Tag: Trade

  • ಮೋದಿ ಕಠಿಣ ವ್ಯಕ್ತಿ, ಶೀಘ್ರವೇ ಭಾರತದ ಜೊತೆ ವ್ಯಾಪಾರ ಒಪ್ಪಂದ: ಟ್ರಂಪ್‌ ಸುಳಿವು

    ಮೋದಿ ಕಠಿಣ ವ್ಯಕ್ತಿ, ಶೀಘ್ರವೇ ಭಾರತದ ಜೊತೆ ವ್ಯಾಪಾರ ಒಪ್ಪಂದ: ಟ್ರಂಪ್‌ ಸುಳಿವು

    – ಮತ್ತೆ ಭಾರತ-ಪಾಕ್‌ ಯುದ್ಧ ನಿಲ್ಲಿಸಿದ್ದೇನೆಂದು ಬೆನ್ನು ತಟ್ಟಿಕೊಂಡ ಅಧ್ಯಕ್ಷ

    ಸಿಯೋಲ್‌: ನರೇಂದ್ರ ಮೋದಿ (Narendra Modi) ಅಷ್ಟು ಸುಲಭವಾಗಿ ಬಗ್ಗುವ ವ್ಯಕ್ತಿಯಲ್ಲ. ಅವರೊಬ್ಬ ಕಠಿಣ ವ್ಯಕ್ತಿ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

    ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ (APEC) ಸಿಇಒಗಳ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್‌ ಮತ್ತೆ ಭಾರತ ಮತ್ತು ಪಾಕಿಸ್ತಾನ (India-Pakistan) ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಹೇಳುವ ಮೂಲಕ ಮತ್ತೆ ತನ್ನ ಬೆನ್ನನ್ನು ತಟ್ಟುವ ಕೆಲಸವನ್ನು ಮುಂದುವರಿಸಿದ್ದಾರೆ.

    ಇದೇ ವೇಳೆ ಶೀಘ್ರವೇ ಭಾರತದ ಜೊತೆ ವ್ಯಾಪಾರ ಒಪ್ಪಂದ (India-USA Trade Deal) ಮಾಡುವ ಬಗ್ಗೆ ಟ್ರಂಪ್‌ ಸುಳಿವು ನೀಡಿದ್ದಾರೆ. ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇನೆ ಮತ್ತು ಪ್ರಧಾನಿ ಮೋದಿಯವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ ಎಂದು ಹೇಳಿದರು.

    ಟ್ರಂಪ್‌ ಹೇಳಿದ್ದೇನು?
    ಪ್ರಧಾನಿ ಮೋದಿಯವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ನಮಗೆ ಉತ್ತಮ ಸಂಬಂಧವಿದೆ. ಅದೇ ರೀತಿ, ಪಾಕಿಸ್ತಾನದ ಪ್ರಧಾನಿ ಒಬ್ಬ ಉತ್ತಮ ವ್ಯಕ್ತಿ. ಅವರಲ್ಲಿ ಫೀಲ್ಡ್ ಮಾರ್ಷಲ್ ಇದ್ದಾರೆ. ಅವರು ಫೀಲ್ಡ್ ಮಾರ್ಷಲ್ ಯಾಕೆ ಎನ್ನುವುದು ನಿಮಗೆ ತಿಳಿದಿದ್ಯಾ? ಅವರು ಒಬ್ಬ ಉತ್ತಮ ಹೋರಾಟಗಾರ. ಇದನ್ನೂ ಓದಿ:  ಕೆನಡಾದಲ್ಲಿ ಉದ್ಯಮಿ ಹತ್ಯೆ, ಗಾಯಕನ ಮನೆಗೆ ಬೆಂಕಿಯಿಟ್ಟ ಬಿಷ್ಣೋಯ್‌ ಗ್ಯಾಂಗ್‌

    ಸುಂದರವಾಗಿರುವ ಏಳು ಹೊಸ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಓದಿದ್ದೇನೆ. ಎರಡು ಪರಮಾಣು ರಾಷ್ಟ್ರಗಳು ಯುದ್ಧದಲ್ಲಿ ತೊಡಗಿದ್ದಾಗ ನಾನು ಮೋದಿ ಮತ್ತು ಪಾಕಿಸ್ತಾನಕ್ಕೆ ಕರೆ ಮಾಡಿ ಯುದ್ಧವನ್ನು ನಿಲ್ಲಿಸುವಂತೆ ಕೇಳಿದೆ. ಯುದ್ಧ ನಿಲ್ಲಿಸದೇ ಇದ್ದರೆ ವ್ಯಾಪಾರ ಒಪ್ಪಂದ ಮಾಡುವುದಿಲ್ಲ ಎಂದು ಹೇಳಿದ್ದೆ. ಎರಡು ದಿನಗಳ ನಂತರ ಈ ಯುದ್ಧ ನಿಂತಿತು.

    ಯುದ್ಧ ನಿಂತಿರುವುದು ಅದ್ಭುತವಲ್ಲವೇ? ಒಂದು ವೇಳೆ ಜೋ ಬೈಡೆನ್‌ ಅಧಿಕಾರದಲ್ಲಿ ಇದ್ದರೆ ಯುದ್ಧ ನಿಲ್ಲಿಸುತ್ತಿದ್ದರು ಎಂದು ಭಾವಿಸುತ್ತೀರಾ? ನಾನು ಹಾಗೆ ಭಾವಿಸುವುದಿಲ್ಲ ಎಂದು ಹೇಳಿ ತಾನೊಬ್ಬ ಶಾಂತಿದೂತ ಎಂದು ಬಿಂಬಿಸುವ ಪ್ರಯತ್ನ ಮಾಡಿದರು.

  • ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ – ಭಾರತಕ್ಕೆ ಏನು ಲಾಭ?

    ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ – ಭಾರತಕ್ಕೆ ಏನು ಲಾಭ?

    ಲಂಡನ್‌: ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Agreement) ಭಾರತ ಮತ್ತು ಯುನೈಟೆಟ್‌ ಕಿಂಗ್‌ಡಮ್‌ (UK) ಸಹಿ ಹಾಕಿದೆ. ಈ ಒಪ್ಪಂದದಿಂದ ಎರಡು ದೇಶಗಳ ಮಧ್ಯೆ ವಾರ್ಷಿಕವಾಗಿ ಸುಮಾರು 34 ಶತಕೋಟಿ ಡಾಲರ್‌ ದ್ವಿಪಕ್ಷೀಯ ವ್ಯಾಪಾರ ಹೆಚ್ಚಾಗಲಿದೆ.

    ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer) ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ (India) ಮಾರುಕಟ್ಟೆ ಪ್ರವೇಶಿಸಲು ಅಮೆರಿಕ (USA) ಸುಂಕದ ಬೆದರಿಕೆ ಹಾಕುತ್ತಿರುವ ಸಮಯದಲ್ಲೇ ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವ ಪಡೆದಿದೆ.

    ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಜವಳಿ, ಜೆನೆರಿಕ್ ಔಷಧಗಳು ಮತ್ತು ವೈದ್ಯಕೀಯ ಸಾಧನಗಳು, ಚರ್ಮದ ಸರಕುಗಳು ಮತ್ತು ಕೃಷಿ ಮತ್ತು ರಾಸಾಯನಿಕ ಉತ್ಪನ್ನಗಳು ಸೇರಿದಂತೆ ಯುಕೆಗೆ ಹೋಗುವ ಭಾರತದ 99% ವಸ್ತುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಾಂತ್ರಿಕ ದೋಷದಿಂದ ರಷ್ಯಾ ವಿಮಾನ ಪತನ 48 ಮಂದಿ ಸಾವು


    ಒಪ್ಪಂದದ ಭಾಗವಾಗಿ, ಭಾರತವು ತನ್ನ ಸುಂಕದ 90% ರಷ್ಟು ಕಡಿತಗೊಳಿಸಲಿದೆ ಮತ್ತು ಯುಕೆ ಉತ್ಪನ್ನಗಳ ಮೇಲಿನ ಸರಾಸರಿ ಸುಂಕವು 15% ರಿಂದ 3% ಕ್ಕೆ ಇಳಿಯಲಿದೆ. ಬ್ರಿಟನ್‌ ಸ್ಕಾಚ್ ವಿಸ್ಕಿ, ಕಾರು ಮತ್ತು ಕೆಲ ಆಹಾರ ಪದಾರ್ಥಗಳ ಮೇಲಿನ ಆಮದು ಸುಂಕವನ್ನು ಭಾರತ ಕಡಿತಗೊಳಿಸಲಿದೆ. ವಿಸ್ಕಿಯ ಮೇಲಿನ ಸುಂಕವನ್ನುಅರ್ಧದಷ್ಟು ಅಂದರೆ 75% ಕ್ಕೆ ಇಳಿಕೆಯಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಮೇಲೂ ಪರಿಣಾಮ ಬೀರಲಿದ್ದು 110% ರಿಂದ 10% ಕ್ಕೆ ಸುಂಕ ಇಳಿಯಲಿದೆ.

    ಮುಂದಿನ ಎರಡು ವರ್ಷಗಳಲ್ಲಿ ಭಾರತದ ಚರ್ಮ ವಲಯವು ಯುಕೆಯಲ್ಲಿ 5% ಹೆಚ್ಚುವರಿ ಮಾರುಕಟ್ಟೆ ಪಾಲನ್ನು ಪಡೆಯುವ ನಿರೀಕ್ಷೆಯಿದೆ. ಅದೇ ರೀತಿ 2030 ರ ವೇಳೆಗೆ ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ರಫ್ತುಗಳು ದ್ವಿಗುಣಗೊಳ್ಳುವ ಸಾಧ್ಯತೆಯಿದೆ.

     

    ಮುಂದಿನ ಹಣಕಾಸು ವರ್ಷದಲ್ಲಿ ರಾಸಾಯನಿಕಗಳ ರಫ್ತು 30%-40% ರಷ್ಟು ಹೆಚ್ಚಾಗಬಹುದು. ರತ್ನಗಳು ಮತ್ತು ಆಭರಣ ರಫ್ತಿನ ಮೌಲ್ಯ ಪ್ರಸ್ತುತ 941 ಮಿಲಿಯನ್‌ ಡಾಲರ್‌ ಇದ್ದು ಮುಂದಿನ ಮೂರು ವರ್ಷಗಳಲ್ಲಿ ಇದು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

    ವ್ಯಾಪಾರ ಒಪ್ಪಂದ ಜಾರಿಗೆ ಬಂದ ನಂತರ ಸಾಫ್ಟ್‌ವೇರ್ ಸೇವೆಗಳ ರಫ್ತು ವಾರ್ಷಿಕವಾಗಿ ಸುಮಾರು 20% ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಈ ಒಪ್ಪಂದವು ಗ್ರಾಹಕರಿಗೆ ಬೆಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಬ್ರಿಟಿಷ್ ಅಧಿಕಾರಿಗಳು ಹೇಳಿದ್ದಾರೆ.

  • ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್

    ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್

    ಮಂಗಳೂರು: ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ. ಕಾನೂನು ಪ್ರಕಾರ ಮಾಡಲಿ, ಕಾನೂನು ಬಿಟ್ಟು ಏನನ್ನೂ ಮಾಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ತಿಳಿಸಿದ್ದಾರೆ.

    ಮಂಗಳಾದೇವಿ ದೇವಸ್ಥಾನದಲ್ಲಿ (Mangaladevi Temple) ವ್ಯಾಪಾರ ಧರ್ಮದಂಗಲ್ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ವ್ಯಾಪಾರ ಬಹಿಷ್ಕಾರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಸಂವಿಧಾನದ ಪ್ರಕಾರ ದೇಶ ನಡೆಯಬೇಕು, ಯಾವುದೋ ಧರ್ಮದ ಪ್ರಕಾರ ಅಲ್ಲ. ಎಲ್ಲರಿಗೂ ಸಮಾನ ಹಕ್ಕುಗಳು ಈ ದೇಶದಲ್ಲಿ ಇರಬೇಕು ಎಂದರು. ಇದನ್ನೂ ಓದಿ: ಹಿಂದೂಗಳ ಅಂಗಡಿಗಳಲ್ಲೇ ವ್ಯಾಪಾರ ಮಾಡಿ- ವಿಹಿಂಪ, ಬಜರಂಗದಳ ಮನವಿ

    ಅವರು (ವಿಹೆಚ್‍ಪಿ, ಬಜರಂಗದಳ) ಕರೆ ಕೊಡಲಿ, ಅವರ ಕರೆಯನ್ನು ಯಾರೂ ಒಪ್ಪಿಕೊಳ್ಳಬೇಕಿಲ್ಲ. ಆ ಕರೆಗಳಿಗೆ ಯಾವುದೇ ಕಾನೂನಿನ ಹಿನ್ನೆಲೆ ಇಲ್ಲ. ಅವರಿಗೆ ಈ ಥರ ವಿಚಾರ ಇಟ್ಟುಕೊಂಡು ಜನರಲ್ಲಿ ಗೊಂದಲ ಮೂಡಿಸಬೇಕು. ಅವರ ರಾಜಕಾರಣ ಇದರಲ್ಲೇ ಇರೋದು, ಧಾರ್ಮಿಕ ರಾಜಕಾರಣ ಬಿಜೆಪಿ ಮಾಡುತ್ತೆ. ನಾನು ಈ ಬಗ್ಗೆ ಅಧಿಕಾರಿಗಳನ್ನು ಕರೆದು ಮಾತನಾಡ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇಸರಿ ಧ್ವಜದೊಂದಿಗೆ ಕುಂಕುಮ, ವಿಭೂತಿ ಹಚ್ಚಿ ವ್ಯಾಪಾರ ಮಾಡಿ: ವ್ಯಾಪಾರಿಗಳಿಗೆ ಪ್ರಮೋದ್ ಮುತಾಲಿಕ್ ಸಲಹೆ

    ಕೇಸರಿ ಧ್ವಜದೊಂದಿಗೆ ಕುಂಕುಮ, ವಿಭೂತಿ ಹಚ್ಚಿ ವ್ಯಾಪಾರ ಮಾಡಿ: ವ್ಯಾಪಾರಿಗಳಿಗೆ ಪ್ರಮೋದ್ ಮುತಾಲಿಕ್ ಸಲಹೆ

    ಉಡುಪಿ: ಈಗೀಗ ಮಳಿಗೆಗಳಿಗೆ ಹಿಂದೂ (Hindu) ಹೆಸರು ಇಟ್ಟುಕೊಂಡು ಮುಸ್ಲಿಮರು (Muslims) ವ್ಯಾಪಾರ (Trade) ಮಾಡ್ತಾರೆ. ಬಹುದೇವ ಆರಾಧಕರನ್ನು ವಿರೋಧಿಸುವವರಿಗೆ ಹಿಂದೂಗಳ ಹಣ ಬೇಕಾ ಎಂದು ಪ್ರಮೋದ್ ಮುತಾಲಿಕ್ (Pramod Muthalik) ಪ್ರಶ್ನೆ ಮಾಡಿದ್ದಾರೆ.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರಿನ (Mangaluru) ಮಂಗಳಾದೇವಿ ದೇವಸ್ಥಾನದಲ್ಲಿ ವ್ಯಾಪಾರ ವಿಚಾರದಲ್ಲಿ ಧರ್ಮದಂಗಲ್ ನಡೆಯುತ್ತಿದೆ. ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ (VHP) ಭಜರಂಗದಳ ಒತ್ತಾಯಿಸಿದೆ. ದೇಗುಲದ ಆವರಣದಲ್ಲಿ ಎಲ್ಲಾ ಸಮುದಾಯದವರಿಗೆ ವ್ಯಾಪಾರಕ್ಕೆ ಸಮಿತಿ ಅವಕಾಶ ಕೊಟ್ಟಿದೆ. ಈ ಬಗ್ಗೆ ಶ್ರೀರಾಮ ಸೇನೆಯ (Sri Ram Sena) ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಉಡುಪಿಯಲ್ಲಿ (Udupi) ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಬೇಕಾದಷ್ಟು ಪ್ರೀತಿ ಮಾಡಿ, ಸಲಿಂಗಿ ಮದುವೆ ಬೇಡ: ಪ್ರಮೋದ್ ಮುತಾಲಿಕ್

    ವಿಶ್ವ ಹಿಂದೂ ಪರಿಷತ್ ಹೋರಾಟಕ್ಕೆ ನನ್ನ ಬೆಂಬಲ ಇದೆ. ಹಿಂದೂಗಳು ಹಣೆ ಮೇಲೆ ಕುಂಕುಮ, ಭಸ್ಮ ಹಚ್ಚಿಕೊಂಡು ವ್ಯಾಪಾರ ಮಾಡಿ ಎಂದು ಮುತಾಲಿಕ್ ಸಲಹೆ ನೀಡಿದರು. ಆಸ್ತಿಕತೆ ಬೇಡ. ಹಿಂದೂಗಳ ವ್ಯಾಪಾರ ಬೇಕು, ಲಾಭ ಬೇಕು ಅಂದ್ರೆ ಹೇಗೆ? ಗೋಪೂಜೆ ನಡೆಯುವ ದೇವಸ್ಥಾನದಲ್ಲಿ ಗೋಹತ್ಯೆ ಮಾಡುವವರಿಗೆ ಯಾಕೆ ಅವಕಾಶ ಕೊಡಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿಎಂ ಇಬ್ರಾಹಿಂ ಸಹಾನುಭೂತಿ ಗಿಟ್ಟಿಸಿಕೊಳ್ಳುವ ಮನೋಭಾವದಲ್ಲಿದ್ದಾರೆ: ಡಾ.ಶಿವರಾಜ್ ಪಾಟೀಲ್

    ಅಲ್ಲಾಹ್ ಒಬ್ಬನೇ ದೇವರು ಅನ್ನೋರಿಗೆ ಬಹುದೇವ ಉಪಾಸಕರ ವ್ಯಾಪಾರ ಯಾಕೆ ಬೇಕು? ದೇಶದ ಸುರಕ್ಷತೆಯ ಹಿನ್ನೆಲೆಯಲ್ಲಿ ದಯವಿಟ್ಟು ಈ ರೀತಿ ಅವಕಾಶ ಬೇಡ. ಹಿಂದೂಗಳಿಗೆ ಮಾತ್ರ ಅವಕಾಶ ನೀಡಿ. ಹಿಂದೂ ವ್ಯಾಪಾರಿಗಳ ಮಳಿಗೆಗೆ ಕೇಸರಿ ಧ್ವಜ ಅಳವಡಿಸಿದ ಕ್ರಮ ಸರಿಯಾಗಿದೆ ಎಂದರು. ಇದನ್ನೂ ಓದಿ: ಅಕ್ರಮ ಹಣ ಪತ್ತೆ ಪ್ರಕರಣ ಸಿಬಿಐಗೆ ವಹಿಸಲಿ: ಅಶ್ವಥ್ ನಾರಾಯಣ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೂಪಾಯಿ, ದಿರ್ಹಾಮ್‌ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಿಗೆ

    ರೂಪಾಯಿ, ದಿರ್ಹಾಮ್‌ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಿಗೆ

    ಅಬುಧಾಬಿ: ಭಾರತ (India) ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (UAE) ಇನ್ನು ಮುಂದೆ ರೂಪಾಯಿ – ದಿರ್ಹಾಮ್‌ನಲ್ಲಿ (Rupee-Dirham) ವ್ಯವಹಾರ ನಡೆಸಲು ಪರಸ್ಪರ ಸಹಿ ಹಾಕಿವೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ (Sheikh Mohamed Bin Zayed Al Nahyan) ಅವರ ಸಮ್ಮುಖದಲ್ಲಿ ಆಗಸ್ಟ್ ಸಮ್ಮುಖದಲ್ಲಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (RBI Governor Shaktikanta Das) ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್ ಗವರ್ನರ್ ಹೆಚ್ ಇ ಖಲೀದ್ ಮೊಹಮದ್ ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

    ಈ ಒಪ್ಪಂದದಿಂದ ಭಾರತ ಮತ್ತು ಯುಎಇ ಇನ್ನು ಮುಂದೆ ರಫ್ತು ಮತ್ತು ಆಮದನ್ನು ದೇಶಿಯ ಕರೆನ್ಸಿಯಲ್ಲಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿರುವ ಪಾವತಿ ವ್ಯವಸ್ಥೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಮತ್ತು ಯುಎಇಯ ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆಯಾದ ಐಪಿಪಿ (IPP) ಇನ್ನು ಮುಂದೆ ಲಿಂಕ್‌ ಆಗಲಿದೆ.

    UPI-IPP ಸಂಪರ್ಕವು ಎರಡೂ ದೇಶದ ಬಳಕೆದಾರರಿಗೆ ವೇಗವಾಗಿ, ಅನುಕೂಲಕರ, ಸುರಕ್ಷಿತವಾಗಿ ಪರಿಣಾಮಕಾರಿ ಎರಡು ದೇಶಗಳ ಮಧ್ಯೆ ಹಣ ವರ್ಗಾವಣೆ ಮಾಡಲು ಅನುವು ಮಾಡಿಕೊಡುತ್ತದೆ.

    ಇದರೊಂದಿಗೆ ಅಬುಧಾಬಿಯಲ್ಲಿ ಡೆಲ್ಲಿ ಐಐಟಿ ಕ್ಯಾಂಪಸ್‌ ತೆರೆಯಲು ಸಹ ಒಪ್ಪಂದ ಮಾಡಲಾಗಿದೆ.  ಇದನ್ನೂ ಓದಿ: ಇನ್ನು ಮುಂದೆ ಫ್ರಾನ್ಸ್‌ನಲ್ಲೂ ರೂಪಾಯಿಯಲ್ಲೇ ವ್ಯವಹಾರ ಮಾಡಬಹುದು

    ಲಾಭ ಏನು?
    ಎರಡು ದೇಶಗಳ ನಡುವಿನ ಚಿಲ್ಲರೆ ಪಾವತಿಗಳು ಸಾಮಾನ್ಯವಾಗಿ ಕಡಿಮೆ ಪಾರದರ್ಶಕವಾಗಿರುತ್ತವೆ ಮತ್ತು ಇದು ದೇಶೀಯ ವಹಿವಾಟುಗಳಿಗಿಂತ ಹೆಚ್ಚು ದುಬಾರಿ. ಗಡಿಯಾಚೆಗಿನ ಹಣ ವ್ಯವಹಾರ ಪಾರದರ್ಶಕವಾಗಿರುತ್ತದೆ. ಅಷ್ಟೇ ಅಲ್ಲದೇ ಅಗ್ಗ ಮತ್ತು ವೇಗವಾಗಿ ಹಣವನ್ನು ಕಳುಹಿಸಬಹುದಾಗಿದೆ. ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಲಾಭವಾಗಲಿದೆ. ಯುಪಿಐ ಮೂಲಕ ಚಿಲ್ಲರೆ ಪಾವತಿಗಳನ್ನು ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದರಿಂದ ಇದು ವಿದೇಶೀ ವಿನಿಮಯ ಮೀಸಲುಗಳನ್ನು ಉಳಿಸಲು ಸಹಾಯ ಮಾಡುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಲರ್ ಮುಂದೆ ಮತ್ತೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಡಾಲರ್ ಮುಂದೆ ಮತ್ತೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಮುಂಬೈ: ಡಾಲರ್ ಮುಂದೆ ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕವಾಗಿ ಕುಸಿತ ಕಂಡಿದೆ. ಇಂದು 36 ಪೈಸೆ ಇಳಿಕೆ ಕಂಡಿದ್ದು ಒಂದು ಡಾಲರ್ ಮುಂದೆ ರೂಪಾಯಿ ಮೌಲ್ಯ 78.29ಗೆ ವಿನಿಮಯವಾಗಿದೆ.

    ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತಕಂಡಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 120.23 ಡಾಲರ್ (9,338 ರೂಪಾಯಿ) ಗಳಷ್ಟಾಗಿದ್ದು, ಶೇ.14ರಷ್ಟು ಏರಿಕೆಯಾಗಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಡಾಲರ್‌ ಮುಂದೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಕಳೆದ ಶುಕ್ರವಾರ 19 ಪೈಸೆ ಇಳಿಕೆಯಾಗಿ 1 ಡಾಲರ್ ಬೆಲೆ 77.93 ರೂ. ಗಳಾಗಿತ್ತು. ಆದರೆ ಏಷ್ಯಾ ಹಾಗೂ ಯುರೋಪಿಯನ್ ಕರೆನ್ಸಿಯ ಮೌಲ್ಯ ಕುಸಿತವಾಗಿದ್ದರಿಂದ 77.70 ರೂ.ದಾಟಿಲ್ಲ. ಆದ್ದರಿಂದ ರೂಪಾಯಿ ಮೌಲ್ಯ 78 ರೂಪಾಯಿಗಿಂತಲೂ ಕಡಿಮೆಯಾಗಲು ಅವಕಾಶ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಅದು ಹೇಗೆ ವರ್ತಿಸುತ್ತದೆ ಎಂಬುದನ್ನು ಆರ್‌ಬಿಐ ನೋಡಬೇಕಿದೆ ಎಂದು ಆರ್‌ಬಿಐ ಖಜಾನೆ ಮುಖ್ಯಸ್ಥ ಅನಿಲ್ ಕುಮಾರ್ ಬನ್ಸಾಲಿ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಕಳೆದ ತಿಂಗಳು ರೂಪಾಯಿ ಮೌಲ್ಯ 51 ಪೈಸೆಯಷ್ಟು ಸಾರ್ವಕಾಲಿಕ ಕುಸಿತ ಕಂಡಿತ್ತು. ಅಲ್ಲದೆ ನಾಲ್ಕು ದಿನಗಳ ಹಿಂದೆಯೂ 13 ಪೈಸೆ ಇಳಿಕೆಯಾಗಿ 77.81ಕ್ಕೆ ತಲುಪಿತ್ತು. ಇದೀಗ ಮತ್ತೆ ಕುಸಿತವಾಗಿದೆ.

  • ಡಾಲರ್‌ ಮುಂದೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಡಾಲರ್‌ ಮುಂದೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಮುಂಬೈ: ಡಾಲರ್‌ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇಂದು 51 ಪೈಸೆ ಇಳಿಕೆ ಕಂಡಿದ್ದು, ಒಂದು ಡಾಲರ್‌ ಮುಂದೆ ರೂಪಾಯಿ ಮೌಲ್ಯ 77.42 ವಿನಿಮಯವಾಗಿದೆ.

    ಹಣದುಬ್ಬರವನ್ನು ತಡೆಗಟ್ಟಲು ಅಮೆರಿಕ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಬಡ್ಡಿದರ ಏರಿಕೆ ಮಾಡಿತ್ತು. ಇದರ ನೇರ ಪರಿಣಾಮ ಮಾರುಕಟ್ಟೆಯ ಮೇಲೆ ಬಿದ್ದಿದ್ದು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಇದನ್ನೂ ಓದಿ: ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

    ಕಳೆದ ಶುಕ್ರವಾರ ರೂಪಾಯಿ ಮೌಲ್ಯ 55 ಪೈಸೆ ಇಳಿಕೆ ಕಂಡು 76.90ಗೆ ಕೊನೆಯಾಗಿತ್ತು. ವಿದೇಶ ಬಂಡವಾಳದ ಹೊರ ಹರಿವು, ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ.

    ರಷ್ಯಾ ಉಕ್ರೇನ್‌ ಯುದ್ಧದಿಂದ ತೈಲ ಬೆಲೆ ಏರಿಕೆಯಾಗಿದೆ. ಸೋಮವಾರ ಮತ್ತಷ್ಟು ದರ ಏರಿಕೆಯಾಗಿದ್ದು ಒಂದು ಬ್ಯಾರೆಲ್‌ ತೈಲದ ದರ 112.25 ಡಾಲರ್‌ಗೆ(8,690 ರೂ.) ಏರಿಕೆಯಾಗಿದೆ. ಇದನ್ನೂ ಓದಿ: ಕೆಜಿಎಫ್ 2 ಕಲೆಕ್ಷನ್ 1129.38 ಕೋಟಿ : ಆರ್.ಆರ್.ಆರ್ ದಾಖಲೆ ಉಡಿಸ್

    ಚೀನಾದಲ್ಲಿ ಕೊರೊನಾ ಲಾಕ್‌ಡೌನ್‌, ತೈಲ ಬೆಲೆ ಏರಿಕೆ, ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ ಮಾಡಿದ್ದರಿಂದ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿದ್ದು ಬಿಎಸ್‌ಇ ಸೆನ್ಸೆಕ್ಸ್‌ ಇಂದು 364.91 ಅಂಶ ಕುಸಿದಿದ್ದು 54,470 ರಲ್ಲಿ ಕೊನೆಯಾಗಿದೆ.

  • ಭಾರತದ ಜೊತೆ ವ್ಯಾಪಾರ –  ತನ್ನ ಹಳೆಯ ಪ್ರಸ್ತಾಪವನ್ನು ಮುಂದಿಟ್ಟ ರಷ್ಯಾ

    ಭಾರತದ ಜೊತೆ ವ್ಯಾಪಾರ – ತನ್ನ ಹಳೆಯ ಪ್ರಸ್ತಾಪವನ್ನು ಮುಂದಿಟ್ಟ ರಷ್ಯಾ

    ನವದೆಹಲಿ: ರಷ್ಯಾ ಈಗ ತನ್ನ ಹಳೆಯ ವ್ಯಾಪಾರ ಪ್ರಸ್ತಾಪವನ್ನು ಭಾರತದ ಮುಂದಿಟ್ಟಿದೆ.

    ಉಕ್ರೇನ್‌ ವಿರುದ್ಧ ಯುದ್ಧ ಸಾರಿದ ಬಳಿಕ ವಿಶ್ವದ ಹಲವು ರಾಷ್ಟ್ರಗಳು ರಷ್ಯಾದ ವಿರುದ್ಧ ದಿಗ್ಬಂಧನ ವಿಧಿಸಿದೆ. ಹಲವು ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗಿದ್ದರೂ ಭಾರತ ರಷ್ಯಾದ ಜೊತೆ ವ್ಯಾಪಾರ ನಡೆಸಲು ಆಸಕ್ತಿ ತೋರಿಸಿದೆ.

    ಡಾಲರ್‌ ಮೂಲಕ ವ್ಯವಹಾರ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ರುಪಿ ರೂಬೆಲ್‌ ಮೂಲಕ ವ್ಯವಹಾರ ನಡೆಸಲು ರಷ್ಯಾ ಮುಂದಾಗಿದೆ. ರುಪಿ ರೂಬೆಲ್‌ ಮೂಲಕ ವ್ಯವಹಾರಕ್ಕೆ ರಷ್ಯಾ ಈಗ ಗ್ಯಾರಂಟಿ ಕೇಳುತ್ತಿದೆ. ಇದಕ್ಕಾಗಿ ಪೇಪರ್‌ ಎಲ್‌ಸಿ(ಲೆಟರ್‌ ಆಫ್‌ ಕ್ರೆಡಿಟ್‌) ನೀಡಬೇಕೆಂದು ಪ್ರಸ್ತಾಪ ಮಾಡಿದೆ.

    ಅಂತಾರಾಷ್ಟ್ರೀಯ ನಿರ್ಬಂಧ ಹೇರಿರುವ ಈ ಸಂದರ್ಭದಲ್ಲಿ ದಿ ಬ್ಯಾಂಕ್‌ ಆಫ್‌ ರಷ್ಯಾ ಮತ್ತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ. ಇದನ್ನೂ ಓದಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ

    ಈಗಾಗಲೇ ಎರಡು ಬ್ಯಾಂಕುಗಳ ಅಧಿಕಾರಿಗಳು ಎರಡು ಬಾರಿ ಈ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆದರೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.

    ಯುಎಸ್‌ಎಸ್‌ಆರ್‌ ವಿಭಜನೆಯಾದ ಬಳಿಕ ಭಾರತ ಮತ್ತು ರಷ್ಯಾ ನಡುವೆ ರುಪಿ ಮತ್ತು ರೂಬೆಲ್‌ ಮಧ್ಯೆ ವ್ಯವಹಾರ ನಡೆದಿತ್ತು. ಈಗ ಮತ್ತೆ ಈ ವ್ಯವಹಾರ ಆರಂಭಿಸಲು ಎರಡು ರಾಷ್ಟ್ರಗಳು ಮುಂದಾಗುತ್ತಿವೆ. ಒಂದು ವೇಳೆ ಈ ಎಲ್‌ಸಿ ಪ್ರಸ್ತಾಪವನ್ನು ಒಪ್ಪಿಕೊಂಡರೆ ರಷ್ಯಾದಿಂದ ಭಾರತಕ್ಕೆ ಆಮದು ಹೆಚ್ಚಾಗಲಿದೆ.

    ರುಪಿ ರುಬೆಲ್‌ ವ್ಯವಹಾರ ಮಾಡಬೇಕಾದರೆ ರಷ್ಯನ್‌ ಬ್ಯಾಂಕು ಭಾರತದ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ. ಭಾರತದ ಬ್ಯಾಂಕ್‌ ರಷ್ಯನ್‌ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ಏನಿದು ಎಲ್‌ಸಿ?
    ಎ ಲೆಟರ್ ಆಫ್ ಕ್ರೆಡಿಟ್ (LC) ಎನ್ನುವುದು ಮಾರಾಟಗಾರರಿಗೆ ಖರೀದಿದಾರನ ಪಾವತಿಯನ್ನು ಖಾತರಿಪಡಿಸುವ ದಾಖಲೆಯಾಗಿದೆ. ಇದನ್ನು ಬ್ಯಾಂಕು ನೀಡುತ್ತದೆ. ಇದು ಮಾರಾಟಗಾರರಿಗೆ ಸಕಾಲಿಕ ಮತ್ತು ಪೂರ್ಣ ಪಾವತಿಯನ್ನು ಖಚಿತಪಡಿಸುತ್ತದೆ. ಒಂದು ವೇಳೆ ಖರೀದಿದಾರನು ನೀಡಬೇಕಾದ ಹಣವನ್ನು ಪಾವತಿಸಲು ಸಾಧ್ಯವಾಗದೇ ಇದ್ದರೆ ಖರೀದಿದಾರನ ಪರವಾಗಿ ಬ್ಯಾಂಕ್ ಪೂರ್ಣ ಮೊತ್ತ ಅಥವಾ ಬಾಕಿ ಉಳಿಸಿಕೊಂಡ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.

    ಖರೀದಿದಾರ ಮತ್ತು ಮಾರಾಟಗಾರನು ಪರಸ್ಪರ ವೈಯಕ್ತಿಕವಾಗಿ ಪರಿಚಯ ಇಲ್ಲದೇ ಇರುವಾಗ ಮತ್ತು ದೇಶಗಳಲ್ಲಿ ವಿಭಿನ್ನ ಕಾನೂನುಗಳು, ವಿಭಿನ್ನ ವ್ಯಾಪಾರ ಪದ್ಧತಿಗಳಿದ್ದಾಗ ಇದು ಜಾರಿಯಾಗುತ್ತದೆ.

  • ಅಮೆರಿಕದ ಬಳಿಕ ಭಾರತದ ಜೊತೆ ವ್ಯಾಪಾರ, ತಂತ್ರಜ್ಞಾನ ಮಂಡಳಿ ಸ್ಥಾಪಿಸಿದ ಯುರೋಪ್ ಒಕ್ಕೂಟ

    ಅಮೆರಿಕದ ಬಳಿಕ ಭಾರತದ ಜೊತೆ ವ್ಯಾಪಾರ, ತಂತ್ರಜ್ಞಾನ ಮಂಡಳಿ ಸ್ಥಾಪಿಸಿದ ಯುರೋಪ್ ಒಕ್ಕೂಟ

    ನವದೆಹಲಿ: ಉಕ್ರೇನ್ ರಷ್ಯಾ ಯುದ್ಧದಲ್ಲಿ ಯಾರ ಪರವು ನಿಲ್ಲದ ತಟಸ್ಥ ಧೋರಣೆ ಅನುಸರಿಸಿದ ಭಾರತ ಜೊತೆ ಯುರೋಪಿಯನ್ ಒಕ್ಕೂಟ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಯುರೋಪಿಯನ್ ಒಕ್ಕೂಟ ಹಾಗೂ ಭಾರತ ತಮ್ಮ ವ್ಯಾಪಾರವನ್ನು ವಿಸ್ತರಿಸಲು ವ್ಯಾಪಾರ ಹಾಗೂ ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸಲು ಒಪ್ಪಿಕೊಂಡಿವೆ.

    ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಸುರ್ಸುಲಾ ವಾನ್ ಡೆರ್ ಲೇಯೆನ್ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷಿಯ ಮಾತುಕತೆಯಲ್ಲಿ ವ್ಯಾಪಾರ, ಹವಾಮಾನ, ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರಗಳನ್ನು ಹೆಚ್ಚಿಸಿಕೊಳ್ಳುವುದಾಗಿ ಉಭಯ ರಾಷ್ಟ್ರಗಳು ಒಪ್ಪಂದಗಳನ್ನು ಮಾಡಿಕೊಂಡವು.

    ಈ ಮೊದಲು ಯುರೋಪಿಯನ್ ಒಕ್ಕೂಟ ವ್ಯಾಪಾರ, ತಂತ್ರಜ್ಞಾನ ಮಂಡಳಿಯನ್ನು ಅಮೆರಿಕದ ಜೊತೆ ಮಾಡಿಕೊಂಡಿತ್ತು. ಈಗ ಈ ರೀತಿ ಒಪ್ಪಂದ ಮಾಡಿಕೊಂಡ ಎರಡನೇ ದೇಶ ಭಾರತವಾಗಿರುವುದು ವಿಶೇಷ. ಅದರಲ್ಲೂ ರಷ್ಯಾ ವಿರೋಧಿ ನಿಲುವು ತೆಗೆದುಕೊಳ್ಳದೇ ಇರುವ ಸಮಯದಲ್ಲೇ ಈ ಮಹತ್ವದ ಒಪ್ಪಂದ ನಡೆದಿರುವುದು ಇನ್ನೊಂದು ವಿಶೇಷ. ಸೋಮವಾರ ಭಾರತದ ಈ ನಿರ್ಧಾರವನ್ನು ಯುರೋಪಿಯನ್ ಯೂನಿಯನ್ ಒಪ್ಪಿಕೊಂಡಿದೆ.

    ಡೆರ್ ಲೇಯೆನ್ ಹೇಳಿದ್ದೇನು?
    ಈ ವೇಳೆ ಮಾತನಾಡಿದ ವಾನ್ ಡೆರ್ ಲೇಯೆನ್, ಯುಇ ಇಲ್ಲಿವರೆಗೆ ಅಮೆರಿಕದೊಂದಿಗೆ ವ್ಯಾಪಾರ ಹಾಗೂ ತಂತ್ರಜ್ಞಾನಗಳಲ್ಲಿ ಒಕ್ಕೂಟವನ್ನು ಏರ್ಪಡಿಸಿಕೊಂಡಿತ್ತು. ಇದೀಗ ಬಹು ಮುಖ್ಯವಾದ ಹಾಗೂ ನಮ್ಮ ಎರಡನೇ ಒಕ್ಕೂಟವನ್ನು ಭಾರತದೊಂದಿಗೆ ಸ್ಥಾಪಿಸುವ ಸಮಯ ಎಂದರು. ಭಾರತ ಹಾಗೂ ಯುರೋಪಿಯನ್ ಯೂನಿಯನ್‌ನ ಅಂತರಾಷ್ಟ್ರೀಯ ಸಂಬಂಧದ 60ನೇ ವಾರ್ಷಿಕೋತ್ಸವದ ಸಮಯದಲ್ಲಿ ಈ ಹೊಸ ಒಕ್ಕೂಟ ಬಹು ಮುಖ್ಯವಾದುದು ಎಂದು ಹೇಳಿದರು. ಇದನ್ನೂ ಓದಿ: ಮುಗಿಯದ ವಿಚಾರಣೆ – BBMP ಚುನಾವಣೆ ಮತ್ತಷ್ಟು ವಿಳಂಬ

    ಭಾರತ ಹಾಗೂ ಯುರೋಪ್ ರಾಷ್ಟ್ರಗಳಿಗೆ ಶಕ್ತಿ ಸುರಕ್ಷತೆ ಒಂದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಯುರೋಪ್ ಈ ಹಿಂದೆ ರಷ್ಯಾದಿಂದ ಪಡೆಯುತ್ತಿದ್ದ ಇಂಧನಗಳಿಂದ ದೂರ ಉಳಿಯಲು ಇಷ್ಟಪಡುತ್ತಿದ್ದು, ಇದೀಗ ಹೊಸ, ಶುದ್ಧ ಹಾಗೂ ನವೀಕರಿಸಬಹುದಾದ ಶಕ್ತಿಗಳೆಡೆ ಗಮನ ಹರಿಸುತ್ತಿದ್ದೇವೆ. ಇದರಲ್ಲಿ ಸೌರ ಹಾಗೂ ಜಲಜನಕದ ಮೇಲೆ ಭಾರತ ಹಾಗೂ ಯುರೋಪ್‌ನ ಸಹಕಾರ ಪ್ರಮುಖವಾಗಿದೆ.

    ಈ ಸಹಕಾರದಲ್ಲಿ #GlobalGateway ನಿರ್ಣಾಯಕ ಪಾತ್ರ ವಹಿಸಲಿದೆ. ಯುರೋಪ್ ಭಾರತದ 3ನೇ ಪ್ರಮುಖ ವ್ಯಾಪಾರ ಪಾಲುದಾರ ಹಾಗೂ ಅದರ ಪ್ರಮುಖ ಹೂಡಿಕೆದಾರರಲ್ಲಿ ಒಂದಾಗಿದೆ. ನಾವು ಶೀಘ್ರದಲ್ಲೇ ಭಾರತದೊಂದಿಗೆ ವ್ಯಾಪಾರ ಹಾಗೂ ಹೂಡಿಕೆ ಒಪ್ಪಂದಗಳ ಕುರಿತು ಮಾತುಕತೆ ಪ್ರಾರಂಭಿಸಲಿದ್ದೇವೆ. ಇದನ್ನೂ ಓದಿ: ಬುಧವಾರ ಎಲ್ಲ ರಾಜ್ಯಗಳ ಸಿಎಂ ಜೊತೆ ಮೋದಿ ತುರ್ತು ಸಭೆ

    ಭಾರತ ಹಾಗೂ ಯುರೋಪ್‌ನ ಪಾಲುದಾರಿಕೆಯನ್ನು ಬಲಪಡಿಸುವುದು ಈ ದಶಕದ ಪ್ರಮುಖ ಆದ್ಯತೆಯಾಗಿದೆ. ನಾವು ವ್ಯಾಪಾರ, ತಂತ್ರಜ್ಞಾನ ಹಾಗೂ ಭದ್ರತೆಯಲ್ಲಿ ಸಹಕಾರವನ್ನು ಹೆಚ್ಚಿಸುತ್ತೇವೆ. ಈ ವಿಚಾರವಾಗಿ ನಾನು ಅತ್ಯಂತ ಸಂತಸಗೊಂಡಿದ್ದೇನೆ ಹಾಗೂ ಭಾರತ-ಯುರೋಪ್‌ನ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸುತ್ತೇನೆ.

    ಕಳೆದ ವಾರವಷ್ಟೇ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಆಗಮಿಸಿದ್ದರು. ಇವರು ಮರಳಿದ ಎರಡು ದಿನದಲ್ಲಿ ವಾನ್ ಡೆರ್ ಲೇಯೆನ್ ಭಾರತಕ್ಕೆ ಆಗಮಿಸಿ ಮಹತ್ವದ ಒಪ್ಪಂದ ಮಾಡಿದ್ದಾರೆ.

  • ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    – ಮೂರು ದೇಶಗಳ ಚೈನ್ ಲಿಂಕ್ ಮೂಲಕ ವ್ಯಾಪಾರ
    – ವರ್ಷಾಂತ್ಯದೊಳಗೆ ಸಪ್ಲೈ ಚೈನ್ ಬಲಪಡಿಸಲು ಕ್ರಮ
    – ಚೀನಾ ವಸ್ತುಗಳಿಗೆ ಬ್ರೇಕ್ ಹಾಕಲು ಕ್ರಮ
    – ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರು ದೇಶಗಳ ಸಚಿವರ ಸಭೆ

    ನವದೆಹಲಿ: ಬಹುತೇಕ ರಾಷ್ಟ್ರಗಳು ಚೀನಾದ ಉದ್ಧಟತನದಿಂದ ರೊಚ್ಚಿಗೆದ್ದಿದ್ದು, ಚೀನಾಗೆ ವ್ಯಾಪಾರ, ವಹಿವಾಟಿನ ಮೂಲಕವೇ ಟಕ್ಕರ್ ಕೊಡಲು ಮುಂದಾಗಿವೆ. ಈ ಹಿಂದೆ ಭಾರತ ಟಿಕ್ ಟಾಕ್ ಸೇರಿದಂತೆ ಚೀನಾದ ಹಲವು ಆ್ಯಪ್‍ಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಇದೇ ಹಾದಿಯನ್ನು ಅಮೆರಿಕ ಸಹ ತುಳಿದಿದೆ. ಆದರೆ ಇದೀಗ ಚೀನಾ ಸೊಕ್ಕು ಮುರಿಯಲು ಮತ್ತಷ್ಟು ದೇಶಗಳು ಪ್ಲಾನ್ ಮಾಡುತ್ತಿದ್ದು, ಭಾರತದೊಂದಿಗೆ ಕೈ ಜೋಡಿಸುತ್ತಿವೆ.

    ಇದರ ಭಾಗವಾಗಿ ಇದೀಗ ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳ ವಾಣಿಜ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದು, ಇಂಡೋ- ಪೆಸಿಫಿಕ್ ಸಪ್ಲೈ ಚೈನ್(ಪೂರೈಕೆ ಸರಪಳಿ) ಸ್ಥಿತಿಸ್ಥಾಪಕತ್ವ ಸಾಧಿಸಲು ನಿರ್ಣಯ ಕೈಗೊಳ್ಳಲಾಗಿದೆ. ವ್ಯಾಪಾರ ವಲಯದಲ್ಲಿ ಚೀನಾ ತಾನೇ ಎಲ್ಲಾ ಎಂದು ಮೆರೆಯುತ್ತಿದೆ. ಈ ಅಹಂ ತೊಲಗಿಸಲು, ವ್ಯಾಪಾರದ ಮೇಲಿನ ಚೀನಾ ಪ್ರಾಬಲ್ಯವನ್ನು ಎದುರಿಸಲು ಮೂರು ದೇಶಗಳು ಒಟ್ಟಾಗುತ್ತಿವೆ. ಅಲ್ಲದೆ ಇನ್ನೂ ಹೆಚ್ಚಿನ ದೇಶಗಳು ಈ ಒಕ್ಕೂಟದಲ್ಲಿ ಸೇರುವ ಇಚ್ಛೆ ವ್ಯಕ್ತಪಡಿಸಿವೆ.

    ಈ ಮೂರು ದೇಶಗಳ ನಾಯಕರ ಜಂಟಿ ಹೇಳಿಕೆ ಪ್ರಕಾರ, ಈ ವರ್ಷದ ಕೊನೆಯ ವೇಳೆ ಸಪ್ಲೈ ಚೈನ್ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ಇದಕ್ಕೆ ಬೇಕಾದ ವಿವರಗಳನ್ನು ಕಲೆ ಹಾಕುವಂತೆ ಆದೇಶಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಪಾನ್‍ನ ಹಿರೋಷಿ ಕಾಜಿಯಾಮಾ, ಭಾರತದ ಪಿಯೂಷ್ ಗೋಯಲ್, ಆಸ್ಟ್ರೇಲಿಯಾದ ಸೈಮನ್ ಬರ್ಮಿಂಗ್‍ಹ್ಯಾಮ್ ಭಾಗವಹಿಸಿದ್ದು, ಸಪ್ಲೈ ಚೈನ್ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಈ ಇಂಡೋ- ಪೆಸಿಫಿಕ್ ಭಾಗದ ಇತರ ದೇಶಗಳು ಈ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ ತಿಳಿಸಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

    ಇಂಡೋ- ಪೆಸಿಫಿಕ್ ಭಾಗದಾದ್ಯಂತ ವ್ಯಾಪಾರ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಚೀನಾದ ಪ್ರಾಬಲ್ಯವನ್ನು ಎದುರಿಸಲು ಈ ಮೂರು ರಾಷ್ಟ್ರಗಳು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ. ಬ್ಲೂಮ್ಬರ್ಗ್ ಸಹ ಸಪ್ಲೈ ಚೈನ್ ಬಲಪಡಿಸಲು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಭಾರತ ಹಾಗೂ ಜಪಾನ್ ಜನರನ್ನು ಉಲ್ಲೇಖಿಸಿ ಆಗಸ್ಟ್ ನಲ್ಲಿ ವರದಿ ಮಾಡಿತ್ತು.

    ರಾಷ್ಟ್ರೀಯ ಭದ್ರತಾ ಸಮಾಲೋಚನೆಗಾಗಿ ಅಮೆರಿಕ ಜೊತೆಗೆ ಜಪಾನ್, ಆಸ್ಟ್ರೇಲಿಯಾ ಹಾಗೂ ಭಾರತ ಗುಂಪು ರಚಿಸಿಕೊಂಡಿದ್ದು, ಈ ಮೂಲಕ ಚತುರ್ಭುಜ ಭದ್ರತಾ ಸಂವಾದ ಅಥವಾ ಕ್ವಾಡ್‍ನ ಸದಸ್ಯ ರಾಷ್ಟ್ರಗಳಾಗಿವೆ. ಇದೀಗ ವ್ಯಾಪರಕ್ಕೂ ಇದೇ ರೀತಿಯ ಸಮಾಲೋಚನೆ ನಡೆಸಲಾಗುತ್ತಿದೆ.