Tag: toxic film

  • Ramayana ಶೂಟಿಂಗ್ ಆರಂಭಿಸಿದ ರಾಕಿಂಗ್ ಸ್ಟಾರ್ ಯಶ್‌

    Ramayana ಶೂಟಿಂಗ್ ಆರಂಭಿಸಿದ ರಾಕಿಂಗ್ ಸ್ಟಾರ್ ಯಶ್‌

    ರಾಕಿಂಗ್ ಸ್ಟಾರ್ ಯಶ್ (Yash) ಅವರು ‘ಟಾಕ್ಸಿಕ್‌’ ಚಿತ್ರದ ನಡುವೆ ಇದೀಗ ‘ರಾಮಾಯಣ’ ಚಿತ್ರ ಕೈಗೆತ್ತಿಕೊಂಡಿದ್ದಾರೆ. ‘ರಾಮಾಯಣ’ (Ramayana) ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಯಶ್‌ ನಟನೆಯ ರಾಮಾಯಣ ಚಿತ್ರದ ಫಸ್ಟ್‌ ಗ್ಲಿಂಪ್ಸ್ WAVES ಶೃಂಗಸಭೆಯಲ್ಲಿ ರಿಲೀಸ್‌

    ರಾವಣ ಪಾತ್ರಧಾರಿಯಾಗಿ ಮೊದಲ ದೃಶ್ಯದಲ್ಲಿ ಯಶ್ ನಟಿಸಿದ್ದಾರೆ. ಏ.30ರಿಂದ ಒಂದು ತಿಂಗಳುಗಳ ಕಾಲ ಯಶ್ ‘ರಾಮಾಯಣ ಪಾರ್ಟ್ 1’ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಮುಂಬೈನಲ್ಲಿಯೇ ಯಶ್ ಬೀಡು ಬೀಡಲಿದ್ದಾರೆ. ಸದ್ಯದಲ್ಲೇ ಸಾಯಿ ಪಲ್ಲವಿ (ಸೀತಾ), ರಣಬೀರ್ ಕಪೂರ್ (ರಾಮ), ಸನ್ನಿ ಡಿಯೋಲ್ (ಹನುಮಾನ್) ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಅಕ್ಷಯ ತೃತೀಯದಂದು ಬಿಡುಗಡೆಯಾಯ್ತು ‘ಟೈಮ್ ಪಾಸ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ರಾವಣ ಪಾತ್ರಕ್ಕೆ ಜೀವತುಂಬಲು ತೆರೆಮರೆಯಲ್ಲಿ ಭರ್ಜರಿ ತಯಾರಿ ಮಾಡಿಕೊಂಡೇ ಯಶ್ ಅಖಾಡಕ್ಕೆ ಇಳಿದಿದ್ದಾರೆ. ನಟನೆಯ ಜೊತೆ ಸಹ- ನಿರ್ಮಾಪಕನಾಗಿ ಕೂಡ ಅವರು ಕೈಜೋಡಿಸಿದ್ದಾರೆ. ರಾವಣ ಪಾತ್ರಕ್ಕೆ ಬಣ್ಣ ಹಚ್ಚೋದಕ್ಕೂ ಮುನ್ನ ಇತ್ತೀಚೆಗೆ ಉಜ್ಜನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

    ಅಂದಹಾಗೆ, ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾ ಕನ್ನಡ, ಇಂಗ್ಲಿಷ್‌ ಜೊತೆ ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಮುಂದಿನ ವರ್ಷ ಜ.19ರಂದು ಚಿತ್ರ ರಿಲೀಸ್‌ ಆಗ್ತಿದೆ.

  • ಪತ್ನಿ ರಾಧಿಕಾ ಪಂಡಿತ್‌ ಜೊತೆ ಮುಂಬೈನಲ್ಲಿ ಯಶ್‌

    ಪತ್ನಿ ರಾಧಿಕಾ ಪಂಡಿತ್‌ ಜೊತೆ ಮುಂಬೈನಲ್ಲಿ ಯಶ್‌

    ರಾಕಿಂಗ್ ಸ್ಟಾರ್ ಯಶ್ (Yash) ಅವರು ಪತ್ನಿ ರಾಧಿಕಾ ಪಂಡಿತ್ (Radhika Pandit) ಜೊತೆ ಮುಂಬೈಗೆ ಆಗಮಿಸಿದ್ದಾರೆ. ಬ್ರೇಕ್‌ನ ಬಳಿಕ ಮತ್ತೆ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್‌ಗೆ ಯಶ್ ವಾಪಸ್ ಆಗಿದ್ದಾರೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ರಾಕಿ ಭಾಯ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದನ್ನೂ ಓದಿ:ಫಿಲ್ಮ್ ಶೂಟಿಂಗ್‌ಗೆ ಮಚ್ಚು ಬಳಸಿದ್ದು: ಲಾಂಗ್ ಹಿಡಿದ ರೀಲ್ಸ್‌ಗೆ ‌’ಬಿಗ್‌ ಬಾಸ್’ ವಿನಯ್ ಸ್ಪಷ್ಟನೆ

    ಮುಂಬೈನಲ್ಲಿ ಯಶ್ ಹವಾ ಜೋರಾಗಿದೆ. ವಿಮಾನ ನಿಲ್ದಾಣದಿಂದ ಯಶ್ ಹೊರಬರುತ್ತಿದ್ದಂತೆ ರಾಕಿ ಭಾಯ್ ಎಂದು ಪಾಪರಾಜಿಗಳು ಕೂಗಲು ಶುರು ಮಾಡಿದ್ದಾರೆ. ಹಾಗಾಗಿ ಪಾಪರಾಜಿಗಳ ಕ್ಯಾಮೆರಾಗೆ ಸ್ಟೈಲೀಶ್ ಆಗಿ ಲುಕ್ ಕೊಟ್ಟು ಕೈಬಿಸಿ ಯಶ್ ತೆರಳಿದ್ದಾರೆ. ಈ ವೇಳೆ, ರಾಧಿಕಾ ಕೈಹಿಡಿದು ಬಂದ ಯಶ್ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಬೆಸ್ಟ್ ಜೋಡಿ ಎಂದೆಲ್ಲಾ ನೆಟ್ಟಿಗರು ಕೊಂಡಾಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಇನ್ನೂ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಬೆಂಗಳೂರು ಹಾಗೂ ಮುಂಬೈನಲ್ಲಿ ನಡೆಯುತ್ತಿದೆ. ಇದರ ನಡುವೆ ಮುಂದಿನ ವರ್ಷ ಮಾ.19ರಂದು ‘ಟಾಕ್ಸಿಕ್’ ರಿಲೀಸ್ ಮಾಡೋದಾಗಿ ಯಶ್ ಈಗಾಗಲೇ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ.

  • ಹನಿ ಸಿಂಗ್‌ ಕಾನ್ಸರ್ಟ್‌ನಲ್ಲಿ ರಾಕಿಂಗ್‌ ಸ್ಟಾರ್-‌ ಕನ್ನಡದಲ್ಲಿ ಹಾಡುವಂತೆ ಯಶ್‌ ಕಂಡೀಷನ್‌

    ಹನಿ ಸಿಂಗ್‌ ಕಾನ್ಸರ್ಟ್‌ನಲ್ಲಿ ರಾಕಿಂಗ್‌ ಸ್ಟಾರ್-‌ ಕನ್ನಡದಲ್ಲಿ ಹಾಡುವಂತೆ ಯಶ್‌ ಕಂಡೀಷನ್‌

    ಬಾಲಿವುಡ್‌ನ ಖ್ಯಾತ ಗಾಯಕ, ರ‍್ಯಾಪರ್ ಹನಿ ಸಿಂಗ್ (Honey Singh) ನಿನ್ನೆ (ಮಾ.22) ಬೆಂಗಳೂರಿಗೆ ಆಗಮಿಸಿ ಅದ್ಧೂರಿಯಾಗಿ ಲೈವ್ ಕಾನ್ಸರ್ಟ್ (ಸಂಗೀತ ಕಾರ್ಯಕ್ರಮ) ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಅವರು ಸಾಥ್ ನೀಡಿದ್ದಾರೆ. ಅದಲ್ಲದೇ, ಹನಿ ಸಿಂಗ್‌ಗೆ ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಹಾಡಬೇಕು ಎಂದು ಯಶ್ ಬೇಡಿಕೆಯಿಟ್ಟಿದ್ದಾರೆ. ಈ ಕುರಿತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಟಾಕ್ಸಿಕ್‌ ಸಿನಿಮಾ ಮುಂದಿನ ವರ್ಷ ರಿಲೀಸ್‌ – ದಿನಾಂಕ ಘೋಷಿಸಿದ ಯಶ್‌

    ನಿನ್ನೆ ಸಂಜೆ ಬೆಂಗಳೂರಿನಲ್ಲಿ ಹನಿ ಸಿಂಗ್ ಆಗಮಿಸಿ ತಮ್ಮ ಗಾಯನದ ಮೂಲಕ ರಂಜಿಸಿದ್ದಾರೆ. ಈ ವೇಳೆ, ಯಶ್ ಕೂಡ ವೇದಿಕೆಗೆ ಆಗಮಿಸಿ ಕನ್ನಡದಲ್ಲಿಯೇ ಹನಿ ಸಿಂಗ್‌ಗೆ ‘ಬೆಂಗಳೂರಿಗೆ ಸ್ವಾಗತ’ ಎಂದಿದ್ದಾರೆ. ನಮಸ್ಕಾರ ಎಲ್ಲರೂ ಹೇಗಿದ್ದೀರಿ. ತುಂಬಾ ಖುಷಿ ಆಗುತ್ತಿದೆ ನಿಮ್ಮೆಲ್ಲರನ್ನೂ ನೋಡಿ. ನಮ್ಮ ಊರಿಗೆ ಬಂದ ಇವರಿಗೆ ಸ್ವಾಗತಿಸೋಣ, ವೆಲ್ ಕಮ್ ಬ್ರದರ್. ವಿ ಲವ್ ಯೂ ಎಂದು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಹನಿ ಸಿಂಗ್‌ಗೆ ನೀವು ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಹಾಡಬೇಕು ಎಂದು ಯಶ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಗಾಯಕ, ಖಂಡಿತ ನಿಮಗಾಗಿ ಕನ್ನಡದಲ್ಲಿ ಹಾಡು ಹಾಡುತ್ತೇನೆ ಎಂದಿದ್ದಾರೆ. ಯಶ್‌ ಕಾರ್ಯಕ್ರಮಕ್ಕೆ ಬಂದು ಸಾಥ್‌ ಕೊಟ್ಟಿದಕ್ಕೆ ಗಾಯಕ ಧನ್ಯವಾದ ಹೇಳಿದ್ದಾರೆ. ಇನ್ನೂ ಹಿಂದಿ ಹಾಡುಗಳ ಕಾನ್ಸರ್ಟ್‌ನಲ್ಲಿ ಕನ್ನಡದಲ್ಲಿ ಯಶ್ ಮಾತನಾಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಜೊತೆಗೆ ಕನ್ನಡದ ಹಾಡುಗಳನ್ನು ಹಾಡಿ ಎಂದು ಒತ್ತಾಯಿಸಿರೋದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

     

    View this post on Instagram

     

    A post shared by Yo Yo Honey Singh (@yoyohoneysingh)

    ಇನ್ನೂ ಯಶ್ ಕೂಡ ಆಗಮಿಸಿ ನೆರೆದಿದ್ದ ಜನರಿಗೆ ಅಚ್ಚರಿ ಮೂಡಿಸಿದ್ದಾರೆ. ಮುಂಚೆಯೇ ಹನಿ ಸಿಂಗ್ ಕಾನ್ಸರ್ಟ್‌ನಲ್ಲಿ ಯಶ್ ಭಾಗಿಯಾಗ್ತಾರೆ ಎಂಬ ಯಾವುದೇ ಮುನ್ಸೂಚನೆ ಇರಲಿಲ್ಲ. ಇದನ್ನೂ ಓದಿ:ಕನ್ನಡದಲ್ಲಿ ಸಿನಿಮಾ ಮಾಡಲಿದ್ದಾರೆ ತಮಿಳಿನ ಖ್ಯಾತ ನಿರ್ದೇಶಕ ಗೌತಮ್

    ಅಂದಹಾಗೆ, ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮುಂದಿನ ವರ್ಷ ರಿಲೀಸ್ ಮಾಡೋದಾಗಿ ಗುಡ್ ನ್ಯೂಸ್ ನೀಡಿದ್ದಾರೆ. 2026ರ ಮಾ.19ರಂದು ರಿಲೀಸ್ ಮಾಡೋದಾಗಿ ಯಶ್ ಘೋಷಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ.

  • ‘ಟಾಕ್ಸಿಕ್’ ಅದ್ಭುತವಾಗಿದೆ: ಯಶ್ ಕುರಿತು ಹಾಲಿವುಡ್ ಸ್ಟಂಟ್ ಮಾಸ್ಟರ್ ಗುಣಗಾನ

    ‘ಟಾಕ್ಸಿಕ್’ ಅದ್ಭುತವಾಗಿದೆ: ಯಶ್ ಕುರಿತು ಹಾಲಿವುಡ್ ಸ್ಟಂಟ್ ಮಾಸ್ಟರ್ ಗುಣಗಾನ

    ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾಗೆ ಹಾಲಿವುಡ್‌ನ ಜೆಜೆ ಪೆರ್ರಿ (JJ Perry) ಆ್ಯಕ್ಷನ್ ಸೀಕ್ವೆನ್ಸ್‌ಗೆ ಡೈರೆಕ್ಷನ್ ಮಾಡಿ ತಾಯ್ನಾಡಿಗೆ ಮರಳಿದ್ದಾರೆ. ಈ ಬೆನ್ನಲ್ಲೇ, ಯಶ್ ಕುರಿತು ಜೆಜೆ ಪೆರ್ರಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್’ ಚಿತ್ರ ಅದ್ಭುತವಾಗಿದೆ ಎನ್ನುತ್ತಾ ಯಶ್ ಬಗ್ಗೆ ಗುಣಗಾನ ಮಾಡಿದ್ದಾರೆ. ಕನ್ನಡದ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿ- ಕನ್ನಡಕ್ಕೆ ಬಂದ ‘ಹನುಮಾನ್’ ಖ್ಯಾತಿಯ ಅಮೃತಾ ಅಯ್ಯರ್

    ‘ಟಾಕ್ಸಿಕ್’ ಚಿತ್ರದಲ್ಲಿ ನನ್ನ ಸ್ನೇಹಿತ ಯಶ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಭಾರತದಲ್ಲಿ ಇದ್ದಿದ್ದು ಖುಷಿ ಕೊಟ್ಟಿತು. ಯುರೋಪ್‌ನ ನನ್ನ ಅನೇಕ ಆತ್ಮೀಯ ಸ್ನೇಹಿತರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಇದನ್ನು ನೋಡಲು ಕಾದಿದ್ದೇನೆ. ಟಾಕ್ಸಿಕ್‌ ಸಿನಿಮಾ ನಿಜಕ್ಕೂ ಅದ್ಭುತ. ನಾವು ಏನನ್ನು ಮಾಡಿದ್ದೇವೋ ಆ ಬಗ್ಗೆ ಹೆಮ್ಮೆ ಇದೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಯಶ್ ಜೊತೆಗಿನ ಫೋಟೋ ಶೇರ್ ಮಾಡಿ ಜೆಜೆ ಪೆರ್ರಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by JJ Perry (@jjlocoperry)

    ಇನ್ನೂ ‘ಟಾಕ್ಸಿಕ್’ ಚಿತ್ರವು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಒಟ್ಟಿಗೆ ಶೂಟ್ ಮಾಡಲಾಗುತ್ತಿದೆ. ಈ ಸಿನಿಮಾಗೆ ಹಾಲಿವುಡ್‌ನ ಫೇಮಸ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಆ್ಯಕ್ಷನ್ ದೃಶ್ಯಗಳನ್ನು ಡೈರೆಕ್ಷನ್ ಮಾಡಿದ್ದಾರೆ. ಯಶ್ ಮತ್ತು ಕೆವಿಎನ್ ಸಂಸ್ಥೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ.

    ‘ಕೆಜಿಎಫ್ 2’ ಹಿಟ್ ಆದ್ಮೇಲೆ ಯಶ್ ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸಿನಿಮಾ ಮುಹೂರ್ತ ಕಾರ್ಯಕ್ರಮ ಜರುಗಿದ್ದು, ಬೆಂಗಳೂರು ಮತ್ತು ಮುಂಬೈ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಚಿತ್ರದ ರಿಲೀಸ್‌ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ‘ಟಾಕ್ಸಿಕ್’ ಸೆಟ್‌ಗೆ ತೆರಳಿ ಯಶ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ‘ಟಾಕ್ಸಿಕ್’ ಸೆಟ್‌ಗೆ ತೆರಳಿ ಯಶ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸೆಟ್‌ಗೆ ತೆರಳಿ ಯಶ್‌ಗೆ (Yash) ಡಾಲಿ ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ರಾಕಿ ಭಾಯ್‌ಗೆ ಭೇಟಿಯಾಗಿ ಮದುವೆ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ‘ಮಹಾನಟಿ’ ವಿನ್ನರ್ ಎಂಟ್ರಿ- ‘ಕಾಟೇರ’ ಡೈರೆಕ್ಟರ್‌ ತರುಣ್‌ ಸಿನಿಮಾದಲ್ಲಿ ಪ್ರಿಯಾಂಕಾ

    ನ್ಯಾಷನಲ್ ಸ್ಟಾರ್ ಯಶ್ ಅವರು ಈಗ ಬೆಂಗಳೂರಿನ HMT ಫ್ಯಾಕ್ಟರಿ ಆವರಣದಲ್ಲಿ ‘ಟಾಕ್ಸಿಕ್’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಆ ಸಿನಿಮಾದ ಚಿತ್ರೀಕರಣದ ಸೆಟ್‌ಗೆ ನಟ ಡಾಲಿ ಧನಂಜಯ ಅವರು ಭೇಟಿ ನೀಡಿದ್ದಾರೆ. ತಮ್ಮ ವಿವಾಹದ ಆಹ್ವಾನ ಪತ್ರಿಕೆಯನ್ನು ಯಶ್‌ಗೆ ನೀಡಿದ್ದಾರೆ. ಆ ಸಂದರ್ಭದ ಫೋಟೋಸ್ ಇಲ್ಲಿವೆ. ಮದುವೆ ಸಲುವಾಗಿ ಧನಂಜಯ್ (Daali Dhananjay) ಅವರು ಸಿನಿಮಾ ಕೆಲಸಗಳಿಂದ ಸದ್ಯಕ್ಕೆ ಬ್ರೇಕ್ ಪಡೆದಿದ್ದಾರೆ.

    ಮೈಸೂರಿನಲ್ಲಿ ಫೆಬ್ರವರಿ 15 ಮತ್ತು 16ರಂದು ಡಾಲಿ ಮದುವೆ ನೆರವೇರಲಿದೆ. ಡಾಲಿ ಮದುವೆ ಸಂಭ್ರಮದಲ್ಲಿ ರಾಜಕೀಯ ಗಣ್ಯರು ಸಿನಿಮಾ ಸ್ಟಾರ್ಸ್ ಭಾಗಿಯಾಗಲಿದ್ದಾರೆ.

    ಇನ್ನೂ ಡಾಲಿ ಅವರು ಡಾಕ್ಟರ್ ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಾರೆ. ಇಬ್ಬರ ಮದುವೆಗೆ ಗುರುಹಿರಿಯರ ಸಮ್ಮತಿಯಿದೆ.

  • ಯಶ್ ನನ್ನ ಗೆಳೆಯ – ದುಬೈ ಅಭಿಮಾನಿಗಳ ಮುಂದೆ ಶಾರುಖ್ ಖಾನ್ ಮಾತು

    ಯಶ್ ನನ್ನ ಗೆಳೆಯ – ದುಬೈ ಅಭಿಮಾನಿಗಳ ಮುಂದೆ ಶಾರುಖ್ ಖಾನ್ ಮಾತು

    ‘ಕೆಜಿಎಫ್ 2′ (KGF 2) ಸಕ್ಸಸ್ ಬಳಿಕ ವಿಶ್ವಮಟ್ಟದಲ್ಲಿ ಯಶ್ (Yash) ಬೆಳೆದಿದ್ದಾರೆ. ಸದ್ಯ ಅವರು `ಟಾಕ್ಸಿಕ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಯಶ್ ಕುರಿತು ಶಾರುಖ್ ಖಾನ್ ಆಡಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಶ್ ನನ್ನ ಗೆಳೆಯ ಎಂದು ದುಬೈ ಫ್ಯಾನ್ಸ್ ಮುಂದೆ ಶಾರುಖ್ ಮಾತನಾಡಿದ್ದಾರೆ.

    ದಕ್ಷಿಣ ಭಾರತದ ನನ್ನ ಫ್ಯಾನ್ಸ್‌ಗೆ.. ನನಗೆ ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರ, ತಮಿಳುನಾಡಿನಲ್ಲಿ ಸ್ನೇಹಿತರು ಇದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಯಶ್, ಮಹೇಶ್ ಬಾಬು, ದಳಪತಿ ವಿಜಯ್, ರಜನಿಕಾಂತ್, ಕಮಲ್ ಹಾಸನ್ ನನ್ನ ಸ್ನೇಹಿತರು. ಅವರಿಗೆಲ್ಲ ನಾನು ಒಂದು ಮನವಿ ಮಾಡಲು ಇಷ್ಟಪಡುತ್ತೇನೆ. ಅವರೆಲ್ಲ ತುಂಬಾ ವೇಗವಾಗಿ ನೃತ್ಯ ಮಾಡುವುದು ನಿಲ್ಲಿಸಬೇಕು. ಅವರಿಗೆ ಸಮನಾಗಿ ಡ್ಯಾನ್ಸ್ ಮಾಡಲು ನನಗೆ ಕಷ್ಟ ಆಗುತ್ತದೆ ಎಂದು ಶಾರುಖ್ ಖಾನ್ ನಗುತ್ತಾ ದುಬೈ ಈವೆಂಟ್‌ವೊಂದರಲ್ಲಿ ಮಾತನಾಡಿದ್ದಾರೆ. ಕಿಂಗ್ ಖಾನ್ ಆಡಿರುವ ಮಾತು ಸಖತ್ ವೈರಲ್ ಆಗಿದೆ.

    ಇನ್ನೂ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಜೊತೆ ಬಾಲಿವುಡ್ ‘ರಾಮಾಯಣ’ (Ramayana) ಚಿತ್ರದ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಇತ್ತ ಶಾರುಖ್ ಅವರು ಮಗಳನ್ನು ಬಿಗ್ ಬಜೆಟ್ ಸಿನಿಮಾ ಮೂಲಕ ಲಾಂಚ್ ಮಾಡಲು ಎದುರು ನೋಡುತ್ತಿದ್ದಾರೆ.

  • ಯಶ್ ಫ್ಯಾನ್ಸ್‌ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್‌ನಿಂದ ಸಿಕ್ತು ಸಿಹಿ ಸುದ್ದಿ

    ಯಶ್ ಫ್ಯಾನ್ಸ್‌ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್‌ನಿಂದ ಸಿಕ್ತು ಸಿಹಿ ಸುದ್ದಿ

    ನ್ಯಾಷನಲ್ ಸ್ಟಾರ್ ಯಶ್ (Yash) ಅವರು ಇದೇ ಜ.8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ದಿನ ‘ಟಾಕ್ಸಿಕ್’ ಚಿತ್ರದ ಬಗ್ಗೆ ಏನಾದರೂ ಅಪ್‌ಡೇಟ್ ಸಿಗಬಹುದು ಎಂದು ನಿರೀಕ್ಷಿಸಿದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯ ಚಿತ್ರತಂಡದ ಕಡೆಯಿಂದ ಬಿಗ್ ನ್ಯೂಸ್‌ವೊಂದು ಸಿಕ್ಕಿದೆ. ಸಿನಿಮಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

    ಯಶ್ ಬರ್ತ್‌ಡೇಯಂದು (ಜ.8) ಬೆಳಗ್ಗೆ 10:25ಕ್ಕೆ ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್’ (Toxic) ಬಗ್ಗೆ ಅಪ್‌ಡೇಟ್ ಸಿಗಲಿದೆ ಎಂದು ಕೆವಿಎನ್ (KVN Productions) ನಿರ್ಮಾಣ ಸಂಸ್ಥೆ ತಿಳಿಸಿದೆ. ಯಶ್ ಕೂಡ ಇದೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಸದ್ಯ ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ಯಶ್ ಅವರು ಹಳೆಯ ಕಾಲದ ಕಾರಿನ ಮೇಲೆ ನಿಂತಿದ್ದಾರೆ. ಅವರ ಬಾಯಲ್ಲಿ ಸಿಗರೇಟ್ ಇದೆ. ತಲೆಗೆ ಹ್ಯಾಟ್ ಧರಿಸಿದ್ದಾರೆ. ಇದು ಅವರ ಗೆಟಪ್ ಎಂದು ಹೇಳಲಾಗುತ್ತಿದೆ. ಈ ಮೊದಲು ಟೈಟಲ್ ಟೀಸರ್ ಅನೌನ್ಸ್ ಮಾಡುವಾಗಲೂ ಯಶ್ ಅವರು ತಲೆಗೆ ಹ್ಯಾಟ್ ಧರಿಸಿಯೇ ಕಾಣಿಸಿಕೊಂಡಿದ್ದರು. ಇದೇ ಲುಕ್ ಸಿನಿಮಾದಲ್ಲೂ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಫ್ಯಾನ್ಸ್ ಜ.8ರಂದು ಯಶ್ ಲುಕ್ ನೋಡಲು ಕಾಯುತ್ತಿದ್ದಾರೆ.

    ಇನ್ನೂ ಜ.8ರಂದು ಬೆಂಗಳೂರಿನಲ್ಲಿ ಇರುವುದಿಲ್ಲ ಬರ್ತ್‌ಡೇ ಆಚರಣೆ ಮಾಡಲ್ಲ ಎಂದು ಫ್ಯಾನ್ಸ್ ಯಶ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಯಶ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

    ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು (ಜ.8) ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ ಎಂದಿದ್ದಾರೆ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್ ಎಂದು ಬರೆದಿದ್ದರು.

    ಅಂದಹಾಗೆ, ಕಳೆದ ವರ್ಷ ಯಶ್ ಹುಟ್ಟುಹಬ್ಬದಂದು ಅವರ ಫ್ಲೆಕ್ಸ್ ಕಟ್ಟುವಾಗ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಮೂವರು ಯುವಕರು ಮೃತಪಟ್ಟಿದ್ದರು. ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರಬೇಡಿ ಎಂದು ಯಶ್ ಮನವಿ ಮಾಡಿದ್ದಾರೆ.

  • ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ‘ಟಾಕ್ಸಿಕ್‌’ ಚಿತ್ರದ ಬಗ್ಗೆ ಬಿಗ್‌ ನ್ಯೂಸ್‌

    ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ‘ಟಾಕ್ಸಿಕ್‌’ ಚಿತ್ರದ ಬಗ್ಗೆ ಬಿಗ್‌ ನ್ಯೂಸ್‌

    ನ್ಯಾಷನಲ್‌ ಸ್ಟಾರ್‌ ಯಶ್‌ (Yash) ನಟನೆಯ ‘ಟಾಕ್ಸಿಕ್‌’ (Toxic) ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಜ.8ರಂದು ಯಶ್‌ ಹುಟ್ಟುಹಬ್ಬದ ಹಿನ್ನೆಲೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಡಲು ಮುಂದಾಗಿದ್ದಾರೆ. ಟಾಕ್ಸಿಕ್‌ ತಂಡದಿಂದ ಇದೀಗ ಬಿಗ್‌ ಅಪ್‌ಡೇಟ್‌ವೊಂದು ಹೊರಬಿದ್ದಿದೆ.

    ಯಶ್‌ ಮತ್ತು ಕೆವಿನ್‌ ಸಂಸ್ಥೆಯ ನಿರ್ಮಾಣದಲ್ಲಿ ‘ಟಾಕ್ಸಿಕ್‌’ ಸಿನಿಮಾ ಮೂಡಿ ಬರಲಿದೆ. ಈ ಹಿನ್ನೆಲೆ ಕೆವಿಎನ್‌ ಸಂಸ್ಥೆ ಕಡೆಯಿಂದ ಬಿಗ್‌ ನ್ಯೂಸ್‌ ಸಿಕ್ಕಿದೆ. ಟಾಕ್ಸಿಕ್‌ ಚಿತ್ರದ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್‌ ಸಿಗಲಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಹಾಗಾಗಿ ಜ.8ರಂದು ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಏನದು ಎಂದು ತಿಳಿದುಕೊಳ್ಳಲು ಯಶ್‌ ಬರ್ತ್‌ಡೇ ದಿನದವರೆಗೂ ಕಾಯಬೇಕಿದೆ.

     

    View this post on Instagram

     

    A post shared by KVN Productions (@kvn.productions)

    ಇನ್ನೂ ಜ.8ರಂದು ಬೆಂಗಳೂರಿನಲ್ಲಿ ಇರುವುದಿಲ್ಲ ಬರ್ತ್‌ಡೇ ಆಚರಣೆ ಮಾಡಲ್ಲ ಎಂದು ಫ್ಯಾನ್ಸ್‌ ಯಶ್‌ ಈಗಾಗಲೇ ಮಾಹಿತಿ ನೀಡಿದ್ದಾರೆ. ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಯಶ್ ಬರೆದುಕೊಂಡಿದ್ದರು.

     

    View this post on Instagram

     

    A post shared by KVN Productions (@kvn.productions)

    ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು (ಜ.8) ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ ಎಂದಿದ್ದಾರೆ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್ ಎಂದು ಬರೆದಿದ್ದರು.

    ಅಂದಹಾಗೆ, ಕಳೆದ ವರ್ಷ ಯಶ್ ಹುಟ್ಟುಹಬ್ಬದಂದು ಅವರ ಫ್ಲೆಕ್ಸ್ ಕಟ್ಟುವಾಗ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಮೂವರು ಯುವಕರು ಮೃತಪಟ್ಟಿದ್ದರು. ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರಬೇಡಿ ಎಂದು ಯಶ್ ಮನವಿ ಮಾಡಿದ್ದಾರೆ.

  • ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್?

    ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್?

    ಬಾಲಿವುಡ್ ನಟ ಅನಿಲ್ ಕಪೂರ್ (Anil Kapoor) ಅವರ ಮುಂದಿನ ಸಿನಿಮಾ ಕುರಿತು ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್ ಅವರು ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ದಿಲ್ಜಿತ್ ದೋಸಾಂಜ್ ಸಂಗೀತ ಕಚೇರಿಯಲ್ಲಿ ಮದ್ಯ ಮತ್ತು ಮಾಂಸದೂಟ: ಬಜರಂಗದಳ ಪ್ರತಿಭಟನೆ

    ಮುಂಬೈನಲ್ಲಿ ‘ಟಾಕ್ಸಿಕ್’ (Toxic) ಸಿನಿಮಾ ಶೂಟಿಂಗ್ ನಡೆಯುತ್ತಿರುವ ಸ್ಥಳದಲ್ಲಿ ಕಿಯಾರಾ ಅಡ್ವಾಣಿ ಜೊತೆ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ಆ ನಂತರ ಇಬ್ಬರೂ ಬೋಟ್‌ನಲ್ಲಿ ಕುಳಿತು ತೆರಳಿದ್ದಾರೆ. ಹಾಗಾಗಿ ಅನಿಲ್ ಕಪೂರ್ ಕೂಡ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.

     

    View this post on Instagram

     

    A post shared by Snehkumar Zala (@snehzala)

    ಅಂದಹಾಗೆ, 1983ರಲ್ಲಿ ‘ಪಲ್ಲವಿ ಅನುಪಲ್ಲವಿ’ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಈ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ಖ್ಯಾತ ನಿರ್ದೇಶನ ಮಣಿರತ್ನಂ ನಿರ್ದೇಶಿಸಿದರು. ಒಂದು ವೇಳೆ, ‘ಟಾಕ್ಸಿಕ್‌’ನಲ್ಲಿ ಅನಿಲ್ ನಟಿಸಿದ್ದೇ ಆದರೆ 41 ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಂತಾಗುತ್ತದೆ.

    ಇನ್ನೂ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆ ಕಿಯಾರಾ, ನಯನತಾರಾ, ಹುಮಾ ಖುರೇಶಿ ಸೇರಿದಂತೆ ಅನೇಕರು ಹೆಸರು ಸದ್ದು ಮಾಡುತ್ತಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

  • ‘ಟಾಕ್ಸಿಕ್’ ಚಿತ್ರತಂಡಕ್ಕೆ ರಿಲೀಫ್ – ನಿರ್ಮಾಪಕರ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

    ‘ಟಾಕ್ಸಿಕ್’ ಚಿತ್ರತಂಡಕ್ಕೆ ರಿಲೀಫ್ – ನಿರ್ಮಾಪಕರ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic Film) ಸಿನಿಮಾ ತಂಡಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ನಿರ್ಮಾಪಕರ ವಿರುದ್ಧ ಹಾಕಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ (High Court) ಮಧ್ಯಂತರ ತಡೆ ನೀಡಿದೆ. ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು

    ‘ಟಾಕ್ಸಿಕ್’ ಸಿನಿಮಾದ ಸೆಟ್ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಕೆವಿಎನ್ ಸಂಸ್ಥೆ ಮತ್ತು ಮಾನ್ ಸ್ಟರ್ ಕ್ರಿಯೆಷನ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇಂದು (ಡಿ.5) ಈ ಅರ್ಜಿ ವಿಚಾರಣೆ ಮಾಡಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ‘ಟಾಕ್ಸಿಕ್’ ಸಿನಿಮಾ ನಿರ್ಮಾಪಕರ ವಿರುದ್ಧ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

    ಅರ್ಜಿದಾರರ ವಾದ ಏನಿತ್ತು?

    ‘ಟಾಕ್ಸಿಕ್’ ಚಿತ್ರತಂಡ ಸೆಟ್ ಹಾಕಿದ ಜಾಗವನ್ನು 1963ರಲ್ಲೇ ರಾಜ್ಯ ಸರ್ಕಾರ ಹೆಚ್ ಎಂಟಿ ಸಂಸ್ಥೆಗೆ ನೀಡಿದೆ. ಆಗ ಒಟ್ಟು 400 ಎಕರೆ ಭೂಮಿಯನ್ನು ಹೆಚ್‌ಎಂಟಿ ಸಂಸ್ಥೆಗೆ ನೀಡಲಾಗಿತ್ತು. ಈ ಜಮೀನಿನ ಪೈಕಿ 18 ಎಕರೆಯನ್ನು ಕೆನರಾ ಬ್ಯಾಂಕ್‌ಗೆ ಹೆಚ್‌ಎಂಟಿ ಸಂಸ್ಥೆಯು ಮಾರಾಟ ಮಾಡಿದೆ. ಕೆನರಾ ಬ್ಯಾಂಕ್‌ನಿಂದ ಲೀಸ್ ಪಡೆದು ‘ಟಾಕ್ಸಿಕ್’ ಸಿನಿಮಾ ತಂಡ ಇಲ್ಲಿ 30 ಕೋಟಿ ರೂ. ಹೂಡಿಕೆ ಮಾಡಿ ಸಿನಿಮಾ ಸೆಟ್ ಹಾಕಲಾಗಿದೆ. ಸರ್ಕಾರವೇ ಇದು ಅರಣ್ಯ ಭೂಮಿಯಲ್ಲವೆಂದು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಶೂಟಿಂಗ್ ಸೆಟ್ ನಿರ್ಮಾಣಕ್ಕೆ ಇಲ್ಲಿ ಯಾವುದೇ ಮರಗಳನ್ನು ಕಡಿದಿಲ್ಲ ಎಂದು ‘ಟಾಕ್ಸಿಕ್’ ಚಿತ್ರ ನಿರ್ಮಾಪಕರ ಪರ ವಕೀಲ ಬಿಪಿಎನ್ ಹೆಗ್ಡೆ ವಾದಿಸಿದರು.

    ಅರ್ಜಿದಾರರ ವಾದ ಆಲಿಸಿದ ಕೋರ್ಟ್ ಇದು ‘ಟಾಕ್ಸಿಕ್’ 1, 2, 3 ತೆಗೆಯೋಕೆ ಶಾಶ್ವತ ಸೆಟ್ ಹಾಕಿದ್ದೀರಾ ಎಂದು ಪ್ರಶ್ನಿಸಿ ಎಫ್‌ಆರ್‌ಗೆ ಕೋರ್ಟ್ ಮಧ್ಯಂತರ ತಡೆ ನೀಡಿತು.