Tag: Tourist

  • ಕಾದ ಕಾವಲಿಯಂತಾಗಿದೆ ಕಾಫಿನಾಡು – ನೆತ್ತಿ ಸುಡುತ್ತಿದೆ ಬಿಸಿಲು!

    ಕಾದ ಕಾವಲಿಯಂತಾಗಿದೆ ಕಾಫಿನಾಡು – ನೆತ್ತಿ ಸುಡುತ್ತಿದೆ ಬಿಸಿಲು!

    ಚಿಕ್ಕಮಗಳೂರು: ಸದಾ ತಂಪೆರೆಯೋ ಗಾಳಿ, ಹಚ್ಚ-ಹಸಿರಿನಿಂದ ಕಂಗೊಳಿಸುವ ಹಸಿರ ತವರು ಕಾಫಿನಾಡಲ್ಲಿ ಮನೆ ಮಾಡಬೇಕೆಂದು ಅದೆಷ್ಟೋ ಪ್ರವಾಸಿಗರ ಬಯಕೆ. ಆದರೆ ಚಿಕ್ಕಮಗಳೂರಿನ ಸದ್ಯದ ಹವಾಮಾನ ಕೇಳಿದ್ರೆ, ಇತ್ತ ತಲೆ ಹಾಕಿಯೂ ಮಲಗೊಲ್ಲ.

    ಹೌದು. ವರ್ಷದಿಂದ ವರ್ಷಕ್ಕೆ ಕಾಫಿನಾಡು ಕಾದ ಕವಾಲಿಯಂತಾಗ್ತಿದೆ. ಏಕೆಂದರೆ ಈ ಬಾರಿ ಹಿಂದೆಂದೂ ಕಾಣದಂತ ಬಿಸಿಲು ನೆತ್ತಿ ಸುಡ್ತಿದೆ. ಕನಿಷ್ಠ 22 ರಿಂದ ಗರಿಷ್ಠ 26, 28ರವರೆಗಿದ್ದ ಬಿಸಿಲಿನ ತಾಪ ಈ ಬಾರಿ 38ರ ಗಡಿ ಮುಟ್ಟಿದೆ.


    ಕೊಪ್ಪ, ಶೃಂಗೇರಿ, ಎನ್.ಆರ್ ಪುರ, ಮೂಡಿಗೆರೆಯ ಪರಿಸ್ಥಿತಿಯೂ ಚಿಕ್ಕಮಗಳೂರಿಗಿಂತ ಭಿನ್ನವಾಗಿಲ್ಲ. ಇನ್ನು ಜಿಲ್ಲೆಯ ಬಯಲುಸೀಮೆ ಪ್ರದೇಶಗಳಾಗಿರೋ ಕಡೂರು, ತರೀಕೆರೆಯ ಪರಿಸ್ಥಿತಿಯಂತು ಮತ್ತಷ್ಟು ಶೋಚನಿಯ. ಜನಸಾಮಾನ್ಯರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಫಿನಾಡು ರಾಜ್ಯದ ಕಲಬುರಗಿ, ಬೆಳಗಾವಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    ಬಿಸಿಲು ಏರುತ್ತಿರುವ ಮಧ್ಯೆ ಎಳನೀರು ಹಾಗೂ ಜ್ಯೂಸ್ ವ್ಯಾಪಾರ ಭರ್ಜರಿ ಆಗುತ್ತಿದೆ. ಹಿಂದೆ ಬೆಳಗ್ಗೆಯಿಂದ ಸಂಜೆಯವರೆಗೂ ಏಳನೀರು ಸಿಗುತಿತ್ತು. ಆದರೆ ಈಗ ಮಧ್ಯಾಹ್ನವೇ ಏಳನೀರು ಖಾಲಿಯಾಗುತ್ತಿದೆ. ಹೀಗಾಗಿ ಏಳನೀರು ವ್ಯಾಪಾರಿಗಳು ಹೆಚ್ಚು ಏಳನೀರನ್ನು ರೈತರಿಂದ ಖರೀದಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ವಾರ ಬಂಡಿಪುರದಲ್ಲಿ ಸಫಾರಿ ಬಂದ್!

    ಒಂದು ವಾರ ಬಂಡಿಪುರದಲ್ಲಿ ಸಫಾರಿ ಬಂದ್!

    ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೆಂಕಿ ಬಿದ್ದಿರುವ ಹಿನ್ನೆಲೆ ಒಂದು ವಾರಗಳ ಕಾಲ ಸಫಾರಿ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ಈ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡಿಪುರದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಪರಿಣಾಮ ಬೆಂಕಿಯಿಂದ ಬಂಡಿಪುರ ಕಾಡಿನ ಸಫಾರಿ ಝೋನ್ ನಾಶವಾಗಿದೆ. ಆದರಿಂದ ಸಫಾರಿ ಝೋನ್‍ನಲ್ಲಿ ಸಫಾರಿ ಬಂದ್ ಮಾಡಲಾಗಿದೆ. ನೂರಾರು ಪ್ರವಾಸಿಗರು ಸಫಾರಿಗಾಗಿ ಪ್ರತಿ ನಿತ್ಯ ಬಂಡಿಪುರಕ್ಕೆ ಬರುತ್ತಿದ್ದರು. ಸಫಾರಿಯಿಂದ ತಿಂಗಳಿಗೆ ಬಂಡಿಪುರದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು. ಆದ್ರೆ ಕಳೆದ ನಾಲ್ಕೈದು ದಿನಗಳಿಂದ ಅರಣ್ಯದಲ್ಲಿ ಹೊತ್ತಿಕೊಂಡಿರುವ ಕಾಡ್ಗಿಚ್ಚಿನಿಂದ ಪ್ರವಾಸಿಗರಿಲ್ಲದೆ ಬಂಡಿಪುರ ಬಿಕೋ ಎನ್ನುತ್ತಿದೆ.

