Tag: traffic jam

  • ದತ್ತಪೀಠ ಮಾರ್ಗದಲ್ಲಿ ಕಾರು, ಜೀಪ್ ಡಿಕ್ಕಿ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್!

    ದತ್ತಪೀಠ ಮಾರ್ಗದಲ್ಲಿ ಕಾರು, ಜೀಪ್ ಡಿಕ್ಕಿ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್!

    ಚಿಕ್ಕಮಗಳೂರು: ರಾಜ್ಯದ ಸುಪ್ರಸಿದ್ಧ ಪ್ರವಾಸಿ ತಾಣ ಪಶ್ಚಿಮ ಘಟ್ಟ ತಪ್ಪಲಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಕಾರು-ಜೀಪ್ ನಡುವೆ ಡಿಕ್ಕಿ ಸಂಭವಿಸಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್  (Traffic Jam) ಉಂಟಾಗಿ ಪ್ರವಾಸಿಗರು ಪರದಾಡಿದ್ದಾರೆ.

    ಬೆಂಗಳೂರು ನೋಂದಣಿ ಹೊಂದಿರುವ ಜೀಪ್ ಹಾಗೂ ಗುಜರಾತ್ ನೋಂದಣಿಯ ಕಾರಿನ ನಡುವೆ ನಡೆದ ಅಪಘಾತದಿಂದಾಗಿ ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿ ಪ್ರವಾಸಿಗರು ಪರದಾಡುವಂತಾಗಿತ್ತು. ವೀಕ್ ಎಂಡ್ ಹಿನ್ನೆಲೆ ಇಂದು (ಶನಿವಾರ) ಮುಳ್ಳಯ್ಯನಗಿರಿ ಹಾಗೂ ದತ್ತಪೀಠ (Datta Peetha) ಭಾಗಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಇದರ ನಡುವೆ ಕಾರು-ಜೀಪ್ ಡಿಕ್ಕಿಯಿಂದ ಮತ್ತಷ್ಟು ಸಮಸ್ಯೆ ಉಂಟಾಗಿತ್ತು. ಇದನ್ನೂ ಓದಿ: ಈ ಬಾರಿ ದಸರಾ ಸಿದ್ದರಾಮಯ್ಯ ಅಲ್ಲ ನೂತನ ಸಿಎಂ ಮಾಡ್ತಾರೆ: ಆರ್. ಅಶೋಕ್ ಭವಿಷ್ಯ

    ಅಪಘಾತದಿಂದ ಕಾರಿನಲ್ಲಿದ್ದವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವಾಹನ ದಟ್ಟಣೆ ಸರಿಪಡಿಸಲು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಹಾಗೂ ಪ್ರವಾಸಿಗರು ಹರಸಾಹಸ ಪಟ್ಟಿದ್ದಾರೆ.

    ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ನಿರಂತರವಾಗಿ ಅಪಘಾತಗಳು ನಡೆಯುತ್ತಿದ್ದು, ಪ್ರವಾಸಿ ವಾಹನಗಳೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿವೆ. ಹಾಗಾಗಿ, ಹೊರ ಜಿಲ್ಲೆಗಳಿಂದ ಆಗಮಿಸುವವರು ಎಚ್ಚರಿಕೆಯಿಂದ ಚಾಲನೆ ಮಾಡಲು ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಆರಿದ್ರಾ ಮಳೆಯಬ್ಬರ – 93 ವರ್ಷಗಳ ಬಳಿಕ ಜೂನ್‌ನಲ್ಲೇ KRS 123 ಅಡಿ ಭರ್ತಿ

  • ಏರ್‌ಪೋರ್ಟ್ ರಸ್ತೆಯಲ್ಲಿ 3 ಕಾರುಗಳ ನಡುವೆ ಸರಣಿ ಅಪಘಾತ – ಟ್ರಾಫಿಕ್ ಜಾಮ್

    ಏರ್‌ಪೋರ್ಟ್ ರಸ್ತೆಯಲ್ಲಿ 3 ಕಾರುಗಳ ನಡುವೆ ಸರಣಿ ಅಪಘಾತ – ಟ್ರಾಫಿಕ್ ಜಾಮ್

    – 3-4 ಕಿ.ಮೀವರೆಗೆ ಸಾಲುಗಟ್ಟಿ ನಿಂತಿರೋ ವಾಹನಗಳು

    ಬೆಂಗಳೂರು: ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೆಂಗಳೂರಿನ (Bengaluru) ಏರ್‌ಪೋರ್ಟ್ ರಸ್ತೆಯಲ್ಲಿ (Airport Road) ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

    ಬೆಂಗಳೂರಿನಿಂದ ಏರ್‌ಪೋರ್ಟ್ ಕಡೆಗೆ ಸಾಗುವ ಮಾರ್ಗದಲ್ಲಿ ಸರಣಿ ಅಪಘಾತ ನಡೆದಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಅಪಘಾತದ ಪರಿಣಾಮ ಟ್ರಾಫಿಕ್ ಜಾಮ್ (Traffic Jam) ಉಂಟಾಗಿ ಮೂರರಿಂದ ನಾಲ್ಕು ಕಿ.ಮೀವರೆಗೆ ವಾಹನಗಳು ರಸ್ತೆಯಲ್ಲೇ ನಿಂತಿವೆ. ಇದನ್ನೂ ಓದಿ:  ಇರಾನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ – ದೆಹಲಿಗೆ ಬಂದ ನಂತ್ರ ಕಳಪೆ ಬಸ್ಸು ನೀಡಿದ್ದಕ್ಕೆ ಆಕ್ರೋಶ

    ಸದ್ಯ ಸಂಚಾರಿ ಪೊಲೀಸರು ಅಪಘಾತವಾಗಿರುವ ವಾಹನಗಳನ್ನು ಕ್ಲಿಯರ್ ಮಾಡುತ್ತಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: 2 ಗಂಟೆ ಹಾರಾಟದ ಬಳಿಕ ತಾಂತ್ರಿಕ ದೋಷ – ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್‌

  • ಭಾರೀ ಗಾಳಿ ಮಳೆಗೆ ಚಾರ್ಮಾಡಿಯಲ್ಲಿ ಧರೆಗುರುಳಿದ ಬೃಹತ್ ಮರ – 3 ಕಿಮೀ ಟ್ರಾಫಿಕ್ ಜಾಮ್!

    ಭಾರೀ ಗಾಳಿ ಮಳೆಗೆ ಚಾರ್ಮಾಡಿಯಲ್ಲಿ ಧರೆಗುರುಳಿದ ಬೃಹತ್ ಮರ – 3 ಕಿಮೀ ಟ್ರಾಫಿಕ್ ಜಾಮ್!

    ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಭಾರೀ ಗಾಳಿ ಮಳೆಗೆ (Rain) ಬೃಹತ್ ಗಾತ್ರದ ಮರ ಧರೆಗುರುಳಿದೆ. ಪರಿಣಾಮ 3 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಗಾಳಿ ಮಳೆಗೆ ಚಾರ್ಮಾಡಿಯ ಘಾಟಿ ಅಣ್ಣಪ್ಪ ಸ್ವಾಮಿ ದೇಗುಲದ ಸಮೀಪ ಭಾರೀ ಗಾತ್ರದ ಮರ ಬಿದ್ದಿದೆ. ಇದರಿಂದ ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸುಮಾರು 3 ಕಿಮೀ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದನ್ನೂ ಓದಿ: 2 ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್ ಪಡೆಯಿರಿ: ಆರ್ ಅಶೋಕ್ ಆಗ್ರಹ

    ಒಂದು ಗಂಟೆ ಬಳಿಕ ಜೆಸಿಬಿ ಮೂಲಕ ಮರ ತೆರವು ಮಾಡಲಾಯಿತು. ಬಳಿಕ ವಾಹನ ಸಂಚಾರ ಆರಂಭವಾಯಿತು. ಘಾಟಿಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಬಣಕಲ್ ಪೊಲೀಸರು ಹಾಗೂ ಸ್ಥಳೀಯರ ವಾಹನ ಸವಾರರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಮನಗರ-ತುಮಕೂರು ಮಧ್ಯೆ ಹೇಮಾವತಿ ಕಲಹ – ಸರ್ವಪಕ್ಷ ಸಭೆ ಕರೆಯಲು ಬಿಜೆಪಿ ಆಗ್ರಹ

  • Bengaluru | ಬೇಸಿಗೆಯ ತಾಪಕ್ಕೆ ತಂಪೆರಿದ ವರುಣ – ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ

    Bengaluru | ಬೇಸಿಗೆಯ ತಾಪಕ್ಕೆ ತಂಪೆರಿದ ವರುಣ – ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ

    ಬೆಂಗಳೂರು: ಬೇಸಿಗೆಯ ಬಿರುಬಿಸಿಲಿನಿಂದ ಕಂಗಾಲಾಗಿದ್ದ ಬೆಂಗಳೂರಿಗೆ (Bengaluru) ವರುಣ ಸಿಂಚನವಾಗಿದೆ. ನಗರದ ಹಲವೆಡೆ ಇಂದು (ಮಂಗಳವಾರ) ಮಳೆಯಾಗಿದ್ದು, ಸಿಲಿಕಾನ್‌ ಸಿಟಿ ಕೂಲ್‌ ಕೂಲ್‌ ಆಗಿದೆ.

    ಬಿರು ಬಿಸಿಲಿನಿಂದ ಬೇಯುತ್ತಿದ್ದ ಬೆಂದಕಾಳೂರಿನ ಜನರಿಗೆ ಮಳೆಯು ತಂಪು-ತಂಪು, ಕೂಲ್‌ ಕೂಲ್‌ ಅನುಭವ ನೀಡಿದೆ. ಇದನ್ನೂ ಓದಿ: ಆಸ್ಪತ್ರೆಯ ಡ್ರೆಸ್ ರೂಮ್‍ನಲ್ಲಿ ಕ್ಯಾಮೆರಾ ಇರಿಸಿದ್ದ ಟ್ರೈನಿ ನರ್ಸ್ ಅರೆಸ್ಟ್!

    ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಆನಂದ್ ರಾವ್ ಸರ್ಕಲ್, ಕೆ.ಜಿ ರೋಡ್, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಇದನ್ನೂ ಓದಿ: ಈ ವರ್ಷ ನಬಾರ್ಡ್‌ನಿಂದ ರಾಜ್ಯಕ್ಕೆ ಕಡಿಮೆ ಅನುದಾನ – ಕೆ.ಎನ್ ರಾಜಣ್ಣ ಅಸಮಾಧಾನ

    ಸಂಜೆ ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದವರಿಗೆ ವರುಣ ದೇವ ಮಳೆಯ ಸ್ವಾಗತ ನೀಡಿದ್ದಾನೆ. ಆದ್ರೆ ಏಕಾಏಕಿ ಬಂದ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ. ಹಲವಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

  • ಮಹಾ ಕುಂಭಮೇಳ | 300 ಕಿ.ಮೀ ಟ್ರಾಫಿಕ್ ಜಾಮ್ – 48 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಿಲುಕಿದ ಯಾತ್ರಿಕರು!

    ಮಹಾ ಕುಂಭಮೇಳ | 300 ಕಿ.ಮೀ ಟ್ರಾಫಿಕ್ ಜಾಮ್ – 48 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಿಲುಕಿದ ಯಾತ್ರಿಕರು!

    ಪ್ರಯಾಗ್‌ರಾಜ್: ಮಹಾ ಕುಂಭಮೇಳಕ್ಕೆ (Maha Kumbhmela) ಹೋಗುವ ಮಾರ್ಗಗಳಲ್ಲಿ ನೂರಾರು ಕಿ.ಮೀ ಟ್ರಾಫಿಕ್ ಜಾಮ್‌ (Traffic Jam) ಉಂಟಾಗಿದ್ದು, ಸಾವಿರಾರು ಭಕ್ತರು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದಾರೆ. ವಾಹನಗಳ ಸಾಲು 300 ಕಿ.ಮೀ.ವರೆಗೆ ಸಾಲುಗಟ್ಟಿ ನಿಂತಿವೆ ಎಂದು ವರದಿಯಾಗಿದೆ.

