Tag: Tractors

  • ಆಪರೇಷನ್‌ ಸಿಂಧೂರ | ಉಗ್ರರ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದ ಭಿಕಾರಿಸ್ತಾನ್‌!

    ಆಪರೇಷನ್‌ ಸಿಂಧೂರ | ಉಗ್ರರ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದ ಭಿಕಾರಿಸ್ತಾನ್‌!

    – ಉಗ್ರರ ಶವಗಳಿಗೆ ಪಾಕ್‌ ಧ್ವಜ ಹೊದಿಸಿ ಗೌರವ

    ಇಸ್ಲಮಾಬಾದ್‌: ಭಾರತ (India) ಸೇನೆಯ ಆಪರೇಷನ್‌ ಸಿಂಧೂರಕ್ಕೆ (Operation Sindoor) ತತ್ತರಿಸಿರುವ (Pakistan) ಪಾಕ್‌, ಉಗ್ರರ ಶವಗಳಿಗೆ ಧ್ವಜ ಹೊದಿಸಿ ಟ್ರ್ಯಾಕ್ಟರ್‌ನಲ್ಲಿ (Tractors) ಸಾಗಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ವೀಡಿಯೋ ಕ್ಲಿಪ್‌ನಲ್ಲಿ, ಭಯೋತ್ಪಾದಕರ ಶವಗಳಿಗೆ ಪಾಕ್‌ ಧ್ವಜ ಹೊದಿಸಿ ಗೌರವ ಸೂಚಿಸಲಾಗಿದೆ. ಈ ಶವಗಳನ್ನು ಬಹಾವಲ್ಪುರದ ಅಂತ್ಯಕ್ರಿಯೆಗೆ ಕೊಂಡೊಯ್ಯಲಾಗುತ್ತಿತ್ತು. ಉಗ್ರರ ಶವಗಳ ಅಂತ್ಯಕ್ರಿಯೆಯಲ್ಲಿ ಪಾಕ್‌ ಸೇನೆಯ ಅಧಿಕಾರಿಗಳು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಏರ್‌ಸ್ಟ್ರೈಕ್‌ಗೆ ಪಾಕ್‌ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ವ್ಯವಹಾರವೇ ಸ್ಥಗಿತ

    ಭಾರತೀಯ ಸೇನೆ ರಾತ್ರೋ ರಾತ್ರಿ ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು. ಈ ಪ್ರತೀಕಾರದ ದಾಳಿಯಲ್ಲಿ (Pahalgam Terrorist Attack) ನಿಷೇಧಿತ ಮೂರು ಉಗ್ರ ಸಂಘಟನೆಗಳಾದ ಜೈಶ್‌ ಎ ಮೊಹಮ್ಮದ್‌, ಲಷ್ಕರ್‌ ಎ ತೈಬಾ (LET) ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರ ಪ್ರಧಾನ ಕಚೇರಿಗಳು ಧ್ವಂಸವಾಗಿವೆ.

    ಕಾರ್ಯಾಚರಣೆಯಲ್ಲಿ ನಿಷೇಧಿತ ಜೈಶ್ -ಎ-ಮೊಹಮ್ಮದ್ ಭಯೋತ್ಪಾದಕ ಗುಂಪುಗಳ ನೆಲೆಯಿರುವ ಬಹವಾಲ್‍ಪುರದಲ್ಲಿ ಮರ್ಕಜ್ ಸುಭಾನ್ ಅಲ್ಲಾ ಮಸೀದಿ, ತೆಹ್ರಾ ಕಲಾನ್‍ನಲ್ಲಿನ ಸರ್ಜಾಲ್, ಕೋಟಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‍ನ ಸೈಯನ್ನಾ ಬಿಲಾಲ್ ಕ್ಯಾಂಪ್‍ಗಳ ಮೇಲೆ ಭಾರತ ದಾಳಿ ನಡೆಸಿದೆ. ಲಷ್ಕರ್ ಎ ತೈಬಾ ಉಗ್ರ ಸಂಘಟನೆಯ ಶಿಬಿರಗಳಿರುವ ಮುರ್ಡಿಕೆಯ ಮರ್ಕಝ್ ತೈಬಾ, ಬರ್ನಾಲಾದಲ್ಲಿ ಮರ್ಕಝ್ ಅತ್ತೆ ಹದಿತ್ ಮತ್ತು ಮುಜಫರಾಬಾದ್‍ನ ಶ್ವವಾಯಿ ನಲ್ಲಾ ಮೇಲೆ ದಾಳಿ ನಡೆದಿದೆ.

    ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್‍ಕೋಟ್‍ನ ಮೆಹಮೂನಾ ಜೋಯಾ ಪ್ರದೇಶಗಳಲ್ಲಿ ನಿಷೇಧಿತ ಹಿಜ್ಜುಲ್ ಮುಜಾಹಿದ್ದೀನ್‍ನ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳಿದ್ದು, ಅವುಗಳನ್ನು ಧ್ವಂಸಗೊಳಿಸಲಾಗಿದೆ. ದಾಳಿಯಲ್ಲಿ ನೂರಕ್ಕೂ ಹೆಚ್ಚು ಉಗ್ರರು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ | ಇದು ಭಾರತೀಯ ಸೇನೆಯ ನಿಜವಾದ ಮುಖ: ಶಿವಕಾರ್ತಿಕೇಯನ್

  • ಟ್ರ‍್ಯಾಕ್ಟರ್ ರೊಟಾವೆಲ್ಟರ್‌ಗೆ ಸಿಲುಕಿ ದೇಹ ಛಿದ್ರ ಛಿದ್ರ; ಅಜ್ಜಿ ಮನೆಗೆ ಬಂದಿದ್ದ ಬಾಲಕ ಸಾವು

    ಟ್ರ‍್ಯಾಕ್ಟರ್ ರೊಟಾವೆಲ್ಟರ್‌ಗೆ ಸಿಲುಕಿ ದೇಹ ಛಿದ್ರ ಛಿದ್ರ; ಅಜ್ಜಿ ಮನೆಗೆ ಬಂದಿದ್ದ ಬಾಲಕ ಸಾವು

    ಮೈಸೂರು: ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ‍್ಯಾಕ್ಟರ್‌ಗೆ (Tractor) ಸಿಲುಕಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು (Nanjangudu) ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ.

    ಟ್ರ‍್ಯಾಕ್ಟರ್ ರೊಟಾವೆಲ್ಟರ್‌ಗೆ (Tractor Rotavator) ಸಿಲುಕಿ ಬಾಲಕನ ದೇಹ ಛಿದ್ರ ಛಿದ್ರವಾಗಿ ಹೊಲದಲ್ಲೇ 8 ವರ್ಷದ ಬಾಲಕ ಭವಿಷ್ ದಾರುಣವಾಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿ ಅರೆಸ್ಟ್‌

    ಚಾಮರಾಜನಗರಕ್ಕೆ ವಿವಾಹವಾಗಿದ್ದ ತಾಯಿ ಮಮತಾ, ಮಕ್ಕಳೊಂದಿಗೆ ದೇವರಸನಹಳ್ಳಿಗೆ ಬಂದಿದ್ದರು. ಈ ವೇಳೆ ಭವಿಷ್‌ ತನ್ನ ಸೋದರಮಾವನ ಜೊತೆ ಟ್ರ‍್ಯಾಕ್ಟರ್ ನಲ್ಲಿ ಜಮೀನಿಗೆ ತೆರಳಿದ್ದ. ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಭವಿಷ್‌ ಟ್ರ‍್ಯಾಕ್ಟರ್ ನಿಂದ ಕೆಳಗೆ ಬಿದ್ದಿದ್ದಾನೆ ಬಳಿಕ ರೊಟಾವೆಲ್ಟರ್‌ಗೆ ಸಿಲುಕಿ ಅವಘಡ ಸಂಭವಿಸಿದೆ.

    ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ (Nanjangudu Rural Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

  • ಅತ್ತ ಪ್ರವಾಹದ ಪರಿಹಾರ ಸಿಕ್ಕಿಲ್ಲ, ಇತ್ತ ರೈತರ ಟ್ರ್ಯಾಕ್ಟರ್ ಜಪ್ತಿ

    ಅತ್ತ ಪ್ರವಾಹದ ಪರಿಹಾರ ಸಿಕ್ಕಿಲ್ಲ, ಇತ್ತ ರೈತರ ಟ್ರ್ಯಾಕ್ಟರ್ ಜಪ್ತಿ

    ಬೆಳಗಾವಿ: ನೆರೆ ಪೀಡಿತ ಬೆಳಗಾವಿಯಲ್ಲಿ ರೈತರ ಕಷ್ಟ ಅವರಿಗಷ್ಟೇ ಗೊತ್ತು. ಒಂದೆಡೆ ಎಲ್ಲವನ್ನೂ ಕಳೆದುಕೊಂಡು ಬದುಕು ಬೀದಿಗೆ ಬಿದ್ದಿದೆ, ಇನ್ನೊಂದೆಡೆ ರಾಜ್ಯ ಸರ್ಕಾರದಿಂದ ಸರಿಯಾದ ಪರಿಹಾರ ಸಿಕ್ತಿಲ್ಲ. ಈ ನಡುವೆ ಸಾಲ ಕಟ್ಟಿಲ್ಲ ಎಂದು ಖಾಸಗಿ ಫೈನಾನ್ಸ್ ಕಂಪನಿ ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದೆ.

    ಹೌದು. ಸವದತ್ತಿ ತಾಲೂಕಿನ ಕಡಬಿ ಶಿವಾಪುರ ಗ್ರಾಮದ ರೈತರಾದ ಬಾಳಪ್ಪ ಮತ್ತು ರಾಮಪ್ಪ ಅವರು ಹಿಂದೂಜಾ ಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಸಾಲ ಕಟ್ಟದ ಕಾರಣಕ್ಕೆ ಫೈನಾನ್ಸ್ ಅವರು ರೈತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿಕೊಂಡು ಹೋಗಿದ್ದಾರೆ. ರೈತರಿಬ್ಬರು ಮೂರು ತಿಂಗಳಿಂದ ಲೋನ್ ಕಟ್ಟಿರಲಿಲ್ಲ. ಇತ್ತ ಪ್ರವಾಹದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಾಲ ವಸೂಲಾತಿಗೆ ಮೂರು ದಿನಗಳ ಹಿಂದೆಯಷ್ಟೇ ತಾತ್ಕಾಲಿಕ ತಡೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳಿಗೆ ಕ್ಯಾರೇ ಎನ್ನದೆ ಜಮೀನಿಗೆ ನುಗ್ಗಿ 2 ಟ್ರ್ಯಾಕ್ಟರ್‌ಗಳನ್ನ ಫೈನಾನ್ಸ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

    ರಣ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಬೆಳಗಾವಿ ಮಂದಿ ಇನ್ನೂ ತಮ್ಮ ಬದುಕು ಕಟ್ಟಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಅತ್ತ ಸರ್ಕಾರ ಕೂಡ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಹೀಗಿರುವಾಗ ರೈತರು ಸಾಲ ಸೂಲ ಮಾಡಿ ಬೆಳೆದಿದ್ದ ಬೆಳೆಗಳು ಪ್ರವಾಹಕ್ಕೆ ಹಾನಿಯಾಗಿ ಹಣ ಕೊಟ್ಟವರಿಗೆ ಸಾಲ ಮರುಪಾವತಿ ಮಾಡಲು ಆಗದೆ ಕಂಗಾಲಾಗಿದ್ದಾರೆ. ಈ ನಡುವೆ ಸಾಲ ಕಟ್ಟಿ ಎಂದು ಮಾನವೀಯತೆ ಮರೆತ ಖಾಸಗಿ ಫೈನಾನ್ಸ್ ಕಂಪನಿಗಳು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ.