Tag: traffic jam

  • ವಾಹನವನ್ನು ಹಿಂದಿಕ್ಕುವ ಭರದಲ್ಲಿ ಖಾಸಗಿ ಬಸ್ಸಿನಿಂದ ಅಪಘಾತ- ಅಂಗಡಿಯೆದುರು ನಿಂತಿದ್ದ ವ್ಯಕ್ತಿ ದುರ್ಮರಣ

    ವಾಹನವನ್ನು ಹಿಂದಿಕ್ಕುವ ಭರದಲ್ಲಿ ಖಾಸಗಿ ಬಸ್ಸಿನಿಂದ ಅಪಘಾತ- ಅಂಗಡಿಯೆದುರು ನಿಂತಿದ್ದ ವ್ಯಕ್ತಿ ದುರ್ಮರಣ

    ರಾಮನಗರ: ವಾಹನವನ್ನು ಹಿಂದಿಕ್ಕುವ ಭರದಲ್ಲಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ ಡಿವೈಡರ್‍ಗೆ ಡಿಕ್ಕಿಯಾಗಿ ಪಕ್ಕದ ರಸ್ತೆಯ ಅಂಗಡಿ ಬದಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಮನಗರ ಹೊರವಲಯದ ವಡೇರಹಳ್ಳಿ ಸಮೀಪ ನಡೆದಿದೆ.

    ವಡೇರಹಳ್ಳಿ ಗ್ರಾಮದ ಕೃಷ್ಣಪ್ಪ ಮೃತ ದುರ್ದೈವಿ. ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ಉದಯರಂಗ ವಡೇರಹಳ್ಳಿ ಸಮೀಪ ಗೂಡ್ಸ್ ಟೆಂಪೋ ಹಿಂದಿಕ್ಕಲು ಯತ್ನಿಸಿದೆ.

    ಆದ್ರೆ ಟೆಂಪೋಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿದ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಪಕ್ಕದ ರಸ್ತೆಗೆ ನುಗ್ಗಿದ ಬಸ್ ಅಂಗಡಿ ಬದಿ ನಿಂತಿದ್ದ ಕೃಷ್ಣಪ್ಪಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೃಷ್ಣಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ದೊಣ್ಣೆಯಿಂದ ಬಸ್ ನ ಕಿಟಕಿ ಹಾಗೂ ಗ್ಲಾಸ್ ಗಳನ್ನ ಪುಡಿಪುಡಿ ಮಾಡಿದ್ದಾರೆ. ಅಲ್ಲದೇ ಕಲ್ಲು ತೂರಾಟ ಕೂಡ ನಡೆಸಿದ್ದಾರೆ. ಬಳಿಕ ರಾಮನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಪಘಾತ ಸ್ಥಳವನ್ನು ಪರಿಶೀಲಿಸಿದ್ದಾರೆ. ನಂತರ ಕಿಲೋಮೀಟರ್ ದೂರ ಉಂಟಾಗಿದ್ದ ಟ್ರಾಫಿಕ್ ಜಾಮ್ ನ್ನು ತೆರವು ಗೊಳಿಸಿದ್ದಾರೆ.

  • ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಭಾರೀ ಟ್ರಾಫಿಕ್ ಜಾಮ್: ಫೋಟೋಗಳಲ್ಲಿ ನೋಡಿ

    ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಭಾರೀ ಟ್ರಾಫಿಕ್ ಜಾಮ್: ಫೋಟೋಗಳಲ್ಲಿ ನೋಡಿ

    ಲಾಸ್ ಏಂಜಲೀಸ್: ಥ್ಯಾಂಕ್ಸ್ ಗಿವಿಂಗ್ ಡೇ ಹಿನ್ನೆಲೆಯಲ್ಲಿ ಜನರು ಕಾರು ತೆಗೆದ ಪರಿಣಾಮ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದ್ದು ವಿಶ್ವಾದ್ಯಂತ ಸುದ್ದಿಯಾಗಿದೆ.