    ವಸಂತ ಪಂಚಮಿಯ ಅಮೃತ ಸ್ನಾನದ ನಂತರ, ಜನಸಂದಣಿ ಕಡಿಮೆಯಾಗಬಹುದು ಎಂಬ ಊಹೆಗಳಿದ್ದವು. ಆದರೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಂಚಾರವನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಪ್ರಯಾಗ್‌ರಾಜ್‌ಗೆ ಸಂಪರ್ಕಿಸುವ ಹಲವಾರು ಮಾರ್ಗಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಒಟ್ಟಾರೆ 300 ಕಿ.ಮೀ ವಾಹನ ದಟ್ಟಣೆ ಉಂಟಾಗಿದೆ. ನೆರೆಯ ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಪೊಲೀಸರು ಪ್ರಯಾಗ್‌ರಾಜ್‌ಗೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರವನ್ನು ತಡೆದಿದ್ದಾರೆ. ಸುಮಾರು 200-300 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪೊಲೀಸರು ಭಕ್ತರಿಗೆ ಮನವಿ ಮಾಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ರೇವಾ ವಲಯದ ಪೊಲೀಸ್ ಮಹಾನಿರ್ದೇಶಕ ಸಾಕೇತ್ ಪ್ರಕಾಶ್ ಪಾಂಡೆ, ವಾರಾಂತ್ಯದ ಜನದಟ್ಟಣೆಯಿಂದಾಗಿ ಟ್ರಾಫಿಕ್‌ ಸಮಸ್ಯೆ ಉಂಟಾಗಿದೆ. ಪರಿಸ್ಥಿತಿ ಒಂದೆರಡು ದಿನಗಳಲ್ಲಿ ಸರಿಯಾಗುವ ಸಾಧ್ಯತೆಯಿದೆ. ಪ್ರಯಾಗ್‌ರಾಜ್ ಆಡಳಿತದ ಜೊತೆ ಮಾತಾಡಿ ವಾಹನಗಳಿಗೆ ತೆರಳಲು ಅನುಮತಿ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ವಾಹನಗಳು ಹೆದ್ದಾರಿಗಳಲ್ಲಿ 48 ಗಂಟೆಗಳ ಕಾಲ ಸಿಲುಕಿಕೊಂಡಿವೆ ಎಂದು ಹೇಳಲಾಗುತ್ತಿದೆ. ಕೇವಲ 50 ಕಿ.ಮೀ ಕ್ರಮಿಸಲು ಸುಮಾರು 10-12 ಗಂಟೆಗಳು ಬೇಕಾಗುತ್ತದೆ ಎಂದು ಸಂಚಾರದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಇನ್ನೂ ವಾರಣಾಸಿ, ಲಕ್ನೋ ಮತ್ತು ಕಾನ್ಪುರದಿಂದ ಪ್ರಯಾಗ್‌ರಾಜ್‌ಗೆ ಹೋಗುವ ಮಾರ್ಗಗಳಲ್ಲಿ 25 ಕಿ.ಮೀ ವರೆಗೆ ಸಂಚಾರ ದಟ್ಟಣೆ ಕಂಡುಬಂದಿದೆ ಎಂದು ವರದಿಯಾಗಿದೆ. ಕುಂಭಮೇಳದ ಬಳಿ ಸಹ ಸುಮಾರು 7 ಕಿ.ಮೀ ಸಂಚಾರ ದಟ್ಟಣೆ ಕಂಡುಬಂದಿದೆ.

    ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಪ್ರಯಾಗ್‌ರಾಜ್ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ.

    ಇಂದು ಪವಿತ್ರ ಸಂಗಮದಲ್ಲಿ 46 ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಕಳೆದ ತಿಂಗಳು ಮಹಾ ಕುಂಭ ಆರಂಭವಾದಾಗಿನಿಂದ ಒಟ್ಟು 44 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಬೆಂಗಳೂರು – ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಬಿಬಿಎಂಪಿ ಪ್ಲ್ಯಾನ್‌

    ಬೆಂಗಳೂರು – ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಬಿಬಿಎಂಪಿ ಪ್ಲ್ಯಾನ್‌

    ಬೆಂಗಳೂರು: ನಗರದ ವಾಹನ ಸವಾರರು ಅದರಲ್ಲೂ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯ (Bengaluru – Tumkur National Highway) ವಾಹನ ಸವಾರರು ನೋಡಲೇಬೇಕಾದ ಸ್ಟೋರಿ ಇದು. ದಿನೇ ದಿನೇ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಜಾಸ್ತಿ ಆಗ್ತಾ ಇದ್ದು ಬಿಬಿಎಂಪಿ ಟ್ರಾಫಿಕ್ ಜಾಮ್ (Traffic Jam) ನಿಯಂತ್ರಣ ಮಾಡೋಕೆ ಹಲವು ಯೋಜನೆ ಹಾಕಿಕೊಂಡಿದೆ. ಹಾಗಾಗಿ ಟ್ರಾಫಿಕ್ ಜಾಮ್ ಸರ್ವೆ ನಡೆಸಿದೆ. ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್‌ಗೆ ಮತ್ತೆ ದೆಹಲಿ ಟ್ಯಾಬ್ಲೋ ತಿರಸ್ಕಾರ – ಆಪ್‌, ಬಿಜೆಪಿ ನಡುವೆ ವಾಗ್ವಾದ

    ಎಲ್ಲಿ ಟ್ರಾಫಿಕ್ ಜಾಮ್ ಆಗ್ತಿದೆ? ಒಂದು ಸ್ಟೇಜ್‌ನಿಂದ ಮತ್ತೊಂದು ಸ್ಟೇಜ್‌ಗೆ ತಲುಪಲು ಎಷ್ಟು ಸಮಯ ಹಿಡಿಯುತ್ತೆ ಅಂತಾ ಸರ್ವೆ ಮಾಡಿದೆ. ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತಪುರದಿಂದ 8ನೇ ಮೈಲಿ ನೈಸ್ ರಸ್ತೆ ತಲುಪಲು ಟ್ರಾಫಿಕ್‌ನಿಂದ ಹೆಚ್ಚು ಸಮಯ ತೆಗೆದುಕೊಳ್ತಿದೆ ಎಂಬ ಸರ್ವೆ ಲೆಕ್ಕಾಚಾರ ಇಲ್ಲಿದೆ. ಇದನ್ನೂ ಓದಿ: ಉಪನ್ಯಾಸಕನ ಮೇಲೆ ವಿದ್ಯಾರ್ಥಿ, ಪೋಷಕರಿಂದ ಹಲ್ಲೆ – ದೂರು ದಾಖಲು

