Tag: Tourist

  • ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿದ್ದ ಪ್ರವಾಸಿಗರ ರಕ್ಷಣೆ: ತಪ್ಪಿದ ಭಾರೀ ಅನಾಹುತ

    ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿದ್ದ ಪ್ರವಾಸಿಗರ ರಕ್ಷಣೆ: ತಪ್ಪಿದ ಭಾರೀ ಅನಾಹುತ

    ಶಿವಮೊಗ್ಗ: ಜಲಪಾತ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದು ಪ್ರವಾಸಿಗರನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಘಟನೆ ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್ ಬಳಿ ನಡೆದಿದೆ.

    ಕೆಲ ಪ್ರವಾಸಿಗರು ಶನಿವಾರ ಮಧ್ಯಾಹ್ನ ಯಡೂರಿನ ಅಬ್ಬಿ ಫಾಲ್ಸ್ ವೀಕ್ಷಣೆಗೆ ತೆರಳಿದ್ದರು. ಅಬ್ಬಿ ಫಾಲ್ಸ್ ನಲ್ಲಿ ಸುಮಾರು 200 ಅಡಿ ಆಳಕ್ಕೆ ನೀರು ಜಿಗಿಯುತ್ತದೆ. ಫಾಲ್ಸ್ ವೀಕ್ಷಣೆ ವೇಳೆ ಐವರು ಕಾಲು ಜಾರಿ ಬಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಈ ಐವರ ಪೈಕಿ ಒಬ್ಬರು ಸುಮಾರು 20 ಅಡಿ ಆಳಕ್ಕೆ ಹೋಗಿದ್ದರು.

    ನೀರಿನಲ್ಲಿ ಕೊಚ್ಚಿ ಹೋಗಿ ಕಲ್ಲಿನ ಆಸರೆ ಪಡೆದಿದ್ದ ಪ್ರವಾಸಿಗರು ಯಾರಾದರು ಬಂದು ನಮ್ಮನ್ನು ರಕ್ಷಣೆ ಮಾಡಿ ಎಂದು ಕೂಗುತ್ತಿದ್ದರು. ಇದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಗ್ಗದ ಸಹಾಯದಿಂದ ಐವರನ್ನೂ ಸ್ಥಳೀಯರು ರಕ್ಷಿಸಿದ್ದಾರೆ.

    ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಲ್ಲು ಬಂಡೆಯ ನಡುವೆ ಕೊಚ್ಚಿ ಹೋಗಿದ್ದ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಕೂದಲೆಳೆ ಅಂತರದಲ್ಲಿ ದೊಡ್ಡ ಅಪಾಯ ತಪ್ಪಿದೆ. ರಕ್ಷಣಾ ಕಾರ್ಯಾಚಣೆ ಕೈಗೊಂಡ ಯುವಕರು ಹಾಗೂ ಸ್ಥಳೀಯರ ಸಮಯ ಪ್ರಜ್ಞೆ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

  • ಪ್ರವಾಸಿಗರ ವಾಹನವನ್ನು ಅಟ್ಟಾಡಿಸಿದ ಆನೆ

    ಪ್ರವಾಸಿಗರ ವಾಹನವನ್ನು ಅಟ್ಟಾಡಿಸಿದ ಆನೆ

    ಚಾಮರಾಜನಗರ: ತನ್ನ ಮರಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ ಎಂದು ಕೋಪಗೊಂಡು ಆನೆಯೊಂದು ಪ್ರವಾಸಿಗರ ವಾಹನದ ಮೇಲೆ ದಾಳಿ ನಡೆಸಲು ಮುಂದಾದ ಘಟನೆ ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

    ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ತನ್ನ ಮರಿ ಆನೆಯೊಂದಿಗೆ ಎರಡು ಆನೆಗಳು ಕೆರೆಯಲ್ಲಿ ನೀರು ಕುಡಿದು ಸ್ವಸ್ಥಾನಕ್ಕೆ ಹಿಂದಿರುಗುತ್ತಿದ್ದವು. ಬಳಿಕ ರಸ್ತೆ ದಾಟುತ್ತಿದ್ದ ವೇಳೆ ತವೇರಾ ವಾಹನದಲ್ಲಿ ಅರಣ್ಯದೊಳಗೆ ಬಂದಂತಹ ಪ್ರವಾಸಿಗರು ಆನೆಗಳ ಫೋಟೋ ತೆಗೆಯಲು ವಾಹನವನ್ನು ನಿಲುಗಡೆ ಮಾಡಿದರು ಎನ್ನಲಾಗಿದೆ.

