Tag: traffic jam

  • ವಿಪರೀತ ಟ್ರಾಫಿಕ್ ಜಾಮ್ – ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ

    ವಿಪರೀತ ಟ್ರಾಫಿಕ್ ಜಾಮ್ – ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ

    ಶ್ರೀನಗರ: ಜಮ್ಮುವಿನ (Jammu) ಶ್ರೀನಗರ ಹೆದ್ದಾರಿಯಲ್ಲಿ (Srinagar National Highway) ಗುಡ್ಡದ ಮೇಲಿನ ದೊಡ್ಡ ಕಲ್ಲುಗಳು ರಸ್ತೆ ಮೇಲೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಈ ಮಧ್ಯೆ 22 ವರ್ಷದ ಗರ್ಭಿಣಿ ಮಹಿಳೆಯೊಬ್ಬರು (Women) ಅಂಬುಲೆನ್ಸ್‌ನಲ್ಲಿಯೇ (Ambulance) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಗೂಲ್‍ನಲ್ಲಿರುವ (Gool) ಧರಮ್-ಸಂಗಲ್ದನ್ (Dharam-Sangaldan) ನಿವಾಸಿ ಶಹೀನಾ, ರಾಂಬನ್‍ನಲ್ಲಿರುವ (Ramban district) ಜಿಲ್ಲಾ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆ ಟ್ರಾಫಿಕ್ ಜಾಮ್‍ನಲ್ಲಿ (Traffic jam) ಸಿಲುಕಿಕೊಂಡಿದ್ದರು. ಈ ವೇಳೆ ತೀವ್ರ ಹೆರಿಗೆ ನೋವಿನಿಂದ ಅಂಬುಲೆನ್ಸ್ ಸಹಾಯಕ ಸಿಬ್ಬಂದಿ ಸಹಾಯದಿಂದ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ‘ಚಕ್ಡಾ ಎಕ್ಸ್ ಪ್ರೆಸ್’ ಜೂಲನ್ ಗೋಸ್ವಾಮಿಗೆ ಗೆಲುವಿನ ವಿದಾಯ

    ಹೆದ್ದಾರಿಯ ಮೇಲಿರುವ ಗುಡ್ಡದ ಮೇಲಿದ್ದ ಕಲ್ಲುಗಳು ರಸ್ತೆ ಮೇಲೆ ಜಾರಿ ಬಿದ್ದಿದ್ದರಿಂದ ಬೆಳಗ್ಗೆಯಿಂದಲೇ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಲ್ಲು ಮೇಲಿನಿಂದ ಕೆಳಗುರುಳಿದ್ದರಿಂದ ಈ ವೇಳೆ ಅನೇಕ ವಾಹನಗಳಿಗೆ ಹಾನಿ ಕೂಡ ಆಗಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಹಾಗೂ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಹುಡುಗಿಯನ್ನು ದಪ್ಪ, ಪುಷ್ಠಿಯಾಗಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು – ದೇವರಿಗೆ ಪತ್ರ ಬರೆದ ಭಕ್ತ

    ಘಟನೆ ಸಂಬಂಧ ಪ್ರತಿಕ್ರಿಯಿಸಿದ ಶಾಹೀನಾ ತಂದೆ ಮೊಹಮ್ಮದ್ ಯೂಸುಫ್ ಅವರು, ನಾವು ರಾಂಬನ್‍ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಗೂಲ್‍ನಿಂದ ಕರೋಲ್‍ಗೆ ತಲುಪಿದಾಗ ಬಹಳ ಟ್ರಾಫಿಕ್ ಇತ್ತು. ಆದರೆ ಸೇನಾ ಸಿಬ್ಬಂದಿ ಅಂಬುಲೆನ್ಸ್‌ ತೆರಳಲು ದಾರಿ ಮಾಡಿಕೊಟ್ಟರು. ಹೀಗಿದ್ದರೂ ಗುಡ್ಡದ ಮೇಲಿದ್ದ ಕಲ್ಲುಗಳು ಮೆಹರ್ ಬಳಿ ರಸ್ತೆಯಲ್ಲಿ ಬಿದ್ದಿದ್ದರಿಂದ ಆಸ್ಪತ್ರೆಗೆ ತೆರಳಲು ಸಾಧ್ಯವಾಗಲಿಲ್ಲ. ಕೊನೆಗೆ ಮಾರ್ಗ ಮಧ್ಯೆ ಅಂಬುಲೆನ್ಸ್‌ನಲ್ಲಿಯೇ ನನ್ನ ಮಗಳು ಮಗುವಿಗೆ ಜನ್ಮ ನೀಡಿದಳು. ಹೆರಿಗೆ ಬಳಿಕ ಶಹೀನಾ ಮತ್ತು ಆಕೆಯ ನವಜಾತ ಶಿಶು ಇಬ್ಬರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ ವೈದ್ಯಕೀಯ ಸಿಬ್ಬಂದಿ, ಸೇನಾ ಸಿಬ್ಬಂದಿ, ಪೊಲೀಸರು ಮತ್ತು ನಾಗರಿಕ ಸ್ವಯಂಸೇವಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಸದ್ಯ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಶಹೀನಾ ಅವರೊಂದಿಗೆ ಬಂದ ನರ್ಸಿಂಗ್ ಸಿಬ್ಬಂದಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾರವಾರ, ಕುಮಟಾದಲ್ಲಿ ಅಬ್ಬರಿಸಿದ ವರುಣ – ಜನಜೀವನ ಅಸ್ತವ್ಯಸ್ತ

    ಕಾರವಾರ, ಕುಮಟಾದಲ್ಲಿ ಅಬ್ಬರಿಸಿದ ವರುಣ – ಜನಜೀವನ ಅಸ್ತವ್ಯಸ್ತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಾದ್ಯಂತ ಇಂದು ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಾಗಿ ಕಾರವಾರ ನಗರ ಮತ್ತು ಸುತ್ತಮುತ್ತ ಹಲವು ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಕಾರವಾರ ನಗದ ಹಬ್ಬುವಾಡದಲ್ಲಿ ಹೈಚರ್ಚ್ ರಸ್ತೆ, ನಂದನಗದ್ದಾ, ರೈಲು ನಿಲ್ದಾಣ ರಸ್ತೆ ಸೇರಿದಂತೆ ಹಲವೆಡೆ ಚರಂಡಿಯಿಂದ ಮಳೆ ನೀರು ಉಕ್ಕಿ ಹರಿದಿದೆ. ರಸ್ತೆಯಲ್ಲಿ ಉಕ್ಕಿ ಹರಿದ ನೀರಿನಿಂದಾಗಿ ವಾಹನ ಸವಾರರು ಪರದಾಡುವಂತಾಗಿದ್ದು, ನಗರದ ರೈಲ್ವೆ ನಿಲ್ದಾಣರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇದನ್ನೂ ಓದಿ: ಇಂಥ ವ್ಯಕ್ತಿ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದ್ದೇ ತಪ್ಪು: ದೇವೇಗೌಡರ ಪತ್ರ

     

    ರವೀಂದ್ರನಾಥ ಟ್ಯಾಗೋರ್ ಕಡಲತೀರದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಳೆ ನೀರು ತುಂಬಿದ್ದು, ಇದರಿಂದ ಸುಮಾರು ಅರ್ಧ ಕಿಲೋಮೀಟರ್ ರಸ್ತೆಯು ನದಿಯಂತೆ ಗೋಚರಿಸುತ್ತಿತ್ತು. ಕುಮಟಾ ಭಾಗದಲ್ಲಿ ಸಹ ಅಬ್ಬರದ ಮಳೆಗೆ ಹಲವು ರಸ್ತೆಗಳು ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು.

    ಜಿಲ್ಲೆಯಲ್ಲಿ ಇದೇ ತಿಂಗಳು 25ರ ವರೆಗೆ ಯಲ್ಲೋ ಅಲರ್ಟ ಫೋಷಿಸಲಾಗಿದ್ದು, ನದಿ ದಡದಲ್ಲಿರುವ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

    Live Tv

  • ಅಗ್ನಿಪಥ್ ಪ್ರತಿಭಟನೆ – ಪರಿಶೀಲನೆ ವೇಳೆ ಭಾರೀ ಟ್ರಾಫಿಕ್ ಜಾಮ್

    ಅಗ್ನಿಪಥ್ ಪ್ರತಿಭಟನೆ – ಪರಿಶೀಲನೆ ವೇಳೆ ಭಾರೀ ಟ್ರಾಫಿಕ್ ಜಾಮ್

    ನವದೆಹಲಿ: ಕೇಂದ್ರದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಬುಧವಾರದಿಂದ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಸೋಮವಾರ ಯೋಜನೆ ವಿರುದ್ಧ ಕೆಲವು ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದು, ದೆಹಲಿ-ಗುರುಗ್ರಾಮ ಎಕ್ಸ್‌ಪ್ರೆಸ್ಸ್ ವೇ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

    ಅಗ್ನಿಪಥ್ ಯೋಜನೆಯನ್ನು ಕೇಂದ್ರ ರದ್ದು ಮಾಡುವಂತೆ ಹಲವು ಸಂಘಟನೆಗಳು ಒತ್ತಾಯಿಸಿ ಬಂದ್‌ಗೆ ಕರೆ ನೀಡಿದ್ದು, ಈ ಹಿನ್ನೆಲೆ ಶಾಂತಿಯನ್ನು ಕಾಪಾಡಲು ಪೊಲೀಸರು ಸರ್ಹೌಲ್ ಗಡಿ ಸಮೀಪ ಎಕ್ಸ್ಪ್ರೆಸ್ ವೇನಲ್ಲಿ ವಾಹನ ತಪಾಸಣೆ ಕೈಗೊಂಡಿದ್ದಾರೆ. ಈ ಕಾರಣ ಒಂದೇ ಕಡೆ ಭಾರೀ ವಾಹನಗಳ ರಾಶಿ ಕಂಡುಬಂದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಮಳೆಯಿಂದ ರಸ್ತೆಯೆಲ್ಲಾ ಜಲಾವೃತ – ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಪೊಲೀಸ್ ಹಾಗೂ ಪತ್ನಿ ಡ್ರೈನೇಜ್ ಗುಂಡಿಗೆ

    ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ಆಯೋಜಿಸಿವೆ. ಇದನ್ನೂ ಓದಿ: ಅಗ್ನಿಪಥ್‌ ವಿರೋಧಿಸಿ ಇಂದು ಭಾರತ್‌ ಬಂದ್‌ – ಹೋರಾಟಗಾರರಿಗೆ ಶಾಕ್‌, 35 ವಾಟ್ಸಪ್‌ ಗ್ರೂಪ್‌ ನಿಷೇಧ

    17.5 ರಿಂದ 21 ವರ್ಷದೊಳಗಿನ ಸೈನಿಕರನ್ನು 4 ವರ್ಷಗಳ ಅವಧಿಗೆ ಶಸ್ತ್ರಾಸ್ತ್ರ ಪಡೆಗಳಲ್ಲಿ ನೇಮಕ ಮಾಡಿಕೊಳ್ಳುವ ಕೇಂದ್ರದ ಯೋಜನೆಗೆ ಕಳೆದ 4 ದಿನಗಳಿಂದ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ಪರಿಣಾಮ ಭಾನುವಾರ 483 ರೈಲುಗಳು ರದ್ದಾಗಿವೆ.

    Live Tv

  • ಇಂದು ಬೆಂಗಳೂರಿಗೆ ಮೋದಿ – ಎಲ್ಲಿ ಸಂಚಾರ ನಿಷೇಧ? ಪರ್ಯಾಯ ಮಾರ್ಗ ಯಾವುದು?

    ಇಂದು ಬೆಂಗಳೂರಿಗೆ ಮೋದಿ – ಎಲ್ಲಿ ಸಂಚಾರ ನಿಷೇಧ? ಪರ್ಯಾಯ ಮಾರ್ಗ ಯಾವುದು?

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವ ಹಿನ್ನೆಲೆ ನಗರ ಹಲವು ರಸ್ತೆಗಳಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ನಗರ ಹಲವು ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

    ಯಾವೆಲ್ಲಾ ರಸ್ತೆಗಳಿಗೆ ವಾಹನ ಸಂಚಾರ ನಿಷೇಧ ಮಾಡಲಾಗಿದೆ?
    ಇಂದು ಮಧ್ಯಾಹ್ನ 12:30 ರಿಂದ 3:00 ಗಂಟೆಯವರೆಗೆ ಈ ರಸ್ತೆಗಳಲ್ಲಿ ಸಂಚಾರ ನಿಷೇಧ ಮಾಡಲಾಗಿದೆ ಎಂಬುವುದರ ಕುರಿತ ಮಾಹಿತಿ ಈ ಕೆಳಗಿನಂತಿದೆ.
    * ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ನಿಷೇಧ
    * ನಾಗರಭಾವಿ ಸರ್ಕಲ್‍ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ ಜಂಕ್ಷನ್‍ವರೆಗೆ ನಿಷೇಧ
    * ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‍ನಿಂದ ಯುನಿವರ್ಸಿಟಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ ನಿಷೇಧ
    * ಕೆಂಗುಂಟೆ ಜಂಕ್ಷನ್ – ನಮ್ಮೂರ ತಿಂಡಿ – ನಾಗರಭಾವಿ ರಿಂಗ್ ರಸ್ತೆ ಕಡೆಗೆ ಸಂಚಾರ ನಿಷೇಧ
    * ತುಮಕೂರು ರಸ್ತೆಯ ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳಿಗೆ ನಿಷೇಧ

    ಪರ್ಯಾಯ ರಸ್ತೆಗಳು ಎಲ್ಲಿ, ಎಲ್ಲಿ ಇರಬಹುದು?
    * ನೈಸ್ ರಸ್ತೆ ಮುಖಾಂತರ ನೈಸ್ ಕಛೇರಿ – ಸೋಂಪುರ ಟೋಲ್ ಉತ್ತರಹಳ್ಳಿ ಮುಖ್ಯ ರಸ್ತೆ – ಸೋಂಪುರ ಟೋಲ್ ಮುಖಾಂತರ ಕೆಂಗೇರಿ ಮತ್ತು ಮೈಸೂರು ಕಡೆಗೆ ಅವಕಾಶ
    * ನಾಗರಭಾವಿ ಸರ್ಕಲ್-ನಮ್ಮೂರ ತಿಂಡಿ ಹೋಟೆಲ್-ಅಂಬೇಡ್ಕರ್ ಕಾಲೇಜ್ ಜಂಕ್ಷನ್- ಜ್ಞಾನಭಾರತಿ ಗೇಟ್ ಕಡೆಗೆ ಅವಕಾಶ
    * ಆರ್.ಆರ್.ಆರ್ಚ್, ನಾಯಂಡಹಳ್ಳಿ ಜಂಕ್ಷನ್ – ನಾಗರಭಾವಿ ಕಡೆಗೆ ಅವಕಾಶ
    * ತುಮಕೂರು ಕಡೆಯಿಂದ ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚರಿಸುವ ವಾಹನಗಳು ದಾಬಸ್ ಪೇಟೆಯಲ್ಲಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ಮುಖ್ಯರಸ್ತೆ ಮುಖಾಂತರ ಅವಕಾಶ

    ವಾಹನಗಳ ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು
    * ಕೊಮ್ಮಘಟ್ಟ ಮುಖ್ಯ ರಸ್ತೆ (ಶಂಕರ್‍ನಾಗ್ ಸರ್ಕಲ್ ನಿಂದ ರಾಬಿನ್ ಥಿಯೇಟರ್ ವರೆಗೆ
    * ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡೀನ್ ಬ್ಲಾಕ್ ಜಂಕ್ಷನ್ ವರೆಗೆ
    * ಯುನಿವರ್ಸಿಟಿ ಒಳಭಾಗದ ಮುಖ್ಯರಸ್ತೆ, ಲೇಡೀಸ್ ಹಾಸ್ಟಲ್ ರಸ್ತೆ ಮತ್ತು ಗಾಂಧಿ ಮಾರ್ಗ್ ರಸ್ತೆ ಬಿ. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ

    ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ
    * ಕಾಳಿಕಾಂಭ ರಸ್ತೆ ಮತ್ತು ಪಾರ್ಕ್ ರಸ್ತೆ
    * ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ಸ್ಟಾಪ್ ನಿಂದ ಐಸಾಕ್ ರಸ್ತೆವರೆಗೆ
    * 6ನೇ ಮುಖ್ಯರಸ್ತೆ (ಕಾಳಿಕಾಂಭ ರಸ್ತೆ ಮತ್ತು ಪಾರ್ಕ್ ರಸ್ತೆ)
    * ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ಸ್ಟಾಪ್ ನಿಂದ ಐಸಾಕ್ ವರೆಗೆ

    ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ. ಬೆಂಗಳೂರಿನ ಪೊಲೀಸರು ಅಲ್ಲೆ ಮುಕ್ಕಾಂ ಹೂಡಲಿದ್ದಾರೆ. ಅದರ ಜೊತೆಗೆ ಹೆಚ್ಚುವರಿ ಆಗಿ ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.

    Live Tv

  • ಟ್ರಾಫಿಕ್‍ನಿಂದ ವಿಚ್ಛೇದನ ಆಗೋದಾದ್ರೆ ಬೆಂಗ್ಳೂರಿಗೆ ಮೊದಲ ಸ್ಥಾನ- ಅಮೃತಾ ಹೇಳಿಕೆಗೆ ನೆಟ್ಟಿಗರು ವ್ಯಂಗ್ಯ

    ಟ್ರಾಫಿಕ್‍ನಿಂದ ವಿಚ್ಛೇದನ ಆಗೋದಾದ್ರೆ ಬೆಂಗ್ಳೂರಿಗೆ ಮೊದಲ ಸ್ಥಾನ- ಅಮೃತಾ ಹೇಳಿಕೆಗೆ ನೆಟ್ಟಿಗರು ವ್ಯಂಗ್ಯ

    ಬೆಂಗಳೂರು: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರೊಂದು ಹೇಳಿಕೆ ನಿಡಿದ್ದು, ಇದೀಗ ಅವರ ಹೇಳಿಕೆಗೆ ಹಲವಾರು ರೀತಿಯ ಮೀಮ್ಸ್ ಗಳು ಹುಟ್ಟಿಕೊಂಡಿವೆ.

    ಅಮೃತಾ ಅವರು ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಟ್ರಾಫಿಕ್ ನಿಂದ ನಿಮ್ಮ ಕುಟುಂಬಗಳಿಗೆ ನಿಮಗೆ ಸಮಯ ಕೊಡಲು ಅಸಾಧ್ಯವಾಗುತ್ತೆ. ಹೀಗಾಗಿ ವಿಚ್ಛೇದನಕ್ಕೆ ಇದೂ ಒಂದು ಕಾರಣವಾಗುತ್ತೆ ಎಂದು ಹೇಳಿದ್ದರು. ಅಮೃತಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಅಮೃತಾ ಹೇಳಿಕೆಗೆ ನೆಟ್ಟಿಗರು ಕೂಡ ವ್ಯಂಗ್ಯವಾಡಿದ್ದು, ಹಲವಾರು ರೀತಿಯ ಮೀಮ್ಸ್ ಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸಾಮಾನ್ಯವಾಗಿ ಸಡನ್ ಆಗಿ ಪತಿ ಅಥವಾ ಪತ್ನಿ ಮನೆಗೆ ಬಂದಾಗ ಎಷ್ಟೋ ಅಕ್ರಮ ಸಂಬಂಧಗಳು ಬಯಲಾಗಿ, ಡಿವೋರ್ಸ್ ಆಗಿರುವ ಬಗ್ಗೆ ಕೆಲವೊಂದು ಸ್ಟೋರಿಗಳನ್ನು ಓದಿದ್ದೇನೆ. ಹೀಗಾಗಿ ನೀವು ಉತ್ತಮ ಟ್ರಾಫಿಕ್ ಅನ್ನು ದೂಷಿಸಬೇಕೋ ಹೊರತು ಟ್ರಾಫಿಕ್ ಜಾಮ್ ಅಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್‌ ನೆಹರೂ

    ಇನ್ನೊಬ್ಬರು, ವಾವ್..! ಈಗ ಮುಂಬೈನಲ್ಲಿ ಆಗಿರುವ ಒಟ್ಟು ಡಿವೋರ್ಸ್ ಗಳಲ್ಲಿ ಶೇ.3ರಷ್ಟು ಪ್ರಕರಣಕ್ಕೆ ಟ್ರಾಫಿಕ್ ಕಾರಣ ಎಂದು ಹೇಳಲಾಗುತ್ತಿದೆ. ಹಾಗಾದರೆ ಬೆಂಗಳೂರು, ಕೋಲ್ಕತ್ತಾ ಮಂದಿಯ ಕಥೆ ಏನಾಗಬೇಡ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ಇದರಿಂದ ವಿಚ್ಛೇದನಗಳಾಗೋದಾದ್ರೆ ಅದಕ್ಕೆ ಟ್ರಾಫಿಕ್ ವಿಚ್ಛೇದನ ಅಥವಾ ಜಾಮ್ ವಿಚ್ಛೇದನ ಅಂತ ಕರೆಯಬಹುದೇ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ರ ಮೊದಲ ಹಾಡನ್ನು ಸಿನಿಮಾದಿಂದ ತೆಗೆಯಲಾಗಿತ್ತು – ನೀವು ತಿಳಿಯಲೇಬೇಕಾದ 10 ಸಂಗತಿಗಳು ಇಲ್ಲಿವೆ!

    ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂಬುದು ತುಂಬಾ ಆಸಕ್ತಿದಾಯಕ ವಿಚಾರವಾಗಿದೆ. ಒಂದು ವೇಳೆ ಟ್ರಾಫಿಕ್ ಕಾರಣವೆಂದಾದರೆ ಬೆಂಗಳೂರಿನಲ್ಲಿ ಶೆ.10 ರಷ್ಟು ವಿಚ್ಛೇದನಗಳಾಗಬಹುದು ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಅಲ್ಲದೆ ಅನಿಲಬ್ ಸಿಂಗ್ ಎಂಬವರು, ಟ್ರಾಫಿಕ್ ಕಾರಣವೆಂದಾದರೆ ಸದ್ಯ ಬೆಂಗಳೂರಿನ ಪ್ರತಿಯೊಬ್ಬರು ಇಷ್ಟೊತ್ತಿಗೆ ಸಿಂಗಲ್ ಆಗಿ ಇರುತ್ತಿದ್ದರು ಎಂದಿದ್ದಾರೆ.

    ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅಮೃತಾ, ನಾನು ಮಾಜಿ ಸಿಎಂ ಪತ್ನಿಯಾಗಿ ಅಲ್ಲ, ಬದಲಿಗೆ ಸಾಮಾನ್ಯ ನಾಗರಿಕಳಾಗಿ ಹೇಳುತ್ತಿದ್ದೇನೆ. ನಾನು ಒಮ್ಮೆ ಹೊರಗೆ ಹೋದಾಗ ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತೇನೆ. ಟ್ರಾಫಿಕ್ ನಿಂದ ಜನ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಗಳು ಟ್ರಾಫಿಕ್ ಸಮಸ್ಯೆಯಿಂದಲೇ ಉಂಟಾಗುತ್ತಿವೆ ಎಂದು ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಅಮೃತಾ ಫಡ್ನವೀಸ್ ಅವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    https://twitter.com/codenamedeb/status/1489961471203151873

  • ರೋಡಿಗೆ ಬಂದ ನಾಗರಹಾವು- ಅರ್ಧ ಗಂಟೆ ಸಂಚಾರ ಬಂದ್

    ರೋಡಿಗೆ ಬಂದ ನಾಗರಹಾವು- ಅರ್ಧ ಗಂಟೆ ಸಂಚಾರ ಬಂದ್

    ಚಿಕ್ಕೋಡಿ: ನಾಗರಹಾವು ರಸ್ತೆಗೆ ಬಂದು ಅರ್ಧ ಗಂಟೆಗಳ ಕಾಲ ಸಂಚಾರ ಬಂದ್ ಮಾಡಿರಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಸಂಭವಿಸಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಈ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಇಂದು ಸಂಜೆ ನಾಗರಹಾವು ಕಾಣಿಸಿಕೊಂಡು, ರೋಡಿನ ಮೇಲೆ ಹೆಡೆ ಎತ್ತಿ ಕೆಲಕಾಲ ಆಟ ಆಡಿದೆ. ಇದನ್ನೂ ಓದಿ: ಥಿಯೇಟರ್‌ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ

    ಅರ್ಧ ಗಂಟೆಗಳ ಕಾಲ ರೋಡಿನ ಮೇಲೆ ಆಟ ಆಡಿದ ನಂತರ ಪಕ್ಕದ ಹುಲ್ಲು ಗಾಡಿಗೆ ಸೇರಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತು. ವಾಹನ ಸವಾರರು ಮಾತ್ರ ಹಾವು ನೋಡುತ್ತ ಮೂಕ ಪ್ರೇಕ್ಷಕರಂತೆ ನಿಂತಿದ್ದರು.

  • ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ- ಫುಲ್ ಟ್ರಾಫಿಕ್, ಪೊಲೀಸರ ಜೊತೆ ಪ್ರವಾಸಿಗರ ವಾಗ್ವಾದ

    ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ- ಫುಲ್ ಟ್ರಾಫಿಕ್, ಪೊಲೀಸರ ಜೊತೆ ಪ್ರವಾಸಿಗರ ವಾಗ್ವಾದ

    ಚಿಕ್ಕಮಗಳೂರು: ರಾಜ್ಯದ ಸುಪ್ರಸಿದ್ಧ ಪ್ರವಾಸಿ ತಾಣ ತಾಲೂಕಿನ ಮುಳ್ಳಯ್ಯನಗಿರಿಗೆ ಇಂದು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದು, ಕೈಮರ ಚೆಕ್ ಪೋಸ್ಟ್ ಬಳಿ ಭಾರೀ ಸಂಖ್ಯೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

    ಗೌರಿ-ಗಣೇಶ ಹಬ್ಬ ಹಾಗೂ ವಾರಾಂತ್ಯದ ಹಿನ್ನೆಲೆ ತಾಲೂಕಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ ಭಾಗಕ್ಕೆ ಇಂದು ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು. ಏಕಕಾಲಕ್ಕೆ ಭಾರೀ ವಾಹನಗಳು ಬಂದ ಹಿನ್ನೆಲೆ ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಹಾಗೂ ತರೀಕೆರೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಕೈಮರ ಚೆಕ್ ಪೋಸ್ಟ್ ಬಳಿ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದನ್ನೂ ಓದಿ: ಆರೋಗ್ಯ ಕವಚ ಸೇವೆಯಡಿ 120 ಅಂಬುಲೆನ್ಸ್ ಸೇರ್ಪಡೆ – ಸಿಎಂ ಲೋಕಾರ್ಪಣೆ

    ಈ ವೇಳೆ ವಾಹನಗಳನ್ನ ನಿಯಂತ್ರಿಸುವಾಗ ಪೊಲೀಸರು, ಚೆಕ್ ಪೋಸ್ಟ್ ಸಿಬ್ಬಂದಿ ಹಾಗೂ ಪ್ರವಾಸಿಗರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಕೇವಲ ಮುಳ್ಳಯ್ಯನಗಿರಿ ಭಾಗಕ್ಕೆ ಒಂದೇ ತಿಂಗಳಲ್ಲಿ 85 ಸಾವಿರಕ್ಕೂ ಅಧಿಕ ಜನ ಬಂದ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಗಿರಿ ಭಾಗಕ್ಕೆ ಪ್ರವಾಸಿಗರಿಗೆ ಮಿತಿ ಹೇರಿತ್ತು. ದಿನಕ್ಕೆ ಕೇವಲ 300 ವಾಹನ 1,200 ಪ್ರವಾಸಿಗರಗಷ್ಟೆ ಅವಕಾಶ ನೀಡಿತ್ತು. ಬೆಳಗ್ಗೆ 6-9ಕ್ಕೆ 150 ಗಾಡಿ, 600 ಪ್ರವಾಸಿಗರು, ಮಧ್ಯಾಹ್ನ 2-4ಕ್ಕೆ 150 ವಾಹನಗಳು 600 ಜನ. ದಿನಕ್ಕೆ ಕೇವಲ 300 ಗಾಡಿ, 1,200 ಪ್ರವಾಸಿಗರಷ್ಟೆ ಅವಕಾಶ ನೀಡಿತ್ತು. ಆದರೆ ಇಂದು ಭಾರೀ ಸಂಖ್ಯೆಯಲ್ಲಿ ಟ್ರಾಫಿಕ್ ಜಾಮ್ ಆದ ಹಿನ್ನೆಲೆ ಚೆಕ್ ಪೋಸ್ಟ್ ಸಿಬ್ಬಂದಿ 250ಕ್ಕೂ ಹೆಚ್ಚು ವಾನಗಳನ್ನ ಗಿರಿಗೆ ಕಳಿಸಿ ಮತ್ತೆ ನಿರ್ಬಂಧಿಸಿತ್ತು.

    ಪ್ರವಾಸಿ ವಾಹನಗಳು ಹೇಳದೆ-ಕೇಳದೆ ಮುನ್ನುಗ್ಗಿದವು. ಪ್ರಶ್ನಿಸಿದ ಪೊಲೀಸರ ಜೊತೆ ಪ್ರವಾಸಿಗರು ವಾಗ್ಯುದ್ಧಕ್ಕೆ ಇಳಿದಿದ್ದರು. ಬಳಿಕ ಪೊಲೀಸರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆ ಎಲ್ಲರೂ ಸುಮ್ಮನಾದರು. ವಾಹನಗಳನ್ನು ಗಿರಿ ಭಾಗಕ್ಕೆ ಕಳಿಸಿ ಟ್ರಾಫಿಕ್ ಜಾಮ್ ನಿಯಂತ್ರಿಸಿದರು. ನಂತರ ಬಂದ ವಾಹನಗಳನ್ನು ಪೊಲೀಸರು ರಸ್ತೆ ಬದಿ ಸಾಲುಗಟ್ಟಿ ನಿಲ್ಲಿಸಿದ್ದರು. ತಡವಾಗಿ ಬಂದ ಪ್ರವಾಸಿಗರು ಮಧ್ಯಾಹ್ನ 2 ಗಂಟೆವರೆಗೂ ಕಾಯಬೇಕೆಂದು ಕೆಲವರು ಬೇರೆ-ಬೇರೆ ಭಾಗಕ್ಕೆ ಹೊರಟರು. ಇನ್ನೂ ಕೆಲವರು ಬೇರೆ ಕಡೆ ಹೋದರೆ ಮತ್ತೆ ಗಿರಿ ಭಾಗಕ್ಕೆ ಹೋಗಲು ಆಗುತ್ತೋ, ಇಲ್ಲವೋ ಎಂದು ರಸ್ತೆ ಬದಿ ಗಾಡಿ ಹಾಕಿ ಟೈಂ ಪಾಸ್ ಮಾಡಲು ಮುಂದಾದರು.

  • ಆಗುಂಬೆ ಘಾಟ್ ತಿರುವಿನಲ್ಲಿ ಧರೆಗುರುಳಿದ ಮರ – ಎರಡು ಗಂಟೆ ರಸ್ತೆ ಬ್ಲಾಕ್

    ಆಗುಂಬೆ ಘಾಟ್ ತಿರುವಿನಲ್ಲಿ ಧರೆಗುರುಳಿದ ಮರ – ಎರಡು ಗಂಟೆ ರಸ್ತೆ ಬ್ಲಾಕ್

    ಉಡುಪಿ: ಜಿಲ್ಲೆ ಹೆಬ್ರಿ ತಾಲೂಕಿನ ಸೋಮೇಶ್ವರದ 13ನೇ ತಿರುವಿನಲ್ಲಿ ಬೃಹತ್ ಮರ ಧರೆಗುರುಳಿದೆ. ಆಗುಂಬೆ ಘಾಟ್ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಬ್ಲಾಕ್ ಆಗಿದೆ.

    ರಸ್ತೆಗೆ ಸಂಪೂರ್ಣವಾಗಿ ಅಡ್ಡಲಾಗಿ ಮರ ಬಿದ್ದ ಕಾರಣ ವಾಹನ ಸಂಚಾರಕ್ಕೆ ವ್ಯತ್ಯಯ ಆಗಿದೆ. ಸುಮಾರು ಎರಡು ಗಂಟೆಗಳ ಕಾಲ ಉಡುಪಿ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯ ಸಂಪರ್ಕ ಕಡಿತಗೊಂಡಿದೆ. ಸುಮಾರು ಮೂರು ಕಿಲೋಮೀಟರ್ ಗಳವರೆಗೆ ರಸ್ತೆ ಬದಿಯಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿದರು. ಇದನ್ನೂ ಓದಿ: ಆನೆಗೆ ತನ್ನ ಕೈಯಾರೆ ಆಹಾರ ತಿನ್ನಿಸಿದ ವೃದ್ಧೆ – ಹೃದಯಸ್ಪರ್ಶಿ ವೀಡಿಯೋ ವೈರಲ್

    ಅರಣ್ಯ ಇಲಾಖೆಗೆ ಪ್ರಯಾಣಿಕರು ಸಹಕಾರ ನೀಡಿದರು. ಆಗುಂಬೆಯಲ್ಲಿ ಕಳೆದ ಮೂರು ತಿಂಗಳಿಂದ ವಿಪರೀತ ಮಳೆ ಬೀಳುತ್ತಿರುವ ಕಾರಣ ಗುಡ್ಡ ತೇವಗೊಂಡಿದೆ. ವಾರದಲ್ಲಿ ಒಂದೆರಡು ಬಾರಿ ಮರ ರಸ್ತೆಗೆ ಉರುಳುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳೀಯ ಶ್ರೀಧರ ಮಾತನಾಡಿ, ಮಳೆಗಾಲದಲ್ಲಿ ಆಗುಂಬೆ ಘಾಟ್ ರಸ್ತೆಯಲ್ಲಿ ಆಗಾಗ ಮರಗಳು ರಸ್ತೆಗೆ ಉರುಳುತ್ತಿರುತ್ತದೆ. ಮರ ಬಿದ್ದು ಅಲ್ಲಲ್ಲಿ ರಸ್ತೆಗೂ ಹಾನಿಯಾಗಿದೆ. ರಸ್ತೆಯ ಪಕ್ಕದಲ್ಲಿರುವ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ

  • ಸರಣಿ ಅಪಘಾತ- ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್

    ಸರಣಿ ಅಪಘಾತ- ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್

    ಬೆಂಗಳೂರು: ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ, ಎರಡು ಕಿಲೋಮೀಟರ್ ದೂರ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೂದಿಹಾಳ್ ಗೇಟ್ ಬಳಿ ಎರಡು ಲಾರಿ ಹಾಗೂ ಕಾರು ನಡುವೆ ಸರಣಿ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆ ಹಾಗೂ ಕಾರು ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಿಲೋಮೀಟರ್ ದೂರ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಗಂಟೆಗಳ ಕಾಲ ಪರದಾಡುವಂತಾಗಿತ್ತು. ಇದನ್ನೂ ಓದಿ: ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಅಂದರ್

    ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಸಂಪೂರ್ಣವಾಗಿ ಸ್ತಬ್ಧವಾಗಿತ್ತು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿಯುತಿದ್ದಂತೆ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ದೌಡಾಯಿಸಿ ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಎರಡು ಇಕ್ಕೆಲದಲ್ಲಿ ಅವೈಜ್ಞಾನಿಕ ವಾಹನಗಳ ಪಾರ್ಕಿಂಗ್ ನಿಂದ ಇಂತಹ ಅಪಘಾತಗಳು ಪ್ರತಿನಿತ್ಯ ಸಂಭವಿಸುತ್ತಿವೆ. ಕೂಡಲೇ ಪೊಲೀಸರು ಈ ಅವೈಜ್ಞಾನಿಕ ಪಾರ್ಕಿಂಗ್‍ಗೆ ಕಡಿವಾಣ ಹಾಕಿ, ಅಪಘಾತ ತಪ್ಪಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

  • ದೆಹಲಿಯಲ್ಲಿ ಧಾರಾಕಾರ ಮಳೆ- ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ

    ದೆಹಲಿಯಲ್ಲಿ ಧಾರಾಕಾರ ಮಳೆ- ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ

    ನವದೆಹಲಿ: ಭರ್ಜರಿ ಮಳೆಗೆ ದೆಹಲಿ ಮತ್ತೊಮ್ಮೆ ಜಲಾವೃತವಾಗಿದೆ. ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ರಸ್ತೆಗಳು, ಅಂಡರ್‍ ಪಾಸ್‍ಗಳಲ್ಲಿ ನೀರು ತುಂಬಿದೆ.

    ಮಳೆಯ ಆರ್ಭಟದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ದೆಹಲಿಯ ಜೊತೆಗೆ ನೆರೆಯ ಹರಿಯಾಣ, ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲೂ ವರ್ಷಧಾರೆಯಾಗಿದೆ. ಇತ್ತ ಬೆಂಗಳೂರಿನಲ್ಲೂ ತುಂತುರು ಮಳೆಯಾಯ್ತು. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇವತ್ತು ಮಳೆ ಸುರೀತು. ಹೆಬ್ಬಾಳ, ಕೆ.ಆರ್.ಪುರ, ಹಲಸೂರು ಸುತ್ತಮುತ್ತ ವರುಣ ಅಬ್ಬರಿಸಿದ್ರೆ ಉಳಿದೆಡೆ ತುಂತುರು ಮಳೆಯಾಯ್ತು. ಚಿಕ್ಕಬಳ್ಳಾಪುರ ನಗರದಲ್ಲಿ ತುಂತುರು ಮಳೆಯಾದ್ರೆ, ಗೌರಿಬಿದನೂರು, ಶಿಢ್ಲಘಟ್ಟ ತಾಲೂಕಿನಲ್ಲಿ ಮಳೆ ಜೋರಾಗಿತ್ತು. ಸಂಜೆ ವೇಳೆಗೆ ಮೈಸೂರಿನಲ್ಲೂ ವರುಣ ಅಬ್ಬರಿಸಿದ. ಹಾಸನದಲ್ಲೂ ಮಳೆರಾಯ ಏಕಾಏಕಿ ಧೋ ಅಂತ ಸುರಿದ್ರೆ, ರಾಮನಗರದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಅಬ್ಬರಿಸಿತು. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಆ.22ವರೆಗೆ ಕೆಲವು ಕಡೆ ಮಳೆಯಾಗುವ ಸಾಧ್ಯತೆಯಿದ್ದು, ಬಳಿಕ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಕಂಡು ಬಂದಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಇನ್ನಿಲ್ಲ

    ಇಂದು ರಾತ್ರಿ, ನಾಳೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮಂಡ್ಯ ಭಾಗದಲ್ಲಿ ಭಾರೀ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ಭಯಾನಕವಾಗಿ ಕುಸಿದ ಗುಡ್ಡ- ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರ ವೀಡಿಯೋ ವೈರಲ್