    * ಯಶವಂತಪುರ ಬಿಎಂಟಿಸಿ ಬಸ್ ಸ್ಟಾಪ್ ಟು ಯಶವಂತಪುರ ಸ್ಕೈವಾಕ್‌
    ಅಂತರ – 0.8 ಕಿಮೀ
    ಟ್ರಾಫಿಕ್ ಇದ್ದರೆ – 197 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ – 117 ಸೆಕೆಂಡ್
    ತಡ – 80 ಸೆಕೆಂಡ್

    * ಯಶವಂತಪುರ ಸ್ಕೈವಾಕ್ ಟು ಎಂಇಐ ಜಂಕ್ಷನ್
    ಅಂತರ – 1.2 ಕಿಮೀ
    ಟ್ರಾಫಿಕ್ ಇದ್ದರೆ – 287 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 224 ಸೆಕೆಂಡ್
    ತಡ – 63 ಸೆಕೆಂಡ್

    * ಎಂಇಐ ಜಂಕ್ಷನ್ ಟು ಗೊರಗುಂಟೆ ಪಾಳ್ಯ
    ಅಂತರ – 0.6 ಕಿಮೀ
    ಟ್ರಾಫಿಕ್ ಇದ್ದರೆ – 128 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 107 ಸೆಕೆಂಡ್
    ತಡ – 21 ಸೆಕೆಂಡ್

    * ಗೊರಗುಂಟೆ ಪಾಳ್ಯ ಟು ಓಆರ್‌ಆರ್ ಜಂಕ್ಷನ್
    ಅಂತರ – 0.5 ಕಿಮೀ
    ಟ್ರಾಫಿಕ್ ಇದ್ದರೆ – 120 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 69 ಸೆಕೆಂಡ್
    ತಡ – 51 ಸೆಕೆಂಡ್

    * ಎಸ್‌ಆರ್‌ಎಸ್ ಜಂಕ್ಷನ್ ಟು ಪೀಣ್ಯ ಜಂಕ್ಷನ್ ಪಿಲ್ಲರ್
    ಅಂತರ – 1 ಕಿಮೀ
    ಟ್ರಾಫಿಕ್ ಇದ್ದರೆ- 112 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ – 96 ಸೆಕೆಂಡ್
    ತಡ – 16 ಸೆಕೆಂಡ್

    * ಪೀಣ್ಯ ಜಂಕ್ಷನ್ ಟು ಜಾಲಹಳ್ಳಿ
    ಅಂತರ – 0.5 ಕಿಮೀ
    ಟ್ರಾಫಿಕ್ ಇದ್ದರೆ- 65 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ -55 ಸೆಕೆಂಡ್
    ತಡ – 10 ಸೆಕೆಂಡ್

    * ಜಾಲಹಳ್ಳಿ ಟು ದಾಸರಹಳ್ಳಿ ಜಂಕ್ಷನ್
    ಅಂತರ – 0.8 ಕಿಮೀ
    ಟ್ರಾಫಿಕ್ ಇದ್ದರೆ- 143 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ – 110 ಸೆಕೆಂಡ್
    ತಡ – 33 ಸೆಕೆಂಡ್

    * ದಾಸರಹಳ್ಳಿ ಜಂಕ್ಷನ್ ಟು ಎಂಟನೇ ಮೈಲಿ
    ಅಂತರ – 0.6 ಕಿಮೀ
    ಟ್ರಾಫಿಕ್ ಇದ್ದರೆ- 88 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 47 ಸೆಕೆಂಡ್
    ತಡ – 41 ಸೆಕೆಂಡ್

    * 8ನೇ ಮೈಲಿ ಟು ನೈಸ್ ರೋಡ್
    ಅಂತರ – 4 ಕಿಮೀ
    ಟ್ರಾಫಿಕ್ ಇದ್ದರೆ- 312 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 290 ಸೆಕೆಂಡ್
    ತಡ – 22 ಸೆಕೆಂಡ್

  • ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ – ಟ್ರಾಫಿಕ್ ಜಾಮ್, ಕಿಲೋ ಮೀಟರ್‌ಗಟ್ಟಲೇ ನಿಂತ ವಾಹನಗಳು

    ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ – ಟ್ರಾಫಿಕ್ ಜಾಮ್, ಕಿಲೋ ಮೀಟರ್‌ಗಟ್ಟಲೇ ನಿಂತ ವಾಹನಗಳು

    – ನಗರದಲ್ಲಿ ಮುಂದಿನ 48 ಗಂಟೆ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ (Fengal Cyclone) ಬಿಸಿ ಬೆಂಗಳೂರಿಗೂ ತಟ್ಟಿದೆ. ಬೆಂಗಳೂರಿನಲ್ಲಿ (Bengaluru)  ಜಿಟಿಜಿಟಿ ಮಳೆಯಾಗುತ್ತಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.

    ಮೆಜೆಸ್ಟಿಕ್, ಓಕಳಿಪುರಂ, ಮಾಗಡಿ ರೋಡ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ಸುಮಾರು ಒಂದು ಗಂಟೆಯಿಂದ ಜಾಮ್ ಉಂಟಾಗಿದ್ದು, ಕಿಲೋ ಮೀಟರ್‌ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿವೆ. ಮಳೆ ಮಧ್ಯೆ ವಾಹನ ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಸಿಎಂ, ಡಿಸಿಎಂ ನಿಜವಾದ ಕಾನೂನು ಪಾಲಕರಾಗಿದ್ರೆ ನಾನು ಸಾಷ್ಟಾಂಗ ನಮಸ್ಕಾರ ಮಾಡ್ತೇನೆ – ಅಶ್ವಥ್ ನಾರಾಯಣ

    ಇನ್ನು ಹೆಬ್ಬಾಳ ಫ್ಲೈಓವರ್ ಮಾರ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ವಿಮಾನ ನಿಲ್ದಾಣದಿಂದ ಹೆಬ್ಬಾಳದ ಕಡೆ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಬೆಂಗಳೂರು ನಗರದಲ್ಲಿ ಮುಂದಿನ 48 ಗಂಟೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಆನೇಕಲ್ | ಸಿಲಿಂಡರ್ ಸ್ಫೋಟಗೊಂಡು ಮೂವರು ಕಾರ್ಮಿಕರು ಗಂಭೀರ

    ಎರಡು ದಿನದಿಂದ ಬಿಸಿಲು ಕಾಣದ ಸಿಲಿಕಾನ್ ಸಿಟಿ ಜನರಿಗೆ ಮತ್ತಷ್ಟು ಮಳೆಯ ಕಾಟ ಎದುರಾಗಲಿದ್ದು, ಮುಂದಿನ 2-3 ದಿನ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಅಲ್ಲದೇ ರಾಜ್ಯದ ಕೆಲವು ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮಂಡ್ಯ, ಕೋಲಾರ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಂಭವವಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಇದನ್ನೂ ಓದಿ: ಉತ್ತರ ಕನ್ನಡ| ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ 7ನೇ ತರಗತಿ ವಿದ್ಯಾರ್ಥಿ ದುರ್ಮರಣ

    ಭಾನುವಾರ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ?
    ಚಾಮರಾಜನಗರ: 89 ಎಂಎಂ
    ರಾಮನಗರ: 69 ಎಂಎಂ
    ಮಂಡ್ಯ: 41 ಎಂಎಂ
    ಬೆಂಗಳೂರು ಗ್ರಾಮಾಂತರ: 38 ಎಂಎಂ
    ಕೋಲಾರ: 37 ಎಂಎಂ
    ಮೈಸೂರು: 36 ಎಂಎಂ
    ತುಮಕೂರು: 34 ಎಂಎಂ
    ಚಿಕ್ಕಬಳ್ಳಾಪುರ: 38 ಎಂಎಂ
    ಕೊಡಗು: 26 ಎಂಎಂ
    ಬೆಂಗಳೂರು: 22 ಎಂಎ

  • ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸರಣಿ ಅಪಘಾತ – ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸರಣಿ ಅಪಘಾತ – ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ (Electronic City Flyover) ಗುರುವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಫ್ಲೈಓವರ್ ಮೇಲೆ ಭಾರೀ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.

    ಕಾರೊಂದು ಅತಿವೇಗವಾಗಿ ಬಂದ ಪರಿಣಾಮ ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆ ಕಾರು ಇನ್ನೊಂದು ಫಾರ್ಚುನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಘಟನೆಯಲ್ಲಿ ಒಟ್ಟು ಮೂರು ಕಾರುಗಳು ಹಾಗೂ ಬೈಕ್ ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಇದನ್ನೂ ಓದಿ: ಶುಕ್ರವಾರದಿಂದ ಭಾರತ-ಆಸೀಸ್‌ ನಡುವೆ ಹೈವೋಲ್ಟೇಜ್‌ ಟೆಸ್ಟ್‌ ಸರಣಿ – ಕ್ಯಾಪ್ಟನ್‌ ಬುಮ್ರಾ ಏನ್‌ ಹೇಳಿದ್ರು?

    ಸರಣಿ ಅಪಘಾತದಿಂದಾಗಿ ಫ್ಲೈಓವರ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಸ್ಥಳಕ್ಕೆ ಎಲೆಕ್ಟ್ರಾನ್ ಸಿಟಿ ಎಲಿವೇಟೆಡ್ ಫ್ಲೈವರ್ ಸಿಬ್ಬಂದಿ ಆಗಮಿಸಿದ್ದು, ಅಪಘಾತವಾಗಿದ್ದ ವಾಹನಗಳನ್ನು ತೆರವು ಮಾಡಲು ಹರಸಾಹಸಪಟ್ಟಿದ್ದಾರೆ.

    ಇನ್ನೂ ಅಪಘಾತವಾದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪಾಕಿಸ್ತಾನದಲ್ಲಿ ವಾಹನಗಳ ಮೇಲೆ ಭಯೋತ್ಪಾದಕರ ದಾಳಿ – 50 ಜನ ಸಾವು

  • ನಟಿ ಆಶಿಕಾ ರಂಗನಾಥ್ ನೋಡಲು ಮುಗಿಬಿದ್ದ ಜನ : ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದ ಅಂಬುಲೆನ್ಸ್

    ನಟಿ ಆಶಿಕಾ ರಂಗನಾಥ್ ನೋಡಲು ಮುಗಿಬಿದ್ದ ಜನ : ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದ ಅಂಬುಲೆನ್ಸ್

    ರಾಯಚೂರು: ನಗರದಲ್ಲಿ ನೂತನ ಶಾಪಿಂಗ್ ಮಾಲೊಂದರ ಉದ್ಘಾಟನೆಗೆ ಬಂದ ನಟಿ ಆಶಿಕಾ ರಂಗನಾಥ್‌ರನ್ನು (Ashika Ranganath) ನೋಡಲು ಜನ ಮುಗಿಬಿದ್ದ ಹಿನ್ನೆಲೆ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್‌ನಲ್ಲಿ ಅಂಬುಲೆನ್ಸ್ ಸಿಕ್ಕಿಬಿದ್ದಿದ್ದರಿಂದ ರೋಗಿ ಪರದಾಡಬೇಕಾಯಿತು.ಇದನ್ನೂ ಓದಿ: ಚಿತ್ರೀಕರಣದ ವೇಳೆ ಸುನೀಲ್ ಶೆಟ್ಟಿಗೆ ಗಾಯ

    ನಗರದ ರಾಯಚೂರು-ಲಿಂಗಸುಗೂರು (Raihcuru-Lingasuguru) ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಶಾಪಿಂಗ್ ಮಾಲ್‌ನ ಮಾಲೀಕರು ಶಾಪಿಂಗ್ ಮಾಲ್ ಹೊರಗಡೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಹೆಚ್ಚು ಸಂಖ್ಯೆಯಲ್ಲಿ ಜನ ಸೇರಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಸಿನಿಮಾ ನಟಿಯನ್ನ ನೋಡಲು ಜನ ಮುಗಿಬಿದ್ದು, ಟ್ರಾಫಿಕ್ ಜಾಮ್ ಮಾಡಿದ್ದಾರೆ. ಕೊನೆಗೆ ಪೊಲೀಸರು ಲಾಠಿ ಬಿಸಿ ತೋರಿಸಿ ಜನರನ್ನು ಚದುರಿಸಿ ಅಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ.

    ಶಾಪಿಂಗ್ ಮಾಲ್ ಉದ್ಘಾಟನೆ ಬಳಿಕ ಕಾರ್ಯಕ್ರಮದಲ್ಲಿ ನಟಿ ಆಶಿಕಾ ರಂಗನಾಥ್ ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದ ಜನರನ್ನ ರಂಜಿಸಿದರು. ಈ ವೇಳೆ ಕಿಕ್ಕಿರಿದು ಜನ ಸೇರಿದ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯೂ ಕಿರಿದಾಗಿರುವುದರಿಂದ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು.ಇದನ್ನೂ ಓದಿ: ಸಿಎಂ ಹೆಸರು ಹಾಳು ಮಾಡಲು ಮುಡಾ ಕೇಸ್‌ನಲ್ಲಿ ಆರೋಪ ಮಾಡ್ತಿದ್ದಾರೆ – ದಿನೇಶ್ ಗುಂಡೂರಾವ್

  • Bengaluru Traffic Jam: ರಜೆ ಮುಗಿಸಿ ಬೆಂಗಳೂರಿನತ್ತ ಜನ, ಎಲ್ಲೆಲ್ಲೂ ಜಾಮ್‌ ಜಾಮ್!

    Bengaluru Traffic Jam: ರಜೆ ಮುಗಿಸಿ ಬೆಂಗಳೂರಿನತ್ತ ಜನ, ಎಲ್ಲೆಲ್ಲೂ ಜಾಮ್‌ ಜಾಮ್!

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ (Deepavali festival) ಸಾಲು ಸಾಲು ರಜೆ ಹಿನ್ನೆಲೆ ತಮ್ಮ ಊರುಗಳಿಗೆ ತೆರಳಿದ್ದ ಜನ, ರಜೆ ಮುಗಿಸಿ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಾರೆ. ಈ ಹಿನ್ನೆಲೆ ನಗರದ ವಿವಿಧೆಡೆ ಟ್ರಾಫಿಕ್‌ ಜಾಮ್‌ (Traffic Jam) ಸಮಸ್ಯೆ ಉಂಟಾಗಿದೆ.

    ಬೆಂಗಳೂರು-ತುಮಕೂರು ರಸ್ತೆ (Bengaluru Tumkur Road), ಕೆ.ಆರ್ ಪುರಂ ಮುಖ್ಯರಸ್ತೆ ಹಾಗೂ ಗೊರಗುಂಟೆಪಾಳ್ಯದಿಂದ ಗೋವರ್ಧನ್‌ ವೃತ್ತದ ವರೆಗೂ ಫುಲ್‌ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಭಾನುವಾರ ತಡರಾತ್ರಿಯಿಂದಲೇ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿದ್ದು, ಇದರಿಂದ ಅನ್ಯಜಿಲ್ಲೆಯ ಉದ್ಯೋಗಿಗಳು ಪರದಾಡುವಂತಾಗಿದೆ. ಇದನ್ನೂ ಓದಿ: Canada | ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಖಲಿಸ್ತಾನಿ ಗುಂಪು ಅಟ್ಯಾಕ್‌ – ಜಸ್ಟಿನ್‌ ಟ್ರುಡೋ ಖಂಡನೆ

    ಮೆಟ್ರೋದತ್ತ ಮುಖ ಮಾಡಿದ ಜನ:
    ದೀಪಾವಳಿ ರಜೆ ಮುಗಿಸಿ ಬೆಂಗಳೂರಿನತ್ತ ಜನ ದಾಂಗುಡಿ ಇಡುತ್ತಿದ್ದಾರೆ. ಹೀಗಾಗಿ ತುಮಕೂರು ರಸ್ತೆಯಲ್ಲಿ ಜನರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಟ್ರಾಫಿಕ್‌ಗೆ ಬೇಸತ್ತು ನಾಗಸಂಧ್ರ ಮೆಟ್ರೋ ನಿಲ್ದಾಣದ ಬಳಿ ಇಳಿದು ಜನ ಮೆಟ್ರೋ ಸಂಚಾರದ ಮೊರೆ ಹೋಗುತ್ತಿದ್ದಾರೆ. ಈ ಹಿನ್ನಲೆ ನಾಗಸಂಧ್ರ ಮೆಟ್ರೋ ನಿಲ್ದಾಣ ಫುಲ್ ರಶ್ ಆಗಿದೆ.

    ನಗರದ ಗೊರಗುಂಟೆಪಾಳ್ಯದ ಬಳಿಯೂ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಗೊರಗುಂಟೆಪಾಳ್ಯದಿಂದ ಗೋವರ್ಧನ್‌ ವೃತ್ತದ ವರೆಗೆ ಫುಲ್‌ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಇದರಿಂದ ಬೆಂಗಳೂರು ನಗರ ಪ್ರವೇಶಿಸುವಷ್ಟರಲ್ಲಿ ಜನ ಹೈರಾಣಾಗುತ್ತಿದ್ದಾರೆ. ಇದನ್ನೂ ಓದಿ: ಗುರು ಆತ್ಮಹತ್ಯೆಗೆ ಅಸಲಿ ಕಾರಣ ಇನ್ನೂ ನಿಗೂಢ – ಮೊಬೈಲ್‌, ಟ್ಯಾಬ್‌ FSLಗೆ ಕಳಿಸಲು ತಯಾರಿ