    ಪ್ರವಾಸಿಗರು ಫೋಟೋ ಕ್ಲಿಕ್ಕಿಸುತ್ತಿರುವುದನ್ನು ನೋಡಿ ಕೋಪಗೊಂಡ ಆನೆಗಳು ತನ್ನ ಮರಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ ಎಂದು ತಿಳಿಯಿತು. ಬಳಿಕ ಪ್ರವಾಸಿಗರ ವಾಹನವನ್ನು ಅಟ್ಟಾಡಿಸಿಕೊಂಡು ಹೋಗಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

    ಈ ದೃಶ್ಯ ಸಫಾರಿ ತೆರಳಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

    https://www.youtube.com/watch?v=6C5_3jlZq7U

  • ಹೊಗೆನಕಲ್ ಜಲಪಾತ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ

    ಹೊಗೆನಕಲ್ ಜಲಪಾತ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ

    ಚಾಮರಾಜನಗರ: ಕಾವೇರಿ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.

    ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.

    ಅಪಾಯದ ಮಟ್ಟ ಮೀರಿ ನೀರು ಬರುತ್ತಿರುವುದರಿಂದ ಪ್ರವಾಸಿಗರು ನದಿಗೆ ಇಳಿಯುವುದಕ್ಕೆ ಹಾಗೂ ತೆಪ್ಪ ಸವಾರಿ ನಡೆಸುವುದಕ್ಕೆ ನಿಷೇಧಿಸಲಾಗಿದೆ. ಜಲಪಾತದ ಸುತ್ತಮುತ್ತಲಿನ ಗ್ರಾಮಗಳಾದ ಜಮ್ಮಕುಟ್ಟಿ, ಆಲಂಬಾಂಡಿ ಮಾರಿಕೋಟೈ, ಗೋಫಿನಾಥಂ, ಆತೂರು, ಕೋಟೊಯೂರು, ವಿವಿಧ ಗ್ರಾಮಗಳಲ್ಲಿನ ಜನರು ನದಿ ದಡಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

    ಅಲ್ಲದೆ ಸ್ಥಳದಲ್ಲಿ ಈಗಾಗಲೇ 50ಕ್ಕೂ ಹೆಚ್ಚು ನುರಿತ ಈಜುಗಾರರ ನಿಯೋಜಿಸಲಾಗಿದ್ದು, ಯಾವುದೇ ಅವಘಡಗಳಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿಕೊಂಡಿದೆ.

  • ಕುಂದಾನಗರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೇ ಮಾಯ

    ಕುಂದಾನಗರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೇ ಮಾಯ

    -ಬೆಳಗಾವಿಯಲ್ಲಿ ನಿಲ್ಲದ ಪ್ರವಾಹ

    ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚರಿಸುವ ರಸ್ತೆಗಳು ಮೃತ್ಯುವಿಗೆ ಆಹ್ವಾನ ನೀಡುತ್ತಿವೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಆಶ್ಲೇಷ ಮಳೆಯ ಹೊಡೆತಕ್ಕೆ ರಸ್ತೆಗಳ ಅವಷೇಶಗಳು ಮಾತ್ರ ಉಳಿದುಕೊಂಡಿವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂಚರಿಸುವಾಗ ರಸ್ತೆಗಳ ಸ್ಥಿತಿ ಗತಿ ಬಗ್ಗೆ ಮಾಹಿತಿ ಪಡೆಯದೆ ಮುಂದೆ ಸಾಗಬೇಡಿ. ಇದು ಪಬ್ಲಿಕ್ ಟಿವಿಯ ಕಳಕಳಿ.

    ರಸ್ತೆ ಮೇಲೆ ನಿರಂತರವಾಗಿ ನೀರು ಹರಿಯುತ್ತಿರುವ ಪರಿಣಾಮ ರಸ್ತೆಗಳು ಯಮಸ್ವರೂಪಿಗಳಾಗಿವೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ ಗೋಕಾಕ್ ನಗರಕ್ಕೆ ತೆರಳುವ ಜಿಲ್ಲಾ ಮುಖ್ಯರಸ್ತೆ ಹಾಗೂ ಸಂಚರಿಸುವ ಪ್ರಮುಖ ರಸ್ತೆಗಳು ಭಾರೀ ಪ್ರಪಾತಗಳಾಗಿ ಮಾರ್ಪಟ್ಟಿವೆ.

