Tag: Towing

  • ಆಗಸ್ಟ್ ಅಂತ್ಯದಿಂದ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಜಾರಿ: ಪರಮೇಶ್ವರ್

    ಆಗಸ್ಟ್ ಅಂತ್ಯದಿಂದ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಜಾರಿ: ಪರಮೇಶ್ವರ್

    ಬೆಂಗಳೂರು: ಸಾರ್ವಜನಿಕರ ಪರ ವಿರೋಧದ ಚರ್ಚೆ ನಡುವೆ ನಗರದಲ್ಲಿ (Bengaluru) ಮತ್ತೆ ವಾಹನಗಳ ಟೋಯಿಂಗ್ (Towing) ವ್ಯವಸ್ಥೆ ಜಾರಿ ಆಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ (G.Parameshwar) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರ ಮಾಧ್ಯಮದವರ ಜೊತೆ ಅವರು ಮಾತಾಡಿದರು. ಈ ವೇಳೆ, ಆಗಸ್ಟ್ ಅಂತ್ಯಕ್ಕೆ ಮತ್ತೆ ಟೋಯಿಂಗ್ ಆರಂಭಿಸ್ತೇವೆ. ಇಲಾಖೆಯಿಂದಲೇ ಟೋಯಿಂಗ್ ಮಾಡಲಾಗುವುದು, ಅದಕ್ಕಾಗಿ ಖಾಸಗಿಯವರಿಗೆ ಗುತ್ತಿಗೆ ಕೊಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: 2 ವರ್ಷದ ಬಳಿಕ ಬೆಂಗಳೂರಿನಲ್ಲಿ ಟೋಯಿಂಗ್‌! – ಎಲ್ಲೆಲ್ಲಿ ಬಿಸಿ ತಟ್ಟಲಿದೆ?

    ರಸ್ತೆಗಳಲ್ಲಿ ನಿಯಮ ಮೀರಿ ನಿಲ್ಲಿಸುವ ವಾಹನಗಳ ಪಾರ್ಕಿಂಗ್ ತಲೆನೋವಾಗಿದ್ದು, ಟೋಯಿಂಗ್ ವೇಳೆ ಟ್ರಾಫಿಕ್ ಪೊಲೀಸರಿಗೆ ಜನರ ಜತೆ ಮಾನವೀಯತೆಯಿಂದ, ಶಾಂತಿಯಿಂದ ವರ್ತಿಸಲು ಸೂಚಿಸಿದ್ದೇವೆ.

    ಈಗಾಗಲೇ ಟ್ರಾಫಿಕ್ ಪೊಲೀಸ್ ವಿಭಾಗ ಟೋಯಿಂಗ್ ಮಾಡುವ ವಾಹನಗಳಿಗಾಗಿ ಬಿಬಿಎಂಪಿಗೆ ಮನವಿ ಸಲ್ಲಿಸಿದೆ. ನಗರದಲ್ಲಿ 49 ಸಂಚಾರ ಪೊಲೀಸ್‌ ಠಾಣೆಗಳಿದ್ದು, 10 ಸಂಚಾರ ಉಪ ವಿಭಾಗಗಳಿಗೆ ತಲಾ ಒಂದರಂತೆ ಟೋಯಿಂಗ್‌ ವಾಹನ ನಿಯೋಜಿಸಲು ಉದ್ದೇಶಿಸಲಾಗಿದೆ. ನಗರದಲ್ಲಿ ಪ್ರತಿನಿತ್ಯ ಸರಾಸರಿ 2,300 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ವಾಹನಗಳ ಸಂಖ್ಯೆಯು 1.25 ಕೋಟಿಯ ಗಡಿ ದಾಟಿದೆ. ವಾಹನಗಳ ನಿರ್ಬಂಧಿತ ಸ್ಥಳಗಳಲ್ಲಿ ನಿಲ್ಲಿಸುವುದನ್ನು ತಡೆಯಲು ಟೋಯಿಂಗ್ ಮರುಜಾರಿಯಾಗ್ತಿದೆ.

    ಬಿಜೆಪಿ ಅವಧಿಯಲ್ಲಿ ಟೋಯಿಂಗ್ ವ್ಯವಸ್ಥೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ಬಂದು ಸ್ಥಗಿತ ಮಾಡಲಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವಸೂಲಿ ಮಾಡೋ ಉದ್ದೇಶ: ನಿಖಿಲ್

  • ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವಸೂಲಿ ಮಾಡೋ ಉದ್ದೇಶ: ನಿಖಿಲ್

    ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವಸೂಲಿ ಮಾಡೋ ಉದ್ದೇಶ: ನಿಖಿಲ್

    ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮತ್ತೆ ಟೋಯಿಂಗ್ (Towing) ಶುರು ಮಾಡಲು ಹೊರಟಿರುವ ಸರ್ಕಾರದ ನಡೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಸರ್ಕಾರದ ನಡೆ ಖಂಡಿಸಿರುವ ನಿಖಿಲ್, ಟೋಯಿಂಗ್ ಮರು ಪ್ರಾರಂಭ ವಸೂಲಿ ಉದ್ದೇಶ ಕಾಣಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಕ್ಷಮೆ ಕೇಳದೇ ಹೋದ್ರೆ ಬ್ಯಾನ್ ಮಾಡಬೇಕು: ಶಿವರಾಜ್ ತಂಗಡಗಿ

    ಎಕ್ಸ್‌ನಲ್ಲಿ ಏನಿದೆ?
    ಬೆಂಗಳೂರು ನಗರ ವಾಸಿಗಳಿಗೆ ಕಿರಿಕಿರಿ ಮಾಡುತ್ತಿದ್ದ ಟೋಯಿಂಗ್ ಪ್ರಕ್ರಿಯೆಯನ್ನು ಜನಾಕ್ರೋಶದ ಮೇರೆಗೆ 2022ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಮರು ಆದೇಶ ಮಾಡಿರುವುದರ ಹಿಂದೆ, ವಸೂಲಿ ಉದ್ದೇಶ ಕಾಣುತ್ತಿದೆ. ಮೂಲಭೂತ ಸೌಕರ್ಯಗಳನ್ನು ಕೊಡದೇ ಜನರನ್ನು ಸತಾಯಿಸುತ್ತಿರುವ ಕಾಂಗ್ರೆಸ್ ಸರ್ಕಾರ ದಿಕ್ಕೆಟ್ಟು ಆದಾಯದ ಮೂಲಗಳನ್ನು ಹುಡುಕುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಇದನ್ನೂ ಓದಿ: ರಾಯಚೂರು | ಭಾವಚಿತ್ರ ಸುಟ್ಟು ಕಮಲ್ ಹಾಸನ್ ವಿರುದ್ಧ ಆಕ್ರೋಶ

    ಇತ್ತೀಚೆಗೆ ನೋಂದಣಿ ಶುಲ್ಕ, ಮೆಟ್ರೋ-ಬಸ್ ಪ್ರಯಾಣ ದರ ಹೆಚ್ಚಳ, ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಬಿಯರ್ ಹಾಗೂ ಮದ್ಯದ ಮೂಲ ಬೆಲೆಗಿಂತ ದುಪಟ್ಟು ಟ್ಯಾಕ್ಸ್ ಏರಿಕೆಯಂತಹ ಅವೈಜ್ಞಾನಿಕ ರೀತಿ ಅನುಸರಿಸಿದರೂ ಕೂಡ, ರಾಜ್ಯದ ಖಾಲಿ ಬೊಕ್ಕಸ ಸರಿಯಾದಂತೆ ಕಾಣುತ್ತಿಲ್ಲ. ಸಂಚಾರಿ ಪೊಲೀಸ್ ಹಾಗೂ ಟೋಯಿಂಗ್ ಮೂಲಕ ‘ಕಲೆಕ್ಷನ್’ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಈ ಸರ್ಕಾರದ ಪಿತೂರಿ ನಡೆದಿದೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು 10 ಬಾರಿ ಇರಿದು ಕೊಂದ ಪತಿ

    ‘ಬ್ರಾಂಡ್ ಬೆಂಗಳೂರಿನ’ ಕನಸುಗಾರನಾದ ಡಿಕೆ ಶಿವಕುಮಾರ್ ಅವರೇ, ಟೋಯಿಂಗ್ ವಾಹನಗಳು ಅಡ್ಡಾಡುವುದಕ್ಕಾಗಿಯಾದರೂ ಬೆಂಗಳೂರಿನ ಗುಂಡಿಗಳನ್ನು ಸರಿ ಮಾಡುವಿರೇ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಾರವಾರ: ಕಡಲ ತೀರಕ್ಕೆ ತೇಲಿಬಂದ ಹಡಗಿನ ರಾಫ್ಟ್‌ – ಕೇರಳ ಕೊಚ್ಚಿಯಲ್ಲಿ ಮುಳುಗಿದ್ದ ಹಡಗಿನದ್ದಾ?

  • ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ : ಪರಮೇಶ್ವರ್‌ ಅಧಿಕೃತ ಘೋಷಣೆ

    ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ : ಪರಮೇಶ್ವರ್‌ ಅಧಿಕೃತ ಘೋಷಣೆ

    ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ (Towing)  ಶುರುವಾಗಲಿದೆ. ಗೃಹ ಸಚಿವ ಪರಮೇಶ್ವರ್‌ ಅವರು ಅಧಿಕೃತವಾಗಿ ಟೋಯಿಂಗ್‌ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

    ಬಾಡಿಗೆ ಟೋಯಿಂಗ್ ವಾಹನ ಬಳಸದೇ ಇಲಾಖೆಯ ವಾಹನ ಬಳಸಿಕೊಂಡು ಟೋಯಿಂಗ್ ನಡೆಸಲು ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.

    ಟೋಯಿಂಗ್‌ ಆರಂಭದ ಬಗ್ಗೆ ಕೆಲ ದಿನಗಳಿಂದಲೇ ಚರ್ಚೆ ನಡೆಯುತ್ತಿತ್ತು. ಈಗ ಸರ್ಕಾರವೇ ಅಧಿಕೃತವಾಗಿ ಟೋಯಿಂಗ್‌ ಆರಂಭವಾಗುವ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಸಾಲು ಸಾಲು ಉಚ್ಛಾಟನೆ, ತಾಂತ್ರಿಕವಾಗಿ ಬಿಜೆಪಿ ಬಲಾಬಲ ಕುಸಿತ

    ಏನಿದು ಟೋಯಿಂಗ್‌?
    ಪಾರ್ಕಿಂಗ್‌ ಅಲ್ಲದ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೆ ಟೋಯಿಂಗ್‌ ವಾಹನ ಅವುಗಳನ್ನು ಎತ್ತಿಕೊಂಡು ಹೋಗಿ ಸಂಚಾರ ಠಾಣೆಯ ಮುಂದೆ ಇಡುತ್ತದೆ. ಮಾಲೀಕರು ಠಾಣೆಗೆ ತೆರಳಿ ದಂಡ ಕಟ್ಟಿ ವಾಹನಗಳನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೊಮ್ಮಾಯಿ ಸರ್ಕಾರ 2022ರಲ್ಲಿ ಟೋಯಿಂಗ್‌ ರದ್ದು ಮಾಡಿತ್ತು.

  • 2 ವರ್ಷದ ಬಳಿಕ ಬೆಂಗಳೂರಿನಲ್ಲಿ ಟೋಯಿಂಗ್‌! – ಎಲ್ಲೆಲ್ಲಿ ಬಿಸಿ ತಟ್ಟಲಿದೆ?

    2 ವರ್ಷದ ಬಳಿಕ ಬೆಂಗಳೂರಿನಲ್ಲಿ ಟೋಯಿಂಗ್‌! – ಎಲ್ಲೆಲ್ಲಿ ಬಿಸಿ ತಟ್ಟಲಿದೆ?

    – ಟ್ರಾಫಿಕ್‌ ಹೆಚ್ಚಾದ ಬೆನ್ನಲ್ಲೇ ಪೊಲೀಸ್‌ ಇಲಾಖೆಯಿಂದ ಚಿಂತನೆ
    – ಮಾನದಂಡ ನಿಗದಿಯಾದ ಬಳಿಕ ಟೋಯಿಂಗ್‌ ಕಾರ್ಯಾಚರಣೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಾಹನ ಸಂಚಾರ (Traffic) ದಟ್ಟಣೆ ಹಿನ್ನೆಲೆಯಲ್ಲಿ ಮತ್ತೆ ಟೋಯಿಂಗ್ (Towing) ಕಾರ್ಯಾಚರಣೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

    ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಗರದಲ್ಲಿ ವಾಹನಗಳ ಟೋಯಿಂಗ್ ನಿಲ್ಲಿಸಲಾಗಿತ್ತು. ಆದರೆ ಇತ್ತೀಚಿಗೆ ಸವಾರರು ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಪಾರ್ಕ್‌ ಮಾಡುತ್ತಿರುವ ಪ್ರವೃತ್ತಿ ಹೆಚ್ಚಾಗಿದೆ.

    ಈ ರೀತಿ ಪಾರ್ಕ್‌ ಮಾಡುತ್ತಿರುವುದರಿಂದ ಆ ಜಾಗಗಳಲ್ಲಿ ಟ್ರಾಫಿಕ್ ಹೆಚ್ಚಾಗುವುದರ ಜೊತೆಗೆ ಇತರೇ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ದೂರುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮತ್ತೆ ಅಗತ್ಯ ಸ್ಥಳಗಳಲ್ಲಿ ಟೋಯಿಂಗ್ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.

     

    ಎಲ್ಲೆಲ್ಲಿ ಟೋಯಿಂಗ್‌?
    ಎಂಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಕಮರ್ಷಿಯಲ್ ಸ್ಟ್ರೀಟ್, ಕೆಆರ್‌ ಮಾರ್ಕೆಟ್‌, ಚಿಕ್ಕಪೇಟೆ, ಸೇರಿದಂತೆ 70 ಸಿಬಿಡಿ ಜಂಕ್ಷನ್‌ಗಳನ್ನು ಗುರುತಿಸಲಾಗಿದೆ. ಈ ಜಂಕ್ಷನ್‌ಗಳಲ್ಲಿ ಮಾತ್ರ ಟೋಯಿಂಗ್ ಮಾಡಲು ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಮ್ಮನಹಳ್ಳಿಯಲ್ಲಿ ಕಾಮುಕರ ಅಟ್ಟಹಾಸ!

    ಟೋಯಿಂಗ್ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಬೇಕೇ? ಅಥವಾ ಪೊಲೀಸ್ ಇಲಾಖೆಯೇ ಮಾಡಬೇಕೇ? ಸೇರಿದಂತೆ ಟೋಯಿಂಗ್‌ ಮಾಡಲು ಏನೇನು ಮಾನದಂಡ ಹಾಕಬೇಕು ಎಂಬುದರ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

     

  • ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವೆಹಿಕಲ್‌ಗಳ ಕಾರ್ಯಾರಂಭ

    ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವೆಹಿಕಲ್‌ಗಳ ಕಾರ್ಯಾರಂಭ

    – ಆದ್ಯತೆ ಮೇರೆಗೆ ಮೆಜೆಸ್ಟಿಕ್‌ ಸುತ್ತಮುತ್ತ ಟೋಯಿಂಗ್‌ಗೆ ಅನುಮತಿ

    ಬೆಂಗಳೂರು: ಕೋವಿಡ್ ಕಾಲದಲ್ಲಿ ನಿಂತಿದ್ದ ಟೋಯಿಂಗ್ (Towing) ಇದೀಗ ಬೆಂಗಳೂರಲ್ಲಿ (Bengaluru) ಪುನರಾರಂಭವಾಗಿದೆ. ಟೋಯಿಂಗ್ ಸಿಬ್ಬಂದಿಗಳ ಮೇಲೆ ಸಾಲು ಸಾಲು ಆರೋಪಗಳು ಬಂದ ಹಿನ್ನೆಲೆ ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಇದೀಗ ಮೆಜೆಸ್ಟಿಕ್ (Mejestic) ಏರಿಯಾದಲ್ಲಿ ಮತ್ತೆ ಟೋಯಿಂಗ್ ಕಾರ್ಯಾರಂಭವಾಗಿದೆ.

    ಅದು ಕೋವಿಡ್ ಕಾಲ. ಬೆಂಗಳೂರಲ್ಲಿ ಟೋಯಿಂಗ್ ಸಿಬ್ಬಂದಿ ವಾಹನ ಸವಾರರ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ನೋ ಪಾರ್ಕಿಂಗ್‌ನಲ್ಲಿರುವ ವೆಹಿಕಲ್‌ಗಳನ್ನು ಟೋ ಮಾಡುವ ಮೊದಲು ಅನೌನ್ಸ್ ಮಾಡುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬಂದಿದ್ದವು. ದೂರುಗಳು ಬಂದ ಹಿನ್ನೆಲೆ ಟೋಯಿಂಗ್ ಸಂಪೂರ್ಣವಾಗಿ ಸ್ಟಾಪ್ ಮಾಡಿಸಲಾಗಿತ್ತು. ಇದೀಗ ಮತ್ತೆ ಮೂರ್ನಾಲ್ಕು ವರ್ಷಗಳ ಬಳಿಕ ಟೋಯಿಂಗ್ ಆರಂಭವಾಗಿದೆ. ಇದನ್ನೂ ಓದಿ: ಮೆಡಿಕಲ್ ಸೀಟ್ ಸಿಗದೇ ಮನನೊಂದು ಯುವತಿ ಆತ್ಮಹತ್ಯೆ

    ಆದ್ಯತೆ ಮೇರೆಗೆ ಮೆಜೆಸ್ಟಿಕ್‌ನಲ್ಲಿ ಎರಡು ಟೋಯಿಂಗ್ ವಾಹನಗಳು ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗಿದೆ. ಮೆಜೆಸ್ಟಿಕ್‌ನ ಜನಸಂದಣಿ ಪ್ರದೇಶದಲ್ಲಿ ನೋ ಪಾರ್ಕಿಂಗ್‌ನಲ್ಲಿರೋ ವೆಹಿಕಲ್‌ಗಳನ್ನು ಉಪ್ಪಾರಪೇಟೆ ಸಂಚಾರ ಪೊಲೀಸರು ಟೋ ಮಾಡುತ್ತಿದ್ದಾರೆ. ಟೋಯಿಂಗ್ ಮಾಡುವ ಮುನ್ನ 5 ನಿಮಿಷಗಳ ಕಾಲ ಅನೌನ್ಸ್ ಮಾಡುತ್ತಿದ್ದು, ಐದು ನಿಮಿಷಗಳ ಒಳಗಾಗಿ ವಾಹನ ತೆಗೆಯದಿದ್ದರೆ ಟೋಯಿಂಗ್ ಮಾಡಲಾಗುತ್ತಿದೆ. ಬಿಬಿಎಂಪಿ ವೆಹಿಕಲ್‌ಗಳನ್ನು ನೀಡಿರೋ ಹಿನ್ನೆಲೆ ಟೋಯಿಂಗ್ ಚಾರ್ಜ್ ಹಾಕದೆ ಕೇವಲ ನೋ ಪಾರ್ಕಿಂಗ್ ಫೈನ್ 1,000 ರೂ. ಹಾಕಲಾಗುತ್ತಿದೆ. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

    ಹಂತ ಹಂತವಾಗಿ ಬೆಂಗಳೂರಿನಾದ್ಯಂತ ಟೋಯಿಂಗ್ ವೆಹಿಕಲ್‌ಗಳು ತಮ್ಮ ಕೆಲಸ ಆರಂಭಿಸಬಹುದು. ಅನೌನ್ಸ್ ಮೆಂಟ್ ರೂಲ್ಸ್ ಏನಿದೆಯೋ ಅದನ್ನು ಪೊಲೀಸರು ಫಾಲೋ ಮಾಡಬೇಕು. ಇನ್ನು ನೋ ಪಾರ್ಕಿಂಗ್‌ನಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡುವ ಸವಾರರು 1,000 ರೂ ಹೆಚ್ಚುವರಿಯಾಗಿ ಇಟ್ಟುಕೊಂಡಿರಿ. ಇಲ್ಲ ಪಾರ್ಕಿಂಗ್ ಜಾಗದಲ್ಲೇ ವೆಹಿಕಲ್ ಪಾರ್ಕಿಂಗ್ ಮಾಡಿ. ಇದನ್ನೂ ಓದಿ: 

  • ರಸ್ತೆಗಿಳಿಯಲಿದೆ ಟೋಯಿಂಗ್ ವಾಹನಗಳು – BBMP ನಿರ್ಧಾರಕ್ಕೆ ವಾಹನ ಸವಾರರು ಗರಂ

    ರಸ್ತೆಗಿಳಿಯಲಿದೆ ಟೋಯಿಂಗ್ ವಾಹನಗಳು – BBMP ನಿರ್ಧಾರಕ್ಕೆ ವಾಹನ ಸವಾರರು ಗರಂ

    ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರೇ ಎಚ್ಚರ. ಇಷ್ಟು ದಿನ ಬೆಂಗಳೂರು (Bengaluru) ಟ್ರಾಫಿಕ್ ಪೊಲೀಸರು ನಿಲ್ಲಿಸಿದ್ದ ಟೋಯಿಂಗ್ (Towing) ಅನ್ನು ಮತ್ತೆ ಶುರು ಮಾಡೋ ಪ್ಲಾನ್ ನಡೆಯುತ್ತಿದೆ. ಆದರೆ ಇನ್ಮುಂದೆ ಟೋಯಿಂಗ್ ಮಾಡೋ ಪ್ಲಾನ್ ಮಾತ್ರ ಟ್ರಾಫಿಕ್ ಪೊಲೀಸರ ಬದಲು ಬಿಬಿಎಂಪಿ (BBMP) ಮಾಡ್ತಿದೆ.

    BBMP

    ಕಳೆದ ಆರೇಳು ತಿಂಗಳ ಹಿಂದೆ ಬೆಂಗಳೂರು ಸಂಚಾರಿ ಪೊಲೀಸರ ವಿರುದ್ಧ ಜನಕ್ರೋಶ ವ್ಯಕ್ತವಾಗಿತ್ತು. ಕರುಣೇ ಇಲ್ಲದ ಟ್ರಾಫಿಕ್ ಪೊಲೀಸರು ಬೇಕಾಬಿಟ್ಟಿಯಾಗಿ ಟೋಯಿಂಗ್ ಮಾಡ್ತಾರೆ, ಗಾಡಿ ಡ್ಯಾಮೇಜ್ ಆಗುತ್ತೆ, ಜನರ ಜೊತೆ ಟೋಯಿಂಗ್ ಮಾಡೋ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ದರ್ಪದಿಂದ ನಡೆದುಕೊಳ್ಳುತ್ತಾರೆ ಅಂತಾ ಜನ ಟ್ರಾಫಿಕ್ ಪೊಲೀಸರ ವಿರುದ್ಧ ಮತ್ತು ಟೋಯಿಂಗ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹಲವು ಕಡೆ ಗಲಾಟೆಗಳು ಆಗಿತ್ತು. ಇದರಿಂದ ಸರ್ಕಾರ ಮತ್ತು ಟ್ರಾಫಿಕ್ ಪೊಲೀಸ್ ಇಲಾಖೆ ಟೋಯಿಂಗ್ ವ್ಯವಸ್ಥೆಯನ್ನು ಪೊಲೀಸರು ಕೈಬಿಡುವಂತೆ ಮಾಡಿತ್ತು. ಇದನ್ನೂ ಓದಿ: ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದ ಕೂಲಿ ಕಾರ್ಮಿಕರಿಗೆ ವಾಹನ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು

     

    ಇದೀಗ ಮತ್ತೆ ಟೋಯಿಂಗ್ ಸದ್ದು ಕೇಳಿ ಬರ್ತಿದೆ. ಆದರೆ ಈ ಬಾರಿ ಟೋಯಿಂಗ್ ಮಾಡೋ ಪ್ಲಾನ್ ಮಾತ್ರ ಬಿಬಿಎಂಪಿಯದ್ದು. ಪೊಲೀಸರು ಖುದ್ದು ಇದ್ದು ಖಾಸಗಿಯವರ ಸಹಯೋಗದೊಂದಿಗೆ ಟೋಯಿಂಗ್ ಮಾಡುವಾಗಲೇ ಜನ ಆಕ್ರೋಶ ವ್ಯಕ್ತಪಡಿಸ್ತಿದ್ರು. ಈಗ ಬಿಬಿಎಂಪಿ ಸಂಪೂರ್ಣವಾಗಿ ಖಾಸಗಿ ಎಜೆನ್ಸಿ ಮೂಲಕ ಟೋಯಿಂಗ್ ಮಾಡಿಸಲು ಮುಂದಾಗಿದೆ. ಇದಕ್ಕೆ ಜನ ತೀವ್ರವಾಗಿ ಆಕ್ರೋಶ ಹೊರ ಹಾಕ್ತಿದ್ದಾರೆ. ಇದು ಬಿಬಿಎಂಪಿಯ ಹಣ ಮಾಡೋ ಯೋಜನೆ, ಜನರಿಗೆ ಅದರಲ್ಲೂ ವಾಹನ ಸವಾರರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ ಅಂತಾ ಸಿಡಿಮಿಡಿಗೊಂಡಿದ್ದಾರೆ. ಇದನ್ನೂ ಓದಿ: ರುಚಿಕರ ಬೆಂಡೆಕಾಯಿ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ

    ಸ್ಮಾರ್ಟ್ ಪಾರ್ಕಿಂಗ್‍ಗೆ ಜನ ವಿರೋಧ ವ್ಯಕ್ತಪಡಿಸುತ್ತಿದ್ದು, ಸ್ಮಾರ್ಟ್ ಪಾರ್ಕಿಂಗ್ ಹೆಸರಲ್ಲಿ ಬಿಬಿಎಂಪಿ ಹಗಲು ದರೋಡೆ ಮಾಡ್ತಿದೆ ಎಂದು ಆರೋಪಿಸಿದ್ದಾರೆ. ಇದೀಗ ಸ್ಮಾರ್ಟ್ ಪಾರ್ಕಿಂಗ್ ಎಲ್ಲಾ ಕಡೆ ಸರಿಯಾಗಿ ಜಾರಿಗೆ ಬಂದಿಲ್ಲ. ಹೀಗಿರುವಾಗ ಟೋಯಿಂಗ್ ಬೇರೆ ಮಾಡೋ ಪ್ಲಾನ್ ಬೇಕಿತ್ತಾ ಅಂತ ಬೆಂಗಳೂರಿಗರು ಪಾಲಿಕೆ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಸ್ಥಗಿತಗೊಳಿಸಿದ ಟೋಯಿಂಗ್ ವ್ಯವಸ್ಥೆ ಪುನಃ ಜಾರಿ ಇಲ್ಲ: ಆರಗ ಜ್ಞಾನೇಂದ್ರ

    ಬೆಂಗಳೂರಿನಲ್ಲಿ ಸ್ಥಗಿತಗೊಳಿಸಿದ ಟೋಯಿಂಗ್ ವ್ಯವಸ್ಥೆ ಪುನಃ ಜಾರಿ ಇಲ್ಲ: ಆರಗ ಜ್ಞಾನೇಂದ್ರ

    ಬೆಂಗಳೂರು: (Bengaluru) ನಗರದಲ್ಲಿ ಸ್ಥಗಿತಗೊಳಿಸಲಾಗಿರುವ ಟೋಯಿಂಗ್ ವ್ಯವಸ್ಥೆಯನ್ನು (Towing) ಪುನಃ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಚಿವರು, ನಗರದಲ್ಲಿ ಸಾರ್ವಜನಿಕ ಸ್ನೇಹಿ ಮತ್ತು ಸುಗಮ ವಾಹನ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ವಿಸ್ತೃತವಾದ ಚರ್ಚೆ ಹಾಗೂ ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: KPTCL ಪರೀಕ್ಷಾ ಅಕ್ರಮ: ಮತ್ತೆ ಮೂವರು ಆರೋಪಿಗಳ ಬಂಧನ – ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೂ ಈ ಬಗ್ಗೆ ಚರ್ಚೆ ನಡೆಸಿದ್ದು, ಟೋಯಿಂಗ್ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.

    ಟೋಯಿಂಗ್ ವ್ಯವಸ್ಥೆ ಬಗ್ಗೆ ಇದ್ದ ಜನಾಕ್ರೋಶ ಹಾಗೂ ಕಿರುಕುಳಗಳ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ, ಟೋಯಿಂಗ್‌ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಹಳೆಯ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬೊಮ್ಮಾಯಿಗೆ ಕಪ್ಪುಪಟ್ಟಿ ಪ್ರದರ್ಶನ

    Live Tv
    [brid partner=56869869 player=32851 video=960834 autoplay=true]

  • ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭ?

    ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭ?

    ಬೆಂಗಳೂರು: ಗೊಂದಲದ ಗೂಡಾಗಿ ತಾತ್ಕಾಲಿಕವಾಗಿ ನಿಂತಿರುವ ಟೋಯಿಂಗ್ ಮರು ಜೀವ ನೀಡಲು ಹೊಸ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಚಿಂತನೆಯಲ್ಲಿದ್ದಾರೆ.

    ಶೀಘ್ರದಲ್ಲೇ ಟೋಯಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಂಡು ಪುನಃ ಟೋಯಿಂಗ್ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತವೆ. ಟೋಯಿಂಗ್ ಸಮಸ್ಯೆ ಬಗ್ಗೆ ಸರ್ಕಾರದ ಜೊತೆ ಮಾತನಾಡಿ ಶೀಘ್ರದಲ್ಲೇ ಹೊಸ ಮಾರ್ಗಸೂಚಿಯೊಂದಿಗೆ ಪ್ರಾರಂಭ ಮಾಡಲಾಗುವುದೆಂದು ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ: ನಮ್ಮಲ್ಲಿ ಪೆಟ್ರೋಲ್ ಮುಗಿದಿದೆ: ಶ್ರೀಲಂಕಾ

    ನಗರದಲ್ಲಿ ಎಲ್ಲಾ ಚಟುವಟಿಕೆಗಳು ಮಾಮೂಲಿಯಂತೆ ನಡೆಯುತ್ತಿರುವದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ನಗರದಲ್ಲಿ ಆಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಪುನಃ ಟೋಯಿಂಗ್ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೆಲಸಗಳು ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

  • ಪ್ರಯಾಣಿಕರಿದ್ದ ಕಾರು ಕೂಡಾ ಟೊಯಿಂಗ್!

    ಪ್ರಯಾಣಿಕರಿದ್ದ ಕಾರು ಕೂಡಾ ಟೊಯಿಂಗ್!

    ಲಕ್ನೋ: ಪ್ರಯಾಣಿಕರಿದ್ದ ಕಾರೊಂದನ್ನು ಟೊಯಿಂಗ್ ಮಾಡಲಾದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

    ಕಾರು ಚಾಲಕ ಸುನಿಲ್ ಹಾಗೂ ಆತನ ಸ್ನೇಹಿತ ಹಜರತ್‍ಗಂಜ್ ನಗರಕ್ಕೆ ತೆರಳಿದ್ದರು. ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ, ಖರೀದಿ ಮಾಡಬೇಕಿದ್ದ ವಸ್ತುಗಳ ಬಗ್ಗೆ ಚರ್ಚೆಯಲ್ಲಿದ್ದರು. ಈ ವೇಳೆ ಟಾ-ಟ್ರಕ್ ಬಂದು ಕಾರನ್ನು ಎಳೆದುಕೊಂಡು ಹೋಗಿದೆ.

    ನೋ ಪಾರ್ಕಿಂಗ್ ವಲಯದಲ್ಲಿ ವಾಹನಗಳನ್ನು ನಿಲ್ಲಿಸಿದ್ದರೂ ಅದರಲ್ಲಿ ಪ್ರಯಾಣಿಕರಿದ್ದರೆ ಅದನ್ನು ಎಳೆದೊಯ್ಯಬಾರದೆಂಬ ನಿಯಮವಿದೆ. ಈ ಘಟನೆ ನಡೆದಾಗ ಸ್ಥಳದಲ್ಲಿ ನೆರೆದಿದ್ದವರು ವೀಡಿಯೋವನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿದ್ದಾರೆ. ಇದನ್ನೂ ಓದಿ: ಟಾಟಾ ಸನ್ಸ್ ಗ್ರೂಪ್‌ಗೆ ಎನ್ ಚಂದ್ರಶೇಖರನ್ ಅಧ್ಯಕ್ಷರಾಗಿ ಮರು ನೇಮಕ

    ವೀಡಿಯೋ ವೈರಲ್ ಆಗುತ್ತಿದ್ದಂತೆ ನಗರ ಪಾಲಿಕೆ ಆಯುಕ್ತರ ಗಮನಕ್ಕೆ ಬಂದಿದೆ. ಬಳಿಕ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಭಾರತದ ಆಯುರ್ವೇದ ಚಿಕಿತ್ಸೆಯನ್ನು ಆಫ್ರಿಕಾದಲ್ಲಿ ಆರಂಭಿಸಿಲು ಕೀನ್ಯಾ ಮಾಜಿ ಪ್ರಧಾನಿ ಮನವಿ

  • ಬೆಂಗ್ಳೂರಲ್ಲಿ 15 ದಿನ ಟೋಯಿಂಗ್ ಸ್ಥಗಿತ: ಆರಗ ಜ್ಞಾನೇಂದ್ರ

    ಬೆಂಗ್ಳೂರಲ್ಲಿ 15 ದಿನ ಟೋಯಿಂಗ್ ಸ್ಥಗಿತ: ಆರಗ ಜ್ಞಾನೇಂದ್ರ

    ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಟೋಯಿಂಗ್ ವಾಹನ ಸದ್ದು ಮಾಡುತ್ತಿಲ್ಲ. ಇದೀಗ ಮುಂದಿನ 15 ದಿನಗಳ ವರೆಗೆ ನಗರದಲ್ಲಿ ಟೋಯಿಂಗ್ ವ್ಯವಸ್ಥೆಯನ್ನು ಸುಧಾರಿಸಲು ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಇಂದು ಟ್ರಾಫಿಕ್ ಆಯುಕ್ತರು ಟೋಯಿಂಗ್ ಸಿಬ್ಬಂದಿ ಜೊತೆ ಸಭೆ ನಡೆಸಿ ಬಳಿಕ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಟೋಯಿಂಗ್ ವ್ಯವಸ್ಥೆ ಸುಧಾರಿಸುವ ಸಲುವಾಗಿ 15 ದಿನ ಸ್ಥಗಿತಗೊಳಿಸಲಾಗುವುದು. ನಾಳೆಯಿಂದ ನೋಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡಿದ್ರೆ ಪ್ರಕರಣ ದಾಖಲಾಗುತ್ತದೆ. ನೋ ಪಾರ್ಕಿಂಗ್ ಬೋರ್ಡ್‍ಗಳು ಈ ಹಿಂದೆ 50 ಮೀಟರ್‌ನಲ್ಲಿ ಇತ್ತು. ಇನ್ನುಮುಂದೆ 25 ಮೀಟರ್‌ನಲ್ಲಿ ಬೋರ್ಡ್ ಅಳವಡಿಕೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಭವಿಷ್ಯದಲ್ಲಿ ಸೋಂಕಿನ ಸಂಭಾವ್ಯ ಅಲೆಗಳನ್ನು ಎದುರಿಸಲು ಸಿದ್ಧರಾಗಬೇಕು: ಗೌರವ್ ಗುಪ್ತ

    ಟೋಯಿಂಗ್ ಫೈನ್ ಜಾಸ್ತಿ ವಿಚಾರವಾಗಿ ಮಾತನಾಡಿ, ಇನ್ನು 15 ದಿನ ಖಾಸಗಿಯವರು ಟೋಯಿಂಗ್ ಮಾಡುವುದಿಲ್ಲ. ಪೊಲೀಸರೇ ಇರುತ್ತಾರೆ. ಪೊಲೀಸರ ಕ್ಯಾಮೆರಾದಲ್ಲಿ ಎಲ್ಲ ರೇಕಾರ್ಡ್ ಆಗುತ್ತದೆ. ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ. ಫೈನ್ ಹೆಚ್ಚಳದ ಬಗ್ಗೆ ಮರುಪರಿಶೀಲನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಸುಧಾಕರ್ ಏನು ಸಿಎಂಗಿಂತ ದೊಡ್ಡವರಾ? ಬಿಜೆಪಿ ಶಾಸಕ ಕಿಡಿ

    ಈ ನಡುವೆ ಟೋಯಿಂಗ್ ಇಲ್ಲದೆ ಇರುವ ಪರಿಣಾಮ ನಗರದಲ್ಲಿ ಸವಾರರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡೋದು ಹೆಚ್ಚಿದೆ. ಇದರಿಂದ ಅಂಗಡಿ ಮಾಲೀಕರು, ಮನೆ ಮಾಲೀಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಶೀಘ್ರ ಟೋಯಿಂಗ್ ವಾಹನ ರಸ್ತೆಗೆ ಇಳಿಯಲಿ ಎಂದು ಅವರು ಬಯಸುತ್ತಿದ್ದಾರೆ. ಆದರೇ, ಟ್ರಾಫಿಕ್ ಪೊಲೀಸರೇನು ಸುಮ್ಮನೆ ಕುಳಿತಿಲ್ಲ. ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸೋ ಕಾರ್, ಬೈಕ್‍ಗಳಿಗೆ ವೀಲ್ ಲಾಕ್ ಮಾಡುತ್ತಿದ್ದಾರೆ. ಮೊಬೈಲ್‍ನಲ್ಲಿ ಫೋಟೋ ತೆಗೆದು ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ.