Tag: traffic

  • BETL ಅಧಿಕಾರಿಗಳ ನಿರ್ಲಕ್ಷ್ಯ – ಹೊಸೂರು ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್

    BETL ಅಧಿಕಾರಿಗಳ ನಿರ್ಲಕ್ಷ್ಯ – ಹೊಸೂರು ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್

    ಆನೇಕಲ್: ಬಿಇಟಿಎಲ್ (BETL) ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ ಹಾಗೂ ಬೇಜವಾಬ್ದಾರಿತನದಿಂದ ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ ಹೊಸೂರು ರಸ್ತೆ (Hosur Road) ಸಂಪೂರ್ಣವಾಗಿ ಟ್ರಾಫಿಕ್ ಜಾಮ್‌ನಿಂದ (Traffic Jam) ವಾಹನ ಸಮಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇಂದು ಸಹ ಹೊಸೂರು ರಸ್ತೆಯ ಗೆಸ್ಟ್ ಲೈನ್ ಸರ್ಕಲ್‌ನಿಂದ ಕೋನಪ್ಪನ ಅಗ್ರಹಾರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ.

    ಇತ್ತೀಚಿಗೆ ಬಿಇಟಿಎಲ್ ವತಿಯಿಂದ ಗೆಸ್ಟ್ ಲೈನ್ ಸಮೀಪ ಕಾಮಗಾರಿಯೊಂದನ್ನು ಮಾಡುತ್ತಿದ್ದು, ಕಾಮಗಾರಿಗಾಗಿ ಹಳ್ಳವನ್ನು ಅಗೆಯಲಾಗಿದೆ. ಆದರೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಕಾಂಟ್ರಾಕ್ಟರ್ ಹಾಗೂ ಬಿಇಟಿಎಲ್ ಸಂಸ್ಥೆಯಿಂದಾಗಿ ಪ್ರತಿನಿತ್ಯ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು ಬಿಇಟಿಎಲ್‌ಗೆ ಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ದೊಡ್ಡಗೌಡರ ಆರೋಗ್ಯ ವಿಚಾರಿಸಿದ ಬಿಎಸ್‌ವೈ, ವಿಜಯೇಂದ್ರ

    ಅಲ್ಲದೇ ಇಂದು ವಾರಾಂತ್ಯವಾಗಿದ್ದು, ತಮಿಳುನಾಡಿನತ್ತ ತಮ್ಮ ಊರುಗಳಿಗೆ ಅನೇಕ ಮಂದಿ ಹೊರಟಿದ್ದರು. ಆದರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಕಿರಿಕಿರಿ ಅನುಭವಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಸೆರ್ಗಿಯೊ ಗೋರ್ – ಟ್ರಂಪ್ ಮೋದಿಯನ್ನ ಗ್ರೇಟ್‌ ಫ್ರೆಂಡ್‌ ಅಂತ ಪರಿಗಣಿಸ್ತಾರೆ: ಯುಎಸ್‌ ರಾಯಭಾರಿ

  • ಪ್ರಮುಖ ವೃತ್ತಗಳಿಗೆ ಸಿಗ್ನಲ್‌ ಅಳವಡಿಸೋದು ಯಾವಾಗ? – ಚಿಕ್ಕೋಡಿಯಲ್ಲಿ ಟ್ರಾಫಿಕ್ ಕಾಟ, ಜನರ ಪರದಾಟ

    ಪ್ರಮುಖ ವೃತ್ತಗಳಿಗೆ ಸಿಗ್ನಲ್‌ ಅಳವಡಿಸೋದು ಯಾವಾಗ? – ಚಿಕ್ಕೋಡಿಯಲ್ಲಿ ಟ್ರಾಫಿಕ್ ಕಾಟ, ಜನರ ಪರದಾಟ

    ಬೆಳಗಾವಿ: ಹೊಸ ಜಿಲ್ಲೆ ಘೋಷಣೆ ತವಕದಲ್ಲಿರುವ ಚಿಕ್ಕೋಡಿಯ (Chkkodi) ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ (Traffic Signal) ಅಳವಡಿಸದೇ ಇರುವುದು ಅವಘಡಗಳಿಗೆ (Accident) ಕಾರಣವಾಗುತ್ತಿದೆ. ಅಡ್ಡಾದಿಡ್ಡಿಯಾಗಿ ಓಡಾಡುವುದರಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ.

    ಚಿಕ್ಕೋಡಿ ಪಟ್ಟಣದಲ್ಲಿ ಅಂದಾಜು 50 ಸಾವಿರ ಜನಸಂಖ್ಯೆ ಇದೆ. ಬಹುತೇಕ ಎಲ್ಲ ಇಲಾಖಾ ಕಚೇರಿಗಳಿವೆ. ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಶಾಲಾ-ಕಾಲೇಜುಗಳಿರುವುದರಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಾರೆ. ಆದರೆ, ಇಲ್ಲಿನ ಸಂಚಾರ ದಟ್ಟಣೆ, ರಸ್ತೆ ನಿಯಮ ಮಿರಿ ಓಡಾಡುವ ವಾಹನಗಳಿಂದ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟುವುದೇ ಸವಾಲಾಗಿದೆ.

    ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಪಘಾತದ ಅಪಾಯ ಹೆಚ್ಚಾಗಿದೆ. ಗೋಟೂರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ, ನಿಪ್ಪಾಣಿ-ಮಹಾಲಿಂಗಪುರ ರಾಜ್ಯ ಹೆದ್ದಾರಿ ಕೂಡುವ ವೃತ್ತ ಇದಾಗಿದ್ದು, ಸಂಚಾರ ದಟಣೆ ಮಿತಿಮೀರುತ್ತಿದೆ. ಈ ವೃತ್ತದ ಬಳಿ ಪ್ರಮುಖ ಕಚೇರಿಗಳು, ಆಸ್ಪತ್ರೆ, ಅಂಚೆ ಕಚೇರಿ ಇರುವುದರಿಂದ ಜನರ ಓಡಾಟವೂ ಹೆಚ್ಚಾಗಿರುತ್ತದೆ.ಟ್ರಾಫಿಕ್ ಸಿಗ್ನಲ್ ಇಲ್ಲದ್ದರಿಂದ ನಿತ್ಯವೂ ಇಲ್ಲಿ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ.  ಇದನ್ನೂ ಓದಿ:  ಇದನ್ನೂ ಓದಿ: ಎನ್‌ಕೌಂಟರ್ ಭೀತಿ ಏಕಕಾಲಕ್ಕೆ 103 ನಕ್ಸಲರ ಶರಣಾಗತಿ

    ಬಸವೇಶ್ವರ ವೃತ್ತ ಮಾತ್ರವಲ್ಲದೆ ಇಂದಿರಾ ನಗರ ವೃತ್ತ, ಬಸ್ ನಿಲ್ದಾಣ ವೃತ್ತ, ಅಂಕಲಿಕೂಟ್, ಶಿಂಧಿಕೂಟ್ ವೃತ್ತಗಳಲ್ಲಿ ಸಂಚಾರ ದೀಪಗಳನ್ನು ಅಳವಡಿಸದ ಕಾರಣ ಸಂಚಾರ ನಿಮಯ ಮಿರಿ ವಾಹನಗಳು ಓಡಾಡುತ್ತಿದ್ದು, ಪಾದಚಾರಿಗಳಿಗೆ ಸುರಕ್ಷತೆ ಇಲ್ಲದಂತಾಗಿದೆ.

    ಸುಗಮ ಸಂಚಾರಕ್ಕೆ ನೆರವಾಗಲು ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಪಟ್ಟಣದಲ್ಲಿ 2023ರಲ್ಲಿ ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆ ಆರಂಭಿಸಲಾಗಿದೆ. 31 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟಾದರೂ ಸಂಚಾರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ ಹಲವು ಅಪಘಾತಗಳು ಘಟಿಸಿದ್ದು, ಸಾಕಷ್ಟು ಸಾವು-ನೋವು ಸಂಭವಿಸಿವೆ. 2023ರಲ್ಲಿ 75, 2024 ರಲ್ಲಿ 76, 2025 ಸೆ.14ರ ವರೆಗೆ 49 ಅಪಘಾತಗಳು ನಡೆದಿದ್ದು, 2023 ರಲ್ಲಿ 34, 2024ರಲ್ಲಿ 20 ,2025 ರಲ್ಲಿ 14 ಜನ ಮೃತಪಟ್ಟಿದ್ದಾರೆ. ಒಟ್ಟಾರೆ 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

  • ಪೀಕ್‌ ಅವರ್‌ನಲ್ಲಿ ಬೆಂಗಳೂರಿನಲ್ಲಿ ಒಬ್ಬರೇ ಕಾರ್‌ನಲ್ಲಿ ಸಂಚರಿಸಿದ್ರೆ ಟ್ಯಾಕ್ಸ್‌?

    ಪೀಕ್‌ ಅವರ್‌ನಲ್ಲಿ ಬೆಂಗಳೂರಿನಲ್ಲಿ ಒಬ್ಬರೇ ಕಾರ್‌ನಲ್ಲಿ ಸಂಚರಿಸಿದ್ರೆ ಟ್ಯಾಕ್ಸ್‌?

    – ಸರ್ಕಾರಕ್ಕೆ ತಜ್ಞರ ಸಮಿತಿಯಿಂದ ಪ್ರಸ್ತಾಪ

    ಬೆಂಗಳೂರು: ಸಂಚಾರ ದಟ್ಟಣೆ (Heavy Traffic) ಇರುವ ಬೆಂಗಳೂರಿನ (Bengaluru) ಕೆಲ ರೋಡ್ ಗಳಲ್ಲಿ ನೀವು ಸಿಂಗಲ್ ಆಗಿ ಕಾರ್ ಓಡಿಸ್ತೀರಾ ಹಾಗಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ಒಂದು ವೇಳೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡರೆ ದೇಶದಲ್ಲಿ ಎಲ್ಲಿಯೂ ಇಲ್ಲದಸಂಚಾರ ದಟ್ಟಣೆ ತೆರಿಗೆ (Congestion Tax) ಪಾವತಿಸಬೇಕಾಗುತ್ತದೆ.

    ಹೌದು. ಸೆಪ್ಟೆಂಬರ್ 24 ರಂದು ಸಂಚಾರ ದಟ್ಟಣೆ, ಗುಂಡಿ ಸಮಸ್ಯೆ ಬಗ್ಗೆ ವಿವಿಧ ಇಲಾಖೆಗಳ ಕೋ ಆರ್ಡಿನೇಶನ್ ಮತ್ತು ಕೆಲ ಉದ್ಯಮಿಗಳ ಮಹತ್ವದ ಸಭೆ ನಡೆದಿದೆ. ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ‌ನಡೆದಿದ್ದ ಸಭೆಯಲ್ಲಿ ತಜ್ಞರು ಸಂಚಾರ ದಟ್ಟಣೆ ಟ್ಯಾಕ್ಸ್ ಪ್ರಸ್ತಾಪ ಇಟ್ಟಿದ್ದಾರೆ. ಫಾಸ್ಟ್ ಟ್ಯಾಗ್ ಸಿಸ್ಟಮ್ ಮೂಲಕ ಸಂಚಾರ ದಟ್ಟಣೆ ಇರುವ ನಿರ್ದಿಷ್ಟ ರಸ್ತೆಗಳಲ್ಲಿ ಟ್ಯಾಕ್ಸ್ ಪ್ರಸ್ತಾಪ ಇಟ್ಟಿದ್ದಾರೆ. ಅಲ್ಲದೆ ಕಾರ್ ಪೂಲಿಂಗ್ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.

