಕಲ್ಲು ಚಾರ್ಮಾಡಿಯ ಆರನೇ ತಿರುವಿನಲ್ಲಿ ಬಿದ್ದಿದೆ. ಚಾಲಕ ಲಾರಿ ಸಮೇತ ಪರಾರಿಯಾಗಿದ್ದು, ಚಾರ್ಮಾಡಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

    ಭಾನುವಾರ ಸುಮಾರು ಐದು ಕಿ.ಮೀ. ಅಧಿಕ ಟ್ರಾಫಿಕ್ ಜಾಮ್ ಆಗಿತ್ತು. ಮುಖ್ಯವಾದ ಹಾಗೂ ದೊಡ್ಡ ತಿರುವಾಗಿದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಜೆಸಿಬಿ ಹಾಗೂ ಕ್ರೇನ್ ಮೂಲಕವೂ ಬಂಡೆ ಸರಿಸಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗಿಲ್ಲ.

    ಹಾಗಾಗಿ ರಸ್ತೆ ಬದಿಯ ಮಣ್ಣನ್ನು ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಣ ಪಡೆದು ಘನ ವಾಹನಗಳ ಸಂಚಾರಕ್ಕೆ ಅನುಮತಿ ನೀಡುತ್ತಿರುವ ಕಾರಣ ಈ ರೀತಿ ಸಮಸ್ಯೆಯಾಗುತ್ತಿದೆ ಎಂದು ಸ್ಥಳಿಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಿನ ನಡುರಸ್ತೆಯಲ್ಲೇ ಕೆಟ್ಟುನಿಂತ BMTC ಬಸ್ – 3 ಕಿ.ಮೀ ಟ್ರಾಫಿಕ್ ಜಾಮ್

    ಬೆಂಗ್ಳೂರಿನ ನಡುರಸ್ತೆಯಲ್ಲೇ ಕೆಟ್ಟುನಿಂತ BMTC ಬಸ್ – 3 ಕಿ.ಮೀ ಟ್ರಾಫಿಕ್ ಜಾಮ್

    ಬೆಂಗಳೂರು: ನಡುರಸ್ತೆಯಲ್ಲಿ ಬಿಎಂಟಿಸಿ ಬಸ್ ಕೆಟ್ಟು ನಿಂತ ಪರಿಣಾಮ ಸುಮಾರು ಮೂರು ಕಿಲೋಮೀಟರ್ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಕೆ.ಆರ್. ಪುರದಿಂದ ಟಿನ್ ಪ್ಯಾಕ್ಟರಿವರೆಗೆ ಮೂರು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇತ್ತ ಐಟಿಪಿಎಲ್ ಮಾರ್ಗವೂ ಪುಲ್ ಜಾಮ್ ಆಗಿದ್ದು, ಮಹದೇವಪುರದಿಂದ ಟಿನ್ ಪ್ಯಾಕ್ಟರಿವರೆಗೆ ಪುಲ್ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

    ಒಂದೆಡೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇತ್ತ ನಡು ರಸ್ತೆಯಲ್ಲಿಯೇ ಬಸ್ ರಿಪೇರಿಯಾಗಿದೆ. ಇದರಿಂದ ಬೆಳಗ್ಗೆ 6 ಗಂಟೆಯಿಂದ ವಾಹನಗಳು ನಿಂತಲ್ಲೇ ನಿಂತಿದ್ದು, ನಡು ರಸ್ತೆಯಲ್ಲಿಯೇ ವಾಹನ ಸವಾರರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

    ಬಸ್ ಕೆಟ್ಟು ನಿಂತಿರುವ ಬಗ್ಗೆ ತಿಳಿದು ಬಸ್ ತೆರವು ಮಾಡುವುದಾಗಲೀ ಅಥವಾ ಟ್ರಾಫಿಕ್ ಕ್ಲಿಯರ್ ಮಾಡದೇ ಇರುವ ಟ್ರಾಫಿಕ್ ಪೊಲೀಸರು ಹಾಗೂ ಬಿಎಂಟಿಸಿ ಆಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಸಾಂದರ್ಭಿಕ ಚಿತ್ರ

    ಜಕಾರ್ತ: ಇಂಡೋನೇಷ್ಯಾದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ವಿಮಾನ ಪತನವಾಗಿ 189 ಮಂದಿ ಜಲಸಮಾಧಿಯಾಗಿದ್ದರೂ, ಓರ್ವ ಪ್ರಯಾಣಿಕ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದಾರೆ.

    ಹೌದು, ಸೋಮವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ ಲಯನ್ ಏರ್‌‌ಲೈನ್ಸ್‌ನ ಜಿಟಿ 610 ವಿಮಾನದಲ್ಲಿದ್ದ 189 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರೂ, ಓರ್ವ ಪ್ರಯಾಣಿಕ ಟ್ರಾಫಿಕ್ ಜಾಮ್‍ನಿಂದಾಗಿ ಬದುಕಿದ್ದಾರೆ.

    ಇಂಡೋನೇಷ್ಯಾದ ಹಣಕಾಸು ಸಚಿವಾಲಯದ ಅಧಿಕಾರಿ ಸೋನಿ ಸೆಟ್ಯಾವಾನ್ ಪತನಗೊಂಡ ವಿಮಾನದಲ್ಲಿ ಪಂಗ್‍ಕಲ್ ಪಿನಾಂಗ್ ದ್ವೀಪಕ್ಕೆ ತೆರಳಬೇಕಿತ್ತು. ಆದರೆ ಟ್ರಾಫಿಕ್ ಜಾಮ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದೆ. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಈ ಕುರಿತು ಪ್ರತಿಕ್ರಿಯಿಸಿರುವ ಸೆಟ್ಯಾವಾನ್, ನಾನು ವಾರಕ್ಕೊಮ್ಮೆ ನನ್ನ ಸಹೋದ್ಯೋಗಿಗಳೊಂದಿಗೆ ಪಂಗ್‍ಕಲ್ ಪಿನಾಂಗ್ ದ್ವೀಪಕ್ಕೆ ಹೋಗುತ್ತಲೇ ಇದ್ದೆ. ಎಂದಿನಿಂತೆ ಸೋಮವಾರ ಪ್ರಯಾಣಕ್ಕಾಗಿ ಲಯನ್ ಏರ್‌‌ಲೈನ್ಸ್‌ನ ವಿಮಾನವನ್ನು ಬುಕ್ ಮಾಡಿದ್ದೆ. ಇದಕ್ಕಾಗಿ ಸೋಮವಾರ ಬೆಳಗಿನ ಜಾವ 3ರ ಸುಮಾರಿಗೆ ಜಕಾರ್ತ ವಿಮಾನ ನಿಲ್ದಾಣಕ್ಕೆ ಹೊರಟಿದ್ದೆ. ಆದರೆ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾದ ಕಾರಣ ನಾನು ಬೆಳಗ್ಗೆ 6.20ರ ಸುಮಾರಿಗೆ ಏರ್‌ಪೋರ್ಟ್‌ ತಲುಪಿದೆ.

    ವಿಮಾನ ನಿಲ್ದಾಣದಲ್ಲಿ ನನ್ನ ತಪಾಸಣೆ ಮುಗಿಸುವಷ್ಟರಲ್ಲಿ, ವಿಮಾನ ಟೇಕ್ ಆಫ್ ಆಗಿತ್ತು. ಅದಾದ ನಂತರ ನಾನು ಮತ್ತೊಂದು ವಿಮಾನ ಬಳಸಿ ಪಿನಾಂಗ್ ದ್ವೀಪ ತಲುಪಿದೆ. ನಾನು ಲ್ಯಾಂಡ್ ಆಗುತ್ತಲೇ ಲಯನ್ ವಿಮಾನ ಸಮುದ್ರದಲ್ಲಿ ಪತನವಾಗಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವಿಗೀಡಾದ ಶಾಕಿಂಗ್ ಮಾಹಿತಿ ಸಿಕ್ಕಿತ್ತು. ವಿಮಾನದ ಪತನದ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಅಲ್ಲದೇ ಪತನಗೊಂಡ ವಿಮಾನದಲ್ಲಿ ನನ್ನ ಸ್ನೇಹಿತರೂ ಸಹ ಪ್ರಯಾಣಿಸುತ್ತಿದ್ದರು ಎಂದು ನೆನೆದು ಕಣ್ಣೀರು ಹಾಕಿದ್ದಾರೆ.

    ಏನಿದು ವಿಮಾನ ದುರಂತ?
    ಸೋಮವಾರ ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ 610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿದ್ದ ವಿಮಾನ, ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡು, ವಿಮಾನದಲ್ಲಿದ್ದ ಎಲ್ಲಾ 188 ಪ್ರಯಾಣಿಕರು ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv