Tag: Tourist

  • ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    -ಇಯರ್ ಎಂಡ್‍ಗೆ ಕೊಡಗಿನಲ್ಲಿ ಪ್ರವಾಸಿಗರ ದಂಡು

    ಮಡಿಕೇರಿ: ವರ್ಷಾಂತ್ಯ, ಹೊಸ ವರ್ಷ, ರಜೆಗಳ ಮೇಲೆ ರಜೆ ಇರುವುದರಿಂದ ಪ್ರವಾಸಿಗರ ಸ್ವರ್ಗ ಕೊಡಗಿನತ್ತ ಟೂರಿಸ್ಟ್ ದಂಡೇ ಹರಿದು ಬರುತ್ತಿದೆ. ಮೂರು ನಾಲ್ಕು ತಿಂಗಳ ಕಾಲ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಪ್ರವಾಸಿಗರು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಇದೀಗ ಹಿಂದಿನ ದಿನಗಳು ಮತ್ತೆ ಬರುವ ಹಾಗೆ ಜನರು ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

    ಕೊಡಗು ಜಿಲ್ಲೆಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಅದರಲ್ಲೂ ಜಿಲ್ಲೆಯ ಹಚ್ಚ ಹರಿಸಿನ ನಡುವೆ ಹಾಲ್ನೊರೆ ಸೂಸುತ್ತಾ ಜುಳು ಜುಳು ಹರಿಯುವ ಜಲಧಾರೆಯ ಸೌಂದರ್ಯಕ್ಕೆ ಸರಿಸಾಟಿಯಿಲ್ಲ. ಅಂತಹ ಜಲಧಾರೆಯ ಕೆಳಗೆ ನಿಂತು ಎಂಜಾಯ್ ಮಾಡುವುದು ಎಲ್ಲರ ಆಸೆ ಆಗಿರುತ್ತಾರೆ. ವರ್ಷಾಂತ್ಯ ಅಂತ ಸ್ಪೆಷಲ್ ಲೊಕೇಶನ್‍ನಲ್ಲಿ ಇಲ್ಲಿಗೆ ಭೇಟಿ ಕೊಟ್ಟರೆ ಅದರ ಮಜಾವೇ ಬೇರೆ ಇರುತ್ತದೆ. ಸದ್ಯ ಇಯರ್ ಎಂಡ್ ಸೀಜನ್, ಕೊಡಗಿನ ಸೌಂದರ್ಯ ಲೋಕಕ್ಕೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುದ್ದಾರೆ. ಅದರಲ್ಲೂ ಇರ್ಪು ಫಾಲ್ಸ್ ನಲ್ಲಂತೂ ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    ಮಡಿಕೇರಿಯಿಂದ 60 ಕಿ.ಮೀ ದೂರದಲ್ಲಿರೋ ಬ್ರಹ್ಮಗಿರಿತಪ್ಪಲಿನ ನಡುವಿನಿಂದ ಧುಮ್ಮಿಕ್ಕುವ ಇರ್ಪು ಫಾಲ್ಸ್ ಸೌಂದರ್ಯವನ್ನು ಎಷ್ಟು ಹೇಳಿದರೂ ಮುಗಿಯಲ್ಲ. ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ಫಾಲ್ಸ್ ನೋಡಲು ಎಷ್ಟು ಚೆಂದವು ಈ ರುದ್ರ ರಮಣೀಯ ತಾಣ ಇರ್ಪು ಫಾಲ್ಸ್ ಅಷ್ಟೇ ಅಪಾಯವಾಗಿದೆ. ಆದರೆ ಈಗ ಮಳೆಯ ಆರ್ಭಟ ಇಲ್ಲ. ಫಾಲ್ಸ್ ನೀರು ಕೊಂಚ ಕಡಿಮೆ ಆಗಿದೆ. ಪರಿಣಾಮ ಫಾಲ್ಸ್ ನ ತಳಭಾಗಕ್ಕೆ ಹೋಗಿ ಫಾಲ್ಸ್ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡಬಹುದು. ಅದಕ್ಕೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.

    ಇರ್ಪು ಫಾಲ್ಸ್ ಸದ್ಯ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. ದಿನ ನಿತ್ಯ ಸಹಸ್ರ ಸಂಖ್ಯೆಯ ಪ್ರವಾಸಿಗರು ಬಂದು ಹಚ್ಚ ಹಸಿರ ನಿಸರ್ಗದ ಮಡಿಲಲ್ಲಿ ಇರ್ಪುವಿನ ಸಿಂಚನಕ್ಕೆ ಮೈಯೊಡ್ಡಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸಿಗರು ಕೊಡಗಿನ ಫಾಲ್ಸ್ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    https://www.youtube.com/watch?v=XtVggfQfhZw&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರಿಗೆ ಹರಿದು ಬಂತು ಪ್ರವಾಸಿಗರ ದಂಡು…!

    ಮೈಸೂರಿಗೆ ಹರಿದು ಬಂತು ಪ್ರವಾಸಿಗರ ದಂಡು…!

