Tag: Toyota Fortuner

  • ಟೊಯೋಟಾ ಫಾರ್ಚುನರ್ ಬೆಲೆ 3.49 ಲಕ್ಷ ಇಳಿಕೆ; ಥಾರ್ ಬೆಲೆ 1.55 ಲಕ್ಷ ಕಡಿತ

    ಟೊಯೋಟಾ ಫಾರ್ಚುನರ್ ಬೆಲೆ 3.49 ಲಕ್ಷ ಇಳಿಕೆ; ಥಾರ್ ಬೆಲೆ 1.55 ಲಕ್ಷ ಕಡಿತ

    ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಟಾಟಾ ಮೋಟಾರ್ಸ, ಮಹೀಂದ್ರಾ & ಮಹೀಂದ್ರಾ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್‌ (Toyota Kirloskar Motor) ಮತ್ತು ರೆನೊ ಇಂಡಿಯಾ ತಮ್ಮ ವಾಹನಗಳ ಬೆಲೆಯನ್ನು ಕಡಿತಗೊಳಿಸಿವೆ. ಇತ್ತೀಚಿಗೆ ನಡೆದ ಜಿಎಸ್‌ಟಿ (GST) ಮಂಡಳಿ ಸಭೆಯಲ್ಲಿ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಪರಿಷ್ಕರಿಸಲಾಗಿತ್ತು. ಈಗ ದರ ಕಡಿತದ ಪ್ರಯೋಜನಗಳನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸುವುದಾಗಿ ಕಾರು ತಯಾರಿಕಾ ಕಂಪನಿಗಳು ಘೋಷಿಸಿವೆ.

    ಟಾಟಾ ಕಾರುಗಳ ಬೆಲೆ 75,000 – 1.45 ಲಕ್ಷ ರೂಪಾಯಿವರೆಗೆ ಕಡಿತ

    ಟಿಯಾಗೋ – 75,000
    ಟಿಗೋರ್‌ – 80,000
    ಆಲ್ಟ್ರೋಜ್‌ – 1,10,000
    ಪಂಚ್‌ – 85,000
    ನೆಕ್ಸಾನ್‌ – 1,55,000
    ಕರ್ವ್ – 65,000
    ಹ್ಯಾರಿಯರ್ – 1,40,000
    ಸಫಾರಿ – 1,45,000

    ಟೊಯೋಟಾ ಕಾರುಗಳ ಬೆಲೆ ₹3.49 ಲಕ್ಷದವರೆಗೆ ಇಳಿಕೆ 

    ಗ್ಲಾನ್ಜಾ – 85,300
    ಟೈಸರ್ – 1,10,000
    ಹೈರೈಡರ್ – 65,400
    ಇನ್ನೋವಾ ಕ್ರಿಸ್ಟಾ – 1,80,000
    ಇನ್ನೋವಾ ಹೈಕ್ರಾಸ್ – 1,15,000
    ಫಾರ್ಚುನರ್ – 3,49,000
    ಲೆಜೆಂಡರ್ – 3,34,000
    ಹೈಲಕ್ಸ್ – 2,52,000
    ಕ್ಯಾಮ್ರಿ – 1,01,000
    ವೆಲ್‌ಫೈರ್ – 2,78,000

    ಮಹೀಂದ್ರಾ ಕಾರುಗಳ ಬೆಲೆ 75,000 – 1,55,000 ರೂಪಾಯಿವರೆಗೆ ಕಡಿತ

    XUV 3XO (ಡೀಸೆಲ್) – 75,000
    XUV 3XO (ಪೆಟ್ರೋಲ್) – 80,000
    ಸ್ಕಾರ್ಪಿಯೋ N – 1,10,000
    XUV 700 – 85,000
    ಥಾರ್ 2WD – 1,55,000
    ಥಾರ್ ರಾಕ್ಸ್ – 65,000
    ಬೊಲೆರೋ – 1,40,000
    ಸ್ಕಾರ್ಪಿಯೋ ಕ್ಲಾಸಿಕ್ – 1,45,000

    ರೆನೊ ಕಾರುಗಳ ಬೆಲೆ 96,395 ರೂಪಾಯಿವರೆಗೆ ಇಳಿಕೆ

    ಕ್ವಿಡ್ – 55,095
    ಟ್ರೈಬರ್ – 80,195
    ಕೈಗರ್ – 96,395

    ಈ ಎಲ್ಲಾ ಬೆಲೆಗಳು ಸೆಪ್ಟೆಂಬರ್‌ 22ರ ನಂತರ ಜಾರಿಗೆ ಬರಲಿವೆ ಎಂದು ಕಾರು ತಯಾರಿಕಾ ಕಂಪನಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿವೆ. ಹಬ್ಬದ ಋತುವಿನಲ್ಲಿ ಈ ಬೆಲೆ ಕಡಿತದ ಪ್ರಯೋಜನವನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಿಕೊಳ್ಳಲಿದ್ದಾರೆ ಎಂದು ಕಂಪನಿಗಳು ಆಶಾದಾಯಕವಾಗಿವೆ.

  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರ ಪತ್ನಿಗೆ ಸೇರಿದ್ದ ದುಬಾರಿ ಕಾರು ಕಳ್ಳತನ!

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರ ಪತ್ನಿಗೆ ಸೇರಿದ್ದ ದುಬಾರಿ ಕಾರು ಕಳ್ಳತನ!

    ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರ ಪತ್ನಿಗೆ ಸೇರಿದ್ದ ಕಾರು ಕಳ್ಳತನವಾಗಿರುವ ಘಟನೆ ರಾಷ್ಟ್ರರಾಜಧಾನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆಗ್ನೇಯ ದೆಹಲಿಯ (South East Delhi) ಗೋವಿಂದಪುರಿ ಪ್ರದೇಶದಿಂದ ಟೊಯೊಟಾ ಫಾರ್ಚೂನರ್ (Toyota Fortuner) ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ತಿಂಗಳ ಮಾರ್ಚ್‌ 19ರಂದು ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಕಳ್ಳತನ ನಡೆದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್‌ – ಗೋವಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ

    ಮಾಹಿತಿ ಪ್ರಕಾರ, ಚಾಲಕ ಜೋಗಿಂದರ್ ಅವರು ಟೊಯೊಟಾ ಫಾರ್ಚುನರ್ ಕಾರನ್ನು ಸರ್ವಿಸ್ ಮಾಡಿದ ನಂತರ ಗೋವಿಂದಪುರಿಗೆ ತಂದು ತಮ್ಮ ಮನೆಯಲ್ಲಿ ನೀಲಿಸಿದ್ದರು. ಊಟ ಮಾಡಿ ಬರುವಷ್ಟರಲ್ಲಿ ಕಾರು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.

    ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕದ್ದ ಕಾರು ಗುರುಗ್ರಾಮ್ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಆದರೆ, ಪ್ರಯತ್ನಗಳ ಹೊರತಾಗಿಯೂ, ವಾಹನದ ಯಾವುದೇ ಕುರುಹು ಇನ್ನೂ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಕಳ್ಳತನವಾದ ಕಾರು ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದೆ ಎಂದು ಹೇಳಲಾಗಿದೆ.

    ಈ ಬಗ್ಗೆ ಈಗಾಗಲೇ ಪೊಲೀಸರು ತನಿಖೆ ಕೈಗೊಂಡಿದ್ದು, ಕಾರನ್ನು ಶೋಧ ನಡೆಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆಟೋ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ; ಪರಿಸ್ಥಿತಿ ಉದ್ವಿಗ್ನ – ಮೂವರು ಅರೆಸ್ಟ್

  • ಟೊಯೋಟಾ ನ್ಯೂ ಫಾರ್ಚ್ಯೂನರ್‌, ಫಾರ್ಚ್ಯೂನರ್‌ ಲೆಜೆಂಡರ್ ಕಾರು ಬಿಡುಗಡೆ

    ಟೊಯೋಟಾ ನ್ಯೂ ಫಾರ್ಚ್ಯೂನರ್‌, ಫಾರ್ಚ್ಯೂನರ್‌ ಲೆಜೆಂಡರ್ ಕಾರು ಬಿಡುಗಡೆ

    ಬೆಂಗಳೂರು: 2021ರ ವರ್ಷಾರಂಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಫಾರ್ಚ್ಯೂನರ್‌ ಎಸ್‍ಯುವಿಯನ್ನು ಎರಡು ಹೊಸ ಅವತಾರಗಳಲ್ಲಿ ಬಿಡುಗಡೆ ಮಾಡಿದೆ. ನ್ಯೂ ಫಾರ್ಚ್ಯೂನರ್‌ ಮತ್ತು ಫಾರ್ಚ್ಯೂನರ್‌ ಲೆಜೆಂಡರ್ ಹೆಸರಿನ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ.

