Tag: Tourist

  • ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ಲಕ್ನೋ: ವಿಶ್ವ ಪ್ರಸಿದ್ಧ ತಾಜ್ ಮಹಲ್ (Taj Mahal) ವೀಕ್ಷಣೆಗೆ ಬರುವ ಪ್ರವಾಸಿಗರ (Tourist) ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಹಾಗೆಯೇ ಸ್ಪೇನ್‌ನಿಂದ (Spain) ಬಂದಿದ್ದ ಮಹಿಳೆಯೊಬ್ಬರ ಮೇಲೆ ಕೋತಿ ದಾಳಿ ನಡೆಸಿದೆ.

    ತಾಜ್‌ಮಹಲ್ (Taj Mahal) ಮುಂಭಾಗದ ರಾಯಲ್ ಗೇಟ್ ಬಳಿ ಫೋಟೋ ತೆಗೆಯಲೆಂದು ನಿಂತಿದ್ದ ಸ್ಪೇನ್ ಮಹಿಳೆ (Spanish woman) ಮೇಲೆ ಕೋತಿ ಎರಗಿ ದಾಳಿ ಮಾಡಿದೆ. ಈ ವೇಳೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಹಿಳೆ ಸ್ಥಳದಲ್ಲೇ ಗಳಗಳನ್ನೆ ಅತ್ತಿದ್ದಾಳೆ. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    2019ರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ತಾಜ್ ಮಹಲ್‌ನ ರಕ್ಷಣೆಯ ಜವಾಬ್ದಾರಿ ವಹಿಸಿತ್ತು. ಈ ವೇಳೆ ಕೋತಿಗಳನ್ನು (Monkey) ಓಡಿಸಲು ಸಿಂಗಲ್‌ಶಾಟ್ ಗನ್ ಬಳಕೆ ಮಾಡಲಾಗುತ್ತಿತ್ತು. ಇದಕ್ಕೆ ಪ್ರಾಣಿಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇದನ್ನೂ ಓದಿ: ಸೂಪರ್ ಸ್ಟಾರ್ ಸ್ಮೃತಿ ಮಂಧಾನಗೆ ICC ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ

    ಪ್ರವಾಸಿಗರ ಮೇಲೆ ಕೋತಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಸಮಸ್ಯೆ ಬಗೆಹರಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಭಧ್ರತಾ ಸಿಬ್ಬಂದಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಗ್ರಾ ನೋಡಲು ಬಂದ ವಿದೇಶಿ ಪ್ರವಾಸಿಗನಿಗೆ ಆಟೋ ಚಾಲಕ, ಸಹಚರರಿಂದ ಪಂಗನಾಮ

    ಆಗ್ರಾ ನೋಡಲು ಬಂದ ವಿದೇಶಿ ಪ್ರವಾಸಿಗನಿಗೆ ಆಟೋ ಚಾಲಕ, ಸಹಚರರಿಂದ ಪಂಗನಾಮ

    ಲಕ್ನೋ: ಆಗ್ರಾದ ತಾಜ್ ಮಹಲ್ (Taj Mahal ) ನೋಡಲೆಂದು ರಿಕ್ಷಾ ಹತ್ತಿದ 25 ವರ್ಷದ ಬೆಲ್ಜಿಯಂ ಪ್ರವಾಸಿಗ (Belgian tourist) ಬಳಿ ಆಟೋ ಚಾಲಕ(Auto Driver) ಮತ್ತು ಆತನ ಇಬ್ಬರು ಸಹಚರರು ದರೋಡೆ ಮಾಡಿದ್ದಾರೆ.

    ಪ್ರವಾಸಿಗನ ಬಳಿಯಿಂದ 8000 ಯುರೋ ನಗದು, ಒಂದು ಲ್ಯಾಪ್‍ಟಾಪ್ (Laptop), ಒಂದು ಕ್ಯಾಮೆರಾ (Camera), ಒಂದು ಮೊಬೈಲ್ ಫೋನ್ (Mobile Phone) ಮತ್ತು ಒಂದು ಜೊತೆ ಶೂಗಳನ್ನು (Shoes) ಲಪಟಾಯಿಸಿದ್ದಾರೆ. ಇದೀಗ ಮೂವರು ಆರೋಪಿಗಳ ವಿರುದ್ಧ ಆಗ್ರಾದ ಪ್ರವಾಸೋದ್ಯಮ ಪೊಲೀಸ್ ಠಾಣೆಯಲ್ಲಿ (Tourism Police Station) ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹರಿಯುವ ನೀರಿನಲ್ಲಿ ಸಿಲುಕಿದ ತಾಯಿ, ಮಗ – ಗುಜುರಿ ವ್ಯಾಪಾರಿಯಿಂದ ರಕ್ಷಣೆ

