Tag: traffic jam

  • ನಂದಿಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು – ಫುಲ್ ಟ್ರಾಫಿಕ್ ಜಾಮ್

    ನಂದಿಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು – ಫುಲ್ ಟ್ರಾಫಿಕ್ ಜಾಮ್

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡುವ ಭೀತಿಯಿಂದ ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅನ್‍ಲಾಕ್ ನಿಯಮ ಜಾರಿ ಬಳಿಕ ಕೆಲ ದಿನಗಳ ಹಿಂದಷ್ಟೇ ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿದೆ. ಇದೀಗ ವಿಕೇಂಡ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾವಿರಾರು ಮಂದಿ ಆಗಮಿಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು.

    ನಂದಿಗಿರಿಧಾಮದ ಸೂರ್ಯೋದಯ ಸೌಂದರ್ಯ ಸವಿಯೋಕೆ ಮುಂಜಾನೆ 4-5 ಗಂಟೆಯಿಂದಲೇ ನಂದಿಗಿರಿಧಾಮದತ್ತ ಪ್ರವಾಸಿಗರ ದಂಡೇ ಆಗಮಿಸಿದೆ. ಆದರೆ ಬೆಳಗ್ಗೆ 8 ಗಂಟೆ ನಂತರ ನಂದಿಗಿರಿಧಾಮಕ್ಕೆ ಪ್ರವಾಸಿಗರ ವಾಹನಗಳ ಪ್ರವೇಶಕ್ಕೆ ಅನುಮತಿ ಇದೆ. ಹೀಗಾಗಿ ಚೆಕ್ ಪೋಸ್ಟ್ ನಲ್ಲಿ ವಾಹನಗಳಿಗೆ ತಡೆಯೊಡ್ಡಲಾಗಿತ್ತು. ಹೀಗಾಗಿ ಚೆಕ್‍ಪೋಸ್ಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಸರಿಸುಮಾರು 4-5 ಕಿಲೋಮೀಟರ್ ದೂರ ರಸ್ತೆಯುದ್ದಕ್ಕೂ ವಾಹನಗಳು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು. 8 ಗಂಟೆಗೆ ಚೆಕ್ ಪೋಸ್ಟ್ ಗೇಟ್ ತಡೆದಿದ್ದೆ ತಡ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಲಗ್ಗೆಯಿಟ್ಡಿದ್ದಾರೆ.

    ಮಾರ್ಚ್ 14ರಿಂದ ಲಾಕ್‍ಡೌನ್ ಆಗಿದ್ದ ನಂದಿಗಿರಿಧಾಮ ಬರೋಬ್ಬರಿ ಐದು ತಿಂಗಳ ನಂತರ ಕೆಲ ದಿನಗಳ ಹಿಂದೆಯಷ್ಟೇ ಅನ್‍ಲಾಕ್ ಆಗಿದೆ. ಹೀಗಾಗಿ ವಿಕೇಂಡ್ ದಿನದಂದು ಸಾವಿರಾರು ಮಂದಿ ನಂದಿಗಿರಿಧಾಮಕ್ಕೆ ಆಗಮಿಸಿ ಬೆಟ್ಟದ ಅನನ್ಯ ಪ್ರಾಕೃತಿಕ ಸೌಂದರ್ಯದ ಸೊಬಗನ್ನ ಸವಿಯುತ್ತಿದ್ದಾರೆ.

  • ನನಗೆ ಕೊರೊನಾ ಬಂದಿದೆ ಮುಟ್ಟಿ ನೋಡೋಣ- ಬಸ್‍ಗೆ ಅಡ್ಡಲಾಗಿ ಮಲಗಿ ಮಹಿಳೆ ರಂಪಾಟ

    ನನಗೆ ಕೊರೊನಾ ಬಂದಿದೆ ಮುಟ್ಟಿ ನೋಡೋಣ- ಬಸ್‍ಗೆ ಅಡ್ಡಲಾಗಿ ಮಲಗಿ ಮಹಿಳೆ ರಂಪಾಟ

    – ಹಾಸನದಲ್ಲಿ ಫುಲ್ ಟ್ರಾಫಿಕ್ ಜಾಮ್

    ಹಾಸನ: ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತಿದ್ದ ಮಹಿಳೆಯೊಬ್ಬಳು ಕೆಎಸ್‍ಆರ್ ಟಿಸಿ ಬಸ್‍ಗೆ ಅಡ್ಡಲಾಗಿ ಮಲಗಿ ರಂಪಾಟ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.

    ನಗರದ ಎಸ್‍ಪಿ ಕಚೇರಿ ಸಮೀಪ ನನಗೆ ಕೊರೊನಾ ಬಂದಿದೆ ಮುಟ್ಟಿ ನೋಡೋಣ ಎಂದು ಮಹಿಳೆಯೊಬ್ಬರು ಹೆದರಿಸುತ್ತಾ ರಸ್ತೆಯಲ್ಲಿ ಓಡಾಡಿದ್ದಾರೆ. ಮಹಿಳೆ ಅಡ್ಡ ಬಂದ ಪರಿಣಾಮ ಕೆಎಸ್‍ಆರ್ ಟಿಸಿ ಬಸ್ ಡ್ರೈವರ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಬಸ್ ಕೆಳಗೆ ಅಡ್ಡಲಾಗಿ ಮಲಗಿದ ಮಹಿಳೆ ಬಸ್ ಮುಂದೆ ಹೋಗದಂತೆ ಅಡ್ಡ ಹಾಕಿದ್ದಾಳೆ. ಇದರಿಂದಾಗಿ ಕೆಲ ಹೊತ್ತು ಬಸ್ ಅಲ್ಲೇ ನಿಂತಿದೆ. ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಸಹ ಸಂಭವಿಸಿದೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೂ ಮಹಿಳೆ ನಿಯಂತ್ರಣ ಸಾಧ್ಯವಾಗಿಲ್ಲ. ಇದರಿಂದಾಗಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ. ಅಲ್ಲದೆ ಮಹಿಳೆಯ ರಾದ್ಧಾಂತ ನೋಡಿ ಜನ ಗಾಬರಿಯಾಗಿದ್ದಾರೆ. ಟ್ರಾಫಿಕ್ ಜಾಮ್ ಸಹ ಆಗಿದ್ದರಿಂದ ಪೊಲೀಸರಿಗೆ ನಿಯಂತ್ರಿಸುವುದು ಕಷ್ಟವಾಗಿದೆ. ಹೀಗಾಗಿ ಅಂತಿಮವಾಗಿ ಅಂಬುಲೆನ್ಸ್ ಕರೆಸಿ ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ.

  • ಕೊರೊನಾ ಭಯಕ್ಕೆ ಗಂಟುಮೂಟೆ ಸಮೇತ ಊರಿಗೆ ಹೊರಟ ಜನ

    ಕೊರೊನಾ ಭಯಕ್ಕೆ ಗಂಟುಮೂಟೆ ಸಮೇತ ಊರಿಗೆ ಹೊರಟ ಜನ

    – ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಬೆಂಗಳೂರು: ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಇತ್ತ ಕೊರೊನಾ ಭಯದಿಂದ ಮತ್ತು ಭಾನುವಾರ ಕರ್ಫ್ಯೂ ಜಾರಿಯಾಗುವ ಹಿನ್ನೆಲೆಯಲ್ಲಿ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ.

    ಬೆಂಗಳೂರಿಗರು ಮತ್ತೆ ಲಾಕ್‍ಡೌನ್ ಆಗುತ್ತೆ ಎಂಬ ಭಯದಲ್ಲಿ ತಮ್ಮ ತಮ್ಮ ಸ್ವ-ಗ್ರಾಮಕ್ಕೆ ತೆರಳುತ್ತಿದ್ದಾರೆ. ಅನೇಕರು ಗಂಟು ಮೂಟೆ ಸಮೇತ ಊರುಗಳತ್ತ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನವಯುಗ ಟೋಲ್ ಬಳಿ ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.

    ಅಲ್ಲದೇ ಮನೆಯ ಪಾತ್ರೆ, ಸಾಮಾನುಗಳು ಮತ್ತು ಪೀಠೋಪಕರಣಗಳ ಸಮೇತ ಗುಂಪು ಗುಂಪಾಗಿ ಜನರು ತೆರಳುತ್ತಿದ್ದಾರೆ. ತುಮಕೂರು ರಸ್ತೆ ಮಾತ್ರವಲ್ಲದೇ ಮೈಸೂರು ರಸ್ತೆಯಲ್ಲೂ ಟ್ರಾಫಿಕ್ ಟಾಮ್ ಉಂಟಾಗಿದ್ದು, ಸಾಲು ಸಾಲಾಗಿ ವಾಹನಗಳು ನಿಂತಿವೆ.

    ಕೊರೊನಾ ನಿಯಂತ್ರಣಕ್ಕಾಗಿ ಇಂದು ರಾತ್ರಿ 8 ಗಂಟೆಯಿಂದ ಭಾನುವಾರ ಕರ್ಫ್ಯೂ ಜಾರಿಯಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಾಗಲಿದೆ. ತುರ್ತು, ಅಗತ್ಯಸೇವೆ ಹೊರತುಪಡಿಸಿ ಉಳಿದವೆಲ್ಲಾ ಕಂಪ್ಲೀಟ್ ಬಂದ್ ಆಗಲಿದೆ.

    ಇನ್ನೂ ಬೆಂಗಳೂರಿನಲ್ಲಿ ಕೊರೊನಾ ದಿನದಿಂದ ಸ್ಫೋಟವಾಗುತ್ತಲೇ ಇದೆ. ಈಗಾಗಲೇ ತಜ್ಞರು ಕೂಡ ಮತ್ತೆ ಲಾಕ್‍ಡೌನ್ ಮಾಡುವುದು ಸೂಕ್ತ ಎಂದು ತಮ್ಮ ಅಭಿಪ್ರಾಯವನ್ನು ಸಿಎಂ ಮುಂದೆ ಪ್ರಸ್ತಾಪಿಸಿದ್ದಾರೆ. ಜೊತೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೂಡ ಮುಗಿದಿದೆ. ಹೀಗಾಗಿ ಸೋಮವಾರ ಮತ್ತೆ ಲಾಕ್‍ಡೌನ್ ಆಗುತ್ತದೆ ಎಂದು ಜನರು ತಮ್ಮ ಗ್ರಾಮಗಳಿಗೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನಿಂದ ತಮ್ಮ ಗ್ರಾಮಗಳಿಗೆ ಜನರು ಹೋದರೆ ಹಳ್ಳಿಗಳಿಗೂ ಸೋಂಕು ಹಬ್ಬುವ ಸಾಧ್ಯತೆ ಇದೆ.

  • ಮನೆ ಖಾಲಿ ಮಾಡ್ಕೊಂಡು ಬೆಂಗ್ಳೂರು ಬಿಟ್ಟು ಊರಿನತ್ತ ಪ್ರಯಾಣ- ಟ್ರಾಫಿಕ್ ಜಾಮ್

    ಮನೆ ಖಾಲಿ ಮಾಡ್ಕೊಂಡು ಬೆಂಗ್ಳೂರು ಬಿಟ್ಟು ಊರಿನತ್ತ ಪ್ರಯಾಣ- ಟ್ರಾಫಿಕ್ ಜಾಮ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಸ್ಫೋಟವಾಗುತ್ತಿದ್ದಂತೆ ಭಯಭೀತರಾದ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಮಾಡುತ್ತಿದ್ದಾರೆ.

    ಬೆಂಗಳೂರಿನಿಂದ ಜನರು ತಮ್ಮ ಊರಿಗೆ ಹೊರಟಿರುವ ಹಿನ್ನೆಲೆಯಲ್ಲಿ ನವಯುಗ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನವಯುಗ ಟೋಲ್‍ನಲ್ಲಿ ಸಾಲಾಗಿ ವಾಹನಗಳು ನಿಂತಿವೆ. ಈ ಮೂಲಕ ಶನಿವಾರ ಬೆಂಗಳೂರು ನಗರದಲ್ಲಿ ಕೊರೊನಾ ಮಹಾ ಸ್ಫೋಟಕ್ಕೆ ಜನರು ಹೆದರಿಕೊಂಡಿದ್ದಾರೆ ಎನ್ನಲಾಗಿದೆ.

    ಇನ್ನೂ ಕೆಲವರು ಬೆಂಗಳೂರಿಗಿಂತ ತಮ್ಮ ಊರುಗಳೇ ಸುರಕ್ಷಿತ ಎಂದು ಮನೆ ಖಾಲಿ ಮಾಡಿಕೊಂಡು ಲಗೇಜ್ ಸಮೇತ ಬೆಂಗಳೂರು ಬಿಟ್ಟು ಹೊರಟ್ಟಿದ್ದಾರೆ. ಮಕ್ಕಳಿಗೆ ಶಾಲೆ ಇಲ್ಲ, ನಮಗೂ ಮಾಡಲು ಕೆಲಸವಿಲ್ಲ. ಇದರಿಂದ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮ ಊರಿಗೆ ಹೋಗುತ್ತಿದ್ದೇವೆ ಎಂದು ಜನರು ಹೇಳುತ್ತಿದ್ದಾರೆ.

    ಬೆಂಗಳೂರಿನಲ್ಲಿ ಶನಿವಾರ ಬರೋಬ್ಬರಿ 596 ಮಂದಿಗೆ ಕೊರೊನಾ ದೃಢವಾಗಿದೆ. ಹೀಗಾಗಿ ಕೊರೊನಾ ತಡೆಗಾಗಿ ಸರ್ಕಾರ ಪ್ರತಿ ಭಾನುವಾರ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ. ಹಾಗೆಯೇ ನೈಟ್ ಕರ್ಫ್ಯೂ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತಿದೆ. ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಜಾರಿಯಾಗಲಿದ್ದು, ಅನಾವಶ್ಯಕವಾಗಿ ಹೊರ ಬರೋರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

    ಸೋಮವಾರದಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ಬಂದ್ ಆಗಲಿದೆ. ಶನಿವಾರ ಒಂದೇ ದಿನ ಕೊರೊನಾ ಮಹಾಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಮತ್ತೆ ಜಾರಿಯಾಗಿದೆ. ಇವತ್ತು ಒಂದೇ ದಿನ ಮಾತ್ರ ರಾತ್ರಿ 9 ಗಂಟೆ ತನಕ ವ್ಯವಹಾರ ನಡೆಸಬಹುದಾಗಿದ್ದು, ನಾಳೆಯಿಂದ ರಾತ್ರಿ 8 ಗಂಟೆಯಿಂದ 5 ರ ತನಕ ಕರ್ಫ್ಯೂ ಇರಲಿದೆ.

  • ವೀಕೆಂಡ್ ಬೆನ್ನಲ್ಲೇ ನೆಲಮಂಗಲದಲ್ಲಿ ಫುಲ್ ಟ್ರಾಫಿಕ್

    ವೀಕೆಂಡ್ ಬೆನ್ನಲ್ಲೇ ನೆಲಮಂಗಲದಲ್ಲಿ ಫುಲ್ ಟ್ರಾಫಿಕ್

    ಬೆಂಗಳೂರು: ವೀಕೆಂಡ್ ಬೆನ್ನಲ್ಲೇ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.

    ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ನವಯುಗ ಟೋಲ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟೋಲ್ ಮೂಲಕ ಸಾವಿರಾರು ವಾಹನಗಳು ಹೊರ ಜಿಲ್ಲೆಗಳಿಗೆ ಪಯಣ ಬೆಳೆಸುತ್ತಿದೆ.

    ಜೂನ್ 8 ರಿಂದ 5ನೇ ಹಂತದ ಲಾಕ್ ಡೌನ್ ಸಡಿಲಿಕೆ ಆಗಲಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳು ಓಪನ್ ಆಗಲಿದ್ದು, ಹೀಗಾಗಿ ಜನರು ಇಂದೇ ಹೊರಟ್ರಾ ಅನ್ನೋ ಅನುಮಾನ ಮೂಡಿದೆ. ಯಾಕೆಂದರೆ ಗುಂಪು ಗುಂಪಾಗಿ ಬೆಂಗಳೂರಿನಿಂದ ವಾಹನಗಳ ದಂಡೇ ಹೊರ ಹೋಗುತ್ತಿದೆ.

    ಇತ್ತ ನವಯುಗ ಟೋಲ್‍ನಲ್ಲಿ ಟೋಲ್ ಫ್ರೀ ಬಿಡುತ್ತಿದ್ದಂತೆಯೇ ಎರಡು ಲಾರಿಗಳ ನಡುವೆ ಅಪಘಾತ ಕೂಡ ಸಂಭವಿಸಿದೆ.

  • ರಜೆ ಮುಗಿಸಿ ಮತ್ತೆ ಬೆಂಗ್ಳೂರಿಗೆ ವಾಪಸ್ – ಕಿಲೋಮೀಟರ್‌ಗಟ್ಟಲೇ  ಟ್ರಾಫಿಕ್ ಜಾಮ್

    ರಜೆ ಮುಗಿಸಿ ಮತ್ತೆ ಬೆಂಗ್ಳೂರಿಗೆ ವಾಪಸ್ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್

    ಬೆಂಗಳೂರು: ಮೂರು ದಿನಗಳ ಹಿಂದೆ ಬೆಂಗಳೂರು ಖಾಲಿ ಮಾಡಿದ್ದ ಜನ ಇದೀಗ ಮತ್ತೆ ರಾಜಧಾನಿಗೆ ಮುಖಮಾಡಿದ್ದಾರೆ. ಪರಿಣಾಮ ಸಂಜೆಯಿಂದ ತುಮಕೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಸಂಜೆ 7 ಗಂಟೆಯ ಒಳಗಡೆ ಮನೆ ಸೇರಬೇಕಾದ ಹಿನ್ನೆಲೆಯಲ್ಲಿ ನೆಲಮಂಗಲ ಟೋಲ್ ಬಳಿ ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿತ್ತು. ಇನ್ನೊಂದು ಕಡೆ ಉತ್ತರ ಭಾರತ ಕಾರ್ಮಿಕರು ಬೆಂಗಳೂರು ಬಿಟ್ಟು ದೊಡ್ಡ ಸಂಖ್ಯೆಯಲ್ಲಿ ತಮ್ಮೂರುಗಳಿಗೆ ತೆರಳುವುದು ಮುಂದುವರಿದಿದೆ.

    ಇವತ್ತು ಕೂಡ ಮಿಜೋರಾಂ, ಒಡಿಶಾ ರಾಜ್ಯಗಳಿಗೆ ತೆರಳಲು ಸಾವಿರಾರು ಕಾರ್ಮಿಕರು ಅರಮನೆ ಮೈದಾನದಲ್ಲಿ ಜಮಾಯಿಸಿದ್ರು. ಯಾರೂ ಸಾಮಾಜಿಕ ಅಂತರ ಪಾಲಿಸಿದ್ದು ಕಂಡು ಬರಲಿಲ್ಲ. ಎಲ್ಲರೂ ರೈಲು ಹತ್ತಲು ಅವಕಾಶ ಸಿಕ್ಕಿದರೆ ಸಾಕು ಅಂತಾ ನೋಂದಣಿ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದರು.

    ಇತ್ತ ಹಾಸನದಲ್ಲೂ ವಲಸೆ ಕಾರ್ಮಿಕರು ಊರುಗಳಿಗೆ ತೆರಳಲು ನೋಂದಣಿ ಮಾಡಿಸಲು ಪರದಾಡಿದರು. ಸರಿಯಾದ ಮಾಹಿತಿ ಸಿಗದೇ ಲಗೇಜ್ ಸಮೇತ ಬಂದಿದ್ದವರು ಒಂದು ಕಿಲೋ ಮೀಟರ್ ಕ್ಯೂ ನಿಂತಿದ್ರು. ಮಕ್ಕಳು, ವೃದ್ಧರು ಬಸವಳಿದುಹೋಗಿದ್ದರು.

  • 2 ದಿನ ರಜೆ ಸಿಗುತ್ತಿದ್ದಂತೆ ಊರಿಗೆ ಹೊರಟ ಜನ- ಬೆಂಗ್ಳೂರಿನಲ್ಲಿ ಟ್ರಾಫಿಕ್ ಜಾಮ್

    2 ದಿನ ರಜೆ ಸಿಗುತ್ತಿದ್ದಂತೆ ಊರಿಗೆ ಹೊರಟ ಜನ- ಬೆಂಗ್ಳೂರಿನಲ್ಲಿ ಟ್ರಾಫಿಕ್ ಜಾಮ್

    ಬೆಂಗಳೂರು: ಕೊರೊನಾ ಕರ್ಫ್ಯೂ ಶುರುವಾಗಲು ಕೆಲವೇ ಗಂಟೆ ಬಾಕಿ ಇರುವಂತೆ ಸಾವಿರಾರು ವಾಹನಗಳು ರಸ್ತೆಗಿಳಿದ ಪರಿಣಾಮ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

    ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಶನಿವಾರ ಸಂಜೆ 7ರಿಂದ ಭಾನುವಾರದವರೆಗೆ ಕರ್ಫ್ಯೂ ಮಾದರಿಯ ಲಾಕ್‍ಡೌನ್ ಘೋಷಿಸಲಾಗಿದೆ. ಜೊತೆಗೆ ರಂಜಾನ್ ಹಿನ್ನೆಲೆ ಸೋಮವಾರ ಸರ್ಕಾರಿ ರಜೆ ಇದೆ. ಇದರಿಂದಾಗಿ ಇಂದು ಸಂಜೆ ಸಾವಿರಾರು ಜನರು ಮನೆ ಹಾಗೂ ಊರುಗಳಿಗೆ ತೆರಳಲು ತಮ್ಮ ವಾಹನದಲ್ಲಿ ಪ್ರಯಾಣ ಆರಂಭಿಸಿದರು. ಇದರಿಂದಾಗಿ ಎಲ್ಲೆಡೆ ಟ್ರಾಫಿಕ್ ಸಮಸ್ಯೆ ಎದುರಾಯಿತು. ಇದನ್ನೂ ಓದಿ: ಫಸ್ಟ್ ಟೈಂ ರಾಜ್ಯದಲ್ಲಿ ದ್ವಿಶತಕ ಸಿಡಿಸಿದ ಕೊರೊನಾ- ಸೋಂಕಿತರ ಸಂಖ್ಯೆ 1,959ಕ್ಕೆ ಏರಿಕೆ

    ಲಾಕ್‍ಡೌನ್ ಸಡಲಿಕೆಯಾದ ಬಳಿಕ ಸಾವಿರಾರ ಜನರು ಬೆಂಗಳೂರಿಗೆ ಬಂದಿದ್ದರು. ಆದರೆ ಈಗ ಭಾನುವಾರ ಹಾಗೂ ಸೋಮವಾರ ರಜೆ ಹಿನ್ನೆಲೆ ಮತ್ತೆ ತಮ್ಮ ತಮ್ಮ ಊರುಗಳತ್ತ ಪಯಣ ಬೆಳೆಸಿದ್ದಾರೆ. ಸಾವಿರಾರು ಜನರು ತಮ್ಮ ವಾಹನಗಳಲ್ಲಿ ಊರುಗಳಿಗೆ ಹೊರಟಿದ್ದರಿಂದ ನೆಲಮಂಗಲದ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಉಂಟಾಯಿತು.

    ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ರಾಜ್ಯದಲ್ಲಿ ಮಹಾಮಾರಿ ಕೊರೊನಾ ತಾಂಡವವಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನಿಂದ ಸಾವಿರಾರು ಜನರು ಗುಂಪು ಗುಂಪಾಗಿ ತಮ್ಮ ಊರುಗಳಿಗೆ ಪಯಣ ಬೆಳೆಸಿದ್ದಾರೆ. ಇದರಿಂದಾಗಿ ಈ ಜನರು ಹಳ್ಳಿಗಳಿಗೂ ಕೋವಿಡ್-19 ವೈರಸ್ ಅನ್ನು ಹಬ್ಬಿಸುತ್ತಾರಾ ಎಂಬ ಆತಂಕ ಮೂಡಿಸಿದೆ.

  • ಲಾಕ್‍ಡೌನ್, ನಡು ರಸ್ತೆಯಲ್ಲಿ ನವಿಲುಗಳ ನರ್ತನ- ವಿಡಿಯೋ ನೋಡಿ

    ಲಾಕ್‍ಡೌನ್, ನಡು ರಸ್ತೆಯಲ್ಲಿ ನವಿಲುಗಳ ನರ್ತನ- ವಿಡಿಯೋ ನೋಡಿ

    ನವದೆಹಲಿ: ರಸ್ತೆಗಳಲ್ಲಿ ವಾಹನಗಳಿಂದ ಟ್ರಾಫಿಕ್ ಜಾಮ್ ಉಂಟಾಗುವುದು ಸಾಮಾನ್ಯ. ಆದರೆ ಇದೀಗ ಲಾಕ್‍ಡೌನ್‍ನಿಂದಾಗಿ ವಾಹನ ಸಂಚಾರ ಸ್ಥಗಿತವಾಗಿದ್ದರಿಂದ ವನ್ಯ ಜೀವಿಗಳು ರಸ್ತೆಯನ್ನು ತಮ್ಮದಾಗಿಸಿಕೊಂಡಿವೆ. ಇಂತಹ ಹಲವು ಉದಾಹರಣೆಗಳಿದ್ದು, ಇದೀಗ ಹತ್ತಾರು ನವಿಲುಗಳ ಗುಂಪು ರಸ್ತೆಯಲ್ಲೇ ನರ್ತಿಸಿ, ನಲಿದು ಊಹಿಸಲಾಗದ ಟ್ರಾಫಿಕ್ ಉಂಟುಮಾಡಿವೆ.

    ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಹತ್ತಾರು ನವಿಲುಗಳು ಯಾವುದೇ ಭಯ, ಹಂಗಿಲ್ಲದೆ ರಸ್ತೆಯಲ್ಲೇ ನರ್ತಿಸಿ, ನಲಿದಿವೆ. ಗರಿಬಿಚ್ಚಿ ಕುಣಿದು ಕುಪ್ಪಳಿಸಿವೆ. ಈ ವಿಡಿಯೋ 1.30 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ.

    ರಸ್ತೆ ತುಂಬೆಲ್ಲ ನವಿಲುಗಳದ್ದೇ ಕಾರುಬಾರು ಎನ್ನುವಂತಾಗಿದ್ದು, ಗುಂಪಾಗಿ ಸೇರಿಕೊಂಡು ಫುಲ್ ಟ್ರಾಫಿಕ್ ಜಾಮ್ ಮಾಡಿವೆ. ಸಾಮಾನ್ಯ ದಿನಗಳಲ್ಲಿ ವಾಹನಗಳ ಟ್ರಾಫಿಕ್ ಜಾಮ್ ನೋಡುತ್ತಿದ್ದ ಜನತೆ ನವಿಲುಗಳ ಟ್ರಾಫಿಕ್ ಜಾಮ್ ಕಂಡು ಆಶ್ಚರ್ಯಚಿಕಿತರಾಗಿದ್ದಾರೆ. ನವಿಲುಗಳ ಸೌಂದರ್ಯವನ್ನು ಕಂಡು ಮಾರುಹೋಗಿದ್ದಾರೆ.

    ಅರಣ್ಯಾಧಿಕಾರಿಗಳ ಟ್ವೀಟ್‍ಗೆ ಹಲವರು ಕಮೆಂಟ್ ಮಾಡಿದ್ದು, ವಾವ್ ಎಂತಹ ಆಸಕ್ತಿದಾಯಕ, ಆಹ್ಲಾದಕರ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಒಬ್ಬರು ಅಭಿಪ್ರಾಯ ತಿಳಿಸಿದರೆ, ಮತ್ತೊಬ್ಬರು ಈ ರೀತಿಯ ಟ್ರಾಫಿಕ್ ಜಾಮ್ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನಮ್ಮ ರಾಷ್ಟ್ರೀಯ ಪಕ್ಷಿಗಳ ಸುಂದರವಾದ ಟ್ರಾಫಿಕ್ ಜಾಮ್ ಎಂದು ಬರೆದುಕೊಂಡಿದ್ದಾರೆ.

  • ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನ ಸೀಜ್- ಸಿಲಿಕಾನ್‍ ಸಿಟಿಯಲ್ಲಿ ಮಿಂಚಿನ ಕಾರ್ಯಾಚರಣೆ

    ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನ ಸೀಜ್- ಸಿಲಿಕಾನ್‍ ಸಿಟಿಯಲ್ಲಿ ಮಿಂಚಿನ ಕಾರ್ಯಾಚರಣೆ

    ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ವಿವಿಧೆಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್‍ಡೌನ್ ಬಿಗಿಗೊಳಿಸಿದ್ದು, ಪೊಲೀಸರೂ ಸಷ್ಟೇ ಕಾರ್ಯಪ್ರವೃತ್ತರಾಗಿದ್ದಾರೆ. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.

    ಬೆಂಗಳೂರು ತುಮಕೂರು ಹೆದ್ದಾರಿಯ ಎಸ್‌ಆರ್‌ಎಸ್ ಬಸ್ ನಿಲ್ದಾಣದ ಬಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಸಂಚರಿಸುವ ಬೈಕ್ ಹಾಗೂ ಕಾರುಗಳನ್ನು ಸೀಜ್ ಮಾಡುತ್ತಿದ್ದಾರೆ. ಮಂಗಳವಾರ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಆನಂದರಾವ್ ಸರ್ಕಲ್ ಸೇರಿದಂತೆ ನಗರದ ವಿವಿಧೆಡೆ ಟ್ರಾಫಿಕ್ ಜಾಮ್ ಆಗಿತ್ತು. ಆ ಪ್ರಮಾಣದಲ್ಲಿ ವಾಹನಗಳು ರಸ್ತೆಗೆ ಇಳಿದಿದ್ದವು. ಈ ಹಿನ್ನೆಲೆ ಪೊಲೀಸರು ಲಾಕ್‍ಡೌನ್ ಬಿಗಿಗೊಳಿಸಿದ್ದಾರೆ. ಪ್ರತಿ ವಾಹನವನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

    ಲಾಕ್‍ಡೌನ್ ಇದ್ದರೂ ಇಂದು ಎಸ್‌ಆರ್‌ಎಸ್ ಬಸ್ ನಿಲ್ದಾಣದ ಬಳಿ ಟ್ರಾಫಿಕ್ ಜಾಮ್ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಕಟ್ಟು ನಿಟ್ಟಾಗಿ ಪರಿಶೀಲನೆ ನಡೆಸಿದ್ದಾರೆ. ಒಂದೊಂದೇ ವಾಹನ ತಪಾಸಣೆ ಮಾಡಿ ಕಳಿಸುತ್ತಿದ್ದಾರೆ. ಇಂಟರ್ ವ್ಯೂವ್ ಇದೆ ಸರ್ ಬಿಡಿ, ಪಾಸ್ ಇಲ್ಲ ಎಂದು ಕುಂಟು ನೆಪ ಹೇಳಿಕೊಂಡು ಜನ ಓಡಾಡುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಇದೆ ಈ ಹೊತ್ತಲ್ಲಿ ಯಾವ ಇಂಟರ್ ವ್ಯೂವ್ ಇದೆ ತೋರಿಸು ಎಂದು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಪಾಸ್ ಇಲ್ಲ ಸರ್ ಬಿಡಿ ಎಂದು ಯುವಕ ಗೋಗರೆದರೂ, ಪಾಸ್ ಇಲ್ಲದೆ ಬಿಡುವುದಿಲ್ಲ ಎಂದು ಪೊಲೀಸರು ಖಡಾಖಂಡಿತವಾಗಿ ಹೇಳಿದ್ದಾರೆ.

    ಪ್ರತಿ ವಾಹನವನ್ನೂ ತಪಾಸಣೆ ನಡೆಸುತ್ತಿರುವುದರಿಂದ ಎಸ್‌ಆರ್‌ಎಸ್ ಸಿಗ್ನಲ್ ಬಳಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ನೂರಕ್ಕೂ ಹೆಚ್ಚು ಬೈಕ್‍ಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.

  • ಲಾಕ್‍ಡೌನ್ ಇದ್ರೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

    ಲಾಕ್‍ಡೌನ್ ಇದ್ರೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ವಾಹನ ದಟ್ಟಣೆ ಉಂಟಾಗಿದ್ದು, ಅಚ್ಚರಿ ಮೂಡಿಸಿದೆ.

    ಬೆಳಗ್ಗೆ ಈ ದೃಶ್ಯ ಕಂಡ ಸಿಲಿಕಾನ್ ಸಿಟಿ ಜನತೆಗೆ ಅಚ್ಚರಿ ಉಂಟಾಗಿದ್ದು, ಲಾಕ್‍ಡೌನ್ ಜಾರಿಯಲ್ಲಿದೆಯೋ ಅಥವಾ ಇಲ್ಲವೋ, ಇಷ್ಟು ಬೇಗ ಲಾಕ್‍ಡೌನ್ ಹಿಂಪಡೆದುಬಿಟ್ಟರಾ, ಪ್ರಧಾನಿ ಮೋದಿ ಲಾಕ್‍ಡೌನ್ ಆದೇಶ ಹಿಂಪಡೆದರಾ ಎಂಬ ಅನುಮಾನ ಮೂಡುವಷ್ಟರಮಟ್ಟಿಗೆ ವಾಹನಗಳು ರಸ್ತೆಗಿಳಿದಿವೆ.

    ಬೆಂಗಳೂರಿನ ಕೆ.ಆರ್.ಮಾರ್ಕೆಟ್‍ನಲ್ಲಿ ಈ ದೃಶ್ಯ ಕಂಡುಬಂದಿದ್ದು, ಲಾಕ್‍ಡೌನ್, ಟಫ್ ರೂಲ್ಸ್ ಮಧ್ಯೆ ಭಾರೀ ಪ್ರಮಾಣದ ವಾಹನಗಳು ರಸ್ತೆಗಿಳಿದಿವೆ. ಅಕ್ಕಪಕ್ಕದ ರಸ್ತೆಗಳೆಲ್ಲ ಬಂದ್ ಆದ ಹಿನ್ನೆಲೆ ಕೆ.ಆರ್.ಮಾರ್ಕೆಟ್ ನ ದೃಶ್ಯ ಬೆಚ್ಚಿ ಬೀಳುವಂತಿದೆ. ಬೇರೆ ದಿನಗಳಲ್ಲಿ ಪೀಕ್ ಅವರ್ ನಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಕಂಡುಬರುವಂತ ಟ್ರಾಫಿಕ್ ಲಾಕ್‍ಡೌನ್‍ನಲ್ಲಿಯೂ ಕಂಡುಬಂದಿದೆ. ಹೀಗಾಗಿ ಬಂದ್ ಆಗಿದ್ದ ಟ್ರಾಫಿಕ್ ಸಿಗ್ನಲ್ ಗಳನ್ನು ಮತ್ತೆ ಪ್ರಾರಂಭಿಸಬೇಕು. ಸಿಗ್ನಲ್‍ನಲ್ಲಿ ಟ್ರಾಫಿಕ್ ನಿರ್ವಹಣೆಗೆ ಪೊಲೀಸರನ್ನು ನಿಯೋಜಿಸಬೇಕು ಆ ರೀತಿಯ ದೃಶ್ಯಗಳು ಎದುರಾಗಿವೆ.

    ಆನಂದ್ ರಾವ್ ಸರ್ಕಲ್ ನಲ್ಲಿ ಫುಲ್ ಜಾಮ್ ಆಗಿದ್ದು, ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿವೆ. ತಪಾಸಣೆ ಮಾಡಿ ಬಿಡುವಷ್ಟರಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಆನಂದ್ ರಾವ್ ಸರ್ಕಲ್, ಫ್ಲೈ ಓವರ್ ಕೆಳಗೆ ಇಂದು ಬೆಳಗ್ಗೆ ಟ್ರಾಫಿಕ್ ಫುಲ್ ಜಾಮ್ ಆಗಿದ್ದ ದೃಶ್ಯ ಕಂಡುಬಂದಿತ್ತು. ಅತ್ತ ಪ್ಯಾಲೆಸ್ ಗುಟ್ಟಹಳ್ಳಿ, ಅರಮನೆ ಮೈದಾನದ ಬಳಿ ಪೊಲೀಸರು ವಾಹನ ತಪಾಸಣೆಗೆ ಇಳಿದಿದ್ದು, ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.