    ಅಮೆರಿಕಾದಲ್ಲಿ ಪ್ರತೀ ವರ್ಷ ನವೆಂಬರ್ ತಿಂಗಳ ನಾಲ್ಕನೇ ಗುರುವಾರ ಥ್ಯಾಕ್ಸ್ ಗಿವಿಂಗ್ ಡೇ ಆಚರಿಸಲಾಗುತ್ತದೆ. ಈ ದಿನದ ನಂತರ 3 ದಿನ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ನವೆಂಬರ್ 23 ರಂದು ಥ್ಯಾಕ್ಸ್ ಗಿವಿಂಗ್ ಡೇ ಆಚರಣೆ ನಡೆಯಲಿದ್ದು, 26ರವರೆಗೆ ರಜೆ ಇರಲಿದೆ.

    ಈ ದಿನ ಅಮೆರಿಕನ್ನರು ತಮ್ಮ ಸ್ನೇಹಿತರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಮಾತ್ರವಲ್ಲದೇ ಅವರೊಂದಿಗೆ ತಮ್ಮ ಮಧುರ ಕ್ಷಣಗಳನ್ನು ಕಳೆಯುತ್ತಾರೆ. ವೀಕೆಂಡ್ ನಲ್ಲಿ ಈ ಆಚರಣೆಬರುವ ಹಿನ್ನೆಲೆಯಲ್ಲಿ ವರ್ಷದ 4 ದಿನ ಅವರು ತಮ್ಮ ಎಲ್ಲಾ ಕೆಲಸ-ಕಾರ್ಯಗಳನ್ನು ಬಿಟ್ಟು ಗೆಳೆಯರನ್ನು ಭೇಟಿಯಾಗಲೆಂದು ತೆರಳುತ್ತಾರೆ. ಇದರಿಂದಾಗಿ ಬೃಹತ್ ಟ್ರಾಫಿಕ್ ಉಂಟಾಗುತ್ತದೆ.

    ರಾತ್ರಿ ವೇಳೆ ಉಂಟಾದ ಟ್ರಾಫಿಕ್ ಜಾಮ್ ದೃಶ್ಯವನ್ನು ಅಲ್ಲಿನ ಸ್ಥಳೀಯರು ಸೆರೆಹಿಡಿದ್ದಾರೆ. ವಾಹನಗಳ ರೆಡ್‍ಲೈಟ್ ಮಾರ್ಗದುದ್ದಕ್ಕೂ ಝಗಮಗಿಸುತ್ತದೆ. ವಾಹನಗಳ ಲೈಟ್ ನಿಂದ ಕಂಗೊಳಿಸುತ್ತಿರುವ ಈ ದೃಶ್ಯವನ್ನು ಅಲ್ಲಿನ ಚಾನೆಲೊಂದು ಸೆರೆಹಿಡಿದು ಟ್ವೀಟ್ ಮಾಡಿದೆ.

    https://twitter.com/AlexanderXV/status/933187838442639360

  • ಸಚಿವ ಡಿಕೆಶಿ, ರಾಮಲಿಂಗಾರೆಡ್ಡಿಯನ್ನು ಭೇಟಿ ಮಾಡಿದ ನಟ ಶಿವರಾಜ್ ಕುಮಾರ್

    ಸಚಿವ ಡಿಕೆಶಿ, ರಾಮಲಿಂಗಾರೆಡ್ಡಿಯನ್ನು ಭೇಟಿ ಮಾಡಿದ ನಟ ಶಿವರಾಜ್ ಕುಮಾರ್

    ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿಯಾಗಿದ್ದಾರೆ.