    ಪ್ರವಾಸಿಗನನ್ನು ಸೇವಿ ಎಂದು ಗುರುತಿಸಲಾಗಿದ್ದು, ಆಗ್ರಾ ಕ್ಯಾಂಟ್ ರೈಲ್ವೇ ನಿಲ್ದಾಣದ (Agra Cantt Railway Station) ಬಳಿಯ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಆಟೋ ಚಾಲಕ ಮತ್ತು ಆತನ ಇಬ್ಬರು ಸಹಚರರು (Two Associates) ತನ್ನ ಬಳಿ ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ಸೇವಿ ಉಲ್ಲೇಖಿಸಿರುವುದಾಗಿ ಪ್ರವಾಸೋದ್ಯಮ ಪೊಲೀಸ್ ಠಾಣೆಯ ಉಸ್ತುವಾರಿ ಜೈ ಸಿಂಗ್ ಪರಿಹಾರ್ (Jai Singh Parihar) ತಿಳಿಸಿದ್ದು, ಇದೀಗ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ಪ್ರವಾಸಿಗ ಗೋವಾ(Goa) ಮೂಲದವರಾಗಿದ್ದು, ಬೆಲ್ಜಿಯಂನಲ್ಲಿ (Belgium) ಕೆಲಸ ಮಾಡುತ್ತಿದ್ದಾರೆ. ನಾನು ಭಾರತದ ನಿವಾಸಿ ಮತ್ತು ಗೋವಾದಲ್ಲಿ ಹುಟ್ಟಿದ್ದೇನೆ. ಆಗ್ರಾ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಏಕೆಂದರೆ ಅವರು ನನಗೆ ತುಂಬಾ ಸಹಾಯ ಮಾಡುತ್ತಿದ್ದಾರೆ. ಅವರು ಇಷ್ಟೊಂದು ಸಹಾಯ ಮಾಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ನಾನು ಬೆಳಗ್ಗೆಯಿಂದ ಹಸಿದಿದ್ದೇನೆ ಮತ್ತು ಅವರು ನನಗೆ ಊಟ ಮತ್ತು ಹೋಟೆಲ್ ವ್ಯವಸ್ಥೆ ಮಾಡಿಕೊಟ್ಟರು. ಅವರು ನನ್ನನ್ನು ಅತಿಥಿಯಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸೇವಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಕೊಡಗಿನ ಮಿನಿ ನಯಾಗರ ಫಾಲ್ಸ್

    ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಕೊಡಗಿನ ಮಿನಿ ನಯಾಗರ ಫಾಲ್ಸ್

    ಮಡಿಕೇರಿ: ಕೊಡಗಿನ ಪ್ರಕೃತಿಯ ಮಡಿಲಲ್ಲಿರುವ ಪ್ರತಿಯೊಂದು ಸ್ಥಳಗಳು ಮನಮೋಹಕ. ಅದ್ರಲ್ಲೂ ಮಳೆಗಾಲ ಬಂದ್ರೆ ಮತ್ತಷ್ಟು ಸೌಂದರ್ಯದಿಂದ ಕಂಗೊಳಿಸೋ ಕರ್ನಾಟಕದ ಕಾಶ್ಮೀರದಲ್ಲಿ ನಿಸರ್ಗದ ಸಿರಿ ನೋಡುಗರಿಗೆ ಮುದನೀಡುತ್ತೆ. ಇಂತಹ ಸುಂದರ ತಾಣಗಳ ಸಾಲಿಗೆ ಸೇರೋದೆ ಚಿಕ್ಲಿಹೊಳೆ ಜಲಾಶಯ. ಇದನ್ನು ನೋಡಲು ಪುಟ್ಟದಾಗಿದ್ದರೂ ತನ್ನ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

