Tag: traffic jam

  • ದೀಪಾವಳಿ ಸಾಲು ಸಾಲು ರಜೆ ಮುಗಿಸಿ ಜನ ವಾಪಸ್‌ – ಬೆಂಗಳೂರಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌

    ದೀಪಾವಳಿ ಸಾಲು ಸಾಲು ರಜೆ ಮುಗಿಸಿ ಜನ ವಾಪಸ್‌ – ಬೆಂಗಳೂರಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌

    – ವಾಹನ ದಟ್ಟಣೆಯಲ್ಲಿ ಸಿಲುಕಿ ಜನ ಪರದಾಟ

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಹಿನ್ನೆಲೆ ಊರುಗಳಿಗೆ ತೆರಳಿದ್ದ ಜನ, ರಜೆ ಮುಗಿಸಿ ವಾಪಸಾಗುತ್ತಿರುವ ಪರಿಣಾಮ ಬೆಂಗಳೂರಿನಲ್ಲಿ (Bengaluru Traffic Jam) ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಯಿತು.

    ಸೋಮವಾರ ಕರ್ತವ್ಯಕ್ಕೆ ತೆರಳಬೇಕಾದ ಹಿನ್ನೆಲೆ ಒಮ್ಮೆಲೆ ಬೆಂಗಳೂರಿಗೆ ಜನ ಲಗ್ಗೆಯಿಟ್ಟಿದ್ದಾರೆ. ಈ ಹಿನ್ನೆಲೆ ಭಾನುವಾರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಯಿತು. ಸಂಜೆಯಾಗುತ್ತಿದ್ದಂತೆ ಜನ ವಾಹನ ದಟ್ಟಣೆ ಸಮಸ್ಯೆ ಅನುಭವಿಸಿದರು. ಇದನ್ನೂ ಓದಿ: ಕಾರವಾರ | ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಗೆ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದ ಗುರುಪ್ರಸಾದ್!

    ಗೊರಗುಂಟೆಪಾಳ್ಯ ಸಿಗ್ನಲ್‌ನಿಂದ ಫ್ಲೈಓವರ್ ಹಿಂಭಾಗಕ್ಕೆ ಎರಡು ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಆಗಿರುವ ದೃಶ್ಯ ಕಂಡುಬಂತು. ವಾಹನ ದಟ್ಟಣೆಯಿಂದ ಸವಾರರು ಪರದಾಡಿದರು. ಮೈಸೂರು ರಸ್ತೆಯಲ್ಲೂ ದಟ್ಟಣೆ ಹೆಚ್ಚಾಗಿತ್ತು. ಚಿತ್ರದುರ್ಗದಿಂದ ತುಮಕೂರುಗೆ ಬರುವ ಮಾರ್ಗ ಮಧ್ಯೆಯೂ ಟ್ರಾಫಿಕ್ ಜಾಮ್ ಆಗಿತ್ತು.

    ಗುರುವಾರ ನರಕ ಚತುರ್ದಶಿ, ಶುಕ್ರವಾರ ಕನ್ನಡ ರಾಜ್ಯೋತ್ಸವ, ಶನಿವಾರ ಬಲಿಪಾಡ್ಯಮಿ ಹಾಗೂ ಭಾನುವಾರ ವಾರಾಂತ್ಯ ರಜೆ ಇತ್ತು. ಹೀಗೆ ಸಾಲು ಸಾಲು ರಜೆ ಇದ್ದ ಕಾರಣ ಜನರು ದಂಡು ದಂಡಾಗಿ ಊರುಗಳತ್ತ ತೆರಳಿದ್ದರು. ಇದನ್ನೂ ಓದಿ: ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಅಶೋಕ್

  • ದೀಪಾವಳಿ| ಸಾಲು ಸಾಲು ರಜೆ ಹಿನ್ನೆಲೆ ಊರುಗಳತ್ತ ಜನ – ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್

    ದೀಪಾವಳಿ| ಸಾಲು ಸಾಲು ರಜೆ ಹಿನ್ನೆಲೆ ಊರುಗಳತ್ತ ಜನ – ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್

    – ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಜನಸಾಗರ

    ಬೆಂಗಳೂರು: ದೀಪಾವಳಿ ಹಾಗೂ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಊರುಗಳತ್ತ ಜನ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ವೃತ್ತಗಳು ಟ್ರಾಫಿಕ್ ಜಾಮ್ ಆಗಿವೆ.

    ಗುರುವಾರ ದೀಪಾವಳಿ ರಜೆ, ನವೆಂಬರ್ 1, 2 ಹಾಗೂ 3 ರಂದು ಸಾಲು ಸಾಲು ರಜೆ ಇದೆ. ಹಬ್ಬಕ್ಕೆ ಎಂದು ಜನ ಊರುಗಳತ್ತ ಮುಖ ಮಾಡಿದ್ದಾರೆ. ಸಾವಿರಾರು ಜನರಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತುಂಬಿ ತುಳುಕುತ್ತಿದೆ. ಹಬ್ಬಕ್ಕೆಂದು ಸಾರಿಗೆ ಇಲಾಖೆ ಎರಡು ಸಾವಿರ ಬಸ್ ಬಿಟ್ಟಿದೆ.

    ಸಂಜೆ ಆಗುತ್ತಿದ್ದಂತೆ ಹೊಸೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಹೊಸೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಸಾವಿರಾರು ವಾಹನಗಳು ಹೊರಟಿದ್ದವು. ಸಂಜೆಯಿಂದಲೇ ವಾಹನ ದಟ್ಟಣೆ ಹೆಚ್ಚಾಗಿತ್ತು. ವಾಹನಗಳು ಟ್ರಾಫಿಕ್ ಜಾಮ್ ಆಗಿದ್ದ ದೃಶ್ಯ ಕಂಡುಬಂತು.

  • ಮೆಜೆಸ್ಟಿಕ್ ಮುಖ್ಯರಸ್ತೆಗೆ ವೈಟ್ ಟಾಪಿಂಗ್ ಭಾಗ್ಯ – ಮುಂದಿನ ತಿಂಗಳಿಂದ ಟ್ರಾಫಿಕ್ ಜಾಮ್ ಸಾಧ್ಯತೆ

    ಮೆಜೆಸ್ಟಿಕ್ ಮುಖ್ಯರಸ್ತೆಗೆ ವೈಟ್ ಟಾಪಿಂಗ್ ಭಾಗ್ಯ – ಮುಂದಿನ ತಿಂಗಳಿಂದ ಟ್ರಾಫಿಕ್ ಜಾಮ್ ಸಾಧ್ಯತೆ

    ಬೆಂಗಳೂರು: ಸಿಲಿಕಾನ್ ಸಿಟಿಯ (Silicon City) ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ (BMTC Bus Stand) ಮುಖ್ಯರಸ್ತೆಗೆ ವೈಟ್ ಟಾಪಿಂಗ್ (White Topping) ಭಾಗ್ಯ ಒದಗಿ ಬಂದಿದೆ.

    ಇತ್ತೀಚಿಗೆ ಬೆಂಗಳೂರಿನಲ್ಲಿ ಗುಂಡಿಗಳ ಸಮಸ್ಯೆ ಕೇಳಿ ಬರುತ್ತಿರುವುದು ಸಾಮಾನ್ಯವಾಗಿದೆ. ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಮುಖ್ಯರಸ್ತೆ ಗುಂಡಿಮಯ ಆಗಿದೆ. ಇದರಿಂದ ಜನರಿಗೆ ಓಡಾಡಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಬೃಹತ್ ಗಾತ್ರದ ಗುಂಡಿಗಳಿಂದ ವಾಹನಗಳು ಓಡಾಡುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲು ವೈಟ್ ಟಾಪಿಂಗ್ ಕಾಮಗಾರಿ ಮಾಡಲು ಬಿಬಿಎಂಪಿ (BBMP) ಪ್ಲ್ಯಾನ್ ಮಾಡಿದೆ.ಇದನ್ನೂ ಓದಿ: ಜಾತಿ ವ್ಯವಸ್ಥೆ ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಾ ಇದ್ದಾರೆ: ಪೇಜಾವರ ಶ್ರೀ

    ಸದ್ಯ ವೈಟ್ ಟಾಪಿಂಗ್ ಮಾಡಲು ಸಿದ್ಧವಾಗಿದ್ದು, ವೈಟ್ ಟಾಪಿಂಗ್ ಕಾಮಗಾರಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಆರಂಭ ಆಗಲಿದೆ. ರಸ್ತೆಯ ಒಂದು ಭಾಗವನ್ನು ಬಂದ್ ಮಾಡಿ ಕಾಮಗಾರಿ ಆರಂಭ ಮಾಡಲಿದ್ದು, ಮತ್ತೊಂದು ಭಾಗದಲ್ಲಿ ರಸ್ತೆ ಸಂಚಾರ ಇರಲಿದೆ. ವೈಟ್ ಟ್ಯಾಪಿಂಗ್ ಕೆಲಸದಿಂದ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದೆ.

    ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಓಡಾಟಕ್ಕೆ ಸಮಸ್ಯೆ ಆಗಲಿದೆ. ರೈಲ್ವೆ ಸ್ಟೇಷನ್, ಆನಂದ್ ರಾವ್ ಸರ್ಕಲ್, ಚಿಕ್ಕಪೇಟೆ, ಉಪ್ಪಾರಪೇಟೆ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಲಿದೆ. ಕಾಮಗಾರಿ ಆರಂಭವಾದ ನಾಲ್ಕು ತಿಂಗಳುಗಳ ಕಾಲ ಈ ಸಮಸ್ಯೆ ಇರಲಿದೆ.

    ಮೆಜೆಸ್ಟಿಕ್‌ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಮಾಡುವುದು ಒಳ್ಳೆಯ ವಿಚಾರವಾದರೆ ಕಾಮಗಾರಿ ಆರಂಭ ಮಾಡಿ ಬೇಗ ಕೆಲಸ ಮುಗಿಸುತ್ತಾರಾ ಎನ್ನುವುದೇ ಸದ್ಯದ ಕುತೂಹಲ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: 28-10-2024

  • ಊರಿನತ್ತ ಜನ | ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

    ಊರಿನತ್ತ ಜನ | ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

    ನೆಲಮಂಗಲ: ಸಾಲು ಸಾಲು ರಜೆ (Dasara Holiday) ಇರುವ ಹಿನ್ನೆಲೆಯಲ್ಲಿ ಬೆಂಗಳೂರು -ತುಮಕೂರು (Bengaluru-Tumakuru) ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.

    ಶುಕ್ರವಾರ ಆಯುಧ ಪೂಜೆ, ಶನಿವಾರ ವಿಜಯದಶಮಿ ಇರುವ ಕಾರಣ ಭಾರೀ ಸಂಖ್ಯೆಯಲ್ಲಿ ಊರಿನತ್ತ ಜನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದನ್ನೂ ಓದಿ: ಬೈಕ್ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಧಿಪತಿ – 25 ಕೋಟಿ ಬಹುಮಾನ ಗೆದ್ದ ಮಂಡ್ಯದ ಗಂಡು

     

    ನೆಲಮಂಗಲ ಬಳಿ ಕಿಲೋಮೀಟರ್ ದೂರದವೆಗೆ ಟ್ರಾಫಿಕ್ ಜಾಮ್‌ (Traffic Jam) ಉಂಟಾಗಿದೆ. ನೆಲಮಂಗಲ ಕುಣಿಗಲ್ ಬೈಪಾಸ್ ನಿಂದ ಅರಿಶಿನುಕುಂಟೆವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ.

    ಪ್ರತಿಬಾರಿಯೂ ಹಬ್ಬ ಹರಿದಿನಗಳಲ್ಲಿ ಬೆಂಗಳೂರು- ತುಮಕೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಸಾಮಾನ್ಯ. ಗೊರಗುಂಟೆ ಪಾಳ್ಯ ಮೂಲಕ 18 ಜಿಲ್ಲೆಗಳಿಗೆ ವಾಹನಗಳು ಸಂಚರಿಸುವ ಕಾರಣ ಈ ರಸ್ತೆಯಲ್ಲಿ ವಾಹನ ದಟ್ಟಣೆ ಯಾವಾಗಲೂ ಜಾಸ್ತಿ ಇರುತ್ತದೆ.

     

  • ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ

    ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ

    ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ (Bengaluru Rain) ರಾತ್ರಿ ಭಾರೀ ಮಳೆ (Heavy Rain) ಸುರಿದಿದೆ.

    ಮಲ್ಲೇಶ್ವರಂ, ರಾಜಾಜಿನಗರ, ಚಂದ್ರ ಲೇಔಟ್, ಯಶವಂತಪುರ, ಕಾರ್ಪೋರೇಶನ್, ಚಾಮರಾಜಪೇಟೆ, ಪ್ಯಾಲೇಸ್ ಗುಟ್ಟಹಳ್ಳಿ, ಮಹಾಲಕ್ಷ್ಮೀ ಲೇಔಟ್, ಗೊರಗುಂಟೆಪಾಳ್ಯ,ಪೀಣ್ಯ, ಮತ್ತಿಕೇರೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಇದನ್ನೂ ಓದಿ: ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು

     

    ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದ್ದು ಫ್ಲೈ ಓವರ್, ಅಂಡರ್ ಪಾಸ್ ಕೆಳಗೆ ದ್ವಿಚಕ್ರ ವಾಹನ ಸವಾರರು ನಿಂತಿದ್ದರು.

    ನಾಳೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಅಲರ್ಟ್ ನೀಡಲಾಗಿದೆ.

     

  • ಮೆಟ್ರೋ ತಡೆಗೋಡೆಗೆ ಗೂಡ್ಸ್ ಲಾರಿ ಡಿಕ್ಕಿ – 10 ಕಿಮೀವರೆಗೂ ಟ್ರಾಫಿಕ್ ಜಾಮ್

    ಮೆಟ್ರೋ ತಡೆಗೋಡೆಗೆ ಗೂಡ್ಸ್ ಲಾರಿ ಡಿಕ್ಕಿ – 10 ಕಿಮೀವರೆಗೂ ಟ್ರಾಫಿಕ್ ಜಾಮ್

    – ಸತತ 1 ಗಂಟೆಗಳ ಕಾಲ ನಿಂತಲ್ಲೇ ನಿಂತ ವಾಹನಗಳು

    ಬೆಂಗಳೂರು: ಗೂಡ್ಸ್ ಲಾರಿ (Goods Lorry) ಮೆಟ್ರೋ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ನಾಗವಾರ-ಹೆಬ್ಬಾಳ (Nagavara – Hebbal) ಮಾರ್ಗದ ಕೆಂಪಾಪುರದ ಬಳಿ ನಡೆದಿದೆ.

    ಇಂದು (ಸೆ.20) ಬೆಳಗ್ಗೆ 7ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು. ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.ಇದನ್ನೂ ಓದಿ: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್

    ನಾಗವಾರ-ಹೆಬ್ಬಾಳ ಮಾರ್ಗದ ಕೆಂಪಾಪುರದ ಬಳಿಯಿರುವ ಔಟರ್‌ರಿಂಗ್ ರೋಡ್ ಸರ್ವೀಸ್ ರಸ್ತೆಯ ಮುಖ್ಯರಸ್ತೆಯಲ್ಲಿ 10 ಚಕ್ರದ ಲಾರಿ ಮೆಟ್ರೋ ಕಾಮಗಾರಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಎರಡು ಜೆಸಿಬಿ ಬಳಸಿ ಪೊಲೀಸರು ಲಾರಿಯನ್ನು ತೆಗೆಯಲು ಪ್ರಯತ್ನಪಡುತ್ತಿದ್ದಾರೆ.

    ಈ ಅವಘಡದಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, 10ಕಿಮೀವರೆಗೂ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ಹೆಬ್ಬಾಳದಿಂದ ರಾಮಮೂರ್ತಿನಗರದವರೆಗೆ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದಾಗಿ ಸತತ 1 ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತು, ವಾಹನ ಚಾಲಕರು ಪರದಾಡುವಂತಾಯಿತು. ಕಾದು ಬೇಸತ್ತು ಹೋಗಿ, ಕೊನೆಗೆ ಟೈಂ ಆದ ಹಿನ್ನೆಲೆ ಬೈಕ್ ಸವಾರರು ಅಪಘಾತಗೊಂಡಿರುವ ಲಾರಿ ಕೆಳಗೆ ನುಗ್ಗಿಸಿ ಮುಂದೆ ಸಾಗುತ್ತಿದ್ದಾರೆ ಇದನ್ನೂ ಓದಿ: ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ – ಹೆಚ್.ಡಿ ರೇವಣ್ಣ ಸವಾಲ್

  • ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ – ಸಾಲುಗಟ್ಟಿ ನಿಂತಿರುವ ವಾಹನಗಳು

    ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ – ಸಾಲುಗಟ್ಟಿ ನಿಂತಿರುವ ವಾಹನಗಳು

    ಬೆಂಗಳೂರು: ಹೊಸೂರು-ಬೆಂಗಳೂರು (Hosur-Bengaluru) ಮುಖ್ಯರಸ್ತೆಯಲ್ಲಿ ಏಕಾಏಕಿ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದ್ದು, ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ.

    ಚಂದಾಪುರದಿಂದ ಅತ್ತಿಬೆಲೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ದಿಢೀರ್ ಟ್ರಾಫಿಕ್ ಉಂಟಾಗಿದೆ. ಸಂಜೆ 5 ಗಂಟೆ ಕಳೆದರೂ ಹೆದ್ದಾರಿಯಲ್ಲಿ ವಾಹನದಟ್ಟಣೆ ಕಡಿಮೆ ಆಗಿಲ್ಲ. ಇದನ್ನೂ ಓದಿ: iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್‌ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?

    ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆ ಶಾಲಾ ಬಸ್, ಅಂಬುಲೆನ್ಸ್ ಸೇರಿದಂತೆ ಇತರೆ ವಾಹನ ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ, ಸಿಬಿಐಗಿಂತ ಜಾಸ್ತಿ ಹಿಂಸೆ ಕೊಡ್ತಿದೆ – ಡಿಕೆಶಿ

  • ಸಾಲುಸಾಲು ರಜೆ ಮುಗಿಸಿ ಬೆಂಗಳೂರಿನತ್ತ ಜನ – ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಸಾಲುಸಾಲು ರಜೆ ಮುಗಿಸಿ ಬೆಂಗಳೂರಿನತ್ತ ಜನ – ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    – ನಗರ ಪ್ರವೇಶಿಸಲು ಪ್ರಯಾಣಿಕರ ಪರದಾಟ

    ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ (Independence Day) ಹಾಗೂ ವರಮಹಾಲಕ್ಷ್ಮಿ ಹಬ್ಬ (Varamahalakshmi Festival)  ಹೀಗೆ ಸಾಲು ಸಾಲು ರಜೆ (Holiday) ಹಿನ್ನೆಲೆ ತಮ್ಮ ತಮ್ಮ ಊರಿಗೆ ತೆರಳಿದ್ದ ಜನ ಇಂದು (ಭಾನುವಾರ) ಬೆಂಗಳೂರಿಗೆ (Bengaluru) ವಾಪಸ್ ಆಗಿದ್ದಾರೆ. ಈ ಹಿನ್ನೆಲೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸೇರಿದಂತೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

    ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ, ಆ.16ರಂದು ವರಮಹಾಲಕ್ಷ್ಮಿ ಹಬ್ಬ ಮತ್ತು 2 ದಿನ ವೀಕೆಂಡ್ ಇದ್ದ ಹಿನ್ನೆಲೆ ಜನರು ತಮ್ಮ ಊರಿನತ್ತ ಮುಖ ಮಾಡಿದ್ದರು. ಇದೀಗ ಕೆಲಸದ ಸಲುವಾಗಿ ಮತ್ತೆ ಬೆಂಗಳೂರಿಗೆ ಜನರು ಆಗಮಿಸುತ್ತಿದ್ದಾರೆ. ಈ ಸಂದರ್ಭ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದ್ದು, ಬೆಂಗಳೂರು ನಗರ ಪ್ರವೇಶಿಸಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ವಿ.ಸೋಮಣ್ಣರ ಕಾರ್ಯಾಲಯ ವಿವಾದ ಸುಖಾಂತ್ಯ

    ಇಷ್ಟು ಮಾತ್ರವಲ್ಲದೇ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಸಹ ಪುಲ್ ರಶ್ ಆಗಿದ್ದು, ಕೆಂಗೇರಿ ಚೆಕ್ ಪೋಸ್ಟ್ ಬಳಿ ಜಾಮ್ ಉಂಟಾಗಿದೆ. ಇದನ್ನೂ ಓದಿ: Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

  • ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ – ಕಿ.ಮೀಗಟ್ಟಲೆ ಟ್ರಾಫಿಕ್‌ ಜಾಮ್‌

    ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ – ಕಿ.ಮೀಗಟ್ಟಲೆ ಟ್ರಾಫಿಕ್‌ ಜಾಮ್‌

    ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ (Charmadi Ghat) 16 ಚಕ್ರದ ಲಾರಿ ಕೆಟ್ಟು ನಿಂತ ಪರಿಣಾಮ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.

    ಹುಬ್ಬಳ್ಳಿಯಿಂದ ಮಂಗಳೂರಿಗೆ (Hubballi-Mangaluru) ಹೋಗುತ್ತಿದ್ದ ಸಿಮೆಂಟ್ ಲಾರಿ ಬೆಳಗ್ಗೆ 8:30ರ ವೇಳೆಗೆ ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಕೆಟ್ಟು ನಿಂತಿದೆ. ಘಾಟಿಯ ತಿರುವಿನಲ್ಲಿ ಟರ್ನ್ ಮಾಡಲಾಗದೇ ಲಾರಿ ನಿಂತ ಕಾರಣ ಮುಂದೆಯೂ ಹೋಗಲಾಗದೆ, ಹಿಂದೆಯೂ ಹೋಗಲಾಗದೆ ವಾಹನಗಳ ಚಾಲಕರು ಈಗ ಪರದಾಡುತ್ತಿದ್ದಾರೆ.  ಇದನ್ನೂ ಓದಿ: ಒಂದಲ್ಲ ಎರಡು ಪ್ರಶಸ್ತಿ ಗೆದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್‌

    ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿನಲ್ಲಿ 10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಸಂಚಾರಕ್ಕೆ ನಿಷೇಧವಿದೆ. ಹೀಗಿದ್ದರೂ ಕೊಟ್ಟಿಗೆಹಾರ (Kottigehara) ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಇದ್ದರೂ ಈ ಲಾರಿಗೆ ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಪೊಲೀಸರು ವಾಹನ ಬಿಟ್ಟಿರುವುದಕ್ಕೆ ಸ್ಥಳೀಯರು ಅಸಮಾಧಾನಗೊಂಡಿದ್ದು ಬೆಳಗ್ಗೆಯಿಂದಲೂ ನೂರಾರು ವಾಹನ ಸವಾರರು ಪರದಾಡುತ್ತಿದ್ದಾರೆ. ಇದನ್ನೂ ಓದಿ: ದಾಖಲೆಯ ಮತಗಳಿಂದ ರಷ್ಯಾ ಅಧ್ಯಕ್ಷ ಪುಟಿನ್ ಗೆಲುವು

  • ಶಿವರಾತ್ರಿ ಹಬ್ಬ ಸೇರಿ 3 ದಿನ ರಜೆ- ಊರಿಗೆ ಹೊರಟ ಜನ, ಭಾರೀ ಟ್ರಾಫಿಕ್‌

    ಶಿವರಾತ್ರಿ ಹಬ್ಬ ಸೇರಿ 3 ದಿನ ರಜೆ- ಊರಿಗೆ ಹೊರಟ ಜನ, ಭಾರೀ ಟ್ರಾಫಿಕ್‌

    ಬೆಂಗಳೂರು: ಶಿವರಾತ್ರಿ ಹಬ್ಬ (Maha Shivratri) ಸೇರಿ ಮೂರು ದಿನಗಳ ಕಾಲ ರಜೆಯ ಹಿನ್ನೆಲೆಯಲ್ಲಿ ಜನ ಊರಿಗೆ ಹೊರಟಿದ್ದಾರೆ. ಈಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

    ಶಿವರಾತ್ರಿ ಹಬ್ಬ ಹಾಗೂ ಎರಡನೇ ಶನಿವಾರ ಹಾಗೂ ಭಾನುವಾರ ರಜೆ ಹಿನ್ನೆಲೆಯಲ್ಲಿ ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ಹೊರಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಸುತ್ತ ಮುತ್ತ, ಮೈಸೂರು ಬ್ಯಾಂಕ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಉಪಾರಪೇಟೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನ ಪರದಾಡುತ್ತಿದ್ದಾರೆ.

    ಹಬ್ಬದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಅಧಿಕಾರಿಗಳು ಈಗಾಗಲೇ ಹೆಚ್ಚುವರಿ ಬಸ್ ಗಳನ್ನು ಬಿಟ್ಟಿದ್ದಾರೆ. ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ರಾಜ್ಯ ಮತ್ತು ಹೊರರಾಜ್ಯದ ನಾನಾ ಪ್ರದೇಶಗಳಿಗೆ ಇಂದಿನಿಂದ 10 ರವರೆಗೆ ಹೆಚ್ಚುವರಿಯಾಗಿ 1,500 ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದೆ. ಹಾಗೆಯೇ ಬೆಂಗಳೂರಿಗೆ ಬರುವವರಿಗಾಗಿ ಮಾರ್ಚ್‌ 10 ಮತ್ತು 11 ರಂದು ವಿಶೇಷ ಬಸ್‌ಗಳನ್ನು ಬಿಡಲಾಗುತ್ತಿದೆ.

    ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದರೆ 5% ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣ ಟಿಕೆಟ್‌ ಒಟ್ಟಿಗೆ ಕಾಯ್ದಿರಿಸಿದರೆ, 10% ರಷ್ಟು ರಿಯಾಯಿತಿ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿಯು ಪ್ರಕಟಣೆಯಲ್ಲಿ ತಿಳಿಸಿತ್ತು.