Tag: traffic jam

  • ಚಾರ್ಮಾಡಿ ಘಾಟಿಯಲ್ಲಿ ಕಂಟೈನರ್ ಪಲ್ಟಿ: ಭಾರೀ ಟ್ರಾಫಿಕ್ ಜಾಮ್

    ಚಾರ್ಮಾಡಿ ಘಾಟಿಯಲ್ಲಿ ಕಂಟೈನರ್ ಪಲ್ಟಿ: ಭಾರೀ ಟ್ರಾಫಿಕ್ ಜಾಮ್

    ಮಂಗಳೂರು: ಬೆಂಗಳೂರು- ಮಂಗಳೂರು ನಡುವೆ ಏಕೈಕ ಸಂಪರ್ಕದ ಕೊಂಡಿಯಾಗಿದ್ದ ಚಾರ್ಮಾಡಿ ಘಾಟಿಯಲ್ಲಿ 10ನೇ ತಿರುವಿನಲ್ಲಿ ಕಂಟೈನರ್ ಟ್ರಕ್ ಪಲ್ಟಿಯಾಗಿದೆ.

    ಪಲ್ಟಿಯಾದ ಹಿನ್ನೆಲೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಟ್ಯಾಂಕರ್ ಮತ್ತಿತರ ಘನ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದ್ದು. ಚಾರ್ಮಾಡಿ ಘಾಟ್ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಳ್ತಂಗಡಿ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಸಂಪಾಜೆ, ಶಿರಾಡಿಘಾಟ್ ಬಂದ್ ಆಗಿರೋ ಹಿನ್ನೆಲೆ ಸಾವಿರಾರು ವಾಹನಗಳು ಚಾರ್ಮಾಡಿಘಾಟಿಯಲ್ಲಿ ಸಂಚರಿಸುತ್ತಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಂಭವಿಸುತ್ತಿದ್ದು, ಈಗ ಕಂಟೈನರ್ ಉರುಳಿ ಬಿದ್ದ ಕಾರಣ ಮತ್ತೆ ಸಮಸ್ಯೆಯಾಗಿದೆ.

    ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟ್, ಆರಂಭದಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಗಡಿ ಮುಟ್ಟುವವರೆಗೂ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ದೊಡ್ಡ ಗಾಡಿಗಳ ಸಂಚಾರ ಕೂಡ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತೊಂದೊಡ್ಡುತ್ತಿವೆ. ನಾಲ್ಕೈದು ಕಿಮೀ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿರುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಜೊತೆಗೆ ಮಳೆ, ಗಾಳಿ, ದಟ್ಟವಾದ ಮಂಜಿನಿಂದ ಪ್ರಯಾಣಿಕರು ಕಂಗಾಲಾಗಿದ್ದು, ವಾಹನಗಳ ಮಂದಗತಿಯ ಸಂಚಾರದಿಂದ ಮೊದಲು ಬೆಳ್ತಂಗಡಿಯ ಗಡಿ ಮುಟ್ಟಿದರೆ ಸಾಕೆಂದು ಆತಂಕದಿಂದಲೇ ಸಂಚರಿಸುತ್ತಿದ್ದಾರೆ.ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ

    ಶಿರಾಡಿ ಘಾಟ್ ನಲ್ಲಿ ಆಗಸ್ಟ್ 20 ರವರೆಗೆ ಲಘು ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ಮಡಿಕೇರಿ ಘಾಟಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವ ಕಾರಣ ಸಂಚಾರವನ್ನು ಬಂದ್ ಮಾಡಲಾಗಿದೆ.  

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿರಾಡಿ, ಸಂಪಾಜೆ ಬಂದ್: ಚಾರ್ಮಾಡಿ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಶಿರಾಡಿ, ಸಂಪಾಜೆ ಬಂದ್: ಚಾರ್ಮಾಡಿ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಸಂಪಾಜೆ, ಶಿರಾಡಿ ಘಾಟಿ ಬಂದ್ ಆಗಿರೋ ಹಿನ್ನೆಲೆ ಸಾವಿರಾರು ವಾಹನಗಳು ಚಾರ್ಮಾಡಿಘಾಟ್‍ನಲ್ಲಿ ಸಂಚರಿಸುತ್ತಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.

    ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟ್, ಆರಂಭದಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಗಡಿ ಮುಟ್ಟುವವರೆಗೂ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ದೊಡ್ಡ ಗಾಡಿಗಳ ಸಂಚಾರ ಕೂಡ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತೊಂದೊಡ್ಡುತ್ತಿವೆ. ನಾಲ್ಕೈದು ಕಿಮೀ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿರುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಜೊತೆಗೆ ಮಳೆ, ಗಾಳಿ, ದಟ್ಟವಾದ ಮಂಜಿನಿಂದ ಪ್ರಯಾಣಿಕರು ಕಂಗಾಲಾಗಿದ್ದು, ವಾಹನಗಳ ಮಂದಗತಿಯ ಸಂಚಾರದಿಂದ ಮೊದಲು ಬೆಳ್ತಂಗಡಿಯ ಗಡಿ ಮುಟ್ಟಿದರೆ ಸಾಕೆಂದು ಆತಂಕದಿಂದಲೇ ಸಂಚರಿಸುತ್ತಿದ್ದಾರೆ.

    ಶಿರಾಡಿ ಘಾಟ್ ನಲ್ಲಿ ಆಗಸ್ಟ್ 20 ರವರೆಗೆ ಲಘು ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಘಾಟ್ ನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವ ಕಾರಣ ಸಂಚಾರವನ್ನು ಬಂದ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ಬಸ್ ಕೆಟ್ಟು ನಿಂತು ಚಾರ್ಮಾಡಿ ಘಾಟ್ ಟ್ರಾಫಿಕ್ ಜಾಮ್!

    ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ಬಸ್ ಕೆಟ್ಟು ನಿಂತು ಚಾರ್ಮಾಡಿ ಘಾಟ್ ಟ್ರಾಫಿಕ್ ಜಾಮ್!

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ತನ್ನ ಆರ್ಭಟ ಮುಂದುವರಿಸಿದ್ದಾನೆ.

    ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದಲೂ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ ನಡೆಸಿದ್ದಾರೆ. ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ.

    ತೀವ್ರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಸರ್ಕಾರಿ ಬಸ್ ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ. ಕಳೆದೊಂದು ಗಂಟೆಯಿಂದ ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದ ತೊಂದರೆಗೆ ಸಿಲುಕಿದ್ದಾರೆ. ಮಳೆಯ ನಡುವೆ ಪ್ರಯಾಣಿಕರ ಪರದಾಟ ನಡೆಸಿದ್ದು, ಮಂಗಳೂರಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನಿಂದ ಧರ್ಮಸ್ಥಳ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿತ್ತು.

  • ಮಾವಿನಹಣ್ಣು ಕೊಳ್ಳಲು ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿದ ಭೂಪ- ವಿಡಿಯೋ ನೋಡಿ

    ಮಾವಿನಹಣ್ಣು ಕೊಳ್ಳಲು ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿದ ಭೂಪ- ವಿಡಿಯೋ ನೋಡಿ

    ಹಾಸನ: ಕಾರು ಮಾಲೀಕನೊಬ್ಬ ಮಾವಿನ ಹಣ್ಣು ಕೊಳ್ಳಲು ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿ ಟ್ರಾಫಿಕ್ ಜಾಮ್ ಉಂಟು ಮಾಡಿದ ಘಟನೆ ಹಾಸನ ನಗರದ ಆರ್.ಸಿ. ರಸ್ತೆಯಲ್ಲಿ ನಡೆದಿದೆ.

    ಮಾವಿನಹಣ್ಣು ಕೊಳ್ಳಲು ಕಾರು ಚಾಲಕ ರಸ್ತೆ ಮಧ್ಯೆಯೇ ತನ್ನ ಸ್ವಿಫ್ಟ್ ಕಾರನ್ನು ನಿಲ್ಲಿಸಿದ್ದರು. ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿದ ಪರಿಣಾಮ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೂ ಕಾರು ಮಾಲೀಕನ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾರು ಮಾಲೀಕ ಬೇಕೆಂದು ರಸ್ತೆ ಮಧ್ಯೆಯೇ ಕಾರನ್ನು ನಿಲ್ಲಿಸಿದ್ದನು. ನನ್ನನ್ನು ಯಾರು ಕೇಳುವವರು ಎಂಬ ಅಹಂಕಾರದಲ್ಲಿ ಮಧ್ಯೆ ರಸ್ತೆ ಕಾರು ನಿಲ್ಲಿಸಿದ್ದಾನೆ. ಟ್ರಾಫಿಕ್ ಜಾಮ್ ಆದರೂ ವ್ಯಕ್ತಿ ಯಾವುದಕ್ಕೂ ಖ್ಯಾರೆ ಎನ್ನದೇ ತನ್ನ ಮಾವಿನ ಹಣ್ಣು ಖರೀದಿಯಲ್ಲಿ ಬ್ಯುಸಿಯಾಗಿದ್ದರು ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು.

    ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದ್ದಂತೆ ಇತರೆ ವಾಹನ ಸವಾರರು ಅವಾಜ್ ಹಾಕಿದ ನಂತರ ಕಾರು ಮಾಲೀಕ ರಸ್ತೆ ಮಧ್ಯೆದಿಂದ ಕಾರನ್ನು ತೆಗೆದಿದ್ದಾನೆ.

    https://www.youtube.com/watch?v=XKRN5jN82Sc

  • ಡಿಸಿಎಂನಿಂದಾಗಿ ತುಮಕೂರು, ಬೆಂಗ್ಳೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಂ!

    ಡಿಸಿಎಂನಿಂದಾಗಿ ತುಮಕೂರು, ಬೆಂಗ್ಳೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಂ!

    ಬೆಂಗಳೂರು: ಉಪ ಮುಖ್ಯಮಂತ್ರಿಗಾಗಿ ಜೀರೋ ಟ್ರಾಫಿಕ್ ಮಾಡಲು ಹೋಗಿ, ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಟೋಲ್ ಗಳಲ್ಲಿ ಫುಲ್ ಟ್ರಾಫಿಕ್ ಜಾಂ ಉಂಟಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಹಾಗೂ ಜಾಸ್ ಟೋಲ್ ಗಳಲ್ಲಿ ವಾಹನ ಸವಾರರು ಜಾಮ್ ನಿಂದ ಹೈರಾಣಾಗಿದ್ದಾರೆ. ಡಿಸಿಎಂ ಡಾ. ಜಿ ಪರಮೇಶ್ವರ್ ಕೊರಟಗೆರೆಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರಿಂದ ಜೀರೋ ಟ್ರಾಫಿಕ್ ಮಾಡಲಾಗಿತ್ತು.

    ಅಷ್ಟೇ ಅಲ್ಲದೇ ರಂಜಾನ್ ಹಬ್ಬದ ರಜೆ ಹಾಗೂ ವಾರಾಂತ್ಯದ ರಜೆ ಮುಗಿಸಿಕೊಂಡು, ಜನರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ಅಧಿಕ ದಟ್ಟಣೆ ಉಂಟಾಗಿ, ಟೋಲ್ ಗಳಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ಸುಮಾರು ಹೆದ್ದಾರಿಯಲ್ಲಿ ಐದಾರು ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಇನ್ನೂ ಸಂಚಾರ ದಟ್ಟಣೆ ನಿಯಂತ್ರಿಸಲು ನೆಲಮಂಗಲ ಸಂಚಾರಿ ಪೊಲೀಸರು, ಟೌನ್ ಪೊಲೀಸರು ಹಾಗೂ ಮಾದನಾಯಕನಹಳ್ಳಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಒಟ್ಟಿನಲ್ಲಿ ಉಪಮುಖ್ಯಮಂತ್ರಿಯಿಂದಾಗಿ ಬೆಂಗಳೂರಿಗೆ ತೆರಳಲು ಸವಾರರು ಪರದಾಡುವಂತಾಗಿತ್ತು.

  • ಚಾರ್ಮಾಡಿ ಘಾಟ್ ತಿರುವಿನಲ್ಲಿ ಲಾರಿ ಪಲ್ಟಿ- ಟ್ರಾಫಿಕ್ ಜಾಮ್ ನಿಂದ ಪ್ರಯಾಣಿಕರು ಪರದಾಟ

    ಚಾರ್ಮಾಡಿ ಘಾಟ್ ತಿರುವಿನಲ್ಲಿ ಲಾರಿ ಪಲ್ಟಿ- ಟ್ರಾಫಿಕ್ ಜಾಮ್ ನಿಂದ ಪ್ರಯಾಣಿಕರು ಪರದಾಟ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ತಿರುವಿನಲ್ಲಿ ಲಾರಿ ಪಲ್ಟಿಯಾದ ಪರಿಣಾಮ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಈ ಘಟನೆ ಶನಿವಾರ ರಾತ್ರಿ ಸಂಭವಿಸಿದ್ದು, ಇಂದು ಬೆಳಗ್ಗೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಪರಿಣಾಮ ಎಲ್ಲಾ ವಾಹನಗಳು ನಿಂತಲ್ಲೆ ನಿಂತಿವೆ. ಲಾರಿ ಶಿರಾಡಿ ಘಾಟ್ ಬಂದ್ ಹಿನ್ನೆಲೆ ಚಾರ್ಮಾಡಿ ಘಾಟ್ ಮೂಲಕ ಮಂಗಳೂರು, ಧರ್ಮಸ್ಥಳಕ್ಕೆ ಸಂಚಾರ ಮಾಡುತ್ತಿತ್ತು. ರಾತ್ರಿ ಮಂಜು ಕವಿದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.

    ಈ ಅಪಘಾತದಲ್ಲಿ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಈ ಮಾರ್ಗದಲ್ಲಿ ಅತಿಯಾದ ಮಂಜಿನಿಂದ ವಾಹನ ಸವಾರರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಲಾರಿ ಪಲ್ಟಿಯಾದ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಹೀಗಾಗಿ ಕೆಲ ಕಾಲ ಪ್ರಯಾಣಿಕರು ಮತ್ತು ಪ್ರವಾಸಿಗರು ಪರದಾಡಿದ್ದಾರೆ.

    ಈ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಹಾವಿಗೆ ಭಯಗೊಂಡು ಮುಂದೆ ಹೋಗಲು ಹೆದರಿದ ಸವಾರರು – ಫುಲ್ ಟ್ರಾಫಿಕ್ ಜಾಮ್

    ಹಾವಿಗೆ ಭಯಗೊಂಡು ಮುಂದೆ ಹೋಗಲು ಹೆದರಿದ ಸವಾರರು – ಫುಲ್ ಟ್ರಾಫಿಕ್ ಜಾಮ್

    ಬೆಂಗಳೂರು: ರಸ್ತೆ ಪಕ್ಕದಲ್ಲಿ ಬಿದ್ದಿರುವ ಹಾವನ್ನು ನೋಡಿ ವಾಹನ ಸವಾರರು ಮುಂದೆ ಹೋಗಲು ಹೆದರಿದ ಘಟನೆ ನಗರದ ಯಶವಂತಪುರ ಜಂಕ್ಷನ್‍ನಲ್ಲಿ ನಿರ್ಮಾಣವಾಗಿತ್ತು.

    ಯಶವಂತಪುರದ ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಬ್ರಿಜ್ಡ್ ಕೆಳಗೆ ಇರುವ ರಸ್ತೆಯ ಪಕ್ಕದಲ್ಲಿ ಹಾವೊಂದು ಮಲಗಿತ್ತು. ಇದರಿಂದ ವಾಹನ ಸವಾರು ಹೆದರಿ ಮುಂದೆ ಹೋಗಲು ಪರದಾಡಿದ್ದಾರೆ.

    ನಾಗರಹಾವಿನ ಬಾಲಕ್ಕೆ ಅಪರಿಚಿತ ವಾಹನ ತಗುಲಿದ್ದು, ಗಾಯವಾಗಿದೆ. ಆದ್ದರಿಂದ ಮುಂದೆ ಸಾಗಲು ಸಾಧ್ಯವಾಗದೇ ಆ ಸ್ಥಳ ಬಿಟ್ಟು ಕದಲುತ್ತಿರಲಿಲ್ಲ. ಹೀಗಾಗಿ ಯಶವಂತಪುರ ಜಂಕ್ಷನ್‍ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಮಾತ್ರ ವಾಹನ ನಿಲ್ಲಿಸಿ ನಾಗರಹಾವು ವೀಕ್ಷಿಸುವುದರಲ್ಲಿ ತೊಡಗಿದ್ದರು.

  • ಮೊಟ್ಟೆಗಳನ್ನು ತುಂಬಿದ್ದ ಲಾರಿ ಪಲ್ಟಿ

    ಮೊಟ್ಟೆಗಳನ್ನು ತುಂಬಿದ್ದ ಲಾರಿ ಪಲ್ಟಿ

    ಬೆಂಗಳೂರು: ಮೊಟ್ಟೆಗಳನ್ನು ತುಂಬಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೇಗೂರು ಬಳಿ ನಡೆದಿದೆ.

    ಲಾರಿ ಪಲ್ಟಿಯಾದ ಪರಿಣಾಮ ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಕೆಲಕಾಲ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಲಾರಿ ತುಮಕೂರಿನಿಂದ ಬೆಂಗಳೂರು ಕಡೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಘಟನೆಯಿಂದ ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ಹಾನಿಗೀಡಾಗಿವೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನೆಲಮಂಗಲ ಟ್ರಾಫಿಕ್ ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಿದ್ದಾರೆ. ಅಲ್ಲದೇ ವಾಹನ ದಟ್ಟಣೆ ನಿಯಂತ್ರಿಸಲು ಹರಸಾಹಸಪಟ್ಟರು.

  • ಬಿಸಿಲಿನ ಧಗೆಗೆ ತಂಪೆರೆದ ಪೂರ್ವ ಮುಂಗಾರು – ಬೆಂಗ್ಳೂರಿನ ಹಲವೆಡೆ ಧರೆಗುರುಳಿದ ಮರಗಳು

    ಬಿಸಿಲಿನ ಧಗೆಗೆ ತಂಪೆರೆದ ಪೂರ್ವ ಮುಂಗಾರು – ಬೆಂಗ್ಳೂರಿನ ಹಲವೆಡೆ ಧರೆಗುರುಳಿದ ಮರಗಳು

    ಬೆಂಗಳೂರು/ ಮಂಡ್ಯ: ಬಿಸಿಲಿನಿಂದ ಬೆಂದ ಜನರಿಗೆ ಪೂರ್ವ ತಂಪೆರೆದಿದ್ದು, ಮುಂಗಾರು ನಗರದ ಹಲವೆಡೆ ಸಂಜೆಯ ವೇಳೆಗೆ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದೆ.

    ನಗರದ ಹಲವೆಡೆ ಸಂಜೆ ವೇಳೆಗೆ ಆರಂಭವಾದ ಬಿರುಗಾಳಿಯಿಂದ ಕುಡಿದ ಮಳೆಗೆ ಮರಗಳು ಧರೆಗುರುಳಿ ಹಲವು ಅವಂತರಗಳನ್ನು ಸೃಷ್ಟಿಸಿತು. ಬಾಣಸವಾಡಿಯಲ್ಲಿ ಮರ ಬಿದ್ದು ಕಾರು ಜಖಂಗೊಂಡಿದೆ. ಬಿಟಿಎಂ ಲೇಔಟ್ ಮತ್ತು ವಿವೇಕನಗರ ಪೊಲೀಸ್ ಠಾಣೆ, ಶಿವಾಜಿನಗರದಲ್ಲಿ ಮರಗಳು ಉರುಳಿದ್ದು ಸಂಚಾರಕ್ಕೆ ತಡೆ ಉಂಟುಮಾಡಿತ್ತು. ಜಯನಗರದಲ್ಲಿ ಮೂರು ಕಾರುಗಳ ಮೇಲೆ ಮರ ಬಿದ್ದಿದ್ದರೆ, 4 ವಿದ್ಯುತ್ ಕಂಬಗಳು ಧರೆಗೆ ಬಿದ್ದಿತ್ತು.

    ಅನಿರೀಕ್ಷಿತ ಮಳೆ ಟ್ರಾಫಿಕ್ ಜಾಮ್ ಗೆ ಸಹ ಕಾರಣವಾಗಿತ್ತು. ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಎಲಿವೆಟೆಡ್ ಫ್ಲೈ ಓವರ್ ಮೇಲೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಸಿಲುಕಿ ರೋಗಿ ಪರದಾಡಿದ ಘಟನೆ ನಡೆಯಿತು.

    ಮಂಡ್ಯ, ಕೆಆರ್ ಪೇಟೆ ಪಟ್ಟಣದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಬಿರುಗಾಳಿಗೆ ಸಿಲುಕಿ ರಸ್ತೆಯಲ್ಲಿ ನಿಲ್ಲಿಸಿದ್ದ ಹತ್ತಾರು ಬೈಕ್‍ಗಳು ನೆಲಕ್ಕೆ ಉರುಳಿ ಜಖಂಗೊಂಡಿದೆ.

    ಮಳೆ ಕುರಿತು ಮಾಹಿತಿ ನೀಡಿದ ಹವಾಮಾನ ತಜ್ಞ ಗವಾಸ್ಕರ್, ಇನ್ನು ಮೂರು ನಾಲ್ಕು ದಿನ ಇದೇ ವಾತಾವರಣ ಮುಂದುವರೆಯಲಿದೆ. ಪೂರ್ವ ಮುಂಗಾರು ಆಗಿರುವುದರಿಂದ ಸಹಜವಾಗಿ ಗಾಳಿ ಸಹಿತ ಮಳೆ ಇರಲಿದೆ ಎಂದು ತಿಳಿಸಿದ್ದಾರೆ.

  • ಬೆಂಗ್ಳೂರಿಗರೇ ಸಂಡೆ ಮಸ್ತಿಗೆ ಹೊರಬಂದ್ರೆ ಪರದಾಟ ಗ್ಯಾರೆಂಟಿ- ಬಸ್ಸೇ ಇಲ್ದಿದ್ರೂ ಇಂದು ಟ್ರಾಫಿಕ್ ಜಾಮ್ ಫಿಕ್ಸ್

    ಬೆಂಗ್ಳೂರಿಗರೇ ಸಂಡೆ ಮಸ್ತಿಗೆ ಹೊರಬಂದ್ರೆ ಪರದಾಟ ಗ್ಯಾರೆಂಟಿ- ಬಸ್ಸೇ ಇಲ್ದಿದ್ರೂ ಇಂದು ಟ್ರಾಫಿಕ್ ಜಾಮ್ ಫಿಕ್ಸ್

    ಬೆಂಗಳೂರು: ಬೆಂಗಳೂರಿಗರೇ ಇಂದು ರಸ್ತೆಗೆ ಇಳಿಯುವ ಮುನ್ನ ಸ್ವಲ್ಪ ಹುಷಾರಾಗಿರಿ. ವೀಕೆಂಡ್ ಅಂತ ಟೈಮ್ ಪಾಸ್‍ಗೆ ಹೊರಗೆ ಬಂದ್ರೆ ನೀವು ಪರದಾಡೋದು ಗ್ಯಾರೆಂಟಿ.

    ಹೌದು. ಇಂದು ಪ್ರಧಾನಿ ಮೋದಿ ಸಮಾವೇಶದಲ್ಲಿ ಮೂರೂವರೆಯಿಂದ ನಾಲ್ಕು ಲಕ್ಷದವರೆಗೆ ಜನ ಭಾಗಿಯಾಗುವ ನಿರೀಕ್ಷೆಯಿದ್ದು, ನಗರದಾದ್ಯಂತ ಭಾರಿ ಟ್ರಾಫಿಕ್ ಜಾಮ್ ಉಂಟಾಗೋ ಸಾಧ್ಯತೆ ಇದೆ. ಹೆಚ್‍ಎಎಲ್, ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್, ಏರ್ ಪೋರ್ಟ್ ರೋಡ್, ಅರಮನೆ ಮೈದಾನ ಸೇರಿದಂತೆ ನೆಲಮಂಗಲ ಟೋಲ್ ಗೇಟ್ ಕೂಡ ಜಾಮ್ ಆಗಲಿದೆ.

    ಇದ್ರ ಜೊತೆಗೆ ಫ್ರೀಡಂಪಾರ್ಕ್‍ನಿಂದ ಅರಮನೆ ಮೈದಾನದವರೆಗೆ ಕನ್ನಡ ಒಕ್ಕೂಟದ ವಾಟಾಳ್ ನೇತೃತ್ವದಲ್ಲಿ ಜಾಥಾ ನಡೆಯಲಿದ್ದು ಮೆಜೆಸ್ಟಿಕ್, ಫ್ರೀಡಂಪಾರ್ಕ್ ಬಳಿಯೂ ಟ್ರಾಫಿಕ್ ಜಾಮ್ ಉಂಟಾಗಲಿದೆ. ಹೀಗಾಗಿ ಇಂದು ಬೆಂಗಳೂರು ರೋಡ್‍ಲ್ಲಿ ಸಂಚರಿಸಿದ್ರೆ ಟ್ರಾಫಿಕ್ ಬಿಸಿಯಲ್ಲಿ ತಗ್ಲಾಕ್ಕೊಳ್ಳೋದು ಗ್ಯಾರಂಟಿಯಾಗಿದೆ.

    ಎಲ್ಲಾ ಅಡೆತಡೆ, ಅಡ್ಡಿ ಆತಂಕದ ಬಳಿಕ ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಬರುತ್ತಿದ್ದಾರೆ. ಕಳೆದ 85 ದಿನಗಳಿಂದ ತಿಂಗಳಿಂದ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಆ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಮತ್ತೊಂದು ಹಂತದ ಪ್ರಚಾರಕ್ಕೆ ನಾಂದಿ ಹಾಡಲಿದ್ದಾರೆ.

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕೆ ರಾಜ್ಯ ನಾಯಕರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. 2014ರ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಪ್ರಧಾನಿ ಮೋದಿಯ ದೊಡ್ಡ ಸಮಾವೇಶ ಇದಾಗಲಿದೆ. ಅರ್ಧ ಕಿಲೋಮೀಟರ್ ದೂರದವರೆಗೂ ವೇದಿಕೆ ಕಾಣುವಂತೆ ಸುಮಾರು 20 ಅಡಿ ಎತ್ತರದಲ್ಲಿ ವೇದಿಕೆ ನಿರ್ಮಿಸಲಾಗಿದೆ. ಪಕ್ಷದ 27 ಮಂದಿ ಅಗ್ರ ನಾಯಕರಿಗಷ್ಟೇ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಮೈದಾನದ ಮಧ್ಯೆ 25 ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.

    ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ರಾಜ್ಯಕ್ಕೆ ಏನಾದರೂ ಕೊಡುಗೆ ಘೋಷಿಸುವ ಸಾಧ್ಯತೆ ಇದೆ. 16 ಜಿಲ್ಲೆಗಳಿಂದ ಜನರನ್ನು ಕರೆತರಲು ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಸೇರಿದಂತೆ ಸಾವಿರಾರು ವಾಹನಗಳನ್ನು ಬುಕ್ ಮಾಡಲಾಗಿದೆ. ಊಟದ ವ್ಯವಸ್ಥೆಗಾಗಿ 600 ಮಂದಿ ಅಡುಗೆ ಭಟ್ಟರನ್ನು ನಿಯೋಜಿಸಲಾಗಿದ್ದು, 250 ಫುಡ್ ಕೌಂಟರ್ ತೆರೆಯಲಾಗಿದೆ. ಜೊತೆಗೆ 75 ಇ – ಶೌಚಾಲಯ, 270 ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಾದ್ಯಂತ ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.