    ಕಾಡ್ಗಿಚ್ಚಿನಿಂದ ಬಂಡಿಪುರದ ಸುಮಾರು 5 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶ ನಾಶವಾಗಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಹರಸಾಹಸ ಪಟ್ಟಿದ್ದು, ಸದ್ಯ ಬೆಂಕಿ ಹತೋಟಿಗೆ ಬಂದಿದೆ ಎನ್ನಲಾಗುತ್ತಿದೆ.

    ಅಲ್ಲದೆ ಬಂಡಿಪುರದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಹಿನ್ನೆಲೆ ಊಟಿ- ಗುಡ್ಲುಪೇಟೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೇ ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಊಟಿ- ಗುಡ್ಲುಪೇಟೆ ಸಂಚಾರಕ್ಕೆ ಅಣುವು ಮಾಡಿಕೊಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಚಿಕ್ಕಮಗಳೂರು: ಮರಣ ಮೃದಂಗ ಬಾರಿಸುತ್ತಿರುವ ಮಂಗನಜ್ವರಕ್ಕೆ ಮಲೆನಾಡಿಗರು ತತ್ತರಿಸಿ ಹೋಗಿದ್ದು, ಈ ಕಾಯಿಲೆ ಇಲ್ಲಿಗೆ ಬರುವ ಪ್ರವಾಸಿಗರಿಗೂ ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಮಲೆನಾಡು ಹಾಗೂ ಸುತ್ತಮುತ್ತಲ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿರೋ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‍ಡಿ) ವೈರಾಣುವಿನಿಂದ ಅನೇಕ ಮಂದಿ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಈ ಕಾಯಿಲೆ ಈ ಭಾಗಕ್ಕೆ ಬರುವ ಪ್ರವಾಸಿಗರಿಗೂ ತಗಲಬಾರದೆಂದು ಮುಂಜಾಗೃತೆ ಕ್ರಮವಾಗಿ ಪ್ರವಾಸಿಗರಿಗೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ನಿಷೇಧಿಸಿದೆ. ಕುದುರೆಮುಖಕ್ಕೆ ಒಳಪಡುವ ಹಲವು ಪ್ರದೇಶಗಳಲ್ಲಿ ಟ್ರಕ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಗಣನೀಯವಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ. ಪ್ರವಾಸಿಗರ ಚಾರಣಕ್ಕೆ ಅರಣ್ಯ ಇಲಾಖೆಯಿಂದ ನಿಷೇಧ ಹೇರಿದೆ. ಈ ಭಾಗದಲ್ಲಿ ಕೆ.ಎಫ್.ಡಿ ವೈರಾಣು ಪತ್ತೆ ಹಿನ್ನೆಲೆ ಕುದುರೆಮುಖ ಗಿರಿಶ್ರೇಣಿ, ಕೂಡಲ್ ಫಾಲ್ಸ್, ಕೊಡಚಾದ್ರಿ, ಕುರೆಂಜಲ್ ಗಿರಿಶ್ರೇಣಿ ಪ್ರದೇಶಗಳಿಗೆ ಪ್ರವಾಸಿಗರು ಪ್ರವೇಶಿಸಬಾರದೆಂದು ಅರಣ್ಯ ಇಲಾಖೆ ಸೂಚನೆ ನೀಡಿದೆ.

    ಅಷ್ಟೇ ಅಲ್ಲದೆ ಕಾರ್ಕಳಕ್ಕೆ ಒಳಪಡುವ ಪ್ರದೇಶದಲ್ಲೂ ಟ್ರಕ್ಕಿಂಗ್ ನಿಷೇಧಿಸಲಾಗಿದೆ. ಕಾರ್ಕಳ ಹಾಗೂ ಚಿಕ್ಕಮಗಳೂರು, ಕುದುರೆಮುಖ ವ್ಯಾಪ್ತಿಯಲ್ಲಿ ಕೆಎಫ್‍ಡಿ ಭೀತಿ ಹೆಚ್ಚಾಗಿದ್ದು, ಮುಂಜಾಗೃತೆ ಕ್ರಮವಾಗಿ ಅರಣ್ಯ ಇಲಾಖೆ ಮಲೆನಾಡಿಗೆ ಬರೋ ಪ್ರವಾಸಿಗರಿಗೆ ಹಾಗೂ ಜನರಿಗೆ ಎಚ್ಚರದಿಂದಿರಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಕಂದಗಿರಿಗೆ ಚಾರಣಿಗರ ದಂಡು- ಟಿಕೆಟ್ ಜೊತೆ ಮೂಲಭೂತ ಸೌಕರ್ಯವಿಲ್ಲದೆ ಪರದಾಟ

    ಸ್ಕಂದಗಿರಿಗೆ ಚಾರಣಿಗರ ದಂಡು- ಟಿಕೆಟ್ ಜೊತೆ ಮೂಲಭೂತ ಸೌಕರ್ಯವಿಲ್ಲದೆ ಪರದಾಟ

    ಚಿಕ್ಕಬಳ್ಳಾಪುರ: ಭೂಮಿ ಮೇಲಿನ ಸ್ವರ್ಗತಾಣ, ಪ್ರವಾಸಿಗರ ಪಾಲಿನ ಹಾಟ್ ಫೇವರಿಟ್ ತಾಣ ಚಿಕ್ಕಬಳ್ಳಾಪುರ ತಾಲೂಕಿನ ಸ್ಕಂದಗಿರಿ ಬೆಟ್ಟಕ್ಕೆ ಚಾರಣಿಗರ ದಂಡೇ ಹರಿದು ಬಂದಿದೆ. ಮುಂಜಾನೆ 3-4 ಗಂಟೆಗೆ ಸಾವಿರಾರು ಮಂದಿ ಚಾರಣಿಗರು ಸ್ಕಂದಗಿರಿ ಬೆಟ್ಟಕ್ಕೆ ಲಗ್ಗೆಯಿಟ್ಟಿದ್ದು, ವೀಕೆಂಡ್ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಚಾರಣಿಗರ ಆಗಮನ ಹಿನ್ನೆಲೆ ಟಿಕೆಟ್ ಪಡೆಯಲು ಪ್ರವಾಸಿಗರು ಪರದಾಡುವಂತಾಗಿದೆ.

    ಸ್ಕಂದಗಿರಿ ಬೆಟ್ಟದ ಟ್ರೆಕ್ಕಿಂಗ್ ಎಂದು ತಲಾ ಚಾರಣಿಗನಿಗೆ 250 ರೂಪಾಯಿ ಶುಲ್ಕವನ್ನ ಸರ್ಕಾರ ನಿಗದಿಪಡಿಸಿದೆ. ಆದರೆ ಟಿಕೆಟ್ ಬುಕ್ ಮಾಡಲು ಕೇವಲ ‘ಮೈ ಏಕೋ ಟ್ರಿಪ್’ ಅನ್ನೋ ವೆಬ್ ಸೈಟ್ ಮೂಲಕ ಆನ್‍ಲೈನ್ ನಲ್ಲಿ ಅಷ್ಟೇ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಸ್ಕಂದಗಿರಿ ಟ್ರೆಕ್ಕಿಂಗ್ ಗೆ ಆಗಮಿಸಿರುವ ಚಾರಣಿಗರು ಒಮ್ಮಲೆ ಸಾವಿರಾರು ಮಂದಿ ಬಂದಾಗ ಪರದಾಟ ಪಡಬೇಕಾಗುತ್ತಿದೆ. ಇದನ್ನೂ ಓದಿ: ದಾರಿ ಕಾಣದೆ ಪರದಾಡಿದ್ರು- ಪೊಲೀಸರಿಗೆ ಕರೆ ಮಾಡಿ ಕಾಪಾಡಿ ಅಂದ್ರು ಯುವಕ- ಯುವತಿಯರು..!

    ಆಫ್‍ಲೈನ್ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಸಹ ಟಿಕೆಟ್ ಬುಕ್ ಮಾಡಿಕೊಳ್ಳುತ್ತಾರೆ. ಕೇವಲ ಪುಸ್ತಕದಲ್ಲಿ ಹೆಸರು ನಮೂದಿಸಿಕೊಂಡು ದುಡ್ಡು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ದುಡ್ಡು ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರಿಂದ ದೂರುಗಳು ಕೇಳಿಬಂದಿವೆ. ಮತ್ತೊಂದೆಡೆ ಸೂರ್ಯೋದಯದ ಸವಿ ಸವಿಯೋಕೆ ದುರ್ಗಮ ಹಾದಿಯ ಬೆಟ್ಟದಲ್ಲಿ ಸಾಗುವ ಚಾರಣಿಗರ ತಂಡಗಳಿಗೆ ಗೈಡ್ ವ್ಯವಸ್ಥೆ ಕಲ್ಪಿಸಬೇಕೆಂಬ ಆದೇಶ ಇದೆ. ಆದರೆ ಚಾರಣಿಗರ ಜೊತೆ ಯಾವುದೇ ಗೈಡ್ ಗಳನ್ನೂ ಸಹ ಕಳುಹಿಸುತ್ತಿಲ್ಲ.

    ಮತ್ತೊಂದೆಡೆ ಭೂಲೋಕದ ಸ್ವರ್ಗ ತಾಣದಲ್ಲಿ ಯಾಮಾರಿದರೆ ಚಾರಣಿಗರು ನರಕಕ್ಕೆ ಜಾರುತ್ತಾರೆ. ಕನಿಷ್ಟ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಸಹ ಇಲ್ಲದಂತಹ ಪರಿಸ್ಥಿತಿ ಇದೆ. ಯಾವುದೇ ಸುರಕ್ಷತಾ ಕ್ರಮಗಳನ್ನ ಸಹ ಸರ್ಕಾರ ಕೈಗೊಂಡಿಲ್ಲ. ಹೀಗಾಗಿ ಅಪ್ಪಿ ತಪ್ಪಿ ಯಾರಿಗಾದರೂ ಅನಾರೋಗ್ಯಕ್ಕೀಡಾದರೆ ಅಥವಾ ಸುಸ್ತಾಗಿ ಆಯತಪ್ಪಿ ಬಿದ್ದರು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವೇ ಇಲ್ಲದಂತ ದುಸ್ಥಿತಿ ಎದುರಾಗಿದೆ. ಹೀಗಾಗಿ ಟಿಕೆಟ್ ಬುಕ್ಕಿಂಗ್ ಅಂತ ಆನ್‍ಲೈನ್ ವ್ಯವಸ್ಥೆ ಜೊತೆ ಆಫ್ ಲೈನ್ ಟಿಕೆಟ್ ಬುಕ್ಕಿಂಗ್ ಕೌಂಟರ್ ಮಾಡಬೇಕು. ಅಷ್ಟೇ ಅಲ್ಲದೇ ಮೂಲಭೂತ ಸೌಲಭ್ಯಗಳು ಮತ್ತು ಸುರಕ್ಷತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ ಅಂತ ಚಾರಣಿಗರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಡಗು ಉತ್ಸವ- ರಾಜಾಸೀಟ್‍ನಲ್ಲಿ ಫಲಪುಷ್ಪಗಳ ಕಲರವ

    ಕೊಡಗು ಉತ್ಸವ- ರಾಜಾಸೀಟ್‍ನಲ್ಲಿ ಫಲಪುಷ್ಪಗಳ ಕಲರವ

    ಮಡಿಕೇರಿ: ಇಲ್ಲಿನ ರಾಜಾಸೀಟ್ ಪ್ರವಾಸಿಗರ ನೆಚ್ಚಿನ ಹಾಟ್ ಸ್ಪಾಟ್ ಆಗಿದ್ದು, ಮಂಜಿನ ನಗರಿಗೆ ಆಗಮಿಸುವ ಪ್ರವಾಸಿಗರು ರಾಜಾಸೀಟ್‍ಗೆ ಹೋಗುವುದನ್ನು ಮರೆಯುವುದಿಲ್ಲ. ಕೊಡಗು ಉತ್ಸವದ ಹಿನ್ನೆಲೆಯಲ್ಲಿ ಬಗೆ ಬಗೆಯ ಹೂಗಳಿಂದ ಭೂ ಲೋಕದ ಸ್ವರ್ಗದಂತೆ ರಾಜಾಸೀಟ್ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

    ಸೊಂಡಿಲು ಎತ್ತಿ ಆಶೀರ್ವಾದ ಮಾಡುತ್ತಿರುವ ಆನೆಗಳು, ರೇಸ್‍ಗೆ ರೆಡಿಯಾಗಿ ನಿಂತಿರುವ ವಿಂಟೇಜ್ ಕಾರ್ ಗಳು, ಕರುನಾಡ ಜೀವನದಿ ಕಾವೇರಿ ಪ್ರತಿಮೆ, ಕಣ್ಣಿಗೆ ಕಟ್ಟುವ ಹಾಗೆ ಹೂಗಳಿಂದ ನಿರ್ಮಾಣವಾಗಿರುವ ಕಲಾಕೃತಿಗಳು ಕಂಡು ಬರುತ್ತಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ರಾಜಾಸೀಟ್ ಸದ್ಯ ವಿವಿಧ ಬಗೆಯ ಹೂಗಳಿಂದಲೇ ಭರ್ತಿಯಾಗಿದೆ.

    ಮೂರು ದಿನಗಳ ಕೊಡಗು ಉತ್ಸವಕ್ಕೆ ಈಗಾಗಲೇ ಚಾಲನೆಯೂ ಸಿಕ್ಕಿದೆ. ಹಾಗೆಯೇ ರಾಜಾಸೀಟ್‍ನಲ್ಲಿ ಕುಸುಮಗಳ ಕಲರವ ಶುರುವಾಗಿದೆ. ಪ್ರಾಕೃತಿಕ ವಿಕೋಪದಿಂದ ಕೊಡಗು ಪ್ರವಾಸೋದ್ಯಮ ಸೊರಗಿ ಹೋಗಿದ್ದು, ಪ್ರವಾಸಿಗರನ್ನು ಮತ್ತೆ ಕೊಡಗಿನತ್ತ ಸೆಳೆಯಲು ರಾಜಾಸೀಟ್ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಅಕ್ಟೋಪಸ್, ವಿಂಟೇಜ್ ಕಾರ್, ಅಣಬೆ, ಕಾವೇರಿ ಮಾತೆಯ ಪ್ರತಿಮೆ, ಹೂವಿನ ವೀಣೆ, ಕ್ಯಾಪ್ಸಿಕಂನಿಂದ ಸಿಂಗರಿಸಲ್ಪಟ್ಟ ಕಾಡಾನೆಗಳು, ಹೂವಿನ ಅಲಂಕೃತ ಮಂಟಪ ಹೀಗೆ ತರಹೇವಾರಿ ಹೂವಿನ ಅಲಂಕಾರ ಕಣ್ಮನ ಸೆಳೆಯುತ್ತಿದೆ.

    ಫಲಪುಷ್ಪ ಪ್ರದರ್ಶನ ಅಷ್ಟೇ ಅಲ್ಲ ಖ್ಯಾತ ಗಾಯಕರಾದ ಎಂ.ಡಿ ಪಲ್ಲವಿ, ಅರ್ಜುನ್ ಜನ್ಯ ಸೇರಿದಂತೆ ಅನೇಕ ಖ್ಯಾತ ಗಾಯಕರಿಂದ ಸಂಗೀತದ ಕಲರವೇ ಸೃಷ್ಟಿಯಾಗಲಿದೆ. ಸ್ಟ್ರೀಟ್ ಫೆಸ್ಟ್ ಜೊತೆಗೆ ಶ್ವಾನ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟಿನಲ್ಲಿ ಕೊಡಗು ಉತ್ಸವ ನೆಪದಲ್ಲಿ ಇಲ್ಲಿ ಸ್ವರ್ಗವೇ ಸೃಷ್ಟಿಯಾಗಿದೆ. ಮೂರು ದಿನ ಈ ಪುಷ್ಪಲೋಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದಿನಿಂದ 3 ದಿನ ಮಂಜಿನ ನಗರಿಯಲ್ಲಿ ಪ್ರವಾಸಿ ಉತ್ಸವ- ಕಿರುತೆರೆ ಕಲಾವಿದರು ಭಾಗಿ

    ಇಂದಿನಿಂದ 3 ದಿನ ಮಂಜಿನ ನಗರಿಯಲ್ಲಿ ಪ್ರವಾಸಿ ಉತ್ಸವ- ಕಿರುತೆರೆ ಕಲಾವಿದರು ಭಾಗಿ

    ಮಡಿಕೇರಿ: ಪ್ರವಾಸಿಗರ ಸ್ವರ್ಗ, ದಕ್ಷಿಣ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಪ್ರವಾಸೋದ್ಯಮ ಕುಸಿದು ಬಿದ್ದಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ.

    ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆ ಆಶ್ರಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿ ಉತ್ಸವ ನಡೆಯಲಿದೆ. ಆಗಸ್ಟ್ ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಕಹಿ ನೆನಪಿನಿಂದ ಜಿಲ್ಲೆಯ ಜನತೆಯನ್ನು ಹೊರತರಲು ಹಾಗೂ ಕುಸಿದು ಬಿದ್ದಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರವಾಸಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

    ಪ್ರವಾಸಿಗರ ಹಾಟ್ ಸ್ಪಾಟ್ ರಾಜಾಸೀಟ್ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಅಲ್ಲದೇ ನಗರದ ಗಾಂಧಿ ಮೈದಾನದಲ್ಲಿ ಇಂದು ಸಂಜೆ 5 ರಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಗಾಯಕಿ ಎಂಡಿ ಪಲ್ಲವಿ, ಸರಿಗಮಪ ಖ್ಯಾತಿಯ ಸುನೀಲ್, ಶ್ರೀ ಹರ್ಷ, ಸೇರಿದಂತೆ ಕಿರುತೆರೆಯ ನಟ-ನಟಿಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಮೂಲಕ ಆಕರ್ಷಿಸಲಿದ್ದಾರೆ.

    ಉತ್ಸವದ ಕೊನೆ ದಿನದಂದು ಸಂಜೆ 6.30ರಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ನಡೆಯಲಿದ್ದು, ಹಿನ್ನೆಲೆ ಗಾಯಕರಾದ ವ್ಯಾಸರಾಜ್, ಅನುರಾಧ ಭಟ್, ಇಂದು ನಾಗರಾಜ್, ಲಕ್ಷ್ಮೀ ನಾಗರಾಜ್, ಸಂಜಿತ್ ಹೆಗ್ಡೆ, ಶ್ರೀನಿವಾಸ್ ಭಾಗವಹಿಸುತ್ತಿರುವುದು ಈ ಉತ್ಸವದ ಕೇಂದ್ರ ಬಿಂದುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷದಂದು ಸೆಲ್ಫಿಗಾಗಿ ಪ್ರವಾಸಿಗರ ಹುಚ್ಚು ಸಾಹಸ

    ಹೊಸ ವರ್ಷದಂದು ಸೆಲ್ಫಿಗಾಗಿ ಪ್ರವಾಸಿಗರ ಹುಚ್ಚು ಸಾಹಸ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಪ್ರವಾಸಿಗರು ಸೆಲ್ಫಿಗಾಗಿ ಹುಚ್ಚು ಸಾಹಸ ಮಾಡುತ್ತಿದ್ದಾರೆ.

    ಸೆಲ್ಫಿ ಕ್ಲಿಕ್ಕಿಸಲು ಪ್ರವಾಸಿಗರು ರಕ್ಷಣೆಗೆ ಆಳವಡಿಸಿರುವ ತಡೆಗೋಡೆ ಏರುತ್ತಿದ್ದಾರೆ. ಎತ್ತರದ ಕಬ್ಬಿಣದ ಗ್ರಿಲ್ ಏರಿ ಹೋಗಿ ಅಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ. ದಂಡ ವಿಧಿಸಲಾಗುವುದು ಅಂತ ನಾಮಫಲಕವಿದ್ದರೂ ಪ್ರವಾಸಿಗರು ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಬೆಟ್ಟದಿಂದ ಜಾರಿ ಬೀಳಬಾರದು ಎಂದು ಬೆಟ್ಟದ ತುತ್ತ ತುದಿಗಳಲ್ಲಿ ಕಬ್ಬಿಣದ ಗ್ರಿಲ್ ತಡೆ ಆಳವಡಿಸಲಾಗಿತ್ತು. ಆದರೆ ಪ್ರವಾಸಿಗರು ಸೆಲ್ಫಿ ಹುಚ್ಚಿಗೆ ಈ ರೀತಿಯ ಸಾಹಸ ಮಾಡುತ್ತಿದ್ದಾರೆ.

    ಹೊಸ ವರ್ಷದ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಳ್ಳೋಕೆ ಅಂತ ಪ್ರವಾಸಿಗರು ನಾ ಮುಂದು ತಾ ಮುಂದು ಮುಗಿಬಿದ್ದಿದ್ದಾರೆ. ಬೆಳಗ್ಗೆ 8 ಗಂಟೆಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ಪೊಲೀಸ್ ಇಲಾಖೆ ನಿಷೇಧ ಹೇರಿತ್ತಾದರೂ ಪ್ರವಾಸಿಗರ ಒತ್ತಡದ ಹಿನ್ನೆಲೆಯಲ್ಲಿ 6 ಗಂಟೆ 30 ನಿಮಿಷಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.

    ಮಧ್ಯ ರಾತ್ರಿಯಿಂದಲೇ ನಂದಿಗಿರಿಧಾಮ ಪ್ರವೇಶಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಕಾದು ಕುಳಿತ್ತಿದ್ದು, ಬೆಳ್ಳಂ ಬೆಳಗ್ಗೆ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಕೊಡಲೇ ಬೈಕ್ ಸವಾರರು ಕಾರು ಸವಾರರು ನಾ ಮುಂದು ತಾ ಮುಂದು ಅಂತ ನಂದಿಬೆಟ್ಟ ಏರಿದ್ದಾರೆ. ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲು ಸಾಲಾಗಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷ ಸಂಭ್ರಮ- ನಂದಿಗಿರಿಧಾಮದಲ್ಲಿ ಪ್ರವಾಸಿಗರ ದಂಡು

    ಹೊಸ ವರ್ಷ ಸಂಭ್ರಮ- ನಂದಿಗಿರಿಧಾಮದಲ್ಲಿ ಪ್ರವಾಸಿಗರ ದಂಡು

    ಚಿಕ್ಕಬಳ್ಳಾಪುರ: ಹೊಸ ವರ್ಷದ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ.

    ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಳ್ಳೋಕೆ ಅಂತ ಪ್ರವಾಸಿಗರು ನಾ ಮುಂದು ತಾ ಮುಂದು ಮುಗಿಬಿದ್ದಿದ್ದಾರೆ. ಬೆಳಗ್ಗೆ 8 ಗಂಟೆಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ಪೊಲೀಸ್ ಇಲಾಖೆ ನಿಷೇಧ ಹೇರಿತ್ತಾದರೂ ಪ್ರವಾಸಿಗರ ಒತ್ತಡದ ಹಿನ್ನೆಲೆಯಲ್ಲಿ 6 ಗಂಟೆ 30 ನಿಮಿಷಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: ಹೊಸ ವರ್ಷದ ಅಮಲಿನಲ್ಲಿ ಕಾರ್, ಬೈಕ್ ಡಿಕ್ಕಿ- ನಂದಿಬೆಟ್ಟದಲ್ಲಿ ವಾಹನ ಬಿಟ್ಟು ಪರಾರಿ

    ಮಧ್ಯ ರಾತ್ರಿಯಿಂದಲೇ ನಂದಿಗಿರಿಧಾಮ ಪ್ರವೇಶಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಕಾದು ಕುಳಿತ್ತಿದ್ದು, ಬೆಳ್ಳಂ ಬೆಳಗ್ಗೆ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಕೊಡಲೇ ಬೈಕ್ ಸವಾರರು ಕಾರು ಸವಾರರು ನಾ ಮುಂದು ತಾ ಮುಂದು ಅಂತ ನಂದಿಬೆಟ್ಟ ಏರಿದ್ದಾರೆ.

    ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲು ಸಾಲಾಗಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಜಿನ ನಗರಿಯಲ್ಲಿ ಪ್ರವಾಸಿಗರ ಕಲರವ

    ಮಂಜಿನ ನಗರಿಯಲ್ಲಿ ಪ್ರವಾಸಿಗರ ಕಲರವ

    ಮಡಿಕೇರಿ: ಸುಂದರ ಪ್ರಕೃತಿಯ ಮಡಿಲಲ್ಲಿನ ಪ್ರವಾಸಿ ತಾಣಗಳಲ್ಲಿ ನ್ಯೂ ಇಯರ್ ಆಚರಿಸೋಕೆ ಒಂಥರಾ ಮಜಾ, ಹಾಗಾಗಿ ಕೊಡಗಿನತ್ತ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು ಹೊಸ ವರ್ಷಕ್ಕೆ ಒಂದು ದಿನ ಬಾಕಿ ಇರುವಂತೆಯೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಕಲರವ ಆರಂಭವಾಗಿದೆ.

    ವರ್ಷದ ಕೊನೆಗೆ ಬೈ ಬೈ ಹೇಳಿ ನ್ಯೂ ಇಯರ್ ವೆಲ್ ಕಮ್ ಮಾಡ್ಕೊಳ್ಳೋ ಟೈಮ್ ಅತ್ಯಂತ ಅಮೂಲ್ಯವಾದದ್ದು. ಅಂತಹ ಕ್ಷಣಗಳನ್ನು ಕಳೆಯೋಕೆ ಪ್ರೇಕ್ಷಣಿಯ ಸ್ಥಳಗಳನ್ನು ಆಯ್ಕೆ ಮಾಡೋರ ಮನಸ್ಸು ಕೊಡಗಿನತ್ತ ಸೆಳೆಯುತ್ತಿದೆ. ನಗರದ ತುಂಬೆಲ್ಲಾ ಕಂಡು ಬರುತಿರೋ ವಾಹನ ದಟ್ಟಣೆ, ಪ್ರವಾಸಿ ತಾಣಗಳಲ್ಲಿ ತುಂಬಿರುವ ಪ್ರವಾಸಿಗರು, ತಂಪಾದ ಗಾಳಿ, ಸುತ್ತಲು ಹಚ್ಚ ಹಸಿರ ಪ್ರಕೃತಿಯ ನಡುವೆ ಪ್ರವಾಸಿಗರ ಕಲರವೇ ಕಾಣಸಿಗುತ್ತದೆ. ಪ್ರವಾಸಿಗರ ಸ್ವರ್ಗ ಅಂತಾನೆ ಕರೆಸಿಕೊಳ್ಳೊವ ಕೊಡಗು ಜಿಲ್ಲೆಯಲ್ಲಿ ಎಲ್ಲಿ ನೋಡಿದರಲ್ಲಿ ಪ್ರವಾಸಿಗರ ದಂಡು. 2018ಕ್ಕೆ ವಿದಾಯ ಹೇಳಿ 2019ನ್ನು ಸ್ವಾಗತ ಮಾಡ್ಕೊಳ್ಳೋದರ ಎಫೆಕ್ಟ್ ಇದು. ಹೊಸ ವರ್ಷವನ್ನು ಕೊಡಗಿನ ಸುಂದರ ಪ್ರಕೃತಿಯ ಮಡಿಲಲ್ಲಿ ಆಚರಣೆ ಮಾಡ್ಬೇಕು ಅಂತ ಕೂರ್ಗದ ಕಡೆಗೆ ಪ್ರವಾಸಿಗರು ಮುಖ ಮಾಡಿದ್ದಾರೆ. ಕೊಡಗಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಯರ್ ಎಂಡ್ ಕ್ಷಣಗಳನ್ನು ಕಳೆಯುತ್ತಾ ಹೊಸ ವರ್ಷಕ್ಕೆ ಎದುರು ನೋಡ್ತಿದ್ದಾರೆ.

    ಕೊಡಗಿನಲ್ಲಿ ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ವಿಕೋಪದ ನೋವಿನ ನಡುವೆ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಿದೆ. ಬಿಕೋ ಎನ್ನುತ್ತಿದ್ದ ಕೊಡಗೀಗ ಜನರಿಂದ ತುಂಬಿದೆ. ಜಿಲ್ಲೆಯ ಹೋಂ ಸ್ಟೇ, ಹೋಟೆಲ್, ಲಾಡ್ಜ್ ಗಳು ಕಂಪ್ಲೀಟ್ ಆಗಿ ಬುಕ್ ಆಗಿವೆ. ಇಯರ್ ಎಂಡ್ ಹಾಗೂ ನ್ಯೂ ಇಯರ್ ಆಚರಣೆಗೆ ಅಂತಾನೆ ವಿಶೇಷ ಕಾರ್ಯಕ್ರಮಗಳು ನಡಿಯುತ್ತಿರೋ ಕಾರಣಕ್ಕೆ ಕೊಡಗು ಸದ್ಯ ಪ್ರವಾಸಿಗರಿಂದ ಆವೃತವಾಗಿದೆ.

    ಅದರಲ್ಲೂ ಮಂಜಿನ ನಗರಿಯ ಮಕುಟಮಣಿ ಅಂತಾನೆ ಕರೆಯೋ ರಾಜಾಸೀಟ್ ಉದ್ಯಾನವನದಲ್ಲಂತೂ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದಾರೆ. ಇನ್ನೂ ಪ್ರಮುಖ ಪ್ರವಾಸಿ ತಾಣಗಳಾದ ಅಬ್ಬಿಫಾಲ್ಸ್, ಮಾಂದಲ್ ಪಟ್ಟಿ, ದುಬಾರೆ, ನಿಸರ್ಗಧಾಮ ಎಲ್ಲಾ ಕಡೆಗಳಲ್ಲೂ ಪ್ರವಾಸಿಗರ ಕಲರವ ಜೋರಾಗಿದೆ. ಕಹಿ ಘಟನೆಗಳನ್ನು ಮರೆತು, ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ಹೊಸ ವರ್ಷದ ಸುಂದರ ಕ್ಷಣಗಳನ್ನು ಎದುರು ನೋಡ್ತಿದ್ದಾರೆ ಪ್ರವಾಸಿಗರು.

    2018ಕ್ಕೆ ವಿದಾಯ ಹೇಳೋ ಗಳಿಗೆಯಲ್ಲಿ ಕೊಡಗು ಪ್ರವಾಸಿಗರಿಂದ ತುಂಬಿದೆ. ತೆರೆಮರೆಯಲ್ಲಿ ಸೂರ್ಯಾಸ್ತದ ಮೂಲಕ ಸರಿಯುತ್ತಿರೋ 2018ಕ್ಕೆ ವಿದಾಯ ಹೇಳಿ 2019ನ್ನು ಸ್ವಾಗತ ಮಾಡ್ಕೊಳ್ಳೋ ತವಕದಲ್ಲಿರೋ ಪ್ರವಾಸಿಗರು ಕೊಡಗನ್ನು ಆಯ್ಕೆ ಮಾಡಿಕೊಂಡು ಕಾಫಿಯ ನಾಡಿಗೆ ಲಗ್ಗೆ ಇಟ್ಟಿದ್ದಾರೆ. ಅದೇನೆ ಆಗ್ಲಿ ಹೊಸ ವರ್ಷಾಚರಣೆಯ ಸಂತಸದಲ್ಲಿರೋ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳತ್ತ ಒಂದೊಂದು ರೌಂಡ್ಸ್ ಹಾಕುತ್ತಾ ಸಖತ್ ಎಂಜಾಯ್ ಮಾಡ್ತಿರೋದಂತೂ ಸತ್ಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷದಂದು ಪ್ರವಾಸಿ ತಾಣ ಮುತ್ತತ್ತಿಗೆ ನೋ ಎಂಟ್ರಿ

    ಹೊಸ ವರ್ಷದಂದು ಪ್ರವಾಸಿ ತಾಣ ಮುತ್ತತ್ತಿಗೆ ನೋ ಎಂಟ್ರಿ

    ಮಂಡ್ಯ: ಹೊಸ ವರ್ಷದ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿಗೆ ಒಂದು ದಿನ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯ ಮುತ್ತತ್ತಿಯು ಒಂದು ಪ್ರೇಕ್ಷಣಿಯ ಸ್ಥಳ. ಇಲ್ಲಿ ಸುತ್ತಮುತ್ತಲು ಕಾವೇರಿ ನದಿ ಹರಿಯುವುದರಿಂದ ಬೆಂಗಳೂರು, ಕನಕಪುರ, ಮಳವಳ್ಳಿ ಸೇರಿದಂತೆ ಹಲವೆಡೆಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಪ್ರವಾಸಿಗರು ಬಂದು ಆಚರಣೆ ಮಾಡುತ್ತಾರೆ. ನಿಸರ್ಗದ ಮಡಿಲಲ್ಲಿ ಮೋಜು ಮಸ್ತಿ ಮಾಡಿ ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸುತ್ತಾರೆ. ಹೀಗೆ ಸಂಭ್ರಮಿಸುವ ವೇಳೆ ಹಲವು ಅಹಿತಕರ ಘಟನೆಗಳು ಕೂಡ ಈ ಹಿಂದೆ ಸಂಭವಿಸಿದೆ. ಅಲ್ಲದೆ ಪ್ರದೇಶದಲ್ಲಿ ಹೊಸ ವರ್ಷ ಆಚರಣೆಗೆಂದು ಬರುವ ಪುಂಡ ಪೋಕರಿಗಳಿಗೆ ಕಡಿವಾಣ ಹಾಕಬೇಕೆಂದು ಇಲ್ಲಿನ ಆಡಳಿತ ಮಂಡಳಿ ಹೊಸ ತೀರ್ಮಾನವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    ಈ ಬಾರಿ ಮುತ್ತತ್ತಿಯಲ್ಲಿ ಪ್ರವಾಸಿಗರು ಹೊಸ ವರ್ಷ ಆಚರಣೆಗೆ ಬರುವಂತಿಲ್ಲ. ಹೌದು, ಡಿಸೆಂಬರ್ 31 ರ ಬೆಳಗ್ಗೆ 6 ಗಂಟೆಯಿಂದ 2019 ಜನವರಿ 1ರ ಮಧ್ಯರಾತ್ರಿವರೆಗೂ ಪ್ರವಾಸಿಗರ ಪ್ರವೇಶವನ್ನು ಮುತ್ತತ್ತಿಯಲ್ಲಿ ನಿಷೇಧಿಸಲಾಗಿದೆ. ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಕಳೆದ ಕೆಲವು ವರ್ಷಗಳಿಂದ ಹಲವು ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದನ್ನು ತಡೆಯಬೇಕು ಎಂಬ ಉದ್ದೇಶದಿಂದ ಪೊಲೀಸ್ ಇಲಾಖೆ ಮುತ್ತತ್ತಿಯಲ್ಲಿ ಪ್ರವಾಸಿಗರನ್ನು ಹೊಸ ವರ್ಷ ಆಚರಣೆಗೆ ಬಿಡಬಾರದು ಎಂದು ಅಲ್ಲಿನ ಅಧಿಕಾರಗಳ ಬಳಿ ಮನವಿ ಮಾಡಿಕೊಂಡಿದ್ದರು.

    ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ಮೋಜು ಮಸ್ತಿ ವೇಳೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಪ್ರವಾಸಿಗರ ಹಿತದೃಷ್ಟಿಗಾಗಿ ಮುತ್ತತ್ತಿಗೆ ಹೊಸ ವರ್ಷದ ವೇಳೆ ಪ್ರವಾಸಿಗರಿಗೆ ನಿಷೇಧ ಹೇರಿ ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಅವರು ಪೊಲೀಸರ ಮನವಿಗೆ ಸಮ್ಮತಿಸಿ ಆದೇಶ ಹೊರಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv