Tag: Towel

  • ಮೈಗೆ ಟವೆಲ್‌ ಸುತ್ತಿಕೊಂಡು ಬೀದಿ ಸುತ್ತಿದ ಯುವತಿ – ಈ ಕಣ್ಣಲ್ಲಿ ಇನ್ನೂ ಏನೇನ್‌ ನೋಡ್ಬೇಕೋ ಅಂದ್ರು ನೆಟ್ಟಿಗರು!

    ಮೈಗೆ ಟವೆಲ್‌ ಸುತ್ತಿಕೊಂಡು ಬೀದಿ ಸುತ್ತಿದ ಯುವತಿ – ಈ ಕಣ್ಣಲ್ಲಿ ಇನ್ನೂ ಏನೇನ್‌ ನೋಡ್ಬೇಕೋ ಅಂದ್ರು ನೆಟ್ಟಿಗರು!

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ (Social Media) ರೀಲ್ಸ್‌ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್‌ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್‌ (Dance) ಮಾಡಿ ರೀಲ್ಸ್‌ ಕ್ರಿಯೇಟ್‌ ಮಾಡುವುದು ಟ್ರೆಂಡ್‌ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಕೆಲ ಯುವತಿಯರು ತುಂಡುಬಟ್ಟೆ ಧರಿಸುವುದು, ಬಿಕಿನಿಯಲ್ಲಿ ಬೀದಿ ಸುತ್ತುವುದೇ ಟ್ರೆಂಡ್‌ ಅನ್ನುವಂತೆ ಮಾಡಿಕೊಂಡಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಯುವತಿಯೊಬ್ಬಳು ಮೈಗೆ ಟವೆಲ್‌ ಸುತ್ತಿಕೊಂಡು ಬೀದಿ ಸುತ್ತಾಡಿರುವ ವೀಡಿಯೋ ಸಾಕ್ಷಿಯಾಗಿದೆ.

     

    View this post on Instagram

     

    A post shared by Tanumita Ghosh (@thankgod_itsfashion)

    ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಮಹಿಳೆಯೊಬ್ಬಳು ಬಿಕಿನಿ ತೊಟ್ಟು ಬಸ್ಸಿನಲ್ಲಿ ಸುತ್ತಾಡಿದ್ದಳು, ಇದಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಂಹತದ್ದೇ ಘಟನೆಯೊಂದು ಮುಂಬೈನಲ್ಲಿ ನಡೆಸಿದೆ. ಯುವತಿಯೊಬ್ಬಳು (Mumbai Girl) ಮೈಗೆ ಟೆವೆಲ್‌ ಸುತ್ತಿಕೊಂಡು ಬೀದಿ ಬೀದಿ ಸುತ್ತಾಡಿದ್ದಾಳೆ. ಈ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದ್ದು, ಟೀಕೆಗೂ ಕಾರಣವಾಗಿದೆ.

    ಹೌದು. ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಮತ್ತು‌ ರೀಲ್ಸ್‌ ಸ್ಟಾರ್‌ ಯುವತಿ ತನುಮಿತಾ ಘೋಷ್ ಇತ್ತೀಚೆಗೆ ಮುಂಬೈನ ಜನರು ಓಡಾಡುತ್ತಿದ್ದ ಬೀದಿಗಳಲ್ಲಿ ದೇಹಕ್ಕೆ ಟವೆಲ್ ಸುತ್ತಿಕೊಂಡು ಯಾವುದೇ ಮುಜುಗರವಿಲ್ಲದೇ ಓಡಾಡಿದ್ದರು. ಇದನ್ನ ನೋಡಿದವರಿಗೆ ಆಕೆ ಬಾತ್‍ರೂಂನಿಂದ ಸ್ನಾನ ಮಾಡಿಕೊಂಡು ಹಾಗೇ ಎದ್ದು ಬಂದಿರುವಂತೆ ಕಾಣಿಸುತ್ತಿತ್ತು. ಅಲ್ಲದೇ ವೀಡಿಯೋ ತುಂಬಾ ʻತೌಬಾ-ತೌಬಾʼ ಎಂಬ ಹಿಂದಿ ಗೀತೆಯೊಂದು ಪ್ರಸಾರವಾಗುತ್ತಲೇ ಇದೆ.

