Tag: Toys

  • ಐಎಸ್‌ಐ ಮಾರ್ಕ್ ಇಲ್ಲದ 70 ಲಕ್ಷ ಮೌಲ್ಯದ ಚೀನಾ ಆಟಿಕೆ ವಶ

    ಭೋಪಾಲ್: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಅಧಿಕಾರಿಗಳು ಗುರುವಾರ ನಗರದ ಖಾಸಗಿ ಮಾಲ್‌ಗಳಿಗೆ ದಾಳಿ ಮಾಡಿ ಸುಮಾರು 70 ಲಕ್ಷ ರೂ. ಮೌಲ್ಯದ ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಬಿಐಎಸ್ ಹಿರಿಯ ವಿಜ್ಞಾನಿ ರಮಣ್ ತ್ರಿವೇದಿಯವರ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಲಾಗಿದ್ದು, ಮಾಲ್‌ಗಳಿಂದ ಐಎಸ್‌ಐ ಗುರುತು ಇಲ್ಲದ ಚೀನಾ ಆಟಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

    ಕೆಲವು ನಿರ್ದಿಷ್ಟ ಮಾಹಿತಿಯ ಮೇರೆಗೆ ಬಿಐಎಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮಾಲ್‌ಗಳಿಂದ ದೊಡ್ಡ ಪ್ರಮಾಣದ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆಟಿಕೆಗಳನ್ನು ಯಾವ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ ಮತ್ತು ಇಂತಹ ವ್ಯವಹಾರ ಯಾವಾಗಿನಿಂದ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕೊಲ್ಲಲು ಬಂದವ್ರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ್ಲು!

    ಐಎಸ್‌ಐ ಗುರುತು ಇಲ್ಲದ ಆಟಿಕೆ ನಿಷೇಧ:
    ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ಮಾರಾಟ ಮಾಡುವುದನ್ನು ದೇಶದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಮಾರುಕಟ್ಟೆಗಳಲ್ಲಿ ಐಎಸ್‌ಐ ಗುರುತು ಇಲ್ಲದ ಆಟಿಕೆಗಳ ಮಾರಾಟ ನಡೆಯುತ್ತಿದೆ. ಇಂತಹ ಅಕ್ರಮ ಮಾರಾಟದ ಬಗ್ಗೆ ನಮಗೆ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಅಧಿಕಾರಿ ಅಮರ್ ಉಜಾಲಾ ತಿಳಿಸಿದ್ದಾರೆ.

    ನಾವು ಆಟಿಕೆಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ ಕಠಿಣ ಕ್ರಮ ಕೈಗೊಂಡಿದ್ದೇವೆ. ಬಿಐಎಸ್ ಅಧಿಕಾರಿಗಳು ಅಂಗಡಿಗಳನ್ನು ಸೀಲ್ ಮಾಡಿದ್ದಾರೆ. ಜೊತೆಗೆ ಚೈನೀಸ್ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮದ ವಿಚಾರಕ್ಕೆ ಬಂದ ಪಕ್ಕದ ಮನೆಯವರಿಗೆ ಸಲ್ಮಾನ್ ಕ್ಲಾಸ್

    ಭಾರತ ಸರ್ಕಾರ ಮಾರ್ಗಸೂಚಿಗಳ ಪ್ರಕಾರ ಐಎಸ್‌ಐ ಗುರುತು ಇಲ್ಲದ ಆಟಿಕೆಗಳು ಮಕ್ಕಳಿಗೆ ಹಾನಿಕಾರಕ. ಅಂಗಡಿಯವರು ಇದನ್ನೆಲ್ಲ ಲೆಕ್ಕಿಸದೇ ತಮ್ಮ ಲಾಭಕ್ಕಾಗಿ ವಿದೇಶದಿಂದ ಕಡಿಮೆ ಬೆಲೆಗೆ ಆಟಿಕೆಗಳನ್ನು ಆಮದು ಮಾಡಿಕೊಂಡು ಇಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಇದೀಗ ಭೋಪಾಲ್‌ನಲ್ಲಿ ಬಿಐಎಸ್ ಅಧಿಕಾರಿಗಳ 13 ಸದಸ್ಯರ ತಂಡ ಹಲವೆಡೆ ದಾಳಿ ನಡೆಸುತ್ತಿದ್ದಾರೆ.

  • ಆಟಿಕೆ ಕೊಡಿಸುವುದಾಗಿ ಹೇಳಿ 9 ತಿಂಗಳ ಕಂದಮ್ಮನ ಮೇಲೆ ರೇಪ್

    ಆಟಿಕೆ ಕೊಡಿಸುವುದಾಗಿ ಹೇಳಿ 9 ತಿಂಗಳ ಕಂದಮ್ಮನ ಮೇಲೆ ರೇಪ್

    ಕೋಲ್ಕತ್ತಾ: ಆಟಿಕೆ ಕೊಡಿಸುವುದಾಗಿ 9 ತಿಂಗಳ ಕಂದಮ್ಮ ಕರೆದೊಯ್ದು ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಶ್ಯಾಂಪೂರ್ ತಾಲೂಕಿನಲ್ಲಿ ನಡೆದಿದೆ.

    ಅತ್ಯಾಚಾರ ಎಸಗಿದ ಆರೋಪಿಯು ಬಾಲಕಿಯ ಸಂಬಂಧಿಯಾಗಿದ್ದಾನೆ. ಆರೋಪಿಯು ಬುಧವಾರವೇ ಕೃತ್ಯ ಎಸಗಿದ್ದ. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಪಕ್ಕದ ಮನೆ ನಿವಾಸಿ ಹಾಗೂ ಸಂಬಂಧಿಯಾದ ಆರೋಪಿ ಬುಧವಾರ ಕಂದಮ್ಮನ ಮನೆಗೆ ಬಂದಿದ್ದ. ಈ ವೇಳೆ ಮಗುವಿಗೆ ಆಟಿಕೆ ಕೊಡಿಸುವುದಾಗಿ ಹೇಳಿ ಎತ್ತಿಕೊಂಡು ಹೋಗಿದ್ದ. ಬಳಿಕ ನಿರ್ಜನ ಪ್ರದೇಶದಲ್ಲಿ 9 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಗುವನ್ನು ಮನೆಗೆ ತಂದು ಬಿಟ್ಟಾಗ ಮಗುವಿನ ಗುಪ್ತಾಂಗದಿಂದ ರಕ್ತಸ್ರಾವವಾಗುತ್ತಿತ್ತು. ಇದನ್ನು ಗಮನಿಸಿದ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ವೈದ್ಯರು ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದರು.

    ಈ ಸಂಬಂಧ ಶ್ಯಾಂಪೂರ್ ಪೊಲೀಸ್ ಠಾಣೆಗೆ ಮಗುವಿನ ಪೋಷಕರ ದೂರು ನೀಡಿದ್ದರು. ಸಂತ್ರಸ್ತೆಯ ಪೋಷಕರ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.