    ನಟ ಶಿವರಾಜ್ ಕುಮಾರ್ ಹಾಗೂ ಸ್ಥಳೀಯ ನಿವಾಸಿಗಳು ಸೇರಿ ವಿಧಾನಸೌಧದಲ್ಲಿ ಸಚಿವರನ್ನು ಭೇಟಿ ಮಾಡಿ ಟ್ರಾಫಿಕ್ ಜಾಮ್ ಕಿರಿಕಿರಿಯ ನಿಯಂತ್ರಣಕ್ಕಾಗಿ ಮನವಿ ಸಲ್ಲಿಸಿದ್ದಾರೆ.

    ಮನವಿಯಲ್ಲೇನಿದೆ?: ಮಾನ್ಯತಾ ಟೆಕ್‍ಪಾರ್ಕಗೆ ಹೊಗುವ ವಾಹನಗಳಿಂದ ಟೆಕ್‍ಪಾರ್ಕ್ ಸುತ್ತಮುತ್ತಲಿನ ನಿವಾಸಿಗಳಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಟೆಕ್‍ಪಾರ್ಕ್ ನಿರ್ಮಾಣದ ಸಮಯದಲ್ಲಿ ಟೆಕ್‍ಪಾರ್ಕ್‍ಗೆ ಹೋಗುವ ವಾಹನಗಳಿಗೆ ಇಲ್ಲಿಂದ ರಸ್ತೆ ಕಲ್ಪಿಸಲ್ಲ ಅಂತ ಹೇಳಲಾಗಿತ್ತು. ಆದ್ರೆ ಈಗ ಇದೆ ರಸ್ತೆಯಿಂದ ಮಾನ್ಯತಾ ಟೆಕ್‍ಪಾರ್ಕ್‍ಗೆ ಟೆಕ್‍ಪಾರ್ಕ್ ಸಿಬ್ಬಂದಿ ಹೊಗುತ್ತಿರುವುದರಿಂದ ತೊಂದರೆಯಾಗುತ್ತಿದೆ. 30,000 ಸಿಬ್ಬಂದಿ ಬರುತ್ತಾರೆ ಎಂದು ಅನುಮತಿ ಪಡೆಯಲಾಗಿತ್ತು. ಆದ್ರೆ 1 ಲಕ್ಷ 50 ಸಾವಿರ ಸಿಬ್ಬಂದಿ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನಕ್ಕೆ 5000 ಕ್ಕೂ ಹೆಚ್ಚು ವಾಹನಗಳು ಟೆಕ್‍ಪಾರ್ಕ್‍ಗೆ ಬರುತ್ತವೆ. ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಟ್ರಾಫಿಕ್ ಜಾಮ್ ವಿರುದ್ಧ ಪ್ರತಿಭಟನೆಗಿಳಿದ ಶಿವರಾಜ್ ಕುಮಾರ್

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಮಾನ್ಯತಾ ಟೆಕ್‍ಪಾರ್ಕ್ ಸುತ್ತಮುತ್ತಲಿನ ನಿವಾಸಿಗಳಿಗೆ ಟ್ರಾಫಿಕ್ ನಿಂದ ತೊಂದರೆಯಾಗುತ್ತಿದೆ. ಹಾಗಾಗಿ ಗೃಹ ಸಚಿವರಿಗೆ ಮನವಿ ಸಲ್ಲಿಸಲು ಬಂದಿದ್ದೆವೆ. 30 ಸಾವಿರ ಸಿಬ್ಬಂದಿ ಬರುತ್ತಾರೆ ಎಂದು ಅನುಮತಿ ಪಡೆಯಲಾಗಿತ್ತು. ಆದ್ರೆ ಈಗ 1 ಲಕ್ಷ 50 ಸಾವಿರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ವಾಹನ ದಟ್ಟಣೆಯಾಗುತ್ತಿದೆ. ರಾಮಲಿಂಗಾರಡ್ಡಿ ಸಹ ಇದರ ಬಗ್ಗೆ ಗಮನ ಹರಿಸುವುದಾಗಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.

    ಇದೇ ಅಕ್ಟೋಬರ್ 31ರಂದು ಶಿವರಾಜ್ ಕುಮಾರ್ ಮಾನ್ಯತಾ ಟೆಕ್ ಪಾರ್ಕ್ ಆಸೋಸಿಯೇಷನ್ ವತಿಯಿಂದ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶವನ್ನು ಹೊರ ಹಾಕಿದ್ದರು.

     

     

  • ರಜೆ ಮುಗಿಸಿ ಊರಿಂದ ವಾಪಸ್ಸಾದ ಜನ: ತುಮಕೂರು- ಬೆಂಗ್ಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

    ರಜೆ ಮುಗಿಸಿ ಊರಿಂದ ವಾಪಸ್ಸಾದ ಜನ: ತುಮಕೂರು- ಬೆಂಗ್ಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

    ತುಮಕೂರು: ವೀಕೆಂಡ್ ಹಾಗೂ ಕನಕದಾಸ ಜಯಂತಿಯ ರಜೆ ಮುಗಿಸಿಕೊಂಡು ಸಿಲಿಕಾನ್ ಸಿಟಿ ನಿವಾಸಿಗಳು ವಾಪಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಉಂಟಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಟೋಲ್ ಬಳಿ ಸುಮಾರ್ 2 ಕಿಲೋ ಮೀಟರ್ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಈ ಟ್ರಾಫಿಕ್ ಜಾಮ್‍ನಲ್ಲಿ 2 ಆಂಬುಲೆನ್ಸ್ ಗಳು ಸಿಲುಕಿಕೊಂಡಿದ್ದು ರೋಗಿಗಳಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

    ಸಂಚಾರ ದಟ್ಟಣೆ ನಿಯಂತ್ರಿಸಲು ನೆಲಮಂಗಲ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಟೋಲ್ ಸಿಬ್ಬಂದಿಗಳು ತುರ್ತುಸ್ಥಿತಿ ವಾಹನಗಳಿಗೆ ರಸ್ತೆ ಅನುವು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ಬಿಜೆಪಿ ಪರಿವರ್ತನಾ ಯಾತ್ರೆಗೆ ಸಾವಿರಾರು ಬೈಕ್‍ಗಳು – ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್

    ಬಿಜೆಪಿ ಪರಿವರ್ತನಾ ಯಾತ್ರೆಗೆ ಸಾವಿರಾರು ಬೈಕ್‍ಗಳು – ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್

    – 2 ಗಂಟೆ ತಡವಾಗಲಿದೆ ಪರಿವರ್ತನಾ ಸಮಾವೇಶ
    – ಬೈಕ್ ರ‍್ಯಾಲಿ ವೇಳೆ ಬಿಜೆಪಿ ಕಾರ್ಯಕರ್ತರಿಂದ ಸಂಚಾರಿ ನಿಯಮ ಉಲ್ಲಂಘನೆ
    – ರ‍್ಯಾಲಿಗೆ ಆಹ್ವಾನ ನೀಡಿಲ್ಲವೆಂದು ಸೊಗಡು ಶಿವಣ್ಣ ಅಸಮಾಧಾನ

    ಬೆಂಗಳೂರು/ತುಮಕೂರು: ಬಿಜೆಪಿ ನವ ಪರಿವರ್ತನಾ ಯಾತ್ರೆಗೆ ಬಿಜೆಪಿ ಕಾರ್ಯಕರ್ತರ ದಂಡೇ ಹರಿದುಬರುತ್ತಿದೆ. ಎಲ್ಲಿ ನೋಡಿದ್ರೂ ಜನ, ಎಲ್ಲಿ ನೋಡಿದ್ರೂ ಕೇಸರಿ ಕಲರವ ತುಂಬಿದೆ. ರ‍್ಯಾಲಿ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನ ಸವಾರರು ಪರದಾಡುತ್ತಿದ್ದಾರೆ.

    ತುಮಕೂರು ರಸ್ತೆಯಲ್ಲಿ 4 ರಿಂದ 5 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿದೆ. ಮಹಾ ಟ್ರಾಫಿಕ್‍ನಲ್ಲಿ ಸಿಲುಕಿ ಆಂಬುಲೆನ್ಸ್ ಗಳು ಕೂಡ ಪರದಾಟ ನಡೆಸುವಂತಾಗಿದೆ. ಬರೊಬ್ಬರಿ 1 ಲಕ್ಷಕ್ಕೂ ಅಧಿಕ ಕೇಸರಿ ಪಡೆ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಗಲು ಬರುತ್ತಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ಸ್ಥಳವೆಲ್ಲಾ ಭರ್ತಿಯಾಗಿದೆ. ಕಾರು, ಬೈಕ್, ಬಸ್‍ಗಳಲ್ಲಿ ಇನ್ನೂ ಕಮಲ ಕಾರ್ಯಕರ್ತರು ಬರ್ತಾನೇ ಇದ್ದಾರೆ.

    2 ಗಂಟೆ ತಡವಾಗಿ ಸಮಾವೇಶ ಆರಂಭ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮನ ತಡವಾದ ಹಿನ್ನಲೆಯಲ್ಲಿ ಸಮಾವೇಶ ಮುಂದೂಡಿಕೆಯಾಗಿದ್ದು, ಮಧ್ಯಾಹ್ನ 1 ಗಂಟೆಗೆ ಆರಂಭವಾಗುವ ಸಾಧ್ಯತೆ ಇದೆ. ಬೆಳಗ್ಗೆ 11 ಗಂಟೆ ಬದಲು ಮಧ್ಯಾಹ್ನ 1 ಗಂಟೆಗೆ ರ‍್ಯಾಲಿಗೆ ಚಾಲನೆ ಸಿಗಲಿದೆ. ಮಧ್ಯಾಹ್ನ 2.30ಕ್ಕೆ ಅಮಿತ್ ಶಾ ಭಾಷಣ ಮಾಡಲಿದ್ದಾರೆ.

    ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ತುಮಕೂರಿನಿಂದ ಬೈಕ್ ರ‍್ಯಾಲಿ ಹೊರಟಿದೆ. ಸುಮಾರು 4 ಸಾವಿರ ಬೈಕ್‍ಗಳಲ್ಲಿ 8 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ರ‍್ಯಾಲಿ ಹೊರಟಿದ್ದಾರೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್, ಮಾಜಿ ಪರಿಷತ್ ಸದಸ್ಯ ಹುಲಿನಾಯ್ಕರ್ ರ‍್ಯಾಲಿಗೆ ಚಾಲನೆ ನೀಡಿದ್ದಾರೆ.

    ಸೊಗಡು ಶಿವಣ್ಣ ಅಸಮಾಧಾನ: ಈ ರ‍್ಯಾಲಿ ಚಾಲನೆಯಲ್ಲೂ ಬಿಜೆಪಿ ಭಿನ್ನಮತ ಸ್ಫೋಟಗೊಂಡಿದೆ. ಸೊಗಡು ಶಿವಣ್ಣ ಗೈರಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬೈಕ್ ರ‍್ಯಾಲಿಗೆ ತನಗೆ ಯಾರೂ ಆಹ್ವಾನ ನೀಡಿಲ್ಲ. ಹಾಗಾಗಿ ನಾನು ನೇರವಾಗಿ ಬೆಂಗಳೂರಿಗೆ ಬಂದಿದ್ದೇನೆ ಎಂದು ಸೊಗಡು ಶಿವಣ್ಣ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

    ಕಾನೂನು ಉಲ್ಲಂಘನೆ: ಇನ್ನೂ ಬೈಕ್ ರ‍್ಯಾಲಿಯಲ್ಲಿ ಹೊರಟ ನೂರಾರು ಸವಾರರು ಹೆಲ್ಮೆಟ್ ಧರಿಸದೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೆಲ್ಮೆಟ್ ಇಲ್ಲದೆ ಬೈಕ್ ರ‍್ಯಾಲಿ ಹೊರಡುತಿದ್ದುದನ್ನು ಕಂಡು ಪೊಲೀಸರು ಮೂಕಪ್ರೇಕ್ಷರಂತೆ ನೋಡುತ್ತಿದ್ದರು.

    ಇದನ್ನೂ ಓದಿ: ಬಿಜೆಪಿಯಿಂದ ಮಹದಾಯಿ ದಾಳ- ಪರಿವರ್ತನಾ ಯಾತ್ರೆಯೊಂದಿಗೆ ಮಹದಾಯಿ ವಿವಾದ ಅಂತ್ಯಗೊಳ್ಳುತ್ತಾ?

    ಇದನ್ನೂ ಓದಿ: ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಇಂದಿನಿಂದ 75 ದಿನ ಕೇಸರಿ ಕಹಳೆ- ಇಲ್ಲಿದೆ ರ‍್ಯಾಲಿ ವೇಳಾಪಟ್ಟಿ

  • ಬೆಂಗ್ಳೂರಲ್ಲಿ ಮುಂದುವರೆದ ವರುಣನ ಆರ್ಭಟ- ಮಳೆಯಿಂದಾಗಿ ಮಾಯವಾದ ರಸ್ತೆಗಳು

    ಬೆಂಗ್ಳೂರಲ್ಲಿ ಮುಂದುವರೆದ ವರುಣನ ಆರ್ಭಟ- ಮಳೆಯಿಂದಾಗಿ ಮಾಯವಾದ ರಸ್ತೆಗಳು

    ಬೆಂಗಳೂರು: ಕಳೆದರೆಡು ದಿನಗಳಿಂದ ಶಾಂತನಾಗಿದ್ದ ವರುಣ ದೇವ ಇಂದು ಮಧ್ಯಾಹ್ನದಿಂದಲೇ ಆರ್ಭಟಿಸುತ್ತಿದ್ದಾನೆ. ಭಾರೀ ಮಳೆಯಿಂದಾಗಿ ನೀರು ರಸ್ತೆಗಳಿಗೆ ನುಗ್ಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

    ಮೆಜೆಸ್ಟಿಕ್, ಮಾರ್ಕೆಟ್, ಕಾರ್ಪೋರೇಷನ್, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಜಯನಗರ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್, ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಸೇರಿದಂತೆ ನಗರದ ಹಲವೆಡೆ ಮಳೆಯ ಆರ್ಭಟ ಜೋರಾಗಿದೆ. ಸತತ ಅರ್ಧ ಗಂಟೆಯಿಂದ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಇನ್ನೂ ಮಲ್ಲೇಶ್ವರಂ, ಆನಂದ್ ರಾವ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಶಿವಾನಂದ ಸರ್ಕಲ್ ಬಳಿ ರೇಲ್ವೇ ಟ್ರ್ಯಾಕ್ ಕೆಳಗೆ 3 ಅಡಿ ನೀರು ನಿಂತಿದೆ.

    ಮಳೆಯ ನೀರಿನಿಂದಾಗಿ ಕೆರೆಯಂತಾಗಿದ್ದು, ವಾಹನಗಳು ಮುಂದಕ್ಕೆ ಚಲಿಸಲಾರದೇ ನಿಂತಲ್ಲೇ ನಿಂತಿವೆ. ಇದರಿಂದಾಗಿ ವಿಧಾನಸೌಧ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಮಳೆಯ ತೀವ್ರತೆಗೆ ನಾಯಂಡಹಳ್ಳಿ ಬಳಿ ಗೋಡೆ ಕುಸಿತವಾಗಿದೆ. ನಾಯಂಡಹಳ್ಳಿಯ ರಾಜಕಾಲುವೆಯ ನೀರು ಬ್ರಿಡ್ಜ್ ಮೇಲೆಯೇ ಹರಿಯುತ್ತಿದೆ. ಪಕ್ಕದಲ್ಲಿಯ ತಡೆಗೋಡೆಯನ್ನ ದಾಟಿ ರಾಜಕಾಲುವೆ ನೀರು ರಸ್ತೆಗೆ ಬರುತ್ತಿದೆ.