    ಮೈಸೂರು: ಸಾಲು ಸಾಲು ರಜೆಯಲ್ಲಿ ಎಂಜಾಯ್ ಮಾಡುವುದ್ದಕ್ಕೆ ಅಂತಾ ಮೈಸೂರಿಗೆ ಪ್ರವಾಸಿಗರ ದಂಡೆ ಹರಿದು ಬಂದಿದೆ. ಇದರಿಂದ ಒಂದು ವಾರಗಳ ಕಾಲ ಮೈಸೂರಿನ ಬಹುತೇಕ ಹೋಟೆಲ್ ಗಳು ಭರ್ತಿಯಾಗಿದ್ದರೆ, ಮತ್ತೊಂದೆಡೆ ಹೆಚ್ಚಾದ ಪ್ರವಾಸಿಗರಿಂದ ಸ್ಥಳೀಯರು ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದಾರೆ.

    ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಪ್ರವಾಸಿಗರಿಗೆ ಹಾಟ್ ಫೇವರೆಟ್ ಜಾಗ ಅಂದರೆ ಅದು ಮೈಸೂರು. ಅದರಲ್ಲೂ ಮೈಸೂರಿನ ಅರಮನೆ, ಝೂ, ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಂದು ಕ್ರಿಸ್ ಮಸ್ ಇರುವುದರಿಂದ ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್ ಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಇದೀಗ ಮೈಸೂರಿನ ಬಹುತೇಕ ಹೋಟೆಲ್ ಗಳು ಭರ್ತಿಯಾಗಿದೆ. 95% ರಷ್ಟು ಹೋಟೆಲ್ ಗಳು ಭಾನುವಾರದಿಂದ ಒಂದು ವಾರಗಳ ಕಾಲ ಭರ್ತಿಯಾಗಿದ್ದು ನಾಳೆ ಸಂಪೂರ್ಣ ಭರ್ತಿಯಾಗಲಿದೆ.

    ಮತ್ತೊಂದು ಕಡೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬಂದಿರುವ ಕಾರಣ ಮೈಸೂರಿನ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಗಿದೆ. ಅದರಲ್ಲೂ ಸೋಮವಾರ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಎರಡು ಕಿ.ಮೀ ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ಸ್ಥಳೀಯರು ಒಂದು ಕಡೆ ನಮ್ಮೂರನ್ನು ನೋಡಲು ಪ್ರವಾಸಿಗರು ಬರುತ್ತಿದ್ದಾರೆ ಎನ್ನುವುದು ಖುಷಿಯಾದರೆ, ಮತ್ತೊಂದು ಕಡೆ ಟ್ರಾಫಿಕ್ ಕಿರಿಕಿರಿಯಿಂದ 10 ನಿಮಿಷದಲ್ಲಿ ತಲುಪುತಿದ್ದ ಸ್ಥಳಕ್ಕೆ ತೆರಳಲೂ ಅರ್ಧ ತಾಸು ಬೇಕಾಗಿದೆ ಎನ್ನುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ಫೇಕ್ ಮೆಸೇಜ್‍ನಿಂದ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ!

    ಒಂದು ಫೇಕ್ ಮೆಸೇಜ್‍ನಿಂದ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ!

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರೇಮಿಗಳ ಪಾಲಿನ ಪ್ರೇಮಧಾಮ ಹಾಗೂ ಎಲ್ಲರಿಗೂ ಅಚ್ಚು ಮೆಚ್ಚಿನ ವಿಕೇಂಡ್ ಪಿಕ್ನಿಕ್ ಸ್ಪಾಟ್ ಆಗಿದೆ. ಈ ಸ್ವರ್ಗತಾಣಕ್ಕೆ ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಈಗ ಒಂದು ಫೇಕ್ ಮೆಸೇಜ್‍ನಿಂದ ಕಳೆದ ಎರಡು ಮೂರು ದಿನಗಳಿಂದ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿದೆ.

    ನಂದಿಬೆಟ್ಟದಲ್ಲಿ ಚಿರತೆ ದಾಳಿ ನಡೆದಿದೆಯಂತೆ, ಚಿರತೆ ದಾಳಿಗೆ ಹೆದರಿದ ಬೈಕ್ ಸವಾರರು ಮರ ಏರಿ ಕುಳಿತಿದ್ದಾರೆ. ಮತ್ತೊಂದೆಡೆ ಚಿರತೆಯೊಂದು ಬೈಕ್ ಸವಾರರನ್ನು ಬಲಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಮೆಸೇಜ್‍ಗಳು ವಾಟ್ಸಾಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳ ಮೂಲಕ ಎಲ್ಲರಿಗೂ ಬಂದಿರುತ್ತೆ. ಇದರಿಂದ ಆತಂಕಕ್ಕೀಡಾಗಿರುವ ಜನ ನಂದಿಗಿರಿಧಾಮಕ್ಕೆ ಹೋಗಲು ಹೆದರುತ್ತಿದ್ದಾರೆ.

    ಈ ಸುದ್ದಿ ಸುಳ್ಳು ಸುದ್ದಿಯಾಗಿದ್ದು, ಅಸಲಿಗೆ ನಂದಿಗಿರಿಧಾಮದಲ್ಲಿ ಅಂತಹ ಯಾವುದೇ ಚಿರತೆ ದಾಳಿ ನಡೆದಿಲ್ಲ. ಕೆಲಸವಿಲ್ಲದ ಕೆಲ ಕಿಡಿಗೇಡಿಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಿಂದ ಅರಣ್ಯಾಧಿಕಾರಿಗಳಿಗೆ ಕರೆ ಮೇಲೆ ಕರೆ ಬರುತ್ತಿದ್ದು, ರಿಸೀವ್ ಮಾಡಿ ಸ್ಪಷ್ಟನೆ ಕೊಟ್ಟೂ ಕೊಟ್ಟೂ ಅಕ್ಷರಶಃ ಹೈರಾಣಾಗಿ ಹೋಗಿದ್ದಾರೆ.