     

    ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ನಡೆದ ತಜ್ಞರ ಸಮಿತಿ ಈ ಪ್ರಸ್ತಾಪಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಿಲ್ಲ. ಸಂಚಾರ ದಟ್ಟಣೆ ಟ್ಯಾಕ್ಸ್ ಹಾಕಿರೆ ಸಾರ್ವಜನಿಕವಾಗಿ ವ್ಯಾಪಕವಾಗಿ ಆಕ್ರೋಶ ಸಾಧ್ಯತೆ ಅರಿತು ಆ ಪ್ರಸ್ತಾಪ ರಿಜೆಕ್ಟ್ ಆಗಬಹುದು. ಹಾಗಾಗಿ ಸರ್ಕಾರ ಮಟ್ಟದಲ್ಲಿ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ.‌

    ಲಂಡನ್, ಸಿಂಗಾಪುರ್, ನ್ಯೂಯಾರ್ಕ್ ನಗರಗಳಲ್ಲಿ ಸಂಚಾರಣ ದಟ್ಟಣೆ ಟ್ಯಾಕ್ಸ್ ಬಗ್ಗೆ ಉಲ್ಲೇಖಿಸಲಾಗಿದ್ದು, ಬೆಂಗಳೂರು ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಅಲ್ಲಿಗೆ ಹೋಲಿಸಿ ಟ್ಯಾಕ್ಸ್ ಹಾಕುವ ಪ್ರಸ್ತಾಪಕ್ಕೆ ಬಿಜೆಪಿ ತೀವ್ರವಾಗಿ ವಿರೋಧಿಸಿದೆ.

    ಏನಿದು ಸಂಚಾರ ದಟ್ಟಣೆ ತೆರಿಗೆ?
    ಪೀಕ್ ಅವರ್ ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ನಿರ್ದಿಷ್ಟ ರಸ್ತೆಗಳಲ್ಲಿ ಜಾರಿ. ಒಬ್ಬರೇ ಕಾರು ಓಡಿಸಿದರೆ ಸಂಚಾರ ದಟ್ಟಣೆ ತೆರಿಗೆ ಕಟ್ಟಬೇಕು. ಫಾಸ್ಟ್ ಟ್ಯಾಗ್ ಮೂಲಕ ಸಂಚಾರ ದಟ್ಟಣೆ ತೆರಿಗೆ ಕಡಿತ ಮಾಡಲು ಪ್ರಸ್ತಾಪ ಇಡಲಾಗಿದೆ.

  • ತುಮಕೂರು ದಸರಾ – ಇಂದಿನಿಂದ ಮೂರು ದಿನ ವಾಹನ ಸಂಚಾರ ಬದಲಾವಣೆ

    ತುಮಕೂರು ದಸರಾ – ಇಂದಿನಿಂದ ಮೂರು ದಿನ ವಾಹನ ಸಂಚಾರ ಬದಲಾವಣೆ

    ತುಮಕೂರು: ತುಮಕೂರು ದಸರಾ (Tumkur Dasara) ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಪ್ರವೇಶ ಮಾಡುವ ವಾಹನಗಳ (Vehicles) ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಸೆ.30, ಅ.1 ಹಾಗೂ ಅ.2ರಂದು ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ವಾಹನಗಳ ಮಾರ್ಗ ಬದಲಾವಣೆ ಮಾಡಿ ಪ್ರಕಟಣೆ ಹೊರಡಿಸಿದೆ. ನಗರ ಪ್ರವೇಶ ಮಾಡದೇ ರಿಂಗ್ ರಸ್ತೆ ಮೂಲಕ ವಾಹನ ಚಲಾಯಿಸುವುದು ಹಾಗೂ ಅಂತರಸನಹಳ್ಳಿ, ಶಿರಾ ಗೇಟ್ ಮೂಲಕ ಬಸ್ ನಿಲ್ದಾಣಕ್ಕೆ ಹೋಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ರೇಪಿಸ್ಟ್ ಉಮೇಶ್ ರೆಡ್ಡಿಗೆ VIP ಸೌಲಭ್ಯ ಕೊಡ್ತಿದ್ದಾರೆ, ಆದ್ರೆ ದರ್ಶನ್‌ಗೆ ಏನೂ ಇಲ್ಲ: ವಕೀಲರ ವಾದ ಏನು?

    ಅದರ ಜೊತೆಗೆ ಸಂಜೆ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಜೂನಿಯರ್ ಕಾಲೇಜು ಮೈದಾನಕ್ಕೆ ತರದೇ ನಿಗದಿ ಪಡಿಸಿದ ಸ್ಥಳದಲ್ಲೇ ಬಿಟ್ಟು ಬರುವಂತೆ ಸೂಚಿಸಲಾಗಿದೆ. ಇಂದು ರಾತ್ರಿ ಮೋಹಕತಾರೆ ರಮ್ಯಾ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಕಾರ್ಯಕ್ರಮ ನೀಡಲಿದ್ದಾರೆ. ಅದೇ ರೀತಿ ನಾಳೆ ಗಾಯಕಿ ಅನನ್ಯ ಭಟ್ ಮತ್ತು ಅರ್ಜುನ್ ಜನ್ಯರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: RSSಗೆ 100 ವರ್ಷ – ನಾಳೆ ಪೋಸ್ಟ್ ಸ್ಟ್ಯಾಂಪ್, ನಾಣ್ಯ ಬಿಡುಗಡೆ ಮಾಡಲಿದ್ದಾರೆ ಪ್ರಧಾನಿ ಮೋದಿ

  • ಗಮನಿಸಿ, ನಾಳೆಯಿಂದ ಸೆ.26ರವರೆಗೆ ಔಟರ್‌ ರಿಂಗ್‌ ರಸ್ತೆಯಲ್ಲಿ ಸಂಚಾರ ಬದಲಾವಣೆ

    ಗಮನಿಸಿ, ನಾಳೆಯಿಂದ ಸೆ.26ರವರೆಗೆ ಔಟರ್‌ ರಿಂಗ್‌ ರಸ್ತೆಯಲ್ಲಿ ಸಂಚಾರ ಬದಲಾವಣೆ

    – ಹೆಚ್‌ಎಎಲ್‌ ಸಂಚಾರ ಠಾಣಾ ವ್ಯಾಪ್ತಿಯ ಕೆಲ ರಸ್ತೆಗಳಲ್ಲಿ ನಿರ್ಬಂಧ

    ಬೆಂಗಳೂರು: ನಗರದ ರಸ್ತೆ ಗುಂಡಿ ವಿಚಾರ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಯಾದ ಬೆನ್ನಲ್ಲೇ ಒಂದು ವಾರ ಕಾಲ ಔಟರ್‌ ರಿಂಗ್‌ ರೋಡ್‌ನಲ್ಲಿ (ORR) ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

    ಹೆಚ್‌ಎಎಲ್‌ ಏರ್‌ಪೋರ್ಟ್ (HAL Airport) ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೊರ ವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ (Traffic Problem) ಮತ್ತು ಸಂಚಾರದಟ್ಟಣೆ ಸುಧಾರಿಸಲು ಕೆಲವೊಂದು ರಸ್ತೆಗಳಲ್ಲಿ ನಾಳೆಯಿಂದ ಸೆ.26ರವರಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

    ವಾಹನ ನಿರ್ಬಂಧಿಸಲಾದ ರಸ್ತೆ ಮಾರ್ಗ
    ಲೇ ಅರೇಬಿಯಾ, ಬಿರಿಯಾನಿ ಜೋನ್ ಮತ್ತು ಕ್ರೋಮ್ ಜಂಕ್ಷನ್ ಬಳಿ ಹೊರವರ್ತುಲ ರಸ್ತೆಯಿಂದ ಮಾರತ್ತಹಳ್ಳಿ-ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

    ಪರ್ಯಾಯ ಮಾರ್ಗ ಯಾವುದು?
    ಮಹದೇವಪುರ ಕಾರ್ತಿಕ್‌ನಗರ ಕಡೆಯಿಂದ ಲೇ ಅರೇಬಿಯಾ ಮತ್ತು ಬಿರಿಯಾನಿ ಪಾಯಿಂಟ್ ಮೂಲಕ ಮಾರತ್ ಹಳ್ಳಿ- ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ವಾಹನ ಸವಾರರು ಕಡ್ಡಾಯವಾಗಿ ಕಲಾಮಂದಿರದ ಬಳಿ ಸರ್ವಿಸ್ ರಸ್ತೆಗೆ ತೆರಳಿ ಮಾರತ್‌ ಹಳ್ಳಿ ಕಾಂತಿ ಸ್ವೀಟ್ಸ್ ಅಂಡರ್‌ಪಾಸ್ ಬಳಿ ಯು-ಟರ್ನ್ ತೆಗೆದುಕೊಂಡು, ಮಾರತ್ ಹಳ್ಳಿ ಸೇತುವೆಯ ಬಳಿ ಎಡಕ್ಕೆ ತಿರುಗಿ ಮುನ್ನೇಕೊಳಾಲ, ಕಾಡುಬೀಸನಹಳ್ಳಿ ಜಂಕ್ಷನ್, ಪಣತ್ತೂರು ಮತ್ತು ಕರಿಯಮ್ಮನ ಅಗ್ರಹಾರ ಕಡೆಗೆ ಹೋಗಲು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವುದು.

    ದೇವರಬೀಸನಹಳ್ಳಿ ಹಾಗೂ ಬೆಳ್ಳಂದೂರು ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಕಡ್ಡಾಯವಾಗಿ ಹೊರ ವರ್ತುಲ ರಸ್ತೆಯ ಮೂಲಕವೇ ಸಂಚರಿಸಬೇಕಾಗುತ್ತದೆ.

  • ಬೆಂಗಳೂರು ಟೆಕ್ಕಿಗೆ 2.65 ಲಕ್ಷ ವಂಚನೆ – ಟ್ರಾಫಿಕ್‌ ಫೈನ್‌ ಕಟ್ಟೋ ಮುನ್ನ ಎಚ್ಚರವಾಗಿರಿ

    ಬೆಂಗಳೂರು ಟೆಕ್ಕಿಗೆ 2.65 ಲಕ್ಷ ವಂಚನೆ – ಟ್ರಾಫಿಕ್‌ ಫೈನ್‌ ಕಟ್ಟೋ ಮುನ್ನ ಎಚ್ಚರವಾಗಿರಿ

    ಬೆಂಗಳೂರು: ಟ್ರಾಫಿಕ್‌ ದಂಡದ (Traffic Fine) ಮೊತ್ತವನ್ನು ಪಾವತಿಸುವ ಮುನ್ನ ಎಚ್ಚರವಾಗಿರಿ. ಸೈಬರ್‌ ಕಳ್ಳರು (Cyber ​​Thieves) ಯಾವುದೋ ಲಿಂಕ್‌ ಕಳುಹಿಸಿ ನಿಮ್ಮ ಹಣಕ್ಕೆ ಕನ್ನ ಹಾಕಲು ಮುಂದಾಗಿದ್ದು, ಟೆಕ್ಕಿಯೊಬ್ಬರು 2.65 ಲಕ್ಷ ರೂ. ಕಳೆದುಕೊಂಡಿದ್ದಾರೆ.

    ಹೌದು. ಸಂಚಾರ ಪೊಲೀಸರು 50% ರಿಯಾಯಿತಿ ನೀಡಿ ದಂಡ ಕಟ್ಟಲು ಅವಕಾಶ ನೀಡಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ವಂಚಕರು ವಾಹನ ಸವಾರರ ಮೊಬೈಲ್ ನಂಬರ್‌ಗಳಿಗೆ ಕೆಲ ಲಿಂಕ್‌ಗಳು, ಎಪಿಕೆ ಫೈಲ್‌ಗಳನ್ನು ಕಳುಹಿಸಿ ವಾಹನಗಳ ದಂಡವನ್ನು ಚೆಕ್‌ ಮಾಡಿಕೊಳ್ಳಿ. ಹಾಗೆಯೇ ಇಲ್ಲೇ ದಂಡ ಕಟ್ಟಬಹುದು ಎಂಬ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದಾರೆ.

    ವಂಚಕರ ಮೆಸೇಜ್‌ಗಳನ್ನು ನಂಬಿದ ಹಲವರು ಅದನ್ನು ಓಪನ್ ಮಾಡಿದ ತಕ್ಷಣ ಅಕೌಂಟ್ ನಲ್ಲಿದ್ದ ಹಣ ಮಾಯವಾಗುತ್ತದೆ. ಕೊಡಿಗೇಹಳ್ಳಿ ವ್ಯಾಪ್ತಿಯ ಟೆಕ್ಕಿಯೊಬ್ಬರಿಗೆ ಸೈಬರ್ ವಂಚಕರು ಓಪನ್ ಮಾಡಿ ನಿಮ್ ವಾಹನದ ಫೈನ್ ಎಷ್ಟಿದೆ ಚೆಕ್ ಮಾಡಿಕೊಳ್ಳಿ ಅಂತಾ ಎಪಿಕೆ ಫೈಲ್‌ ಕಳುಹಿಸಿದ್ದರು. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ನಿಷೇಧ – BCCI ಪ್ರಾಯೋಜಕತ್ವದಿಂದ ಹಿಂದೆ ಸರಿದ Dream11

     

    ಆ ಮಸೇಜ್ ನಂಬಿದ ಟೆಕ್ಕಿ ಆ ಲಿಂಕ್ ನ ಓಪನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಖಾತೆಯಲ್ಲಿದ್ದ 2.65 ಲಕ್ಷ ರೂ. ಹಣವನ್ನು ಸೈಬರ್ ವಂಚಕರು ಎಗರಿಸಿದ್ದಾರೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮುರಳಿ ದೂರು ನೀಡಿದ್ದಾರೆ.

    ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸಬಹುದು.

    ಹಲವು ವರ್ಷಗಳಿಂದ ಟ್ರಾಫಿಕ್ ದಂಡ ಕಟ್ಟದೇ ಹಾಗೇ ಉಳಿಸಿಕೊಂಡವರಿಗೆ ಈ ರಿಯಾಯಿತಿ ನೀಡಲಾಗಿದೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಇದೇ ರೀತಿ ರಿಯಾಯಿತಿ ಘೋಷಿಸಿ ಮೊತ್ತದ ದಂಡ ಸಂಗ್ರಹಿಸಿತ್ತು. ಈ ಆದೇಶದಂತೆ ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ.

  • 12 ಗಂಟೆ ಟ್ರಾಫಿಕ್‌ನಲ್ಲೇ ಕಳೆಯೋದಾದ್ರೆ ಜನ ಟೋಲ್ ಯಾಕೆ ಪಾವತಿಸ್ಬೇಕು? – NHAI ವಿರುದ್ಧ ಸುಪ್ರೀಂ ಗರಂ

    12 ಗಂಟೆ ಟ್ರಾಫಿಕ್‌ನಲ್ಲೇ ಕಳೆಯೋದಾದ್ರೆ ಜನ ಟೋಲ್ ಯಾಕೆ ಪಾವತಿಸ್ಬೇಕು? – NHAI ವಿರುದ್ಧ ಸುಪ್ರೀಂ ಗರಂ

    ನವದೆಹಲಿ: 12 ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲೇ ಕಳೆಯೋದಾದರೆ ಜನ ಏಕೆ ಟೋಲ್ (Toll) ಪಾವತಿಸಬೇಕು ಅಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವಿರುದ್ಧ ಸುಪ್ರೀಂ ಕೋರ್ಟ್ (Supreme Court) ಗರಂ ಆಗಿದೆ.

    ತ್ರಿಶೂರಿನ ಪಾಲಿಯೆಕ್ಕರಾ ಟೋಲ್ ಸ್ಥಗಿತಕ್ಕೆ ಕೇರಳ ಹೈಕೋರ್ಟ್ (Kerala High Court) ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಎನ್‌ಹೆಚ್‌ಎಐ ಹಾಗೂ ಗುರುವಾಯೂರು ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು. ಮನೆ ಬಿಟ್ಟು ಈ ತುದಿಯಿಂದ ಆ ತುದಿಯ ರಸ್ತೆಗೆ ಹೋಗಲು 12 ಗಂಟೆ ಬೇಕಾಗೋದಾದರೆ ಟೋಲ್ ರೋಡ್ ಏಕೆ ಬೇಕು? 1 ಗಂಟೆಯ ಪ್ರಯಾಣ 11 ಗಂಟೆ ಹೆಚ್ಚುವರಿಯಾದರೆ ಯಾರು ಹೊಣೆ? ಇದಕ್ಕಾಗಿ ಏಕೆ 150 ರೂ. ಟೋಲ್ ಕಟ್ಟಬೇಕು ಅಂತ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಷರತ್ತು ಬದ್ಧ ಅನುಮತಿ

    ಎನ್‌ಹೆಚ್‌ಎಐ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಲಾರಿ ಅಚಾನಕ್ ಆಗಿ ಅಪಘಾತಕ್ಕೀಡಾಗಿ ಟ್ರಾಫಿಕ್ ಜಾಮ್ (Traffic Jam) ಆಗಿದ್ದು ‘ದೇವರ ಆಟ’. ಸರ್ವಿಸ್ ರೋಡ್ ಇದೆ. ಆದರೆ ಮಳೆಯೂ ಜೋರಾಗಿದ್ದು, ಕಾಮಗಾರಿ ವಿಳಂಬ, ಟ್ರಾಫಿಕ್ ಜಾಮ್‌ಗೆ ಕಾರಣ ಅಂದರು. ಇದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪಿಸಿ, ಅದು ದೇವರ ಆಟ ಅಲ್ಲ, ಕಳಪೆ ನಿರ್ವಹಣೆಯಿಂದ ಸೃಷ್ಟಿಯಾದ ಗುಂಡಿ’ ಅಂತ ಗರಂ ಆಯ್ತು. ಅಲ್ಲದೇ ಕೇಸ್ ಆದೇಶವನ್ನು ಕಾಯ್ದಿರಿಸಿತು. ಇದನ್ನೂ ಓದಿ: 97 LCA ಮಾರ್ಕ್ 1A ಫೈಟರ್ ಜೆಟ್‌ ಖರೀದಿಗೆ 62,000 ಕೋಟಿ ರೂ. ಒಪ್ಪಂದಕ್ಕೆ ಭಾರತ ಅನುಮೋದನೆ

  • ಪ್ರತಿ ಬುಧವಾರ ವರ್ಕ್ ಫ್ರಂ ಹೋಂ ಕೊಡಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ಟ್ರಾಫಿಕ್‌ ಪೊಲೀಸರ ಸಲಹೆ

    ಪ್ರತಿ ಬುಧವಾರ ವರ್ಕ್ ಫ್ರಂ ಹೋಂ ಕೊಡಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ಟ್ರಾಫಿಕ್‌ ಪೊಲೀಸರ ಸಲಹೆ

    ಬೆಂಗಳೂರು: ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕೆ (Traffic Jam) ಪೊಲೀಸ್ ಇಲಾಖೆ ಹೊಸ ಪ್ಲಾನ್ ಮಾಡಿದೆ. ಬೆಂಗಳೂರು ಟೆಕ್ಕಿಗಳಿಗೆ ಪ್ರತಿ ಬುಧವಾರದಂದು ವರ್ಕ್ ಫ್ರಂ ಹೋಂ (Work From Home) ಮಾಡುವಂತೆ ಐಟಿ ಕಂಪನಿಗಳಿಗೆ (IT Company) ಸಲಹೆ ನೀಡಿದೆ.

    ಐಟಿ ಕಂಪನಿಗಳು ಇರುವ ಪ್ರದೇಶಗಳು, ಅದರ ಸುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ವಿಪರೀತ ಆಗುತ್ತಿದೆ ಹೀಗಾಗಿ ಬುಧವಾರ ಒಂದು ದಿನ ವರ್ಕ್‌ ಫ್ರಂ ಹೋಂ ಮಾಡುವಂತೆ ಸೂಚನೆ ನೀಡಬೇಕೆಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಕಾರ್ತಿಕ್ ರೆಡ್ಡಿ ಸಲಹೆ ನೀಡಿದ್ದಾರೆ.  ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ಸಲಹೆ ಏನು?
    – ಪೀಕ್ ಅವರ್ ಬಿಟ್ಟು ಬೆಳಗ್ಗೆ 7:30 ಅಥವಾ 8 ಗಂಟೆಗೆ ಕಂಪನಿ ಆರಂಭಿಸಬೇಕು. ಇದನ್ನೂ ಓದಿ: ಬ್ರೇಕಪ್‌ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಕೇವಲ 2 ಸಾವಿರಕ್ಕಾಗಿ ಬಿತ್ತು ಹೆಣ!
    – ಔಟರ್ ರಿಂಗ್ ರೋಡ್‌ನಲ್ಲಿ ಇರುವ ಕಂಪನಿಗಳ ಸಮಯ ಬದಲಾವಣೆ ಮಾಡಬೇಕು
    – ಪ್ರತಿ ಬುಧವಾರ ವರ್ಕ್ ಫ್ರಂ ಹೋಮ್‌ಗೆ ಸಲಹೆ, ಐಟಿ ಕಂಪನಿಗಳು ಬಿಎಂಟಿಸಿ ಜೊತೆ ಒಪ್ಪಂದ ಮಾಡಿಕೊಳ್ಳಿ
    – ಬಿಎಂಟಿಸಿ ಬಸ್‌ಗಳ ಮೂಲಕ ಪಿಕಪ್-ಡ್ರಾಪ್‌ಗೆ ಎಸಿ ಬಸ್ ಕೊಡೋದಕ್ಕೆ ಬಿಎಂಟಿಸಿ ಒಪ್ಪಿಗೆ ನೀಡಿದೆ
    – ಸಾರ್ವಜನಿಕರು ಸ್ವಂತ ವೆಹಿಕಲ್ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ

    ಬುಧವಾರವೇ ಯಾಕೆ?
    ಬುಧವಾರ ವಾರದ ಮಧ್ಯದಲ್ಲಿ ಬರುವ ಕಾರಣ ಸಾಧಾರಣವಾಗಿ ಐಟಿ ಕಂಪನಿಗಳಲ್ಲಿ ಹೆಚ್ಚಾಗಿ ಯಾರೂ ರಜೆ ತೆಗೆದುಕೊಳ್ಳುವುದಿಲ್ಲ. ಸಾಧಾರಣವಾಗಿ ದೀರ್ಘ ರಜೆ ಹಾಕುವವರು ಸೋಮವಾರ, ಮಂಗಳವಾರ ಅಥವಾ ಗುರುವಾರ, ಶುಕ್ರವಾರ ಹಾಕುತ್ತಾರೆ. ಆಗ ಶನಿವಾರ, ಭಾನುವಾರ ಸೇರಿ 4 ದಿನ ಸಿಗುತ್ತದೆ. ಒಂದು ವೇಳೆ ಬುಧವಾರ ವರ್ಕ್‌ ಫ್ರಂ ಕೊಟ್ಟರೆ ಮನೆಯಲ್ಲೇ ಕೆಲಸ ಮಾಡಬಹುದು. ಜೊತೆ ಊರಿಗೆ ಹೋಗಿದ್ದವರು ಅಲ್ಲಿಯೇ ಕೆಲಸ ಮಾಡಬಹುದು. ಇದರಿಂದ ಸ್ವಲ್ಪ ಟ್ರಾಫಿಕ್‌ ನಿಯಂತ್ರಣಕ್ಕೆ ಬರುತ್ತದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಉತ್ತರಾಖಂಡ | ಭಾರೀ ಮಳೆಗೆ ಭೂಕುಸಿತ – ಹೆದ್ದಾರಿಯಲ್ಲಿ 6 ಕಿ.ಮೀ ಟ್ರಾಫಿಕ್‌

    ಉತ್ತರಾಖಂಡ | ಭಾರೀ ಮಳೆಗೆ ಭೂಕುಸಿತ – ಹೆದ್ದಾರಿಯಲ್ಲಿ 6 ಕಿ.ಮೀ ಟ್ರಾಫಿಕ್‌

    ಡೆಹ್ರಾಡೋನ್‌: ಉತ್ತರಾಖಂಡದಲ್ಲಿ (Uttarakhand) ಭಾರೀ ಮಳೆಯಿಂದ (Rain) ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 6 ಕಿ.ಮೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

    ಭೂಕುಸಿತ (Lindslide) ಮತ್ತು ಭಾರೀ ಮಳೆಯಿಂದಾಗಿ ಅಲಕನಂದಾ ನದಿಯ ದಡದಲ್ಲಿರುವ ಧಾರಿ ದೇವಿ ದೇವಸ್ಥಾನದಿಂದ ಆರು ಕಿ.ಮೀ. ದೂರದಲ್ಲಿರುವ ಖಾಂಕ್ರದವರೆಗೆ ಸಾಗುವ ಬದರಿನಾಥ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಸಂಜೆ 4 ಗಂಟೆಯ ಸುಮಾರಿಗೆ Google ಟ್ರಾಫಿಕ್ ಅಪ್‌ಡೇಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 7 (NH 7) ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ದಟ್ಟಣೆ ಇರುವುದನ್ನು ತೋರಿಸಿದೆ. ಈ ಹೆದ್ದಾರಿ ಯಾತ್ರಾ ಸ್ಥಳಗಳಾದ ಋಷಿಕೇಶ, ದೇವಪ್ರಯಾಗ, ರುದ್ರಪ್ರಯಾಗ, ಕರ್ಣಪ್ರಯಾಗ, ಚಮೋಲಿ, ಜೋಶಿಮಠ ಮತ್ತು ಬದರಿನಾಥವನ್ನು ಸಂಪರ್ಕಿಸುತ್ತದೆ.

    ಕಾರುಗಳು, ಫೋರ್ಸ್ ಟ್ರಾವೆಲರ್‌ಗಳು, ಟ್ರಕ್‌ಗಳು ಸಾಲುಗಟ್ಟಿ ನಿಂತಿದ್ದು, ನಿಧಾನಗತಿಯಲ್ಲಿ ಸಾಗುತ್ತಿವೆ. ಕೆಲವೆಡೆ ಭೂಕುಸಿತ ಸಂಭವಿಸಿದ ಜಾಗಗಳಲ್ಲಿ ಜೆಸಿಬಿಗಳ ಮೂಲಕ ತೆರವುಗೊಳಿಸುವ ಕೆಲಸ ನಡೆಯುತ್ತಿದೆ.

    ಇದರ ನಡುವೆ ಹವಾಮಾನ ಇಲಾಖೆ ಮೇ 27 ರವರೆಗೆ ಪಶ್ಚಿಮ ಮತ್ತು ಪೂರ್ವ ರಾಜಸ್ಥಾನದಲ್ಲಿ ಬಿರುಗಾಳಿ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ನೀಡಿದ್ದಾರೆ.

  • ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ; ದೆಹಲಿ – ಎನ್‌ಸಿಆರ್ ಗಡಿಗಳಲ್ಲಿ ಟೋಲ್ ಪ್ಲಾಜಾಗಳಿಗೆ ಕೊಕ್?

    ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ; ದೆಹಲಿ – ಎನ್‌ಸಿಆರ್ ಗಡಿಗಳಲ್ಲಿ ಟೋಲ್ ಪ್ಲಾಜಾಗಳಿಗೆ ಕೊಕ್?

    ನವದೆಹಲಿ: ದೆಹಲಿ ಮತ್ತು ಎನ್‌ಸಿಆರ್ ಗಡಿಗಳಲ್ಲಿ ನಿರ್ಮಿಸಲಾದ ಟೋಲ್ ಸಂಗ್ರಹಣಾ ಪಾಯಿಂಟ್‌ಗಳಿಂದ (Toll Plaza) ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಇವುಗಳನ್ನು ಮುಖ್ಯ ಹೆದ್ದಾರಿಯಿಂದ ತೆಗೆದುಹಾಕಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಎಂಸಿಡಿಗೆ ಸೂಚನೆ ನೀಡಲಿದೆ ಎಂದು ವರದಿಯಾಗಿದೆ.

    ಈ ಟೋಲ್ ಬೂತ್‌ಗಳು ಹೆದ್ದಾರಿಯಲ್ಲಿ ಸಂಚಾರದ ವೇಗವನ್ನು ನಿಧಾನಗೊಳಿಸುತ್ತಿವೆ, ದೆಹಲಿಯನ್ನು ಗಾಜಿಯಾಬಾದ್ ಮತ್ತು ನೋಯ್ಡಾಗೆ ಸಂಪರ್ಕಿಸುವ NH-9 ಮತ್ತು ದೆಹಲಿ-ಗುರುಗ್ರಾಮ್ ಅನ್ನು ಸಂಪರ್ಕಿಸುವ NH-48 ಅತ್ಯಂತ ಜನನಿಬಿಡ ಹೆದ್ದಾರಿಗಳಾಗಿದ್ದು, ಈ ಬದಲಾವಣೆಯ ಪರಿಣಾಮವನ್ನು ಸ್ಪಷ್ಟವಾಗಿ ಕಾಣಬಹುದು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕ ವಾಪಸ್ ಪಡೆಯದೇ ಹೋದ್ರೆ ಸಿಎಂ, ಸಚಿವರ ಕಾರ್ಯಕ್ರಮಗಳಿಗೆ ಮುತ್ತಿಗೆ – ಜೆಡಿಎಸ್ ಎಚ್ಚರಿಕೆ

    ಎಂಸಿಡಿ ಪ್ರಸ್ತುತ ದೆಹಲಿ ಗಡಿಗಳ ಐದು ಪ್ರಮುಖ ಸ್ಥಳಗಳಲ್ಲಿ ಇಸಿಸಿಯನ್ನು ಸಂಗ್ರಹಿಸುತ್ತದೆ. ಗುರುಗ್ರಾಮ್‌ನ ಸಿರ್ಹೌಲ್ ಗಡಿ, ಘಾಜಿಪುರ (NH 9), ಬದರ್ಪುರ್ (NH 19), ಟಿಕ್ರಿ (NH 10) ಮತ್ತು ಕುಂಡ್ಲಿ (NH 44) ಟೋಲ್ ಬೂತ್‌ಗಳು ಈ ಪ್ರದೇಶಗಳಲ್ಲಿ ಭಾರೀ ಸಂಚಾರ ದಟ್ಟಣೆಯನ್ನು ಉಂಟುಮಾಡುತ್ತವೆ. ಇದನ್ನೂ ಓದಿ: ವೈಮಾನಿಕ ದಾಳಿಯಲ್ಲಿ ಐಸಿಸ್‌ ಕಮಾಂಡರ್‌ ಅಬು ಖದೀಜಾ ಹತ್ಯೆ – ಬಲದ ಮೂಲಕ ಶಾಂತಿ ಎಂದ ಟ್ರಂಪ್‌

    ಕೇಂದ್ರ ಸರ್ಕಾರ, ರಸ್ತೆ ಸಾರಿಗೆ ಸಚಿವಾಲಯ ಮತ್ತು ಹರಿಯಾಣ ಸರ್ಕಾರ ಜಂಟಿಯಾಗಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಯೋಜಿಸುತ್ತಿವೆ. ಈ ಮನವಿಯಲ್ಲಿ ಟೋಲ್ ಸಂಗ್ರಹಣಾ ಕೇಂದ್ರಗಳನ್ನು ಗಡಿಯಿಂದ ಬೇರೆಡೆಗೆ ಸ್ಥಳಾಂತರಿಸಬೇಕೆಂದು ವಿನಂತಿಸಲಾಗುತ್ತಿದೆ. ಇದನ್ನೂ ಓದಿ: ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ಗೆ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ

    ಕೇಂದ್ರ ಸರ್ಕಾರ ದೆಹಲಿ ಮತ್ತು ಹರಿಯಾಣ ಆಡಳಿತದೊಂದಿಗೆ ಈ ವಿಷಯವನ್ನು ಚರ್ಚಿಸಿದೆ. ಈಗ ಅಂತಿಮ ನಿರ್ಧಾರವು ಸುಪ್ರೀಂ ಕೋರ್ಟ್‌ನ ನಿಲುವಿನ ಮೇಲೆ ನಿರ್ಧಾರವಾಗಲಿದೆ. ಈ ಯೋಜನೆ ಯಶಸ್ವಿಯಾದರೆ, ದೆಹಲಿ-ಎನ್‌ಸಿಆರ್‌ನ ಲಕ್ಷಾಂತರ ಪ್ರಯಾಣಿಕರು ಸಂಚಾರ ದಟ್ಟಣೆಯಿಂದ ಹೆಚ್ಚಿನ ಪರಿಹಾರ ಪಡೆಯಬಹುದು. ಇದನ್ನೂ ಓದಿ: ಹರ್ಯಾಣ| ಭೂ ವಿವಾದ; ಬಿಜೆಪಿ ಮಂಡಲ ಅಧ್ಯಕ್ಷನ ಭೀಕರ ಹತ್ಯೆ