    ಬೆಳಗಾವಿ ಜಿಲ್ಲೆಯ ಬಹುತೇಕ ರಸ್ತೆಗಳ ಸ್ಥಿತಿ ಇದಕ್ಕಿಂತ ಭಯಾನಕವಾಗಿವೆ. ಗೋವಾ, ಮಹಾರಾಷ್ಟ್ರ, ಬಾಗಲಕೋಟೆ, ಧಾರವಾಡ, ಕಾರವಾರ ಜಿಲ್ಲೆಗಳಿಂದ ಬೆಳಗಾವಿಗೆ ಬರುವ ವಾಹನಗಳಿಗೆ ಅಪಾಯವಿದೆ. ಸಂಚಾರ ಮಾರ್ಗದ ಅರಿವಿಲ್ಲದೆ ಪ್ರಯಾಣಿಸಬೇಡಿ ಎಂದು ನಾವು ಮನವಿ ಮಾಡಿಕೊಳ್ಳುತ್ತೇವೆ.

    ಅಪಾಯ ಎಂದು ಸೂಚನಾ ಫಲಕ ಹಾಕುವುದು ಒಂದೆಡೆಯಿರಲಿ, ಎಲ್ಲೆಲ್ಲಿ ಈ ತರಹ ರಸ್ತೆಗಳು ಕೊಚ್ಚಿ ಹೋಗಿವೆ ಎಂಬುದರ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಮಾಹಿತಿ ಪಡೆಯಲೂ ಮಳೆಯಾರ ಸಹಕರಿಸುತ್ತಿಲ್ಲ.

  • ಜೋಗದ ಹಳೆ ಬಾಂಬೆ ಬಂಗ್ಲೆ ನೀರು ಪಾಲಾಗುವ ಸಾಧ್ಯತೆ

    ಜೋಗದ ಹಳೆ ಬಾಂಬೆ ಬಂಗ್ಲೆ ನೀರು ಪಾಲಾಗುವ ಸಾಧ್ಯತೆ

    ಶಿವಮೊಗ್ಗ: ಜೋಗ ಜಲಪಾತದ ರಾಜಾ, ರಾಣಿ, ರೋರರ್ ಹಾಗೂ ರಾಕೆಟ್ ಕವಲುಗಳ ಪಕ್ಕದಲ್ಲಿರುವ ಪುರಾತನವಾದ ‘ಬಾಂಬೆ ಬಂಗ್ಲೆ’ ಎದುರಿನ ಗುಡ್ಡ ಕುಸಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ಸಂಪೂರ್ಣ ಕಟ್ಟಡ ಜೋಗ ಜಲಪಾತದ ತಳ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಪ್ರಸ್ತುತ ಬ್ರಿಟಿಷರ ಕಾಲದ ಬಾಂಬೆ ಬಂಗ್ಲೆಯಲ್ಲಿ ಪ್ರವಾಸಿಗರಿಗೆ, ವಿಐಪಿಗಳಿಗೆ ವಸತಿ ಅವಕಾಶವನ್ನು ಕೊಡುತ್ತಿಲ್ಲ. ಒಂದು ಕಾಲದಲ್ಲಿ ಈ ಕಟ್ಟಡದಿಂದ ಜಲಪಾತದ ನಾಲ್ಕು ಕವಲುಗಳು ಜಲಪಾತದ ತಳದತ್ತ ಬೀಳುವುದನ್ನು ನೋಡುವುದೇ ಒಂದು ಆಕರ್ಷಣೆ ಆಗಿತ್ತು. ಈಗ ಈ ಕಟ್ಟಡದ ನಿರ್ವಹಣೆಗಾಗಿ ಓರ್ವ ಮೇಟಿಯನ್ನು ಮಾತ್ರ ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಕಳೆದ ಐದು ದಿನಗಳ ಮಳೆಯ ರಭಸಕ್ಕೆ ಬಾಂಬೆ ಬಂಗ್ಲೆ ಇರುವ ಗುಡ್ಡ ಕುಸಿಯಲು ಆರಂಭಿಸಿದೆ. ಇದರಿಂದ ಜೋಗ ಜಲಪಾತದ ಎಡ ಪಕ್ಕದಲ್ಲಿ ಕೃತಕವಾದ ಕೆಂಪು ಮಣ್ಣಿನ ಒಂದು ಧಾರೆ ಪ್ರವಾಸಿಗರಿಗೆ ಕಾಣಿಸುತ್ತಿದೆ. ಗುಡ್ಡದಿಂದ ಹರಿದು ಬರುತ್ತಿರುವ ನೀರು ಬಾಂಬೆ ಬಂಗ್ಲೆಯ ತಳದ ಮಣ್ಣನ್ನು ಕೊರೆದು ಜಲಪಾತವಾಗಿ ಧುಮುಕುತಿದೆ. ಇದೇ ರೀತಿ ಮುಂದುವರಿದರೆ ಇನ್ನೆರಡು ದಿನಗಳಲ್ಲಿಯೇ ಸಂಪೂರ್ಣ ಬಂಗ್ಲೆ ತಳ ಸೇರಲಿದೆ.

  • ಭೋರ್ಗರೆದು ಹರಿಯುತ್ತಿರುವ ಜಲಾಶಯದಲ್ಲಿ ಜನರ ಸೆಲ್ಫಿ ಹುಚ್ಚಾಟ

    ಭೋರ್ಗರೆದು ಹರಿಯುತ್ತಿರುವ ಜಲಾಶಯದಲ್ಲಿ ಜನರ ಸೆಲ್ಫಿ ಹುಚ್ಚಾಟ

    ಯಾದಗಿರಿ: ಒಂದು ಕಡೆ ಕೃಷ್ಣ ನದಿ ತೀರದಲ್ಲಿ ಪ್ರವಾಹದ ಭೀತಿ, ಮತ್ತೊಂದು ಸಾಗರದಂತೆ ಹರಿಯುತ್ತಿರುವ ನಾರಾಯಣಪುರ ಜಲಾಶಯದ ಬಳಿ ಜನರು ಸೆಲ್ಫಿಗಾಗಿ ಮುಗಿದು ಬೀಳುತ್ತಿದ್ದಾರೆ. ಜನರ ಸೆಲ್ಫಿ ಹುಚ್ಚು ಭಾರಿ ಅನಾಹುತ ಸೃಷ್ಟಿಸುವಂತಿದೆ.

    ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆರಾಯನ ಅಬ್ಬರಕ್ಕೆ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣಕ್ಕೆ ನಾರಾಯಣಪುರ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಈ ಮಧ್ಯೆ ಜಲಾಯಶಯದಿಂದ ನೀರು ಹೊರಹೋಗುವ ದೃಶ್ಯವನ್ನು ನೋಡಲು ಜನರು ತಾ ಮುಂದು ನಾ ಮುಂದು ಎಂದು ಬರುತ್ತಿದ್ದಾರೆ. ಅಲ್ಲದೆ ಭೋರ್ಗರೆದು ಹರಿಯುತ್ತಿರುವ ನೀರನ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ. ಫೋಟೋ ಕ್ಲಿಕ್ಕಿಸುವಾಗ ಸ್ವಲ್ಪ ಯಾಮಾರಿದರು ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರು ನೀರಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

    ಪ್ರವಾಸಿಗರು ಪ್ರಾಣದ ಹಂಗು ತೊರೆದು ಸೆಲ್ಫಿ ತೆಗದುಕೊಳ್ಳುತ್ತಿದ್ದರು ಅಲ್ಲಿನ ಸಿಬ್ಬಂದಿಯಾಗಲಿ, ಯಾದಗಿರಿ ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜಲಾಶಯ ಬಾಯಿಗೆ ಜನರನ್ನು ಬಿಟ್ಟ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ. ಜಲಾಶಯದ ಮುಖ್ಯ ಗೇಟಿನ ಬಳಿ ಜನರನ್ನು ಬಿಡುವುದು ಬಹಳ ಅಪಾಯಕಾರಿ, ಹೀಗಾಗಿ ಜಲಾಶಯ ಮುಖ್ಯ ಭಾಗಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ನಿಷೇಧವಿದೆ. ಹೀಗಿದ್ದರೂ ಪ್ರವಾಸಿಗರು ಕ್ಯಾರೆ ಎನ್ನದೆ ಜಲಾಶಯದಲ್ಲಿ ಮನಬಂದಂತೆ ವರ್ತನೆ ಮಾಡುತ್ತಿದ್ದಾರೆ.

    ಸ್ಥಳದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲ. ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಂಡಿಲ್ಲ. ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರು ಒಂದು ಕ್ಷಣ ಮೈಮರೆತರು ಅನಾಹುತ ನಡೆಯೋದು ಗ್ಯಾರೆಂಟಿ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಗಮನವರಿಸಿ, ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಒಂದೇ ಬಾರಿಗೆ ನಾಲ್ಕು ಹುಲಿಗಳ ದರ್ಶನ

    ಒಂದೇ ಬಾರಿಗೆ ನಾಲ್ಕು ಹುಲಿಗಳ ದರ್ಶನ

    ಮೈಸೂರು: ನಗರದ ನಾಗರಹೊಳೆಯಲ್ಲಿ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿಗಳ ಹಿಂಡಿನ ದರ್ಶನವಾಗಿದೆ.

    ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಹುಲಿಗಳು ಒಂದೇ ಬಾರಿಗೆ ಪ್ರವಾಸಿಗರಿಗೆ ಎದುರಾಗಿವೆ. ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯ ನಾಗರಹೊಳೆ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ರೇಂಜ್‍ನಲ್ಲಿ ಹೀಗೆ ಹುಲಿಗಳ ಹಿಂಡು ಕಾಣಿಸಿದೆ.

    4 ಹುಲಿಗಳನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಕಂಡು ಬರುತ್ತಿದ್ದು ಹುಲಿಗಳನ್ನು ಕಾಣಲೆಂದು ಸಫಾರಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ.

    ಈ ಹಿಂದೆ ಚಾಮರಾಜನಗರದ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಪ್ರವಾಸಿಗರಿಗೆ ಒಂದೇ ಕಡೆ ಮೂರು ಹುಲಿಗಳ ದರ್ಶನವಾಗಿತ್ತು. ಎರಡು ಮರಿ ಹುಲಿಗಳೊಂದಿಗೆ ತಾಯಿ ಹುಲಿ ದರ್ಶನವಾಗಿದ್ದು, ಸಫಾರಿಗೆ ಹೋದ ಪ್ರವಾಸಿಗರಿಗೆ ಸಖತ್ ಪೋಸ್ ನೀಡಿತ್ತು. ಹುಲಿಗಳು ಫೋಟೋಗೆ ಪೋಸ್ ಕೊಟ್ಟ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

  • ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಆರ್ಭಟ – ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ

    ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಆರ್ಭಟ – ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ

    ಬೆಂಗಳೂರು: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಆರ್ಭಟ ಶುರುವಾಗಿದ್ದು, ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

    ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಸಂಪೂರ್ಣ ಭರ್ತಿ ಆಗಿದೆ. ಇದರಿಂದ ವಿಜಯಪುರ, ಬಾಗಲಕೋಟೆ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಜಲಾಶಯದ ಗರಿಷ್ಟ ಮಟ್ಟ 519.60 ಮೀ (123.081 ಟಿಎಂಸಿ) ಇದ್ದು, ಸದ್ಯ 519.25 ಮೀ (119 ಟಿಎಂಸಿ) ನೀರು ಸಂಗ್ರಹಣೆ ಆಗಿದೆ. 1 ಲಕ್ಷ 7 ಸಾವಿರ ಕ್ಯೂಸೆಕ್ ನೀರಿನ ಒಳಹರಿವಿದ್ದು, ಜಲಾಶಯದ 26 ಗೇಟ್ ಮುಖಾಂತರ ನಾರಾಯಣಪುರ ಜಲಾಶಯಕ್ಕೆ 1 ಲಕ್ಷ 32 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. 26 ಕ್ರಸ್ಟ್ ಗೇಟ್‍ಗಳ ಮುಖಾಂತರ ನಾರಾಯಣಪುರ ಜಲಾಶಯಕ್ಕೆ ನೀರು ಬಿಟ್ಟ ಕಾರಣ ಆ ರುದ್ರ ರಮಣೀಯ ದೃಶ್ಯವನ್ನು ನೋಡಲು ಜನರು ಬರುತ್ತಿದ್ದಾರೆ.

    ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ, ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಬಿಡಲಾಗಿದೆ. ಮಹಾರಾಷ್ಟದಾದ್ಯಂತ ಧಾರಾಕಾರ ಮಳೆಯಾಗಿದ್ದು ವಿಜಯಪುರದ ಆಲಮಟ್ಟಿ ಜಲಾಶಯ ತುಂಬಿದೆ. ಈ ಹಿನ್ನೆಲೆಯಲ್ಲಿ ಆಲಮಟ್ಟಿ ಡ್ಯಾಮಿನಿಂದ 1,90,000 ಕ್ಯೂಸೆಕ್ ನೀರನ್ನು ಬಸವಸಾಗರ ಜಲಾಶಯಕ್ಕೆ ನೀರು ಹರಿಬಿಡಲಾಗಿದೆ. ಆದ್ದರಿಂದ ಬಸವಸಾಗರ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿ ಅಪಾಯದ ಮಟ್ಟ ತಲುಪಿದೆ. ರಾತ್ರಿಯಿಂದ ಜಲಾಶಯದ ಒಟ್ಟು 24 ಗೇಟ್‍ಗಳ ಪೈಕಿ, 20 ಗೇಟ್ ಮೂಲಕ ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಆದ್ದರಿಂದ ನದಿ ಪಾತ್ರದ ಜನರಿಗೆ ಯಾದಗಿರಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.

    ರಾಯಚೂರು ಭಾಗದಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಐದು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಕಡದರಗಡ್ಡಿ, ಮ್ಯಾದರಗಡ್ಡಿ ಸೇರಿ ನಾಲ್ಕು ನಡುಗಡ್ಡೆ ಗ್ರಾಮಗಳು ದ್ವೀಪಗಳಾಗಿ ಮಾರ್ಪಟ್ಟಿವೆ. ದೇವದುರ್ಗ ಹೂವಿನಹೆಡಗಿ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದ್ದು ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ದೇವದುರ್ಗ- ಕಲಬುರ್ಗಿ ಮಾರ್ಗ ಸಂಚಾರ ಸಂಪೂರ್ಣ ಬಂದ್ ಆಗಿದೆ. ರಾಯಚೂರು ತಾಲೂಕಿನ ಕುರ್ವಕುಲಾ, ಕುರ್ವಕುರ್ದಾ ಗ್ರಾಮಗಳ ಸಂಪರ್ಕವೂ ಕಡಿತವಾಗಿದ್ದು, ಗ್ರಾಮಸ್ಥರು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ನಡುಗಡ್ಡೆ ಗ್ರಾಮಗಳ ಜನತೆಯ ಸುರಕ್ಷತೆಗಾಗಿ ಜಿಲ್ಲಾಡಳಿತ ವಿವಿಧ ತಂಡಗಳನ್ನು ರಚಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.

    ಬೆಳಗಾವಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಭಾರಿ ಮಳೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಕೂಡ ಬೆಳಗಾವಿ, ಖಾನಾಪೂರ, ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಎಂದು ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಮತ್ತೊಂದು ಕಡೆ, ಖಾನಾಪುರ ತಾಲೂಕಿನ ಸಾತಳಿ, ಮಾಚಳಿ ಗ್ರಾಮದ, ಕಿರವಾಡ, ಹಣಬರವಾಡ ಸೇರಿದಂತೆ 20ಕ್ಕೂ ಅಧಿಕ ಗ್ರಾಮಗಳು ಈ ಅರಣ್ಯ ಪ್ರದೇಶದಲ್ಲಿದ್ದು ಮಳೆಗಾಲ ಆರಂಭವಾದ್ರೇ ಸಾಕು ಈ ಗ್ರಾಮಗಳ ಜನರು ಜೀವಭಯದಲ್ಲಿ ಬದುಕುತ್ತಿದ್ದಾರೆ. 4 ಗ್ರಾಮಗಳಿಗೆ ನದಿ ದಾಟಲು ಆ ಒಂದು ಬಿದಿರಿನ ತೂಗುಯ್ಯಾಲೆಯೇ ಆಧಾರ. ಸರ್ಕಾರದ ಗಮನಕ್ಕೆ ತಂದ್ರೂ ಪ್ರಯೋಜನ ಇಲ್ಲ.

    ಮಹಾರಾಷ್ಟದಲ್ಲಿ ಮಳೆ ಎಫೆಕ್ಟ್ ನಿಂದಾಗಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದರಿಂದ, ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಜಲಾವೃತ ಸ್ಥಿತಿಯಲ್ಲೇ ಮುಂದುವರಿದಿವೆ. ರಾಯಬಾಗ ತಾಲೂಕಿನ ಕುಡಚಿ – ಉಗಾರ, ಕಲ್ಲೋಳ- ಯಡೂರ, ಮಲಿಕವಾಡ- ದತ್ತವಾಡ ಸೇರಿದಂತೆ 7 ಸೇತುವೆಗಳು ನೀರಿನಲ್ಲೇ ಇವೆ. ದೂದಗಂಗಾ, ವೇದಗಂಗಾ, ಕೃಷ್ಣಾ , ನದಿಗೆ ಅಡ್ಡಲಾಗಿ ಈ ಸೇತುವೆಗಳನ್ನು ನಿರ್ಮಿಸಲಾಗಿದೆ. ಸೇತುವೆ ಮುಳುಗಡೆಯಿಂದ ಪ್ರಯಾಣಿಕರು ಪರದಾಡ್ತಿದ್ದಾರೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ, ಮುಲ್ಲಾನಕಿ ದರ್ಗಾ, ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನಗಳೂ ಜಲಾವೃತವಾಗಿವೆ.

    ಕಬಿನಿ ಹಾಗೂ ಕೆಆರ್‍ಎಸ್‍ನಿಂದ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಪರಿಣಾಮ ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಜಲಪಾತ ಮೈದುಂಬಿ, ಧುಮ್ಮಿಕ್ಕುತ್ತಿ. ಪ್ರವಾಸಿಗರ ಸಂಖ್ಯೆಯೂ ನಿಧಾನವಾಗಿ ಹೆಚ್ಚಾಗ್ತಿದೆ.

  • ಬನ್ನೇರುಘಟ್ಟದಲ್ಲಿದೆ ಆರು ತಿಂಗಳ ‘ಹಿಮಾದಾಸ್’ ಹುಲಿಮರಿ

    ಬನ್ನೇರುಘಟ್ಟದಲ್ಲಿದೆ ಆರು ತಿಂಗಳ ‘ಹಿಮಾದಾಸ್’ ಹುಲಿಮರಿ

    ಬೆಂಗಳೂರು: ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅವರ ಹೆಸರನ್ನು ಹುಲಿಮರಿಗೆ ಇಡುವ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನ ಗೌರವ ಸಲ್ಲಿಸಿದೆ.

    ಹಿಮಾ ದಾಸ್ ಒಂದು ತಿಂಗಳ ಕಡಿಮೆ ಅವಧಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಿನ್ನದ ಪದಕ ಗೆದ್ದಿದ್ದಾರೆ. ಹಾಗಾಗಿ ಅವರಿಗೆ ಗೌರವ ನೀಸಲು ವಿಶ್ವ ಹುಲಿ ದಿನಾಚರಣೆಯ ದಿನದಂದು ಬನ್ನೇರುಘಟ್ಟ ಪಾರ್ಕಿನಲ್ಲಿ 6 ತಿಂಗಳ ರಾಯಲ್ ಬೆಂಗಾಲ್ ಹುಲಿಮರಿಗೆ ಹಿಮಾ ದಾಸ್ ಎಂದು ಹೆಸರಿಟ್ಟಿದ್ದಾರೆ.

    ವಿಶ್ವ ಹುಲಿ ದಿನಾಚರಣೆ ಆಚರಿಸುವ ವೇಳೆ ಮೃಗಾಲಯದ ಯೋಜನೆಗಳನ್ನು ಮತ್ತು ಉಪಕ್ರಮವನ್ನು ಹೇಳುವಾಗ ಸರ್ಕಾರಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ನವಶ್ರೀ ವಿಪಿನ್ ಸಿಂಗ್ ಇದನ್ನು ಘೋಷಿಸಿದ್ದಾರೆ. ಅಲ್ಲದೆ ವಿಶ್ವ ಹುಲಿ ದಿನಾಚರಣೆಯಂದು ಸಾರ್ವಜನಿಕರು ವೀಕ್ಷಿಸಲು ಎಂದು 8 ಹುಲಿಗಳನ್ನು ಸಫಾರಿಗೆ ಬಿಟ್ಟಿದ್ದೇವು. ಒಟ್ಟು 8 ಹುಲಿಯಲ್ಲಿ ತಾಯಿ ಸೇರಿ 7 ಮಕ್ಕಳಿದ್ದು, ಒಂದಕ್ಕೆ ಹಿಮಾ ದಾಸ್ ಅವರ ಹೆಸರನ್ನು ಇಡಲಾಗಿದೆ. ಕಳೆದ 20 ದಿನದಲ್ಲಿ ಹಿಮಾ ದಾಸ್ 5 ಚಿನ್ನದ ಪದಕ ಗೆದ್ದಿದ್ದು, ಹಾಗಾಗಿ ನಾವು ಈ ರೀತಿ ಅವರಿಗೆ ಗೌರವ ಸೂಚಿಸುತ್ತಿದ್ದೇವೆ ಎಂದು ನವಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.

    ಹಿಮಾ ಅವರ ಐದು ಚಿನ್ನದ ಪದಕದ ಪಟ್ಟಿ:
    1. ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

    2. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.

    3. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.

    4. ಜುಲೈ 18ರಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

    5. ಈಗ ಜುಲೈ 20ರಂದು 400 ಮೀಟರ್ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಿಸಿದ್ದಾರೆ.

  • ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್

    ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್

    ಮಡಿಕೇರಿ: ತನ್ನ ನೈಜ ಪ್ರಕೃತಿ ಸೌಂದರ್ಯದಿಂದ ಲಕ್ಷಾಂತರ ಮಂದಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಕರ್ನಾಟಕದ ಸ್ವಿಡ್ಜರ್ ಲ್ಯಾಂಡ್ ಕೊಡಗಿನಲ್ಲಿ ಈಗ ಪ್ರವಾಸಿಗರ ಅಬ್ಬರ ಜೋರಾಗಿದೆ. ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್ ಆಗಿದ್ದು, ಪ್ರವಾಸಿಗರು ಬೋಟ್ ಮೇಲೇರಿ ದುಬಾರೆ ಕ್ಯಾಂಪ್ ಕಡೆ ತೆರಳಿ ಆನೆಗಳ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    ವೀಕೆಂಡ್ ಬಂದರೆ ಸಾಕು ಮಂಜಿನ ನಗರಿ ಮಡಿಕೇರಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ದೇಶದ ನಾನಾ ಭಾಗಗಳಿಂದ ಆಗಮಿಸುತ್ತಿರುವ ಪ್ರವಾಸಿಗಳು ಕೊಡಗಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ದುಬಾರೆ ಸಾಕಾನೆ ಶಿಬಿರವಂತೂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ತಾಣಕ್ಕೆ ಬರುವ ಪ್ರವಾಸಿಗರು ಒಂದಷ್ಟು ಕಾಲ ಆನೆಗಳ ಜೊತೆ ಕಳೆಯಲೇ ಬೇಕು.

    ನದಿ ನೀರು ಹೆಚ್ಚಾಗಿದ್ದ ಪರಿಣಾಮ ದುಬಾರೆಗೆ ನಿಷೇಧ ಹೇರಲಾಗಿತ್ತು. ಯಾಕೆಂದರೆ ಒಂದು ತೀರದಿಂದ ಇನ್ನೊಂದು ತೀರದಲ್ಲಿರುವ ಸಾಕಾನೆ ಶಿಬಿರಕ್ಕೆ ಹೋಗಬೇಕು ಎಂದರೆ ಸುಮಾರು 300 ಮೀ. ಕಾವೇರಿ ನದಿಯಲ್ಲಿ ಬೋಟಿಂಗ್ ಮಾಡಿಕೊಂಡು ಹೋಗಬೇಕು. ಕಾವೇರಿ ನದಿಯ ನೀರು ಮುಂಗಾರು ಮಳೆಗೆ ಹೆಚ್ಚಾಗಿದ್ದ ಪರಿಣಾಮ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವೇಶ ಇರಲಿಲ್ಲ. ಜೊತೆಗೆ ಬೋಟ್ ವ್ಯವಸ್ಥೆ ಕೂಡ ಇಲ್ಲದೆ ಪ್ರವಾಸಿಗರು ಆನೆ ಶಿಬಿರದ ಕಡೆ ತೆರಳಲಾಗದೆ ಬೇಸರ ವ್ಯಕ್ತಪಡಿಸಿದರು.

    ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಬಿತ್ತರಿಸಿತ್ತು. ಇದೀಗ ವರದಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಮೂರು ಬೋಟ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದೆ. ಬೋಟ್ ಮೂಲಕ ಸಾಗುವ ಪ್ರವಾಸಿಗರು ಸಾಕಾನೆ ಶಿಬಿರ ತಲುಪಿ ಸಾಕಾನೆಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.