    ಸುತ್ತಲೂ ನಿಸರ್ಗದ ಮಡಿಲು. ಕಣ್ಣು ಹಾಯಿಸಿದಲ್ಲೆಲ್ಲಾ ಕಂಗೊಳಿಸೋ ಹಸಿರ ಸಿರಿ. ಇದರ ನಡುವೆ ಹಾಲ್ನೊರೆಯಂತೆ ದುಮ್ಮಿಕ್ಕೋ ನೀರು, ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಜಲಾಶಯ ನೋಡುತ್ತಿರೋ ಜನ. ಹೌದು, ಇದು ಕೊಡಗಿನ ಪುಟ್ಟ ಜಲಾಶಯ ಚಿಕ್ಲಿಹೊಳೆಯ ಮನಮೋಹಕ ದೃಶ್ಯ ವೈಭವ. ಇದನ್ನೂ ಓದಿ: ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್ 

    ಮಳೆಗಾಲದ ವಿಶೇಷ ಅತಿಥಿಯಾದ ಈ ಚಿಕ್ಲಿಹೊಳೆ ಜಲಾಶಯವನ್ನು ‘ಮಿನಿ ನಯಾಗರ ಫಾಲ್ಸ್’ ಅಂತಲೂ ಕರೀತ್ತಾರೆ. ಅರ್ಧ ವೃತ್ತಾಕಾರದಲ್ಲಿ ಐದಾರು ಅಡಿಗಳ ಎತ್ತರದಿಂದ ಹಾಲ್ನೊರೆಯಂತೆ ದುಮ್ಮಿಕ್ಕುವ ಈ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಬೇಸಿಗೆಯಲ್ಲಿ ಬರಡಾಗಿ ಕಾಣೋ ಈ ಜಲಾಶಯದಲ್ಲಿ ಕಳೆದ ಕೆಲವು ದಿನಗಳಿಂದ ಆರಂಭವಾಗಿರುವ ಮಳೆಯಿಂದ ಜಲಪಾತವೊಂದು ಸೃಷ್ಟಿಯಾಗಿದೆ.

    ಹಸಿರ ಸಿರಿಯ ನಡುವೆ ದುಮ್ಮಿಕ್ಕೋ ಈ ಜಲಾಶಯವನ್ನು ನೋಡಲು ಜನರ ದಂಡೇ ಹರಿದುಬರುತ್ತಿದ್ದು, ಮಳೆಗಾಲದ ಮಜಾವನ್ನು ಜನ ಎಂಜಾಯ್ ಮಾಡ್ತಿದ್ದಾರೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಸಮೀಪವಿರೋ ಜಲಾಶಯಕ್ಕೆ ಮಳೆಗಾಲದಲ್ಲಿ ಜೀವಕಳೆ ಬರುತ್ತೆ. ಮಳೆಗಾಲದ ಐದಾರು ತಿಂಗಳು ನವವಧುವಿನಂತೆ ಕಂಗೊಳಿಸೋ ಜಲಾಶಯ ಚಿಕ್ಕದಾದರೂ ತನ್ನ ಸೌಂದರ್ಯದಿಂದಲೇ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪಕ್ಕಾ ನಿಸರ್ಗದ ಮಡಿಲಿನಲ್ಲಿರೋ ಈ ಜಲಾಶಯ ಪ್ರಕೃತಿಮಾತೆಯ ತಿಲಕದಂತೆ ನಯನಮನೋಹರವಾಗಿ ಕಂಗೊಳಿಸುತ್ತಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್ 

    ಸುತ್ತಲೂ ಹಸಿರಕಾನನ ಬೆಟ್ಟಗುಡ್ಡಗಳಿಂದಾವೃತವಾಗಿರೋ ಜಲಾಶಯ ಕಂಡು ಮೈಮರೆಯೋ ಜನರು ವೀಕೆಂಡ್‍ಗಳಲ್ಲಿ ಬಂದು ತಮ್ಮೆಲ್ಲ ನೋವನ್ನು ಮರೆತು ಖುಷಿಪಡ್ತಾರೆ. ಹೀಗೆ ಮಳೆಗಾಲದಲ್ಲಿ ಬಂದು ಸಾವಿರರು ಜನರ ಮನತಣಿಸೋ ಈ ಪುಟ್ಟ ಜಲರಾಶಿಯಲ್ಲಿ ಮೂಲಸೌಲಭ್ಯಗಳ ಕೊರತೆ ಕಾಡುತ್ತಿದೆ ಎನ್ನೊಂದು ಪ್ರವಾಸಿಗರ ಅಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರ ಮೋಜು-ಮಸ್ತಿ- ಸೂಕ್ತ ಕ್ರಮಕ್ಕೆ ಮನವಿ

    ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರ ಮೋಜು-ಮಸ್ತಿ- ಸೂಕ್ತ ಕ್ರಮಕ್ಕೆ ಮನವಿ

    ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರು ಮೋಜು-ಮಸ್ತಿ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಮನವಿ ಮಾಡಿಕೊಂಡಿದ್ದಾರೆ.

    ಹೌದು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಆಡಿದ್ದೇ ಆಟ, ಹೇಳೋರಿಲ್ಲ-ಕೇಳೋರಿಲ್ಲ ಅನ್ನೋವಂತಾಗಿದೆ. ರಂತರ ಜಾರುವ ಬಂಡೆಗಳ ಮೇಲೆ ಹತ್ತಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕೊರೊನಾ ಉಲ್ಬಣ- ವಿಮಾನದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

    ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಮಾಡ್ಕೊಂಡು ಟೂರಿಸ್ಟ್ ಗಳು ಡ್ಯಾನ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಕೆಲ ಪ್ರವಾಸಿಗರಿಗೆ ಟ್ರಾಫಿಕ್ ಜಾಮ್ ಮಾಡ್ಕೊಂಡು ರಸ್ತೆ ಮಧ್ಯೆ ಟಿಕ್‍ಟಾಕ್ ಮಾಡೋ ಶೋಕಿಯಾದ್ರೆ, ಇನ್ನೂ ಕೆಲವರು ಜಾರು ಬಂಡೆಗಳ ಮೇಲೆ ಹತ್ತಿ ಫೋಟೋಗೆ  ಪೋಸ್ ಕೊಡುತ್ತಿದ್ದಾರೆ.

    ಸ್ವಲ್ಪ ಯಾಮಾರಿ ಜಾರಿ ಬಿದ್ದರೂ ಕೈ-ಕಾಲುಗಳಿಗೆ ಗಾಯಗಳಾಗುವ ಸಾಧ್ಯತೆಗಳಿವೆ. ಈ ಹಿಂದೆ ಬಿದ್ದು ಕೈ-ಕಾಲು ಮುರ್ಕೊಂಡು, ತಲೆ ಹೊಡೆದುಕೊಂಡಿರುವ ಹಾಗೂ ಪ್ರಾಣವೂ ಹೋದ ಉದಾಹರಣೆಗಳು ಸಾಕಷ್ಟಿವೆ. ರಸ್ತೆ ಮಧ್ಯೆ ಯುವಕ-ಯುವತಿಯ ಮೋಜು-ಮಸ್ತಿಗೆ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ.

    Live Tv

  • ಬೆಂಗಳೂರಿನಿಂದ ಊಟಿ ಪ್ರವಾಸಕ್ಕೆ ತೆರಳುತ್ತಿದ್ದ ಕಾರು ಮರಕ್ಕೆ ಡಿಕ್ಕಿ – ಮಹಿಳೆ ಸಾವು, 6 ಮಂದಿಗೆ ಗಾಯ

    ಬೆಂಗಳೂರಿನಿಂದ ಊಟಿ ಪ್ರವಾಸಕ್ಕೆ ತೆರಳುತ್ತಿದ್ದ ಕಾರು ಮರಕ್ಕೆ ಡಿಕ್ಕಿ – ಮಹಿಳೆ ಸಾವು, 6 ಮಂದಿಗೆ ಗಾಯ

    ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಪ್ರವಾಸಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನನಹಳ್ಳಿ ಗೇಟ್ ಬಳಿ ನಡೆದಿದೆ.

    car

    ಹೈದರಾಬಾದ್ ಮೂಲದ ಜಯಲಕ್ಷ್ಮಿ(50) ಮೃತ ದುರ್ದೈವಿ. 58 ವರ್ಷದ ವೆಂಕಯ್ಯ ಅವರಿಗೆ ಕಾಲು ಮುರಿದಿದ್ದು, ರಾಜೇಶ್, ಪದ್ಮಾವತಿ ಹಾಗೂ ಇಬ್ಬರು ಮಕ್ಕಳು ಮತ್ತು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

    ಬೆಂಗಳೂರಿನಿಂದ ಊಟಿಗೆ ತೆರಳುತ್ತಿದ್ದ ಹೈದರಾಬಾದ್ ಮೂಲದ ಪ್ರವಾಸಿಗರ ಕಾರು ಇದಾಗಿದ್ದು, ಚಾಲಕನ ಅತೀ ವೇಗದಿಂದ ನಿಯಂತ್ರಿಸಲಾಗದೇ ಮರಕ್ಕೆ ಡಿಕ್ಕಿ ಹೊಡೆದಿರುವುದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ದೌಡಾಯಿಸಿ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್‍ರನ್ನು ವಶಕ್ಕೆ ಪಡೆದ ಸಿಬಿಐ

  • ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರು- ಕಾರು ಪಾರ್ಕಿಂಗ್ ಹೌಸ್ ಫುಲ್

    ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರು- ಕಾರು ಪಾರ್ಕಿಂಗ್ ಹೌಸ್ ಫುಲ್

    ಚಿಕ್ಕಬಳ್ಳಾಪುರ: ಕೋವಿಡ್ ಕಾರಣದಿಂದ ವೀಕೆಂಡ್ ಲಾಕ್‍ಡೌನ್ ಆಗುತ್ತಿದ್ದ ವಿಶ್ವವಿಖ್ಯಾತ ನಂದಿಗಿರಿಧಾಮದ ನಿಯಮವನ್ನು ನಿನ್ನೆಯಿಂದ ತೆರವು ಮಾಡಲಾಗಿದೆ. ಹೀಗಾಗಿ ಸಹಜವಾಗಿ ವೀಕೆಂಡ್ ನಲ್ಲಿ ನಂದಿಗಿರಿಧಾಮಕ್ಕೆ ಬೆಳ್ಳಂಬೆಳಗ್ಗೆ ಸಾವಿರಾರು ಮಂದಿ ಆಗಮಿಸಿದ್ದಾರೆ.

    ಪ್ರವಾಸಿಗರು ಕಾರು ಹಾಗೂ ಬೈಕ್‍ಗಳಲ್ಲಿ ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದು, ನಂದಿಬೆಟ್ಟದಲ್ಲಿ ಕಾರು ಪಾರ್ಕಿಂಗ್ ಹೌಸ್ ಫುಲ್ ಆಗಿದೆ. ಅಂದಹಾಗೆ ನಿನ್ನೆಯಿಂದ ಬೆಟ್ಟದ ಮೇಲ್ಭಾಗದಲ್ಲಿ 300 ನಾಲ್ಕು ಚಕ್ರದ ವಾಹನಗಳು ಹಾಗೂ 1,000 ದ್ವಿಚಕ್ರ ವಾಹನಗಳ ಪಾರ್ಕಿಂಗ್ ಮಾಡಲು ಸ್ಥಳಾವಕಾಶವಿದ್ದು, ಅಷ್ಟು ವಾಹನಗಳಿಗೆ ಮಾತ್ರ ಬೆಟ್ಟದ ಮೇಲೆ ಪ್ರವೇಶ ನೀಡಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು ರಸ್ತೆಗೆ ಹೆವಿ ವೆಹಿಕಲ್‍ಗಳೇ ಕಂಟಕ- ಭಾರೀ ಗಾತ್ರದ ವಾಹನಗಳಿಂದ ರೂಲ್ಸ್ ಬ್ರೇಕ್

    ಉಳಿದ ವಾಹನಗಳಿಗೆ ನಂದಿಬೆಟ್ಟದ ಚೆಕ್ ಪೋಸ್ಟ್ ಬಳಿಯೇ ತಡೆಯೊಡ್ಡಲಾಗಿದೆ. ಹೀಗಾಗಿ ಚೆಕ್ ಪೋಸ್ಟ್ ಬಳಿ ನೂರಕ್ಕೂ ಹೆಚ್ಚು ಕಾರುಗಳಲ್ಲಿ ಪ್ರವಾಸಿಗರು ಕಾಯುವಂತಾಗಿದೆ. ಮೇಲಿಂದ ವಾಹನ ವಾಪಸ್ ಬಂದ ನಂತರ ಮತ್ತೊಂದು ವಾಹನದ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

  • ನಾಳೆಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ಅನುಮತಿ- ವೀಕ್‍ಡೇಸ್‍ನಲ್ಲಿ ಅವಕಾಶ, ವೀಕೆಂಡ್‍ನಲ್ಲಿ ನಿರ್ಬಂಧ

    ನಾಳೆಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ಅನುಮತಿ- ವೀಕ್‍ಡೇಸ್‍ನಲ್ಲಿ ಅವಕಾಶ, ವೀಕೆಂಡ್‍ನಲ್ಲಿ ನಿರ್ಬಂಧ

    ಚಿಕ್ಕಬಳ್ಳಾಪುರ: ಶನಿವಾರ, ಭಾನುವಾರ ಬಿಟ್ಟು ಉಳಿದ ದಿನಗಳಲ್ಲಿ ಪ್ರವಾಸಿಗರಿಗೆ ನಂದಿಬೆಟ್ಟಕ್ಕೆ ತೆರಳಲು ಜಿಲ್ಲಾಡಳಿತ ಅನುಮತಿ ನೀಡಿದೆ.

    ಆಗಸ್ಟ್ 24 ರಂದು ರಾತ್ರಿ ಭಾರೀ ಮಳೆಯಾದ ಕಾರಣ ನಂದಿಬೆಟ್ಟದ ಪಕ್ಕದ ಬ್ರಹ್ಮಗಿರಿ ಬೆಟ್ಟದಿಂದ ಭೂಕುಸಿತವಾಗಿತ್ತು. ಪರಿಣಾಮ ನಂದಿಬೆಟ್ಟದ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದ ವಾಹನಗಳ ಸಂಚಾರ ಸಂಪೂರ್ಣ ಕಡಿತಗೊಂಡಿತ್ತು. ಈಗ 80 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಕೊಚ್ಚಿ ಹೋದ ರಸ್ತೆ ದುರಸ್ಥಿ ಕಾರ್ಯ ಪೂರ್ಣಗೊಳಿಸಿದೆ. ಹೀಗಾಗಿ ನಂದಿಬೆಟ್ಟಕ್ಕೆ ನಾಳೆಯಿಂದ ಪ್ರವಾಸಿಗರ ವಾಹನಗಳ ಪ್ರವೇಶಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅವಕಾಶ ನೀಡುತ್ತಿದೆ.

    ವಿಕೇಂಡ್‍ನಲ್ಲಿ ನಿರ್ಬಂಧ:
    ನಾಳೆಯಿಂದ ವೀಕ್ ಡೇಸ್ ನಲ್ಲಿ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ಇದೆ. ಕೊರೊನಾ ಹಾಗೂ ಓಮಿಕ್ರಾನ್ ವೈರಸ್ ಆತಂಕದ ಹಿನ್ನೆಲೆಯಲ್ಲಿ ವೀಕೆಂಡ್‍ನಲ್ಲಿ ನಿರ್ಬಂಧ ವಿಧಿಸಲಾಗಿದೆ. 100 ದಿನಗಳ ನಂತರ ಪ್ರವಾಸಿಗರಿಗೆ ಅನುಮತಿ ಕಲ್ಪಿಸುತ್ತಿರುವ ಕಾರಣ ಒಮ್ಮೆಲೆ ಜಾಸ್ತಿ ಪ್ರವಾಸಿಗರ ಆಗಮಿಸುವ ಸಾಧ್ಯತೆ ಇದೆ. ಅದರಲ್ಲೂ ವಿಕೇಂಡ್ ನಲ್ಲಿ ಸಹಜವಾಗಿ ಹೆಚ್ಚಾಗಿ ಪ್ರವಾಸಿಗರು ಬರೋದ್ರಿಂದ ನಂದಿಬೆಟ್ಟದ ಮೇಲ್ಭಾಗದಲ್ಲಿ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ಸ್ಥಳಾವಕಾಕಾಶದ ಕೊರತೆ ಇದೆ. ಹೀಗಾಗಿ ವಿಕೇಂಡ್ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ ಅಂತ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಪಬ್ಲಿಕ್ ಟಿವಿ ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಮಾರಾಟ ಮಾಡಿದ ಕೆಲವೇ ನಿಮಿಷದಲ್ಲಿ ಹಣ ಕಳೆದುಕೊಂಡ ತಾಯಿ!

    ಎರಡು-ಮೂರು ವಾರಗಳ ಕಾಲ ಪ್ರವಾಸಿಗರ ಆಗಮನದ ಸಂಖ್ಯೆಗೆ ಅನುಗುಣವಾಗಿ ವೀಕೆಂಡ್ ನಲ್ಲಿ ಅವಕಾಶ ಕಲ್ಪಿಸಲು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೇಂದ್ರ ತೆಗೆದುಕೊಳ್ಳೋ ತೀರ್ಮಾನದ ಮೇಲೆ ಬೂಸ್ಟರ್ ಡೋಸ್ ನೀಡೋ ಬಗ್ಗೆ ತೀರ್ಮಾನ: ಸುಧಾಕರ್

  • ಬೋಟ್ ಪಲ್ಟಿ – ಸಮುದ್ರ ಪಾಲಾಗುತ್ತಿದ್ದ ಆರು ಜನರ ರಕ್ಷಣೆ

    ಬೋಟ್ ಪಲ್ಟಿ – ಸಮುದ್ರ ಪಾಲಾಗುತ್ತಿದ್ದ ಆರು ಜನರ ರಕ್ಷಣೆ

    ಕಾರವಾರ: ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಜಲಕ್ರೀಡೆಯಲ್ಲಿ ಭಾಗಿಯಾಗಿದ್ದಾಗ ಬೋಟ್ ನಿಂದ ಬಿದ್ದು ಸಮುದ್ರದಲ್ಲಿ ಸಿಲುಕಿದ್ದ ನಾಲ್ಕು ಜನ ಮಕ್ಕಳು ಸೇರಿ ಆರು ಜನ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ನಡೆದಿದೆ.

    ಹುಬ್ಬಳ್ಳಿಯಿಂದ ಕುಟುಂಬ ಸಮೇತರಾಗಿ ಬಂದಿದ್ದ ಪ್ರವಾಸಿಗರು ಕಾರವಾರ ಕಡಲತೀರದಲ್ಲಿ ಡ್ರೈವಿನ್ ಜಲಸಾಹಸ ಕ್ರೀಡೆಯ ಬೋಟ್ ಹತ್ತಿದ್ದರು. ಈ ವೇಳೆ ಸಮುದ್ರದಲ್ಲಿ ಬೋಟ್ ಮಗುಚಿ ಮಕ್ಕಳ ಸಮೇತ ಸಮುದ್ರಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್

    ಅಲ್ಲಿದ್ದ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ನಾಲ್ಕು ಜನ ಮಕ್ಕಳು ಸೇರಿ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮಹಿಳೆ ಮೇಲೆ ಆಟೋ ಚಾಲಕ ಸೇರಿದಂತೆ ಮೂವರಿಂದ ಸಾಮೂಹಿಕ ಅತ್ಯಾಚಾರ

  • ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ  ಪೋಸ್ ​​ ಕೊಟ್ಟ ಹುಲಿರಾಯ

    ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ​​ ಕೊಟ್ಟ ಹುಲಿರಾಯ

    ಚಿಕ್ಕಮಗಳೂರು: ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದೆ. ಹುಲಿರಾಯ ಕ್ಯಾಮರಾಕ್ಕೆ ಪೋಸ್ ನೀಡಿದ್ದು ಪ್ರವಾಸಿಗರು ಫುಲ್ ದಿಲ್ ಖುಷ್ ಆಗಿದ್ದಾರೆ.

    ತಾಲೂಕಿನ ಮುತ್ತೋಡಿ ಅರಣ್ಯ ವಲಯಕ್ಕೆ ಆಗಾಗ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಂದವರೆಲ್ಲರೂ ಕೂಡ ಕಾಡಿನಲ್ಲಿ ಬೆಳಗ್ಗೆ, ಸಂಜೆ ಸಫಾರಿಗೆ ತೆರಳುತ್ತಾರೆ. ಆದರೆ, ಬಂದವರಿಗೆಲ್ಲಾ ಹುಲಿರಾಯನ ದರ್ಶನವಾಗುವುದಿಲ್ಲ. ಆದರೆ, ನಿನ್ನೆ ಸಂಜೆ ಸಫಾರಿಗೆ ಹೊರಟ ಪ್ರವಾಸಿಗರಿಗೆ ನೀರು ಕುಡಿದು ಹಳ್ಳ ದಾಟುತ್ತಿದ್ದ ಹುಲಿರಾಯನ ದರ್ಶನವಾಗಿದೆ. ಹಳ್ಳವನ್ನು ದಾಟುತ್ತಿದ್ದ ವ್ಯಾಘ್ರ ಪ್ರವಾಸಿಗರು ನನ್ನನ್ನೇ ನೋಡುತ್ತಿದ್ದಾರೆ ಎಂದು ಭಾವಿಸಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ಕೊಟ್ಟು ಹೋಗಿದೆ. ಇದನ್ನೂ ಓದಿ: ರಸ್ತೆ ಪಕ್ಕದಲ್ಲೇ ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ

    ಕಾಡಲ್ಲಿ ಹುಲಿಯನ್ನು ಕಣ್ಣಾರೆ ಕಂಡ ಪ್ರವಾಸಿಗರು ಸಂತೋಷದಿಂದ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಪ್ರತಿದಿನ ಬೆಳಗ್ಗೆ-ಸಂಜೆ ಸಫಾರಿಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ, ಆನೆಗಳ ಹಿಂಡು, ಕಾಡುಕೋಣ, ನವಿಲು, ಉಡ, ಜಿಂಕೆ, ಸಾರಗ ಸೇರಿದಂತೆ ಸಾಕಷ್ಟು ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತವೆ. ಆದರೆ, ಚಿರತೆ ಹಾಗೂ ಹುಲಿ ಬೀಳುವುದು ತುಂಬಾ ವಿರಳ. ಕೆಲವೊಮ್ಮೆ ಪ್ರವಾಸಿಗರಿಗೆ ಹುಲಿಗಳ ಹೆಜ್ಜೆ ಗುರುತುಗಳು ಸಿಗುತ್ತವೆ. ಆದರೆ, ನಿನ್ನೆ ಹೋದ ಪ್ರವಾಸಿಗರಿಗೆ ಕ್ಯಾಮರಾ ಕಣ್ಣಿಗೆ ಮನುಷ್ಯರಂತೆ ಪೋಸ್ ನೀಡುವ ಹುಲಿಯೇ ಸಿಕ್ಕಿದೆ. ಅಂದಾಜು 25 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿರುವ ಮುತ್ತೋಡಿ ಅರಣ್ಯ ವಲಯವನ್ನೂ ಆಡಳಿತದ ಅನುಕೂಲಕ್ಕಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದನ್ನೂ ಓದಿ: ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!

  • ಫೋಟೋಗೆ ಪೋಸ್ ಕೊಡಲು ಹೋಗಿ ಸಮುದ್ರದ ಪಾಲಾದ ವ್ಯಕ್ತಿ

    ಫೋಟೋಗೆ ಪೋಸ್ ಕೊಡಲು ಹೋಗಿ ಸಮುದ್ರದ ಪಾಲಾದ ವ್ಯಕ್ತಿ

    ಕಾರವಾರ: ಸಮುದ್ರದ ಅಲೆಗಳ ಮಧ್ಯೆ ಕಲ್ಲುಬಂಡೆಯ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೊಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೋರ್ವ ಸಮುದ್ರ ಪಾಲಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವನ್ನಳ್ಳಿ ಕಡಲ ತೀರದಲ್ಲಿ ದುರಂತ ನಡೆದಿದೆ. ಶಿರಸಿಯ ನಿವಾಸಿ 42 ವರ್ಷದ ಸುಬ್ಬುಗೌಡ ಮೃತ ಪ್ರವಾಸಿಗ. ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಸುಬ್ಬುಗೌಡ, ಕಡಲ ತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ: ಸಿದ್ದರಾಮಯ್ಯ

    ಮಳೆ ಹೆಚ್ಚಾಗುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಬೃಹತ್ ಗಾತ್ರದ ಅಲೆಗಳು ಕಡಲಿಗೆ ಅಪ್ಪಳಿಸುತ್ತಿವೆ. ಇದಾವುದನ್ನೂ ಅರಿಯದ ಪ್ರವಾಸಿಗರು, ಸಮುದ್ರದ ತಟದಲ್ಲಿ ಫೋಟೋಗೆ ಪೋಸ್ ಕೊಡಲು ಮುಂದಾಗುತ್ತಾರೆ. ಅದೇ ರೀತಿ ಪೋಸ್ ಕೊಡಲು ಹೋಗಿ ವ್ಯಕ್ತಿ ಇದೀಗ ಸಮುದ್ರದ ಪಾಲಾಗಿದ್ದಾರೆ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.