    ಎಲ್ಲೋ ಆಗಿರುವ ಘಟನೆಯನ್ನು ಮತ್ತೆಲ್ಲೋ ಆಗಿದೆ ಅಂತ ಥಳಕು ಹಾಕಿ ಕ್ರಿಯೇಟ್ ಮಾಡಿರುವ ಕೆಲ ಕಿಡಿಗೇಡಿಗಳ ಕೃತ್ಯ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ವೇಗವಾಗಿ ವೈರಲ್ ಆಗುತ್ತಿದೆ. ಪ್ರವಾಸಿಗರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೇ ಧೈರ್ಯವಾಗಿ ನಂದಿಗಿರಿಧಾಮಕ್ಕೆ ಹೋಗಬಹುದಾಗಿದೆ.

    ಸವಾರರು ಮರವೇರಿದ್ದು ಎಲ್ಲಿ?
    ರಸ್ತೆಯಲ್ಲಿ ಸಂಚರಿಸುವಾಗ ಚಿರತೆ ಏಕಾಏಕಿ ದಾಳಿ ಮಾಡಿದ ಘಟನೆ ನಡೆದಿರುವುದು ಖಾನಾಪುರ ಬಳಿಯ ಚೋರಲಾ ಘಾಟಿಯಲ್ಲಿ. ಕೆಲ ದಿನಗಳ ಹಿಂದೆ ಬೆಳಗಾವಿಯಿಂದ ಗೋವಾಕ್ಕೆ ತೆರಳುವ ಚೋರಲಾ ಘಾಟಿ ಬಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿತ್ತು. ವ್ಯಕ್ತಿಯೋರ್ವ ಬೈಕ್‍ನಲ್ಲಿ ಚೋರಲಾ ಘಾಟಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದ ಪರಿಣಾಮ ಗಾಯಗೊಂಡಿದ್ದ. ಇದನ್ನು ಕಂಡ ಇತರೇ ಬೈಕ್ ಸವಾರರು ಭಯದಿಂದ ಮರವೇರಿ ಕುಳಿತಿದ್ದರು.

    ಬೆಳಗಾವಿ ಮತ್ತು ಗೋವಾ ಮಧ್ಯೆ ಇರುವ ಚೋರಲಾ ಘಾಟಿ ಸುತ್ತಮುತ್ತ ದಟ್ಟವಾದ ಅರಣ್ಯ ಪ್ರದೇಶವಿದೆ. ಹೀಗಾಗಿ ಚಿರತೆ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ರಸ್ತೆಯಲ್ಲಿ ಏಕಾಏಕಿ ದಾಳಿ ಮಾಡಿದ ಚಿರತೆಯನ್ನು ಕಂಡು ತಬ್ಬಿಬ್ಬಾದ ಬೈಕ್ ಸವಾರರು, ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ಬಿಟ್ಟು ಪ್ರಾಣ ಉಳಿಕೊಂಡರೆ ಸಾಕು ಅಂತ ಮರಗಳನ್ನು ಹತ್ತಿ ಕುಳಿತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಾಮಳೆಯ ಬಳಿಕ ದಕ್ಷಿಣ ಕಾಶ್ಮೀರದಲ್ಲಿ ಪ್ರವಾಸಿಗರ ದಂಡು!

    ಮಹಾಮಳೆಯ ಬಳಿಕ ದಕ್ಷಿಣ ಕಾಶ್ಮೀರದಲ್ಲಿ ಪ್ರವಾಸಿಗರ ದಂಡು!

    ಮಡಿಕೇರಿ: ಪ್ರವಾಸಿಗರ ನೆಚ್ಚಿನ ತಾಣ ಮಂಜಿನ ನಗರಿ ಕಡೆಗೆ ಪ್ರವಾಸಿಗರು ನಿಧಾನವಾಗಿ ದಾಪುಗಾಲು ಇಡಲು ಆರಂಭಿಸಿದ್ದಾರೆ. ಮಳೆಗಾಲದಲ್ಲಿ ಮಹಾಮಳೆಯಿಂದ ಕರುನಾಡ ಕಾಶ್ಮೀರದ ಸೌಂದರ್ಯವನ್ನು ಮಿಸ್ ಮಾಡಿಕೊಂಡಿದ್ದ ಟೂರಿಸ್ಟ್ ಗಳು ಚಳಿಗಾಲದ ಹಿತವನ್ನು ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ಟೂರಿಸ್ಟ್ ಸ್ಪಾಟ್ ಗಳಿಗೆ ತೆರಳಿ ರಜಾ ದಿನಗಳನ್ನು ಮಸ್ತಿ ದಿನಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಸೊರಗಿ ಹೋಗಿದ್ದ ಕೊಡಗು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಬಂದಂತೆ ಆಗಿದೆ.

    ಕೊಡಗು ಕರ್ನಾಟಕದ ಮಟ್ಟಿಗೆ ಅದೊಂದು ಕಾಶ್ಮೀರ. ಪುಟ್ಟ ಜಿಲ್ಲೆಯಾದರೂ ತನ್ನ ಪ್ರಕೃತಿ ಸೌಂದರ್ಯ, ಜಲಪಾತಗಳಿಂದಲೇ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಆದರೆ ಈ ಬಾರಿ ಸುರಿದ ಮಹಾಮಳೆ ಕೊಡಗಿನಲ್ಲಿ ಅಕ್ಷರಶಃ ಪ್ರಳಯವನ್ನೇ ಸೃಷ್ಟಿಸಿಬಿಟ್ಟಿತ್ತು. ಇದರಿಂದ ಮಳೆ ನಡುವೆ ಕೊಡಗಿನ ಸೌಂದರ್ಯ ಸವಿಯೋ ಆಸೆಯಲ್ಲಿದ್ದ ಪ್ರಕೃತಿ ಪ್ರಿಯರಿಗೆ ಭಾರೀ ನಿರಾಸೆ ಉಂಟಾಗಿತ್ತು. ಇದೀಗ ಚಳಿಗಾಲದಲ್ಲಾದರೂ ಮಂಜಿನ ನಗರಿಯಲ್ಲಿ ಸಂಭ್ರಮಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

    ಶೈಕ್ಷಣಿಕ ಪ್ರವಾಸದ ಹೆಸರಲ್ಲಿ ವಿದ್ಯಾರ್ಥಿಗಳು, ಕೆಲಸದಿಂದ ರಿಲೀಫ್ ಪಡೆಯುವ ಸಲುವಾಗಿ ಉದ್ಯೋಗಿಗಳು ಮಂಜಿನ ನಗರಿಗೆ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಮಡಿಕೇರಿಯ ರಾಜಾಸೀಟ್, ದುಬಾರೆಯ ಜಂಗಲ್ ಮಸ್ತಿ, ಕುಶಾಲನಗರದ ನಿಸರ್ಗಧಾಮದಲ್ಲಿ ಪ್ರವಾಸಿಗರ ಎಂಜಾಯ್‍ಮೆಂಟ್ ಜೋರಾಗಿದೆ. ಇದರಿಂದ ಪ್ರಳಯದಿಂದ ಕಂಗೆಟ್ಟಿದ್ದ ಹೊಟೆಲ್- ರೆಸ್ಟೋರೆಂಟ್‍ಗಳಿಗೂ ಆಕ್ಸಿಜನ್ ಸಿಕ್ಕಂತಾಗಿದೆ. ಮಹಾಮಳೆಗೆ ಸಿಕ್ಕಿ ತತ್ತರಿಸಿದ್ದ ಕೊಡಗು ಇದೀಗ ಸಹಜ ಸ್ಥಿತಿಗೆ ಬರುತ್ತಿದ್ದು, ಪ್ರವಾಸೋದ್ಯಮ ಮೊದಲಿಂತಾಗುತ್ತಿರುವುದು ಎಲ್ಲರಿಗೂ ಖುಷಿ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರು ದಿನ ಪ್ರವಾಸಿಗರು ಕಾಫಿನಾಡಿಗೆ ನೋ ಎಂಟ್ರಿ..!

    ಮೂರು ದಿನ ಪ್ರವಾಸಿಗರು ಕಾಫಿನಾಡಿಗೆ ನೋ ಎಂಟ್ರಿ..!

    ಚಿಕ್ಕಮಗಳೂರು: ಕಾಫಿನಾಡಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ಗಿರಿಶ್ರೇಣಿ ನೋಡಲು ಬರುವ ಪ್ರವಾಸಿಗರನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಮೂರು ದಿನಗಳ ಕಾಲ ನಿರ್ಬಂಧಿಸಿದೆ.

    ಡಿಸೆಂಬರ್ 21, 22, 23 ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತ ಜಯಂತಿ ಆಚರಣೆ ನಡೆಯುತ್ತಿದೆ. ಆದರಿಂದ ಈ ಮೂರು ದಿನಗಳು ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಶ್ರೇಣಿ ಪ್ರವಾಸಿಗರಿಗೆ ಅಲ್ಲಿನ ಜಿಲ್ಲಾಡಳಿತ ನಿರ್ಬಂಧವೇರಿದೆ. ವಿ.ಎಚ್.ಪಿ, ಬಜರಂಗದಳ ಸಂಘಟನೆಗಳ ಕಾರ್ಯಕರ್ತರಿಂದ ಜಿಲ್ಲೆಯಲ್ಲಿ ದತ್ತ ಜಯಂತಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದತ್ತ ಪೀಠಕ್ಕೆ ಆಗಮಿಸುವ ನಿರೀಕ್ಷೆಯಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಭದ್ರತಾ ದೃಷ್ಟಿಯಿಂದ ಗಿರಿಶ್ರೇಣಿ ಪ್ರದೇಶಗಳಿಗೆ ಪ್ರವಾಸಿಗರು ಹೋಗದಂತೆ ನಿರ್ಬಂಧಿಸಲಾಗಿದೆ.

    ದತ್ತ ಜಯಂತಿ ಪ್ರಯುಕ್ತ ದತ್ತ ಪೀಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿ ಆಗಿರುವುದರಿಂದ ಇಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿರುವ ಗಿರಿಶ್ರೇಣಿಗಳನ್ನು ವೀಕ್ಷಿಸಿ ಖುಷಿ ಪಡುತ್ತಾರೆ. ಆದರೆ ಮೂರು ದಿನಗಳ ಕಾಲ ಗಿರಿಶ್ರೇಣಿಗಳಿಗೆ ಪ್ರವಾಸಿಗರನ್ನು ನಿರ್ಬಂಧ ಹೇರಿರುವುದರಿಂದ ನಿಸರ್ಗದ ಸೌಂದರ್ಯ ಸವಿಯಲು ಬರುವ ಜನರಿಗೆ ಕೊಂಚ ಬೇಸರವಾಗಲಿದೆ.

    ದತ್ತ ಜಯಂತಿ ಆಚರಣೆ ಪ್ರಯುಕ್ತ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಎಂದು ಜಿಲ್ಲಾಡಳಿತವು ದತ್ತಪೀಠ ಸೇರಿದಂತೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಬಂಡೀಪುರದಲ್ಲಿ ಪ್ರವಾಸಿಗರಿಗೆ ಒಂದೇ ಕಡೆ ಮೂರು ಹುಲಿಗಳ ದರ್ಶನ

    ಬಂಡೀಪುರದಲ್ಲಿ ಪ್ರವಾಸಿಗರಿಗೆ ಒಂದೇ ಕಡೆ ಮೂರು ಹುಲಿಗಳ ದರ್ಶನ

    ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಪ್ರವಾಸಿಗರಿಗೆ ಒಂದೇ ಕಡೆ ಮೂರು ಹುಲಿಗಳ ದರ್ಶನವಾಗಿದೆ.

    ಎರಡು ಮರಿ ಹುಲಿಗಳೊಂದಿಗೆ ತಾಯಿ ಹುಲಿ ದರ್ಶನವಾಗಿದ್ದು, ಸಫಾರಿಗೆ ಹೋದ ಪ್ರವಾಸಿಗರಿಗೆ ಸಖತ್ ಪೋಸ್ ನೀಡಿದೆ. ಬಂಡೀಪುರದಲ್ಲಿ ಪ್ರವಾಸಿಗರಿಗೆ ಹೆಚ್ಚು ದರ್ಶನ ನೀಡುತ್ತಿದ್ದ ಪ್ರಿನ್ಸ್ ಎಂಬ ಹುಲಿ ಇದೇ ವಲಯದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿತ್ತು.

    ಪ್ರಿನ್ಸ್ ಮೃತಪಟ್ಟಿದ್ದ ಮೇಲೆ ಈ ವಲಯದಲ್ಲಿ ಬೇರೆ ಹುಲಿ ದರ್ಶನವಾಗುತ್ತಿರಲ್ಲಿಲ್ಲ. ಇದೀಗ ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಮೂರು ಹುಲಿಗಳು ಕಾಣಿಸಿಕೊಳ್ಳುತ್ತಿವೆ. ಇದಲ್ಲದೇ ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಫೋಟೋ ಕ್ಲಿಕ್ ಮಾಡುತ್ತಿದ್ದರೆ, ಈ ಟೈಗರ್ ಫೋಟೋಗೆ ಪೋಸ್ ನೀಡಿವೆ.

    ಹುಲಿಗಳು ಫೋಟೋಗೆ ಪೋಸ್ ಕೊಟ್ಟ ಫೋಟೋ ಹಾಗೂ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

    https://www.youtube.com/watch?v=kop_16VJQQs&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲುಷಿತಗೊಂಡಿದೆ ಮಾಣಿಕ್ಯಧಾರ ನೀರು- ಪವಿತ್ರ ನೀರಿನಲ್ಲಿ ಸೇರುತ್ತಿದೆ ಪ್ರವಾಸಿಗರ ಮಲ, ಮೂತ್ರ

    ಕಲುಷಿತಗೊಂಡಿದೆ ಮಾಣಿಕ್ಯಧಾರ ನೀರು- ಪವಿತ್ರ ನೀರಿನಲ್ಲಿ ಸೇರುತ್ತಿದೆ ಪ್ರವಾಸಿಗರ ಮಲ, ಮೂತ್ರ

    ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗವೆನಿಸಿಕೊಂಡಿರುವ ಚಿಕ್ಕಮಗಳೂರಲ್ಲಿ ಹತ್ತಾರು ಪ್ರವಾಸಿ ತಾಣಗಳಿದ್ದು, ಅದರಲ್ಲೂ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಜಲಪಾತ ಪ್ರವಾಸಿಗರ ಫೆವರೇಟ್ ಸ್ಪಾಟ್ ಆಗಿದೆ. ನಿತ್ಯವೂ ಆಗಮಿಸುವ ನೂರಾರು ಪ್ರವಾಸಿಗರು ಇಲ್ಲಿನ ಜಲಧಾರೆಯಲ್ಲಿ ಮಿಂದೆದ್ದು, ಈ ನೀರನ್ನು ಕುಡಿದು ಪಾವನರಾಗುತ್ತೀವಿ ಎಂದುಕೊಂಡಿದ್ದಾರೆ. ಆದರೆ ಈ ನೀರು ಕುಡಿಯೋಕಲ್ಲ, ಸ್ನಾನಕ್ಕೂ ಯೋಗ್ಯವಲ್ಲದಷ್ಟು ಮಲೀನವಾಗಿದೆ.

    ಕಾಫಿನಾಡು ಚಿಕ್ಕಮಗಳೂರಿನ ಬಾಬಬುಡನ್‍ಗಿರಿಯ ಸೊಬಗನ್ನು ನೋಡುವುದಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿ ಇರುವ ಚಿಕ್ಕ ತೊರೆಯೇ ಮಾಣಿಕ್ಯಧಾರ. ಈ ನೀರನ್ನು ಕುಡಿದು ಅದರಲ್ಲಿ ಸ್ನಾನ ಮಾಡಿದರೆ, ಜೀವನ ಪಾವನವಾಗುತ್ತೆ ಎಂದು ಅದರಲ್ಲಿ ಸ್ನಾನ ಮಾಡುತ್ತಾರೆ. ಆದರೆ ಆ ನೀರು ಈಗ ಪವಿತ್ರವಾಗಿಲ್ಲ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಈ ಜಲಪಾತದ ನೀರನ್ನು ಸಂಶೋಧನೆಗೆ ಒಳಪಡಿಸಿದಾಗ, ನೀರಿನಲ್ಲಿ ಮನುಷ್ಯರ ಮಲ, ಮೂತ್ರದಂಶದ ಎಫ್-ಕೊಲಿಫಾರಂ ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಲ್ಲ ಅಂತಾ ಹೇಳಿದೆ.

    ಈ ಮಾಣಿಕ್ಯಧಾರಕ್ಕೆ ಬರುವ ಪ್ರವಾಸಿಗರು, ಜಲಪಾತ ಹುಟ್ಟೋ ಜಾಗದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು, ಹಾಗಾಗಿ ನೀರಿನಲ್ಲಿ ಎಫ್-ಕೊಲಿಫಾರಂ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಶ್ಯಾಂಪು, ಸೋಪು ಇತ್ಯಾದಿ ರಾಸಾಯನಿಕಗಳನ್ನು ಬಳಸಿ ಸ್ನಾನ ಮಾಡೋದರ ಜೊತೆಗೆ ಬಟ್ಟೆಯನ್ನು ಬಿಸಾಡಿ ಹೋಗುವುದರಿಂದ, ನೀರು ಕಲುಷಿತಗೊಳ್ಳೋದರ ಜೊತೆ ಪರಿಸರವೂ ಹಾಳಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಸ್ಥಳೀಯರು ಹೇಳಿದ್ದಾರೆ.

    ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಮಾಣಿಕ್ಯಧಾರ ಇದೀಗ ಮಾಲಿನ್ಯ ಭರಿತವಾಗಿರೋದು ಜನರಲ್ಲಿ ಆತಂಕ ಮೂಡಿಸಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಮಾಣಿಕ್ಯಧಾರದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಪಾವಿತ್ರ್ಯತೆಯನ್ನು ಉಳಿಸಲು ಕ್ರಮಕೈಗೊಳ್ಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಂಡ್ಯದಲ್ಲಿ ಸೃಷ್ಟಿಯಾಯ್ತು ಒಂದೇ ಬಾರಿ ಐನೂರು ಜನ ನಿಲ್ಲಬಹುದಾದ ತೇಲುವ ವೇದಿಕೆ!

    ಮಂಡ್ಯದಲ್ಲಿ ಸೃಷ್ಟಿಯಾಯ್ತು ಒಂದೇ ಬಾರಿ ಐನೂರು ಜನ ನಿಲ್ಲಬಹುದಾದ ತೇಲುವ ವೇದಿಕೆ!

    ಮಂಡ್ಯ: ಪ್ರಸಿದ್ಧ ಪ್ರವಾಸಿ ತಾಣ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಕೆರೆ ತೊಣ್ಣೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ತೊಣ್ಣೂರು ಕೆರೆ ಉತ್ಸವ ನಡೆಯಲಿದ್ದು, ಉತ್ಸವಕ್ಕಾಗಿ ಕೆರೆಯ ನಡುವೆ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.

    ಇಂದು ಸಂಜೆ ಏಳು ಗಂಟೆ ಸುಮಾರಿಗೆ ತೊಣ್ಣೂರು ಕೆರೆ ಉತ್ಸವವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್.ಪುಟ್ಟರಾಜು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಕೆರೆಯ ಸುತ್ತಮುತ್ತ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

    ಕೆರೆಯ ಸಮೀಪವೇ ಇರುವ ಬೆಟ್ಟಗುಡ್ಡಗಳೂ ಕೂಡ ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿವೆ. ಕೆರೆಯ ನಡುವೆ ಹಾಕಿರುವ ವೇದಿಕೆಯಲ್ಲಿ ಏಕಕಾಲಕ್ಕೆ ಐನೂರು ಜನ ಕುಳಿತುಕೊಳ್ಳಬಹುದಾಗಿದೆ. ಮೊದಲು ಕೆರೆಗೆ ಗಂಗಾಪೂಜೆ ಸಲ್ಲಿಸಲಾಗುತ್ತದೆ.

    ಮೂರು ದಿನಗಳ ಕಾಲ ಕನ್ನಡದ ಪ್ರಖ್ಯಾತ ಗಾಯಕರು, ಸಿನೆಮಾ ನಟ, ನಟಿಯರು, ಜಾನಪದ ಕಲಾವಿದರು ಕೆರೆಯ ನಡುವೆ ನಿರ್ಮಿಸಿರುವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವುದರ ಮೂಲಕ, ಕಲಾ ರಸಿಕರ ಮನ ತಣಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕಾಗಿ ಪ್ರವಾಸಿ ತಾಣ ತೊಣ್ಣೂರು ಕೆರೆ ಸರ್ವ ಅಲಂಕೃತವಾಗಿದ್ದು, ಹೊಸ ಲೋಕವೇ ಧರೆಗಿಳಿದಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಂದಿಬೆಟ್ಟಕ್ಕೆ ಸಿಂಗಲ್ಸ್ ಗೆ ನೋ ಎಂಟ್ರಿ ಹಿನ್ನೆಲೆ- ಈಗ ಬೈಕಿನಲ್ಲಿ ತ್ರಿಬಲ್ ರೈಡಿಂಗ್

    ನಂದಿಬೆಟ್ಟಕ್ಕೆ ಸಿಂಗಲ್ಸ್ ಗೆ ನೋ ಎಂಟ್ರಿ ಹಿನ್ನೆಲೆ- ಈಗ ಬೈಕಿನಲ್ಲಿ ತ್ರಿಬಲ್ ರೈಡಿಂಗ್

    ಚಿಕ್ಕಬಳ್ಳಾಪುರ: ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಬರುವ ಪ್ರವಾಸಿಗರಿಗೆ ವಿಶ್ವವಿಖ್ಯಾತ ನಂದಿಗಿರಿಧಾಮದ ಪ್ರವೇಶಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಹಾಗಂತ ಒಬ್ಬರೆ ಬರುವ ಆಗಿಲ್ಲ ಎಂದು ಬೈಕಿನಲ್ಲಿ ಬರುತ್ತಿರುವ ಕೆಲವರು ತಮ್ಮ ಜೊತೆಗೆ ಮತ್ತೊಬ್ಬರು ಅವರ ಜೊತೆಗೆ ಇನ್ನೊಬ್ಬರು ಅಂತ ಮೂವರು ಬರುತ್ತಿದ್ದಾರೆ.

    ವಿಶ್ವವಿಖ್ಯಾತ ನಂದಿಗಿರಿಧಾಮ ತನ್ನ ಅನನ್ಯ ಪ್ರಾಕೃತಿಕ ಸೊಬಗಿನಿಂದಲೇ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯೋ ಹಚ್ಚು ಹಸುರಿನ ಪ್ರೇಮಧಾಮ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದ ಈ ನಯನ ಮನೋಹರ ನಂದಿಬೆಟ್ಟ ಬೆಂಗಳೂರಿಗರಿಗಂತೂ ವಿಕೇಂಡ್ ನ ಪಿಕ್ ನಿಕ್ ಸ್ಪಾಟ್ ಆಗಿದೆ. ಅದರಲ್ಲೂ ಪ್ರೇಮಿಗಳಿಗೆ ಹಾಟ್ ಫೇವರಿಟ್ ತಾಣವಾಗಿದೆ.

    ಇಂತಹ ವಿಶ್ವ ಪ್ರಸಿದ್ದಿ ಪಡೆದ ನಂದಿಗಿರಿಧಾಮ ವಿಕೇಂಡ್ ಬಂದರೆ ಸಾಕು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಆದರೆ ನಂದಿಬೆಟ್ಟಕ್ಕೆ ಬೈಕಿನಲ್ಲಿ ಬರುತ್ತಿರುವ ಬಹುತೇಕರು ತ್ರಿಬಲ್ ರೈಡಿಂಗ್ ಮಾಡುತ್ತಿರುವುದು ಜಾಸ್ತಿಯಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಬೈಕ್ ಸವಾರರು ರ‍್ಯಾಶ್ ಡ್ರೈವಿಂಗ್ ಮಾಡುತ್ತಾ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಅದರಲ್ಲೂ ಅಪ್ರಾಪ್ತ ಬಾಲಕರು ಸಹ ಬೈಕ್‍ನ್ನು ಅಡ್ಡಾ-ದಿಡ್ಡಿ ಚಾಲನೆ ಮಾಡುತ್ತಾ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ.

    ಒಂದು ಬೈಕಿನಲ್ಲಿ ಇಬ್ಬರು ಸಾಲದು ಅಂತ ಮೂವರು ಬರುತ್ತಿದ್ದು, ಜೊತೆಗೆ ಅಂಕು ಡೊಂಕಿನ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಾಯಿಸುತ್ತಾ ಆಪತ್ತನ್ನು ತಮ್ಮ ಮೈಮೇಲೆ ತಾವೇ ಎಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಕಡ್ಡಾಯ ಅಂತ ಕಾನೂನು ಇದ್ದರೂ ಹೆಲ್ಮೆಟ್ ಹಾಕದೆ ಬಹುತೇಕ ಮಂದಿ ಬೈಕ್ ರೈಡ್ ಮಾಡುತ್ತಿದ್ದಾರೆ. ದುರಂತ ಅಂದರೆ ಕೆಲವರು ಹೆಲ್ಮೆಟ್ ತಂದರೂ ಶೋಕಿಗೆ ಹೆಲ್ಮೆಟ್ ನನ್ನು ಬೈಕ್ ಮುಂಭಾಗ ಅಥವಾ ಕೈಯಲ್ಲಿ ಹಾಕಿಕೊಂಡು ಬೈಕ್ ಚಾಲನೆ ಮಾಡುತ್ತಿದ್ದಾರೆ.

    ಪ್ರೇಮಿಗಳ ಪಾಲಿನ ಫೇವರಿಟ್ ತಾಣ ನಂದಿಗಿರಿಧಾಮಕ್ಕೆ ಕದ್ದು ಮುಚ್ಚಿ ಬರುವ ಕೆಲ ಜೋಡಿಗಳು, ಬೈಕ್ ನಲ್ಲಿ ಬರುವಾಗ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬರುತ್ತಾರೋ ಬಿಡ್ತಾರೋ. ಅಪ್ಪಿ ತಪ್ಪಿ ಎಲ್ಲಾದರೂ ಕ್ಯಾಮೆರಾ ಕಂಡರೆ ಸಾಕು ಮನೆಯಲ್ಲಿ, ಪರಿಚಯಸ್ಥರಿಗೆ ಗೊತ್ತಾಗಿ ಮಾನ ಹೋಗುತ್ತೆ ಅಂತ ಬಟ್ಟೆಯಿಂದ ಮುಖ ಮುಚ್ಕೋತಾರೆ. ಆದರೆ ಅಪಘಾತವಾಗಿ ಪ್ರಾಣ ಹೋಗುತ್ತೆ ಹೆಲ್ಮೆಟ್ ಹಾಕಿಕೊಳ್ಳೋಣ ಎನ್ನುವ ಕನಿಷ್ಠ ಅರಿವು ಇಲ್ಲದೆ ಪ್ರಾಣಕ್ಕಿಂತ ಮಾನ ಮುಖ್ಯ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಕುಗ್ಗಿದ ಮಡಿಕೇರಿ ಪ್ರವಾಸೋದ್ಯಮ

    ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಕುಗ್ಗಿದ ಮಡಿಕೇರಿ ಪ್ರವಾಸೋದ್ಯಮ

    ಮಡಿಕೇರಿ: ಕೊಡಗು ಎಂದಾಕ್ಷಣ ನೆನಪಿಗೆ ಬರುತ್ತಿದ್ದು ಅಲ್ಲಿನ ಪ್ರಾಕೃತಿಕ ಸೌಂದರ್ಯ, ಪ್ರವಾಸಿ ತಾಣಗಳು. ಆದರೆ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಇಲ್ಲಿನ ಆರ್ಥಿಕ ಅಭಿವೃದ್ಧಿಗೆ ಮೂಲ ಎನ್ನಲಾಗುತ್ತಿದ್ದ ಪ್ರವಾಸೋದ್ಯಮ ಗಣನೀಯವಾಗಿ ಕುಗ್ಗಿದೆ. ಈ ನಡುವೆ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘ ಪ್ರವಾಸಿಗರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

    ಧುಮ್ಮಿಕ್ಕೋ ಅಬ್ಬಿಪಾಲ್ಸ್ ಮಂಜನ್ನೇ ಹೊದ್ದು ಮಲಗಿರುವ ನಗರಿ, ಕಣ್ಣು ಕೊರೈಸುವ ರಾಜಾಸೀಟ್ ವೀವ್ಹ್, ರಾಜರ ಗದ್ದಿಗೆ. ಹೀಗೆ ಕೊಡಗು ಜಿಲ್ಲೆಯಾದ್ಯಂತ ಇರುವ ಹತ್ತಾರು ಪ್ರವಾಸಿ ತಾಣಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದವು.

    ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಜಲಪ್ರಳಯ ಜಿಲ್ಲೆಯನ್ನು ಜರ್ಜರಿತವಾಗಿಸಿದೆ. ಹೀಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಈಗ ಬೆರಳೆಣಿಕೆಯಷ್ಟಿದೆ. ಪ್ರವಾಸಿಗರನ್ನೇ ನಂಬಿ ಬದುಕುತ್ತಿದ್ದ ನಾವು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ವ್ಯಾಪಾರ ವಹಿವಾಟು ಇಲ್ಲದೆ ಹೋಟೆಲ್, ರೆಸಾರ್ಟ್ ಗಳಲ್ಲಿ ದುಡಿಯುತ್ತಿರುವ ನೌಕರರಿಗೂ ಸಂಬಳ ಕೊಡುವುದಕ್ಕೂ ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕೊಡಗು ಛೇಂಬರ್ ಆಫ್ ಕಾಮರ್ಸ್ ಮಾಲೀಕ ಚಿದ್ವಿಲಾಸ್ ಹೇಳಿದ್ದಾರೆ.

    ಕೊಡಗು ಪ್ರವಾಸೋದ್ಯಮ ಮತ್ತೆ ಯಥಾಸ್ಥಿತಿಗೆ ಬರುವಂತೆ ಮಾಡಲು ಹೋಟೆಲ್, ರೆಸ್ಟೋರೆಂಟ್ ಮಾಲೀಕರ ಸಂಘ ಇನ್ನಿಲ್ಲದ ಹಲವು ಪ್ರಯತ್ನಗಳನ್ನು ಮಾಡುತ್ತಿವೆ. ಈ ಮಧ್ಯೆ ಪ್ರವಾಸೋದ್ಯಮದ ರಾಯಭಾರಿಯಾಗಿರುವ ಮೈಸೂರು ರಾಜವಂಸ್ಥ ಯದುವೀರ್ ಒಡೆಯರ್ ಪ್ರವಾಸಿಗರನ್ನು ಆಹ್ವಾನಿಸಿ ಕೊಡಗು ಸೇಫ್ ಆಗಿದೆ ಬನ್ನಿ ಎನ್ನುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv