Tag: Tourist

  • ಇಯರ್ ಎಂಡ್ ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ದಂಡು

    ಇಯರ್ ಎಂಡ್ ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ದಂಡು

    ಮಡಿಕೇರಿ: ಇಂದು 2019ರ ಕೂನೆಯ ದಿನ ಆಗಿದ್ದು, ಎಲ್ಲೆಲ್ಲೂ ಹೂಸ ವರ್ಷದ ನಿರೀಕ್ಷೆಯಲ್ಲಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಹಬ್ಬದ ಸಂಭ್ರಮ ಎಲ್ಲೆಲ್ಲೂ ಕಂಡು ಬರುತ್ತಿದೆ. ಪ್ರಕೃತಿಯ ತವರು, ಹಸಿರಸಿರಿಯ ನಡುವೆ ಸುಂದರ ಪ್ರವಾಸಿತಾಣಗಳನ್ನು ಹೂಂದಿರುವ ಕೊಡಗಿನಲ್ಲಂತೂ ಜನರು ಹರ್ಷದ ಹೂಳೆಯಲ್ಲಿ ತೇಲುತ್ತಿದ್ದಾರೆ.

    ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ದಂಡು ಆಗಮಿಸುತ್ತಿದೆ. ಅಬ್ಬಿ ಜಲಪಾತದಲ್ಲಿ 2019ಕ್ಕೆ ವಿದಾಯ ಹೇಳುವುದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ. ಎಲ್ಲರೂ ಹೂಸ ವರ್ಷದ ನಿರೀಕ್ಷೆಯಲ್ಲಿದ್ದಾರೆ.

    ಹಲವು ಸಿಹಿಕಹಿಗಳನ್ನೆಲ್ಲಾ ಹುದುಗಿಸಿಕೂಂಡು ತೆರೆಮರೆಗೆ ಸರಿಯುತ್ತಿರುವ 2019ಕ್ಕೆ ಗುಡ್‍ಬೈ ಹೇಳಲು ದೇಶದ ನಾನಾ ಭಾಗಗಳಿಂದ ಜನರು ಪ್ರಕೃತಿ ತವರು ಮಡಿಕೇರಿಗೆ ಲಗ್ಗೆಯಿಟ್ಟಿದ್ದಾರೆ. ನಿಸರ್ಗದ ಮಡಿಲಲ್ಲಿ ಹೂಸ ವರ್ಷಕ್ಕೆ ಸ್ವಾಗತ ಕೋರಲು ಪ್ರವಾಸಿಗರು ಸಜ್ಜಾಗಿದ್ದಾರೆ.

    ಸುತ್ತಲೂ ಹಚ್ಚ ಹಸಿರಿನಿಂದ ಕಂಗೂಳಿಸುವ ಕಾನನ ನಡುವೆ ಹಾಲ್ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕೋ ಜಲಧಾರೆ ಇನ್ನೇನು ಬೇಕು ಹೇಳಿ. ಇಷ್ಟು ಸಾಕಲ್ಲವೆ? ಒಂದು ಇಯರ್ ಎಂಡ್ ಅನ್ನು ರಸಭರಿತವಾಗಿ ನಂತರ ಪಾರ್ಟಿಗಳಲ್ಲಿ ಎಂಜಾಯ್ ಮಾಡಲು ಸಜ್ಜಾಗಿದ್ದಾರೆ.

  • ಸಫಾರಿಗೆ ಮುಗಿಬಿದ್ದ ಪ್ರವಾಸಿಗರು – ಜಿಪ್ಸಿಗೆ ಎಲ್ಲಿಲ್ಲದ ಬೇಡಿಕೆ

    ಸಫಾರಿಗೆ ಮುಗಿಬಿದ್ದ ಪ್ರವಾಸಿಗರು – ಜಿಪ್ಸಿಗೆ ಎಲ್ಲಿಲ್ಲದ ಬೇಡಿಕೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಬಂಡೀಪುರ, ಕೆ ಗುಡಿಯಲ್ಲಿ ಸಫಾರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಅದರಲ್ಲೂ ಜಿಪ್ಸಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

    ಬಂಡೀಪುರ, ಕೆ ಗುಡಿಯಲ್ಲಿ ಸಫಾರಿ ವೀಕ್ಷಣೆಗೆ ಬೆಳಗ್ಗೆಯಿಂದಲೆ ಜನರು ಮುಗಿಬಿದ್ದಿದ್ದಾರೆ. ಅದರಲ್ಲೂ ಮಿನಿ ಬಸ್‍ನಲ್ಲಿ ಸಫಾರಿ ವೀಕ್ಷಣೆಗೆ ತೆರಳುವ ಬದಲೂ ಜಿಪ್ಸಿ ವಾಹನಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಜಿಪ್ಸಿ ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ಬೇಡಿಕೆಗೆ ಸ್ಪಂದಿಸಲು ಅರಣ್ಯ ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ.

    ಅಲ್ಲದೆ ಮುಂದಿನ ವರ್ಷದ ಜನವರಿ 5ರವರೆಗೆ ಕೂಡ ಮುಂಗಡವಾಗಿ ಜಿಪ್ಸಿಯನ್ನು ಬುಕ್ ಮಾಡಲಾಗಿದೆ. ಇದರಿಂದ ಕೆಲವರು ನಿರಾಸೆಗೆ ಒಳಗಾಗಿದ್ದು, ಹೇಗದರೂ ಮಾಡಿ ಜಿಪ್ಸಿ ಸಿಕ್ಕಿದರೆ ಸಾಕಪ್ಪಾ ಎಂದು ಹೇಳುತ್ತಿದ್ದಾರೆ.

    ಇತ್ತ ಜಿಲ್ಲೆಯಲ್ಲಿ ಮೂರು ಹುಲಿ ಸಂರಕ್ಷಿತಾರಣ್ಯ ಪ್ರದೇಶವಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ, ಮಲೆ ಮಹದೇಶ್ವರ ಸಂರಕ್ಷಿತಾರಣ್ಯವನ್ನು ಒಳಗೊಂಡಿದೆ. ಈ ಮೂರು ಕೂಡ ಹುಲಿ ಸಂರಕ್ಷಿತಾರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ.

  • ವರ್ಷದ ಕಡೆಯ ಭಾನುವಾರ ಬಂಡೀಪುರಕ್ಕೆ ಹರಿದು ಬಂದ ಜನಸಾಗರ

    ವರ್ಷದ ಕಡೆಯ ಭಾನುವಾರ ಬಂಡೀಪುರಕ್ಕೆ ಹರಿದು ಬಂದ ಜನಸಾಗರ

    ಚಾಮರಾಜನಗರ: ಇಂದು ತಿಂಗಳ ಕಡೆಯ ಭಾನುವಾರ ಕೂಡ ಹೌದು. ಅಷ್ಟೇ ಏಕೆ ಈ ವರ್ಷದ ಕಡೆ ಭಾನುವಾರ ಕೂಡ ಹೌದು. ಹೀಗಾಗಿಯೇ ಗಡಿ ಜಿಲ್ಲೆ ಚಾಮರಾಜನಗರದ ಪ್ರವಾಸಿ ತಾಣಗಳಲ್ಲಿ ಈಗ ಜನವೋ ಜನ. ಅದರಲ್ಲೂ ವನ್ಯಜೀವಿ ಮತ್ತು ಪ್ರಕೃತಿ ಪ್ರಿಯರು ಜಿಲ್ಲೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ರಾಜ್ಯಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗದಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಇದರ ಜೊತೆಗೆ ವನ್ಯಜೀವಿಗಳ ದರ್ಶನ ಪ್ರವಾಸಿಗರನ್ನು ಮತ್ತಷ್ಟು ದಿಲ್ ಖುಷ್ ಮಾಡಿಸಿದೆ.

    29 ಡಿಸೆಂಬರ್ 2019ರ ಕಡೆಯ ಭಾನುವಾರ. ನೂತನ ವರ್ಷಾರಂಭ ಸ್ವಾಗತಕ್ಕೆ ಎಲ್ಲರೂ ಕಾತುರರಾಗಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರವಾಸಿ ತಾಣಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ. ಹೊಸ ವರ್ಷಾಚರಣೆ ಸಂಭ್ರಮ ಆಚರಿಸಲು ತಮಿಳುನಾಡಿನ ಊಟಿ. ಕೇರಳ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ತೆರಳುತ್ತಿದ್ದಾರೆ. ಊಟಿ, ಕೇರಳಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಬಂಡೀಪುರ ರಾಷ್ಟ್ರೀಯ ಉದ್ಯಾನ ಇರುವುದರಿಂದ ಬಂಡೀಪುರಕ್ಕೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

    ಸಾಮಾನ್ಯವಾಗಿ ರಜೆ ದಿನಗಳಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಆದರೆ ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಈಗ ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.

    ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ದಟ್ಟ ಕಾನನದ ನಡುವೆ ಹಸಿರು ಸೀರೆಯುಟ್ಟು ಕಂಗೊಳಿಸುವ ಅರಣ್ಯ ಪ್ರದೇಶದಲ್ಲಿ ತಂಪಾದ ವಾತಾರಣ ಇರುವುದರಿಂದ ಪೋಷಕರು ಮಕ್ಕಳೊಂದಿಗೆ, ಸ್ನೇಹಿತರೊಂದಿಗೆ ಬಂಡೀಪುರಕ್ಕೆ ಭೇಟಿ ನೀಡಿ ಒಂದು ಸುತ್ತು ಸಫಾರಿ ಮುಗಿಸಿಕೊಂಡು ನೂತನ ವರ್ಷಾಚರಣೆಗೆ ಊಟಿ ಹಾಗೂ ಕೇರಳದತ್ತ ಪ್ರವಾಸಿಗರು ತೆರಳುತ್ತಿದ್ದಾರೆ.

    ಅತ್ತ ಸುಡುವ ಬಿಸಿಲು ಇಲ್ಲದೆ, ಇತ್ತ ಮಳೆಯೂ ಇಲ್ಲದೆ ಇರುವುದರಿಂದ ಹುಲಿ, ಆನೆ, ಚಿರತೆ, ಜಿಂಕೆ, ಸೀಳುನಾಯಿ, ಕಾಡೆಮ್ಮೆಗಳಂತಹ ವನ್ಯಜೀವಿಗಳು ಹೇರಳವಾಗಿ ನೋಡಲು ಸಿಗುತ್ತಿರುವುದು ಪ್ರವಾಸಿಗರಲ್ಲಿ ಮತ್ತಷ್ಟು ಸಂತಸ ತರುತ್ತಿದೆ. ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಬಂಡೀಪುರ ಸಂಪೂರ್ಣವಾಗಿ ಹಸಿರಿನಿಂದ ಕಂಗೊಳಿಸುತ್ತಿದೆ. ಹಸಿರು ಸೀರೆಯುಟ್ಟ ಮದುವಣಗಿತ್ತಿ ರೀತಿಯ ಬಂಡೀಪುರ ಎಲ್ಲಾ ವರ್ಗದವರನ್ನು ಹೆಚ್ಚು ಹೆಚ್ಚು ಅಕರ್ಷಿಸುತ್ತಿದೆ.

    ಪ್ರವಾಸಿಗರು ನೂತನ ವರ್ಷಾಚರಣೆಗೆ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದರೆ ಬರುವ ಪ್ರವಾಸಿಗರನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಹೈರಣಾಗಿ ಹೋಗಿದೆ. ಕೆಲವರಿಗೆ ಸಫಾರಿ ಹೋಗಲು ಟಿಕೆಟ್ ಸಿಗದೆ ನಿರಾಸೆಯಿಂದ ವಾಪಸ್ ಹೋದ ಪ್ರಸಂಗ ಕೂಡ ನಡೆದಿದೆ. ಪ್ರವಾಸಿಗರ ಆಗಮನದಿಂದ ಅಷ್ಟೇ ಪ್ರಮಾಣದಲ್ಲಿ ಅರಣ್ಯ ಇಲಾಖೆಗೆ ಆದಾಯ ಹರಿದು ಬರುತ್ತಿರುವುದು ಸಂತಸದ ವಿಷಯವಾಗಿದೆ.

  • ಮೂರೇ ದಿನದಲ್ಲಿ ಲಕ್ಷ ದಾಟಿದ ಪ್ರವಾಸಿಗರು

    ಮೂರೇ ದಿನದಲ್ಲಿ ಲಕ್ಷ ದಾಟಿದ ಪ್ರವಾಸಿಗರು

    ಮೈಸೂರು: ವರ್ಷಾಂತ್ಯದ ಸಂಭ್ರಮಕ್ಕಾಗಿ ಮೈಸೂರಿನ ಅರಮನೆ ಆವರಣದಲ್ಲಿ ಅರಳಿರುವ ಫಲ ಪುಷ್ಪ ಪ್ರದರ್ಶನಕ್ಕೆ ಮೂರೇ ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ.

    ಅರಮನೆ ಆಡಳಿತ ಮಂಡಳಿಯಿಂದ ಅರಮನೆ ಆವರಣದಲ್ಲಿ ಮಾಗಿ ಉತ್ಸಾವದ ಅಂಗವಾಗಿ ಈ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಬೆಂಗಳೂರು ಅರಮನೆ, ಚಂದ್ರಯಾನ-2, ಜಯಚಾಮರಾಜ ಒಡೆಯರ್ ಸೇರಿ ನಾನಾ ಮಾದರಿಗಳು ಫಲಪುಷ್ಪದಲ್ಲಿ ಅರಳಿವೆ. ಇದು ನೋಡುಗರ ಕಣ್ಮನ ಸೆಳೆಯುತ್ತಿದೆ.

    ಫಲಪುಷ್ಪ ಪ್ರದರ್ಶನದ ಮೊದಲ ದಿನ 37 ಸಾವಿರ ಮಂದಿ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಎರಡನೇ ದಿನ 45 ಸಾವಿರ ಜನ ಭೇಟಿ ಕೊಟ್ಟಿದ್ದಾರೆ. ಮೂರನೇ ದಿನವೂ 40 ಸಾವಿರ ಜನ ಭೇಟಿ ಕೊಟ್ಟಿದ್ದಾರೆ. ಅಲ್ಲಿಗೆ ಪ್ರದರ್ಶನ ಮುಗಿಯುವ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾ ಆಗುವುದರಲ್ಲಿ ಅನುಮಾನಗಳೇ ಇಲ್ಲ.

  • 116 ಅಡಿ ಎತ್ತರದ ಬಸವಣ್ಣ ಪುತ್ಥಳಿಗೂ ಹಿಡಿದ ಗ್ರಹಣ

    116 ಅಡಿ ಎತ್ತರದ ಬಸವಣ್ಣ ಪುತ್ಥಳಿಗೂ ಹಿಡಿದ ಗ್ರಹಣ

    ಗದಗ: ಇಂದು ಅಪರೂಪದ ಕಂಕಣ ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಕೆಲವು ರಸ್ತೆ ಹಾಗೂ ಪ್ರವಾಸಿ ತಾಣಗಳು ಖಾಲಿ ಖಾಲಿಯಾಗಿವೆ.

    ನಗರದ ಭೀಷ್ಮಕೆರೆ ಆವರಣದಲ್ಲಿ ನಿರ್ಮಾಣವಾಗಿರುವ 116 ಅಡಿ ಎತ್ತರದ ವಿಶ್ವಗುರು ಬಸವಣ್ಣ ಪುತ್ಥಳಿ ವೀಕ್ಷಣೆಗೆ ಪ್ರತಿದಿನ ನೂರಾರು ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬರುತ್ತಿದ್ದರು. ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಿದ್ದು, ಈ ಸಂದರ್ಭದಲ್ಲಿ ಜನಜಂಗುಳಿಯಿಂದ ಕೂಡಿರುತಿತ್ತು.

    116 ಅಡಿ ಎತ್ತರದ ಮೂರ್ತಿ ನೋಡುವುದರ ಜೊತೆಗೆ ಪುತ್ಥಳಿ ಕೆಳಭಾಗದಲ್ಲಿನ ಬಸವಣ್ಣನವರ ಜೀವನ ಚರಿತ್ರೆ, ಚಿತ್ರಗಳು, ಮನಸ್ಸಿಗೆ ಮೃದು ನೀಡುವ ಉದ್ಯಾನವನ, ಕೈಗೆಟುಕವ ರೀತಿಯಲ್ಲಿರುವ ಕೆರೆ ನೀರು, ಮಕ್ಕಳು ಆಟವಾಡಲು ಮೈದಾನ, ಮಕ್ಕಳ ಉದ್ಯಾನವನ ಸಹ ಇಲ್ಲಿದೆ.

    ನಿತ್ಯ ಈ ಗಾರ್ಡನ್‍ನಲ್ಲಿ ಮಕ್ಕಳು, ಮಹಿಳೆಯರಿಂದ ತುಂಬಿ ತುಳುಕುತಿತ್ತು. ಕೆಲವರು ಕುಟುಂಬ ಸಮೇತ ಬಂದು ಬಸವಣ್ಣ ಪುತ್ಥಳಿ ನೋಡಿಕೊಂಡು ನಂತರ ಉಪಹಾರ ಸೇವಿಸಿ ಖುಷಿ ಖುಷಿಯಾಗಿ ಹೋಗುತ್ತಿದ್ದರು. ಆದರೆ ಇಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಯಾರು ಮನೆಯಿಂದ ಹೊರ ಬಂದಿಲ್ಲ. ಎಲ್ಲವೂ ಖಾಲಿ ಖಾಲಿ ಗೋಚರವಾಗುತ್ತಿದೆ.

    ಸಿಬ್ಬಂದಿ ಮಾತ್ರ ಕಸ ಕಡ್ಡಿಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಗ್ರಹಣ ವೇಳೆ ಕೆಲವರು ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ರೆ, ಇನ್ನು ಕೆಲವರು ಮನೆಯಿಂದ ಹೊರಹೋಗದಂತೆ ಮನೆಯಲ್ಲಿ ಕುಳಿತಂತೆ ಕಾಣಿಸುತ್ತೆ. ಇಂದು ಈ ಪ್ರವಾಸಿ ತಾಣ ಖಾಲಿ ಖಾಲಿ ಆಗಿರುವುದನ್ನು ನೋಡಿದ್ರೆ ಬಸವಣ್ಣನಿಗೂ ಸೂರ್ಯಗ್ರಹಣ ಹಿಡದಿದೇಯಾ ಎಂದು ಎನಿಸುತ್ತೆ.

  • ಪ್ರವಾಸಿಗರ ಹಾಟ್‍ಸ್ಪಾಟ್ ಆದ ಕಾಮೇನಹಳ್ಳಿ ಜಲಪಾತ

    ಪ್ರವಾಸಿಗರ ಹಾಟ್‍ಸ್ಪಾಟ್ ಆದ ಕಾಮೇನಹಳ್ಳಿ ಜಲಪಾತ

    ಚಿಕ್ಕಮಗಳೂರು: ಮಳೆನಾಡು ಮಲೆನಾಡಲ್ಲಿ ಮಳೆ ಬಹುತೇಕ ಕಡಿಮೆಯಾಗಿದ್ದು, ನಿಂತಲ್ಲೇ ದೇಹವನ್ನ ನಡುಗಿಸುವ ರಣಚಳಿ ಆರಂಭವಾಗಿದೆ. ಆದರೆ ವರ್ಷಪೂರ್ತಿ ನೀರನ್ನು ಹಿಡಿದಿಟ್ಟು ಹರಿಸುವ ಅರಣ್ಯದ ಶಕ್ತಿ ಶೋಲಾ ಕಾಡುಗಳಲ್ಲಿ ನೀರಿನ ಪ್ರಮಾಣ ಹಾಗೆ ಇದ್ದು ಜಲಪಾತಗಳಿಗೆ ನವ ಚೈತನ್ಯ ಬಂದಿದೆ. ಚಂದ್ರದ್ರೋಣ ಪರ್ವತಗಳ ಸೆರಗಲ್ಲಿರುವ ಕಲ್ಲತ್ತಿಗರಿ, ಡೈಮಂಡ್, ಶಬರಿ ಹಾಗೂ ಹೆಬ್ಬೆ ಜಲಪಾತಗಳ ವೈಭೋಗವನ್ನು ನೋಡಲೆರಡು ಕಣ್ಣುಗಳು ಸಾಲದಂತಾಗಿದೆ. ಅದರಲ್ಲೂ, ಚಿಕ್ಕಮಗಳೂರಿನಿಂದ ಅನತಿ ದೂರದಲ್ಲಿರುವ ಕಾಮೇನಹಳ್ಳಿ ಜಲಪಾತ ಬಂಡೆಗಳ ಹಾಲು ಸುರಿಯುತ್ತಿರುವಂತೆ ಭಾಸವಾಗುತ್ತಿದೆ.

    ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಜಲಪಾತದಲ್ಲೀಗ ದೃಶ್ಯ ಕಾವ್ಯವೇ ಮನೆ ಮಾಡಿದೆ. ಪಶ್ಚಿಮ ಘಟ್ಟಗಳ ಸಾಲಿನಿಂದ ಹರಿದು ಬರುವ ಗಂಗಾ ಮಾತೆ ಕಾಮೇನಹಳ್ಳಿಯಲ್ಲಿ ಸುಮಾರು 70-90 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದಾಳೆ. ಮೇಲಿಂದ ಶಾಂತವಾಗಿ ಹರಿದು ಬಂದು ಒಮ್ಮೆಲೇ ಎತ್ತರದಿಂದ ಧುಮ್ಮಿಕ್ತಿದ್ದು, ನೀರಿನ ಶಬ್ಧದೊಂದಿಗೆ ಹಕ್ಕಿ-ಪಕ್ಷಿಗಳ ಕಲರವ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಇಲ್ಲಿಗೆ ಬರುತ್ತಿರುವ ಪ್ರವಾಸಿಗರು ಇಲ್ಲಿನ ರಮಣೀಯ ದೃಶ್ಯವನ್ನು ಕಂಡು ಒಬ್ಬೊಬ್ಬರು ಒಂದೊಂದು ಹೆಸರಿನಿಂದ ನಾಮಕರಣ ಮಾಡುತ್ತಿದ್ದಾರೆ. ಕೆಲವರು ಡೈಮಂಡ್ ಫಾಲ್ಸ್ ಎಂದರೆ, ಮತ್ತೆ ಕೆಲವರು ಕುಮಾರಗಿರಿ ಫಾಲ್ಸ್ ಅಂತಾರೆ. ಆದರೆ ಈ ಜಲಪಾತ ವಾಟರ್ ಫಾಲ್ಸ್ ಎಂದೇ ಖ್ಯಾತಿ. ಇದನ್ನೂ ಓದಿ: ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

    ಗಿರಿಶ್ರೇಣಿಗಳಲ್ಲಿ ಮಳೆ ನಿಂತರು ನಿರಂತರವಾಗಿ ಹರಿಯುತ್ತಿರುವ ನೀರಿನಿಂದ ಜಲಪಾತವೀಗ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರ ಹಾಟ್‍ಸ್ಪಾಟ್ ಆಗಿ ಬದಲಾಗಿದೆ. ಗಿರಿ ಮಧ್ಯೆಯಿಂದ ಮಣ್ಣಿನ ಬಣ್ಣದಲ್ಲಿ ಹರಿದು ಬರುವ ನೀರು ಜಲಪಾತದಿಂದ ಧುಮ್ಮಿಕ್ಕುವಾಗ ಹಾಲ್ನೋರೆಯಂತೆ ಭಾಸವಾಗುತ್ತಿರುವುದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಚಿಕ್ಕಮಗಳೂರಿನಿಂದ 30 ಕಿಮೀ ದೂರದಲ್ಲಿರುವ ಈ ಜಲಪಾತಕ್ಕೆ ಸರಿಯಾದ ದಾರಿ ಇಲ್ಲ.

    ಸಖರಾಯಪಟ್ಟಣದ ಸಮೀಪ ಬರುವ ಈ ಜಲಪಾತಕ್ಕೆ ಹೋಗುವುದು ಕೂಡ ಸವಾಲೇ. ಚಿಕ್ಕಮಗಳೂರಿನಿಂದ ಮಲ್ಲೆನಹಳ್ಳಿ ಮಾರ್ಗವಾಗಿ 30 ಕಿ.ಮೀ. ಸಾಗಿ ಕಾಮೇಹಳ್ಳಿಗೆ ಎಂಟ್ರಿಯಾದರೆ ನೀರಿನ ಶಬ್ಧವೇ ನೋಡುಗರಿಗೆ ದಾರಿ ತೋರಿಸುತ್ತೆ. ಬೈಕ್ ಅಥವಾ ಕಾರು ಯಾವುದನ್ನಾದರು ನಿಲ್ಲಿಸಿ ಸುಮಾರು ಒಂದೂವರೆ ಕಿ.ಮೀ. ನಡೆದರೆ ಈ ಪ್ರಕೃತಿಯ ನೈಜ ಸೊಬಗು ಅನಾವರಣಗೊಳ್ಳುತ್ತೆ. ಇದನ್ನೂ ಓದಿ: ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಮನಸೋಲುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದೆದ್ದು, ತಮ್ಮದೇ ಲೋಕದಲ್ಲಿ ಸ್ವಚ್ಚಂದವಾಗಿ ಮೈ ಮರೆಯುತ್ತಾರೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರು ಇಲ್ಲಿನ ಸೌಂದರ್ಯ ಫಿದಾ ಆಗುತ್ತಿದ್ದಾರೆ. ಇಲ್ಲಿನ ಹತ್ತಾರು ಬಂಡೆಗಳು ಡೈಮಂಡ್ ಆಕೃತಿಯಲ್ಲಿರುವುದರಿಂದ ಈ ಜಲಪಾತವನ್ನು ಡೈಮಂಡ್ ಜಲಪಾತ ಎಂದು ಹೇಳುತ್ತಾರೆ. ಅಲ್ಲದೆ ಕಲ್ಲಿನ ಮೇಲೆ ನಿರಂತರವಾಗಿ ಹರಿಯುವ ನೀರು ನಾನಾ ಆಕಾರದಲ್ಲಿ ಕಲ್ಲನ್ನು ಕೊರೆದಿದೆ. ಇದು ನೋಡುಗರಿಗೆ ಮತ್ತಷ್ಟು ಮುದ ನೀಡ್ತಿದೆ.

    ಈ ಸುಂದರ ತಾಣ ಸ್ಥಳಿಯರನ್ನು ಬಿಟ್ಟರೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಈ ಜಾಗದ ಬಗ್ಗೆ ಗೊತ್ತಿರುವವರುವೀಕೆಂಡ್‌ನಲ್ಲಿ ಬಂದು ಕೊರೆಯುವ ನೀರಿನಲ್ಲಿ ಮಿಂದೆದ್ದು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇಲ್ಲಿಗೆ ಹೋಗುವುದಕ್ಕೆ ಸೂಕ್ತ ಮಾರ್ಗವಿಲ್ಲ. ಸರ್ಕಾರ ಈ ತಾಣವನ್ನು ಪ್ರವಾಸೋಧ್ಯಮ ತಾಣವನ್ನಾಗಿಸಿದ್ರೆ ಪ್ರವಾಸಿಗರು ಕಾಫಿನಾಡಿನ ಸೌಂದರ್ಯವನ್ನು ಸವಿಯಬಹುದು, ಸರ್ಕಾರಕ್ಕೂ ಆದಾಯ ಬರಲಿದೆ.

  • ಮೈ ಕೊರೆಯೋ ಚಳಿಯ ವಾತಾವರಣದಲ್ಲಿ ಎಂಜಾಯ್ ಮಾಡ್ತಿರುವ ಪ್ರವಾಸಿಗರು

    ಮೈ ಕೊರೆಯೋ ಚಳಿಯ ವಾತಾವರಣದಲ್ಲಿ ಎಂಜಾಯ್ ಮಾಡ್ತಿರುವ ಪ್ರವಾಸಿಗರು

    ಮಡಿಕೇರಿ: ಮೈ ಕೊರೆಯುವ ಚಳಿಗಾಲ ಬಂದರೆ ಸಾಕು ಮಂಜಿನ ನಗರಿ ಮಡಿಕೇರಿಯಲ್ಲಿ ಜನ ಜಾತ್ರೆಯೇ ಸೇರುತ್ತೆ, ದೇಶದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯುತ್ತಾ ನಿಸರ್ಗದ ಮಡಿಲಲ್ಲಿ ಮೈ ಮರೆಯುತ್ತಾ ಕಳೆದು ಹೋಗುತ್ತಾರೆ. ಚಳಿಯ ವಾತಾವರಣಕ್ಕೆ ಇದೀಗ ಕಾಫಿನಾಡು ರಂಗೇರಿದ್ದು ಪ್ರವಾಸಿಗರು ಕೊಡಗಿಗೆ ಲಗ್ಗೆಯಿಟ್ಟು ಎಂಜಾಯ್ ಮಾಡ್ತಿದ್ದಾರೆ.

    ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಮೈ ಕೊರೆಯುವ ಚಳಿಯ ವಾತಾವರಣ ನಿರ್ಮಾಣವಾಗಿದ್ದು, ಚಳಿಯ ಆಹ್ಲಾದಕಾರ ವಾತಾವರಣವನ್ನು ಸವಿಯಲು ಇದೀಗ ಪ್ರವಾಸಿಗರು ಕೊಡಗಿನತ್ತ ಲಗ್ಗೆ ಹಾಕುತ್ತಿದ್ದಾರೆ. ದೇಶದ ವಿವಿಧೆಡೆಗಳಿಂದ ಆಗಮಿಸಿರುವ ಪ್ರಕೃತಿ ಪ್ರಿಯರು ಕೊಡಗಿನ ಹಿತಕರ ವಾತಾವರಣದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಸಂಜೆ ಆಗುತ್ತಲೆ ಮಡಿಕೇರಿಯ ರಾಜಾಸೀಟ್ ಜನರಿಂದ ತುಂಬಿ ತುಳುಕುತ್ತೆ. ಪ್ರಕೃತಿ ಸೌಂದರ್ಯ ಸವಿಯುತ್ತಲೆ ಸಂಜೆಯ ಹಿತಕರ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಬೆಟ್ಟಗುಡ್ಡಗಳ ನಡುವೆ ಕರಗುವ ಕೆಂಪು ಸೂರ್ಯನನ್ನು ಕಣ್ಣು ತುಂಬಿಕೊಂಡು ಮೈ ಮರೆಯುತ್ತಿದ್ದಾರೆ.

    ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ನಲ್ಲಿ ಮಡಿಕೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚೆ ಭಾರೀ ಸಂಖ್ಯೆಯ ಜನರು ಕೊಡಗಿನತ್ತ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ. ವಿಶೇಷವಾಗಿ ರಾಜಾಸೀಟ್ ತುಂಬೆಲ್ಲಾ ಜನ ಸಾಗರವೇ ತುಂಬಿಕೊಂಡಂತೆ ನೆರೆದಿದ್ದ ಜನಸ್ಥೋಮ ರಾಜಾಸೀಟ್‍ನ ಸೂರ್ಯಾಸ್ಥದ ಸವಿಯನ್ನು ಸವಿಯುತ್ತಾ ತಮ್ಮ ಪ್ರವಾಸದ ಕ್ಷಣಗಳನ್ನು ಎಂಜಾಯ್ ಮಾಡಿದರು.

    ನಿಸರ್ಗದ ಸೌಂದರ್ಯವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಾ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ನಿತ್ಯದ ಕಾಯಕ ಮುಗಿಸಿ ಬೆಟ್ಟಗುಡ್ಡಗಳ ಮಡಿಲಲ್ಲಿ ವಿರಮಿಸುವ ನೇಸರನ ಕಂಡು ಜನರು ಖುಷಿಪಟ್ಟರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಚಳಿಯ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದಾರೆ.

  • ಜೀಪ್ ಮೇಲೆ ಎರಗಿದ ಒಂಟಿ ಸಲಗ

    ಜೀಪ್ ಮೇಲೆ ಎರಗಿದ ಒಂಟಿ ಸಲಗ

    ಮೈಸೂರು: ಆನೆಯೊಂದು ಜೀಪ್‍ನಲ್ಲಿ ಬರುತ್ತಿದ್ದ ಪ್ರವಾಸಿಗರ ಮೇಲೆ ಎರಗಲು ಮುಂದಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ನಾಗರಹೊಳೆ ಸಂರಕ್ಷಿತ ಅರಣ್ಯದ ಬಳಿ ನಡೆದಿದೆ.

    ಪ್ರವಾಸಿಗರು ಜೀಪ್‍ನಲ್ಲಿ ಕಾಡಿನೊಳಗೆ ಹೋಗಿದ್ದರು. ಈ ವೇಳೆ ಕಾಡಾನೆ ಅವರನ್ನು ನೋಡಿ ಜೀಪ್ ಮೇಲೆ ಎರಗಲು ಮುಂದಾಗಿದೆ. ಆದರೆ ಅರಣ್ಯ ಪ್ರದೇಶದ ಟ್ರಂಚ್ ಪಕ್ಕ ಅಳವಡಿಸಿದ್ದ ಕಬ್ಬಿನದ ರಾಡ್‍ಗೆ ಒಂಟಿ ಸಲಗ ಡಿಕ್ಕಿ ಹೊಡೆದಿದೆ. ಕಬ್ಬಿಣದ ರಾಡ್‍ನಿಂದಾಗಿ ಜೀಪ್ ಸವಾರರು ಸೇಫ್ ಆಗಿದ್ದಾರೆ.

    ಇತ್ತೀಚೆಗೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಲ್ತಾನ ಎಂಬ ಹುಲಿ ಪ್ರವಾಸಿಗರ ವಾಹನವನ್ನು ಬೆನ್ನಟ್ಟಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಆದರೆ ಪ್ರಾಣಿ ಪ್ರಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹುಲಿ ವಾಹನವನ್ನು ಬೆನ್ನಟ್ಟಿಲ್ಲ ಬದಲಿಗೆ ಆಟವಾಡುತ್ತಿದೆ ಎಂದು ಹೇಳಿದ್ದರು.

    ಕಾಡು ಪ್ರಾಣಿಗಳು ತಮ್ಮ ವಾಸಸ್ಥಾನವನ್ನು ಕಳೆದುಕೊಂಡಿರುವುದರಿಂದ ಈ ರೀತಿ ಮಾಡುತ್ತಿವೆ ಎಂದು ಕೆಲವರು ಹೇಳಿದ್ದರು. ಆದರೆ ವರದಿಯ ಪ್ರಕಾರ ರಾಷ್ಟ್ರೀಯ ಉದ್ಯಾನ ಹೆಚ್ಚು ಹುಲಿಗಳ ತಾಣವಾಗಿದೆ. ತನ್ನ ಸಾಮಥ್ರ್ಯಕ್ಕಿಂತಲೂ ಹೆಚ್ಚು ಹುಲಿಗಳನ್ನು ಹೊಂದಿದೆ ಎಂದು ವರದಿಯಾಗಿದೆ.

  • ಮಳೆ ಇಲ್ಲದಿದ್ರೂ ವಿಸ್ಮಯ ರೀತಿಯಲ್ಲಿ ಬೆಟ್ಟದಿಂದ ಹರಿಯುತ್ತಿರುವ ಝಳು ಝಳು ನೀರು

    ಮಳೆ ಇಲ್ಲದಿದ್ರೂ ವಿಸ್ಮಯ ರೀತಿಯಲ್ಲಿ ಬೆಟ್ಟದಿಂದ ಹರಿಯುತ್ತಿರುವ ಝಳು ಝಳು ನೀರು

    ಬೆಂಗಳೂರು: ಮಳೆಗಾಲ ಕಳೆದು ಬೇಸಿಗೆ ಕಾಲದ ಆರಂಭದಲ್ಲಿ ನಾನಾ ವಿಸ್ಮಯಕಾರಿ ಘಟನೆಗಳಿಗೆ ಸಾಕ್ಷಿಯಾಗಿರುವ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಬೆಟ್ಟದಲ್ಲಿ ಈ ಬಾರಿ ಮತ್ತೊಂದು ಪವಾಡಕ್ಕೆ ಕಾರಣವಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟ, ಸಮುದ್ರ ಮಟ್ಟದಿಂದ ಸರಿಸುಮಾರು 4620 ಅಡಿ ಎತ್ತರವಿದೆ. ಈ ಬೆಟ್ಟದ ಮಧ್ಯದ ಭಾಗದಲ್ಲಿ ಬೆಳ್ಳಿಯ ಹಾಗೂ ಹಾಲಿನ ಲೇಪನ ರೀತಿಯಲ್ಲಿ ಜೋಪು ನೀರು ಹರಿಯುತ್ತಿರುವುದು ಸ್ಥಳೀಯ ಜನರಲ್ಲಿ ಸಂತಸ ಮೂಡಿಸಿದೆ. ಈ ಶಿವಗಂಗೆ ಬೆಟ್ಟ ಸಂಪೂರ್ಣ ಬೃಹತ್ ಆಕಾರದ ಕಲ್ಲು ಬಂಡೆಗಳಿಂದ ಕೂಡಿದ್ದು, ಈ ಬಂಡೆಗಳ ಮಧ್ಯೆ ಹರಿಯುತ್ತಿರುವ ಜೋಪು ನೀರನ್ನು ನೋಡಲು ಸುಂದರವಾಗಿದೆ.

    ಈ ಶಿವಗಂಗೆ ಬೆಟ್ಟ ಪುರಾತತ್ವ, ಮುಜರಾಯಿ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದು, ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಸಹ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಸುಂದರ ರಮಣೀಯವಾಗಿರುವ ಧಾರ್ಮಿಕ ದತ್ತಿ ಹಾಗೂ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದ್ದಾರೆ.

    ರಾಜ ಮಹರಾಜರು ಆಳ್ವಿಕೆಯಲ್ಲಿ ನಾನಾ ಪವಾಡಗಳಿಗೆ ಸಾಕ್ಷಿಯಾಗಿ, ಇಂದಿಗೂ ವಿಸ್ಮಯಗಳಿಗೆ ಸಾಕ್ಷಿಯಾಗಿರುವ, ಈ ಶಿವಗಂಗೆ ಬೆಟ್ಟದ ಸುತ್ತಲೂ ಈ ನೀರಿನ ಝರಿಗಳು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿವೆ.

  • ವಿಶ್ವಪ್ರಸಿದ್ಧ ಗೋಕರ್ಣದಲ್ಲಿ ಎಟಿಎಂಗಳು ಖಾಲಿ- ಒಂದು ವಾರದಿಂದ ವಿದೇಶಿಗರು ಸೇರಿ ಪ್ರವಾಸಿಗರ ಪರದಾಟ

    ವಿಶ್ವಪ್ರಸಿದ್ಧ ಗೋಕರ್ಣದಲ್ಲಿ ಎಟಿಎಂಗಳು ಖಾಲಿ- ಒಂದು ವಾರದಿಂದ ವಿದೇಶಿಗರು ಸೇರಿ ಪ್ರವಾಸಿಗರ ಪರದಾಟ

    ಕಾರವಾರ: ಎರಡು ದಿನ ನಿರಂತರ ರಜೆ ಬಂತು ಎಂದರೆ ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರಕ್ಕೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಬಹುತೇಕ ಪ್ರವಾಸಿಗರು ಹಣಕಾಸಿನ ವ್ಯವಹಾರವನ್ನು ಆನ್‍ಲೈನ್‍ಗಿಂತ ಹೆಚ್ಚು ಎಟಿಎಂಗಳನ್ನು ಬಳಸುತ್ತಾರೆ. ಆದರೆ ಇಂತಹ ಮುಖ್ಯ ದಿನಗಳಲ್ಲಿ ಎಟಿಎಂ ಕೇಂದ್ರಗಳು ಹಣವಿಲ್ಲದೆ ಮುಚ್ಚುತ್ತಿದ್ದು, ಇದರಿಂದ ಪ್ರವಾಸಿಗರು ಪರದಾಡುವಂತಾಗಿದೆ.

    ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರನ್ನು ವಿಚಾರಿಸಿದರೆ ತಮಗೆ ಇಂತಿಷ್ಟು ನಗದು ಮಿತಿ ಇರುತ್ತದೆ ಅದರಂತೆ ಹಣ ಭರ್ತಿ ಮಾಡುತ್ತಿದ್ದು, ಬ್ಯಾಂಕ್ ರಜಾ ಅವಧಿಯಲ್ಲಿ ಹಣ ಖಾಲಿಯಾದರೆ ಏನು ಮಾಡುವಂತಿಲ್ಲ ಎಂದು ಉತ್ತರಿಸುತ್ತಾರೆ. ಆದರೆ ದಿನದ ಎಲ್ಲಾ ವೇಳೆಯಲ್ಲೂ ಗ್ರಾಹಕರಿಗೆ ಸೇವೆ ನೀಡಲು ಇರುವ ಕೇಂದ್ರಗಳು ಈ ರೀತಿ ಬಂದ್ ಆಗಿದ್ದರೆ ಹೇಗೆ ಎಂದು ಗ್ರಾಹಕರು ಮಾತನಾಡಿಕೊಳ್ಳುತ್ತಿದ್ದಾರೆ.

    ಕಳೆದ ನಾಲ್ಕು ದಿನದಿಂದ ಇಂದಿನವರೆಗೂ ಗೋಕರ್ಣ ಭಾಗದಲ್ಲಿನ ಎಟಿಎಂಗಳಲ್ಲಿ ಹಣ ಹಾಕದೇ ಖಾಲಿ ಆಗಿತ್ತು. ಕೆಲವು ಎಟಿಎಂಗಳು ವಾರ ಕಳೆದಿದ್ದರೂ ಹಣ ತುಂಬಿಸಿಲ್ಲ. ಇಂದು ಕೂಡ ಗೋಕರ್ಣಕ್ಕೆ ಆಗಮಿಸಿದ ಹಲವು ವಿದೇಶಿ ಪ್ರವಾಸಿಗರು ಹಣಕ್ಕಾಗಿ ಪರದಾಡಿದ ದೃಶ್ಯ ಕಂಡು ಬಂತು. ಒಟ್ಟು ನಾಲ್ಕು ಎಟಿಎಂ ಕೇಂದ್ರಗಳಿದ್ದು, ಎಲ್ಲಾ ಕೇಂದ್ರಗಳು ಖಾಲಿಯಾಗಿದೆ. ಎಲ್ಲಾ ಕೇಂದ್ರಗಳಿಗೂ ವಿದೇಶಿ ಪ್ರವಾಸಿಗರು ತೆರಳಿ ಹಣ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಎಲ್ಲೂ ಹಣ ಸಿಗದೆ ಪರದಾಡಿದ್ದಾರೆ. ಕೊನೆಯಲ್ಲಿ ಎಸ್‍ಬಿಐ ಎಟಿಎಂ ಮುಂದೆ ನಿಂತ ವಿದೇಶಿ ಮಹಿಳೆ ಹಣ ಪಡೆಯಲು ಬಂದ ಗ್ರಾಹಕರಿಗೆ ಹಣವಿಲ್ಲ ಎಂದು ತಿಳಿಸುತ್ತಾ, ತನಗಾದ ತೊಂದರೆಯನ್ನು ಸ್ವದೇಶಿ ಪ್ರವಾಸಿಗರಿಗೆ ವಿವರಿಸಿದ್ದಾಳೆ.

    ಬ್ಯಾಂಕ್ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಪ್ರವಾಸಿ ಕ್ಷೇತ್ರದಲ್ಲಿ ಬ್ಯಾಂಕ್ ರಜಾ ಅವಧಿಯಲ್ಲಿ ಅಧಿಕ ಪ್ರವಾಸಿಗರು ಬರುತ್ತಿದ್ದಾರೆ. ಇವರಿಗೆ ಅನುಕೂಲಕ್ಕಾಗಿಯೇ ಉಳಿದ ಇಲಾಖೆಯಂತೆ ರಜಾ ಅವಧಿಯಲ್ಲಿ ಎಟಿಎಂಗಳಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೆ ಎಟಿಎಂ ಮೂಲಕ ಹಣ ತೆಗೆಯುವುದಕ್ಕೆ ಹಾಗೂ ನಿರ್ವಹಣೆಗೆ ಎಂದು ಗ್ರಾಹಕರಿಂದ ಹಣ ಪಡೆಯುವ ಬ್ಯಾಂಕ್ ಸೇವೆ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಖಾಸಗಿ ವ್ಯಕ್ತಿಗಳು ಸ್ವೈಪಿಂಗ್ ಮಷಿನ್ ಹೊಂದಿದ್ದು, ಗ್ರಾಹಕರ ಪರದಾಡುವ ಸಮಯವನ್ನೇ ಬಂಡವಾಳ ಮಾಡಿಕೊಂಡು ಹಣ ನೀಡಿ ಅವರಿಂದ ಕಮಿಷನ್ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇಲ್ಲೆನಾದರೂ ಬ್ಯಾಂಕ್ ಅಧಿಕಾರಿಗಳು ಶಾಮಿಲಾಗಿದ್ದಾರೆಯೇ ಎಂಬ ಸಂದೇಹದ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.