    ನ್ಯೂ ಫಾರ್ಚ್ಯೂನರ್‌ ಕಾರು ಪೆಟ್ರೋಲ್ ಮತ್ತು ಡೀಸೆಲ್ ಅವತರಣಿಕೆಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಹೊಂದಿರುವ ಕಾರಿನ ಬೆಲೆ ರೂ. 29.98 ಲಕ್ಷದಿಂದ ಆರಂಭವಾಗುತ್ತವೆ. ಡೀಸೆಲ್ ಎಂಜಿನ್ ಕಾರಿನ ಬೆಲೆ ರೂ. 32.48 ಲಕ್ಷದಿಂದ ಆರಂಭವಾಗುತ್ತವೆ.

    ನ್ಯೂ ಫಾರ್ಚ್ಯೂನರ್‌ ಕಾರಿನ ಪೆಟ್ರೋಲ್ ಎಂಜಿನ್ ಸಾಮರ್ಥ್ಯ 2.7 ಲೀಟರ್ ಇದ್ದು, 166 ಹೆಚ್‍ಪಿ ಶಕ್ತಿ ಮತ್ತು 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನ್ಯುಯಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರ್ಯಾನ್ಸ್‌ಮಿಷನ್‌ನೊಂದಿಗೆ ದೊರೆಯಲಿದೆ.

    2.8 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ 6-ಸ್ಪೀಡ್ ಮ್ಯಾನ್ಯುಯಲ್ ಟ್ರ್ಯಾನ್ಸ್‍ಮಿಷನ್‍ನಲ್ಲಿ 204 ಹೆಚ್‍ಪಿ ಶಕ್ತಿ ಮತ್ತು 420 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, 6-ಸ್ಪೀಡ್ ಆಟೋಮ್ಯಾಟಿಕ್ ಟ್ರ್ಯಾನ್ಸ್‌ಮಿಷನ್‌ನಲ್ಲಿ 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

    ಫಾರ್ಚ್ಯೂನರ್‌ ಪೆಟ್ರೋಲ್ ಮಾದರಿ ಕೇವಲ 2 ವೀಲ್ ಡ್ರೈವ್ ರೂಪದಲ್ಲಿ ಮಾತ್ರ ದೊರೆಯಲಿದ್ದು, ಡೀಸೆಲ್ ಮಾದರಿಯಲ್ಲಿ 4 ವೀಲ್ ಡ್ರೈವ್ ವ್ಯವಸ್ಥೆ ಇದೆ. ಫಾರ್ಚ್ಯೂನರ್‌ ಲೆಜೆಂಡರ್ ಕೇವಲ 2 ವೀಲ್ ಡ್ರೈವ್ ವ್ಯವಸ್ಥೆ ಹೊಂದಿದ್ದು, ಆಟೋಮ್ಯಾಟಿಕ್ ಟ್ರ್ಯಾನ್ಸ್‌ಮಿಷನ್‌ನಲ್ಲಿ ಮಾತ್ರ ದೊರೆಯುತ್ತದೆ.

    ನ್ಯೂ ಟೊಯೋಟಾ ಫಾರ್ಚೂನರ್ ಕಾರು ಮರುವಿನ್ಯಾಸಗೊಳಿಸಲಾದ ಎಲ್‍ಇಡಿ ಹೆಡ್‍ಲೈಟ್‍ಗಳು, ಎಲ್‍ಇಡಿ ಡೇ ಟೈಮ್ ರನ್ನಿಂಗ್ ಲೈಟ್‍ಗಳು, ದೊಡ್ಡ ಮೆಶ್-ಪ್ಯಾಟರ್ನ್ ಗ್ರಿಲ್, ಮರುವಿನ್ಯಾಸಗೊಳಿಸಿದ ಫ್ರಂಟ್ ಬಂಪರ್ ಮತ್ತು ಹೊಸ 18 ಇಂಚಿನ ಅಲಾಯ್ ವೀಲ್‍ಗಳನ್ನು ಒಳಗೊಂಡಿದೆ.

    ಆಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯ ಹೊಂದಿರುವ 8.0-ಇಂಚಿನ ದೊಡ್ಡ ಟಚ್‍ಸ್ಕ್ರೀನ್ ಇನ್ಫೋಟೈನ್‍ಮೆಂಟ್ ಸಿಸ್ಟಮ್, ನವೀಕರಿಸಿದ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್, 8-ವೇ ಪವರ್-ಅಡ್ಜಸ್ಟೆಬಲ್ ವೆಂಟಿಲೇಟೆಡ್ ಸೀಟುಗಳು, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಮ್, ಫ್ರಂಟ್ ಪಾರ್ಕಿಂಗ್‌ ಸೆನ್ಸರ್‌ರ್‌ಗಳನ್ನು ನ್ಯೂ ಫಾರ್ಚ್ಯೂನರ್‌ ಕಾರು ಹೊಂದಿದೆ.

    ‘ಲೆಜೆಂಡರ್’ ಆವೃತ್ತಿ ಸ್ಪೋರ್ಟಿಯರ್ ವ್ಯಕ್ತಿತ್ವವನ್ನು ಹೊಂದಿದೆ. ಸ್ಪ್ಲಿಟ್ ಗ್ರಿಲ್, ಸೀಕ್ವೆನ್ಷಿಯಲ್ ಎಲ್‍ಇಡಿ ಟರ್ನ್ ಇಂಡಿಕೇಟರ್‌ಗಳು ಹೊಂದಿರುವ ವಿಭಿನ್ನ ಮುಂಭಾಗದ ಬಂಪರ್, ಎಲ್‍ಇಡಿ ಡಿಆರ್‍ಎಲ್‍ಗಳಿಗಾಗಿ ವಿಶಿಷ್ಟ ಮಾದರಿಯನ್ನು ಹೊಂದಿರುವ ಎಲ್‍ಇಡಿ ಪ್ರೊಜೆಕ್ಟರ್‌ಗಳು ಹೆಡ್‍ಲೈಟ್‍ಗಳು ಮತ್ತು ಗ್ಲೋಸ್ ಬ್ಲ್ಯಾಕ್ ಫಿನಿಶ್ ಅಲಾಯ್ ವೀಲ್‍ಗಳನ್ನು ಹೊಂದಿದೆ. ಫಾರ್ಚೂನರ್ ಲೆಜೆಂಡರ್ ಕಾರು ಕೇವಲ ಪರ್ಲ್ ವೈಟ್ ಬಣ್ಣದಲ್ಲಿ ಲಭ್ಯವಿದೆ. ಲೆಜೆಂಡರ್ ಹ್ಯಾಂಡ್ಸ್-ಫ್ರೀ ಟೈಲ್ ಗೇಟ್ ಓಪನ್ ಫಂಕ್ಷನ್ ಕೂಡ ಹೊಂದಿದೆ.

     

  • ಡಿವೈಡರ್‌ ದಾಟಿ ಕ್ಯಾಂಟರ್‌ಗೆ ಫಾರ್ಚೂನರ್‌ ಡಿಕ್ಕಿ – ನಜ್ಜುಗುಜ್ಜಾಯ್ತು ಕಾರು

    ಡಿವೈಡರ್‌ ದಾಟಿ ಕ್ಯಾಂಟರ್‌ಗೆ ಫಾರ್ಚೂನರ್‌ ಡಿಕ್ಕಿ – ನಜ್ಜುಗುಜ್ಜಾಯ್ತು ಕಾರು

    ನೆಲಮಂಗಲ: ರಸ್ತೆ ಡಿವೈಡರ್ ದಾಟಿ ಕ್ಯಾಂಟರ್‌ಗೆ ಟೊಯೊಟಾ ಫಾರ್ಚೂನರ್ ಕಾರು ಡಿಕ್ಕಿ ಹೊಡೆದ ಘಟನೆ ಬೆಂಗಳೂರು ಹೊರ ವಲಯದ ನೆಲಮಂಗಲದಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ ತುಮಕೂರು ರಸ್ತೆಯ ಕುಲುವನಹಳ್ಳಿ ಬಳಿ ವೇಗದಲ್ಲಿ ಸಂಚರಿಸುತ್ತಿದ್ದ ಕೆಎ 01 ಎಂಯು 6646 ಸಂಖ್ಯೆಯ ಕಾರು ಡಿವೈಡರ್‌ ದಾಟಿ ಕ್ಯಾಂಟರ್‌ಗೆ ಗುದ್ದಿದೆ.

    ಭೀಕರ ಅಪಘಾತದಲ್ಲಿ ಐಶಾರಾಮಿ ಕಾರು ನಜ್ಜುಗುಜ್ಜಾಗಿ ಹೋಗಿದೆ. ಫಾರ್ಚೂನರ್‌ ಗುದ್ದಿದ ರಭಸಕ್ಕೆ ಕ್ಯಾಂಟರ್‌ನ ಮುಂಭಾಗಕ್ಕೆ ಹಾನಿಯಾಗಿದೆ.

    ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೋಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.