    ಈ ಉಡುಗೆಯ ಜೊತೆಗೆ ಕಿವಿಯೋಲೆಯನ್ನೂ ಆಕೆ ಧರಿಸಿದ್ದಳು ಮತ್ತು ಸ್ಟೈಲಿಶ್ ಸ್ಫೋರ್ಟ್‌ ಶೂ ಸಹ ಧರಿಸಿದ್ದಳು. ಈ ವೇಷದಲ್ಲಿ ಬಸ್ ನಿಲ್ದಾಣದಿಂದ ಅಂಗಡಿಯ ಕಡೆಗೆ ಹೋಗುತ್ತಿದ್ದಾಗ, ಅಲ್ಲಿದ್ದ ದಾರಿಹೋಕರು ಈಕೆಯನ್ನೇ ದಿಟ್ಟಿಸಿ ನೋಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಕೊನೆಯಲ್ಲಿ ರೀಲ್ಸ್‌ ಆರಣಿ ತನ್ನ ಕೂದಲಿಗೆ ಹಾಗೂ ದೇಹಕ್ಕೆ ಸುತ್ತಿದ್ದ ಟವೆಲ್ ಅನ್ನು ತೆಗೆದಿದ್ದಾಳೆ. ನಂತರ ಇದು ರೀಲ್ಸ್‌ ಗಾಗಿ ಮಾಡಿದ ವೀಡಿಯೋ ಎಂಬುದು ಜನರ ಅರಿವಿಗೆ ಬಂದಿದೆ.

    ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿರುವ ಈ ವೀಡಿಯೋವನ್ನು 10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಮಂದಿ ಲೈಕ್‌ ಮಾಡಿ, ಶೇರ್‌ ಮಾಡಿದ್ದಾರೆ, ಕೆಲವರು ಯುವತಿ ನಡೆಗೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ತನುಮಿತಾ ಅವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಮತ್ತು ಸೋನಾಕ್ಷಿ ಸಿನ್ಹಾ, ಶಲೀನಾ ನಥಾನಿ, ಮನೀಶ್ ಮಲ್ಹೋತ್ರಾ ಮತ್ತು ಡಿನೋ ಮೋರಿಯಾ ಅವರಂತಹ ಸೆಲೆಬ್ರಿಟಿಗಳಂತೆ ತಾನು ಮನರಂಜನೆಗಾಗಿ ಮಾಡಿರುವುದಾಗಿ ತಿಳಿಸಿದ್ದಾರೆ.

  • ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ

    ಭೂಪಾಲ್: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಪುಷ್ಪಾ ಬಾಯಿ (45) ಮೃತಳು, ಈಕೆ ಪತಿ ರಾಜಕುಮಾರ್ ಬಹೆ (50) ಕೊಲೆ ಮಾಡಿದ್ದಾನೆ. ಈತ ಅರಣ್ಯ ಇಲಾಖೆಯ ದಿನಗೂಲಿ ನೌಕರನಾಗಿದ್ದನು. ಸ್ನಾನಕ್ಕೆ ಹೋದಾಗ ತನ್ನ ಹೆಂಡತಿಯನ್ನು ಕರೆದು ಟವೆಲ್ ಕೊಡಲು ಹೇಳಿದ್ದ. ಆದರೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದಳು. ಆತನ ಸ್ನಾನ ಮುಗಿದರೂ ಆಕೆ ಟವೆಲ್ ಕೊಡದಿದ್ದರಿಂದ ಕೋಪಗೊಂಡ ಗಂಡ ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದಿದ್ದೇನು?: ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಕಿರ್ನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೀರಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:  ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಮಾಡುವ ವಿಧಾನ

    ರಾಜಕುಮಾರ್ ಬಹೆ ಸ್ನಾನದ ನಂತರ ಟವೆಲ್ ನೀಡುವಂತೆ ಕೇಳಿದ್ದ. ಪುಷ್ಪ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದುದರಿಂದ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಳು. ಇದರಿಂದ ಕೋಪಗೊಂಡ ವ್ಯಕ್ತಿ ಸ್ನಾನ ಮುಗಿಸಿ ಹೊರಗೆ ಬಂದ ನಂತರ ಕಬ್ಬಿಣದ ರಾಡಿನಿಂದ ಪತ್ನಿಯ ತಲೆಗೆ ಪದೇ ಪದೇ ಹೊಡೆದಿದ್ದಾನೆ. ಇದರಿಂದ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತನ್ನ ಅಪ್ಪನನ್ನು 23 ವರ್ಷದ ಮಗಳನ್ನು ತಡೆಯಲು ಪ್ರಯತ್ನಿಸಿದಾಗ ಆಕೆಗೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಭಾನುವಾರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಭಾನುವಾರ ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

  • ಆರ್ಡರ್ ಮಾಡಿದ್ದು ಫ್ರೈಡ್ ಚಿಕನ್ ಬಂದಿದ್ದು ಮಾತ್ರ ಟವಲ್

    ಆರ್ಡರ್ ಮಾಡಿದ್ದು ಫ್ರೈಡ್ ಚಿಕನ್ ಬಂದಿದ್ದು ಮಾತ್ರ ಟವಲ್

    ಮನಿಲಾ: ಫ್ರೈಡ್ ಚಿಕನ್ ಆರ್ಡರ್ ಮಾಡಿದ ಮಹಿಳೆಗೆ ಬಂದಿದ್ದ ಫ್ರೈಡ್ ಟವಲ್ ನೋಡಿ ಮಹಿಳೆ ಶಾಕ್ ಆಗಿರುವ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ. ಈ ಸುದ್ದಿ ಸೋಶಿಯಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಅಲೀಫರೇಜ್ ಎಂಬ ಮಹಿಳೆ ಫ್ರೈಡ್ ಚಿಕನ್ ತಿನ್ನಬೇಕು ಎಂದು ಆಸೆಯಿಂದ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ಡೀಪ್ ಫ್ರೈಡ್ ಚಿಕನ್ ಬದಲು ಡೀಪ್ ಫ್ರೈಡ್ ಟವಲ್ ಸಿಕ್ಕಿದೆ. ಇದನ್ನೂ ಓದಿ:  ಸಂಜೆ ಸ್ನ್ಯಾಕ್ಸ್‌ಗೆ ಮಾಡಿ ಆಲೂ ಭುಜಿಯಾ

    ಅಲೀ ಚಿಕನ್ ಅಂದುಕೊಂಡು ತಿನ್ನಲು ಶುರು ಮಾಡಿದಾಗ ವಿಚಿತ್ರವೆನಿಸಿದ್ದು, ಪೂರ್ತಿ ಚಿಕನ್ ಬಿಡಿಸಿ ನೋಡಿದ್ದಾಳೆ. ಆಗ ಅದು ಚಿಕನ್ ಅಲ್ಲ, ಟವಲ್ ಎಂದು ಗೊತ್ತಾಗಿದೆ. ಇದರ ವೀಡಿಯೋವನ್ನು ಅಲೀಫರೆಜ್ ತಮ್ಮ ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಫುಡ್ ಆರ್ಡರ್ ಮಾಡಿದ ರೆಸ್ಟೋರೆಂಟ್ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

    ನನ್ನ ಮಗನಿಗೆ ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದನು. ನಾನು ಫ್ರೈಡ್ ಚಿಕನ್ ತಿನ್ನಲು ಪ್ರಯತ್ನಿಸುತ್ತಿರುವಾಗ, ತುಂಡು ಮಾಡುವುದು ಸಹ ಕಷ್ಟವಾಯಿತ್ತು. ನನ್ನ ಕೈಗಳಿಂದ ಅದನ್ನು ತೆರೆಯಲು ಪ್ರಯತ್ನಿಸಿದೆ ಆಗ ಫ್ರೈಡ್ ಚಿಕನ್ ಬದಲಾಗಿ ಇರುವ ಕರಿದ ಟವೆಲ್ ನೋಡಿ ಆಶ್ಚರ್ಯವಾಯಿತ್ತು. ಇದು ನಿಜಕ್ಕೂ ಗೊಂದಲದ ಸಂಗತಿಯಾಗಿದೆ ಎಂದು ಬರೆದಕೊಂಡಿದ್ದಾರೆ. ಅಲೀಫರೆಜ್ ಫ್ರೈಡ್ ಟವಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಈ ಸುದ್ದಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಸಖತ್ ಮಜವಾಗಿ ಕಮೆಂಟ್ ಮಾಡುತ್ತಿದ್ದಾರೆ.

  • ಸಿಸೇರಿಯನ್ ವೇಳೆ ಮಹಿಳೆಯ ಗರ್ಭದಲ್ಲಿ ಟವೆಲ್ ಬಿಟ್ಟ ವೈದ್ಯರು

    ಸಿಸೇರಿಯನ್ ವೇಳೆ ಮಹಿಳೆಯ ಗರ್ಭದಲ್ಲಿ ಟವೆಲ್ ಬಿಟ್ಟ ವೈದ್ಯರು

    – ಹೊಟ್ಟೆ ನೋವು, ಮೂತ್ರವಿಸರ್ಜನೆ ಆಗದೆ ಮಹಿಳೆ ಕಂಗಾಲು
    – ಟವೆಲ್ ಹೊರಗೆ ತೆಗೆದ ಖಾಸಗಿ ಆಸ್ಪತ್ರೆ ವೈದ್ಯರು
    – ಮಹಿಳೆಯ ಪತಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

    ಚಂಡೀಗಡ: ಮಹಿಳೆಗೆ ಸಿಸೇರಿಯನ್ ಡೆಲಿವರಿ ಮಾಡಿಸಿದ ಬಳಿಕ ಗರ್ಭಕೋಶದಲ್ಲಿ ವೈದ್ಯರು ಟವೆಲ್ ಬಿಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಪಂಜಾಬ್‍ನ ಲುಧಿಯಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯ ಪತಿ ರವೀಂದ್ರ ಸಿಂಗ್, ಕುಟುಂಬಸ್ಥರು ಹಾಗೂ ಕೆಲ ಸಾಮಾಜಿಕ ಕಾರ್ಯಕರ್ತರು ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಪ್ರತಿಭಟನೆ ನಡೆಸಲು ಆರಂಭಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಿರ್ಲಕ್ಷ್ಯ ವಹಿಸಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

    ಶಿಮ್ಲಾಪುರಿ ನಿವಾಸಿ ರವೀಂದ್ರ ಅವರು ಡಿಸೆಂಬರ್ 7ರಂದು ತಮ್ಮ ಗರ್ಭಿಣಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಬಳಿಕ ವೈದ್ಯರು ಸಿಸೇರಿಯನ್ ಡೆಲಿವರಿ ಮಾಡುವುದಾಗಿ ತಿಳಿಸಿದ್ದಾರೆ.

    ಮಾರನೇ ದಿನ ಸರ್ಜರಿ ಮಾಡಲಾಗಿದೆ. ನವಜಾತ ಶಿಶು ಸಂಪೂರ್ಣವಾಗಿ ಆರಾಮವಾಗಿದೆ. ಆದರೆ ಹೆರಿಗೆ ಬಳಿಕ ತಾಯಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮೂತ್ರವಿಸರ್ಜನೆ ಮಾಡಲು ಸಹ ಸಾಧ್ಯವಾಗಿಲ್ಲ. ಈ ಕುರಿತು ವೈದ್ಯರಿಗೆ ತಿಳಿಸಿದರೆ, ಮಹಿಳೆಗೆ ನಿದ್ರಾಜನಕ ನೀಡಿ ಮಲಗಿಸಿದ್ದಾರೆ.

    ಎರಡು ದಿನಗಳಾದರೂ ಮಹಿಳೆಗೆ ಹೊಟ್ಟೆ ನೋವು ಕಡಿಮೆಯಾಗದ್ದರಿಂದ ನಾನು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲು ವೈದ್ಯರಿಗೆ ತಿಳಿಸಿದೆ. ಆದರೆ ಅವರು ಪಟಿಯಾಲದ ರಾಜಿಂದ್ರ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ಅಂತಿಮವಾಗಿ ಡಿಸೆಂಬರ್ 11ರಂದು ನಾನು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಕರೆದೊಯ್ದೆ. ಬಳಿಕ ವೈದ್ಯರು ನನ್ನ ಪತ್ನಿಗೆ ಚಿಕಿತ್ಸೆ ನೀಡಿದರು. ಅಲ್ಲದೆ ಗರ್ಭಕೋಶದಲ್ಲಿ ಟವೆಲ್ ಇರುವುದನ್ನು ಪತ್ತೆಹಚ್ಚಿದರು. ವೈದ್ಯರ ನಿರ್ಲಕ್ಷ್ಯದಿಂದಾಗಿ ನನ್ನ ಪತ್ನಿಯ ಜೀವವೇ ಹೋಗುತ್ತಿತ್ತು ಎಂದು ಮಹಿಳೆ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಸಿಂಗ್ ಅವರು ತಮ್ಮ ಪತ್ನಿಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ಖಾಸಗಿ ಆಸ್ಪತ್ರೆ ವೈದ್ಯರು ಮಹಿಳೆಯ ಗರ್ಭಕೋಶದಲ್ಲಿದ್ದ ಟವೆಲ್ ಹೊರಗೆ ತೆಗೆದಿದ್ದಾರೆ.