  • ರಸ್ತೆ ತಡೆದು ಪ್ರತಿಭಟನೆ: ಟ್ರಾಫಿಕ್ ಜಾಮ್‍ನಿಂದ ಆಂಬ್ಯುಲೆನ್ಸ್ ನಲ್ಲೇ ಬಾಲಕ ಸಾವು

    ರಸ್ತೆ ತಡೆದು ಪ್ರತಿಭಟನೆ: ಟ್ರಾಫಿಕ್ ಜಾಮ್‍ನಿಂದ ಆಂಬ್ಯುಲೆನ್ಸ್ ನಲ್ಲೇ ಬಾಲಕ ಸಾವು

    ನೋಯ್ಡಾ: ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತಪಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಲವ್ಕಶ್ ಎಂದು ಗುರುತಿಸಲಾಗಿದೆ.

    ಉತ್ತರಪ್ರದೇಶದ ಫಿರೋಜಾಬಾದ್ ನಿವಾಸಿಯಾಗಿರೋ ಈ ಬಾಲಕ ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಏಮ್ಸ್ ಆಸ್ಪತ್ರೆಗೆ ಹೆಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಗಿತ್ತು. ಈ ವೇಳೆ ಫಿರೋಜಾಬಾದ್‍ನ ರಸ್ತೆಯಲ್ಲಿ ಬಿಲ್ಡರ್‍ಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿತ್ತು. ಈ ಪ್ರತಿಭಟನೆಯಿಂದಾಗಿ ಮಾರ್ಗ ಮಧ್ಯೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪರಿಣಾಮ ಆಂಬ್ಯುಲೆನ್ಸ್ ಮುಂದೆ ಚಲಿಸಲಾಗದೆ ಬಾಲಕ ವಾಹನದಲ್ಲೇ ಮೃತಪಟ್ಟಿದ್ದಾನೆ.

    ಬಾಲಕ ಶನಿವಾರ ಸಂಜೆ 4ರ ಸುಮಾರಿಗೆ ಬಾಲಕ ಆಂಬ್ಯುಲೆನ್ಸ್ ನಲ್ಲೇ ಮೃತಪಟ್ಟಿರುವುದಾಗಿ ಚಾಲಕನ ಸಹೋದರ ತಿಳಿಸಿದ್ದಾರೆ. ಆದ್ರೆ ಗೃಹಬಳಕೆದಾರರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಅವರಿಗೆ ಬಾಲಕನ ಬಗ್ಗೆ ಮಾಹಿತಿ ಬಂದಿಲ್ಲವೆಂದು ಹೋರಾಟಗಾರರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸುಮಾರು 200 ಮಂದಿ ಗೃಹಬಳಕೆದಾರರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಇದ್ದರೂ ಯಾರೊಬ್ಬರು ಬಾಲಕನ ಸಹಾಯಕ್ಕೆ ಬಂದಿಲ್ಲ ಅಂತಾ ಪ್ರತ್ಯಕ್ಷದರ್ಶಿಯೊಬ್ಬರು ಆರೋಪಿಸಿದ್ದಾರೆ.

    ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಮಾಧ್ಯಮಗಳ ಮೂಲಕ ಬಾಲಕ ಸಾವನಪ್ಪಿರುವ ಬಗ್ಗೆ ತಿಳಿದುಬಂದಿದೆ. 250 ಮಂದಿ ಪ್ರತಿಭಟನಾಕಾರರ ವಿರುದ್ಧ ಐಪಿಸಿ ಸೆಕ್ಷನ್ 147 ಹಾಗೂ 341ರ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ ಅಂತಾ ಎಸ್ಪಿ ಲವ ಕುಮಾರ್ ಹೇಳಿದ್ದಾರೆ.