Tag: traffic jam

  • ಓವರ್ ಟೇಕ್ ಮಾಡೋ ಭರದಲ್ಲಿ ಫ್ಲೈ ಓವರ್ ನಿಂದ ಪಲ್ಟಿಯಾಗಿ ಮತ್ತೊಂದು ಬದಿಗೆ ಬಿದ್ದ ಕಾರ್

    ಓವರ್ ಟೇಕ್ ಮಾಡೋ ಭರದಲ್ಲಿ ಫ್ಲೈ ಓವರ್ ನಿಂದ ಪಲ್ಟಿಯಾಗಿ ಮತ್ತೊಂದು ಬದಿಗೆ ಬಿದ್ದ ಕಾರ್

    ಬೆಂಗಳೂರು: ಸಿಲಿಕಾನ್ ಸಿಟಿಯ ಹೆಬ್ಬಾಳ ಫ್ಲೈ ಓವರ್ ಮೇಲೆ ಇನ್ನೋವ ಕಾರೊಂದು ಪಲ್ಟಿಯಾಗಿದ್ದು, ಪರಿಣಾಮ ಏರ್ ಪೋರ್ಟ್ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.

    ಇನ್ನೋವ ಕಾರು ಬೆಂಗಳೂರು ಸಿಟಿ ಕಡೆಯಿಂದ ದೇವನಹಳ್ಳಿ ಕಡೆಗೆ ಹೋಗುತ್ತಿದ್ದು. ಈ ವೇಳೆ ಕಾರು ಹೆಬ್ಬಾಳ ಫ್ಲೈ ಓವರ್ ಮೇಲೆ ಬರುತ್ತಿದ್ದಂತೆ ಬೇರೊಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ವೇಗವಾಗಿ ಹೋಗಿದ್ದು, ಕಾರ್ ಪಲ್ಟಿಯಾಗಿ ಮತ್ತೊಂದು ಬದಿಯ ರಸ್ತೆಗೆ ಬಿದ್ದಿದೆ.

    ಕಾರ್ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಗಾಯವಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯಕ್ಕೆ ಗಾಯಗೊಂಡಿರುವವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.

    ಕಾರ್ ಪಲ್ಟಿಯಾದ ಬಗ್ಗೆ ಹೆಬ್ಬಾಳ ಸಂಚಾರಿ ಪೊಲೀಸರಿಗೆ ಮಾಹಿತಿ ತಿಳಿದಿದ್ದು, ಸ್ಥಳಕ್ಕೆ ಬಂದು ಪೊಲೀಸರು ಹೆಬ್ಬಾಳ ಫ್ಲೈ ಓವರ್ ಮೇಲೆ ಉಂಟಾಗಿದ್ದ ಟ್ರಾಫಿಕ್ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರಾ ಎಫೆಕ್ಟ್- ಟ್ರಾಫಿಕ್ ಜಾಮ್‍ನಿಂದ ಹೈರಾಣಾದ್ರು ಸವಾರರು, ಪ್ರಯಾಣಿಕರು

    ದಸರಾ ಎಫೆಕ್ಟ್- ಟ್ರಾಫಿಕ್ ಜಾಮ್‍ನಿಂದ ಹೈರಾಣಾದ್ರು ಸವಾರರು, ಪ್ರಯಾಣಿಕರು

    ಬೆಂಗಳೂರು: ನಾಡಹಬ್ಬ ದಸರಾ ಕಳೆದ 11 ದಿನಗಳಿಂದ ನಾಡಿನೆಲ್ಲೆಡೆ ಸಂತಸದ ವಾತಾವರಣ ಮೂಡಿಸಿದ್ದು, ಮನೆ ಮನೆಯಲ್ಲೂ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಆದರೆ ದಸರೆಯ ಎಫೆಕ್ಟ್ ಭಾನುವಾರ ಟ್ರಾಫಿಕ್ ಮೇಲೆ ಪರಿಣಾಮ ಬೀರಿದೆ.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಾಡ ಹಬ್ಬ ದಸರೆಯ ಸಾಲು ಸಾಲು ರಜೆಯ ಬಿಸಿ, ಟ್ರಾಫಿಕ್ ಜಾಮಿಗೆ ತಟ್ಟಿದೆ. ನೆಲಮಂಗಲ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4 ಮತ್ತು 48 ರಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಶಾಲಾ ಮಕ್ಕಳಿಗೆ ಹತ್ತು ದಿನಗಳ ದಸರಾ ರಜೆ, ಸರ್ಕಾರಿ ಹಾಗೂ ಖಾಸಗಿ ಕಾಲೆಜುಗಳು, ಸರ್ಕಾರಿ ನೌಕರರು ಸೇರಿದಂತೆ ಖಾಸಗಿ ಕಂಪನಿಗಳಿಗೆ 4 ದಿನಗಳ ರಜೆ ನೀಡಲಾಗಿತ್ತು. ಹೀಗಾಗಿ ಹಬ್ಬ ಆಚರಿಸಲು ಸ್ವಗ್ರಾಮಕ್ಕೆ ತೆರಳಿದ್ದವರು, ಈಗ ಮತ್ತೆ ಒಮ್ಮೆಲೆ ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿಗಳು ಸಂಪೂರ್ಣ ಜಾಮ್ ಆಗಿತ್ತು.

    ಇನ್ನೂ ಮೈಸೂರು ದಸರಾಗೆ ಹೋಗಿದ್ದವರು ಸಹ ಮೈಸೂರು ಬೆಂಗಳೂರು ರಸ್ತೆ ಜಾಂ ಇರುವುದು ಎಂದು ತಿಳಿದು ಮದ್ದೂರು ಕುಣಿಗಲ್ ಮಾರ್ಗವಾಗಿ ರಾಷ್ಟ್ರಿಯ ಹೆದ್ದಾರಿ 4 ತಲುಪುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಪೂರ್ಣ ಜಾಮ್ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿ ಒಂದೆಡೆ ಅಂಬುಲೆನ್ಸ್ ಗಳು ಪರದಾಡಿದರೆ, ಮತ್ತೊಂದೆಡೆ ಬಸ್‍ಗಳಲ್ಲಿ ಸೀಟ್ ಸಿಗದೆ ಪ್ರಯಾಣಿಕರು, ಖಾಸಗಿ ಬಸ್‍ಗಳ ಟಾಪ್‍ಏರಿ ಪ್ರಯಾಣಿಸುವ ಪರಿಸ್ಥಿತಿ ಉಂಟಾಗಿತ್ತು.

    ಸಾಮಾನ್ಯವಾಗಿ ಒಂದು ದಿನಕ್ಕೆ 1 ಲಕ್ಷ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲಿದ್ದು, ಭಾನುವಾರ 10 ಲಕ್ಷಕ್ಕೂ ಅಧಿಕ ವಾಹನಗಳು ಇಲ್ಲಿ ಸಂಚರಿಸಿವೆ. ದಸರಾ ರಜೆಯ ಎಫೆಕ್ಟ್ ಟ್ರಾಫಿಕ್ ಮೇಲೆ ಬಿದ್ದಿದ್ದು, ಸಂಚಾರ ದಟ್ಟಣೆ ಬೆಳಗ್ಗೆ 9 ಗಂಟೆಯವರೆಗೂ ಮುಂದುವರಿಯುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾರ್ಮಾಡಿಯ ತಿರುವಿನಲ್ಲಿ ಲಾರಿ ಪಲ್ಟಿ – 10 ಕಿ.ಮೀ ದೂರದವರೆಗೂ ಸಾಲಾಗಿ ನಿಂತ ವಾಹನಗಳು

    ಚಾರ್ಮಾಡಿಯ ತಿರುವಿನಲ್ಲಿ ಲಾರಿ ಪಲ್ಟಿ – 10 ಕಿ.ಮೀ ದೂರದವರೆಗೂ ಸಾಲಾಗಿ ನಿಂತ ವಾಹನಗಳು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‍ಯ ತಿರುವಿನಲ್ಲಿ ಲಾರಿ ಪಲ್ಟಿಯಾದ ಪರಿಣಾಮ ಇಂದು ಬೆಳಿಗ್ಗೆ 10 ಗಂಟೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    ಲಾರಿ ಪಲ್ಟಿಯಾಗಿದ್ದರಿಂದ ಸುಮಾರು 10 ಕಿ.ಮೀ.ನಷ್ಟು ದೂರ ಸಾಲುಗಟ್ಟಿ ವಾಹನಗಳು ನಿಂತಿದ್ದು, ಚಾರ್ಮಾಡಿಯಿಂದ ಕೊಟ್ಟಿಗೆಹಾರದವರೆಗೂ ಟ್ರಾಫಿಕ್ ಜಾಮ್ ಆಗಿದೆ. ಲಾರಿ ಪಲ್ಟಿಯಾದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದು, ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

    ಚಾರ್ಮಾಡಿ ಘಾಟ್ ಚಿಕ್ಕಮಗಳೂರು-ಧರ್ಮಸ್ಥಳ ಸಂಪರ್ಕಿಸುವ ಏಕೈಕ ಮಾರ್ಗವಾಗಿದೆ. ಶಿರಾಡಿ ಘಾಟಿ, ಸಂಪಾಜೆ ಘಾಟಿ ಹೆದ್ದಾರಿ ಬಂದ್ ಆದ ಸಂದರ್ಭದಲ್ಲಿ ಚಾರ್ಮಾಡಿ ಘಾಟಿ ಮಾತ್ರ ಕರಾವಳಿ ಮತ್ತು ಬೆಂಗಳೂರಿನ ಸಂಪರ್ಕ ರಸ್ತೆಯಾಗಿ ಉಳಿದಿತ್ತು. ಇದರಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿದ ಕಾರಣ ಘಾಟಿ ರಸ್ತೆ ಸಂಪೂರ್ಣ ಹಾಳಾಗಿದೆ. ಅಪಾಯಕಾರಿ ತಿರುವುಗಳಲ್ಲಿ ರಸ್ತೆ ಡಾಂಬರು ಕಿತ್ತು ಹೋಗಿ ಗುಂಡಿಗಳು ಬಿದ್ದಿದೆ. ಆದ್ದರಿಂದ ಈ ಮಾರ್ಗದಲ್ಲಿ ವಾಹನಗಳು ಪಲ್ಟಿಯಾಗುತ್ತಲೇ ಇರುತ್ತವೆ.

    ಲಘು-ಘನ ಎನ್ನದೇ ಎಲ್ಲಾ ವಾಹನಗಳು ಇದೇ ಮಾರ್ಗವಾಗಿ ಬೆಂಗಳೂರು ಸೇರುತ್ತಿದ್ದವು. ಹೀಗಾಗಿ ಹಲವು ದಿನಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಹಾಗೂ ವಾಹನ ಸವಾರರು ನರಕಯಾತನೆ ಅನುಭವಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಾರಿ ಪಲ್ಟಿಯಾಗಿ ಚಾರ್ಮಾಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಲಾರಿ ಪಲ್ಟಿಯಾಗಿ ಚಾರ್ಮಾಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಮಂಗಳೂರು: ಲಾರಿ ಪಲ್ಟಿಯಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಮತ್ತೊಮ್ಮೆ ಟ್ರಾಫಿಕ್ ಜಾಮ್ ಉಂಟಾಗಿದೆ.

    ಇಂದು ಮುಂಜಾನೆ ಘಾಟ್ ನ 6ನೇ ತಿರುವಿನಲ್ಲಿ ಲಾರಿಯೊಂದು ಪಲ್ಟಿಯಾಗಿ ಬಿದ್ದಿದೆ. ಪರಿಣಾಮ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.


    ಘಾಟ್ ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ ಎನ್ನಲಾಗಿದೆ. ಪರಿಣಾಮ ವಾಹನಗಳು ಕಿಲೋಮೀಟರ್ ಗಟ್ಟಲೆ ನಿಂತಿದ್ದವು. ಒಟ್ಟಿನಲ್ಲಿ ಇತ್ತೀಚೆಗಷ್ಟೇ ಶಿರಾಡಿ ಘಾಟ್ ನಲ್ಲು ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಪರಿಣಾಮ ಎಲ್ಲಾ ವಾಹನಗಳು ಚಾರ್ಮಾಡಿ ಘಾಟ್ ಆಗಿಯೇ ಸಂಚರಿಸುತ್ತಿದ್ದವು. ಹೀಗಾಗಿ ಹಲವು ದಿನ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಟ ಅನುಭವಿಸಿದ್ದರು. ಇದನ್ನೂ ಓದಿ: ಸೆಪ್ಟೆಂಬರ್ ನಲ್ಲೇ ಹರಿವು ನಿಲ್ಲಿಸಿದ ಚಾರ್ಮಾಡಿಯ ಫಾಲ್ಸ್ ಗಳು!

    ಸದ್ಯ ಶಿರಾಡಿ ಘಾಟ್ ಲಘು ವಾಹನಕ್ಕೆ ಮುಕ್ತವಾಗಿದ್ದು, ಇದರಿಂದ ಚಾರ್ಮಾಡಿ ಘಾಟ್ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆದಿದೆ. ಇದನ್ನೂ ಓದಿ: ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಚಾರ್ಮಾಡಿ ಘಾಟ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದು ತಾಸು ಸುರಿದ ಮಳೆಗೆ ಬೆಂಗಳೂರು ತತ್ತರ

    ಒಂದು ತಾಸು ಸುರಿದ ಮಳೆಗೆ ಬೆಂಗಳೂರು ತತ್ತರ

    – ಹೆಚ್‍ಎಸ್‍ಆರ್ ಲೇಔಟ್ ರಸ್ತೆಯಲ್ಲಿ ಮೂರಡಿ ನೀರು
    – ಸಿಟಿ ಮಾರ್ಕೆಟ್ ಅಂಗಡಿಗಳಿಗೆ ನುಗ್ಗಿದ ನೀರು

    ಬೆಂಗಳೂರು: ಒಂದು ಗಂಟೆ ಕಾಲ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದ್ದು, ಸಂಜೆ ಸುರಿದ ಭಾರೀ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ.

    ನಗರದ ಹೆಚ್‍ಎಸ್‍ಆರ್ ಲೇಔಟ್, ಮೆಜೆಸ್ಟಿಕ್, ರಾಜಾಜಿನಗರ, ಕೋರಮಂಗಲ, ಪೀಣ್ಯ, ಲಗ್ಗೆರೆ, ಕಾಮಾಕ್ಷಿ ಪಾಳ್ಯ, ಜಯನಗರ, ಜೆಪಿ ನಗರ, ಯಶವಂತಪುರ, ಹೆಬ್ಬಾಳ, ಕೆಂಗೇರಿ, ಮೈಸೂರು ರಸ್ತೆ ಸೇರಿದಂತೆ ನಗರದೆಲ್ಲೆಡೆ ಭಾರೀ ಮಳೆ ಸುರಿಯಿತು. ಸಂಜೆ ಐದು ಗಂಟೆಗೆ ಆರಂಭವಾದ ಮಳೆ ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಪರಿಣಾಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಂದಿ ಪರದಾಡಿದರು.

    ಮಳೆಗೆ ಚಾಮರಾಜಪೇಟೆಯ ಉಮಾ ಥಿಯೇಟರ್ ರಸ್ತೆಯಲ್ಲಿ ಮರವೊಂದು ಉರುಳಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ಮಾಹಿತಿ ಪಡೆದು ಕೂಡಲೇ ಕಾರ್ಯಪ್ರವೃತ್ತರಾದ ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿದರು. ಇನ್ನು ಸಿಟಿ ಮಾರ್ಕೆಟ್‍ನ ಕೆಲಸ ಅಂಗಡಿಗಳಿಗೆ ನೀರು ನುಗ್ಗಿದ್ದು, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಚರಂಡಿ ಒಳಗಿಂದ ನೀರು ಬುಗ್ಗೆಯಂತೆ ಹೊರಬಂದಿದೆ. ರಸ್ತೆಗಳಲ್ಲಿ ಮೂರ್ನಾಲ್ಕು ಅಡಿವರೆಗೂ ನೀರು ನಿಂತಿತ್ತು. ಬಹುತೇಕ ಕಡೆ ಟ್ರಾಫಿಕ್ ಜಾಮ್ ಆಗಿತ್ತು.

    ಇಂದು ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸಿಂಗಸಂದ್ರದಲ್ಲಿ 70 ಮಿಲಿಮೀಟರ್ ಮಳೆ ಆಗಿದ್ದು, ದಯಾನಂದನಗರದಲ್ಲಿ 54 ಮಿಲಿ ಮೀಟರ್, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ 50 ಮಿಲಿಮೀಟರ್ ಮಳೆ ಆಗಿದ್ದು, ಇನ್ನೂ ಮೂರ್ನಾಲ್ಕು ದಿನ ನಗರದಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾರ್ಮಾಡಿ ಘಾಟ್‍ನಲ್ಲಿ 10 ಕಿಲೋ ಮೀಟರ್ ಟ್ರಾಫಿಕ್!

    ಚಾರ್ಮಾಡಿ ಘಾಟ್‍ನಲ್ಲಿ 10 ಕಿಲೋ ಮೀಟರ್ ಟ್ರಾಫಿಕ್!

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಲಾರಿ ಕೆಟ್ಟು ನಿಂತ ಪರಿಣಾಮ ಬೆಳಗ್ಗೆ 4 ಗಂಟಿಯಿಂದಲೂ ಟ್ರಾಫಿಕ್ ಜಾಮ್ ಉಂಟಾಗಿದೆ.

    ಚಾರ್ಮಾಡಿಯ 3ನೇ ತಿರುವಿನಿಂದ ವಾಹನಗಳು 10 ಕಿ.ಮೀ.ನಷ್ಟು ದೂರ ಸಾಲುಗಟ್ಟಿ ನಿಂತಿದ್ದು, ಪ್ರವಾಸಿಗರು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಭಾರತ್ ಬಂದ್ ಹಾಗೂ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಊರಿಗೆ ತೆರಳುತ್ತಿದ್ದು, ಚಾರ್ಮಾಡಿ ಘಾಟ್ ನಲ್ಲಿ ವಾಹನ ದಟ್ಟಣೆ ಹೆಚ್ಚಳವಾಗಿದೆ.

    ಈ ಘಾಟ್ ಮಂಗಳೂರು-ಬೆಂಗಳೂರು-ಧರ್ಮಸ್ಥಳ ಸಂಪರ್ಕಿಸುತ್ತಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

    ಕೆಲ ದಿನಗಳ ಹಿಂದೆಯಷ್ಟೇ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ವೇಳೆ ಚಾರ್ಮಾಡಿಯಲ್ಲೇ ಎಲ್ಲಾ ವಾಹನಗಳು ಚಲಿಸುತ್ತಿದ್ದವು. ಲಘು-ಘನ ಎನ್ನದೇ ಎಲ್ಲಾ ವಾಹನಗಳು ಇದೇ ಮಾರ್ಗವಾಗಿ ಬೆಂಗಳೂರು ಸೇರುತ್ತಿದ್ದವು. ಈ ಹಿನ್ನೆಲೆಯಲ್ಲಿ ಹಲವು ದಿನಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಹಾಗೂ ವಾಹನ ಸವಾರರು ನರಕಯಾತನೆ ಅನುಭವಿಸಿದ್ದರು. ಸದ್ಯ ಶಿರಾಡಿ ಘಾಟ್ ಓಪನ್ ಆಗಿದ್ದು, ಲಘುವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆಗೆ ಅಡ್ಡಲಾಗಿ ಬಿದ್ದ ಗ್ಯಾಸ್ ಟ್ಯಾಂಕರ್- 10ಕಿ.ಮೀ ಫುಲ್ ಟ್ರಾಫಿಕ್ ಜಾಮ್

    ರಸ್ತೆಗೆ ಅಡ್ಡಲಾಗಿ ಬಿದ್ದ ಗ್ಯಾಸ್ ಟ್ಯಾಂಕರ್- 10ಕಿ.ಮೀ ಫುಲ್ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಮಂಗಳವಾರ ಚಾರ್ಮಾಡಿ ಘಾಟ್ ಇಂದು ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ರಸ್ತೆಗೆ ಅಡ್ಡಲಾಗಿ ಗ್ಯಾಸ್ ಟ್ಯಾಂಕರ್ ಬಿದ್ದು 10 ಕಿ.ಮೀವರೆಗೂ ಟ್ರಾಫಿಕ್ ಜಾಮ್ ಆಗಿದೆ.

    ರಸ್ತೆಗೆ ಅಡ್ಡಲಾಗಿ ಗ್ಯಾಸ್ ಟ್ಯಾಂಕರ್ ಬಿದ್ದ ಪರಿಣಾಮ ಕುದುರೆಮುಖ- ಕಾರ್ಕಳ – ಶೃಂಗೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಶೃಂಗೇರಿಯ ಎಸ್‍ಕೆ ಬಾರ್ಡರ್ ನಿಂದ 10ಕಿ.ಮೀ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ರಾತ್ರಿಯಿಡೀ ಪ್ರಯಾಣಿಕರು ಪರದಾಡುವಂತಾಗಿತ್ತು. ಕುದುರೆಮುಖದಲ್ಲಿ ಐರಾವತ ಬಸ್‍ಗಳು ಸಾಲುಗಟ್ಟಿ ನಿಂತಲ್ಲೇ ನಿಂತಿದೆ. ಸದ್ಯ ಗ್ಯಾಸ್ ಟ್ಯಾಂಕರ್ ತೆರವಿಗೆ ಪೊಲೀಸರು ಪರದಾಡುತ್ತಿದ್ದಾರೆ.

    ಕುದುರೆಮುಖ – ಕಾರ್ಕಳ -ಶೃಂಗೇರಿ – ಮಂಗಳೂರು ಮಾರ್ಗ ಕಲ್ಪಿಸೋ 169 ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಶೃಂಗೇರಿಯ ಗಡಿಯಲ್ಲೇ ವಾಹನಗಳು ತೆರಳದಂತೆ ತಡೆಯಲಾಗುತ್ತಿದೆ. ಸದ್ಯ ಸ್ಥಳಕ್ಕೆ ಕಾರ್ಕಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗ ಟ್ಯಾಂಕರ್ ಲಾರಿ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಟ್ಟು ನಿಂತ ವೋಲ್ವೋ ಬಸ್- ಚಾರ್ಮಾಡಿಯಲ್ಲಿ ಮಧ್ಯರಾತ್ರಿ ಟ್ರಾಫಿಕ್ ಜಾಮ್

    ಕೆಟ್ಟು ನಿಂತ ವೋಲ್ವೋ ಬಸ್- ಚಾರ್ಮಾಡಿಯಲ್ಲಿ ಮಧ್ಯರಾತ್ರಿ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆಯ ಚಾರ್ಮಾಡಿ ಘಾಟಿನಲ್ಲಿ ವೋಲ್ವೋ ಬಸ್ ಕೆಟ್ಟು ನಿಂತ ಪರಿಣಾಮ ಸಂಚಾರ ಬಂದ್ ಆಗಿದೆ. ಮಧ್ಯರಾತ್ರಿ 12ರಿಂದ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಚಾರ್ಮಾಡಿಯಿಂದ ಅಣ್ಣಪ್ಪಸ್ವಾಮಿ ದೇವಾಲಯದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ.

    ವಾಹನಗಳು ಸುಮಾರು 10 ಕಿ.ಮೀ ಸಾಲುಗಟ್ಟಿ ನಿಂತಿದ್ದು, ಚಾರ್ಮಾಡಿಯಲ್ಲಿ ಭಾರೀ ವಾಹನಗಳ ನಿಷೇಧವಿದ್ದರೂ, ಘನ ವಾಹನಗಳು ಸಂಚರಿಸುತ್ತಿದೆ. ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೂ ಭಾರೀ ವಾಹನಗಳು ಚಾರ್ಮಾಡಿ ಘಾಟಿನಲ್ಲಿ ಸಂಚಾರ ಮಾಡುತ್ತಿದೆ.

    ಕೆಲವು ದಿನಗಳ ಹಿಂದೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, 5 ಕಿ.ಮೀ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿತ್ತು. ಲಾರಿ ಕೆಟ್ಟು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದು, ಕೊಟ್ಟಿಗೆಹಾರದ ಬಳಿ ವಾಹನಗಳು ವಾಪಸ್ ತೆರಳಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುದುರೆಮುಖ ಘಾಟ್ ರಸ್ತೆ ಸಂಚಾರ ಸ್ಥಗಿತ- ವಾಹನ ಸವಾರರ ಪರದಾಟ

    ಕುದುರೆಮುಖ ಘಾಟ್ ರಸ್ತೆ ಸಂಚಾರ ಸ್ಥಗಿತ- ವಾಹನ ಸವಾರರ ಪರದಾಟ

    ಚಿಕ್ಕಮಗಳೂರು: ಕುದುರೆಮುಖ ಘಾಟ್ ತಿರುವಿನಲ್ಲಿ ಕಂಟೈನರ್ ಒಂದು ಕಿರಿದಾದ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡಿದ್ದು, ಲಾರಿ ಚಾಲಕರು ಮತ್ತು ಪ್ರವಾಸಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಶುಕ್ರವಾರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ರಸ್ತೆ ಬದಿಯ ಮಣ್ಣಿನಲ್ಲಿ ಸಿಲುಕಿಕೊಂಡಿದೆ. ಕಿರಿದಾದ ಘಾಟಿ ರಸ್ತೆಯಲ್ಲಿ ಕಂಟೈನರ್ ತೆರವುಗೊಳಿಸಲು ಕಾರ್ಯಚರಣೆ ಕಷ್ಟವಾಗುತ್ತಿದ್ದು, ಸ್ಥಳಕ್ಕೆ ಕುದುರೆಮುಖ ಪೊಲೀಸರು ಭೇಟಿ ನೀಡಿ, ತೆರವು ಕಾರ್ಯ ಆರಂಭಿಸಿದ್ದಾರೆ.

    ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೇ ನಿಂತಿವೆ. ಈ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಚಾಲಕರು ಮತ್ತು ಪ್ರವಾಸಿಗರು ಪರದಾಡುತ್ತಿದ್ದಾರೆ.

    ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕುದುರೆಮುಖ ಘಾಟಿ ಮಾರ್ಗವಾಗಿ ಮಂಗಳೂರಿಗೆ ಸಂಚಾರ ಕಲ್ಪಿಸಿತ್ತು. ಇದರಿಂದಾಗಿ ಕಳಸ-ಮಂಗಳೂರು ಸಂಚಾರಕ್ಕಾಗಿ ಕುದುರೆಮುಖ ಘಾಟ್ ಮಾರ್ಗದ ಮೂಲಕ ಅವಕಾಶ ನೀಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್- 5 ಕಿ.ಮೀವರೆಗೂ ಸಾಲುಗಟ್ಟಿ ನಿಂತ ವಾಹನ!

    ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್- 5 ಕಿ.ಮೀವರೆಗೂ ಸಾಲುಗಟ್ಟಿ ನಿಂತ ವಾಹನ!

    ಚಿಕ್ಕಮಗಳೂರು/ಮಂಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, 5 ಕಿ.ಮೀ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿದೆ.

    ಲಾರಿ ಕೆಟ್ಟು ನಿಂತಿದರಿಂದ ಟ್ರಾಫಿಕ್ ಜಾಮ್ ಆಗಿದ್ದು, ಕೊಟ್ಟಿಗೆಹಾರದ ಬಳಿ ವಾಹನಗಳು ವಾಪಸ್ ತೆರಳುತ್ತಿದೆ. ಮಂಗಳೂರು-ಧರ್ಮಸ್ಥಳ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ನಿಂದ ಸವಾರರು ಪರದಾಡುತ್ತಿದ್ದಾರೆ.

    ಶಿರಾಡಿ, ಸಂಪಾಜೆ ಘಾಟಿ ರಸ್ತೆಗಳು ಬಂದ್ ಆದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಎಲ್ಲಾ ವಾಹನಗಳು ಚಾರ್ಮಾಡಿಯಲ್ಲಿ ಸಂಚಾರವಾಗುತ್ತಿದೆ. ಮಂಗಳೂರು, ಧರ್ಮಸ್ಥಳಕ್ಕೆ ಸಾವಿರಾರು ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ದಟ್ಟ ಮಂಜು, ತುಂತುರು ಮಳೆಯಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ.

    ಮಳೆ ಬೀಳುತ್ತಿರುವುದರಿಂದ ಏಕಮುಖ ಸಂಚಾರವೂ ವಿಳಂಬವಾಗುತ್ತಿದೆ. ನೂರಾರು ವಾಹನಗಳು ರಸ್ತೆಯಲ್ಲೇ ಬಾಕಿ ಇದ್ದು, ಮಂಗಳೂರು, ಉಡುಪಿಗೆ ಬರಬೇಕಾದ ಬಸ್ಸುಗಳು 5 ಗಂಟೆ ವಿಳಂಬವಾಗಿದೆ.

    ಬೆಂಗಳೂರು- ಮಂಗಳೂರು ನಡುವೆ ಏಕೈಕ ಸಂಪರ್ಕದ ಕೊಂಡಿಯಾಗಿದ್ದ ಚಾರ್ಮಾಡಿ ಘಾಟಿಯಲ್ಲಿ 10ನೇ ತಿರುವಿನಲ್ಲಿ ಶುಕ್ರವಾರ ಕಂಟೈನರ್ ಟ್ರಕ್ ಪಲ್ಟಿಯಾಗಿತ್ತು. ಪಲ್ಟಿಯಾದ ಹಿನ್ನೆಲೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈಗ ಮತ್ತೆ ಲಾರಿ ಕೆಟ್ಟು ನಿಂತರ ಪರಿಣಾಮ ಮತ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv